ಹುಸ್ಕೂರು ಮದ್ದೂರಮ್ಮ ಜಾತ್ರೆ

mad2ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಭಕ್ತರನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸುತ್ತಾಳೆ ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂಬುದೇ ಬಹುತೇಕ ಭಕ್ತಾದಿಗಳ ನಂಬಿಕೆಯಾಗಿದೆ. ಪ್ರತೀ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಇಲ್ಲಿ ನಡೆಯುವ ಅದ್ದೂರಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.

huskur2ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಜಾತ್ರೆ ಎಂದರೆ 60-80 ಅಡಿ ಎತ್ತರದ ಒಂದೋ ಇಲ್ಲವೇ ಎರಡು ರಥಗಳನ್ನು ಎಳೆಯುವುದು ಸಾಮಾನ್ಯವಾದರೆ,  ಅಪರೂಪ ಎಂಬಂತೆ ನಂಜನಗೂಡಿನಲ್ಲಿ ಪಂಚರಥೋತ್ಸವ ನಡೆದರೆ ಈ ಊರಿನ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಕೇವಲ ಆ ಊರಿನವರಲ್ಲದೇ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ ಭಕ್ತಾದಿಗಳು ಸುಮಾರು 120 -200 ಅಡಿಗಳಷ್ಟು ಎತ್ತರದ ಮರದ ಕಂಬಗಳು, ಮರದ ಹಲಗೆ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಕುರ್ಜುಗಳು ಎಂದು ಕರೆಯುವ 10-12 ತೇರುಗಳನ್ನು ಹಿಂದಿನ ದಿನವೇ ತಮ್ಮ ಊರುಗಳಲ್ಲಿ ಪೂಜೆ ಮಾಡಿ ಜಾತ್ರೆಯ ದಿನದಂದು ಹುಸ್ಕೂರಿಗೆ ತಂದು ಪೂಜೆ ಮಾಡುವ ವಿಶಿಷ್ಟ ಆಚರಣೆ ನಿಜಕ್ಕೂ ಅಧ್ಭುತವೇ ಸರಿ.

temp1ಸುಮಾರು 800 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ದೇವಿಯ ಹೆಸರೇ ಹೇಳುವಂತೆ ಈ ದೇವಾಲಯದ ಮೂಲ ದೇವರು ಮಂಡ್ಯ ಜಿಲ್ಲೆಯ ಮದ್ದೂರಿನದ್ದಾಗಿದ್ದು, ಹುಸ್ಕೂರಿನ ಭಕ್ತರೊಬ್ಬರ ಭಕ್ತಿಗೆ ಮೆಚ್ಚಿ ಈ ಊರಿಗೆ ಬಂದು ನೆಲಸಿತೆಂದು ಸ್ಥಳೀಯರ ನಂಬಿಕೆಯಾಗಿದೆ. ಚೋಳರ ಕಾಲದ ದೇವಾಲಯವನ್ನು ಇತ್ತೀಚೆಗೆ ಭಕ್ತಾದಿಗಳ ಸಹಕಾರದಿಂದ ನವೀಕರಿಸಲಾಗಿದ್ದು ಗರ್ಭಗುಡಿಯಲ್ಲಿ ದೊಡ್ಡ ಮದ್ದೂರಮ್ಮ ಮತ್ತು ಚಿಕ್ಕ ಮದ್ದೂರಮ್ಮ ಎಂಬ ಎರಡು ವಿಗ್ರಹಗಳಿವೆ. ಮದ್ದೂರಮ್ಮನನ್ನು ನಂಬಿ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಮಂಗಳವಾರ, ಶುಕ್ರವಾರ, ಆಶಾಢ ಮಾಸದ ಸಮಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹೊರ ಭಾಗದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

madd1ಸಂಕ್ರಾಂತಿ ಮುಗಿದು ಬೆಳೆದ ಫಸಲುಗಳನ್ನೆಲ್ಲಾ ಕಟಾವು ಮಾಡಿ ತಮ್ಮ ಮನೆಯ ಅಗತ್ಯಕ್ಕಿಂತಲೂ ಹೆಚ್ಚಿನದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವಿರುವಾಗ, ಯುಗಾದಿ ಹಬ್ಬದ ನಂತರ ಬರುವ ಮಳೆಗಾಲದ ವರೆಗೂ ಯಾವುದೇ ಕೃಷಿ ಚಟುವಟಿಕೆ ಇಲ್ಲದಿರುವ ಸಮಯದಲ್ಲಿ ಈ ಊರಿನಲ್ಲಿ ಅದ್ದೂರಿಯ ಜಾತ್ರೆಯನ್ನು ನಡೆಸಲಾಗುತ್ತದೆ. ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಎಂದರೆ ಇಡೀ ಆನೇಕಲ್ ತಾಲೂಕಿನಲ್ಲಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುವುದಲ್ಲದೇ ಈ ಮೂಲಕ ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ. ಹುಸ್ಕೂರಿನ ಸುತ್ತಮುತ್ತಲ ಗ್ರಾಮಗಳಾದ, ಕೊಡತಿ, ಹಾರೋಹಳ್ಳಿ, ಸಿಂಗೇನ ಅಗ್ರಹಾರ, ದೊಡ್ಡ ನಾಗಮಂಗಲ, ಹಾಗೂ ಮುತ್ತನಲ್ಲೂರ್ ಸೇರಿದಂತೆ, ಸುಮಾರು 10-12 ಗ್ರಾಮಗಳಿಂದ ಭಕ್ತಾದಿಗಳು ತಾವೇ ರಥಗಳನ್ನು ನಿರ್ಮಿಸುತ್ತಾರೆ. ಈ 10-12 ಹಳ್ಳಿಗಳಿಂದ 150 ರಿಂದ 200 ಅಡಿ ಎತ್ತರದ ರಂಗು ರಂಗಿನ ಬೃಹತ್ ಗಾತ್ರದ ಕುರ್ಜುಗಳನ್ನು ತಿಂಗಳುಗಳ ಕಾಲ ಶ್ರದ್ಧಾ ಭಕ್ತಿಯಿಂದ ಸಿದ್ಧಪಡಿಸಲಾಗಿರುತ್ತದೆ, ರಂಗುರಂಗಿನ ಬಟ್ಟೆಗಳಿಂದ ವಿಶಿಷ್ಟ ಶೈಲಿಯ ವಿನ್ಯಾಸದ ಚಿತ್ತಾರಗಳನ್ನ ಹೊದಿಕೆಯಾಗಿಸಿಕೊಂಡು ಮರದ ಅಟ್ಟಣಿಗೆಗಳಿಂದ ನಿರ್ಮಿಸಲಾಗುವ ಈ ತೇರುಗಳು ಯಾವ ಯಾವ ಗ್ರಾಮದ ತೇರು ಎಷ್ಟು ಎತ್ತರ ಇರುತ್ತದೆ ಎಂಬ ಪ್ರತಿಷ್ಠೆಯ ಸಂಕೇತವಾಗುವ ಕಾರಣ ಒಂದು ರೀತಿಯ ಅರೋಗ್ಯಕರ ಸ್ಪರ್ಧೆಗೆ ಹುಸ್ಕೂರು ಜಾತ್ರೆ ವೇದಿಕೆಯಾಗಿ ಮಾರ್ಪಡುತ್ತದೆ ಎಂದರೂ ತಪ್ಪಾಗದು.

tippuಹುಸ್ಕೂರಿನ ಮದ್ದೂರಮ್ಮನಿಗೂ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನನಿಗೂ ನಂಟಿರುವ ಕುತೂಹಲಕಾರಿಯಾದ ಕಥೆಯೊಂದಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದ ನಂತರ ಸೇನೆಯ ಸಮೇತ ಶ್ರೀರಂಗಪಟ್ಟಣಕ್ಕೆ ಹಿಂದಿರುಗುವ ಮಾರ್ಗದ ಮಧ್ಯದಲ್ಲಿ ನಡೆಯಲೂ ನಿತ್ರಾಣವಾಗಿದ್ದ ತನ್ನ ಸೇನೆಯ ದಣಿವಾರಿಸಿಕೊಳ್ಳುವ ಸಲುವಾಗಿ ಈ ಹುಸ್ಕೂರಿನ ಬಯಲಿನ ಮದ್ದೂರಮ್ಮ ದೇವಾಲಯದಲ್ಲಿ ರಾತ್ರಿ ಪೂರಾ ಕಳೆದಿದ್ದನಂತೆ. ರಾಮ ರಾವಣರ ಯುದ್ದದಲ್ಲಿ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತಂದ ಹನುಮಂತ ಯುದ್ದದ ಸಮಯದಲ್ಲಿ ಗಾಯಗೊಂಡು ಮೂರ್ಛೆ ಹೋಗಿದ್ದ ಲಕ್ಷ್ಮಣ ಮತ್ತು ನೂರಾರು ಕಪಿ ಸೇನೆಯನ್ನು ರಕ್ಷಿಸಿದಂತೆ, ಮಾರನೇಯ ದಿನ ಬೆಳಗ್ಗೆ ಎದ್ದಾಗ ಹೊಸ ಚೈತನ್ಯದಿಂದ ಕೂಡಿದ ನವೋಲ್ಲಾಸವು ಟಿಪ್ಪು ಸೈನ್ಯದ ಸೈನಿಕರಲ್ಲಿ ಮೂಡಿದ್ದರಿಂದ ಸಂತೋಷಗೊಂಡ ಟಿಪ್ಪು ಇದು ಇಲ್ಲಿಯ ದೇವಿಯ ಮಹಿಮೆ ಎಂದು ನಂಬಿ ಅದರ ಜ್ಞಾಪಕಾರ್ಥವಾಗಿ ವಜ್ರಖಚಿತ ಕಿರೀಟದ ಜೊತೆಗೆ ದೇವಿಗೆ ಚಿನ್ನಾಭರಣಗಳನ್ನು ಅರ್ಪಸಿದ ಎಂಬ ಇತಿಹಾಸವಿದ್ದು, ಆನೇಕಲ್ ಖಜಾನೆಯಲ್ಲಿ ಭದ್ರವಾಗಿರಿಸಿರುವ ವಜ್ರಕಿರೀಟ ಚಿನ್ನಾಭರಣಗಳನ್ನು ಇಂದಿಗೂ ಜಾತ್ರೆಯ ಸಮಯದಲ್ಲಿ ತಂದು ದೇವರಿಗೆ ಮುಡಿಸಿ ಅಲಂಕರಿಸಿ ಸಂಭ್ರಮಿಸಲಾಗುತ್ತದೆ.

mad3ಹುಸ್ಕೂರಿನ ಜಾತ್ರೆಯಲ್ಲಿ ಬೃಹತ್ತಾದ ಈ ತೇರುಗಳೇ ಪ್ರಮುಖ ಆಕರ್ಷಣೆಯಾದರೂ, ಅದರ ಜೊತೆ ವಿವಿಧ ರೀತಿಯ ಜಾನಪದ ಕಲಾಮೇಳಗಳು, ಪಲ್ಲಕ್ಕಿ ಉತ್ಸವ, ಹಾಡು, ನೃತ್ಯಗಳಿಂದ ಕೂಡಿ ಜಾತ್ರೆಯನ್ನು ಮತ್ತಷ್ಟು ಆಕರ್ಷಣಿಯವನ್ನಾಗಿಸುತ್ತದೆ. ತಮ್ಮ ಕೃಷಿಯ ಫಸಲು ಮನೆಗೆ ಬಂದು ಗ್ರಾಮಕ್ಕೆ ಕೆಡುಕು ಆಗದಂತೆ ಗ್ರಾಮ ದೇವರುಗಳಿಗೆ ತೃಪ್ತಿಪಡಿಸುವ ಸಲುವಾಗಿ ದೂರದ ಊರಿನ ನೆಂಟರಿಷ್ಟರನ್ನು ಕರೆಸಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು ಈ ಜಾತ್ರೆಯ ವೈಶಿಷ್ಠ್ಯವಾಗಿದೆ.

ಮೊದಲ ದಿನ ರಥೋತ್ಸವದ ವಿಧಿ, ದೀಪಾರತಿಗಳ ಮೆರವಣಿಗೆಯಿಂದ ಆರಂಭವಾಗಿ ಮಾರನೇಯ ದಿನ ಬೆಳಗ್ಗೆ ಹತ್ತಾರು ಎತ್ತುಗಳ ಸಹಾಯದಿಂದ 10-20 ಕಿ. ಮಿ. ದೂರದ ಊರುಗಳಿಂದ ಸಾವಿರಾರು ಭಕ್ತಾದಿಗಳ ಸಹಾಯದೊಂದಿಗೆ ದಾರಿ ಯುದ್ದಕ್ಕೂ ತೇರುಗಳನ್ನು ಎಳೆದು ಸಂಜೆಯೊಳಗೆ ಮದ್ದೂರಮ್ಮನ ಗುಡಿಯ ಮುಂದೆ ತರಲಾಗುತ್ತದೆ. ಎತ್ತುಗಳು ಅಷ್ಟು ದೂರದಿಂದ ಕುರ್ಜುಗಳನ್ನು ಎಳೆದು ದೇವಿಯ ಸಾನ್ನಿಧ್ಯಕ್ಕೆ ಬಂದಾಗ ಮಾತ್ರವೇ ದೇವಿಯು ಸಂತುಷ್ಟಳಾಗುತ್ತಾಳೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ. ವರ್ಷವಿಡೀ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಎತ್ತುಗಳಿಗೆ ಈ 2 ದಿನಗಳ ಕಾಲ ಉಲ್ಲಾಸದಿಂದಿರಲೆಂದು ಈ ರೀತಿಯಾಗಿ ರಥವನ್ನು ಎಳೆಯಲಾಗುತ್ತಿದೆ ಎಂದದೂ ಸಹಾ ನಂಬಲಾಗುತ್ತದೆ. ಅಷ್ಟು ಎತ್ತರದ ಮತ್ತು ಅಷ್ಟು ಭಾರವಾದ ರಥಗಳನ್ನು ಅಷ್ಟು ದೂರದಿಂದ ಕಚ್ಚಾ ರಸ್ತೆಗಳ ಮೇಲೆ ಎಳೆದು ತರುವುದು ಖಂಡಿತವಾಗಿ ಸುಲಭದ ಮಾತಲ್ಲ. ಉತ್ಸಾಹ ಭರಿತ ಕೂಗಾಟ ಮತ್ತು ಚೀರಾಟಗಳೊಂದಿಗೆ ಅಂಕು ಡೊಂಕು ಬಳುಕುತ್ತಾ ವಯ್ಯಾರದಿಂದ ಬರುವ ರಥಗಳನ್ನು ನೋಡುವುದಕ್ಕೆ ನಿಜಕ್ಕೂ ಮುದ ನೀಡುತ್ತದೆ. ಸಾಯಂಕಾಲದ ವೇಳೆಗೆ ಒಂದೊಂದೇ ಊರಿನಂದ ಬರುವ ರಥಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಹುಸ್ಕೂರಿನಲ್ಲಿ ಸಾವಿರಾರು ಭಕ್ತರು ನೆರೆದಿರುತ್ತಾರೆ. ಸ್ವಲ್ಪ ವಿಶ್ರಮಿಸಿದ ಬಳಿಕ, ಆ ಎಲ್ಲಾ ರಥಗಳನ್ನು ಮದ್ದೂರಮ್ಮ ದೇವಿಯ ಮಂದಿರದ ಬಳಿ ಎಳೆದು ತಂದಾಗ ಭಕ್ತಾದಿಗಳು ದವನ ಚುಚ್ಚಿದ ಬಾಳೇಹಣ್ಣುಗಳನ್ನು ತೇರಿನ ಮೇಲೆ ಎಸೆಯುತ್ತಾ ಭಕ್ತಿಯಿಂದ ದೇವರನ್ನು ನೆನೆಯುವುದು ಮುಗಿಲು ಮುಟ್ಟುವಂತಿರುತ್ತದೆ. ಜಾತ್ರೆಯ 2 ದಿನ ಇಲ್ಲಿ ಕರಗ ಮಹೋತ್ಸವವೂ ನಡೆಯುತ್ತದೆ.

ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತಾದಿಗಳ ಹಸಿವನ್ನು ನಿವಾರಿಸಲು, ಅಲ್ಲಲ್ಲಿ ಮಜ್ಜಿಗೆ ಪಾನಕ ಅನ್ನದಾಸೋಹಗಳ ವ್ಯವಸ್ಥೆಯೂ ಇರುವುದರ ಜೊತೆಗೆ ಕಡಲೇ ಪುರಿ ಬೆಂಡು ಬತ್ತಾಸು, ವಿವಿಧ ರೀತಿಯ ಜಾತ್ರೆಯ ಸಿಹಿತಿನಿಸುಗಳ ಸಣ್ಣ ಹೋಟೆಲ್ಲುಗಳು ಇರುತ್ತದೆ. ಇನ್ನು ಮಕ್ಕಳಿಗೆಂದೇ ವಿವಿಧ ರೀತಿಯ ಆಟಿಕೆಗಳು, ಬಣ್ಣ ಬಣ್ಣದ ಬೆಲೂನುಗಳ ಜೊತೆ ಮನೋರಂಜನೆಗಾಗಿ ಬಗೆ ಬಗೆಯ ಗಿರಿಗಿಟ್ಟಲೆಗಳು ಮುದ ನೀಡುತ್ತದೆ. ಜಾತ್ರೆಯ ಪ್ರಯುಕ್ತ ದೇವಾಲಯದಲ್ಲಿ ಮದ್ದೂರಮ್ಮ ತಾಯಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗುತ್ತದೆ.

ಹುಸ್ಕೂರಿನ ಸುತ್ತಮುತ್ತಲಿನ ಹತ್ತಾರು ಊರುಗಳ ರೈತ ಬಾಂಧವರಿಗೆ ತಮ್ಮ ಹೊಲಗಳ ಕಾರ್ಯಗಳು ಮುಗಿದ ಬಳಿಕ, ಸುಗ್ಗಿಕಾಲದಲ್ಲಿ, ಹಿಗ್ಗಿನ ಹಬ್ಬವನ್ನಾಗಿಸುವ ಈ ಮದ್ದೂರಮ್ಮ ದೇವಿಯ ರಥೋತ್ಸವವನ್ನು ಈ ಬಾರಿ ನಮ್ಮ ಛಾನೆಲ್ಲಿನಲ್ಲಿ ನೋಡಿ ಸಂಭ್ರಮಸಿದ್ದೀರಿ. ಮುಂದಿನ ವರ್ಷ ಖಂಡಿತವಾಗಿ ಸ್ವಲ್ಪ ಸಮಯಮಾಡಿಕೊಂಡು ಹುಸ್ಕೂರಿಗೆ ಹೋಗಿ ಈ ಮದ್ದೂರಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ವಿಶ್ವದ ಅತ್ಯಂತ ಎತ್ತರದ ತೇರುಗಳನ್ನು ಹತ್ತಿರದಿಂದ ನೋಡಿದ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಗೋಕುಲಾಷ್ಥಮಿಗೂ ಇಮಾಂ ಸಾಬಿಗೂ ಏನು ಸಂಬಂಧ?

ವಿಜ್ಞಾನದದಲ್ಲಿ ನಾವೆಲ್ಲರೂ ಚಿಕ್ಕವಯಸ್ಸಿನಲ್ಲಿಯೇ ಓದಿರುವ ನ್ಯೂಟನ್ನನ ಮೂರನೇ ನಿಯಮದಂತೆ ಪ್ರತಿಯೊಂದು ಕ್ರಿಯೆಗೂ ಅಷ್ಟೇ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಕಳೆದ ಒಂದೆರಡು ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಸೂಕ್ಶ್ಮವಾಗಿ ಗಮನಿಸಿದ್ದವರಿಗೆ ಈ ವಿಷಯದ ಪ್ರಸ್ತಾಪದ ಅರಿವಿರುತ್ತದೆ.

hijab

ಎರಡು ತಿಂಗಳುಗಳ ಹಿಂದೆ ಕೆಲ ಮತಾಂಧ ಪಟ್ಟಭದ್ರ ಹಿತಾಸಕ್ತಿಯ ಜನರು ಬೆರಳೆಣಿಕೆಯ ಕಾಲೇಜು ಹುಡುಗಿಯರ ತಲೆಯನ್ನು ಕೆಡಸಿ ಉಡುಪಿನ ವಿಷಯವಾಗಿ ಉಡುಪಿಯ ಸರ್ಕಾರೀ ಕಾಲೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಹುಟ್ಟು ಹಾಕಿದ ವಿವಾದ ಈ ಪರಿಯಾಗಿ ಬೆಳೆದು ತಮ್ಮ ಬುಡಕ್ಕೇ ಬೆಂಕಿ ಹಚ್ಚಿ ಈ ರೀತಿಯಾಗಿ ದೈನೇಸಿಯಾಗಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂಬುದನ್ನು ಖಂಡಿತವಾಗಿಯೂ ಊಹಿಸಲಾರರು. ಇದು ಅವರ ದೂರದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸಿದ್ದಲ್ಲದೇ ಅವರದ್ದೇನಿದ್ದರೂ ಏಕ್ ಮಾರ್ ದೋ ತುಕಡಾ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವ ಏಕ್ ದಿನ್ ಕಾ ಸುಲ್ತಾನ್ ನಿರ್ಧಾರ ಎಂಬುದು ಜಗಜ್ಜಾಹೀರಾತಾಯಿತು.

ಹಿಜಾಬ್ ಕಿಡಿ ರಾಜ್ಯಾದ್ಯಂತ ಹರಡಿ ಅದಕ್ಕೆ ಪ್ರತಿಯಾಗಿ ಜಾಗೃತಗೊಂಡ ಹಿಂದೂ ಸಮಾಜ ಅದರಲ್ಲೂ ಗಂಡು ಹೆಣ್ಣು ಎಂಬ ಬೇಧವಿಲ್ಲದೇ, ನ್ಯೂಟನ್ 3ನೇ ನಿಯಮದಂತೆ ಯುವ ಸಮಾಜ ಕೇಸರೀ ಶಾಲುಗಳನ್ನು ಹಾಕಿಕೊಂಡು ರಾಜ್ಯಾದ್ಯಂತ ಸಮರ್ಥವಾಗಿ ಅವರನ್ನು ಎದುರಿಸಿದಾಗಲಾದರೂ ಎಚ್ಚೆತ್ತು ಕೊಳ್ಳಬೇಕಿತ್ತು. ಅಷ್ಟರಲ್ಲಿ ಈ ವಿಷಯ ದೇಶ ವಿದೇಶಗಳಲ್ಲಿ ಹರಡಿ ಪರ ವಿರೋಧದ ಚರ್ಚೆ ನಡೆಯುತ್ತಿರುವುದೇ ತಮ್ಮ ಗೆಲುವು ಎಂದು ಭಾವಿಸಿ ಸರ್ಕಾರದ ಸಮವಸ್ತ್ರದ ವಿರುದ್ಧ ಹೈಕೋರ್ಟಿನಲ್ಲಿ ಮೊಕ್ಕದ್ದಮ್ಮೆ ಹೊಡಿದಾಗ ಅವರಿಗೆ ಅರಿವಿಲ್ಲದಂತೆಯೇ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿದ್ದರು. ಮೊದಲು ಏಕ ನ್ಯಾಯಾಧೀಶರು ವಿಚಾರಣೆ ನಡೆಸಿ ಸದ್ಯದ ಪರಿಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುವಂತೆ ಮಧ್ಯಂತರ ತೀರ್ಪನ್ನು ನೀಡಿ ಮುಸ್ಲಿಂ ನ್ಯಾಯಾಧೀಶೆಯೂ ಸೇರಿದಂತೆ ತ್ರಿಸದಸ್ಯ ಪೀಠ ಸುದೀರ್ಘವಾದ ಪರ ವಿರೋಧದ ವಾದ ವಿವಾದಗಳನ್ನು ಆಲಿಸಿ ಹಿಜಾಬ್ ಎನ್ನುವುದು ಮುಸಲ್ಮಾನರ ವಸ್ತ್ರದ ಅವಿಭಾಜ್ಯ ಅಂಗ ಎಂದು ಕುರಾನಿನಲ್ಲಿ ಎಲ್ಲಿಯೂ ತಿಳಿಸಿಲ್ಲವಾದ ಕಾರಣ ಆಯಾಯಾ ಶಾಲಾ/ಕಾಲೇಜುಗಳ ನಿಯಮದಂತೇ ಸಮವಸ್ತ್ರಗಳನ್ನು ಧರಿಸ ಬೇಕು ಎಂಬ ಅಂತಿಮ ತೀರ್ಮಾನವನ್ನು ಪ್ರಕಟಿಸಿತು.

ಮಾತೆತ್ತಿದರೆ ಅಂಬೇಡ್ಕರ್ ಅವರ ಸಂವಿಧಾನ ಎಂದು ಅಬ್ಬಿರಿದು ಬೊಬ್ಬಿರುವವರೇ ತಮ್ಮ ಕೋಳಿ ಕೂಗದೇ ಹೋದರೆ ಬೆಳಕಾಗುವುದಿಲ್ಲ ಎಂಬ ಅಡುಗೋಲಜ್ಜಿಯ ಮನಸ್ಥಿತಿಯಲ್ಲಿ ಹೈಕೋರ್ಟಿನ ಆ ತೀರ್ಪಿನ ವಿರುದ್ಧ ರಾಜ್ಯಾದ್ಯಂತ ಮುಸಲ್ಮಾನರು ಒಂದು ದಿನದ ಮಟ್ಟಿಗೆ ಅವರರವರ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಪ್ರತಿಭಟನೆ ಮಾಡಿದರು. ಹೈಕೋರ್ಟಿನ ತೀರ್ಪಿನ ಬಗ್ಗೆ ಅಸಮಾನವಿದ್ದಲ್ಲಿ ಅದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಮಾಡುವ ಎಲ್ಲಾ ಅವಕಾಶವಿದ್ದರೂ ಹುಂಬತನದಿಂದ ನ್ಯಾಯಾಲಯದ ತೀರ್ಪನ್ನೇ ವಿರೋಧಿಸಿ ಕರೆ ನೀಡಿದ ಬಂದ್ ಈ ರಾಜ್ಯದ ಹಿಂದುಗಳ ಮನಸ್ಸಿನ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಿದ್ದಂತೂ ಸುಳ್ಳಲ್ಲ.

WhatsApp Image 2022-03-22 at 1.48.52 PM

ಅದೇ ರೀತಿ ಅವರ ಒಂದು ದಿನದ ಪ್ರತಿಭಟನೆ ಹಿಂದೂಗಳ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರದಿದ್ದನ್ನು ಗಮನಿಸಿದ ಹಿಂದು ಸಂಘಟನೆಗಳು ಸೇರಿಗೆ ಸವ್ವಾ ಸೇರು ಎನ್ನುವಂತೆ ಮುಂದಿನ ಒಂದೆರಡು ತಿಂಗಳುಗಳ ಕಾಲ ರಾಜ್ಯಾದ್ಯಂತ ನಡೆಯಲಿರುವ ಹಿಂದೂ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಯೇತರ ವ್ಯಾಪರಸ್ಥರಿಗೆ ಅನುಮತಿ ನೀಡಬಾರದು ಎಂಬ ತೀರ್ಮಾನ ತೆಗೆದುಕೊಂಡಿದ್ದು ಕಾಳ್ಗಿಚ್ಚಿನಂತೆ ಕ್ಷಣ ಮಾತ್ರದಲ್ಲೇ ರಾಜ್ಯಾದ್ಯಂತ ಪಸರಿಸಿ ಬಹುತೇಕ ಎಲ್ಲಾ ಜಾತ್ರಾ ಮಹೋತ್ಸವಗಳಲ್ಲಿಯೂ ಬಹಿರಂಗವಾಗಿ ತಮ್ಮ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಪ್ರಕಟನೆ ಹೊರಡಿಸಿದಲ್ಲದೇ ಅದನ್ನು ಒಂದೆರಡು ಜಾತ್ರೆಗಳಲ್ಲಿ ಅಕ್ಷರಶಃ ಪಾಲಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೇ, ಕೇವಲ ಜಾತ್ರಾ ಮಹೋತ್ಸವವಲ್ಲದೇ ದೈನಂದಿನವಾಗಿ ಆ ಸಮುದಾಯದವವರ ಬಳಿ ಯಾವುದೇ ವ್ಯಾಪಾರ ವಹಿವಾಟುಗಳನ್ನು ಮಾಡುವುದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅವರ ಜಂಘಾಬಲ ಕಡಿಮೆಯಾಗಿದ್ದಂತೂ ಸುಳ್ಳಲ್ಲ.

WhatsApp Image 2022-03-22 at 8.10.29 PM

ಅಲ್ಲಿಯವರೆಗೂ ಮುಸಲ್ಮಾನರಲ್ಲದವರು ಕಾಫೀರರು, ಅವರೆಲ್ಲರು ಹರಾಮ್ ಗಳು ಎನ್ನುತ್ತಿದ್ದವರೇ, ಈಗ ಇಂತಹ ವ್ಯಾಪಾರಗಳಿಂದಲೇ ತಮ್ಮ ಸಮುದಾಯದ ಬಹುತೇಕರ ಜೀವನ ಸಾಗುತ್ತಿದ್ದು ಅದರಲ್ಲೂ ಬಹುತೇಕರು ಬೀದಿ ಬದಿ ವ್ಯಾಪಾರಿಗಳಾಗಿದ್ದು ನಾವು ಹಿಂದುಗಳೊಂದಿಗೆ ಸಹೋದರ ಭಾವನೆಗಳನ್ನು ಹೊಂದಿದ್ದೇವೆ. ಯಾರೋದ್ದೋ ಒತ್ತಡದಿಂದಾಗಿ ಅಂದು ನಡೆದ ಬಂದ್‌ಗೆ ಒಲ್ಲದ ಮನಸ್ಸಿನಿಂದ ಬೆಂಬಲ ಸೂಚಿಸಿದ್ದೇವೆಯೇ ಹೊರತು ನಮಗೆ ಹಿಂದೂಗಳ ಮೇಲೆ ಯಾವುದೇ ದ್ವೇಷವಿಲ್ಲ, ಹಾಗಾಗಿ ನಮಗೆ ಹಿಂದೂ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡಿ ಎನ್ನುವ ಮನವಿ ಮಾಡಿದ್ದನ್ನು ನೋಡಿದಾಗ ಥಟ್ ಅಂತಾ ಮನಸ್ಸಿನಲ್ಲಿ ಮೂಡಿದ್ದೇ ಅನ್ಯ ಧರ್ಮದ ಬಗ್ಗೆ ಸ್ವಲ್ಪವೂ ಗೌರವಿಲ್ಲದ ಇಮಾಂ ಸಾಬಿಗೂ ನಮ್ಮ ಗೋಕುಲಾಷ್ಥಮೀಗೂ ಎಲ್ಲಿಯ ಸಂಬಂಧ?

ಇದೇ ಸಮುದಾಯದ ಜನರು ಕೆಲವು ತಿಂಗಳುಗಳ ಹಿಂದೆ

 • ಮಂಗಳೂರಿನಲ್ಲಿ ಹಿಂದೂಗಳಿಂದ ಮೀನು ಖರೀದಿಸ ಬಾರದು ಎಂದು ಸಾರ್ವಜನಿಕವಾಗಿಯೇ ಬಹಿಷ್ಕಾರ ಹಾಕಿದ್ದದ್ದು,
 • ರಂಜಾನ್ ತಿಂಗಳಿನ ಸಮಯದಲ್ಲಿ ದಾವಣಗೆರೆಯ ಚನ್ನಬಸಪ್ಪ ಅವರ ಅಂಗಡಿಯಲ್ಲಿ ಬಟ್ಟೆಗಳನ್ನು ಖರೀಧಿಸಿದ ಮುಸಲ್ಮಾನ ಹೆಣ್ಣುಮಕ್ಕಳ ಬಟ್ಟೆಗಳನ್ನು ರಸ್ತೆಯ ಮಧ್ಯೆಯಲ್ಲಿಯೇ ಎಳೆದು ಬಿಸಾಡಿದ್ದನ್ನೂ,
 • ಕೆಲವೇ ಕೆಲವು ತಿಂಗಳುಗಳ ಹಿಂದೆ ಹಿಂದೂ ಸಹೋದ್ಯೋಗಿಯೊಬ್ಬರೊಡನೆ ಬುರ್ಕಾಧಾರಿ ಹೆಣ್ಣು ಮಗಳು ಬಿಟಿಎಂ ಬಡಾವಣೆಯ ಬಳಿ ಬೈಕಿನಲ್ಲಿ ಬರುತ್ತಿದ್ದಾಗ ಸಾರ್ವಜನಿಕರ ಸಮ್ಮುಖದಲ್ಲಿಯೇ ಆ ಹಿಂದು ವ್ಯಕ್ತಿಯ ಮೇಲೆ ಹಲ್ಲೆ

ಮಾಡಿದ್ದ ವೀಡಿಯೋವನ್ನು ನೋಡಿದ್ದ ಹಿಂದೂಗಳಿಗೆ ಇಂದು ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಸಾಮರಸ್ಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎನಿಸಿದ್ದಂತೂ ಸುಳ್ಳಲ್ಲ.

WhatsApp Image 2022-03-22 at 1.49.17 PM

ಹಾಗಾಗಿಯೇ,ಮೊದಲು ಮಂದಾರ್ತಿ ಜಾತ್ರೆಯಲ್ಲಿ ಆರಂಭವಾದ ಆರ್ಥಿಕ ಭಹಿಷ್ಕಾರ,ಕಾಪು ಜಾತ್ರೆ, ಶಿವಮೊಗ್ಗ ಮಾರಿ ಜಾತ್ರೆ, ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆ, ಪಡುಬಿದ್ರಿ ಈಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಗಳಲ್ಲಿ ಹಿಂದೂಯೇತರರಿಗೆ ಅಂಗಡಿ ಇಡಲು ಅವಕಾಶವಿಲ್ಲ ಮತ್ತು ಈ ಪರಿಸ್ಥಿತಿ ಖಂಡಿತವಾಗಿಯೂ ಹೀಗೆಯೇ ಮುಂದುವರೆದು ಕೊಂಡು ಹೋಗುತ್ತದೆ.

1947ರಲ್ಲೇ ಧರ್ಮಾಧಾರಿತವಾಗಿ ಈ ದೇಶ ಮೂರು ಭಾಗ ತುಂಡಾಗಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದಲ್ಲಿ ಮುಸಲ್ಮಾನರದ್ದೇ ಪ್ರಾಭಲ್ಯವಾಗಿ ಅಲ್ಲಿದ್ದ ಸ್ಥಳೀಯ ಹಿಂದೂಗಳ ಮೇಲೆ ಧಾಳಿ ಮಾಡಿ ಅವರ ಆಸ್ತಿ ಪಾಸ್ತಿಗಳನ್ನು ಕಿತ್ತೊಕೊಂಡಿದ್ದಲ್ಲದೇ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕಗ್ಗೊಲೆ ಮಾಡಿ ಅವರನ್ನು ಹೊರಹಾಕಿದರೂ, ಮಹಾತ್ಮಾಗಾಂಧಿಯ ಮಾತು ಕೇಳಿ ಇಲ್ಲಿನ ಮುಸಲ್ಮಾನರಿಗೆ ಇಲ್ಲಿಯೇ ಉಳಿದು ಕೊಳ್ಳಲು ಅವಕಾಶ ನೀಡಿದ್ದಲ್ಲದೇ ಅವರಿಗಾಗಿಯೇ ಅಲ್ಪಸಂಖ್ಯಾತ ವಿಶೇಷ ಅಧಿಕಾರವನ್ನೂ ಸಹಾ ನೀಡಲಾಯಿತಾದರೂ, ಇಲ್ಲಿಯೇ ಹುಟ್ಟಿ ಇಲ್ಲೇ ಬೆಳೆದು ಇಲ್ಲಿಯ ನೀರು ಕುಡಿದು ಇಲ್ಲಿಯ ಅನ್ನ ತಿಂದು ಬೆಳೆದರು ದೇಶ ಮತ್ತು ಧರ್ಮದ ನಡುವಿನ ವ್ಯತ್ಯಾಸ ಅರಿಯದೇ ಪದೇ ಪದೇ ಈ ದುಷ್ಕೃತ್ಯವನ್ನು ನಡೆಸುವವರನ್ನು ಬೆಂಬಲಿಸುತ್ತಲೇ ಈ ದೇಶದ ನೀತಿ ನಿಯಮಗಳನ್ನು ವಿರೋಧಿಸುತ್ತಿರುವರನ್ನು ಎಷ್ಟು ದಿನಗಳ ಕಾಲ ಸಹಿಸಲು ಸಾಧ್ಯ? ಇದೊಂದು ರೀತಿ ಕೆಂಡ ಕೈಯಲ್ಲಿ ಹಿಡಿದರೆ ಕೈ ಸುಡುತ್ತದೆ, ಸೆರಗಿನಲ್ಲಿ ಸುತ್ತಿಕೊಂಡರೆ ಸೀರೆಯನ್ನು ಸುಡುವಂತಾಗುತ್ತದೆೆ ಎಂಬ ಪರಿಸ್ಥಿತಿ ಬಂದಾಗ ಸಹಜವಾಗಿಯೇ ಹಿಂದೂಗಳು ಪ್ರತಿಯಾಗಿ ಜಾಗೃತರಾಗಿದ್ದಾರೆಯೇ ಹೊರತು ಇಡೀ ಇತಿಹಾಸದಲ್ಲಿ ಯಾವುದೇ ಜನರ ಮೇಲೆ ಹಿಂದೂಗಳು ಮೊದಲು ಧಾಳಿ ನಡೆಸಿದ ಇತಿಹಾಸವೇ ಇಲ್ಲಾ.

ಈ ಕೆಳಗೆ ತಿಳಿಸಿರುವ ಪ್ರಕರಣಗಳನ್ನು ಸೂಕ್ಶ್ಮವಾಗಿ ಗಮನಿಸಿದಲ್ಲಿ ಇದೊಂದು ರೀತಿಯ ಸ್ವಯಂಕೃತಾಪರಾಧವಾಗಿದ್ದು ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು ಎನ್ನುವಂತಾಗಿದೆ.

 • ವಸುದೈವ ಕುಟುಂಬಕಂ ಎಂದು ಇಡೀ ಪ್ರಪಂಚವೇ ಒಂದು ಕುಟುಂಬ ಎಂದು ನಾವು ಭಾವಿಸಿದ್ದರೆ ಅಲ್ಲಾ ಒಬ್ಬನೇ ದೇವನು ಅಲ್ಲಾ ಬಿಟ್ಟರೆ ಅನ್ಯ ದೇವರಿಲ್ಲ ಮತ್ತು ಅಲ್ಲಾಹನಿಲ್ಲದೆ ಅನ್ಯ ಆರಾಧ್ಯನಿಲ್ಲ ಎಂದು ದಿನಕ್ಕೆ ಐದು ಬಾರಿ ಕರ್ಕಶವಾಗಿ ಧ್ವನಿವರ್ಧಕಗಳ ಮೂಲಕ ಅನ್ಯ ಧರ್ಮದ ದೇವರುಗಳನ್ನು ನಿಂದನೆ ಮಾಡುವುದು ಎಷ್ಟು ಸರಿ?
 • ವರದಿ ನಿಮ್ಮ ಪರವಿದ್ದಾಗ ಅಂಬೇಡ್ಕರ್ ಅವರ ಸಂವಿಧಾನ ಅದೇ ನಿಮ್ಮ ವಿರುದ್ಧವಾದಾಗ ಶರಿಯ ಮಾತ್ರವೇ ನಮ್ಮ ಕಾನೂನು ಎನ್ನುವ ವಿತಂಡ ವಾದ ಮಾಡುತ್ತಾ ಅನಕೂಲಸಿಂಧು ಜೀವನ ನಡೆಸುವುದು ಎಷ್ಟು ಸರಿ?
 • ಧರ್ಮ ಎನ್ನುವುದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದು ಮನೆಯ ಹೊಸಿಲನ್ನು ದಾಟಿದಲ್ಲಿ ನಾವು ಭಾರತೀಯರು ಎಂಬ ಮನಸ್ಥಿತಿ ಸ್ವಾತ್ರಂತ್ಯ ಬಂದು 70+ ವರ್ಷಗಳದರೂ ನಿಮಗೆ ಬಾರದಿರುವುದು ಎಷ್ಟು ಸರಿ?
 • halalಮುಸಲ್ಮಾನ್ ವ್ಯಾಪಾರಿಗಳ ಮೇಲೆ ಹಿಂದೂಗಳು ಆರ್ಥಿಕ ಭಹಿಷ್ಕಾರ ಹಾಕದಿರಿ ಎನ್ನುವವರು, ಮಾಂಸದಿಂದ ಅರಂಭಿಸಿ ಸದ್ದಿಲ್ಲದೆ ಎಲ್ಲಾ ಆಹಾರಗಳಲ್ಲಿಯೂ ಹಲಾಲ್ ಇದ್ದಲ್ಲಿ ಮಾತ್ರವೇ ಖರೀದಿ ಆರಂಭಿಸಿದ್ದಲ್ಲದೇ, alal_Certification_Fees ಎಂಬ ನೆಪದಲ್ಲಿ ಪ್ರತಿವರ್ಷವೂ ಹಿಂದುಗಳಿಂದ ಕೋಟ್ಯಾಂತರ ಝಜಿಯಾ ಕರ ವಸೂಲಿ ಮಾಡುತ್ತಿರುವುದು ಎಷ್ಟು ಸರಿ?
 • ಈ ದೇಶದ ಪ್ರಜೆಗಳಾಗಿದ್ದರೂ ಇಲ್ಲಿಯ ಕಾನೂನುಗಳನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾ ಪ್ರತಿಯೊಂದನ್ನೂ ಧಿಕ್ಕರಿಸಿವುದು ಎಷ್ಟು ಸರಿ?
 • ದೇವರ ಜೀವನಹಳ್ಳಿಯ ಫೇಸ್ ಬುಕ್ ಪೇಜಿನಲ್ಲಿ ಹಿಂದೂ ದೇವರನ್ನು ಹಬ್ಬಗಳ ವಿರುದ್ಧ ಹಾಕಿದ ಸಂದೇಶವನ್ನು ವಿರೋಧಿಸಿದ್ದಕ್ಕಾಗಿ ಶಾಸಕನ ಮನೆಯನ್ನೇ ಸುಟ್ಟು ಹಾಕಿದ್ದು ಎಷ್ಟು ಸರಿ?
 • ಭಾರತ ಮತ್ತು ಪಾಕಿಸ್ಥಾನಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಪ್ಪೀ ತಪ್ಪೀ ಪಾಕೀಸ್ಥಾನಕ್ಕೆ ಜಯವಾದಲ್ಲಿ ಭಾರತೀಯರಾಗಿದ್ದೂ ಬಹುತೇಕ ಮುಸಲ್ಮಾನರು ಪಟಾಕಿ ಹೊಡೆದು ಪಾಕೀಸ್ಥಾನದ ವಿಜಯವನ್ನು ಸಂಭ್ರಮಿಸುವುದು ಎಷ್ಟು ಸರಿ?
 • ಪ್ರಾರ್ಥನೆಯ ನೆಪದಲ್ಲಿ ಎಲ್ಲೆಂದರಲ್ಲಿ ಗುಂಪು ಕಟ್ಟಿಕೊಂಡು ರಸ್ತೆಯ ಮಧ್ಯದಲ್ಲಿ, ರೇಲ್ವೆ ಹಳಿಗಳ ಮೇಲೆ, ರೇಲ್ವೆ ಪ್ಲಾಟ್ ಫಾರಂಗಳಲ್ಲಿ, ರೈಲುಗಳಲ್ಲಿ ಬಸ್ಸುಗಳಲ್ಲಿ ನಮಾಜ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ?
 • ಸಂವಿಧಾನದ 29 ನೇ ವಿಧಿಯು ಧರ್ಮ, ಜನಾಂಗ, ಜಾತಿ, ಭಾಷೆ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡಬಾರದು ಎಂದಿದ್ದರೂ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಪದೇ ಪದೇ ಹಿಂದೂಗಳನ್ನೂ ಹಿಂದೂ ಆಚರಣೆಗಳನ್ನು ಧಿಕ್ಕರಿಸುತ್ತಾ Love Jihad, Land Jihad, Population Jihad ಮತ್ತು Islamic Jihad Terrorism ನಡೆಸುವುದು ಎಷ್ಟು ಸರಿ?
 • ಕೇವಲ ಸಾವಿರ ವರ್ಷದ ಹಿಂದೆ ಅರಬ್ಬರು ಈ ದೇಶದ ಮೇಲೆ ಧಾಳಿ ಮಾಡುವ ಮೊದಲು ಇಡೀ ದೇಶವೇ ಹಿಂದೂಗಳಾಗಿದ್ದು ಯಾವುದೋ ಆಮೀಷಕ್ಕೋ ಬಲವಂತಕ್ಕೋ ಬಲಿಯಾಗಿ ಮುಸಲ್ಮಾನರಾಗಿ ಮತಾಂತರ ಹೊಂದಿದ್ದರೂ ನಮ್ಮ ನಿಮ್ಮ DNA ಒಂದೇ ಆಗಿದೆ ಎಂಬುದನ್ನು ಮರೆಯುವುದು ಎಷ್ಟು ಸರಿ?
 • 30 ನೇ ವಿಧಿಯು ಎಲ್ಲಾ ಅಲ್ಪಸಂಖ್ಯಾತರು, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ, ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನೇ ನೆಪಮಾಡಿಕೊಂಡು ಆಧುನಿಕ ಶಿಕ್ಷಣವನ್ನು ನೀಡದೇ ಇಂದಿಗೂ ಭೂಮಿ ಚಪ್ಪಟ್ಟೆಯಾಗಿದೆ ಎಂದು ಮದರಸಾಗಳಲ್ಲಿ ಮತಾಂಧತೆಯನ್ನೇ ಹೇಳಿಕೊಡುವುದು ಎಷ್ಟು ಸರಿ?
 • ಕರಾವಳಿ ಜನರ ಭಾವನೆಯ ವಿರುದ್ಧವಾಗಿ ಕೊರಗಜ್ಜನನ್ನು ಸಾರ್ವಜನಿಕವಾಗಿ ಅವಹೇಳನ ಮಾಡುವುದು ದೇವಾಲಯಗಳ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ಗಳನ್ನು ಹಾಕುವುದು ಎಷ್ಟು ಸರಿ?
 • ಸಾವಿರ ವರ್ಷಗಳ ಮೊಘಲರ ಆಳ್ವಿಕೆಯಲ್ಲಿ ಏನನ್ನೂ ಸ್ವಂತದಿಂದ ಕಟ್ಟಲಾಗದಿದ್ದರೂ ನಮ್ಮ ಪೂರ್ವಜರು ಆಸ್ತೆಯಿಂದ ಕಟ್ಟಿದ ಧಾರ್ಮಿಕ ಕಟ್ಟಡಗಳನ್ನು ನಾಶ ಪಡಿಸಿದ್ದಲ್ಲದೇ ಕೆಲವುಗಳ ಮೇಲೆ ಗುಂಬಸ್ ಗಳನ್ನು ಕಟ್ಟಿ ಅವುಗಳು ನಿಮ್ಮ ಕೊಡುಗೆ ಎಂದು ಹೇಳಿಕೊಳ್ಳುವುದು ಎಷ್ಟು ಸರಿ?
 • ಅಂದು ಹಿಂದೂ ಹೆಣ್ಣುಮಕ್ಕಳಿಗೆ ಕುಂಕುಮ ಬಳೆ ಹೂವು ಬಿಟ್ಟು ಕಾಲೇಜಿಗೆ ಬನ್ನಿ ಎಂದು ಕೂಗಾಡಿದವರೇ, ಇಂದು ಅದೇ ಕುಂಕುಮ ಬಳೆ ಹೂವುಗಳನ್ನು ಜಾತ್ರೆಯಲ್ಲಿ ಮಾರಲು ಅವಕಾಶ ಕೊಡಿ ಎಂದು ಅಂಗಲಾಚುವುದು ಎಷ್ಟು ಸರಿ?
 • ಶಾಂತಿ ಪ್ರಿಯರು ಎಂದು ಹೇಳಿಕೊಳ್ಳುತ್ತಲೇ, ಇಡೀ ಪ್ರಪಂಚಾದ್ಯಂತ ಅಶಾಂತಿಯನ್ನು ಹಬ್ಬುತ್ತಿರುವುದನ್ನು ನೋಡಿಯೇ ಅಡ್ವಾನಿಯವರು ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲಾ. ಆದರೆ ಭಯೋತ್ಪಾದಕರೆಲ್ಲರೂ ಮುಸಲ್ನಾನರೇ ಎಂದು ಹೇಳಿದ್ದು ಸರಿಯಲ್ಲವೇ?

ಹೀಗೆ ಬರೆಯುತ್ತಲೇ ಹೋದರೆ ಪುಟಗಟ್ಟಲೇ ಬರೆಯಬಹುದಾದರೂ, ಈ ದೇಶದ ಎಲ್ಲಾ ಪ್ರಜೆಗಳೂ ನೀರಿನಂತೆ ಬಣ್ಣವಿಲ್ಲದ, ರುಚಿ ಇಲ್ಲದ, ಆಕಾರವಿಲ್ಲದಂತಿದ್ದು ಯಾವ ಪಾತ್ರೆಗೆ ಹಾಗಿದರೂ ಆ ಪಾತ್ರೆಯ ರೂಪತಾಳಿ, ಅದಕ್ಕಿ ಸೇರಿಸಿದ ಬಣ್ಣವನ್ನು ಧರಿಸಿ ಅದಕ್ಕೇ ಸೇರಿದ ಉಪ್ಪು, ಹುಳಿ, ಸಿಹಿ, ಖಾರದ ರುಚಿ ಪಡೆದು ಸರಾಗವಾಗಿ ಹರಿಯುವಂತಿರಬೇಕೇ ಹೊರತು, ಪ್ರತಿಯೊಂದು ಆಗು ಹೋಗುಗಳಿಗೂ ವಿರೋಧಾಭಾಸ ಮಾಡುತ್ತಾ ಗುಂಪು ಕಟ್ಟಿಕೊಂಡು ಹೊಡಿ ಬಡೀ ಕಡೀ ಎಂದು ಆರ್ಭಟಿಸುತ್ತಾ ಹೋದಲ್ಲಿ ಇದಕ್ಕಿಂತಲೂ ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.

WhatsApp Image 2022-03-22 at 1.49.04 PM

When you are in Rom, be like a Roman ಎನ್ನುವ ಆಂಗ್ಲ ಗಾದೆಯಂತೆ ಭಾರತದಲ್ಲಿ ಹುಟ್ಟಿ ಬೆಳೆದಿರುವಾಗ ಹೃದಯವಂತ ಭಾರತೀಯನಾಗಿ ಈ ಮಣ್ಣಿನ ಆಚಾರ ವಿಚಾರ ಸಂಸ್ಕಾರ ಮತ್ತು ಸಂಸ್ಕೃತಿಗಳಿಗೆ ಗೌರವ ನೀಡುತ್ತಾ Nation First, Everything Next ಎನ್ನುವ ಮನೋಭಾವನೆ ಬೆಳಸಿಕೊಂಡಲ್ಲಿ ಹಿಂದೂ ಮುಸಲ್ಮಾನರೂ ಮತ್ತೆ ಯಾವುದೇ ರೀತಿಯ ಕೋಮು ದಳ್ಳುರಿ ಇಲ್ಲದೇ ಸೌಹಾರ್ಧತೆಯಿಂದ ಬಾಳಬಹುದೇನೋ ಏನೂ? ಬದಲಾವಣೆ ಎನ್ನುವುದು ನಿರಂತರವಾಗಿರ ಬೇಕು, ಏಕೆಂದರೆ ನಿಂತ ನೀರೂ ಸಹಾ ಕೊಳೆತು ಹೋಗುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಶಿರಸಿ ಮಾರಿಕಾಂಬಾ

ಶಿರಸಿ, ಉತ್ತರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು, ಧಾರ್ಮಿಕವಾಗಿ, ಪೌರಾಣಿಕವಾಗಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಆರ್ಥಿಕವಾಗಿಯೂ ಕರ್ನಾಟಕದ ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿದೆ. ಶಿರಸಿ ಎಂದಾಕ್ಷಣ ಪ್ರತಿಯೊಬ್ಬರ ಬಾಯಿಯಲ್ಲಿಯೂ ಉದ್ಘಾರವಾಗುವುದೇ, ಪುರಾಣ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಮತ್ತು ಎರಡು ವರ್ಷಕ್ಕೊಮ್ಮೆ ಎಂಟು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬ ಜಾತ್ರೆ. ನಾವಿಂದು ಮಾರಿಕಾಂಬ ದೇವಾಲಯ, ಅಲ್ಲಿಯ ಸ್ಥಳ ಪುರಾಣದ ಜೊತೆ ಅಲ್ಲಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಕೊಳ್ಳೋಣ ಬನ್ನಿ.

emp4ಶಿರಸಿಯ ಮಾರಿಕಾಂಬ ದೇವಾಲಯ ಉಳಿದೆಲ್ಲಾ ದೇವಾಲಯಗಳಿಗಿಂತಲೂ ವಿಭಿನ್ನವಾಗಿದ್ದು ಬಾಹ್ಯ ನೋಟಕ್ಕೆ ಅದೊಂದು ಸುಂದರವಾದ ಅರಮನೆಯಂತೆಯೇ ಭಾಸವಾಗುತ್ತದೆ. ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿರುವ ಆನೆಗಳ ಮೂರ್ತಿಯು ನಮ್ಮನ್ನು ದೇವಾಲಯದ ಒಳಗೆ ಆಹ್ವಾನಿದರೆ, ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ.

ಪುರಾಣ ಕಥೆಗಳನ್ನು ಓದಿಕೊಂದು ಮುಂದುವರೆಯುತ್ತಾ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಸಭಾಭವನವನ್ನು ಪ್ರವೇಶಿಸುತ್ತಿದ್ದಂತೆಯೇ ಎಂಟು ಕೈಗಳ, ಏಳಡಿ ಎತ್ತರದ, ವ್ಯಾಘ್ರನ ಮೇಲೆ ಆಸೀನಳಾದ ತಾಯಿ ಮಾರಿಕಾಂಬೆಯ ದರ್ಶನ ಪಡೆಯುತ್ತಿದ್ದಂತೆಯೇ ನಮ್ಮ ಮೈನಗಳು ರೋಮಾಂಚನಗೊಂಡು ಫುಳಕಿತಗೊಳ್ಳುವುದಲ್ಲದೇ, ಇಂತಹ ಸೌಭಾಗ್ಯ ಪಡೆದ ಜೀವನವೇ ಧನ್ಯ ಎನ್ನುವ ಭಾವನೆ ನಮ್ಮಲ್ಲಿ ಮೂಡಿದರೆ ಅಚ್ಚರಿಯೇನಿಲ್ಲ ದೇವಾಲಯದ ಮುಂಭಾಗದಲ್ಲಿ ಶ್ರೀ ಮಹಾಗಣಪತಿ, ಈಶ್ವರ ಮತ್ತು ಹನುಮಂತನ ಸಣ್ಣ ದೇವಾಲಯಗಳನ್ನು ಆಧುನಿಕ ರೀತಿಯಲ್ಲಿ ಪುನರ್ನಿರ್ಮಿಸಲಾಗಿದೆ.

mari2ಕರ್ನಾಟಕದಲ್ಲಿ ಶೃಂಗೇರಿ ಶಾರದಾಂಬ, ಮೈಸೂರು ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ದೇವಿಯರಿಗೆ ಬಹಳ ಮಹತ್ವವಿದ್ದು, ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ದೇವಿಯರ ದೊಡ್ಡಕ್ಕ ಎಂದೇ ಪರಿಗಣಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿರಸಿಯ ಮಾರಿಕಾಂಬಾ ದೇವಾಲಯ ಬಹಲ ಶಕ್ತಿಯುತ ದೇವಿ ಎಂದೇ ನಂಬಲಾಗಿದ್ದು. ಆ ತಾಯಿಯ ದರ್ಶನ ಪಡೆದು. ಆಕೆಯ ಬಳಿ ನಮ್ಮೆಲ್ಲಾ ಸಂಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದಲ್ಲಿ ಖಂಡಿತವಾಗಿ ಆಕೆ ನಮ್ಮೆಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದೇ ಸಕಲ ಭಕ್ತರ ನಂಬಿಕೆಯಾಗಿದೆ. ಹಾಗಾಗಿ ಪ್ರತಿದಿನವೂ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.

ಶಿರಸಿಯಲ್ಲಿ ಮಾರಿಕಾಂಬೆ ಪ್ರತಿಷ್ಠಾಪನೆ ಆಗುವ ಹಿಂದಿನ ಕಥೆ ಬಹಳ ರೋಚಕವಾಗಿದೆ. ದ್ವಾರರಯುಗದಲ್ಲಿ ವಿರಾಟ ನಗರವಾಗಿತ್ತು ಎಂದೇ ನಂಬಲಾಗಿರುವ ಈಗಿನ ಹಾನಗಲ್ಲಿನಲ್ಲಿ ಧರ್ಮರಾಯನು ಈ ದೇವಿಯನ್ನು ಸ್ತುತಿಸಿದನು ಎಂದು ಮಹಾಭಾರತದಲ್ಲಿ ಹೇಳಲಾಗಿದ್ದರೆ, ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ.

ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಡುವುದು ಅಲ್ಲಿನ ಸಂಪ್ರದಾಯವಾಗಿರುತ್ತದೆ. ಅದೊಮ್ಮೆ ಕೆಲವು ಕಳ್ಳರು ಆ ಆಭರಣಗಳ ಪೆಟ್ಟಿಗೆಯನ್ನು ಅಪಹರಿಸಿ ಅದನ್ನು ಶಿರಸಿಗೆ ತಂದು, ಆಭರಣಗಳನ್ನು ಹಂಚಿಕೊಂಡ ನಂತರ ಅದರ ಜೊತೆಯಲ್ಲಿದ್ದ ವಿಗ್ರಹವನ್ನು ಅದೇ ಪೆಟ್ಟಿಗೆಯಲ್ಲಿಟ್ಟು ಅಲ್ಲಿದ ಕೆರೆಗೆ ಎಸೆಯುತ್ತಾರೆ. ಹೀಗೆ ದೇವಿ ಇದ್ದ ಕೆರೆ ಮುಂದೆ ದೇವಿಕೆರೆ ಎಂದೇ ಹೆಸರಾಗುತ್ತದೆ.

ಶಿರಸಿಯಲ್ಲಿದ್ದ ಬಸವ ಎಂಬ ಭಕ್ತರೊಬ್ಬರು, ಪ್ರತಿ ವರ್ಷವೂ ತಪ್ಪದೇ ಚಂದ್ರಗುತ್ತಿಯ ಜಾತ್ರೆಗೆ ಹೋಗುವ ಸಂಪ್ರದಾಯವನ್ನು ಮಾಡಿಕೊಂಡಿರುತ್ತಾರೆ. ಅದೊಮ್ಮೆ ಹಾಗೆ ಜಾತ್ರೆಗೆ ಹೊಗುವಾಗ ಕೆಲವರು ಅವರನ್ನು ತಡೆದು ದರೋಡೆ ಮಾಡಿದ್ದರಿಂದ ಬೇಸರಗೊಂಡು ಮುಂದಿನ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗದೆ ಶಿರಸಿಯ ತನ್ನ ಮನೆಯಲ್ಲಿಯೇ ದೇವಿಯ ಆರಾಧನೆ ಮಾಡುತ್ತಾನೆ. ಅಂದಿನ ರಾತ್ರಿ ದೇವಿ ದ್ಯಾಮವ್ವ ಆತನ ಕನಸಿನಲ್ಲಿ ಕಾಣಿಸಿಕೊಂಡು ನಾನು ನಿಮ್ಮೂರಿನ ಕೆರೆಯಲ್ಲಿಯೇ ಇದ್ದೇನೆ. ನನ್ನನ್ನು ಮೇಲೆತ್ತಿ ಪೂಜಿಸಿ ಎಂದು ಹೇಳಿದಂತಾಗುತ್ತದೆ. ಮರು ದಿನ ತಾನು ಕಂಡ ಕನಸನ್ನು ಆ ಊರಿನ ಪ್ರಮುಖರಿಗೆ ತಿಳಿಸಿ, ಅವರ ಸಮ್ಮುಖದಲ್ಲಿಯೇ ಬಸವನು ದೇವಿಯನ್ನು ಭಕ್ತಿಯಿಂದ ಸ್ತುತಿಸುತ್ತಾ ಆ ಕೆರೆಯನ್ನು ಮೂರು ಸುತ್ತು ಪ್ರದಕ್ಷಿಣಿ ಹಾಕುತ್ತಿದ್ದಂತೆಯೇ, ದೇವಿಯಿದ್ದ ಪೆಟ್ಟಿಗೆಯು ಕೆರೆಯಲ್ಲಿ ತೇಲುವುದನ್ನು ಕಂಡು ಅದನ್ನು ತೆರೆದು, ಅದರಲ್ಲಿದ್ದ ಎಲ್ಲಾ ಭಾಗಗಳನ್ನು ಸೇರಿಸಿದಾಗ ಸುಂದರವಾದ ದೇವಿಯ ವಿಗ್ರಹವಾಗುತ್ತದೆ.

ಅಲ್ಲಿನ ಸೋಂದಾ ಸಂಸ್ಥಾನದ ರಾಜರಾಗಿದ್ದ ಮಹಾರಾಜಾ ಸದಾಶಿವರಾವ್-2 ಅವರ ಬಳಿ ನಂದಿಕೇಶ್ವರ ಮಠದ ಸ್ವಾಮಿಗಳು ಆ ದೇವಿಯ ವಿಗ್ರಹವನ್ನು ಶಿರಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ, ಅವರ ಅಪ್ಪಣೆಯಂತೆ ಕ್ರಿ.ಶ. 1689ರಲ್ಲಿ, ಅರ್ಥಾತ್ ಶಾಲಿವಾಹನ ಶಕೆ 1611ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿ ಮಂಗಳವಾರದಂದು ದೇವಿಯನ್ನು ಪ್ರತಿಷ್ಠಾಪಿಸಿ ಅಲ್ಲೊಂದು ಸುಂದರವಾದ ದೇವಾಲಯವನ್ನು ಕಟ್ಟಲಾಗುತ್ತದೆ.

ಕೆಂಪು ಚಂದನದ ಕಲ್ಪನೆಯಿಂದ ಕಡೆದ ಅಷ್ಟಭುಜವುಳ್ಳ ಏಳು ಅಡಿ ಎತ್ತರದ ಕಲಾಪೂರ್ಣ ವಿಗ್ರಹ, ಕೆಂಪು ಮೈಬಣ್ಣ, ಮಂದಹಾಸದ ಮುಖಾರವಿಂದ, ಶಕ್ತಿ ಮತ್ತು ಹಸ್ತದಲ್ಲಿರುವ ಎಲ್ಲಾ ಆಯುಧಗಳಿಂದಲೂ ದೇವಿ ಪರಿಭೂಷಿತಳು. ಬಲಮುರಿ ಶಂಖವೂ ಮಾರಿಕಾಂಬೆಯ ಬಲಹಸ್ತವೊಂದರದಲ್ಲಿದೆ. ಶಿರಸಿಯ ವೈಭವಕ್ಕೆ ಮತ್ತು ಸಂಪನ್ಮೂಲಕ್ಕೆ ತಾಯಿಯ ಬಲಮುರಿಯೇ ಕಾರಣವೆಂದು ಅಲ್ಲಿನ ಸ್ಥಳೀಯರ ನಂಬಿಕೆಯಗಿದೆ.

mari10ಶಿರಸಿಯಲ್ಲಿ 2 ವರ್ಷಗಳಿಗೊಮ್ಮೆ ಮಾರ್ಚ್ ತಿಂಗಳಿನಲ್ಲಿ ಬಹಳ ಅದ್ದೂರಿಯಿಂದ ೯ ದಿನಗಳ ಕಾಲ ಜಾತ್ರೆಯನ್ನು ಆಚರಿಸಲಾಗುತ್ತದೆ. ಜಾತ್ರೆನಡೆಯುವ ಸಂದರ್ಭದಲ್ಲಿಯೇ ಹೋಳಿಹಬ್ಬ ಬರುವ ಕಾರಣ ಜಾತ್ರೆ ಇದ್ದ ವರ್ಷ ಕಾಮನ ಹುಣ್ಣಿಯೆನ್ನು ಇಲ್ಲಿ ಆಚರಿಸುವುದಿಲ್ಲ. ಈ ಶಿರಸಿ ಜಾತ್ರೆಯನ್ನು ಸ್ಥಳೀಯರು ಮಾರಿ ಜಾತ್ರೆ ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಉಳಿದೆಲ್ಲಾ ಜಾತ್ರೆಗಳಲ್ಲಿ ಮೂಲ ವಿಗ್ರಹಗಳು ದೇವಾಲಯದಲ್ಲಿಯೇ ಇದ್ದು ಅದರ ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿದರೆ, ಇಲ್ಲಿ ಮಾತ್ರಾ, 7 ಅಡಿ ಎತ್ತರದ ವಿಗ್ರಹವನ್ನೇ ಅಲಂಕಾರ ಸಮೇತ ಮದುವೆ ಮಾಡಿ ಮೆರವಣಿಗೆಯಲ್ಲಿ ಬಿಡಕಿ ಬೈಲಿಗೆ ತಂದು ಭಕ್ತರಿಗೆ ದೇವಿಯ ನಿಕಟ ದರ್ಶನ ನೀಡುವ ಸಂಪ್ರದಾಯ ಇಲ್ಲಿ ರೂಢಿಯಲಿದೆ. ವಜ್ರ, ನವರತ್ನ ಖಚಿತ ಸ್ವರ್ಣರತ್ನ, ಹಾರ, ನೂಪುರ, ಬೆಳ್ಳಿ, ಕಡಗಗಳು, 8 ಕೈಗಳು. ಒಂದೊಂದು ಕೈಗಳಲ್ಲೂ ಒಂದೊಂದು ವಿಶಿಷ್ಟ ಆಭರಣ ಹಿಡುದು ಗದ್ದುಗೆಯಲ್ಲಿ ವಿರಾಜಮಾನಳಾದ ಕೆಂಪು ಮುಖದ ಅರಳಿದ ಕಂಗಳ ಮಹಿಷ ಮರ್ಧಿನಿ ಭಕ್ತಾದಿಗಳ ಹೃನ್ಮನಗಳನ್ನು ಸೆಳೆಯುತ್ತಾಳೆ, 9 ದಿನಗಳ ಅದ್ದೂರಿಯ ಆಚರಣೆ, ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯನ್ನು ಪುನಃ ಗುಡಿದುಂಬಿಸಿ ಅಲ್ಲಿನ ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ.

mari6ಹೀಗೆ ಚಪ್ಪರಕ್ಕೆ ಬೆಂಕೆ ಹಚ್ಚುವ ಹಿಂದೆಯೂ ಒಂದು ಕಥೆಯಿದ್ದು, ಮಹಿಷಾಸುರನು ಸುಳ್ಳು ಹೇಳಿ ಮಾರಮ್ಮನನ್ನು ವಿವಾಹವಾಗಿರುತ್ತಾನೆ. ಈ ವಿಷಯ್ವನ್ನು ತಿಳಿದ ಆಕೆ ಮಹಿಷಾಸುರನನ್ನು ವಧಿಸಲು ಮುಂದಾದಾಗ, ಆಕೆಯಿಂದ ತಪ್ಪಿಸಿಕೊಳ್ಳಲು ರಾಕ್ಷಸ ಕೋಣದ ದೇಹದ ಒಳಗೆ ಸೇರಿಕೊಳ್ಳುತ್ತಾನೆ. ಆಗ ಕೋಣನ ಕತ್ತನ್ನು ಕಡಿದು ಅದನ್ನು ತನ್ನ ಕೊರಳಿಗೆ ಹಾಕಿಕೊಂಡು ರೋಷಾವೇಶದಿಂದ ತಾಯಿ ಮಾರಿಕಾಂಬೆ ಮಹಿಷಾಸುರನ ಮರ್ಧನ ಮಾಡುತ್ತಾಳೆ. ಅದರ ಸಾಂಕೇತಿಕವಾಗಿಯೇ ಅಂದಿನಿಂದ ಪ್ರತೀವರ್ಷವೂ ಈ ದೇವಾಲಯದ ವತಿಯಿಂದಲೇ ಬಲಿಷ್ಠ ಕೊಣವೊಂದನ್ನು ಸಾಕಿ ಜಾತ್ರೆಯ ಸಮಯದಲ್ಲಿ ಕಡಿದು ದೇವಿಗೆ ಅರ್ಪಿಸುವ ಸಂಪ್ರದಾಯ ನೂರಾರು ವರ್ಷಗಳ ಕಾಲ ರೂಢಿಯಲ್ಲಿತ್ತು. 1963ರಲ್ಲಿ ಸಾಗರದ ಶ್ರೀ ಶ್ರೀಧರ ಸ್ವಾಮಿಗಳು ದೇವಿಯ ಉಗ್ರತೆಯನ್ನು ಕಡಿಮೆ ಮಾಡಿ ಪ್ರಾಣಿ ಬಲಿ ನಿಲ್ಲಿಸಿದ್ದಲ್ಲದೇ, ಮಾರಿಗೆ ಬಿಟ್ಟ ಕೋಣನನ್ನು ಜಾತ್ರೆಗೆ ಮೊದಲು ಊರಿನ ತುಂಬಾ ಸುತ್ತಿಸಿ ಜಾತ್ರೆಯ ಸಮಯಯಲ್ಲಿ ಕೋಣನ ಬಲಿಯ ಬದಲಾಗಿ ಸಾಂಕೇತಿಕವಾಗಿ ಸಾತ್ವಿಕ ಬಲಿರೂಪದಲ್ಲಿ ಬೂದಕುಂಬಳಕಾಯಿಯನ್ನು ನೀಡುವ ಸಂಪ್ರದಾಯವನ್ನು ಜಾರಿಗೆ ತಂದರು ಎಂದು ಸ್ಥಳೀಯರು ಹೇಳಿದರೆ, ಇನ್ನೂ ಕೆಲವರು ಚುಚ್ಚು ಮದ್ದಿನ ಸೂಜಿಯಿಂದ ಮರಿಗೆ ಬಿಟ್ಟ ಕೋಣದ ರಕ್ತವನ್ನು ಹೀರಿ ದೇವಿಗೆ ಅರ್ಪಿಸಲಾಗುತ್ತದೆ ಎಂದೂ ಹೇಳುತ್ತಾರೆ. ಅಂದಿನಿಂದ ಉಳಿದ ದೇವಿಯ ಜಾತ್ರೆಗಳಂತೆಯೇ ಇಲ್ಲಿ ಪ್ರಾಣಿ ಬಲಿ ಸಂಪೂರ್ಣವಾಗಿ ನಿಷೇಧವಾಗಿದೆ.

ಮತ್ತೊಂದು ಜನಪದ ಕಥೆಯಂತೆ ವೇದಾಧ್ಯಯನ ಕಲಿಯುವ ಆಸೆಯಿಂದ ಅನ್ಯಜಾತಿಯ ಹುಡುಗನೊಬ್ಬ ಸುಳ್ಳು ಹೇಳಿ ಮೋಸದಿಂದ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗಿ ಸಾತ್ವಿಕವಾಗಿ ಸುಖಃ ಸಂಸಾರವನ್ನು ನಡೆಸುತ್ತಿರುತ್ತನೆ. ಅದೊಮ್ಮ ಜಿಹ್ವಾಹಂಬಲವನ್ನು ಮೀರಲಾಗದೇ, ಮಾಂಸವನ್ನು ತಿನ್ನುವಾಗ ತನ್ನ ಹೆಂಡತಿಯ ಕೈಯಲ್ಲಿ ಸಿಕ್ಕಿ ಬಿದ್ದು ಆಕೆಯಿಂದ ಹತನಾಗುತ್ತಾನೆ. ಇದರ ಸಂಕೇತಿಕವಾಗಿಯೇ, ಜಾತ್ರಾಮಹೋತ್ಸವದ ಆರಂಭದ ಮೊದಲು ದೇವಿಗೆ ರಕ್ತವನ್ನು ತಿಲಕವಾಗಿ ಇಟ್ಟು ನಂತರ ದೇವಿಯನ್ನು ಬಿಡಕಿ ಬೈಲಿನ ಗದ್ದುಗೆಗೆ ತಂದು 9 ದಿನಗಳ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡುವ ಸಂಪ್ರದಾಯವಿದೆ.

ಜಾತ್ರೆ ಮುಗಿದು 40 ದಿನಗಳ ದೇವಿ ಅಶೌಚಳಾಗಿದ್ದರಿಂದ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವ ಕಾರಣ, ಈ ಸಮಯದಲ್ಲಿ ಭಕ್ತರಿಗೆ ದೇವಾಲಯಕ್ಕೆ ಪ್ರವೇಶವಿರುವುದಿಲ್ಲ. ಆ ಸಮಯದಲ್ಲಿ ವಿಗ್ರಹವನ್ನು ಧಾರ್ಮಿಕ ಆಚರಣೆಯ ಮೂಲಕ ನೀರಿನಲ್ಲಿ ಮುಳುಗಿಸಿಟ್ಟು 40 ದಿನಗಳು ಮುಗಿದು ಸೂತಕ ಕಳೆದ ಮೇಲೆ ಮತ್ತೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಎಂದಿನಂತೆ ಪೂಜೆ ಪುನಸ್ಕಾರಗಳನ್ನು ಅದ್ದೂರಿಯಿಂದ ಮಾಡಲಾಗುತ್ತದೆ.

ಶಿರಸಿಯ ಜಾತ್ರೆಗೆ ಕೇವಲ ಸ್ಥಳೀಯರಲ್ಲದೇ, ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಸೇರಿದಂತೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ಜಾತ್ರೆಯಲ್ಲಿ ಜನಸಾಗರವನ್ನು ಕಾಣಬಹುದಾಗಿದೆ. ಎಲ್ಲಿ ನೋಡಿದರಲ್ಲಿ ಜನಜಂಗುಳಿ, ಕಣ್ಣು ಕುಕ್ಕುವ ವಿದ್ಯುತ್ ದೀಪಗಳು, ವಿವಿಧ ಪೌರಾಣಿಕ ನಾಟಕಗಳು, ಯಕ್ಷಗಾನ ಪ್ರದರ್ಶನಗಳು ಆಸ್ತಿಕರ ಮನಸ್ಸೆಳ್ಯುತ್ತವೆ. ಇನ್ನು ಜಾತ್ರೆಗೆ ಬರುವ ಮಕ್ಕಳ ಆಕರ್ಷಣೆಗಾಗಿ ವಿವಿಧ ಆಟಿಕೆಗಳು, ಕಡಲೇ ಪುರಿ ಬೆಂಡು ಬತ್ತಾಸು ಬಾಯಿ ಸಿಹಿ ಮಾಡುವ ಮಿಠಾಯಿ, ತರಹೇವಾರಿ ತಿಂಡಿಗಳ ಜೊತೆ ಸರ್ಕಸ್ ಕಂಪೆನಿಗಳು ಮನರಂಜನೆಯನ್ನು ನೀಡಿದರೆ ಹೆಂಗಳೆಯರಿಗಾಗಿಯೇ ಬಳೆ, ಓಲೆ, ಚೌರೀ, ಕುಚ್ಚುಗಳಲ್ಲದೇ ವಿವಿಧ ರೀತಿಯ ಆಭರಣಗಳ ಸಾಲು ಸಾಲು ಅಂಗಡಿಗಳನ್ನು ಅಲ್ಲಿ ಕಾಣಬಹುದಾಗಿರುತ್ತದೆ. ಜಾತ್ರೆಯ ಸಮಯದಲ್ಲಿ ಭಕ್ತಾದಿಗಳ ಹಸಿವನ್ನು ನೀಗಿಸಲು ಖಾನಾವಳಿಗಳು, ದರ್ಶಿನಿಗಳು ಸಹಾ ಅಲ್ಲಿ ಸಿದ್ಧವಾಗಿರುತ್ತದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಬೆಂಗಳೂರಿನಿಂದ ಸುಮಾರು 400 ಕಿಮೀ, ಹುಬ್ಬಳ್ಳಿಯಿಂದ ಕೇವಲ 103 ಕಿಮೀ ಗೋಕರ್ಣದಿಂದ 83 ಕಿಮೀ ದೂರದಲ್ಲಿರುವ ಶಿರಸಿಗೆ ಬಂದು ಶ್ರೀ ಮಾರಿಕಾಂಬೆಯ ದರ್ಶನ ಪಡೆದು ದೊಡ್ಡಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

WhatsApp Image 2022-01-17 at 9.52.35 PMಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ ತಾಯಿ ಬನಶಂಕರಿಯಾಗಿ ನೆಲೆಸಿರುವ ಶ್ರೀ ಕ್ಷೇತ್ರವೇ ಬದಾಮಿ. ಈ ಮಹಾತಾಯಿಯನ್ನು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ಹತ್ತಾರು ಹೆಸರುಗಳಿಂದ ಭಕ್ತರು ಪೂಜಿಸುತ್ತಾರೆ. ನವದುರ್ಗೆಯರಲ್ಲಿ 6ನೇ ಅವತಾರವೇ ಬನಶಂಕರಿ ಎಂದೂ ಹೇಳಲಾಗುತ್ತದೆ.

ಈ ಪ್ರದೇಶದಲ್ಲಿ ಸರಸ್ವತಿ ಹೊಳೆ ಹರಿಯುವ ಕಾರಣ ಸುಂದರವಾದ ಮತ್ತು ದಟ್ಟವಾದ ಅರಣ್ಯ ಪ್ರದೇಶಗಳಿಂದ ಆವರಸಿದ್ದು, ಎಲ್ಲೆಲ್ಲೂ ತೆಂಗು, ಬಾಳೆ ಮತ್ತು ವಿಳ್ಳೇದೆಲೆ ಹಂಬುಗಳ ತೋಟಗಳ ಮಧ್ಯೆ ಇರುವ ಈ ವನಶಂಕರಿ, ಕಾಡುಗಳ ದೇವತೆ, ಅರ್ಥಾತ್ ಬನಶಂಕರಿ ದೇವಿ ಈ ಪ್ರದೇಶದಲ್ಲಿ ನೆಲೆಗೊಳ್ಳುವುದರದ ಹಿಂದೆ ಒಂದು ಪೌರಾಣಿಕ ಕಥೆಯಿದೆ.

ಬಹಳ ಹಿಂದೆ ದುರ್ಗಮಾಸುರ ಎಂಬ ರಕ್ಕಸನೊಬ್ಬನು ನಾಲ್ಕೂ ವೇದಗಳನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಹಿಮಾಲಯಕ್ಕೆ ಹೋಗಿ ನಿರಾಹಾರನಾಗಿ ಕೇವಲ  ಗಾಳಿಯನ್ನು ಸೇವಿಸುತ್ತ ಬ್ರಹ್ಮನ ಕುರಿತು ಘನ ಘೋರವಾದ  ತಪಸ್ಸನ್ನು ಮಾಡಿದ.  ಅವನ ತಪ್ಪಸ್ಸಿಗೆ ಮೆಚ್ಚಿದ  ಬ್ರಹ್ಮ ದೇವರು ಪ್ರತ್ಯಕ್ಷನಾದಾಗ, ವೇದಗಳನ್ನು ವಶಪಡಿಸಿಕೊಳ್ಳುವ ವರವನ್ನು ಕೇಳಿದಾಗ, ಬ್ರಹ್ಮನೂ ಕೂಡಾ ಯಾವುದೇ ಮರು ಮಾತಿಲ್ಲದೇ, ತಥಾಸ್ತು ಎಂದ ಕೂಡಲೇ, ಭೂಲೋಕದಲ್ಲಿ ಅಲ್ಲೋಲ ಕಲ್ಲೋಲ ಏರ್ಪಟ್ಟಿತು.  ಪ್ರತಿನಿತ್ಯ  ನಡೆಯುತ್ತಿದ್ದ ದೇವತಾ ಕಾರ್ಯಗಳೆಲ್ಲವೂ  ನಿಂತು ಹೋಗಿ, ಎಲ್ಲಾ ಋಷಿ ಮುನಿಗಳು, ಸಾಧು ಸಂತರರಿಗೆ ತಾವು ಕಲಿತಿದ್ದ  ವೇದ ಮಂತ್ರಗಳೆಲ್ಲವೂ ಮರೆತು ಹೋಗಿ  ಯಜ್ಞ ಯಾಗಾದಿಗಳು ಅಕ್ಷರಶಃ ನಿಂತು ಹೋದವು. ಹೀಗೆ   ಯಜ್ಞ ಯಾಗಾದಿಗಳು ನಿಂತ ಕಾರಣ,  ದೇವತೆಗಳಿಗೂ ಸಿಗುತ್ತಿದ್ದ ಹವಿಸ್ಸು ನಿಂತು ಹೋಗಿ ದೇವತೆಗಳ ಶಕ್ತಿಯೂ ಕ್ರಮೇಣ ಕುಂದತೊಡಗಿದ ಪರಿಣಾಮ  ಭೂಲೋಕದಲ್ಲಿ ಅರಾಜಕತೆ ಉಂಟಾಗಿದ್ದಲ್ಲದೇ,  ಮಳೆ ಬೆಳೆ ಇಲ್ಲದೇ  ಕ್ಷಾಮ ಉಂಟಾಗಿ ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ಬಂದೊದಗಿತು.

ಭೂಲೋಕದ ಮನುಷ್ಯರು, ಪಶು ಪಕ್ಷಿಗಳು ಹಸಿವು ಮತ್ತು ನೀರಿನಿಂದ ತತ್ತರಿಸಿ ಪ್ರಾಣ ಬಿಡತೊಡಗಿದರೆ, ಆ ರಾಕ್ಷಸನ ವಿರುದ್ಧ ಹೋರಾಡಲೂ ಶಕ್ತಿ ಇಲ್ಲದ  ದೇವಾನು ದೇವತೆಗಳೂ ದಿಕ್ಕೇ ತೋಚದೇ ಸಿಕ್ಕ ಸಿಕ್ಕ ಕಡೆ ಅಡಗಿ ಕುಳಿತುಕೊಂಡರು. ಇವೆಲ್ಲವನ್ನೂ ಗಮನಿಸಿದ ಋಷಿ ಮುನಿಗಳು ಒಂದಾಗಿ ತಮ್ಮೆಲ್ಲಾ  ಅಳಿದುಳಿದ ಶಕ್ತಿಗಲನ್ನು ಕ್ರೋಢಿಕರಿಸಿ ಹಿಮಾಲಯಕ್ಕೆ ಹೋಗಿ ಸಮಭಾವ ಮತ್ತು ಸಮಚಿತ್ತದಿಂದ ಲೋಕಕಲ್ಯಾಣಕ್ಕಾಗಿ   ಶಕ್ತಿ ದೇವಿಯನ್ನು ಕುರಿತು ನಿರಾಹಾರಿಗಳಾಗಿ  ಕಠಿಣ ತಪಸ್ಸನ್ನು  ಆಚರಿಸಿದರು.  ಅವರೆಲ್ಲರ ತಪ್ಪಸ್ಸಿಗೆ ಮೆಚ್ಚಿ ಪಾರ್ವತಿಯು  ಪ್ರತ್ಯಕ್ಷಳಾದಾಗ, ಭೂಲೋಕದಲ್ಲಿ  ಹಸಿವಿನಿಂದ ಹಲುಬಿ ನರಳುತ್ತಿದ್ದ ನರರು,  ಪ್ರಾಣಿ, ಪಶು ಪಕ್ಷಿಗಳ ಯಾತನೆಯನ್ನು ವಿವರಿಸುತ್ತಿದ್ದಾಗ,  ತಾಯಿ ಹೃದಯದ ಪಾರ್ವತೀ ದೇವಿಯ ಕರುಳು ಚುರುಕ್ ಎಂದಿದ್ದಲ್ಲದೇ, ಅವಳಿಗೇ ಅರಿವಿಲ್ಲದಂತೆ  ಆಕೆಯ ಕಣ್ಣಿನಿಂದ ಅಗಾಧವಾಗಿ  ಕಣ್ಣಿರು ಹರಿದು, ಅದೇ  ಭೋರ್ಗೆರೆವ ಮಳೆ ರೂಪದಲ್ಲಿ ಭೂಲೋಕದಲ್ಲಿ ಧಾರಾಕಾರವಾಗಿ ಸುರಿದ ಪರಿಣಾಮ ಎಲ್ಲಾ ಕೆರೆ ಕಟ್ಟೆಗಳು ನದಿಗಳು ಮತ್ತೆ  ಮೈದುಂಬಿ ಹರಿಯತೊಡಗಿದವು. ಪಾರ್ವತಿ ದೇವಿಯು ಪ್ರಕೃತಿಯ ರೂಪ ಧರಿಸಿ ಎಲ್ಲ ರೀತಿಯ ಸಸ್ಯ ಹಾಗೂ ಹಣ್ಣುಗಳನ್ನು ಚಿಗುರಿಸಿ ಎಲ್ಲರಿಗೂ ಆಹಾರ ನೀಡಿದಳು. ಹೀಗೆ ಪ್ರತಿಯೊಬ್ಬರ ಹಸಿವನ್ನು ನೀಗಿಸಲು  ಶಾಕಾಹಾರದ ಆಹಾರವನ್ನು ನೀಡಿದ್ದ ಕಾರಣ ಆ  ದೇವಿಗೆ ಶಾಕಾಂಬರಿ  ಎಂಬ ಹೆಸರು ಬಂದಿತು ಎನ್ನುತ್ತದೆ.

ಮತ್ತೊಂದು ಪುರಾಣದ ಪ್ರಕಾರ, ಬಹಳ ಹಿಂದೆ ಈ ಪ್ರದೇಶವು ಭಯಂಕರ ಕ್ಷಾಮದಿಂದ ತತ್ತರಿಸಿ, ಪಶು ಪಕ್ಷಿ ಪ್ರಜೆಗಳಾದಿಗಳೆಲ್ಲರೂ ನೀರಿಲ್ಲದೇ ಪರಿತಪಿಸುತ್ತಿದ್ದಾಗ, ದೇವಾನುದೇವತೆಗಳೆಲ್ಲರೂ ಸೇರಿ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ್ನು ಕಂಡು ಈ ಸಮಸ್ಯೆಯಿಂದ ಪಾರು ಮಾಡಲು ಎಂದು ಪ್ರಾರ್ಥಿಸಿದರಂತೆ. ಅದಕ್ಕೆ ಆ ತ್ರಿಮೂರ್ತಿಗಳು ಈ ಸಮಸ್ಯೆಗೆ ಬನಶಂಕರಿದೇವಿ ಮಾತ್ರಾ ಪರಿಹಾರವನ್ನು ನೀಡಬಲ್ಲಳು ಎಂದು ಹೇಳಿ ಎಲ್ಲರೂ ಸೇರಿ ತಿಲಕಾರಣ್ಯ ಪ್ರದೇಶಕ್ಕೆ ಬಂದು ತಾಯಿ ಬನಶಂಕರಿಯನ್ನು ಕುರಿತು ತಾಯಿ, ಈ ಪ್ರದೇಶದಲ್ಲಿ ಮಳೆ ಬೆಳೆಯಿಲ್ಲದೇ, ಯಜ್ಞಯಾಗಾದಿಗಳು ಇಲ್ಲದೇ, ಬದುಕಲು ಬಹಳ ಕಷ್ಟವಾಗಿದೆ. ದಯವಿಟ್ಟು ಈ ಸಮಸ್ಯೆಯಿಂದ ಪಾರು ಮಾಡು ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾರೆ. ಅವರೆಲ್ಲರ ಪ್ರಾರ್ಥನೆಯಿಂದ ಪ್ರಸನ್ನಳಾದ ಬನಶಂಕರಿ ದೇವಿ ಪ್ರತ್ಯಕ್ಷಳಾಗಿ ಜನರ ನೀರಿನ ದಾಹವನ್ನು ತೀರಿಸಿದ್ದಲ್ಲದೇ, ತನ್ನ ತನುವಿನ ಶಾಖದಿಂದ ಕಾಯಿಪಲ್ಲೆಗಳನ್ನು ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹಾಗಾಗಿ ಈ ದೇವಿಗೆ ಶಾಕಾಂಬರಿ ಎಂದೂ ಕರೆಯಲಾಗುತ್ತದೆ ಎನ್ನುತ್ತದೆ.

ಮುಂದೆಂದೂ ಈ ಪ್ರದೇಶ ನೀರಿಲ್ಲದೇ ಕ್ಷಾಮಕ್ಕೆ ಈಡಾಗಬಾರದೆಂದು ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಮುಂತಾದ ಅನೇಕ ತೀರ್ಥಕೊಳಗಳನ್ನು ಸೃಷ್ಟಿ ಮಾಡಿದ ಕಾರಣ ಈ ಪ್ರದೇಶ ಸದಾ ನಂದನವನವಾಗಿ ನಿತ್ಯಹದ್ವರ್ಣಗಳಿಂದ ಕಂಗೊಳಿಸುವಂತಾಗಿದೆ.

bana1ನಂತರ  ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿದ್ದ ಈ ದೇವಸ್ಥಾನವನ್ನು ಮುಂದೆ 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಜೀರ್ಣೋದ್ಧಾರ ಮಾಡಿರುವ ಈ ದೇವಾಲಯದಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಬನಶಂಕರಿಯ ವಿಗ್ರಹವಿದ್ದು ಪ್ರತೀ ದಿನವೂ ನೂರಾರು ಭಕ್ತಾದಿಗಳು ಆಕೆಯ ದರ್ಶನ ಪಡೆದು ಪುನೀತರಾಗುತ್ತಾರೆ.

ಪ್ರತಿ ವರ್ಷ ಪುಷ್ಯ ಮಾಸದ ಹುಣ್ಣಿಮೆಯಂದು (ಜನವರಿ ತಿಂಗಳಿನಲ್ಲಿ) ಅಂದರೆ ಬನದ ಹುಣ್ಣಿಮೆಯಂದು  ಇಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ  ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದ್ದು, ಕೇವಲ ಕರ್ನಾಟಕ ಮಾತ್ರವಲ್ಲ್ದೇ ನೆರೆಯ ಮಹಾರಾಷ್ಟ್ರ ಮತ್ತು ದೇಶಾದ್ಯಂತ ಹರಿದು ಹಂಚಿಹೋಗಿರುವ ಆಕೆಯ ಭಕ್ತರು ಈ ಜಾತ್ರೆಗೆ ಬಂದು ತಾಯಿಯ ದರ್ಶನ ಪಡೆದು ಪ್ರಸನ್ನರಾಗುತ್ತಾರೆ.

WhatsApp Image 2022-01-17 at 9.52.35 PMಈ ಬನಶಂಕರಿ ಜಾತ್ರೆಯ ಅರಂಭವಾಗುವ ಹತ್ತು ದಿನಗಳ ಮುಂಚಿತವಾಗಿಯೇ ಇಲ್ಲಿ ಸಂಭ್ರಮ ಸಡಗರಗಳು ಪ್ರಾರಂಭವಾಗುತ್ತದೆ. ಈ ಜಾತ್ರೆಯ ಸಮಯದಲ್ಲಿ ದೇವಾಲಯ ಮತ್ತು ಇಡೀ ಬದಾಮಿ ಪಟ್ಟಣವನ್ನು ಬಗೆ ಬಗೆಯ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸುವುದು ಇಲ್ಲಿನ ವಿಶೇಷವಾಗಿದೆ. ಈ ರಥೋತ್ಸವದ ಹಿಂದಿನ ದಿನ ಪಲ್ಯದ ಹಬ್ಬ (ಪಲ್ಲೇದ ಹಬ್ಬ) ಅರ್ಥಾತ್ ತರಕಾರಿ ಉತ್ಸವ ಎಂದು ಆಚರಿಸುತ್ತಾರೆ. ಅಂದು ತಾಯಿ ಬನಶಂಕರಿಗೆ 108 ಬಗೆಯ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

rathaಬಾದಾಮಿಯ ಬನಶಂಕರಿಯ ರಥ ಅರ್ಥಾತ್ ತೇರನ್ನು ಎಳೆಯುವ ಮೂಲಕ  ಆರಂಭವಾಗುವ ಅದ್ದೂರಿಯ ಜಾತ್ರೆಯ ಸಂಭ್ರಮ ಸಡಗರಗಳು ಸುಮಾರು ಮೂರು ವಾರಗಳ ಕಾಲ  ಯಾವುದೇ ಧರ್ಮ, ಜಾತಿಗಳ ಹಂಗಿಲ್ಲದೇ ತಂಡೋಪ ತಂಡದಲ್ಲಿ ಬಂದು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.  ಜಾತ್ರೆ ನಡೆಯುವ  ಸಂದರ್ಭದಲ್ಲಿ ಭಕ್ತಾದಿಗಳ ಮನರಂಜಿಸಲು ನಾನಾ ವಿಧಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

bana2ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಸುಮಾರು 5 ಅಡಿ ಎತ್ತರವಿರುವ, ಕಪ್ಪು ಶಿಲೆಯ ದೇವಿಗೆ ಅಷ್ಟ ಭುಜ, ಕೈಗಳಿವೆ. ಬಲಗೈ ನಲ್ಲಿ ಖಡ್ಗ, ಗಂಟೆ, ತ್ರಿಶೂಲ ಹಾಗು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಟೇ ಇವೆ. ಈ ದೇವಿ ತ್ರಿನೇತ್ರೆ. ಬನಶಂಕರಿ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಹಾಗು ಮಹಾ ಸರಸ್ವತಿ ಎಂತಲೂ ಕರೆಯುತ್ತಾರೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತ ಎಡಗೈಯು ಶೌರ್ಯದ ಸಂಕೇತವಾಗಿದೆ.

bana4ದೇವಸ್ಥಾನದ ಶಿಖರವು ಚೌಕ ಕೋನಾಕಾರವಾಗಿ ಹಂತ ಹಂತವಾಗಿ ಮೇಲೆರುತ್ತಾ ಹೋಗಿದೆ. ಬೇರೆಲ್ಲಾ ದೇವಾಲಯದ ಗೋಪುರದಂತೆ  ಇಲ್ಲಿ ಯಾವುದೇ ದೇವರುಗಳ ವಿಗ್ರಹಗಳು ಇಲ್ಲದಿರುವುದು ಇಲ್ಲಿನ ವಿಶೇಷವಾಗಿದೆ  ಈ ದೇವಾಲಯಕ್ಕೆ ನಾಲ್ಕೂ  ದಿಕ್ಕಿನಲ್ಲಿ ದ್ವಾರಗಳು ಇದ್ದು ದೇವಸ್ಥಾನದ ಆವರಣದಲ್ಲಿ ನಾಲ್ಕು ಸುಂದರವಾಗಿ ವೈಶಿಷ್ಟ್ಯವಾಗಿ ಇರುವ ಎಣ್ಣೆ ಕಂಬ ಎಂದು ಕರೆಯಲಾಗುವ ದೀಪಸ್ತಂಭಗಳು ಭಕ್ತರ ಮನಸ್ಸನ್ನು ಸೆಳೆಯುತ್ತವೆ.  ಕಾರ್ತಿಕ ಮಾಸದಲ್ಲಿ ಈ ದೀಪ ಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗುತ್ತಾರೆ.

bana3ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳು ದೇವಾಲಯದ ಎದುರಿಗಿರುವ  360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸುತ್ತಲೂ ಇರುವ ಅರವಟ್ಟಿಗೆಯಲ್ಲಿ ಬಿಡಾರ ಹೂಡುತ್ತಾರೆ. ಹಬ್ಬದ ದಿನ,   ಭಕ್ತಿಯಿಂದ ದೇವಿಯನ್ನು ಪೂಜಿಸುತ್ತಾರೆ. ಶ್ರದ್ಧಾ ಭಕ್ತಿಗಳಿಂದ  ಈ ದೇವಿಗೆ ಶರಣಾದಲ್ಲಿ ಅವರ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬ ನಂಬಿಕೆ ಇರುವ ಕಾರಣ ವರ್ಷಕ್ಕೊಮ್ಮೆ ನಡೆಯುವ  ಈ ಜಗದ್ವಿಖ್ಯಾತ ಬನಶಂಕರಿ ಜಾತ್ರೆಗೆ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ.

ಬಾಗಲಕೋಟೆಯಿಂದ 40 ಕಿ.ಮೀ, ಹುಬ್ಬಳ್ಳಿಯಿಂದ 125 ಕಿ.ಮೀ ಹಾಗೂ ಬೆಂಗಳೂರಿನಿಂದ 495 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಬಾದಾಮಿಗೆ  ಹೋಗಲು, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಸರ್ಕಾರಿ ಬಸ್ಸುಗಳು ಸೇವೆಯಿದೆ. ಅದೂ ಅಲ್ಲದೇ ರಸ್ತೆಯೂ ಸಹಾ ಅತ್ಯುತ್ತಮವಾಗಿರುವ ಕಾರಣ ಬಹುತೇಕ ಭಕ್ತರು ತಮ್ಮ ಸ್ವಂತ ವಾಹನಗಳಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.

ban5ಬದಾಮಿಗೆ ಬಂದು ಬನಶಂಕರಿಯ ದರ್ಶನ ಪಡೆದ ನಂತರ ಭಕ್ತರ ಹಸಿವನ್ನು ನೀಗಿಸಲು ಪ್ರಸಾದದ ವಿತರಣೆಯ ವ್ಯವಸ್ಥೆ ಇದ್ದರೂ, ಅವೆಲ್ಲಕ್ಕಿಂತಲೂ ಮಿಗಿಲಾಗಿ  ದೇವಸ್ಥಾನದ ಎದುರಿಗಿನ ಕಲ್ಯಾಣಿಯ ತಟದಲ್ಲಿರುವ ಅರವಟ್ಟಿಕೆಗಲ್ಲಿ ಕುಳಿತು ಭಕ್ತರ ಹಸಿವನ್ನು ನೀವಾರಿಸಲು ಕುಳಿತಿರುವ ಈ ಪ್ರೀತಿಯ ಅನ್ನಪೂರ್ಣೆಯಂತಹ  ತಾಯಂದಿರ ಅಕ್ಕರೆಯ ಕೈ ಅಡುಗೆಯ ರೊಟ್ಟಿ, ಕಾಯಿ ಪಲ್ಲೆ,  ಕಾಳು ಪಲ್ಲೇ,  ಅನ್ನಾ ಸಾಂಬಾರ್ ಮೊಸರಿನ   ಸವಿಯನ್ನು ಅನುಭವಿಸಿದವರಿಗೇ ಗೊತ್ತು ಅದರ ಮಜ.

ಇನ್ನೇಕೆ ತಡಾ, ನೆನ್ನೆ ತಾನೇ ಬನದ ಹುಣ್ಣಿಮೆಯ ಜಾತ್ರೆ ಆರಂಭವಾಗಿದ್ದು ಇನ್ನೂ ಒಂದೆರಡು ವಾರಗಳ ಕಾಲ ಜಾತ್ರೆಯ ಸಡಗರ ಸಂಭ್ರಮಗಳು ಇರುವುದರಿಂದ ಸಮಯ ಮಾಡಿಕೊಂಡು ತಾಯಿ ಬನಶಂಕರಿಯ ದರ್ಶನ ಪಡೆದು  ದೇವಿಯ ಕೃಪಾಶೀರ್ವಾದ ಪಡೆದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರಿ?

ನಿಮ್ಮವನೇ ಉಮಾಸುತ ​