ಮನೆಯಲ್ಲಿರುವ ಹಿರಿಯರು

ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ… Read More ಮನೆಯಲ್ಲಿರುವ ಹಿರಿಯರು

ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಅರೇ ಇದೇನಿದು ಇಂತಹ ವಿಲಕ್ಷಣ ಮತ್ತು ಹೃದಯವಿದ್ರಾವಕ ಶೀರ್ಷಿಕೆ ಅಂದುಕೊಳ್ತಾ ಇದ್ದೀರಾ? ಖಂಡಿತವಾಗಿಯೂ ಇದು ವಿಲಕ್ಷಣವಾಗಿರದೇ ಇಂದಿನ ಜೀವನದ ಕಠು ಸತ್ಯವಾಗಿದೆ. ಇದೇ ವಾರದಲ್ಲಿ ನಡೆದ ಎರಡು ಕರುಣಾಜನಕ ಕತೆ ಮತ್ತು ವ್ಯಥೆ ಇದೋ ನಿಮಗಾಗಿ. ಶ್ರೀಯುತ ಆಚಾರ್ ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಸಾಕಷ್ಟು ಸ್ಥಿತಿವಂತರಾಗಿದ್ದು ಕಾರು ಬಾರು ನಡೆಸಿದ್ದವರು. ಗಂಡು ಮಕ್ಕಳಿಬ್ಬರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಬದಕನ್ನರಿಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ನಮಗೆ ಪರಿಚಯವಾದವರು. ಮಕ್ಕಳು ತಮ್ಮ ಕಛೇರಿಯ ಮೂಲಕ ವಿದೇಶಕ್ಕೆ ಹೋಗಿ ನಂತರದ… Read More ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ನೋಡುವ ದೃಷ್ಟಿಕೋನ

ಈ ಚಿತ್ರವನ್ನು ನೋಡಿದಾಕ್ಷಣವೇ, ಅರೇ ಇದೇನಿದು ಅಶ್ಲೀಲ ಚಿತ್ರವನ್ನು ಹಾಕಿದ್ದಾರಲ್ಲಾ ಎಂದು ಯೋಚಿಸಬಹುದು. ಇಲ್ವೇ, ಇದೇನಿದು? ಸೆರೆಮನೆಯಲ್ಲಿರುವ ಈ ಇಳೀ ವಯಸ್ಸಿನವ ಸಣ್ಣ ವಯಸ್ಸಿನ ಹುಡುಗಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿದ್ದಾರಲ್ಲಾ? ಎಂಬ ಅನುಮಾನವೂ ಮೂಡಿ ಬರಬಹುದು ಆದರೆ ಈ ಪ್ರಸಂಗದ ಹಿಂದಿನ ಐತಿಹಾಸಿಕ ಕರಾಳ ಕಥನವನ್ನು ತಿಳಿದರೇ ಎಲ್ಲರಿಗೂ ಬೇಸರವಾಗುವುದಲ್ಲದೇ ಮಮ್ಮಲ ಮರುಗದೇ ಇರುವುದಿಲ್ಲ. ಫ್ರಾನ್ಸ್‌ನಲ್ಲಿ ಲೂಯಿಸ್‌ XIV ಆಳ್ವಿಕೆಯ ಕಾಲದಲ್ಲಿ ವಯಸ್ಸಾದ ವೃದ್ಧರೊಬ್ಬರು ಹಸಿವಿನಿಂದಾಗಿ ರೊಟ್ಟಿಯನ್ನೂ ಕೊಳ್ಳಲೂ ಹಣವಿಲ್ಲದಿದ್ದ ಕಾರಣ ಅಂಗಡಿಯೊಂದರಲ್ಲಿ ರೊಟ್ಟಿಯೊಂದನ್ನು ಕದ್ದಿದ್ದಕ್ಕಾಗಿ ಆ ಬಡ… Read More ನೋಡುವ ದೃಷ್ಟಿಕೋನ

ಕರ್ಮ

ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ. ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ… Read More ಕರ್ಮ