ಸುಧೀರ್

ಅದು ಎಂಬತ್ತರ ದಶಕ ಮಲ್ಲೇಶ್ವರದ ಕೋದಂಡರಾಮಪುರದ ರಾಮಮಂದಿರದ ಎರುರಿಗಿದ್ದ ಕೆಲವು ಸಣ್ಣ ಸಣ್ಣ ಮನೆಯೊಂದರಲ್ಲಿ ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದ ನಟರೊಬ್ಬರು ಇದ್ದರು. ವರನಟ ರಾಜಕುಮಾರರ ತಮ್ಮ ವರದಪ್ಪನವರ ಮನೆ ಅಲ್ಲಿಂದ ಕೂಗಳತೆಯ ದೂರದಲ್ಲಿತ್ತು. ನಾಟಕ ಅಥವಾ ಚಿತ್ರೀಕರಣವಿಲ್ಲದಿದ್ದಲ್ಲಿ ಸಂಜೆ ನೀಟಾಗಿ ಡ್ರೆಸ್ ಮಾಡಿಕೊಂಡು ಕೈ ಬೆರಳಲ್ಲೊಂದು ಕೀ ಚೈನ್ ತಿರುಗಿಸಿಕೊಂಡು ಸಿಳ್ಳೇ ಹಾಕುತ್ತಾ ತಮ್ಮ ಮನೆಯಿಂದ ಹೊರಡುತ್ತಿದ್ದ ವೈಯ್ಯಾಳಿಕಾವಲ್ ರಾಜೇಶ್ ಹೋಟೆಲ್ ಕಡೆಗೆ ಹೋಗುತ್ತಿದ್ದ ಆ ಅಜಾನುಬಾಹು ನಟನನ್ನು ನೋಡಿದರೆ ನಿಜಕ್ಕೂ ಭಯವೆನಿಸುತ್ತಿತ್ತು. ನಮ್ಮಂತಹ ಚಿಕ್ಕಮಕ್ಕಳು… Read More ಸುಧೀರ್

ವಜ್ರಮುನಿ

ಕನ್ನಡ ಚಲನಚಿತ್ರ ಕಂಡ ಅಪ್ರತಿಮ, ಪ್ರಬುದ್ಧ ಮತ್ತು ಸ್ವಾಭಿಮಾನಿ ನಟ. ತನ್ನ ಶರೀರ ಮತ್ತು ಶಾರೀರಗಳಿಂದಲೇ ಎದುರಿಗಿರುವವರ ಎದೆಯನ್ನು ಝಲ್ ಎಂದು ನಡುಗಿಸುತ್ತಿವರು ಎಂದರೆ ತಪ್ಪಾಗಲಾರದು. ಹೆಸರಿನಲ್ಲಿಯೇ ವಜ್ರವಿದ್ದರೂ ಅವರ ಮನಸ್ಸು ಮಾತ್ರಾ ವಜ್ರದಂತೆ ಎಂದೂ ಕಠಿಣವಾಗಿರದೇ ಬೆಣ್ಣೆಯಂತಹ ಮೃದು ಸ್ವಭಾವದವರು. ತೆರೆಮೇಲೆ ಮಾತ್ರ ಕಠಿಣ ಹೃದಯ ಉಳ್ಳ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ವಜ್ರಮುನಿಯವರು, ನಿಜ ಜೀವನದಲ್ಲಿ ತಾವು ಎಷ್ಟೇ ಕಷ್ಟದಲ್ಲಿದ್ದರೂ ಪರರ ಕಷ್ಟವನ್ನಾಲಿಸಿ ಸಹಾಯ ಮಾಡುತ್ತಿದ್ದಂತಹ ಸಹೃದಯಿ ನಟ. ಬೆಂಗಳೂರಿನ ಲಾಲ್ ಬಾಗ್ ಸಿದ್ದಾಪುರ ಮತ್ತು ಮಾವಳ್ಳಿಯ… Read More ವಜ್ರಮುನಿ