ಜನತಾ ಕರ್ಫ್ಯೂ

ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ದಿನಾಂಕ 22.03.2020, ಬೆಳಿಗ್ಗೆ 7 ರಿಂದ ರಾತ್ರಿ 9 ಘಂಟೆಯವರೆಗೂ ಸಮಸ್ತ ಭಾರತೀಯರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಇರಬೇಕೆಂದು ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ದಿನಾಂಕ 19.03.2020 ರಂದು ರಾತ್ರಿ 8.00 ಘಂಟೆಗೆ ಮಾಡಿದ ಭಾಷಣದಲ್ಲಿ ಕೋರಿಕೊಂಡಿದ್ದಾರೆ.

ಬಹಳಷ್ಟು ಜನರಿಗೆ ಒಂದು ಕೇವಲ 14 ಘಂಟೆಗಳ ಅವಧಿಯವರೆಗೆ ಮನೆಯಲ್ಲಿದ್ದರೆ ಮಾರಕ ಸೋಂಕು ಕರೋನವನ್ನು ತಡೆಗಟ್ಟ ಬಹುದೇ? ಹಾಗಿದ್ದಲ್ಲಿ ಇದನ್ನು ಪ್ರಪಂಚಾದ್ಯಂತ ಈಗಾಗಲೇ ಮಾಡುತ್ತಿರಲಿಲ್ಲವೇ ಎಂಬ ಕುಹಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು ಕೇವಲ 14 ಘಂಟೆಗಳ ಅವಧಿಯವರೆಗೆ ಮಾತ್ರ ಜನತಾ ಕರ್ಫ್ಯೂವಲ್ಲ. ಇದು ಒಂದು ಯೋಜಿತ ಕಾರ್ಯಸಾಧುವಾಗಿದೆ.

WhatsApp Image 2020-03-20 at 10.29.51 AMಒಂದು ಸ್ಥಳದಲ್ಲಿ ಕರೋನಾ ವೈರಸ್ ಜೀವಿತಾವಧಿಯ ಆಯಸ್ಸು ಯಾವುದೇ ವಸ್ತುಗಳಾಗಲೀ, ಬಟ್ಟೆಗಳ ಮೇಲಾಗಲೀ ಅಥವಾ ಲೋಹದ ಮೇಲಾಗಲೀ 8 ಗಂಟೆಗಳು ಕರೋನ ರೋಗ ಸೋಂಕಿತ ವ್ಯಕ್ತಿ ಮುಟ್ಟಿದ ಅಥವಾ ಧರಿಸಿದ ಬಟ್ಟೆಗಳ ಮೇಲೆ ಅಬ್ಬಬ್ಬಾ ಎಂದರೆ ಸುಮಾರು 12 ಗಂಟೆಗಳ ಕಾಲ ಜೀವಂತವಾಗಿರ ಹಾಗಾಗಿ ಕರ್ಫ್ಯೂ ಸಮಯವನ್ನು 14 ಗಂಟೆಗಳ ಕಾಲ ವಿಧಿಸಿದ್ದಾರೆ. ಇದರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಇರಬಹುದಾದ ಕರೋನಾ ಸೋಂಕಿತ ವಸ್ತುಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಸುಮಾರು 14 ಗಂಟೆಗಳವರೆಗೆ ಯಾರೂ ಸ್ಪರ್ಶಿಸಿರುವುದಿಲ್ಲವಾದ್ದರಿಂದ ಆ ಸರಪಳಿ ಮುರಿಯುವ ಕಾರಣ ಕರೋನ ವೈರಸ್ ಜೀವಿತಾವಧಿ ಮುಗಿದು ಹೋಗಿರುತ್ತದೆ ಹಾಗಾಗಿ 14 ಗಂಟೆಗಳ ನಂತರ ಜನ ಜೀವನ ಮುಂದುವರೆಸುವುದು ಸುರಕ್ಷಿತ ಎನ್ನುವುದು ಇದರ ಹಿಂದಿನ ಉದ್ದೇಶ.

ಹಾಗೆ ಸರಿಯಾಗಿ ನೋಡಿದಲ್ಲಿ ಈ ಜನತಾ ಕರ್ಫ್ಯೂ ಕೇವಲ 14 ಗಂಟೆಗಳಲ್ಲದೇ 36 ಗಂಟೆಗಳು ಎಂದು ಹೇಳಿದರೆ ನಿಮಗೆ ಆಶ್ವರ್ಯವಾಗಬಹುದು. ಈ ಯೋಜನೆಯನ್ನು ಅತ್ಯಂತ ಬುದ್ಧಿವಂತ ರೀತಿಯಲ್ಲಿ ಮತ್ತು ಬಹಳ ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಯೋಜಿಸಲಾಗಿದೆ.

ಆದರೆ ನಿಜವಾಗಿಯೂ ಕರ್ಪ್ಯೂ ನಿಜವಾಗಿಯೂ ಹಿಂದಿನ ರಾತ್ರಿ ಸರಿ ಸುಮಾರು 9 ಗಂಟೆಯಿಂದಲೇ. ಆರಂಭವಾಗಿರುತ್ತದೆ. ಈಗ ಕರ್ಫ್ಯೂ ವಿಧಿಸಿರುವ ಸಮಯ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮುಗಿದ ನಂತರ ಹೆಚ್ಚೂ ಕಡಿಮೆ ಜನ ಹೊರಗೆ ಹೋಗುವುದು ಮಾರನೇ ದಿನ ಬೆಳಿಗ್ಗೆ 7 ಗಂಟೆಗೇ ಹಾಗಾಗಿ ಹೆಚ್ಚೂ ಕಡಿಮೆ 21.03.20 ರಾತ್ರಿ 9 ಗಂಟೆಗೆ ಆರಂಭವಾಗಿ 23.03.20 ಬೆಳಿಗ್ಗೆ 7.00 ಗಂಟೆಯ ವರೆಗೂ ಜನರು ತಮ್ಮ ಮನೆಗಳಲ್ಲಿಯೇ ಇರುವ ಪರಿಣಾಮ ನಮಗೆ ಅರಿವಿಲ್ಲದಂತೆಯೇ ಈ ಜನತಾ ಕರ್ಫೂ 36 ಗಂಟೆಗಳ ಅವಧಿಗಳಷ್ಟಾಗಿರುತ್ತದೆ. ಈ ಅವಧಿಯಲ್ಲಿ ವೈರಸ್ ಹರಡುವಿಕೆಯನ್ನು ಬಹಳ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ. ಆದ್ದರಿಂದ ಈ ಯೋಜನೆ ಬಹಳ ಬುದ್ಧಿವಂತ ತನದಿಂದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗದಂತೆ ಯೋಚಿಸಲಾಗಿದೆ.

ಈಗಾಗಲೇ ನಾನಾ ಕಾರಣಗಳಿಂದಾಗಿ ಕರೋನಾ ವೈರಸ್ ಸೋಂಕಿತರಾಗಿರುವವರಿಗೆ ಮರುಕ ಪಡೋಣ ಮತ್ತು ಆದಷ್ಟು ಶೀಘ್ರವಾಗಿ ಕರೋನ ಖಾಯಿಲೆಗೆ ಮದ್ದನ್ನು ಕಂಡು ಹಿಡಿಯಲಿ ಎಂದು ಆಶೀಸೋಣ. ನಮ್ಮ ಪ್ರಧಾನಿಗಳು ಹೇಳಿದಂತೆ ಹಾಗಾಗಿ ಸಮಸ್ತ ಭಾರತೀಯರೂ ಇದರಲ್ಲಿ ಸ್ವಯಂ ಪ್ರೇರಿತರಾಗಿ ಖಡ್ಡಾಯವಾಗಿ ಪಾಲ್ಗೊಳ್ಳಲೇ ಬೇಕಾಗಿದೆ.

ಸೋಂಕು ಹರಡಂತೆ ತಡೆಗಟ್ಟುವಿಕೆಯು, ಖಾಯಿಲೆಗೆ ಕೊಡುವ ಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ

ಏನಂತೀರೀ?

ಕೈ ಮುಗಿದು ನಮಸ್ಕರಿಸುವ ಅಗತ್ಯತೆ

nam2ನಮ್ಮ ಧರ್ಮ ಶಾಸ್ತ್ರದ ಪ್ರಕಾರ ಪ್ರತಿಯೊಂದು ಜೀವರಾಶಿಗಳಲ್ಲಿಯೂ ದೇವರಿರುತ್ತಾನೆ ಹಾಗಾಗಿ ಪ್ರತಿಯೊಬ್ಬರಿಗೂ ನಮ್ಮ ಎರಡೂ ಕರಗಳನ್ನು  ಜೋಡಿಸಿ ಅದನ್ನು ನಮ್ಮ ಸೂರ್ಯಚಕ್ರಕ್ಕೆ  (ಎದೆಯ ಗೂಡು) ತಾಗಿಸಿಗೊಂಡು ಭಕ್ತಿಯಿಂದ ತಲೆಬಾಗಿಸಿ ವಂದಿಸುವುದು ಆಚರಣೆಯಲ್ಲಿದೆ.  ಅದಕ್ಕೆ ಪ್ರತಿಯಾಗಿ ಎದುರಿಗಿರುವ ವ್ಯಕ್ತಿಯೂ ಅದೇ ರೀತಿಯಲ್ಲಿಯೇ ಭಕ್ತಿ ಪೂರ್ವಕವಾಗಿ ವಂದಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಇಬ್ಬರೂ ವ್ಯಕ್ತಿಗಳ  ನಡುವೆ ಕನಿಷ್ಠ ಪಕ್ಷ 3 ಅಡಿ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಮತ್ತು ಎಂದಿಗೂ ಅವರನ್ನು ಮುಟ್ಟುವುದಿಲ್ಲ.  ಈ ಕ್ರಿಯೆಯನ್ನು ಆಚರ, ಮಡಿ ಅಥವಾ ಅನುಷ್ಠಾನ ಎಂದು ಕರೆಯಲಾಗುತ್ತದೆ.  ಇದನ್ನು ಪಾಲಿಸುವವರನ್ನು  ಅನೇಕರು ಎಲ್ಲರ ಮುಂದೆಯೇ ಅಪಹಾಸ್ಯ ಮಾಡಿಕೊಂಡು ನಕ್ಕ ಪ್ರಹಸನಗಳು ಅದೆಷ್ಟೋ ಇವೆ.  ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದು ಕೈ ಕುಲುಕಿದಲ್ಲಿ, ಇಲ್ಲವೇ ಒಬ್ಬನ್ನೊಬ್ಬರನ್ನು ಆಲಿಂಗಿಸಿದಲ್ಲಿ ಮಾತ್ರವೇ ಭ್ರಾತೃತ್ವ ಇಲ್ಲವೇ ಮಿತೃತ್ವ ಹೆಚ್ಚುತ್ತದೆ ಎಂದು ವಾದಿಸುವವರೇ ಹೆಚ್ಚಾಗಿದ್ದಾರೆ ಮತ್ತು ಅದನ್ನೇ ಇಂದಿಗೂ ಉದ್ದೇಶಪೂರ್ವಕವಾಗಿ ಅನುಸರಿಸುತ್ತಿದ್ದಾರೆ.

ಆದರೆ ಇತ್ತಿಚಿಗೆ World Health Organization  (WHO) ಅವರೇ ಹೇಳಿರುವ ಪ್ರಕಾರ, ಪ್ರಸ್ತುತ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿರುವ  ಕರೋನಾ ವೈರಸ್ ದಾಳಿಯಿಂದ ದೂರವಿರಲು,

 • ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಕನಿಷ್ಠ ಪಕ್ಷ 3 ಅಡಿಗಳಷ್ಟಾದರೂ ಅಂತರವನ್ನು  ಕಾಯ್ದುಕೊಳ್ಳ ಬೇಕು
 • ಪರಿಚಿತರೇ ಆಗಲೀ, ಅಪರಿಚಿತರೇ ಆಗಲಿ, ಯಾರನ್ನೂ  ಮುಟ್ಟದಿರಿ
 • ಅಕಸ್ಮಾತ್ ಯಾರನ್ನೇ ಆಗಲಿ ಮುಟ್ಟಿ ಮಾತನಾಡಿಸುವ ಅನಿವಾರ್ಯ ಸಂದರ್ಭ ಬಂದಲ್ಲಿ  ಕೂಡಲೇ  ಕೈಗಳನ್ನು ತೊಳೆಯಿರಿ.
 • ಪರಸ್ಪರ ಆಲೀಂಗನಗಳಿಂದ ಸಾಧ್ಯವಾದಷ್ಟೂ ದೂರವಿರಿ.

ಇಂತಹ ಮಹಾಮಾರಿಗಳನ್ನು ಅದೆಷ್ಟೋ ಸಹಸ್ರ ವರ್ಷಗಳ ಹಿಂದೆಯೇ ಗುರುತಿಸಿದ್ದ ನಮ್ಮ ಪೂರ್ವಜರು ಆಚಾರ, ವಿಚಾರ, ಮಡಿ ಹುಡಿ ಎಂಬ ನೆಪದಲ್ಲಿ  ಕೆಲವೊಂದು ಅಭ್ಯಾಸಗಳನ್ನು ನಮ್ಮ ಜೀವನದ ಸಹಜ ಪ್ರಕ್ರಿಯೆಗಳನ್ನಾಗಿಸಿದ್ದರು.

 • ಪ್ರತೀಬಾರಿ ಹೊರಗಿನಿಂದ ಮನೆ ಪ್ರವೇಶಿಸುವ ಮುನ್ನಾ ಕೈಕಾಲುಗಳನ್ನು  ತೊಳೆದುಕೊಂಡೇ ಪ್ರವೇಶಿಸ ಬೇಕು.
 • ಪಾದರಕ್ಷೆಗಳನ್ನು ಮನೆಯ ಹೊರಗೇ ಬಿಡಬೇಕು
 • ಪ್ರತೀ ದಿನ ಮನೆಯನ್ನು ಗುಡಿಸಿ, ಶುದ್ಧ ನೀರಿನಿಂದ ಸಾರಿಸಬೇಕು.
 • ಮನೆಯಲ್ಲಿ ರೋಗರುಜಿನಗಳು ಹರಡಂತೆ ತಡೆಗಟ್ಟಲು ಅಗ್ಗಾಗ್ಗೆ ಕ್ರಿಮಿನಾಶಕವಾದ ಗೋಮೂತ್ರವನ್ನು  ಸಿಂಪಡಿಸಬೇಕು.
 • ಮನೆಯ ಪ್ರಮುಖ ದ್ವಾರಗಳಲ್ಲಿ ಮಾವಿನ ಮತ್ತು ಬೇವಿನ ತೋರಣವನ್ನು ಕಟ್ಟಬೇಕು.
 • ಎಲ್ಲದ್ದಕ್ಕಿಂತಲೂ ಪ್ರಮುಖವಾಗಿ, ಎರಡೂ ಕೈಗಳನ್ನೂ ಒಟ್ಟಿಗೆ ಜೋಡಿಸಿ, ನಮ್ಮಲ್ಲಿರುವ ಎಲ್ಲಾ ಅಹಂಗಳನ್ನೂ ಬದಿಗೊತ್ತಿ, ತಲೆಬಾಗಿಸಿ ಹೃದಯಪೂರ್ವಕವಾಗಿ  ನಮಿಸಬೇಕು.
 • ಕೈಕುಲುಕುವುದು ಮತ್ತು ತಬ್ಬಿಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವಾಗಿರಲಿಲ್ಲ. ಹಾಗೆ ಮಾಡುವುದರಿಂದ ಕಣ್ಣಿಗೆ ಕಾಣದ ಎಷ್ಟೋ ಹಾನಿಕಾರಕ ಕೀಟಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ.

ನಮ್ಮ ಹಿರಿಯರಿಂದ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದಲ್ಲಾ ಒಂದು ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತದೆ. ಇಂದಿನ  ಪೀಳಿಗೆಯವರು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ  ಡಂಬಾಚಾರ ಮತ್ತು ಮೂಡನಂಬಿಕೆ ಎಂದು ಜರಿಯುತ್ತಾ  ಅವುಗಳನ್ನು ಅಚರಿಸದಿರುವುದು ಇಷ್ತೆಲ್ಲಾ ಅವಗಢಗಳಿಗೆ ಕಾರಣವಾಗಿದೆ.

ನಮ್ಮ ಸನಾತನ ಆಚಾರ ವಿಚಾರ ಪದ್ದತಿಗಳನ್ನು  ಎಲ್ಲರೂ ಪಾಲಿಸೋಣ,   ಆರೋಗ್ಯಕರವಾಗಿರೋಣ.

ಸ್ವಚ್ಘ ಭಾರತ.  ಶ್ರೇಷ್ಠ ಭಾರತ

ಏನಂತೀರೀ?