ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಗವಾಸ್ಕರ್ ಅವರ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ತಮ್ಮದೇ ಆದ ಅಪೂರ್ವ ರೀತಿಯಾದ ಹೊಡೀ ಬಡೀ ಶೈಲಿಯ ಬ್ಯಾಟಿಂಗ್ ನಿಂದ ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗನ್ನು ತಂದು ಕೊಡುವ ಮೂಲಕ ಇಂದಿಗೂ ಸಹಾ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕ್ರಿಕೆಟ್ ಜಗತ್ತಿನ ಏಳು ಬೀಳುಗಳ ಸುಂದವಾದ ಇಣುಕು ನೋಟ ಇದೋ ನಿಮಗಾಗಿ… Read More ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಕರ್ನಾಟಕದ ಕಂಡ ಖ್ಯಾತ ಸ್ಪಿನ್ನರ್ ಚಂದ್ರಶೇಖರ್ ಮತ್ತು ಪ್ರಸನ್ನ ಅವರ ನಂತರ ಕರ್ನಾಟಕದ ಕ್ರಿಕೆಟ್ ತಂಡದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ, ಕರ್ನಾಟಕಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಎ ರಘುರಾಂ ಭಟ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಥಾಮಸ್ ಕಪ್ ಗೆದ್ದು ಬೀಗಿದ ಭಾರತ

ಭಾರತದಲ್ಲಿ ಕ್ರಿಕೆಟ್ ಒಂದು ರೀತಿಯ ಧರ್ಮ ಎಂಬತಾಗಿ  ಅದರ ಹೊರತಾಗಿ ಉಳಿದ ಕ್ರೀಡೆಗಳ ಬಗ್ಗೆ ಪ್ರೋತ್ಸಾಹ ಅಷ್ಟಕಷ್ಟೇ. ಬಹುತೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಇಲ್ಲವೇ ಇಂಜಿನೀಯರ್ ಆಗಿ ವಿದೇಶಗಳಿಗೆ ಹೋಗಿ ಲಕ್ಷ ಲಕ್ಷ ರೂಪಾಯಿ ಹಣ ಸಂಪಾದಿಸಿ ಐಶಾರಾಮ್ಯದ ಜೀವನವನ್ನು ನಡೆಸಿದರೆ ಸಾಕು ಎಂದು ಬಯಸುವವರೇ ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಅಲ್ಲೊಂದು  ಇಲ್ಲೊಂದು ವಯಕ್ತಿಕ ಆಸಕ್ತಿಯುಳ್ಳವರು ಟಿನ್ನಿಸ್, ಶೂಟಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಕುಸ್ತಿ, ವೇಯ್ಟ್ ಲಿಫ್ಟಿಂಗ್ ಮುಂತಾದ ಕ್ರೀಡೆಗಳಲ್ಲಿ ಅಷ್ಟೂ ಇಷ್ಟೋ ಸಾಧನೆಗಳನ್ನು ಮಾಡುವ… Read More ಥಾಮಸ್ ಕಪ್ ಗೆದ್ದು ಬೀಗಿದ ಭಾರತ

ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

ಕಳೆದ ಒಂದು ವಾರದಲ್ಲಿ ಭಾರತೀಯ ಮೂಲದ ಇಬ್ಬರು ಹೆಸರುಗಳು ಎಲ್ಲೆಡೆಯಲ್ಲೂ ಪ್ರಸಿದ್ದಿ ಪಡೆದಿತ್ತು. ಮೊದಲನೆಯದ್ದು ಭಾರತೀಯ ಮೂಲದ ಅಮೆರಿಕನ್ ಪರಾಗ್ ಅಗರವಾಲ್, ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾದರೆ, ಎರಡನೆಯದ್ದು ಮುಂಬೈನಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ಕುಟುಂಬದೊಂದಿಗೆ ನ್ಯೂಜಿಲೆಂಡಿಗೆ ಹೋಗಿ ಅಲ್ಲಿಯ ಕ್ರಿಕೆಟ್ ತಂಡದ ಭಾಗವಾಗಿ ಭಾರತದ ವಿರುದ್ದ ಮುಂಬೈ ಕ್ರಿಕೆಟ್ ಟೆಸ್ಟಿನ ಮೊದಲನೇ ಇನ್ನಿಂಗ್ಸಿನಲ್ಲಿ ಎಲ್ಲಾ 10 ವಿಕೆಟ್ ಪಡೆದು ವಿಶ್ವ ದಾಖಲೆಯನ್ನು ಸರಿಗಟ್ಟಿದ ಅಜಾಜ್ ಪಟೇಲ್ ಬಗ್ಗೆ. ಪ್ರತೀ ಬಾರಿಯೂ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಜಾಗತಿಕ… Read More ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

ರಚಿನ್ ರವೀಂದ್ರ

ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ  ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್,  ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ  ಪರ ಆಡಿದ್ದಾರೆ.  ಅವರಲ್ಲರ ನಡುವೆ… Read More ರಚಿನ್ ರವೀಂದ್ರ

ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ

1947ರಲ್ಲಿ ಬ್ರಿಟೀಷರು ಈ ದೇಶದಿಂದ ಹೊರ ಹೋಗುವಾಗ ಕೆಲವು ಪಟ್ಟಭಧ್ರ ಸ್ವಾರ್ಥ ಹಿತಾಸಕ್ತಿಯಾಗಿ ನಮ್ಮ ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಎರಡು ಭಾಗಗಳಾಗಿ (ನಂತರ ಅದು ಮೂರು ಭಾಗಗಳಾಗಿದೆ) ತುಂಡರಿಸಿ ಭಾರತ ಮತ್ತು ಪಾಕೀಸ್ಥಾನ ಎಂಬ ಎರಡು ಸ್ವತಂತ್ರ ದೇಶಗಳ ಕಾರಣಕ್ಕೆ ಕಾರಣವಾಗಿರುವುದು ಆದಾದ ನಂತರ ಹತ್ತು ಹಲವು ಬಾರಿ ಕಾಲು ಕೆರೆದುಕೊಂಡು ಭಾರತದ ಮೇಲೆ ಬಂದ ಪಾಪಿಗಳಿಗೆ ಭಾರತದ ಕೆಚ್ಚೆದೆಯ ಸೈನಿಕರು ತಕ್ಕ ಉತ್ತರವನ್ನೇ ನೀಡಿರುವುದು ಈಗ ಇತಿಹಾಸ. ಇಷ್ಟೆಲ್ಲಾ ಹೊಡೆತಗಳಿಂದ ಬುದ್ಧಿ ಕಲಿಯದ ಪಾಪೀಸ್ಥಾನ ಪದೇ… Read More ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ

ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುವ ಮತ್ತು ಅದೇ ಕುರಿತಾಗಿ ಆಗಾಗ ವಿವಾದವೂ ಏರ್ಪಡುವ ವಿಷಯವೆಂದರೆ ಕ್ರಿಕೆಟ್. ಅಗಲಿದ ಅಪ್ಪ ಅಮ್ಮಾ ನಿಂದ ಹಿಡಿದು ನಾನು ನಮ್ಮಾಕಿ, ಮುದ್ದಿನ ಮಗಳು ಮತ್ತು ನಮ್ಮ ಮನೆಯ ಸ್ವಘೋಷಿತ ಕ್ರಿಕೆಟ್ ಎಕ್ಸಪರ್ಟ್ ಮಗ ಎಲ್ಲರೂ ಕ್ರಿಕೆಟ್ ಪ್ರಿಯರೇ. ಆದರೆ ಬೆಂಬಲಿಸುವ ಆಟಗಾರರು ಮತ್ತು ತಂಡಗಳು ಮಾತ್ರಾ ವಿಭಿನ್ನ. ವಿಶ್ವ ಟೆಸ್ಟ್ ಕ್ರಿಕೆಟ್ ಛಾಂಪಿಯನ್ ಶಿಪ್ಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದು ಕಡೆಯಲ್ಲಿ ಆದ ಕೆಲವು ಅನಿರೀಕ್ಷಿತ… Read More ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

ಯಾವುದೇ ಆಟಗಳೇ ಆಗಲಿ ಪಂದ್ಯ ಆರಂಭವಾಗಿ ಆಟಗಾರರು ಮೈದಾನದಲ್ಲಿ/ಆಖಾಡದಲ್ಲಿ ಆಡುತ್ತಾ ಹೋದಂತೆಲ್ಲಾ, ಅಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಮತ್ತೊಬ್ಬರು ಮತ್ತೊಂದು ದಿನ ಮುರಿಯುವುದು ಸರ್ವೇ ಸಾಮಾನ್ಯವಾಗಿದೆ. ದಾಖಲೆಗಳಿಗಾಗಿಯೇ ಯಾವ ಆಟಗಾರರೂ ಆಡುವುದಿಲ್ಲವಾದರೂ, ಅವರುಗಳು ಆಡಿದಾಗಲೆಲ್ಲಾ ದಾಖಲೆಗಳು ಆವರ ಅರಿವಿಗೆ ಬಾರದೆಯೇ ಹುಟ್ಟುಕೊಳ್ಳುತ್ತವೆ. ಅದಕ್ಕೆ ಈ ಬಾರಿಯ ಐಪಿಎಲ್ 2021 ಕೂಡಾ ಹೂರತಾಗಿಲ್ಲ. ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದಿಂದ ಹಿಡಿದು ನೆನ್ನೆ ನಡೆದ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದವರೆಗೂ ಈ ವರೆಗೂ… Read More ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ಈ ಬಾರಿ ಹುಣ್ಣಿಮೆ ಭಾನುವಾರ ಮತ್ತು ಸೋಮವಾರ ಬಂದಿದ್ದ ಕಾರಣ ಬಹುತೇಕ ಭಾರತೀಯರು ಎರಡೂ ದಿನ ಹೋಳಿ ಹಬ್ಬದ ಆಚರಣೆಯಲ್ಲಿದ್ದ ಕಾರಣವೋ ಅಥವಾ ಇಂಗ್ಲೇಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಷ್ಟ ಪಟ್ಟು ಗೆದ್ದದ್ದರ ಸಂಭ್ರಮದಲ್ಲಿ ಮಾರ್ಚ್​ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮುಲ್ತಾನಿನಲ್ಲಿ ಸುಲ್ತಾನನಾಗಿ ಮೆರೆದು ಭಾರತದ ಪರ ಚೊಚ್ಚಲು ತ್ರಿಶತಕವನ್ನು ಬಾರಿಸಿ, ಪಾಕೀಸ್ಥಾನಿಗಳಿಗೆ… Read More ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್