ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಸಂಕಟ ಬಂದಾಗ ವೆಂಕಟರಮಣ

ತಾನೊಬ್ಬ ಮಾಸ್ ಲೀಡರ್ ಎನ್ನುವ ಹುಂಬತನದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುಲಭವಾಗಿ ಗೆಲ್ಲಲು ಒಂದು ಸುರಕ್ಷಿತ ಕ್ಷೇತ್ರವಿಲ್ಲವೇ? ಮಾಂಸ ಸೇವಿಸಿ ಹಿಂದೂ ಶ್ರೀಕ್ಷೇತ್ರಗಳಿಗೆ ಭೇಟಿ ನೀಡುವ ಸಿದ್ದು, ಕೋಲಾರ ಕ್ಷೇತ್ರ ಸುರಕ್ಷಿತವಲ್ಲಾ ಎಂದು ಎರಡನೇ ಟಿಕೆಟ್ ಗಳಿಸಿಕೊಳ್ಳಲು, ತಮ್ಮೂರಿನ ದೇವತೆಯು ಮೊರೆ ಹೊಕ್ಕಿರುವುದು, ಯಾಕೋ ಕಾಂತಾರ ಸಿನಿಮಾದಲ್ಲಿನ ಧಣಿ, ದೈವ ನರ್ತಕ ಗುರವನಿಗೆ ಆಮಿಷವೊಡ್ಡಿ ತಾನು ಹೇಳಿದಂತೆ ದೈವ ನುಡಿಯಬೇಕೆಂದು ತಾಕೀತು ಮಾಡಿದಂತಿದೆ ಎನಿಸುತ್ತಿದೆ ಅಲ್ವೇ?… Read More ಸಂಕಟ ಬಂದಾಗ ವೆಂಕಟರಮಣ

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಅತ್ಯಂತ ಸುಭಿಕ್ಷವಾದ ಕರ್ನಾಟಕ ರಾಜ್ಯವನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ಪರಸ್ಪರ ತೂ.. ತೂ.. ಮೈ.. ಮೈ.. ಎಂದು ಆರೋಪಿಸುತ್ತಿರುವುದರಿಂದ ಹಾಳಾಗಿ ಹೋಗುತ್ತಿರುವುದು ಕರ್ನಾಟಕ ಮತ್ತು ಕನ್ನಡಿಗರ ಮಾನ ಅಲ್ವೇ?… Read More ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಈ ಸಾವಿಗೆ ಹೋಣೆಗಾರರು ಯಾರು?

ಇಂದು ಬೆಳ್ಳಂಬೆಳಿಗ್ಗೆ ವ್ಯಾಯಾಮವನ್ನು ಮುಗಿಸಿ, ಏನಪ್ಪಾ ಇವತ್ತಿನ ವಿಷಯ ಎಂದ ಮೊಬೈಲ್ನಲ್ಲಿ ವಾರ್ತೆಗಳನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು. ಕೆಲ ದಿನಗಳವರೆಗೂ ಚಿಕ್ಕಮಗಳೂರಿನ ಹೊರಗೀನಾಚೆ ಆಷ್ಟೇನೂ ಪರಿಚಯವಿರದಿದ್ದ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದ ಶ್ರೀ ಎಸ್.ಎಲ್. ಧರ್ಮೇಗೌಡ ಅವರು ನೆನ್ನೆ ರಾತ್ರಿ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಓದಿ ನಿಜಕ್ಕೂ ಬೇಸರವೆನಿಸಿತು. ಮೂಲತಃ ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾಗಿದ್ದ, ಬೀರೂರಿನ ಮಾಜೀ ಶಾಸಕ ಲಕ್ಷ್ಮಯ್ಯನವರ ಪುತ್ರರಾಗಿ ರಾಜಕೀಯ… Read More ಈ ಸಾವಿಗೆ ಹೋಣೆಗಾರರು ಯಾರು?