ಕುಂಬ್ಲೆ ಸುಂದರ ರಾವ್

ಮಾತೃಭಾಷೆ ಮಲೆಯಾಳಂ ಆಗಿದ್ದರೂ, ಕನ್ನಡದಲ್ಲಿ ಯಕ್ಷಗಾನ ಮತ್ತು ತಾಳ-ಮದ್ದಳೆಯ ಖ್ಯಾತ ಕಲಾವಿದರೂ, ಬರಹಗಾರರು, ವಾಗ್ಮಿಗಳೂ, ಸರಳ ಸಜ್ಜನ ಮಾಜಿ ಶಾಸಕರಾಗಿ ರಾಜಕಾರಣಿಯಾಗಿಯೂ ಪ್ರಖ್ಯಾತರಾಗಿದ್ದ ಇಂದು ಬೆಳಿಗ್ಗೆ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದ ಶ್ರೀ ಕುಂಬ್ಲೆ ಸುಂದರ್ ರಾವ್ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕುಂಬ್ಲೆ ಸುಂದರ ರಾವ್

ದೇವರ ಮೊಸಳೆ ಬಬಿಯಾ

ಕೇರಳದ ಕಾಸರಗೋಡಿನ ಕುಂಬಳೆ ಸಮೀಪದಲ್ಲಿರುವ ಸರೋವರ ಕ್ಷೇತ್ರ ಅನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಬಬಿಯಾ ಎಂಬ ಮೊಸಳೆ ದಿನಾಂಕ 9.10.2022ರ ಭಾನುವಾರ ರಾತ್ರಿಯಂದು ವಯೋಸಹಜವಾಗಿ ಕೊನೆಯುಸಿರೆಳೆದಿರುವುದು ಅಪಾರ ಭಕ್ತಾದಿಗಳಿಗೆ ನೋವನ್ನುಂಟುಮಾಡಿದೆ.

ಬಬಿಯಾ ಎಂದರೆ ಯಾರು? ಏನಿದರ ವಿಶೇಷತೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ದೇವರ ಮೊಸಳೆ ಬಬಿಯಾ

ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ?

ಹಿಂದೂಗಳ‌ ಮೇಲಿನ ಹತ್ಯೆಗಳಿಗೆ ನಾಲಾಯಕ್ ರಾಜಕಾರಣಿಗಳನ್ನು ದೂಷಿಸುವ ಬದಲು, ನಮ್ಮ ಹಿಂದೂ ಮಠಾಧೀಶರುಗಳನ್ನು ಪ್ರಶ್ನಿಸ ಬೇಕಿದೆ.

ನಮ್ಮ ಜಾತಿಗೆ ಮೀಸಲಾತಿ ಕೊಡಿ, ನಮ್ಮರಿಗೆ ಟಿಕೆಟ್ ಕೊಡೀ, ನಮ್ಮವರನ್ನೇ ಮಂತ್ರಿ, ಮುಖ್ಯಮಂತ್ರಿ ಮಾಡಿ ಎಂದು ಬೀದಿಗಿಳಿದು ಬ್ಲಾಕ್ಮೇಲ್ ಮಾಡುವ ಮಠಾಧೀಷರುಗಳು ಹಿಂದೂ ಪರ‌ ಒಗ್ಗಟ್ಟಾಗಿ ಬೀದಿಗಿಳಿದಿದ್ದರೆ, ಯಾರೂ ಸಹಾ ಹಿಂದೂಗಳನ್ನು ಮುಟ್ಟುವುದಕ್ಕೆ ಮುಂದಾಗುತ್ತಿರಲಿಲ್ಲ ಅಲ್ವೇ?… Read More ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ?

ನೋಕು ಕೂಲಿ

ಕಳೆದ ಭಾನುವಾರ ಸೆಪ್ಟಂಬರ್ -5 ರಂದು ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಸಂಭ್ರದಿಂದ ಆಚರಿಸುತ್ತಿದ್ದರೆ, ದೂರದ ಕೇರಳದ ತಿರುವನಂತಪುರದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಇಲಾಖೆ (IRRO)ದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ನಲ್ಲಿ (VSSC) ಮಾತ್ರಾ ಅದೊಂದು ಘನಘೋರ ಘಟನೆಯೊಂದು ನಡೆಯುವ ಮೂಲಕ ವಿದ್ಯಾವಂತರ ನಾಡು ಎಂದು ಕರೆಸಿ ಕೊಳ್ಳುವ ಕೇರಳದ ಮರ್ಯಾದೆಯನ್ನು ಮೂರುಕಾಸಿಗೆ ಹಾರಾಜು ಹಾಕಿರುವುದು ನಿಜಕ್ಕೂ ಖಂಡನೀಯವಾಗಿದೆ. ಭಾನುವಾರದ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತಿರುವನಂತಪುರಂನ ತುಂಬಾದಲ್ಲಿರುವ ಭಾರತೀಯ… Read More ನೋಕು ಕೂಲಿ

ಲಕ್ಷದ್ವೀಪ

ಹೆಸರೇ ಸೂಚಿಸುವಂತೆ ಅದೊಂದು ದ್ವೀಪಗಳ ಸಮೂಹ. ಭಾರತದ ಅರಬ್ಬೀ ಸಮುದ್ರದಲ್ಲಿ ಸುಮಾರು 36 ಹವಳದ ಬಂಡೆಗಳ ಉಷ್ಣವಲಯದ ದ್ವೀಪಸಮೂಹವೇ ಲಕ್ಷದ್ವೀಪ. ದೇಶದ ಅತ್ಯಂತ ಪ್ರಾಚೀನವಾದ, ನೈಸರ್ಗಿಕವಾದ ಸುಂದರವಾದ ಮತ್ತು ಆಷ್ಟೇ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ, ಕನ್ನಡಿಯಂತಹ ನೀರಿನಲ್ಲಿ ಕಣ್ಣು ಕೋರೈಸುವ ಹವಳದ ಬಂಡೆಗಳು, ಬೆಳ್ಳಿಯ ಬಣ್ಣದಲ್ಲಿ ಪ್ರಜ್ವಲಿಸುವ ಕರಾವಳಿ ತೀರಗಳು ಈ ದ್ವೀಪ ಸಮೂಹಗಳಲ್ಲಿ ಇದ್ದು, ಭಾರತದಲ್ಲೇ ಅತ್ಯಂತ ಸ್ವಚ್ಚ ಕರಾವಳಿ ತೀರ ಎಂದೇ ಖ್ಯಾತಿ ಪಡೆದಿರುವ ಕಾರಣ, ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ತಮ್ಮ ರಜಾದಿನಗಳನ್ನು… Read More ಲಕ್ಷದ್ವೀಪ

ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ. ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ. ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ… Read More ಪಂಚರಾಜ್ಯಗಳ ಪಂಚನಾಮೆ

ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು… Read More ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಓಣಂ ‌

ದಕ್ಷಿಣ ಭಾರತದ ಆತ್ಯಂತ ಚಿಕ್ಕ ರಾಜ್ಯವಾದ ಕೇರಳದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಆಚರಿಸುವ ಹಬ್ಬವೇ ಓಣಂ. ಈ ಹಬ್ಬವನ್ನು ಸಮಸ್ತ ಕೇರಳೀಯರು ಧರ್ಮಾತೀತವಾಗಿ ಆಚರಿಸುವ ಮೂಲಕ ಈ ಒಂದು ಹಬ್ಬದಲ್ಲಿ ಮಾತ್ರವೇ ತಲತಲಾಂತರದಿಂದಲೂ ಭಾವೈಕ್ಯತೆಯನ್ನು ಮೂಡಿಸುತ್ತಾ ಬಂದಿರುವುದು ಗಮನಾರ್ಹವಾಗಿದೆ. ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್ (ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ ಹತ್ತು ದಿನಗಳವರೆಗೆ ಬಹಳ ಸಂಭ್ರಮ ಸಡಗರದಿಂದ ಸಮಸ್ತ ಕೇರಳಿಗರೂ ತಮ್ಮ ತಮ್ಮ ಮನೆಗಳ ಮುಂದೆ ನಯನ ಮನೋಹರವಾದ ಅತ್ಯಂತ ಕ್ರಿಯಾಶೀಲತೆಯಿಂದ ಬಗೆ ಬಗೆಯ ಹೂವಿನ ರಂಗೋಲಿಗಳ ಮುಖಾಂತರ… Read More ಓಣಂ ‌

ದೇವರ ಸ್ವಂತ ನಾಡು, ಕೇರಳ

ಕೇರಳ ರಾಜ್ಯವು ದಕ್ಷಿಣ ಭಾರತದ ಅತ್ಯಂತ ಸಣ್ಣ ರಾಜ್ಯವಾಗಿದ್ದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಶೇ 100ರಷ್ಟು ಸಾಕ್ಷರತ ರಾಜ್ಯವಾಗಿದ್ದು ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದ ಪ್ರಾಚೀನ ನೀರು ಮತ್ತು ಪೂರ್ವದಲ್ಲಿ ಸೊಂಪಾದ ಪಶ್ಚಿಮ ಘಾಟ್ ಪರ್ವತಗಳು, ಅದರ ತೀವ್ರವಾದ ನದಿಗಳು ಮತ್ತು ಕೆರೆಗಳ ಜಾಲ, ದಟ್ಟ ಕಾಡುಗಳು, ವಿಲಕ್ಷಣ ವನ್ಯಜೀವಿಗಳು, ಪಚ್ಚೆ ಹಿನ್ನೀರಿನ ಶಾಂತವಾದ ವಿಸ್ತಾರಗಳು ಮತ್ತು ಪ್ರಶಾಂತ ಕಡಲತೀರಗಳ ಉದ್ದದ ತೀರವು ಪ್ರವಾಸಿಗರಿಗೆ ಸ್ವರ್ಗವನ್ನೇ ಧರೆಗಿಳಿಸಿದಂತಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನೃತ್ಯ… Read More ದೇವರ ಸ್ವಂತ ನಾಡು, ಕೇರಳ