ನಿರೀಕ್ಷೆ

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಉತ್ತಮ ಗುರು ಶಿಷ್ಯರು ಅಥವಾ ಪರಮಾಪ್ತ ಸ್ನೇಹಿತರು ಯಾರು? ಎಂದು ಕೇಳಿದರೆ ಎಲ್ಲರೂ ಥಟ್ ಅಂತಾ ಹೇಳುವುದು ಕೃಷ್ಣಾ ಮತ್ತು ಅರ್ಜುನ ಜೋಡಿಯನ್ನೇ. ಅದೇ ರೀತಿ ದಾನ ಶೂರ ಯಾರು? ಎಂದು ಕೇಳಿದ ತಕ್ಷಣ ಕರ್ಣನ ಹೆಸರೇ ಕಣ್ಣ ಮುಂದೆ ಬರುತ್ತದೆ. ಅದೊಮ್ಮೆ ಕೃಷ್ಣ ಮತ್ತು ಅರ್ಜುನ ಅರ್ಜುನರಿಬ್ಬರು  ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ,ಕರ್ಣನನ್ನೇಕೆ ಅಪ್ರತಿಮ ದಾನಿಯೆಂದು ಏಕೆ ಪರಿಗಣಿಸಬೇಕು?  ನಮ್ಮ ಪಾಂಡವರಲ್ಲಿ ಅಂತಹವರಿಲ್ಲವೇ? ಎಂದು ಪರೋಕ್ಷವಾಗಿ ತನ್ನನ್ನೇಕೆ ಪರಿಗಣಿಸುತ್ತಿಲ್ಲ ಎಂದು ಕೇಳುತ್ತಾನೆ. ಅರ್ಜುನ… Read More ನಿರೀಕ್ಷೆ

ಆಟ ಇನ್ನೂ ಬಾಕೀ ಇದೆ.

ನೆನ್ನೆಯ ದಿನ ವೀಕೆಂಡ್ ಕರ್ಘ್ಯೂ ಇದ್ದ ಕಾರಣ ಸಾವಯವ ಸಂತೆಯನ್ನು ಬಂದ್, Online ಮುಖಾಂತರವೇ ಸಾಂಘೀಕ್ಕಿನಲ್ಲಿ ಭಾಗವಹಿಸಿ, ಆತ್ಮೀಯರ ಮಗನ ಮದುವೆಯಲ್ಲೂ Online ಮುಖಾಂತರ ಆಶೀರ್ವದಿಸಿ, ಮನೆಯ ಗೇಟಿನ ಹೊರಗೂ ಹೋಗದೇ ಪಟ್ಟಾಗಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಸಮಯೋಚಿತವಾಗಿೆ ಚೆನ್ನಾಗಿ ಜೀರಿಗೆ, ಕಾಳುಮೆಣಸು, ಶುಂಠಿ ಮತ್ತು ಮನೆಯಲ್ಲೇ ಕಡೆದು ತೆಗೆದ ಬೆಣ್ಣೆಯ ತುಪ್ಪ ಹಾಕಿ ಮಾಡಿದ್ದ ನವಣೆ ಹುಗ್ಗಿ(ಪೊಂಗಲ್) ಜೊತೆಗೆ ಕಾಯಿ, ಕೊತ್ತಂಬರಿ ಮತ್ತು ಪುದಿನಾ ಹಾಕಿದ ಚೆಟ್ಟಿ ತಿಂದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅನಂದಿಸಿ… Read More ಆಟ ಇನ್ನೂ ಬಾಕೀ ಇದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ

ಸಾಮಾನ್ಯವಾಗಿ ಬಹುತೇಕರು ತಮ್ಮ ನಾಯಕರನ್ನು ಹೊಗಳುವ ಭರದಲ್ಲಿ ಅನಾಥರಕ್ಷಕ, ಧೀನಬಂಧು, ಆಪತ್ಬಾಂಧವ, ಕರುಣಾಸಿಂಧು, ಬಡವರ ಬಂಧು, ಜಗದೋದ್ಧಾರಕ ಎಂದೆಲ್ಲಾ ವಾಚಾಮಗೋಚರವಾಗಿ ಹೇಳುತ್ತಾರಾದರೂ ಅದು ಬಹುತೇಕರಿಗೆ ಮುಖ: ಸ್ತುತಿಯಾಗಿರುತ್ತದೆಯೇ ಹೊರತು ನಿಜವಾಗಿಯೂ ಅಂತಹ ವ್ಯಕ್ತಿಗಳೇ ಆಗಿರುವುದಿಲ್ಲ. ಹಾಗಾದರೇ ಈ ಎಲ್ಲಾ ಉಪಮಾನ ಉಪಮೇಯಗಳು ಯಾರಿಗೆ ಹೋಲುತ್ತವೆ ಎಂದು ಯೋಚಿಸಿದಲ್ಲಿ ಥಟ್ಟನೇ ಮನಸ್ಸಿಗೆ ಹೊಳೆಯುವುದೇ, ನಮ್ಮ ಶ್ರೀಕೃಷ್ಣಾ. ಪ್ರೀತಿಯ ಕಳ್ಳ ಕೃಷ್ಣಾ, ನವನೀತ ಚೋರ, ಹೆಂಗಳೆಯರ ಚಿತ್ತ ಚೋರ, ಗಿರಿಧರ, ಮುರಳೀಧರ, ಗೋಪಾಲಕೃಷ್ಣ ಹೀಗೆ ಜನರು ಪ್ರೀತಿಯಿಂದ ನಾನಾ ರೀತಿಯ… Read More ಶ್ರೀ ಕೃಷ್ಣ ಜನ್ಮಾಷ್ಟಮಿ