ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ.

ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ.

elec4

ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗಳಿಸಿದ ಕೂಡಲೇ ಮುಂದಿನ ಬಾರೀ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಹಿಡಿದೇ ತೀರುತ್ತೇವೆ ಎಂದು ಫಣ ತೊಟ್ಟ ಬಿಜೆಪಿಯ ಇಡೀ ತಂಡ ಪಶ್ಚಿಮ ಬಂಗಾಳದಲ್ಲಿ ಝಾಂಡ ಹೂಡಿದ್ದಲ್ಲದೇ ಒಂದು ರೀತಿಯ ಹಿಂದುತ್ವದ ವಾತಾವರಣವನ್ನು ಮೂಡಿಸುವುದರಲ್ಲಿ ಸ್ವಲ್ಪ ಸಫಲತೆಯನ್ನು ಕಂಡಿತ್ತು. ಇದಲ್ಲದೇ ಟಿಎಂಸಿ ಪಕ್ಷದ ಹತ್ತಾರು ಶಾಸಕರು ಮತ್ತು ಹಿರಿಯ ನಾಯಕರೂ ಸಹಾ ಬಿಜೆಪಿ ಗೆಲ್ಲಬಹುದು ಎಂದೇ ತಾಮುಂದು ನಾಮುಂದು ಎಂದು ಬಿಜೆಪಿಯನ್ನು ಸೇರಿಕೊಂಡಿದ್ದು, ಅಮಿತ್ ಶಾ. ನಡ್ಡಾ ಮತ್ತು ಮೋದಿಯವರ ಭಾಷಣಗಳಿಗೆ ಅಪಾರವಾದ ಜನಸ್ತೋಮ ಸೇರುತ್ತಿದ್ದದ್ದು ಬಿಜೆಪಿಗೆ ಅಧಿಕಾರಕ್ಕೆ ಮೂರೇ ಗೇಣು ಎನ್ನುವಂತೆ ಮಾಡಿತ್ತು.

ಬಿಜೆಪಿಯ ಅಬ್ಬರದ ಪ್ರಚಾರವಲ್ಲದೇ ತಮ್ಮದೇ ಪಕ್ಷದ ನಾಯಕರಗಳನ್ನು ಸೆಳೆದುಕೊಳ್ಳುವುದರಿಂದ ಆರಂಭದಲ್ಲಿ ಕಂಗಾಲಾದ ಮಮತ ನಂತರ ಪ್ರಾದೇಶಿಕ ಅಸ್ಮಿತೆಯನ್ನು ಸರಿಯಾಗಿ ಬಳಸಿಕೊಂಡಿದ್ದಲ್ಲದೇ, ಅಚಾನಕ್ಕಾಗಿ ಆಕೆಯ ಮೇಲಾದ ಧಾಳಿಯನ್ನು ಸಮರ್ಥವಾಗಿ ಇಡೀ ಚುನಾವಣೆಗೆ ದಾಳವಾಗಿ ಬಳಸಿಕೊಂಡಿದ್ದಲ್ಲದೇ ಇಡೀ ಚುನಾವಣೆಯನ್ನು ವೀಲ್ಹ್ ಚೇರ್ ಮೇಲೆಯೇ ಕುಳಿತುಕೊಂಡು ಜನರನ್ನು ಭಾವನಾತ್ಮಕವಾಗಿ ತನ್ನತ್ತ ಸೆಳೆಯಲು ಯಶಸ್ವಿಯಾದರು.

ತಮಿಳುನಾಡಿನಲ್ಲಿ ತಲೆ ತಲಾಂತರದಿಂದಲೂ ಪ್ರಾಭಲ್ಯವಿರುವುದೇ ಪ್ರಾದೇಶಿಕ ಪಕ್ಷಗಳ ಡಿಎಂಕೆ ಮತ್ತು ಎಐಡಿಎಂಕೆಗಳದ್ದು. ಹಾಗಾಗಿ ತಮಿಳುನಾಡಿನ ಜನರೂ ಸಹಾ ಒಮ್ಮೆ ಡಿಎಂಕೆಯ ಕರುಣಾನಿಧಿ ಮತ್ತೊಮ್ಮೆ ಎಐಡಿಎಂಕೆಯ ಜಯಲಲಿತಳನ್ನು ಆಡಳಿತಕ್ಕೆ ಒಂದು ರೀತಿ ಖೋ ಖೋ ಮಾದರಿಯಲ್ಲಿ ಆಡಳಿತಕ್ಕೆ ತರುವ ಸಂಪ್ರದಾಯವನ್ನೇ ರೂಢಿಸಿಕೊಂಡು ಬಂದಿರುವುದರಿಂದ ಈ ಬಾರಿ ಹೆಚ್ಚಿನ ಬದಲಾವಣೆ ಇಲ್ಲದೇ ನಿರೀಕ್ಷೆಯಂತೆಯೇ ಡಿಎಂಕೆ ಪಕ್ಷ ಆಡಳಿತಕ್ಕೆ ಬರುವುದು ನಿರೀಕ್ಷಿತವಾಗಿತ್ತು.

assam

CAA & NRC ಆರಂಭವಾದದ್ದೇ ಅಸ್ಸಾಂಮಿನಿಂದಲೇ. ಹಾಗಾಗಿ ಈ ಬಾರಿ ಅಲ್ಲಿನ ಚುನಾವಣೆಯಲ್ಲಿ CAA & NRCಯೇ ಪ್ರಮುಖಪಾತ್ರವಹಿಸಿತ್ತು. ಬಿಜೆಪಿ ಪುನಃ ಆಡಳಿತಕ್ಕೆ ಬಂದಲ್ಲಿ ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರೆ, ಕಾಂಗ್ರೇಸ್ಸ್ ಅದನ್ನು ಬಲವಾಗಿ ತಿರಸ್ಕರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಚುನಾವಣೆಯಲ್ಲಿ ಅಸ್ಸಾಂ ಜನತೆ ಬಿಜೆಪಿಗೆ ಎರಡನೇ ಬಾರಿಗೆ ಸ್ಪಷ್ಟ ಬಹುಮತವನ್ನು ಕೊಡುವ ಮೂಲಕ CAA & NRC ಪರ ಜನಾದೇಶವನ್ನು ನೀಡಿದ್ದಾರೆ.

ಚುನಾವಣಾ ಪೂರ್ವದಲ್ಲಿನ ಸಮೀಕ್ಷೆಯಂತೆಯೇ ಆಷ್ಟೆಲ್ಲಾ ಹಗರಣಗಳ ನಡುವೆಯೂ ಪ್ರಪ್ರಥಮ ಬಾರಿಗೆ ಕೇರಳದಲ್ಲಿ ಸತತವಾಗಿ ಎರಡನೇ ಬಾರಿಗೆ LDF ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಇದೇ UDF, ಲೋಕಸಭಾ ಚುನಾವಣೆಯಲ್ಲಿ 20ಕ್ಕೆ 19ರಲ್ಲಿ ಗೆದ್ದಿದ್ದಾಗ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಬಹುಮತ ಬರಬಹುದು ಎಂಬ ಭ್ರಮೆಯಲ್ಲಿಯೇ ತೇಲಾಡಿದರ ಪರಿಣಾಮ ಹೇಳ ಹೆಸರಿಲ್ಲದಂತಾಗಿರುವುದು ನಿಜಕ್ಕೂ ಶೋಚನೀಯವಾಗಿದೆ. ದೇಶದ ಪ್ರಧಾನ ಮಂತ್ರಿಯ ಅಭ್ಯರ್ಥಿ ಎಂದೇ ಹಲವಾರು ವರ್ಷಗಳಿಂದಲೂ ತನ್ನನ್ನೇ ತಾನು ಬಿಂಬಿಸಿಕೊಂಡು ಬಂದಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕೇರಳದಿಂದ ಸ್ಪರ್ಥಿಸಿದ್ದಕ್ಕಾಗಿ ಅಷ್ಟೊಂದು ಸಂಸದರನ್ನು ಗೆಲ್ಲಲು ಸಾಧ್ಯವಾಯಿತು ಎಂದು ರಾಹುಲನನ್ನು ಹೆಗಲಮೇಲೆ ಎತ್ತಿ ಮೆರೆಸಿದವರು ಇಂದು ಈ ಪರಿಯ ಸೋಲನ್ನು ಯಾರ ತಲೆ ಮೇಲೆ ಕಟ್ಟುತ್ತಾರೆ ಎಂದು ಕಾದು ನೋಡ ಬೇಕಿದೆ.

kerala

ಲೋಕಸಭಾ ಚುನಾವಣೆಯ ಸಮಯದಲ್ಲಿ LDF ಹೀನಾಯವಾಗಿ ಸೋಲಲು ಶಬರಿಮಲೈ ನಿರ್ಥಾರಗಳು ಕಾರಣ ಎಂದು ನಂಬಲಾಗಿದ್ದರೂ, ನಿಜವಾಗಿಯೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಬಂದರೆ ತಮಗೆ ಕುತ್ತು ಎಂದು ಭಾವಿಸಿದ ಕೆಲ ಪಟ್ಟ ಭಧ್ರಹಿತಾಸಕ್ತಿಗಳು ಕೇಂದ್ರದಲ್ಲಿ LDF ಪ್ರಭಾವ ವಿಲ್ಲದಿದ್ದ ಕಾರಣ ಅನಿವಾರ್ಯವಾಗಿ ರೊಟ್ಟಿ ಹಳಸಿತ್ತು. ನಾಯಿ ಹಸಿದಿತ್ತು ಎನ್ನುವಂತೆ ರಾಹುಲ್ ನೇತೃತ್ವದ UDF ಗೆಲ್ಲಿಸಿದ್ದದ್ದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಪ್ರಜಪ್ರಭುತ್ವವಾಗಿ ಚುನಾವಣೆ ನಡೆದರೂ, ಗವರ್ನರ್ ಆಳ್ವಿಯೇ ಪ್ರಧಾನವಾದ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ಪುದುಚರಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿರುವುದು ಕುತೂಹಲವನ್ನು ಕೆರಳಿಸಿದೆ.

elec3

ಇನ್ನು ರಾಜ್ಯದ ಎರಡು ಉಪಚುನಾವಣೆಯಲ್ಲಿ ಮಸ್ಕಿ ಅನಿರೀಕ್ಷಿತವಾಗಿ ಕಾಂಗ್ರೇಸ್ ಪಾಲಾದರೆ, ಬಸವಕಲ್ಯಾಣ ಬಿಜೆಪಿಗೆ ಸುಲಭದ ತ್ತುತಾಗಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರ RCB T20 ಪಂದ್ಯದಂತೆ ಕ್ಷಣಕ್ಷಣಕ್ಕೂ ಬದಲಾಗುತ್ತಾ ಅಂತಿಮವಾಗಿ ಕೇವಲ ಮೂರು ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಪ್ರಯಾಸದ ಗೆಲವನ್ನು ಪಡೆಯುವುದರಲ್ಲಿ ಸಫಲವಾಗಿದೆ. ಕಳೆದ ಬಾರಿ ಲಕ್ಷಾಂತರ ಮತಗಳ ಅಂತರದಲ್ಲಿ ಗೆದ್ದಿದ ಬಿಜೆಪಿ ಅಭ್ಯರ್ಥಿಗೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಶಿವಸೇನಾ ಅಭ್ಯರ್ಥಿ ಮಗ್ಗುಲ ಮುಳ್ಳಾಗಿದ್ದಂತೂ ಸುಳ್ಳಲ್ಲ.

puducery

ಆಂತಿಮವಾಗಿ ಹೇಳಬೇಕೆಂದರೆ ಅಸ್ಸಾಮ್ ಮತ್ತು ಪುದುಚೆರಿ ಬಿಜೆಪಿಯ ಪಾಲಾದರೆ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಮತ್ತೊಮ್ಮೆ LDF ಮತ್ತುಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಮೂರನೇ ಬಾರಿಗೆ ನಿರೀಕ್ಷೆಗೂ ಮೀರಿದ ಭಾರೀ ಬಹುಮತ ಪಡೆಯುವುದರೊಂದಿಗೆ ಆಡಳಿತಕ್ಕೆ ಬಂದಿದೆ.

ಮೊದಲ ಬಾರಿಗೆ EVM ಕುರಿತಾಗಿ ಇದುವರೆಗೂ ಯಾವುದೇ ಆಕ್ಷೇಪಣೆ ಬಾರದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಇಷ್ಟೆಲ್ಲಾ ಸೋಲು/ಗೆಲುವು ಸಾಧಿಸಿದ್ದರೂ ಈ ಚುನಾವಣೆಯ ಫಲಿತಾಂಶ ಎಲ್ಲಾ ಪಕ್ಷಕ್ಕೂ ಎಚ್ಚರಿಕೆಯ ಗಂಟೆಯನ್ನು ಬಾರಿಸಿರುವುದು ಸುಳ್ಳಲ್ಲ.

ಬಿಜೆಪಿ : ಈ ಚುನಾವಣೆಯಲ್ಲಿ ಅಸ್ಸಾಂ ಹೊರತಾಗಿ ಬೇರಾವ ರಾಜ್ಯದಲ್ಲಿಯೂ ಬಿಜೆಪಿ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಉಳಿದೆಲ್ಲಾ ಕಡೆ ಗೆಲ್ಲುವ ಪ್ರತಿಯೊಂದು ಸ್ಥಾನವೂ ಅವರಿಗೆ ಬೋನಸ್ ಎನ್ನುವಂತಿತ್ತು. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನ ಸಭೆಯಲ್ಲಿ ಕೇವಲ 3 ಶಾಸಕರಿದ್ದದ್ದು ಈಗ 80ರ ಆಸುಪಾಸಿಗೆ ಬಂದಿದ್ದೇವೆ ಎಂದು ಗೆದ್ದು ಬೀಗಿದರೂ, ಅಷ್ಟೆಲ್ಲಾ ಅಬ್ಬರದ ಪ್ರಚಾರದ ನಡುವೆಯೂ ಮಮತ ಬ್ಯಾನರ್ಜಿ ಗೆದ್ದದ್ದು ಕೇವಲ ತನ್ನ ಪ್ರಾದೇಶಿಕ ಅಸ್ಮಿತೆಯಿಂದಾಗಿ ಎನ್ನುವುದನ್ನು ಗಮನಿಸಬೇಕಾಗಿದೆ. ಚುನಾವಣೆಯಲ್ಲಿ ಗೆದ್ದರೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸೂಚಿಸಿದಿದ್ದ ಪರಿಣಾಮ ಮಮತಾ ಬ್ಯಾನರ್ಜಿ ಸತತವಾಗಿ ಹೊರಗಿನವರಿಗೆ ಅಧಿಕಾರ ಕೊಡಬೇಡಿ ಎಂದು ಕೇಳಿಕೊಂಡಿದ್ದು ಸಫಲವಾಗಿದೆ ಎಂದೇ ಭಾವಿಸಬಹುದಾಗಿದೆ.

ತಮಿಳುನಾಡಿನಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆ ಆರಂಭಿದೆ. ಅದರಲ್ಲೂ ಕೊಯಂಬತ್ತೂರು ದಕ್ಷಿಣ ಕ್ಷೇತ್ರದಲ್ಲಿ ಚಿತ್ರನಟ ಕಮಲಹಾಸನ್ ಅವರಿಗೆ ಸೋಲು ಉಣಿಸಿದ್ದು ಹೆಮ್ಮೆಯಾದರೆ, ಬಾರೀ ನಿರೀಕ್ಷೆ ಮೂಡಿಸಿದ್ದ ಮಾಜೀ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೋತಿರುವುದು ಬೇಸರ ತಂದಿದೆ

ಕೇರಳದಲ್ಲಿ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೂದಳತೆಯ ಅಂತರದಿಂದ ಸೋಲುಂಡಿದ್ದರೂ ಭಾರೀ ಪ್ರಮಾಣದಲ್ಲಿ ಮತಗಳನ್ನು ಹೆಚ್ಚಿಸಿಕೊಂಡಿರುವುದು ಉತ್ತಮವಾಗಿದೆ.

ಒಟ್ಟಿನಲ್ಲಿ ಈ ಚುನಾವಣೆಯಿಂದ ಸ್ಪಷ್ಟವಾಗಿ ಬಿಜೆಪಿಯವರು ಕಲಿಯ ಬೇಕಾದ್ದದ್ದು ಏನೆಂದರೆ, ಗ್ರಾಮ ಪಂಚಾಯಿತಿ, ಮಂಡಲ ಪಂಚಾಯಿತಿ, ನಗರ ಸಭೆ, ಪುರಸಭೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಾ ಚುನಾವಣೆಗಳಲ್ಲಿಯೂ ಮೋದಿಯವರ ಹೆಸರನ್ನೇ ಹೇಳಿಕೊಂಡು ಹೋಗಲಾಗದ ಕಾರಣ ಆದಷ್ಟು ಬೇಗನೇ ಎಲ್ಲಾ ರಾಜ್ಯಗಳಲ್ಲಿಯೂ ಸ್ಥಳೀಯ ನಾಯಕರನ್ನು ಗುರುತಿಸಿ, ಅವರನ್ನು ಬೆಳಸಿ ಮತ್ತು ಬೆಂಬಲಿಸಲೇ ಬೇಕಾದ ಅನಿವಾರ್ಯವಾಗಿದೆ.

rahul

ಕಾಂಗ್ರೇಸ್ : ಕೇವಲ ಅಸ್ಸಾಂನಲ್ಲಿ ಅಲ್ಪ ಸ್ವಲ್ಪ ಹೋರಾಟ ತೋರಿದರೆ ಉಳಿದೆಲ್ಲಾ ಕಡೆ ದುರ್ಬೀನು ಹಾಕಿಕೊಂಡು ಹುಡುಕುವಂತಾಗಿದೆ. ಎದುರು ಮನೆಯಲ್ಲಿ ಮಗು ಹುಟ್ಟಿದರೆ ತಮ್ಮ ಮನೆಯಲ್ಲಿ ತೊಟ್ಟಿಲು ಕಟ್ಟಿದರಂತೆ ಎನ್ನುವ ಪರಿಸ್ಥಿತಿ ಇಂದು ಕಾಂಗ್ರೇಸ್ಸಿನದ್ದಾಗಿದೆ. ಶತ್ರುವಿನ ಶತ್ರು ನನ್ನ ಮಿತ್ರ ಎನ್ನುವಂತೆ ದೇಶಾದ್ಯಂತ ಈ ಚುನಾವಣೆಯಲ್ಲಿ ಮೂಲೆ ಗುಂಪಾಗಿದ್ದರೂ ಬಿಜೆಪಿಯನ್ನು ಸೋಲಿಸಿದ ಪಶ್ಚಿಮ ಬಂಗಾಳದ ಜನರಿಗೂ ಮತ್ತು ಟಿಎಂಸಿ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಅಭಿನಂದಿಸಿದ್ದು ಆ ಪಕ್ಷದ ಅವನತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ದೇಶದ ಜನ ಕಾಂಗ್ರೇಸ್ಸಿಗರನ್ನು‌ ಮತ್ತವರ ನಾಯಕನನ್ನು ತಿರಸ್ಕರಿಸಿಯಾಗಿದೆ. ಹಾಗಾಗಿ ಇನ್ನೂ ದೇಶದ ರಾಜಕೀಯದಲ್ಲಿ ಉಳಿಯ ಬೇಕಾದಲ್ಲಿ, ಈ ನಕಲೀ ಗಾಂಧಿ ಕುಟುಂಬದ ಹೊರತಾದ ಸಮರ್ಥ ನಾಯಕತ್ವವನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂಬ ಷರಾ ಬರೆದಂತಿದೆ.

ತೃಣಮೂಲ ಕಾಂಗ್ರೇಸ್ : Operation success but patient is dead ಎನ್ನುವಂತೆ ಇಡೀ ಕೇಂದ್ರ ಸರ್ಕಾರವೇ ತನ್ನ ಎದುರಾಗಿ ನಿಂತರೂ ಚಲ ಬಿಡದ ತ್ರಿವಿಕ್ರಮನಂತೆ ಒಬ್ಬಂಟಿಯಾಗಿ 200ಕ್ಕೂ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಸಫಲವಾಗಿದ್ದರೂ, ಒಬ್ಬ ಮುಖ್ಯ ಮಂತ್ರಿಯಾಗಿ ಒಂದು ಕಾಲದ ಅತ್ಯಾಪ್ತ ಶಿಷ್ಯ ಬಿಜೆಪಿಯ ಅಭ್ಯರ್ಥಿ ಸುವೆಂದು ಅಧಿಕಾರಿ ಎದುರು ಸ್ವತಃ ಸೋತಿರುವುದರಿಂದ ವಯಕ್ತಿಕವಾಗಿ ಆಕೆಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದು ಸ್ಲಷ್ಟವಾಗುತ್ತದೆ.

ಈಗ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಮುಂದಿನ ಆರು ತಿಂಗಳೊಳಗೆ ವಿಧಾನಸಭೆಗೋ ಇಲ್ಲವೇ ವಿದಾನ ಪರಿಷತ್ತಿನ ಸದಸ್ಯೆಯಾಗಿ ಅಧಿಕಾರವನ್ನು ಉಳಿಸಿಕೊಂಡರೂ ಅದು ಹಿಂಬಾಗಿಲಿನಿಂದ ಜನಾದೇಶದ ವಿರುದ್ಧವಾಗಿದೆ. ಇನ್ನಾದರೂ ಅಲ್ಪ ಸಂಖ್ಯಾತರ ಅತೀಯಾದ ತುಷ್ಟೀಕರಣವನ್ನು ಸ್ವಲ್ಪ ಕಡಿಮೆ ಮಾಡಿ ಸಬ್ ಕಾ ಸಾತ್ ಸಬ್ಕಾ ವಿಕಾಸ್ ನತ್ತ ಗಮನ ಹರಿಸುವುದು ಉತ್ತಮವಾಗಿದೆ.

ಮಿಳು ನಾಡಿನಲ್ಲಿ ಅವರು ಬಿಟ್ಟು ಇವರು, ಇವರ ಬಿಟ್ಟು ಅವರು ಎಂಬ ರಾಜ ಕಾರಣದಿಂದ ತಮಿಳರು ಹೊರಬಾರದೇ ಇರುವುದು ಅಲ್ಲಿಯ ಜನರ ರಾಜಕೀಯ ಬೌಧ್ದಿಕ ದಿವಾಳಿತನ ಮತ್ತೊಮ್ಮೆ ಜಗಜ್ಜಾಹೀರಾತಾಗಿದೆ.

ಅಷ್ಟೆಲ್ಲಾ ಹಗರಣಗಳು ಬೆಳಕಿಗೆ ಬಂದು ತಮ್ಮ ವಯಕ್ತಿಯ ಕರಾಮತ್ತಿನಿಂದಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರೂ ಕೇರಳಿಗರು ಕಮ್ಮಿನಿಷ್ಟರನ್ನೇ ಆಡಳಿತಕ್ಕೆ ತಂದಿರುವುದಕ್ಕೆ ಮುಂದಿನ ದಿನಗಳಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುವುದು.

ದೇಶದಲ್ಲಿ ಜನರು ಬಿಜೆಪಿಗೆ ಹೆಚ್ಚಿನ ಅಧಿಕಾರ, ಡಿಎಂಕೆ, ತೃಣಮೂಲ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರಿಗೆ ಮತ್ತೊಂದು ಆವಕಾಶವನ್ನು ನೀಡಿದರೆ, ಇಲ್ಲಿ ಸ್ಪಷ್ಟವಾಗಿ ಸೋತು ಸುಣ್ಣವಾಗಿರುವುದು ತಮ್ಮದು ಅತ್ಯಂತ ಹಳೆಯ ಪಕ್ಷ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್. ಈ ಚುನಾವಣೆಯಲ್ಲಿ ಕಾಂಗ್ರೇಸ್ಸನ್ನು ಮತ್ತೊಮ್ಮೆ ಧೂಳಿಪಟ ಮಾಡುವ ಮೂಲಕ ಆ ಪಕ್ಷವನ್ನು ಇತಿಹಾಸದ ಪುಟವನ್ನು ಸೇರುವಂತೆ ಮಾಡಿರುವುದಂತೂ ಸ್ಪಷ್ಟವಾಗಿದೆ.

vaccin

ಇನ್ನು ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಈ ಜನಾದೇಶಕ್ಕೆ ಅನುಗುಣವಾಗಿ ಈ ಎಲ್ಲಾ ಪಕ್ಷಗಳು ತಮ್ಮ ಹಮ್ಮು ಬಿಮ್ಮು ರಾಜಕೀಯವೆಲ್ಲವನ್ನೂ ಬದಿಗಿಟ್ಟು ಈ ದೇಶಕ್ಕೆ ಬಂದಿರುವ ಮಹಾಮಾರಿ ಕೊರೋನಾದ ವಿರುದ್ಧ ಈಗ ಗೆಲ್ಲಲೇ ಬೇಕಾಗಿದೆ. ತಮ್ಮ ಎಲ್ಲಾ ರಾಜ್ಯಗಳಲ್ಲಿಯೂ ಕೊರೋನಾ ಲಸಿಕಾ ಅಭಿಯಾನವನ್ನು ಆದಷ್ಟೂ ಚುರುಕುಗೊಳಿಸಿ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಹೋರಾಡ ಬೇಕಾಗಿದೆ.

elec2

ಮೋದಿ ಸರಿ ಇಲ್ಲಾ ಬಿಜೆಪಿ ಸರಿ ಇಲ್ಲಾ ಎಂದು ಬೊಬ್ಬಿರಿಯುವವರಲ್ಲಿ ಒಂದು ಮನವಿಯೇನೆಂದರೆ. ಮುಂದಿನ 2024ರಲ್ಲಿ ಮೋದಿಯವರ ವಿರುದ್ಧ ಹೋರಾಡುವ ಸಲುವಾಗಿಯಾದರೂ ದಯವಿಟ್ಟು ತಪ್ಪದೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ. ಜೀವ ಇದ್ದರೆ ಮಾತ್ರ ಜೀವನ. ಜೀವನ ಸರಿಯಾಗಿದ್ದಲ್ಲಿ ಮಾತ್ರವೇ ರಾಜಕೀಯ.

ಏನಂತೀರೀ?

ನಿಮ್ಮವನೇ ಉಮಾಸುತ

ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡ್ಲೇಕಾಯ್..ಕಡ್ಲೇಕಾಯ್.. ತಾಜಾ ತಾಜಾ ಕಡ್ಲೇಕಾಯ್.. ಗರ್ಮಾ ಗರಂ ಕಡ್ಲೇಕಾಯ್ ಬಡವರ ಬಾದಾಮಿ ಕಡ್ಲೇಕಾಯ್ ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಕಡಲೇಕಾಯಿ ಆರೋಗ್ಯದಾಯಕವೂ ಮತ್ತು ಪೌಷ್ಟಿದಾಯಕವೂ ಹೌದು. ಹಾಗಾಗಿ ವಿವಿಧ ಖಾಧ್ಯಗಳ ರೂಪಗಳಲ್ಲಿ ಕಡಲೇಕಾಯಿಯನ್ನು ಸೇವಿಸುತ್ತೇವೆ. ನಾವು ಇಂದು ಮನೆಯಲ್ಲಿಯೇ ಸುಲಭವಾಗಿ ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ) ತಯಾರಿಸಿಕೊಳ್ಳುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಕಾಂಗ್ರೆಸ್ ಕಡಲೇ ಬೀಜ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಕಡಲೆಕಾಯಿ ಬೀಜ – 2 ಬಟ್ಟಲು
 • ಅಚ್ಚ ಖಾರದ ಪುಡಿ – 1 ಚಮಚ
 • ಕಾಳು ಮೆಣಸಿನ ಪುಡಿ – 1 ಚಮಚ
 • ಅರಿಶಿನ ಪುಡಿ – 1/2 ಚಮಚ
 • ಚಿಟುಕಿ ಇಂಗು
 • ಅಡುಗೆ ಎಣ್ಣೆ – 1 ಚಮಚ
 • ಕರಿಬೇವಿನ ಸೊಪ್ಪು – 10-15 ಎಲೆಗಳು
 • ರುಚಿಗೆ ಉಪ್ಪು

ಕಾಂಗ್ರೆಸ್ ಕಡಲೇ ಬೀಜ ತಯಾರಿಸುವ ವಿಧಾನ

congress2

 • ಅಗಲವಾದ ಗಟ್ಟಿ ತಳವುಳ್ಳ ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎರಡು ಕಪ್ ಕಡಲೇಕಾಯಿಯನ್ನು ಹಾಕಿ ಸುಮಾರು 5-6 ನಿಮಿಷಗಳಷ್ಟು ಚೆನ್ನಾಗಿ ಹುರಿಯಬೇಕು
 • ಹುರಿದ ಕಡಲೇ ಕಾಯಿ ಆರಿದ ಮೇಲೆ ಒಂದು ಬಟ್ಟೆಯೊಳಗೆ ಹಾಕಿ ಚೆನ್ನಾಗಿ ಉಜ್ಜಿದರೆ ಕಡಲೇಕಾಯಿ ಮೇಲಿರುವ ಸಿಪ್ಪೆ ಉದುರುತ್ತದೆ ಮತ್ತು ಉಂಡೇ ಕಡಲೆಕಾಯಿ ಜೀಜಗಳು ಬೇಳೆಯ ರೂಪವನ್ನು ಪಡೆಯುತ್ತದೆ.
 • ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ
 • ಎಣ್ಣೆ ಕಾದ ನಂತಾ ಕರಿಬೇವಿನ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಗರಿ ಗರಿಯಾಗುವಂತೆ ಕರಿಯಿರಿ
 • ಈಗ ಅಚ್ಚಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿನ, ಚಿಟುಕಿ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಒಂದೆರದು ನಿಮಿಷ ಹಸೀ ಹೋಗುವಂತೆ ಹುರಿಯಿರಿ
 • ಈಗ ನಿಧಾನವಾಗಿ ಹುರಿದಿಟ್ಟುಕೊಂಡಿದ್ದ ಕಡಲೇಕಾಯಿ ಬೀಜವನ್ನು ಈ ಮಿಶ್ರಣಕ್ಕೆ ಸೇರಿಸಿ, ನಾಲ್ಕೈದು ನಿಮಿಷಗಳಷ್ಟು ಕಾಲ ಕಡಲೇಕಾಯಿ ಬೀಜಗಳಿಗೆ ಮಸಾಲೆ ಸೇರಿಕೊಳ್ಳುವಂತೆ ಹುರಿದರೆ, ರುಚಿಕರವಾದ, ಬಿಸಿ ಬಿಸಿಯಾಡ ಕಾಂಗ್ರೇಸ್ ಕಡಲೇಕಾಯಿ ಬೀಜ ಸಿದ್ದ.

ಈ ಖಾರದ ಕಡಲೇ ಕಾಯಿಬೀಜವನ್ನು ಹಾಗೆಯೇ ತಿನ್ನ ಬಹುದು ಇಲ್ಲವೇ ಸಂಜೆಯ ಹೊತ್ತು ಕಾಫೀ ಮತ್ತು ಟೀ ಜೊತೆಗೆ ಸವಿಯಲು ಮಜವಾಗಿರುತ್ತದೆ

ಇತ್ತೀಚೆಗೆ ಬಹುತೇಕ ಸಮಾರಂಭಗಳಲ್ಲಿ ಇದೇ ಕಾಂಗ್ರೇಸ್ ಕಡಲೇ ಬೀಜ ಬಳಸಿಕೊಂಡು ಕೋಸಂಬರಿ ಮಾಡುವ ಹೊಸಾ ಸಂಪ್ರದಾಯವನ್ನು ಮಾಡಿಕೊಂದಿದ್ದಾರೆ

ಕಾಂಗ್ರೇಸ್ ಕಡಲೇ ಬೀಜದ ಕೋಸಂಬರಿ ತಯಾರಿಸುವ ವಿಧಾನ

congress

 • ಒಂದು ಅಗಲವಾದ ಪಾತ್ರೆಯಲ್ಲಿ ಒಂದು ಬಟ್ಟಲು ಸಿದ್ಧ ಪಡಿಸಿಟ್ಟುಕೊಂಡಿರುವ ಕಾಂಗ್ರೇಸ್ ಕಡಲೇ ಬೀಜವನ್ನು ಹಾಕಿ
  ಅದಕ್ಕೆ ಹೆಚ್ಚಿದ ಈರುಳ್ಳಿ, ಟೋಮೇಟೋ,ತುರಿದ ಕ್ಯಾರೆಟ್, ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
 • ಈ ಮಿಶ್ರಣಕ್ಕೆ ಸ್ವಲ್ಪ ನಿಂಬೇ ರಸ ಸೇರಿಸಿ ಆದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದಲ್ಲಿ ಕಾಂಗ್ರೇಸ್ ಕಡಲೇಬೀಜದ ಕೋಸಂಬರಿ ಸವಿಯಲು ಸಿದ್ಧ.

ಇನ್ನು ಈ ಖಾರದ ಕಡಲೇಕಾಯಿ ಬೀಜಕ್ಕೆ ಕಾಂಗ್ರೇಸ್ ಕಡಲೇ ಕಾಯಿ ಬೀಜ ಎಂಬ ಹೆಸರು ಹೇಗೆ ತಗುಲಿಕೊಂಡಿತು? ಎಂಬ ಜಿಜ್ಞಾಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಕೆಲ ದಿನಗಳ ಹಿಂದೆ ತಿಳಿದು ಬಂದ ವಿಷಯವೇನೆಂದರೆ, ದೇಶದ ರಾಜಕೀಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಕಾಂಗ್ರೆಸ್ ಪಕ್ಷ ಒಂದು ಕಾಲದಲ್ಲಿ ದೇಶಾದ್ಯಂತ ಕಳೆಯಂತೆ ಹಬ್ಬಿತ್ತು ಎನ್ನುವ ಕಾರಣಕ್ಕಾಗಿ ದೇಶಾದ್ಯಂತ ಎಲ್ಲೆಡೆಯಲ್ಲಿಯೂ ಕಳೆಯ ರೂಪದಲ್ಲಿ ಹರಡಿದ್ದ ಪಾರ್ಥೇನಿಯಂ ಗಿಡವನ್ನು ಕಾಂಗ್ರೇಸ್ ಹುಲ್ಲು ಎಂದು ಕರೆದಂತೆ 1969 ರಲ್ಲಿ ಕಾಂಗ್ರೇಸ್ ಪಕ್ಷ ಅನೇಕ ಕಡಲೇ ಬೀಜದಂತೆ ಹೋಳಾಗುತ್ತಿದ್ದನ್ನು ನೋಡಿದ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಶ್ರೀನಿವಾಸ ಬ್ರಾಹ್ಮಿನ್ಸ್‌ ಬೇಕರಿಯ ಅಂದಿನ ಮಾಲಿಕರದ ಶ್ರೀ ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಅಂಗಡಿಯಲ್ಲಿ ತಯಾರಿಸುತ್ತಿದ್ದ ಖಾರದ ಕಡಲೇ ಬೀಜಕ್ಕೆ ಕಾಂಗ್ರೆಸ್ ಕಡಲೆಬೀಜ ಎಂಬ ಹೆಸರಿತ್ತರಂತೆ. ಇಂದಿಗೂ ಅದೇ ಹೆಸರು ಮುಂದುವರಿದಿದೆ. ಕಳೆದ ವರ್ಷ ನರೇಂದ್ರ ಮೋದಿಯವರು ಎರಡನೇ ಬಾರೀ ಅಧಿಕಾರಕ್ಕೇರಿದಾಗ ಕೆಲವು ಅಭಿಮಾನಿಗಳು ಈ ಕಾಂಗ್ರೇಸ್ ಕಡಲೇಬೀಜವನ್ನು ಮೋದಿ ಮಸಾಲೆ ಎಂದು ಹೆಸರಿಬೇಕೆಂದು ಆಗ್ರಹಿದ್ದರು ಎಂಬ ಗುಲ್ಲೆದ್ದಿತ್ತು.

ರುಚಿಕರವಾದ ಕಾಂಗ್ರೇಸ್ ಕಡಲೇ ಬೀಜ ಮತ್ತು ಅದರ ಕೋಸಂಬರಿ ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ

ಏನಂತೀರೀ?

ಮನದಾಳದ ಮಾತು : ಕಾಂಗ್ರೇಸ್ ಕಡಲೇಕಾಯಿ ಬೀಜವನ್ನು ಹಾಗೆಯೇ ಇಲ್ಲವೇ ಕೋಸಂಬರಿ ಮಾಡಿಕೊಳ್ಳುವ ಮುಖಾಂತರವಲ್ಲದೇ, ಮನೆಯಲ್ಲಿ ಮಾಡುವ ಪಲಾವ್, ಮೆಂತ್ಯಾಬಾತ್ ಪುಳಿಯೋಗರೇ, ಚಿತ್ರಾನ್ನದ ಇಲ್ಲವೇ ಯಾವುದೇ ಅನ್ನಕ್ಕೆ ಸಂಬಂಧ ಪಟ್ಟಿದ ಬಾತ್ ನೊಂದಿಗೆ ಕಲೆಸಿಕೊಂಡು ತಿನ್ನಲು ಮಜವಾಗಿರುತ್ತದೆ. ಮೊಸರನ್ನ ಮತ್ತು ಕಾಂಗ್ರೇಸ್ ಕಡಲೇ ಕಾಯಿ ಬೀಜ ಸೂಪರ್ ಕಾಂಬಿನೇಷನ್ ಕೂಡಾ.

ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

arnab2ಸೋನಿಯಾಗಾಂಧಿಯವರ ಮೂಲ ಹೆಸರನ್ನು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ಣಾಬ್ ಗೋಸ್ವಾಮಿ ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದನ್ನೇ ಸಹಿಸಿಕೊಳ್ಳದ ಕಟ್ಟರ್ ಕಾಂಗ್ರೇಸ್ಸಿಗರು ಕೂಡಲೇ ವ್ರಗ್ರರಾಗಿ ದೇಶಾದ್ಯಂತ ಅರ್ಣಾಬ್ ವಿರುದ್ಧ ನೂರಾರು ಕೇಸ್ಗಳನ್ನು ಹಾಕಿದ್ದಲ್ಲದೇ, ಆತನ ಮೇಲೆ ಹಲ್ಲೆಗಳನ್ನು ಮಾಡಿದ್ದು ಇನ್ನೂ ಮಾಸದಿರುವ ಸಂದರ್ಭದಲ್ಲಿಯೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು PMcare ಬಗ್ಗೆ ಅಪಮಾನಿಸಿ ದೇಶದ ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಸೋನಿಯಾ ಗಾಂಧಿ ವಿರುದ್ದ ಸಾಗರ ಪೋಲಿಸ್ ಠಾಣೆಯಲ್ಲಿ FIR ದಾಖಲು ಮಾಡಿರುವ ವಕೀಲರು ಮತ್ತು ಅದೂರನ್ನು ದಾಖಲು ಮಾಡಿಕೊಂಡ ಪೋಲೀಸ್ ಸಿಬ್ಬಂಧಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಎರಡೂ ಪ್ರಕರಣಗಳನ್ನು ಗಮನಿಸಿದಲ್ಲಿ, ಎಲ್ಲರಿಗೂ ಕಾಡುವ ಪ್ರಶ್ನೆಯೆಂದರೆ, ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

DKSನಿಂದನೆ ಮತ್ತು ಟೀಕೆ ಎರಡೂ ಪದ ಮತ್ತು ಕ್ರಿಯೆಗಳಿ ನಡುವೆ ಬಹಳಷ್ಟು ವೆತ್ಯಾಸವಿದೆ. ಆಕೆ ಭಾರತೀಯ ಸಂಜಾತಳಲ್ಲದೇ ಇಟಾಲಿಯನ್ ಅಥವಾ ಕಾಂಗ್ರೆಸ್ ಅಧ್ಯಕ್ಷೇ ಎಂಬ ಕಾರಣಕ್ಕಾಗಿ ಯಾರೂ ಆಕೆಯನ್ನು ನಿಂದಿಸುತ್ತಿಲ್ಲ ಆದರೆ ಬಹಳಷ್ಟು ಜನಾ ಆಕೆಯ ಜವಾಬ್ಧಾರಿ ನಿರ್ವಹಣೆಯ ಕುರಿತಾಗಿ ಟೀಕಿಸುತ್ತಾರೆ. ಸಾರ್ವಜನಿಕವಾಗಿರುವ ವ್ಯಕ್ತಿಗಳಿಗೆ ಮತ್ತು ರಾಜಕಾರಣಿಗಳಿಗೆ ಇಂತಹ ಟೀಕೆಗಳು ಸಹಜ ಮತ್ತು ಅದನ್ನು ಸರಿಯಾಗಿ ನಿಭಾಯಿಸುವವರೇ ನಿಜವಾದ ನಾಯಕರು. ಜನರು ಆಕೆಯನ್ನು ಟೀಕಿಸತ್ತಿರುವ ವಿಷಯಗಳೇನು ಎಂಬುದರ ಕುರಿತಂತೆ ಒಂದೊಂದಾಗಿ ವಿಶ್ಲೇಷಿಸಿ ನೋಡೋಣ.

 

 

ವಾಜಪೇಯಿಯವರ ದಕ್ಷ ಆಡಳಿತದಿಂದ ನಿಜವಾಗಿಯೂ ಭಾರತ ಪ್ರಜ್ವಲಿಸುತ್ತಿದ್ದರೂ, 2009ರ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರವನ್ನೇರಲು ಅಗತ್ಯವಿದ್ದ ಸಂಖ್ಯಾಬಲ ದೊರೆಯದಿದ್ದಾಗ, ಎರಡನೇ ಅತಿದೊದ್ಡ ಪಕ್ಷವಾದ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಇತರೇ ಎಲ್ಲಾ ವಿರೋಧ ಪಕ್ಷಗಳ ಬೆಂಬಲದಿಂದ ಪ್ರಧಾನಿ ಹುದ್ದೆಗೆ ಏರಲು ಅಂದಿನ ರಾಷ್ತ್ರಪತಿಗಳಾದ ಅಬ್ದುಲ್ ಕಲಾಂ ಅವರ ಬಳಿ ಏಕಾಏಕಿ ತಮ್ಮ ಹಕ್ಕನ್ನು ಮಂಡಿಸಿದರು. ಅದೃಷ್ಟವಶಾತ್, ಸುಬ್ರಹ್ಮಣ್ಯಸ್ವಾಮಿಯವರು ಕೂಡಲೇ ಮಧ್ಯಪ್ರವೇಶಿಸಿ ಆಕೆಯ ಪೌರತ್ವದ ಸಂಬಂಧಿತವಾದ ಕಾರಣಗಳಿಂದಾಗಿ ಆಕೆ ಭಾರತದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂಬುದನ್ನು ಬಲವಾಗಿ ಮಂಡಿಸಿದ ಕಾರಣ ಮತ್ತು ಅದನ್ನು ಕಲಾಂರವರು ಕಾನೂನಾತ್ಮಕವಾಗಿ ಕೂಲಂಕುಶವಾಗಿ ಪರಿಶೀಲಿಸಿದ ನಂತರ ಸೋನಿಯಾಗಾಂಧಿಯವರನ್ನು ಕರೆಸಿ, ಕಾನೂನಾತ್ಮಕವಾದ ತೊಡಕುಗಳಿಂದಾಗಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದಾಕ್ಷಣವೇ, ಆಕೆಯ ಗೊಸುಂಬೆ ತನ ಜಗಜ್ಜಾಹೀರಾಯಿತು.

ರಾಷ್ಟ್ರಪತಿಗಳು ಕಾನೂನಾತ್ಮಕವಾದ ಕಾರಣದಿಂದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂಬ ಅಂಶವನ್ನು ಮುಚ್ಚಿಟ್ಟು ಈ ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ನೆಹರು, ಇಂದಿರಾ ಮತ್ತು ರಾಜೀವ್ ಗಾಂಧಿಯಂತೆ ತಾನೂ ಸಹಾ ಅಧಿಕಾರವನ್ನು ದೇಶಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ನನ್ನ ಬದಲಾಗಿ ಶ್ರೀ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುತ್ತಿದ್ದೇನೆ ಎಂದು ಎಲ್ಲರ ಮುಂದೆ ಹೇಳುತ್ತಾ ಜನರ ಅನುಕಂಪ ತೆಗೆದುಕೊಳ್ಳಲು ಹೋದದ್ದನ್ನೇ ಬುದ್ಧಿವಂತ ಜನ ಟೀಕಿಸಿದ್ದು.

2009 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಳ್ವಿಕೆಯಲ್ಲಿ ಹೆಸರಿಗಷ್ಟೇ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದರು. ಅವರನ್ನು ಕೈಗೊಂಬೆ ರೀತಿಯಲ್ಲಿ ಹಿಂದೆನಿಂದ ರಿಮೋಟ್ ಕಂಟ್ರೋಲರ್ ರೀತಿಯಲ್ಲಿ ಇಡೀ ದೇಶವನ್ನು ಆಳಿದ್ದು ಇದೇ ಸೋನಿಯಾ ಕುಟುಂಬವೇ ಆಲ್ಲವೇ? ಅವರ ಅನೇಕ ತಪ್ಪು ನಿರ್ಧಾರಗಳಿಂದ ದೇಶವನ್ನು ದಾರಿ ತಪ್ಪಿಸಿದ ಈ ರೀತಿಯ ಅನೇಕ ಉದಾಹರಣೆಗಳು ಕಣ್ಣ ಮುಂದಿದೆ .

 • ಈ ಅವಧಿಯಲ್ಲಿಯೇ ಕಾಶ್ಮೀರ ಪರಿಸ್ಥಿತಿ ತೀವ್ರತರವಾಗಿ ಹದಗೆಟ್ಟಿತಲ್ಲದೇ, ಉಗ್ರರ ಕೈಯಲ್ಲಿ ಕಾಶ್ಮೀರ ಅಕ್ಷರಶಃ ನಲುಗಿತು
 • ಉಗ್ರರ ವಿರುದ್ಧ ದಿಟ್ಟ ಎದೆಗಾರಿಕೆ ತೋರದ ಪರಿಣಾಮವಾಗಿ ಪಾಕೀಸ್ಥಾನೀ ಪ್ರೇರಿತ ಭಯೋತ್ಪಾದಕರು ಅತ್ಯಂತ ಸುಲಭವಾಗಿ ಮುಂಬೈ ಅಂತಹ ನಗರಕ್ಕೆ ನುಸುಳಿ 26/11 ಅಂತಹ ಭೀಕರ ಭಯೋತ್ಪಾದಕ ಕೃತ್ಯವನ್ನು ಎಸೆಗಳು ಸಾಧ್ಯವಾಯಿತು.
 • ದೇಶದ ವಿವಿಧ ಪ್ರದೇಶಗಳ ಗಡಿರೇಖೆಯ ಭಯೋತ್ಪಾದನೆಯಿಂದ ಸೈನಿಕರಲ್ಲದೇ, ಹೆಚ್ಚಿನ ಸಂಖ್ಯೆಯ ಮುಗ್ಧ ಭಾರತೀಯ ನಾಗರಿಕರು ಕೊಲ್ಲಲ್ಪಟ್ಟಿದ್ದೂ ಇದೇ ಸಮಯದಲ್ಲಿಯೇ
 • ಪಾಕಿಸ್ತಾನ (ಐಎಸ್‌ಐ) ಈ ಹಲವಾರು ಪ್ರಜ್ಞಾಶೂನ್ಯ ಹತ್ಯೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿರುವುದು ಎಲ್ಲರಿಗೂ ತಿಳಿದಿತ್ತಾದರೂ ಅದನ್ನು ಪ್ರಶ್ನಿಸುವ ಇಲ್ಲವೇ ಎದುರಿಸುವ ಎದೆಗಾರಿಕೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ತೋರಲೇ ಇಲ್ಲ. ಹಾಗಾಗಿ ಬಹಿರಂಗವಾಗಿಯೇ ಪಾಕಿಸ್ತಾನದ ಅನೇಕ ರಾಜಕಾರಣಿಗಳು ಮತ್ತು ಉಗ್ರರು ಮತ್ತೆ ಕಾಂಗ್ರೇಸ್ ಸರ್ಕಾರವೇ ಭಾರತದಲ್ಲಿ ಅಧಿಕಾರಕ್ಕೆ ಬರಲಿ ಎಂದು ಹೇಳುವಷ್ಟರ ಮಟ್ಟಿಗಿನ ಉದ್ಧಟತನವನ್ನು ತೋರಿದರು.
 • ದೇಶದಲ್ಲಿ ಆಗುತ್ತಿದ್ದ ಭಯೋತ್ಪಾದನಾ ಕೃತ್ಯದ ಹಿಂದಿರುವವರನ್ನು ಕಂಡು ಹಿಡಿದು ಶಿಕ್ಷಿಸುವ ಬದಲು ಹಿಂದೂ ಭಯೋತ್ಪಾದನೆ ಎಂಬ ಹೊಸಾ ಕಪೋಲ ಕಲ್ಪಿತ ವಿಷಯವನ್ನು ತೇಲಿಬಿಟ್ಟು ಗಡಿಯಾಚೆಗಿನ ಭಯೋತ್ಪಾದನೆಯ ದುಷ್ಕೃತ್ಯಗಳಲ್ಲಿ ಪಾಕಿಸ್ತಾನ ಮತ್ತದರ ಉಗ್ರರತಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವಂತಾಯಿತು.
 • ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಕಲ್ಮಾಡಿಕರ್, ಚಿದಂಬರಂ, ಡಿಎಂಕೆ ಯ ಎ.ರಾಜ, ಕನಿಮೋಳಿ, ಎನ್‌ಪಿಸಿಯ ಪ್ರೊಫುಲ್ಲಾ ಪಟೇಲ್ ಸೇರಿದಂತೆ ಅನೇಕರು ಎಗ್ಗಿಲ್ಲದಂತೆ ನಾನಾ ಹಗರಣಗಳಲ್ಲಿ ಭಾಗಿಯಾಗಿದ್ದನ್ನು ತಡೆಯುವ ದಿಟ್ಟತನವನ್ನು ತೋರಲೇ ಇಲ್ಲ.
 • ಆರೋಗ್ಯ ಸಂಬಂಧಿತವಾಗಿ ಆಕೆ ಆಗ್ಗಗ್ಗೆ ಗುಪ್ತವಾಗಿ ವಿದೇಶಗಳಿಗೆ ಹೋಗುವುದನ್ನು ಯಾರೂ ಟೀಕಿಸುವುದಿಲ್ಲವಾದರೂ, ಆರೋಗ್ಯದ ಹೆಸರಿನಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತರಗಿರುವ ವಿಚ್ಛಿದ್ರಕಾರಿ ಶಕ್ತಿಗಳ ಸದಸ್ಯರನ್ನು ಭೇಟಿ ಮಾಡುವುದು ಎಷ್ಟು ಸರಿ?
 • ಪದೇ ಪದೇ ಚೀನಾ ಭಾರತದ ಆಂತರಿಕ ವಿಷಯಗಳಲ್ಲಿ ತೊಂದರೆ ನೀಡುತ್ತಾ ಒಂದು ರೀತಿಯ ಶತೃರಾಷ್ಟ್ರವೇ ಆಗಿರುವಾಗ, ಸಂವಿಧಾನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಯಾವುದೇ ಹುದ್ದೆಯಲ್ಲಿ ಇಲ್ಲದ ಆಕೆಯ ಮಗ ರಾಹುಲ್ ಮತ್ತು ಆಕೆಯ ಅಳಿಯ ರಾಬರ್ಟ್ ವಾದ್ರ ಗುಟ್ಟಾಗಿ ಚೀನಾ ರಾಜತಾಂತ್ರಿಕರನ್ನು ಭೇಟಿ ಮಾಡಿದ ಔಚಿತ್ಯವಾದರೂ ಏನು?
 • ಇದಕ್ಕೂ ಮಿಗಿಲಾಗಿ ವಿಪರೀತ ಪುತ್ರ ವ್ಯಾಮೋಹದಿಂದಾಗಿ ರಾಜಕೀಯವಗಿ ಅಸಮರ್ಥ ಎಂಬುದು ಜಗಜ್ಜಾಹೀರಾತಾಗಿದ್ದರೂ, ತನ್ನ ರಾಜವಂಶದ ಆಳ್ವಿಕೆಯ ಬಿಗಿಯಾದ ಹಿಡಿತವನ್ನು ಸಡಿಲಗೊಳಿಸಲು ಇಚ್ಚಿಸದೇ, ತನ್ನ ಮಗ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಪಟ್ಟಕ್ಕೇರಿಸಲು ಶತಪ್ರಯತ್ನ ಮಾಡುತ್ತಿರುವುದು ಅಕೆಯ ಮೂರ್ಖತನಕ್ಕೆ ತೋರಿದ ಕೈಗನ್ನಡಿಯಾಗಿದೆ. ಪ್ರಪ್ರಥಮವಾಗಿ ಸ್ವಂತ ಯೋಚನಾಶಕ್ತಿ ಇಲ್ಲದ ಸರಿಯಾದ ವಿದ್ಯಾರ್ಹತೆಯೂ ಇಲ್ಲದ, ಅನೇಕ ಬಲ್ಲ ಮೂಲಗಳೇ ಹೇಳುವ ಪ್ರಕಾರ ಮಾದಕದ್ರವ್ಯ ವ್ಯಸನಿಯಾಗಿರುವ ದೇಶದ ಆಡಳಿತದ ಮೂಲಭೂತ ಸಮಸ್ಯೆಗಳನ್ನು ಸಹ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲವನನ್ನು ಶತಾಯ ಗತಾಯ ದೇಶದ ಪ್ರಧಾನಿಯನ್ನಾಗಿ ಮಾಡಲು ಹೊರಟಿರುವುದು ಸಹಾ  ದೇಶದ  ಹಿತದೃಷ್ಟಿಯಿಂದ  ಅಕ್ಷಮ್ಯ ಅಪರಾಧವೇ ಸರಿ.
 • ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ನಂತರವೂ ಕಾಂಗ್ರೆಸ್ ಅಧಿಕಾರದಲ್ಲಿರುವ ಅಥವಾ ಮೈತ್ರಿಯಲ್ಲಿರುವ ರಾಜ್ಯಗಳಲ್ಲಿ ಅವಳ ನಕಾರಾತ್ಮಕ ಮತ್ತು ಅವ್ಯವಹಾರ ಮುಂದುವರಿಯುತ್ತಲೇ ಇದೆ. ದೇಶದ ಹಿತದೃಷ್ಟಿಯಿಂದ ಸಂವಿಧಾನಾತ್ಮಕವಾಗಿ ಕಾನೂನುಗಳನ್ನು ಜಾರಿಗೆ ತಂದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಅಥವಾ ಮೈತ್ರಿಯಲ್ಲಿರುವ ರಾಜ್ಯಗಳಲ್ಲಿ ಅದನ್ನು ವಿರೋಧಿಸುವ ಮನೋಭಾವನೆ ದೇಶದ ಹಿತದೃಷ್ಟಿಯಿಂದ ಮಾರಕ ಎನ್ನುವ ಕಠು ಸತ್ಯದ ಅರಿವು ಆಕೆಗೆ ಇಲ್ಲದಾಗಿದೆ.
 • ದೇಶದಲ್ಲಿ ಎಲ್ಲಿಯಾದರೂ ಹಿಂದೂಗಳ ಹೊರತಾದ ಅನ್ಯಧರ್ಮೀಯರ ವಿಷಯದಲ್ಲಿ ಯಾವುದಾದರೂ ಧಾರ್ಮಿಕ ರೀತಿಯ ಹಲ್ಲೆಗಳಾದಲ್ಲಿ ಮೊತ್ತ ಮೊದಲಿಗೆ ಖಂಡನಾತ್ಮಕ ಹೇಳಿಕೆಯನ್ನು ನೀಡಿ ಸರ್ಕಾರದ ವಿರುದ್ಧ ದೇಶಾದ್ಯಂತ ಜನಾಂದೋಲನವನ್ನು ನಡೆಸಲು ಕರೆ ನೀಡುವ ಅಮ್ಮಾ ಮತ್ತು ಮಗ ಅದೇ ಹಿಂದೂಗಳ ವಿಚಾರದಲ್ಲಿ ಧಾಳಿಗಳು ,ಹಲ್ಲೆಗಳಾದಾಗ ದಿವ್ಯ ಮೌನ ತೋರುವುದನ್ನೇ ಜನರು ಟೀಕಿಸುವುದು.

dks2ಆಕೆ ದೇಶದ ಅತ್ಯಂತ ಹಳೆಯ ಮತ್ತು ಲೋಕಸಭೆಯಲ್ಲಿ ಎರಡನೇ ದೊಡ್ಡ ಪಕ್ಷ (ಅಧಿಕೃತ ವಿರೋಧ ಪಕ್ಷವಲ್ಲ) ವಾಗಿರುವ ಕಾಂಗ್ರೆಸ್ಸಿನ ಕಾರ್ಯಕಾರಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯಾಗಿ ಅಕೆಯ ಕಾರ್ಯವಿಧಾನವನ್ನು ಟೀಕಿಸುತ್ತಾರೆಯೇ ಹೊರತು ವ್ಯಕ್ತಿಗತವಾಗಿ ಅಕೆಯನ್ನು ಯಾರೂ ನಿಂದಿಸುತ್ತಿಲ್ಲ ಎನ್ನುವುದು ಗಮನಾರ್ಹವಾಗಿದೆ. ಸೈದ್ಧಾಂತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ವಿಪತ್ತಿನ ಸಂದರ್ಭದಲ್ಲಿ ಅವೆಲ್ಲವನ್ನೂ ಬದಿಗೊತ್ತಿ ದೇಶವನ್ನು ವಿಪತ್ತಿನಿಂದ ಹೊರತರುವುದು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ. ಇದಕ್ಕೆ ಸೋನಿಯಾ, ಅವರ ಕುಟುಂಬ ಮತ್ತವರ ಪಕ್ಷವೂ ಹೊರತಾಗಿಲ್ಲ ಅಲ್ಲವೇ?

ಏನಂತೀರೀ?

ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವಿನ ಸಂಬಂಧವೇನು?

rahul4ಯಾವುದೇ ದೇಶದಲ್ಲಿ ಆಡಳಿತ ಪಕ್ಷ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಮರ್ಥವಾದ ವಿರೋಧ ಪಕ್ಷಗಳ ಅಗತ್ಯವೂ ಇರುತ್ತದೆ. ವಿರೋಧ ಪಕ್ಷಗಳು ಸದಾ ಕಾವಲು ನಾಯಿಯಂತೆ ಕಾಯುತ್ತಾ ಆಡಳಿತ ಪಕ್ಷದ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ , ದೇಶದ ಹಿತದೃಷ್ಟಿಯಿಂದ ಆಡಳಿತ ಪಕ್ಷದ ನಡೆಗಳನ್ನು ಎಚ್ಚರಿಸುವ ಕಾರ್ಯ ನಿರ್ವಹಿಸುತ್ತದೆ. ದುರಾದೃಷ್ಟವಷಾತ್ ಕಳೆದ ಆರು ವರ್ಷಗಳಿಂದ, ಭಾರತ ದೇಶದಲ್ಲಿ ನಮರ್ಥವಾದ ವಿರೋಧಪಕ್ಷ ಅಥವಾ ನಾಯಕನ ಕೊರತೆ ಎದ್ದು ಕಾಣುತ್ತಿದ್ದೆ. ಪ್ರಾದೇಶಿಕ ಪಕ್ಷಗಳು ಕೇವಲ ತಮ್ಮ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಹೋರಾಡುತ್ತಿವೆಯೇ ಹೊರತು ಸಮಗ್ರ ದೇಶದ ನೇತೃತ್ವ ವಹಿಸಬಲ್ಲ ಸಮರ್ಥ ವಿರೋಧ ಪಕ್ಷದ ನಾಯಕತ್ವ ಇಲ್ಲವಾಗಿದೆ. ಅತ್ಯಂತ ಹಿರಿಯ ಪಕ್ಷವಾದ ಕಾಂಗ್ರೆಸ್ ರಾಹುಲ್ ಗಾಂಧಿಯಂತಹ ಅತ್ಯಂತ ಕಳಪೆ ನಾಯಕತ್ವವನ್ನು ಹೊಂದಿದೆ ಎಂದರೂ ತಪ್ಪಾಗಲಾರದು. ಈ ವಿಷಯ ಅವರ ತಾಯಿ ಹಾಗೂ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ತಿಳಿದಿರುವುದರಿಂದ ತನ್ನ ಮಗನ ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಸಲಹೆಗಾರರನ್ನು ಮತ್ತು ಹಿರಿಯರ ತಂಡವನ್ನು ರಚಿಸಲು ಹೆಣಗಾಡುತ್ತಿದ್ದಾರೆ. ಅಂತಹ ಪ್ರಯತ್ನಗಳಲ್ಲಿ ಕಳೆದ ವಾರದ ರಾಹುಲ್ ಗಾಂಧಿ ಮತ್ತು ಮಾಜೀ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ನಡುವಿನ ಸಂದರ್ಶನ ಒಂದಾಗಿದೆ.

rahuul1ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವಿನ ಇತ್ತೀಚಿನ ಸಂದರ್ಶನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅವರಿಬ್ಬರಿಗೂ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವಂತಹ ಪರಿಸ್ಥಿತಿಯಲ್ಲಿ ಇದ್ದು ಇಬ್ಬರೂ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುವ ಇಲ್ಲವೇ ಪರಸ್ಪರ ಸ್ವಹಿತಾಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತಿದೆ. ಇವರಿಬ್ಬರ ಸಂಬಂಧವನ್ನು ಅತ್ಯಂತ ಕಠಿಣ ರೀತಿಯಲ್ಲಿ ಹೇಳಬೇಕೆಂದರೆ ಶತ್ರುಗಳ ಶತ್ರು ನಮ್ಮ ಸ್ನೇಹಿತ ಮತ್ತು ಶತ್ರುಗಳ ಸ್ನೇಹಿತ ನಮ್ಮ ಶತ್ರು ಎನ್ನುವ ತತ್ವವನ್ನು ಆಧರಿಸಿದಂತಿದೆ. ರಘುರಾಮ್ ರಾಜನ್ ಅವರು ಸೆಪ್ಟೆಂಬರ್ 2013 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಳ್ಳುವ ಮೊದಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷದೊಂದಿಗೆ. ಅವರ ಉತ್ತಮ ಸಂಬಂಧವೇ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಕಗೊಳ್ಳಲು ಸಹಾಯ ಮಾಡಿದೆ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ರಿಸರ್ವ್ ಬ್ಯಾಂಕಿನ ಗರರ್ನರ್ ಅವಧಿಯು 3 ವರ್ಷಗಳದ್ದಾಗಿದ್ದು ಅವರ ಮೊದಲ ಒಂದೂವರೆ ವರ್ಷದ ಅಧಿಕಾರಾವಧಿಯು ಕಾಂಗ್ರೆಸ್ ಆಳ್ವಿಕೆಯಲ್ಲಿತ್ತು ಮತ್ತು ಎಲ್ಲವೂ ಸುಗಮವಾಗಿಯೇ ಇತ್ತು. ಕೇಂದ್ರ ಸರ್ಕಾರದೊಂದಿಗೆ ಉತ್ತಮ ಹೊಂದಾಣಿಕೆ ಹೊಂದಿದ್ದರು. ನಂತರದ ಸಮಯದಲ್ಲಿ ಮೋದಿ ಸರ್ಕಾರ ಮತ್ತು ರಘುರಾಮ್ ರಾಜನ್ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗತೊಡಗಿದವು. ಇದರ ಹಿಂದಿನ ಕಾರಣ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಅಥವಾ ನಿರ್ದೇಶನ ಎನ್ನುವುದನ್ನು ಎಲ್ಲರೂ ಗಮಸಿದ ಅಂಶವಾಗಿದೆ.

ರಿಸರ್ವ್ ಬ್ಯಾಂಕಿನ ಗವರ್ನರ್ ಅವರ ಆಡಳಿತಾವಧಿಯ 3 ವರ್ಷಗಳು ಪೂರ್ಣವಾದ ನಂತರ ಸಾಮಾನ್ಯವಾಗಿ ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ಅನೇಕ ಬಾರಿ ಇದನ್ನೇ ಅನುಸರಿಸಿಕೊಂಡು ಬರಲಾಗಿದೆ. ಆದರೆ, ರಘುರಾಮ್ ರಾಜನ್ ಅವರ ಕೆಲಸದಿಂದ ಮೋದಿ ಸರ್ಕಾರ ತೃಪ್ತರಾಗದ ಕಾರಣ ಅವರಿಗೆ ಸೇವೆ ವಿಸ್ತರಣೆ ಮಾಡಲಿಲ್ಲ. ಈನಡೆಯಿಂದ ತೃಪ್ತರಾಗದ ಕಾಂಗ್ರೆಸ್ ನೇತೃತ್ವದ ಎಲ್ಲಾ ವಿರೋಧ ಪಕ್ಷಗಳು ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದವು ಮತ್ತು ರಘುರಾಮ್ ರಾಜನ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಆಗ್ರಹಪಡಿಸಿದರೂ ಮೋದಿ ಸರ್ಕಾರ ಇದರ ಬಗ್ಗೆ ಮಣೆ ಹಾಕಲಿಲ್ಲ.

ಭಾರತದಲ್ಲಿ, ಅಧಿಕಾರಶಾಹಿ ವರ್ಗವು ಸ್ವಾತಂತ್ರವಾಗಿ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ ಸಂಪ್ರದಾಯವಿದ್ದರೂ ಬಹುತೇಕ ಅಧಿಕಾರಿಗಳು ಒಂದಲ್ಲಾ ಒಂದು ರಾಜಕೀಯ ಪಕ್ಷದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲು ಬಯಸುತ್ತಾರೆ ಮತ್ತು ಸಂಬಂಧವನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಪಸ್ತುತ ಆಡಳಿತ ಪಕ್ಷದೊಂದಿಗೆ ಉತ್ತಮ ಸಂಬಂಧ ಮತ್ತು ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್, ಕಾಂಗ್ರೇಸ್ ಮನಸ್ಸಿನ ರಘುರಾಮ್ ರಾಜನ್, ಬಿಜೆಪಿ ಸರ್ಕಾರದೊಂದಿಗೆ ಇದೇ ಇದೇ ಸಂಪ್ರದಾಯವನ್ನು ಅನುಸರಿಸಲು ಸಾಧ್ಯವಾಗಲಿಲ್ಲವಾದ ಕಾರಣ ಅವರ ವೃತ್ತಿಜೀವನ ಅಲ್ಲಿಗೇ ಮೊಟಕಾಯಿತು.

ಸರ್ಕಾರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡ ಒಬ್ಬ ಅಧಿಕಾರಿ ಎಷ್ಟು ಚೆನ್ನಾಗಿ ವೃತ್ತಿ ಜೀವನದಲ್ಲಿ ಮುಂದುವರೆಯಬಲ್ಲರು ಎನ್ನುವುದಕ್ಕೆ ಮನ್ ಮೋಹನ್ ಸಿಂಗ್ ಅವರೇ ಉತ್ತಮ ಉದಾಹರಣೆ. ಅವರು ಹಣಕಾಸು ಕಾರ್ಯದರ್ಶಿ, ರಿಸರ್ವ್ ಬ್ಯಾಂಕಿನ ರಾಜ್ಯಪಾಲರು, ಯೋಜನಾ ಆಯೋಗದ ಉಪಾಧ್ಯಕ್ಷರು, ಮತ್ತು ನಂತರ ಹಣಕಾಸು ಸಚಿವರು ಮತ್ತು ಅಂತಿಮವಾಗಿ ಪ್ರಧಾನ ಮಂತ್ರಿಯ ಹುದ್ದೆಯನ್ನೂ ಅಲಂಕರಿಸಿದರು. ಅವರು ನಿರ್ವಹಿಸಿದ ಯಾವುದೇ ಹುದ್ದೆಗಳಲ್ಲಿಯೂ ಎಂದಿಗೂ ಸರ್ಕಾರದೊಂದಿಗೆ ಯಾವುದೇ ವಿವಾದಗಳನ್ನು ಮಾಡಿಕೊಂಡಿರಲಿಲ್ಲ. ಅವರ ನಡವಳಿಕೆಯಲ್ಲಿ ನಮ್ರತೆ ಮತ್ತು ಸ್ವಾಮಿಭಕ್ತಿ ಗಮನಾರ್ಹವಾಗಿದ್ದ ಕಾರಣವೇ ಅವರು ಯಶಸ್ಸಿನ ತುತ್ತ ತುದಿಯನ್ನು ಮುಟ್ಟಿದರು.

ರಘುರಾಮ್ ರಾಜನ್ ನಿಸ್ಸಂಶಯವಾಗಿ ಬಹಳ ಬುದ್ಧಿವಂತ ವ್ಯಕ್ತಿ ಮತ್ತು ಉತ್ತಮ ಅರ್ಥಶಾಸ್ತ್ರಜ್ಞ, ಆದರೆ ಅವರು ದೇಶದ ಆರ್ಥಿಕತೆಗಿಂತ ಅರ್ಥಶಾಸ್ತ್ರಜ್ಞರಾಗಿ ತಮ್ಮ ಚಿತ್ರ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಬ್ಯಾಂಕಿಂಗ್ ಸಮುದಾಯವು ಸಾಮಾನ್ಯವಾಗಿ ಯಾವುದೇ ಒಳ್ಳೆಯ ಕೆಲಸಕ್ಕಾಗಿ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಸಮತೋಲಿತ ಮತ್ತು ನಿಷ್ಪಕ್ಷಪಾತವಾಗಿ ಉಳಿಯುವುದು ಅವನಿಗೆ ತಿಳಿದಿಲ್ಲ ಎಂಬುದು ಒಂದು ವಿಷಯ ಬಹಳ ಸ್ಪಷ್ಟವಾಗಿದೆ. ಇದನ್ನೆಲ್ಲ ಅವರು ತಿಳಿದಿದ್ದರೆ, ಬಹುಶಃ ಇಂದು ಅವರು ದೇಶದ ಹಣಕಾಸು ಮಂತ್ರಿಯಾಗಬಹುದಿತ್ತು?

ಪ್ರಧಾನಿ ಮೋದಿಯವರೂ ಸಹಾ ಹಲವಾರು ವ್ಯಕ್ತಿಗಳಿಂದ ಸಲಹೆ ಸೂಚನೆಯನ್ನು ಸ್ವೀಕರಿಸುತ್ತಾರಾದರೂ ಅವರು ವ್ಯಕ್ತಿ ಆರಾಧನೆಯನ್ನು ತೋರಿಸಿದ ಉದಾಹರಣೆ ಎಲ್ಲೂ ಕಾಣಸಿಗುವುದಿಲ್ಲ. ಅವರು ಬುದ್ಧಿವಂತ ಮತ್ತು ಸಮರ್ಥ ಜನರಿಗೆ ಸಾಕಷ್ಟು ಗೌರವವನ್ನು ನೀಡುತ್ತಾರೆ ಹಾಗಾಗಿ ಕಾಂಗ್ರೆಸ್ ಸರ್ಕಾರದ ಅನೇಕ ನಿವೃತ್ತ ದಕ್ಷ ಮತ್ತು ಸಮರ್ಥ ಅಧಿಕಾರಿಗಳನ್ನು ಬದಲಿಸದೇ, ಅವರನ್ನು ಕರೆದು ಅವರನ್ನು ಮಾತನಾಡಿಸಿ ಅವರಲ್ಲಿ ಸ್ಪೂರ್ತಿ ತುಂಬಿ ಅದೇ ಪ್ರಮುಖ ಹುದ್ದೆಗಳಲ್ಲಿ ಮುಂದುವರಿಸಿದರು ಇಲ್ಲವಛೆಚ್ಚಿನ ಅಧಿಕಾರವನ್ನು ನೀಡಿದರು. ಮಾಜೀ ಕೇಂದ್ರ ಸಚಿವ ಅಲ್ಫೋನ್ಸ್ ಜೋಸೆಫ್ ಕಣ್ಣಂತನಂ ಮತ್ತು ಪ್ರಸ್ತೃತ ವಿದೇಶಾಂಗ ಸಚಿವ ಶ್ರೀ ಕೆ ಜೈಶಂಕರ್ ಇದಕ್ಕೆ ಅತ್ಯುತ್ತಮ ಉದಾಹರಣೆ.

raghu1ರಘುರಾಮ್ ರಾಜನ್ ಹೇಗಾದರೂ ಮಾಡಿ ಭಾರತಕ್ಕೆ ಮರಳಿ ಕೆಲವು ಪ್ರಮುಖ ಸ್ಥಾನದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತಿದ್ದಾರೆ ಹಾಗಾಗಿ ಅವರು ತಾವು ಹೈಲೈಟ್ ಮಾಡಿಕೊಳ್ಳಲು ನಾನಾರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇದ್ದಾರೆ. ಅಂತಹ ಕಸರತ್ತುಗಳಲ್ಲಿ ಕಳೆದ ವಾರ ರಾಹುಲ್ ಗಾಂಧಿಯವರ ಜೊತೆಗಿನ ಸಂದರ್ಶನವೂ ಒಂದಾಗಿದೆ. ಅವರು ಭಾರತದ ಆರ್ಥಿಕತೆಯನ್ನು ಸುಧಾರಿಸಲು ರಾಹುಲ್ ಗಾಂಧಿ ಅವರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಎಲ್ಲರಲ್ಲೂ ಏಳುವ ಪ್ರಶ್ನೆಯೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ಯಾರು? ಆತನಿಗಿರುವ ಅಧಿಕಾರವೇನು? ಅವರು ಸರ್ಕಾರದ ಭಾಗವಾಗಿಲ್ಲ ಪ್ರತಿಪಕ್ಷದ ನಾಯಕ ಅಥವಾ ಯಾವುದೇ ರಾಜಕೀಯ ಪಕ್ಷದ ಅಧ್ಯಕ್ಷರೂ ಅಲ್ಲ ಆತನ ಆಲೋಚನೆಗಳು ಮತ್ತು ಸಾಮರ್ಥ್ಯದ ಬಗ್ಗೆ ದೇಶದ ಯಾವುದೇ ಜನರಿಗೂ ಆಶಾಭಾವನೆ ಇಲ್ಲ. ಹಾಗಾಗಿ ರಘುರಾಮನ್ ಅವರ ಈ ಕಸರತ್ತು ನಿಸ್ಸಂದೇಹವಾಗಿ ವಿಫಲವಾಗಿದೆ

ಸಗಣಿ ಜೊತೆ ಸರಸಾಟಕ್ಕಿಂತ ಗಂಧದೊಡನೆ ಗುದ್ದಾಟ ಲೇಸು ಎಂಬ ಕನ್ನಡದ ಗಾದೆಯನ್ನು ರಘುರಾಮನ್ ಅವರಿಗೆ ಯಾರಾದರೂ ತಿಳಿಸಬೇಕಾಗಿದೆ. ರಾಜಕೀಯವಾಗಿ ಯಾವುದೇ ಪ್ರಭುದ್ಧತೆಯನ್ನು ತೋರದ ರಾಹುಲ್ ಗಾಂಧಿಯ ಜೊತೆ ಸರಸಕ್ಕಿಂತ ದೇಶದ ಮೇಲೆ ನಿಜಕ್ಕೂ ಕಾಳಜಿ ಇದ್ದಲ್ಲಿ ಮೋದಿಯವರ ಸರ್ಕಾರದ ಜೊತೆ ರಘು ರಾಮ್ ರಾಜನ್ ಆರೋಗ್ಯಕರ ಚರ್ಚೆನಡೆಸಿದಲ್ಲಿ ಉತ್ತಮ ಎನಿಸುತ್ತದೆ. ರಘುರಾಮ್ ರಾಜನ್ ಅವರ ಮಾತುಗಳನ್ನು ಆಧರಿಸಿ, ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತೊಂದರೆಗೊಳಿಸಲು ಪ್ರಯತ್ನ ಪಡುವುದಾದರೇ ಅದಕ್ಕಿಂತಲೂ ದೊಡ್ಡ ಭ್ರಮೆ ಮತ್ತೊಂದಿಲ್ಲ. ಕಾರಣ ಸ್ವಂತ ಬುದ್ದಿ ಇಲ್ಲದ ರಾಹುಲ್ ತಮಗೆ ಯಾರೋ ಬರೆದು ಕೊಟ್ಟಿದ್ದಷ್ಟನ್ನು ಮಾತ್ರವೇ ಗಿಳಿ ಪಾಠದಂತೆ ಹೇಳಬಲ್ಲರೇ ಹೊರತು ಅದಕ್ಕೆ ಹೊರತಾಗಿ ಯಾರಾದರೂ ಪ್ರಶ್ನಿಸಿದಲ್ಲಿ ತಡಬಡಾಯಿಸುವುದನ್ನು ಬಹಳ ಬಾರಿ ಎಲ್ಲರೂ ನೋಡಿಯಾಗಿದೆ.

rahul2ಒಬ್ಬ ವಿರೋಧ ಪಕ್ಷದ ನಾಯಕ ತನ್ನ ಸಲಹೆಗಾರಿಂದ ಸಲಹೆಗಳನ್ನು ಪಡೆದುಕೊಳ್ಳುವುದು ಸಹಜ ಪ್ರಕ್ರಿಯೆ ಮತ್ತು ಅದು ನಡೆದು ಬಂದ ಸಂಪ್ರದಾಯವೇ ಹೌದಾದರೂ ಅದನ್ನು ಬಹಿರಂಗವಾಗಿ ಎಲ್ಲೂ ತೋರಿಸಿಕೊಳ್ಳುವುದಿಲ್ಲ. ಹಾಗೆ ತೋರಿಸಿಕೊಂಡಲ್ಲಿ ಅತನೇ ತನ್ನ ಸಾಮರ್ಥ್ಯತೆಯನ್ನು ಜಗಜ್ಜಾಹೀರಾತು ಮಾಡಿಕೊಂಡಂತೆ ಆಗುತ್ತದೆ ಎಂಬ ಸಾಮಾನ್ಯ ಅರಿವೂ ಇಲ್ಲದಂತೆ ರಾಹುಲ್ ಮತ್ತು ರಘು ರಾಮ್ ರಾಜನ್ ಅವರ ಸಂದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡು ನಗೆಪಾಟಲಾಯಿತು. ಈ ಎಲ್ಲಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ಅವರ ಈ ಎಲ್ಲಾ ಕಸರತ್ತುಗಳು ರಾಜಕೀಯ ಪ್ರಸಹನವಾಗಿರುವುದಲ್ಲದೇ ಪದೇ ಪದೇ ರಘುರಾಮ್ ರಾಜನ್ ತನ್ನನ್ನು ತಾನು ಕಾಂಗ್ರೇಸ್ ವ್ಯಕ್ತಿ ಎಂದು ಜಗ್ಗಜ್ಜಾಹೀರಾತು ಮಾಡಿಕೊಳ್ಳುವ ಮೂಲಕ ತನ್ನ ಭವಿಷ್ಯದ ಎಲ್ಲಾ ಬಾಗಿಲುಗಳನ್ನು ತಮ್ಮ ಕೈಯ್ಯಾರೆ ತಾವೇ ಮುಚ್ಚಿಕೊಳ್ಳುತ್ತಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.

ಏನಂತೀರೀ?

ಕಪಿಲ್ ಸಿಬಲ್

ಸ್ವಾತಂತ್ರ್ಯಾನಂತರ ರಚಿತವಾದ  ನಮ್ಮ  ಸಂವಿಧಾನದ ಮೂರು ಪ್ರಮುಖ ಅಂಗಗಳೇ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ.  ಕಾರ್ಯಾಂಗ ಮತ್ತು ಶಾಸಕಾಂಗಗಳನ್ನು ಸರಿ ದಿಕ್ಕಿನಲ್ಲಿ ಕೊಂಡೊಯ್ಯುವ ಗುರುತುತರವಾದ ಜವಾಬ್ಧಾರಿ ನ್ಯಾಯಾಂಗಕ್ಕೆ ಇರುವುದರಿಂದ ನಮ್ಮ ದೇಶದಲ್ಲಿ ಉಚ್ಚ ನ್ಯಾಯಾಂಗದ ತೀರ್ಪುಗಳು ಅತ್ಯಂತ ಮಹತ್ವಪೂರ್ಣವಾಗಿತ್ತವೆ. ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನ್ಯಾಯಾಂಗ ನಿಯಂತ್ರಿಸುತ್ತದೆ. ದೇಶದ ಎಲ್ಲ ಕಾನೂನುಗಳಿಗಿಂತ ಸಂವಿಧಾನವೇ ಅತ್ಯಂತ ಮಹತ್ವಪೂರ್ಣದ್ದಾಗಿದೆ.  ಸರ್ಕಾರ ಜಾರಿಗೆ ತರುವ ಪ್ರತಿಯೊಂದು ಕಾನೂನುಗಳೂ ಸಹಾ  ಸಂವಿಧಾನಕ್ಕೆ ಅನುಗುಣವಾಗಿರಬೇಕು. ಮತ್ತು ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು  ಸಂರಕ್ಷಿಸುವಂತಿರಬೇಕು. ಹಾಗಾಗಿ ನ್ಯಾಯಾಂಗದ ವ್ಯಾಪ್ತಿಯಲ್ಲಿ ಬರುವವರೆಲ್ಲರೂ ಯಾವುದೇ ಸೈದ್ದಾಂತಿಕ ನೆಲೆಗಟ್ಟುಗಳಿಗೆ  ಒಳಗಾಗದೆ ನಿಶ್ಪಕ್ಷಪಾತವಾಗಿ ನ್ಯಾಯದ ಪರವಾದ ತೀರ್ಪನ್ನು ನೀಡುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ.  ಆದರೆ  ಬುಟ್ಟಿಗಳಲ್ಲಿಟ್ಟ ಹಣ್ಣುಗಳಲ್ಲಿ ಒಂದು ಕೊಳೆತ ಹಣ್ಣು ಮಿಕ್ಕೆಲ್ಲಾ ಹಣ್ಣುಗಳನ್ನು ಹೇಗೆ ಹಾಳು ಮಾಡುತ್ತದೆಯೋ ಹಾಗೆ  ಈ ನ್ಯಾಯಾಂಗದಲ್ಲಿರುವ ಕೆಲವು ವಿಕೃತ ಮನಸ್ಸಿನವರು ತಮ್ಮ ಪ್ರಭಾವದಿಂದ ಹೇಗೆ  ನ್ಯಾಯಾಂಗವನ್ನು ತಮ್ಮ ಕಪಿ ಮುಷ್ಟಿಯಲ್ಲಿಟ್ಟು ಕೊಂಡು ತಮಗೆ ಬೇಕಾದ ರೀತಿಯಲ್ಲಿ ತೀರ್ಪುಗಳನ್ನು ಪಡೆದುಕೊಂಡು ಅಟ್ಟ ಹಾಸದಲ್ಲಿ ಮೆರೆಯುತ್ತಾರೆ ಮತ್ತು ದೇಶದ  ಅಧೋಗತಿಗೆ ಹೇಗೆ ಕಾರಣರಾಗುತ್ತಿದ್ದಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯೇ  ಕಪಿಲ್ ಸಿಬಾಲ್.

sibbalಕಪಿಲ್ ಸಿಬಲ್ ಮೂಲತಃ  ಉಚ್ಚ ನ್ಯಾಯಾಲದ ಹಿರಿಯ ವಕೀಲರು, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದವರು.  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಪ್ಪಟ ರಾಜಕಾರಣಿ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿವಿಧ ಸಚಿವಾಲಯಗಳ ಚುಕ್ಕಾಣಿಯಲ್ಲಿ ಸೇವೆ ಸಲ್ಲಿಸಿದರು,  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಪ್ರಾರಂಭಿಸಿ, ನಂತರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ನಂತರ ಸಂವಹನ ಮತ್ತು ಐಟಿ ಸಚಿವಾಲಯ, ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯ ಹೀಗೆ  ಕಾಂಗ್ರೇಸ್ ಅಧಿಕಾರದಲ್ಲಿದ್ದಾಗಲೆಲ್ಲಾ ಆಯಕಟ್ಟಿನ ಜಾಗಗಳಲ್ಲಿಯೇ  ಅಧಿಕಾರದ ರುಚಿಯನ್ನು ಸವಿದವರು. ಹಾಗಾಗಿ  ಉಚ್ಚನ್ಯಾಯಾಲಯದ ನ್ಯಾಯಾಧೀಶರನ್ನು ಸೇವಾಧಾರಿತವಾಗಿ ರಾಷ್ಟ್ರಪತಿಗಳೇ ನೇಮಿಸುತ್ತಾರಾದರೂ,  ತಮ್ಮ ರಾಜಕೀಯ ಪ್ರಭಾವದಿಂದಾಗಿ ತಮಗೆ ಅನುಕೂಲವಾಗ ಬಲ್ಲಂತಹವರನ್ನೇ ರಾಷ್ಟ್ರಪತಿಗಳ ಮೂಲಕ ಅಂಗೀಕಾರಗೊಳಿಸಿ ಅವರನ್ನು  ಉಚ್ಚನ್ಯಾಯಾಧೀಶರಾಗಿ  ನೇಮಕಮಾಡಿಸುವಷ್ಟರ ಮಟ್ಟಿಗಿನ ಪ್ರಭಾವೀಶಾಲೀ ವ್ಯಕ್ತಿಯಾಗಿ ಬೆಳೆದು ಬಿಟ್ಟರು.

ಕಪಿಲ್ ಸಿಬಲ್ ಅವರ ತಂದೆ ಖ್ಯಾತ ವಕೀಲ ಎಚ್.ಎಲ್. ಸಿಬಲ್ ಅವರ ಕುಟುಂಬವು 1947 ರ ಭಾರತ ಮತ್ತು ಪಾಕೀಸ್ಥಾನದ  ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ  ಬಂದವರು. ವಕೀಲಿಯಲ್ಲಿನ  ಅವರ ಪಾಂಡಿತ್ಯಕ್ಕಾಗಿ   1994 ರಲ್ಲಿ,  ಅವರಿಗೆ  ಇಂಟರ್ನ್ಯಾಷನಲ್ ಬಾರ್ ಅಸೋಸಿಯೇಷನ್ ಲಿವಿಂಗ್ ಲೆಜೆಂಡ್ ಆಫ್ ದಿ ಲಾ ಎಂದೂ ಗೌರವಿಸಿದರೆ, ಭಾರತದ ಸರ್ಕಾರವೂ  ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಅವರು ಮಾಡಿದ ವಿಶೇಷ ಸೇವೆಗಳಿಗಾಗಿ ಅವರಿಗೆ 2006 ರಲ್ಲಿ  ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಂತಹ ಕುಟುಂಬದಲ್ಲಿ    ಕಪಿಲ್ ಸಿಬಲ್ 1948 ರ ಆಗಸ್ಟ್ 8 ರಂದು ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿ, ಆರಂಭಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ  ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ 1964 ರಲ್ಲಿ ದೆಹಲಿಗೆ  ಬಂದು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಎಲ್.ಎಲ್.ಬಿ ಪದವಿ ಪಡೆದರು ಮತ್ತು ನಂತರ ಇತಿಹಾಸದಲ್ಲಿ ಎಂ.ಎ. ಪಡೆದ ನಂತರ ಹಾವರ್ಡ್ ವಿಶ್ವವಿದ್ಯಾನಿಯದಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರೆ. ಇವರ ಇಬ್ಬರೂ ಮಕ್ಕಳೂ ಸಹಾ ವಕೀಲೀ ವೃತ್ತಿಯಲ್ಲಿಯೇ ಮಂದುವರಿದ್ದಾರೆ.

ಇಡೀ ಕುಟುಂಬ ವರ್ಗವೇ ಕಾನೂನು ವಿಭಾಗದಲ್ಲಿದ್ದು ಎಲ್ಲರಿಗೂ  ಸೂಕ್ತ ರೀತಿಯಲ್ಲಿ ಕಾನೂನಾತ್ಮಕವಾಗಿ ಸಲಹೆಗಳನ್ನು ನೀಡದ್ದಲ್ಲಿ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಮತ್ತು ಈ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ  layers are liaers ಎನ್ನುವ ಆಂಗ್ಲ ನಾನ್ನುಡಿಯಂತೆ, ಕಪಿಲ್ ಸಿಬಲ್ ಸತ್ಯದ ಪರ ವಾದಿಸಿದ್ದಕ್ಕಿಂತ ಸುಳ್ಳು, ದೇಶದ್ರೋಹ ವಂಚನೆ, ಹಣದ ದುರ್ವ್ಯವಹಾರಿಗಳ ಪರ ವಕಾಲತ್ತು ವಹಿಸಿದ್ದೇ ಹೆಚ್ಚು.  ಇವರು  ವಕೀಲಿಕೆ ನಡೆಸಿದ ಕೆಲವೊಂದು ಪ್ರಕರಣಗಳನ್ನು ಗಮನಿಸಿದಲ್ಲಿ ಅವರ  ಮನೋಸ್ಥಿತಿಯ ಅರಿವಾಗುತ್ತದೆ

 • ದೇಶದ ಅತಿ ದೊಡ್ಡ ಟೆಲಿಕಾಂ 2G Spectrum  ಹಗರಣದಲ್ಲಿ ಆರೋಪಿಗಳಾದ ಕನಿಮೋಳಿ ಮತ್ತು ರಾಜಾ ಪರ ವಕಾಲತ್ತು
 • ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಕೇಸಿನಲ್ಲಿ ಸುನ್ನಿ ವಕ್ಫ್ ಮಂಡಳಿ ಪರವಾಗಿ ವಾದ
 • ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ
 • ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ನಂತರಾ ನಡೆದ  ಗಲಭೆಕೋರರ ಪರ ವಾದ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ  ಪ್ರಮುಖ ಆರೋಪಿ ಮಾಜೀ ಗೃಹ‍‍ ಸಚಿವ ಪಿ ಚಿದಂಬರಂ ಪರ ವಕಾಲತ್ತು
 • ಜಮ್ಮು ಮತ್ತು ಕಾಶ್ಮೀರ ಮಾಜೀ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಂಧನದಿಂದ ಬಿಡುಗಡೆ  ಕೋರವಂತೆ ವಾದ
 • ಸಿಎಎ ಸಾಂವಿಧಾನಿಕತೆಯನ್ನು ಪ್ರಶ್ನಿಸಿ  ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಕೇಸ್ನಲ್ಲಿ ಸರ್ಕಾರದ ವಿರುದ್ಧ ವಾದ

sibbal3ಹೀಗೆ  ಹೇಳುತ್ತಾ ಹೋದಲ್ಲಿ ಇಡೀ ದಿನವೇ ಸಾಕಾಗುವುದಿಲ್ಲ. ಇವುಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ಸಿಬಲ್ ವಕಾಲತ್ತು ವಹಿಸಿದ್ದೇಲ್ಲಾ  ಸರ್ಕಾರದ ವಿರುದ್ಧ,  ಭ್ರಷ್ಟಾಚಾರಿಗಳ ಮತ್ತು  ದೇಶವಿದ್ರೋಹಿಗಳ  ಪರವಾಗಿಯೇ. To know about you, tell me about your friends ಎನ್ನುವ  ಆಂಗ್ಲಪದದ ಗಾದೆಯಂತೆ ಸಿಬಲ್ ಅವರ ಮನಸ್ಥಿತಿಯನ್ನು ಅರಿಯಲು ಅವರು ವಕಾಲತ್ತು ವಹಿಸಿದ ಕೇಸಗಳೇ ಹೇಳುತ್ತವೆ. ಒಬ್ಬ ವಕೀಲನಾಗಿ ಯಾರ ಪರವಾಗಿಯಾದರೂ ವಾದ ಮಾಡಬಹುದು ಎಂಬ ವಿತಂಡ ವಾದವನ್ನು ಮಾಡಬಹುದಾದರೂ, ಇದುವರೆವಿಗೂ ಒಬ್ಬ  ಸತ್ಯದ ಪರವಾಗಿ  ನ್ಯಾಯ ರೀತಿಯಲ್ಲಿ  ವಾದ ಮಾಡಿದ ಉದಾಹರಣೆಯೇ ಇಲ್ಲ

ಅವರು ಟೆಲಿಕಾಂ ಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯಾಂಗದ ಮೇಲೆ  ತಮ್ಮ ಪ್ರಭಾವ ಬಳಸಿ ತಾವೇ ಆರೋಪಿಗಳ ಪರ ವಕಾಲತ್ತು  ವಹಿಸಿದ್ದ   2 ಜಿ ಸ್ಪೆಕ್ಟ್ರಮ್ ಪ್ರಕರಣ ಒಂದು ಪ್ರಕರಣವೇ ಅಲ್ಲ ಅದೊಂದು ಕಟ್ಟು ಕತೆ.  ಆದರಲ್ಲಿ  ಆರೋಪಿಸಿದಂತೆ ಲಕ್ಷಾಂತರ  ಕೋಟಿ ನಷ್ಟವು ಕೇವಲ ಕಲ್ಪನೆಯಾಗಿದೆ ಎಂಬ  ತೀರ್ಪು ಬರಲು ಕಾರಣವಾದವರೂ ಇದೇ ಸಿಬಲ್ ಎಂಬ ಆರೋಪ ಕೇಳಿಬಂದಿದ್ದು ಸತ್ಯವೇ ಸರಿ.

ಸುಮಾರು ಒಂದೂವರೆ ವರ್ಷದ ಹಿಂದೆ ನ್ಯಾಯಾಧೀಶರ ಕೊಲೇಜಿಯಂ ವಿರುದ್ಧವಾಗಿ ದೇಶದ ಇತಿಹಾಸದಲ್ಲಿ ಪ್ರಪ್ರಥಮಬಾರಿಗೆ ಉಚ್ಚ ನ್ಯಾಯಾಲಯದ ಕೆಲ ನ್ಯಾಯಾಧೀಶರು  ಸಿಡಿದ್ದೆದ್ದ ಪ್ರಕರಣದ ಹಿಂದಿನ ರೂವಾರಿಯೂ ಸಹಾ ಇದೇ  ಸಿಬಲ್ ಎಂಬ ಆರೋಪವಿದೆ.

ದೇಶದ ವಿವಿಧ ನ್ಯಾಯಾಲಯಗಳಲ್ಲಿ  ಖಾಲಿ ಇರುವ ಭಾರಿ  ಹುದ್ಧೆಗಳನ್ನು ಭರ್ತಿ ಮಾಡುವ ಅಥವಾ ಆಯಕಟ್ಟಿನ ಸ್ಥಳಗಳಿಗೆ ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಲು  ಸಂಶಯಾಸ್ಪದ ವ್ಯಕ್ತಿಗಳೊಡನೆ  ಕಪಿಪ್ ಸಿಬಲ್  ವ್ಯವಹಾರ ನಡೆಸಿದ್ದಾರೆ ಎಂದು  ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗಂಭೀರ ರೀತಿಯಲ್ಲಿ  ಆರೋಪಿ ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ದೇಶದ್ರೋಹ ಮತ್ತು ಭ್ರಷ್ಟಾಚಾರ ಆರೋಪ ಹೊತ್ತಿದ್ದ  ಆರೋಪಿಯೊಬ್ಬನ ವಿರುದ್ಧ ಟಿವಿ  ಸಂಸ್ಥೆ  ನಡೆಸಿದ ಕುಟುಕು ಗುಪ್ತ ಕಾರ್ಯಾಚರಣೆಯಲ್ಲಿ ಕಪಿಲ್ ಸಿಬಾಲ್ ಇರುವ ವರೆಗೂ ತಮಗೆ ಯಾವುದೇ ಶಿಕ್ಷೆ ಯಾಗದೇ ನಿರಪರಾಧಿಯಾಗಿ ಹೊರಬರುವುದಾಗಿ ತಿಳಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದರು. ಅದು ಹೇಗೆ ಅಷ್ಟು ಖಡಾ ಖಂಡಿತವಾಗಿ ಹೊರಬರುತ್ತೀರಿ ?  ಎಂದು  ಕೇಳಿದಾಗ ಸದ್ಯದಲ್ಲಿ ಸುಪ್ರೀಂ ಕೋರ್ಟಿನಲ್ಲಿರುವ ಬಹುತೇಕ ನ್ಯಾಯಾಧೀಷರು ಕಪಿಲ್ ಸಿಬಾಲ್ ಕೃಪಾಶೀರ್ವಾದದಿಂದಲೇ ಆಯ್ಕೆಯಾಗಿರುವ ಕಾರಣ ನನಗೆ ಯಾವುದೇ ಅಪರಾಧವಾಗುವುದಿಲ್ಲ ಎಂದು ತಿಳಿಸಿದ್ದು ಗಮನಾರ್ಹವಾಗಿದೆ.

ಇಷ್ಟೆಲ್ಲಾ ಆರೋಗಳನ್ನು ಹೊತ್ತಿರುವಂತಹ   ಕಪಿಲ್ ಸಿಬಲ್ ಈಗ ದೇಶಾದ್ಯಂತ ನ್ಯಾಯಾಲಯಗಳಲ್ಲಿ  ಖಾಲಿ ಇರುವ  ಹುದ್ದೆಗಳನ್ನು ಭರ್ತಿಮಾಡುವಾಗ ಸರ್ಕಾರ ಆರ್‌ಎಸ್‌ಎಸ್ ಸಿದ್ಧಾಂತ ಹೊಂದಿರುವ ಸ್ಥಾಪಿಸಲು ಪ್ರಯತ್ನಿಸುತ್ತಿದೆ  ಎಂಬ ಆರೋಪವನ್ನು ಮಾಡುವ ಮೂಲಕ ತಮ್ಮ ಕಾಂಗ್ರೆಸ್ ಪರಮೋಚ್ಚ ಕುಟುಂಬವನ್ನು ಮೆಚ್ಚಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿರುವುದಲ್ಲದೇ, ತೊಳ ಬಂತು ತೋಳ ಕಥೆಯನ್ನು ನೆನಪಿಸುವಂತಿದೆ.

ಇಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆಯೂ  ಕಪಿಲ್ ಸಿಬಲ್  2016 ರ ಹಿಂದಿಯ  ಶೋರ್ಗುಲ್ ಚಲನಚಿತ್ರಕ್ಕಾಗಿ  ತೇರೆ ಬಿನಾ ಮತ್ತು ಮಸ್ತ್ ಹವಾ ಎಂಬ  ಹಾಡುಗಳನ್ನು  ಬರೆದಿದ್ದಾರೆ ಎಂಬುದೂ ಗಮನಾರ್ಹವಾದ ಸಂಗತಿ

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ಕಾನೂನು ಮಿದುಳುಗಳಾದ  ಕಪಿಲ್ ಸಿಬಲ್ ,  ಅಭಿಷೇಕ್ ಸಿಂಗ್ವಿ,   ಪಿ ಚಿದಂಬರಂ ಮತ್ತು ಸಲ್ಮಾನ್ ಖುರ್ಷಿದ್ ಅಂತಹವರು ದೇಶದಲ್ಲಿ ಸದಾ ಅರಾಜಕತೆಯನ್ನು ಉಂಟು ಮಾಡುವವರ ಪರವಾಗಿಯೇ ವಾದ ಮಾಡುತ್ತಾ ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡುವುದರಲ್ಲಿ ಗಂಭೀರವಾದ ಪಾತ್ರವಹಿಸಿಸುತ್ತಿರುವುದು ಅಂಗೈಯಲ್ಲಿರುವ ಗೆರೆಗಳಂತೆ ಸ್ಮಪ್ಷವಾಗಿ ಕಾಣತೊಡಗಿದ್ದರೂ ಕೆಲ ಸ್ವಯಘೋಷಿತ ಬುದ್ಧಿಜೀವಿಗಳು ಅವರ ವಿರುದ್ಧದ ಆರೋಪಗಳನ್ನು ಬೂದುಗಾಜಿನಲ್ಲಿ ಹುಡಕಲು ಹೊರಟಿರುವುದು ಕುಚೋದ್ಯವೇ ಸರಿ.

ಏನಂತೀರೀ?