ನಾಡಪ್ರಭು ಶ್ರೀ ಕೆಂಪೇಗೌಡರು

ಪ್ರಗತಿ ಪ್ರತಿಮೆ ಎಂಬ ಹೆಸರಿನಲ್ಲಿ 108 ಅಡಿ ಎತ್ತರದ 218 ಟನ್‌ ತೂಕವಿರುವ ವಿಶ್ವವಿಖ್ಯಾತ ಬೆಂಗಳೂರಿನ ನಿರ್ಮಾತರಾದ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಳ್ಳುತ್ತಿರುವ ಈ ಶುಭಸಂಧರ್ಭದಲ್ಲಿ, ಕೆಂಪೇಗೌಡರ ವ್ಯಕ್ತಿ, ವ್ಯಕ್ತಿತ್ವ, ಸಾಧನೆಯ ಜೊತೆಗೆ ಅಂತಹ ಪ್ರಾಥಃಸ್ಮರಣೀಯ ಯಶೋಗಾಧೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.… Read More ನಾಡಪ್ರಭು ಶ್ರೀ ಕೆಂಪೇಗೌಡರು

ಅತ್ತ ದರಿ ಇತ್ತ ಪುಲಿ

ಅದು 2014 ಲೋಕಸಭಾ ಚುನಾವಣಾ ಸಮಯ. ಅದಾಗಲೇ ಎರಡು ಆಡಳಿತಾವಧಿಯಲ್ಲಿ ಹಗರಣದ ಮೇಲೆ ಹಗರಣಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಇಡೀ ದೇಶವಾಸಿಗಳ ಆಕ್ರೋಶವಿದ್ದಾಗ ಶುದ್ಧ ಹಸ್ತನಾಗಿ, ದಕ್ಷ ಆಡಳಿತಗಾರನಾಗಿ ಗುಜರಾತನ್ನು ಮುನ್ನೆಡೆಸಿದ್ದ ನರೇಂದ ಮೋದಿಯವರು ಇಡೀ ದೇಶಕ್ಕೆ ಆಶಾವಾದಿಯಾಗಿ ಕಂಡ ಪರಿಣಾಮವಾಗಿ ಅದ್ಭುತವಾದ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ. ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಸಂಸತ್ತನ್ನು ಪ್ರವೇಶಿಸಿ ನಾ ಮೇ ಖಾವುಂಗಾ ಔರ್ ಖಾನೇ… Read More ಅತ್ತ ದರಿ ಇತ್ತ ಪುಲಿ

ಮೂರ್ತಿ ಪೂಜೆ

ರಸ್ತೇ ಅಗಲೀಕರಣದ ನೆಪದಲ್ಲಿ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಕಳೆದ ವಾರ ನಂಜನಗೂಡಿನ ಬಳಿ 800 ವರ್ಷದ ಹಳೆಯದಾದ ಚೋಳರ ಕಾಲದ  ದೇವಾಲಯವನ್ನು ಒಡೆದು ಹಾಕಿರುವ ವಿಷಯ ಇನ್ನೂ ಆರದಿರುವಾಗ ಅದೇ ಪ್ರಾಂತ್ಯದ ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ತೆರವು ಮಾಡುವ ಎಡವಟ್ಟೊಂದನ್ನು ಮಾಡುವ ಮೂಲಕ  ಆಸ್ತಿಕ ಮಹಾಶಯರ ಸಾತ್ವಿಕ ಕೋಪ ಹೆಚ್ಚುವಂತಾಗಿದೆ. ನಮ್ಮ ರಾಜ್ಯದ ಹಲವಾರು ದೇವಾಲಯಗಳಿಗೆ ನಮ್ಮ ಮೈಸೂರು ಅರಸರ ಕೊಡುಗೆ ಅಪಾರ ಎನ್ನುವುದು ನಿರ್ವಿವಾದ. ಅದರಲ್ಲೂ… Read More ಮೂರ್ತಿ ಪೂಜೆ

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ?

ದಸರಾ ಎಂದು ನೆನಸಿಕೊಂಡಾಕ್ಷಣ ನಮ್ಮ ಕಣ್ಣ ಮುಂದೆ ಬರುವುದೇ ಆನೆಯ ಅಂಬಾರಿ. ಆನೆಗಳ ಹಿಂಡಿನ ಮಧ್ಯೆ ಬಲರಾಮನ ಮೇಲೆ ತಾಯಿ ಚಾಮುಂಡೇಶ್ವರಿ ತಾಯಿಯನ್ನು ಮೆರವಣಿಗೆ ಮಾಡುವುದನ್ನು ವೀಕ್ಷಿಸಲು ದೇಶ ವಿದೇಶಗಳಿಂದಳೂ ಲಕ್ಷಾಂತರ ಪ್ರವಾಸಿಗರು ಬರುವುದಲ್ಲದೇ ಆ ಹೆಮ್ಮೆಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇನ್ನು ಕೇರಳದ ಬಹುತೇಕ ಹಿಂದೂ ದೇವಾಲಯಗಳಲ್ಲಿಯೂ ಆನೆಗಳೇ ಪ್ರಮುಖ ಆಕರ್ಷಣೆ. ಅಲ್ಲಂತೂ ಹತ್ತಾರು ಆನೆಗಳನ್ನು ಚೆನ್ನಾಗಿ ಅಲಂಕರಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು. ದೇಶದಲ್ಲಿ ಎಲ್ಲಶ ಆಗಲೀ ಸ್ವಾಮೀ ಐಯ್ಯಪ್ಪನ ಮೆರವಣೆಗೆ ನಡೆಯುವುದೇ ಆನೆಯ ಮೇಲೆಯೆ.… Read More ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ?

ಪುರಿ ಜಗನ್ನಾಥ ರಥಯಾತ್ರೆ

ಪುರಿ ಒರಿಸ್ಸಾದಲ್ಲಿರುವ ಪ್ರಮುಖವಾದ ಧಾರ್ಮಿಕ ಕ್ಷೇತ್ರವಾಗಿದೆ. ಬಲಭದ್ರ, ಸುಭದ್ರ ಮತ್ತು ಜಗನ್ನಾಥ (ಇಲ್ಲಿ ಶ್ರೀಕೃಷ್ಣನನ್ನು ಜಗನ್ನಾಥ ಎಂದೇ ಸಂಭೋದಿಸುತ್ತಾರೆ) ಜೊತೆಗೆ ಇರುವ ಇಲ್ಲಿನ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದೆ. ಇಲ್ಲಿ ನಡೆಯುವ ರಥಯಾತ್ರೆ ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಪ್ರಮುಖವಾಗಿದ್ದು ಈ ರಥೋತ್ಸವದ ಉಲ್ಲೇಖ ಬ್ರಹ್ಮಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಕಪಿಲ ಸಂಹಿತೆಯಲ್ಲಿಯೂ ಕಾಣ ಸಿಗುತ್ತದೆ. ಸಾಧಾರಣವಾಗಿ ಎಲ್ಲೆಡೆಯಯಲ್ಲಿ ಬ್ರಹ್ಮ ರಥೋತ್ಸವ ಒಂದು ಅಥವಾ ಮೂರು ದಿನಗಳ ಕಾಲ ನಡೆದರೆ ಇಲ್ಲಿ ಮಾತ್ರ ಪ್ರತಿವರ್ಷದ ಆಷಾಢ… Read More ಪುರಿ ಜಗನ್ನಾಥ ರಥಯಾತ್ರೆ

ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಕನ್ನಡ ಚಲನಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಪ್ರವೇಶಿಸಿ ಈಗ ಬಹುಭಾಷಾ ನಾಯಕ ನಟನಾಗಿರುವ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಮಗ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದೆ ಈ ಕುಟುಂಬ. ಈಗಾಗಲೇ ತುಮಕೂರಿನ ಬಳಿಯಿರುವ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದ ಅರ್ಜುನ್ ಸರ್ಜಾ ಸದ್ಯದಲ್ಲಿ ಚೆನ್ನೈನಲ್ಲಿ ವಾಸವಾಗಿದ್ದಾರೆ. ಚೆನ್ನೈನ ವಿಮಾನ… Read More ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ದೇವಸ್ಥಾನಗಳಿಗೆ ಏಕೆ ಹೋಗಬೇಕು?

ದೇವಾಲಯಗಳು ನಮ್ಮ ಸನಾತನ ಧರ್ಮದ ಶ್ರಧ್ಧಾ ಕೇಂದ್ರಗಳು. ನಮ್ಮ ಧರ್ಮದ ಬಹುತೇಕ ಧಾರ್ಮಿಕ ಚಟುವಟಿಕೆಗಳ ಮುಖ್ಯಕೇಂದ್ರವೇ ದೇವಸ್ಥಾನಗಳಾಗಿರುತ್ತವೆ. ಹಾಗಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ದೇವಾಲಯಗಳು ಇದ್ದೇ ಇರುತ್ತವೆ. ಅದು ಬ್ರಹ್ಮ, ವಿಷ್ಣು ಇಲ್ಲವೇ ಮಹೇಶ್ವರನ ದೇವಾಯಲಗಳು ಆಗಿರಬಹುದು ಇಲ್ಲವೇ ಎಲ್ಲರೂ ಇಷ್ಟ ಪಡುವ ಕಾಳೀ, ದುರ್ಗೇ,ಗಣೇಶ ಇಲ್ಲವೇ ಆಂಜನೇಯನ ದೇವಸ್ಥಾನವೇ ಆಗಿರಬಹುದು ಇಲ್ಲವೇ ಸ್ಥಳೀಯ ಗ್ರಾಮದೇವತೆಯೇ ಆಗಿರಬಹುದು. ಒಟ್ಟಿನಲ್ಲಿ ಹಿಂದೆಲ್ಲಾ ಊರಿಗೊಂದು ದೇವಸ್ಥಾನ, ಕೆರೆ, ಅರಳೀ ಕಟ್ಟೆಗಳು ಕಡ್ಡಾಯವಾಗಿದ್ದು, ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎನ್ನುವ… Read More ದೇವಸ್ಥಾನಗಳಿಗೆ ಏಕೆ ಹೋಗಬೇಕು?

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ… Read More ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?