ಅತ್ತ ದರಿ ಇತ್ತ ಪುಲಿ

ಅದು 2014 ಲೋಕಸಭಾ ಚುನಾವಣಾ ಸಮಯ. ಅದಾಗಲೇ ಎರಡು ಆಡಳಿತಾವಧಿಯಲ್ಲಿ ಹಗರಣದ ಮೇಲೆ ಹಗರಣಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಇಡೀ ದೇಶವಾಸಿಗಳ ಆಕ್ರೋಶವಿದ್ದಾಗ ಶುದ್ಧ ಹಸ್ತನಾಗಿ, ದಕ್ಷ ಆಡಳಿತಗಾರನಾಗಿ ಗುಜರಾತನ್ನು ಮುನ್ನೆಡೆಸಿದ್ದ ನರೇಂದ ಮೋದಿಯವರು ಇಡೀ ದೇಶಕ್ಕೆ ಆಶಾವಾದಿಯಾಗಿ ಕಂಡ ಪರಿಣಾಮವಾಗಿ ಅದ್ಭುತವಾದ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ.

ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಸಂಸತ್ತನ್ನು ಪ್ರವೇಶಿಸಿ ನಾ ಮೇ ಖಾವುಂಗಾ ಔರ್ ಖಾನೇ ದೂಂಗಾ! ಎಂಬ ಮಾತನ್ನು ಹೇಳಿದ್ದ ಪ್ರಧಾನಮಂತ್ರಿಗಳು ಇದುವರೆವಿಗೂ ಅದನ್ನೇ ಅಕ್ಷರಶಃ ಪಾಲಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಮೋದಿಯವರು ಆಡಳಿತಕ್ಕೆ ಬಂದಾಗ ಜನರ ನಿರೀಕ್ಷೆಗಳು ಬೆಟ್ಟದಷ್ಟಿದ್ದವು. ಆಂತರಿಕವಾಗಿ ಮತ್ತು ಬಾಹ್ಯವಾಗಿ ಬಹಳಷ್ಟು ಸಮಸ್ಯೆಗಳು ಇದ್ದವು. ಮೋದಿಯವರು ಅವುಗಳನ್ನು ಒಂದೊಂದಾಗಿ ನಿಭಾಯಿಸುತ್ತಲೇ, ದೂರದೃಷ್ಟಿಯಿಂದಾಗಿ, ಪ್ರತಿಯೊಂದು ಸರ್ಕಾರೀ ಧಾಖಲೆ ಮತ್ತು ಸೇವೆಗಳಿಗೆ ಆಧಾರ್ ಕಾರ್ಡ್ ಜೋಡಣೆ, ನೋಟ್ ಅಮಾನಿಕರಣ, ಜಿ.ಎಸ್.ಟಿ. ಎಲ್ಲವನ್ನೂ ಒಂದೊಂದಾಗಿ ಜಾರಿಗೆ ತಂದಾಗ ಬಹಳಷ್ಟು ಜನರಿಗೆ ತತ್ ಕ್ಷಣದಲ್ಲಿ ತೊಂದರೆ ಎನಿಸಿದರೂ, ದೇಶದ ಹಿತದೃಷ್ಟಿಯಿಂದಾಗಿ ಮೋದಿಯವರು ತೆಗೆದುಕೊಂಡ ನಿರ್ಧಾರಗಳನ್ನು ಸಮರ್ಥನೆ ಮಾಡಿದರು. ಇದರ ಮಧ್ಯೆ, ಪುಲ್ವಾಮಾ ಧಾಳಿಯಾದಾಗ, ನಮ್ಮ ಸೈನ್ಯವನ್ನು ಶತ್ರುಗಳ ನೆಲೆಯೊಳಗೆ ನುಗ್ಗಿಸಿ ತಕ್ಕ ಪಾಠ ಕಲಿಸಿದ ಮೇಲಂತೂ ನಮ್ಮ ಸರ್ಕಾರದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿದ ಕಾರಣ ಎಲ್ಲಾ ವಿರೋದಾಭಾಸಗಳನ್ನು ಬದಿಗಿಟ್ಟು ಎರಡನೇ ಬಾರಿ ಮೋದಿಯವನ್ನು ಮತ್ತಷ್ಟೂ ದೊಡ್ಡದಾದ ಬೆಂಬಲದೊಂದಿಗೆ ಅದರಲ್ಲೂ ಕರ್ನಾಟಕದಲ್ಲಿ 25+1 ಬಿಜೆಪಿ ಸಂಸಾದರನ್ನು ಆಯ್ಕೆ ಮಾಡುವ ಮೂಲಕ ಅಧಿಕಾರಕ್ಕೆ ತಂದರು.

ಮೋದಿಯವರು ಎರಡನೇ ಬಾರೀ ಅಧಿಕಾರಕ್ಕೆ ಬಂದ ಕೂಡಲೇ ತ್ರಿವಳಿ ತಲಾಖ್, article-370 & 35A ದಿಟ್ಟತನದಿಂದ ತೆಗೆದು ಹಾಕುವ ಮೂಲಕ ಕಾಶ್ಮೀರದ ಜನರಿಗೆ ಸ್ವಾಯುತ್ತತೆ ದೊರೆಯುವಂತೆ ಮಾಡಿದ್ದಲ್ಲದೇ, CAA & NRC ಜಾರಿಗೆ ತರುವ ಮೂಲಕ ನುಸುಳುಕೋರರನ್ನು ಹೊರದಬ್ಬಲು ಮುಂದಾದರು. ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ರಾಮ ಜನ್ಮಭೂಮಿಯ ವಿಷಯವನ್ನು ನಾಜೂಕಾಗಿ ನ್ಯಾಯಾಲಯದ ಮೂಲಕವೇ ಬಗೆಹರಿಸಿ, ರಾಮ ಮಂದಿರದ ಶಿಲಾನ್ಯಾಸಕ್ಕೆ ಪ್ರಧಾನಿಗಳು ಪೂಜೆ ಮಾಡಿದಾಗಲಂತೂ, ಅಬ್ಭಾ, ಎರಡನೇ ಬಾರಿ ಮೋದಿಯವರನ್ನು ಆಯ್ಕೆಮಾಡಿದ್ದು ಸಾರ್ಥಕವಾಯಿತು ಎಂದು ತಮ್ಮ ಬೆನ್ನನ್ನೇ ತಟ್ಟಿಕೊಂಡ ಭಾರತಿಯರ ಸಂಖ್ಯೆ ಕಡಿಮೆಯೇನಲ್ಲ.

ಇಷೃರ ಮಧ್ಯೆ ಕರ್ನಾಟಕದಲ್ಲೊಂದು ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಿ ಅಪರೇಷನ್ ಕಮಲದ ಮೂಲಕ ಕಾಂಗ್ರೇಸ್ ಮತ್ತು ಪಕ್ಷೇತರ ಶಾಸಕರ ರಾಜೀನಾಮೆ ಕೊಡಿಸಿ ಕರ್ನಾಟಕದಲ್ಲೂ ಮತ್ತೊಮ್ಮೆ ಯಡೆಯೂರಪ್ಪಾ ಅವರ ಮುಖಾಂತರ ಕಮಲವನ್ನು ಅರಳಿಸುವ ಮುಖಾಂತರ ಕೇಂದ್ರ ಮತ್ತು ರಾಜ್ಯಸರ್ಕಾರ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದಲ್ಲಿ ಕೇಂದ್ರದಿಂದ ಆರ್ಥಿಕ ನೆರವಿನ ಹೊಳೆಯೇ ಹರಿಯುವುದಲ್ಲದೇ ಎರಡೂ ಸರ್ಕಾರದ ನಡುವಿನ ಬಾಂಧ್ಯವ್ಯ ಸುಂದರವಾಗಿರುತ್ತದೆ ಎಂಬ ಭ್ರಮೆಯನ್ನು ಹರಿಸಿದ್ದಂತೂ ಸುಳ್ಳಲ್ಲ.

ನಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಕೊರೋನಾ ಮಹಾಮಾರಿ ಇಡೀ ಪ್ರಪಂಚಕ್ಕೆ ವಕ್ಕರಿಸಿ ಎಲ್ಲವೂ ಲಾಕ್ಡೌನ್ ಆದ ನಂತರ ಅದೇಕೋ ಕೇಂದ್ರ ಮತ್ತು ರಾಜ್ಯಸರ್ಕಾರ ಎರಡಕ್ಕೂ ಗರ ಬಡಿದಂತಾಗಿ, ಹೈವೇನಲ್ಲಿ ವೇಗವಾಗಿ ಹೋಗುತ್ತಿದ್ದ ವಾಹನಕ್ಕೆ ಏಕಾಏಕಿ ಬ್ರೇಕ್ ಹಾಕಿದಾಗ ಹೇಗೆ ವಾಹನ ಅಲ್ಲೋಲ ಕಲ್ಲೋಲವಾಗಿ ದಿಕ್ಕಾಪಾಲಾಗುತ್ತದೆಯೋ ಅದೇ ರೀತಿ ಈ ಸರ್ಕಾರದ್ದಾಯಿತು ಎಂದರೂ ತಪ್ಪಾಗದು.

ಹೌದು ನಿಜ ಕೋವಿಡ್ ಸಮಯದಲ್ಲಿ ಸರ್ಕಾರ ತೆಗೆದುಕೊಂಡ ನಿಯಮಗಳು ಮತ್ತು ಲಸಿಕಾ ಅಭಿಯಾನಗಳು ಜನಪರವಾಗಿದ್ದರೂ ಅದಕ್ಕೆ ಜನಸಾಮಾನ್ಯರು ತೆರಬೇಕಾದ ಬೆಲೆಯಂತೂ ತಾಳಲಾಗದಾಗಿದೆ. ಜನಾವಶ್ಯಕವಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಪದೇ ಪದೇ ಏರಿಸುತ್ತಲೇ ಹೋಗಿರುವುದರಿಂದ ಬೇರೆಲ್ಲಾ ಬೆಲೆಗಳು ಗಗನಕ್ಕೇರಿ, ಕೋವಿಡ್ ನಿಂದ ಅದಾಗಲೇ ಗಾಯಗೊಂಡಿದ್ದ ಮಧ್ಯಮವರ್ಗದ ಜನರ ಮೇಲೆ ಬರೆ ಎಳೆದಂತಾಗಿದೆ. ಇದೇ ಸಮಯದಲ್ಲಿ ಸರ್ಕಾರ ಘೋಷಿಸಿದ ಲಕ್ಷಾಂತರ ಕೋಟಿ ರೂಪಾಯಿಗಳ ಪರಿಹಾರ ಧನ ಯಾರಿಗೆ ತಲುಪಿತು ಎಂಬುದರ ಕುರಿತಾದ ಮಾಹಿತಿಯೇ ಇಲ್ಲ. ಹೀಗೆ ಕಣ್ಣಿಗ ಕಾಣದ ಪುಸ್ತಕಗಳಲ್ಲೇ ಸರಿಹೊಂದಿ ಹೋಗಬಹುದಾದ ಪರಿಹಾರಗಳನ್ನು ಘೋಷಿಸುವ ಬದಲು ಅದೇ ಧನವನ್ನು ಜನರಿಗೆ ಕಣ್ಣಿಗೆ ಕಾಣುವಂತೆ ದಿನ ನಿತ್ಯಉಪಯೋಗಿ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬಳಸಿದ್ದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತಲ್ಲವೇ?

ಪೆಟ್ರೋಲಿಯಂ ಬಿಡಿ, 80-120ರ ಆಸುಪಾಸಿನಲ್ಲಿದ್ದ ಅಡುಗೆ ಎಣ್ಣೆಯ ಬೆಲೆಯೂ 160-180ಕ್ಕೆ ಏರಿದ ಪರಿಣಾಮ ಜನರು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಂತೂ ಸುಳ್ಳಲ್ಲ. ವಿದೇಶದಿಂದ ಅಮದು ಮಾಡುವ ತಾಳೇ ಎಣ್ಣೆಯ ಬೆಲೆ ಹೆಚ್ಚಾದರೆ ದೀಪದ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೇ ಕಾಯಿ ಎಣ್ಣೆಯ ಬೆಲೆ ಹೆಚ್ಚೇಕೆ ಆಯಿತು? ಎಂಬುದನ್ನು ಅದನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ.

ಕೇಂದ್ರ ಸರ್ಕಾರದ ಪರ ಮಾತನಾಡುವ ದೇಶಭಕ್ತ ಮತ್ತು ವಿರುದ್ಧ ಮಾತನಾಡುವ ದೇಶದ್ರೋಹಿಗಳು ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿರುವ ಕಾರಣ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಯಾರೂ ಸಹಾ ಇದರ ಬಗ್ಗೆ ಮಾತನಾಡುವವರೇ ಇಲ್ಲ. ಇನ್ನು ಈ ಸರ್ಕಾರಕ್ಕೆ ಪ್ರಜೆಗಳು ಎಂದರೆ ಕೇಳಿ ಕೇಳಿದಾಗಲೂ ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬಂತಾಗಿದೆ.

ಇನ್ನು ಕರ್ನಾಟಕದ ರಾಜ್ಯ ಸರ್ಕಾರದ ಬಗ್ಗೆ ಹೇಳುವುದಕ್ಕಿಂತಲಲೂ ಸುಮ್ಮನಿರುವುದೇ ಲೇಸೇನೋ? ಕಾಂಗ್ರೇಸ್ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಆಡಳಿತಕ್ಕೆ ಬಂದಾಗಲಿಂದಲೂ ಸುಲಲಿತವಾಗಿ ಅಧಿಕಾರವನ್ನು ನಡಸಲು ಆಗಲೇ ಇಲ್ಲಾ. ಅದಕ್ಕೆ ಪ್ರಕೃತಿಯೂ ಬಿಡಲಿಲ್ಲ ಎನ್ನುವುದೂ ಸತ್ಯ. ಆರಂಭದಲ್ಲಿ ಬರ ನಂತರ ಪ್ರವಾಹ ಅದಾದ ನಂತರ ಮಂತ್ರಿಮಂಡಲ ರಚನೆ, ಉಪಚುನಾವಣೆಯಲ್ಲಿ ಕೈಪಾಳಯವನ್ನು ಬಿಟ್ಟು ಬಂದವರನ್ನು ಗೆಲ್ಲಿಸಿಕೊಳ್ಳುವುದು ಅದಾದ ನಂತರ ಮತ್ತೊಮ್ಮೆ ಮಂತ್ರಿಮಂಡಲದ ವಿಸ್ತರಣೆ. ಅತೃಪ್ತರ ಮೂಗಿಗೆ ಬೆಣ್ಣೆ ಸವರಿದಂತೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಶ ಪಟ್ಟ ಕೊಡುವುದರಲ್ಲಿ ಹೈರಾಣದ ಸರ್ಕಾರಕ್ಕೆ ಕೋವಿಡ್ ವಕ್ಕರಿಸಿದ ಮೇಲಂತೂ ರಾಜ್ಯ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಅನುಮಾನ ಕಾಡುವಂತೆ ಅದೃಷ್ಯವಾಗಿಹೋಯಿತು. ಎಲ್ಲವೂ ಪಟ್ಟಭಧ್ರ ಅಧಿಕಾರಿಗಳದ್ದೇ ಕಾರುಬಾರು. ಲಾಕ್ಡೌನ್ ಮಾಡುವುದು ನಂತರ ಅದಾವುದೋ ಸಿನಿಮಾ ನಟನ ಸಿನಿಮಾಕ್ಕೆ ಹೊಡೆತ ಬೀಳುತ್ತದೆ ಎಂದು ವಿನಾಯಿತಿ ಕೊಡುವುದು. ನೈಟ್ ಕರ್ಫೂ ಹೇರುವುದು ನಂತರ ಮತ್ತೊಬ್ಬರಿಗೆ ತೊಂದರೆ ಆಗುತ್ತದೆ ಎಂದು ಸಡಿಲಿಸುವುದು. ಲಾಕ್ದೌನ್ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ಮೀರಿ ಅಂಡೆಲೆದು ಕೋವಿಡ್ ಹರಡಿದ ಮತ್ತು ಆಶಾ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದು. ಯಾವುದೋ ಕ್ಷುಲ್ಲುಕ ಕಾರಣಕ್ಕೆ ಸಂಬಂಧವೇ ಇಲ್ಲದ ಶಾಸಕನ ಮನೆಯನ್ನು ಸುಟ್ಟು ಹಾಕಿದವರ ಸಂಪೂರ್ಣ ವಿವರಗಳು ಇದ್ದರೂ ಅವರನ್ನು ಬಂಧಿಸಲು ಮೀನಾ ಮೇಷ ಎಣಿಸುವ ಮೂಲಕ ಸರ್ಕಾರದ ಅಸ್ಥಿತ್ವವೇ ಇಲ್ಲದಂತಾಯಿತು.

ಇಷ್ಟರ ಮಧ್ಯೆ ಕಂಡ ಕಂಡವರೆಲ್ಲಾ ಮುಖ್ಯಮಂತ್ರಿ ಕುರ್ಚಿಗೆ ಕರ್ಛೀಘ್ ಹಾಕಿದರೇ ಕೆಲವರಂತೂ ಟವೆಲ್ ಹಾಕಿ ತಾವೇ ಭಾವಿ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿ ತೇಲಾಡಿ, ಕಡೆಗೆ ಜಾತೀ ಸಮೀಕರಣದಲ್ಲಿ ಅಂದರಕೀ ಮಂಚಿವಾಡು ಅನಂತರಾಮಯ್ಯ ಎನ್ನುವ ತೆಲುಗು ಗಾದೆಯಂತೆ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮಠಾಧೀಶರ ಲಾಬಿಗೆ ತನ್ನನ್ನೇ ತಾನು ಬಲಿಷ್ಟ ಎಂದು ಕರೆದುಕೊಳ್ಳುವ ಬಿಜೆಪಿ ಹೈಕಮಾಂಡ್ ಮಣಿದಿದ್ದು ಅಚ್ಚರಿ ಎನಿಸಿತು.

ಈ ಬಿಜೆಪಿ ನಾಯಕರುಗಳು ಅಧಿಕಾರಕ್ಕೆ ಬರುವ ಮನ್ನಾ ತಮ್ಮದು ಹಿಂದು ಪರ ಪಕ್ಷ ಎಂದು ಬಿಂಬಿಸಿಕೊಳ್ಳುವವವರು ಅಧಿಕಾರ ಸಿಕ್ಕ ಕೂಡಲೇ ನಿಜವಾದ ಜಾತ್ಯಾತೀತರಿಗಿಂತಲೂ ಅಧಿಕವಾದ ಜಾತ್ಯಾತೀತನವನ್ನು ತೋರುತ್ತಾ ತಮಗೆ ಮತ ನೀಡಿ ಅಧಿಕಾರಕ್ಕೆ ತಂದ ಹಿಂದೂಗಳ ಮೇಲೆಯೇ ದಬ್ಬಾಳಿಕೆ ನಡೆಸುವುದು ನಿಜಕ್ಕೂ ಅಚ್ಚರಿ ಮತ್ತು ಅಕ್ಷಮ್ಮ್ಯ ಅಪರಾಧವೇ ಸರಿ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ 9.12.2009 ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಈಗ ಪಾಲಿಸಲು ಮುಂದಾಗಿ ಏಕಾಏಕಿ ರಾತ್ರೋ ರಾತ್ರಿ ಹಿಂದೂಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳನ್ನು ಕೆಡವಲು ಮುಂದಾಗಿರುವುದು ನಿಜಕ್ಕೂ ಖಂಡನೀಯವಾಗಿದೆ. ಚೋಳರ ಕಾಲದ್ದು ಎಂಬ ನಂಬಿಕೆ ಇರುವ ಸುಮಾರು 800 ವರ್ಷಗಳ ಇತಿಹಾಸವಿದ್ದ ನಂಜನಗೂಡಿನ ಬಳಿಯ ದೇವಾಲಯವನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಿ ಹಾಕುವ ಮೂಲಕ ನಿಜಕ್ಕೂ ಹಿಂದೂಗಳ ಔದಾರ್ಯತೆಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದರು ತಪ್ಪಾಗಲಾರದು.

ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ, ಇತ್ತೀಚೆಗೆ ಅನಧಿಕೃತವಾಗಿ ನಿರ್ಮಾಣವಾಗಿರುವ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುವಂತಹ ದೇವಸ್ಥಾನಗಳನ್ನು ಕೆಡವಿ ಹಾಕಬಹುದು ಎಂಬ ನಿಯಮದ ಆಧಾರವಿದೆಯೇ ಹೊರತು, ಹಳೆಯ ದೇವಾಲಯಗಳನ್ನಲ್ಲ. ಹಾಗೆ ದೇವಾಲಯಗಳನ್ನು ಏಕಾ ಏಕಿ ಕೆಡುವಿ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಪ್ರತಿಯೊಂದು ದೇವಾಲಯದ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಿದೆಯೇ ಹೊರತು ಏಕಾ ಏಕಿ ರಾತ್ರೋ ರಾತ್ರಿ ಕೆಡವಲು ಯಾವುದೇ‌ ಹಕ್ಕಿಲ್ಲ.

ಈಗ ಕೆಡವಲು ನಿರ್ಧರಿಸಿರುವ ನೂರಾರು ದೇವಾಲಯಗಳು ನೆನ್ನೆ ಮೊನ್ನೆ ನಿರ್ಮಾಣವಾಗಿರದೇ, ಈ ರಸ್ತೆಗಳ ನಿರ್ಮಾಣವೇಕೇ? ಬದಲಿಗೆ ಭಾರತದ ಸಂವಿಧಾನ,ಕಾನೂನುಗಳು ರೂಪುಗೊಳ್ಳುವುದಕ್ಕೂ ಮೊದಲೇ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದದ್ದು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿ ಹೋಗಿ ಅವುಗಳನ್ನು ಅಕ್ರಮವೆಂದು ಘೋಷಿಸಿ ರಾತ್ರೋರಾತ್ರಿ ಒಡೆದು ಹಾಕುವುದಕ್ಕೇ ಇವರನ್ನು ಕಷ್ಟ ಪಟ್ಟು ಆಡಳಿತಕ್ಕೆ ತಂದಿದ್ದು?

ಹೀಗೆಯೇ ಸುಮ್ಮನಾಗಿ ಹೋದಲ್ಲಿ, ನದಿ ಪಾತ್ರಕ್ಕೆ ಸಮೀಪವಾಗಿದೆ ಎಂಬ ನೆಪವೊಡ್ಡಿ ನಾಳೆ ನಂಜನಗೂಡಿನ ನಂಜುಂಡೇಶ್ವರನ ದೇವಾಲಯವನ್ನೂ ಕೆಡವಿ ಹಾಕಿದರೂ ಅಚ್ಚರಿ ಪಡಬೇಕಿಲ್ಲ.

ಹಿಂದೂಸ್ಥಾನದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಹಿಂದುಗಳ ಶ್ರದ್ಧಾ ಭಕ್ತಿಗಳಿಗೆ ಬೆಲೆಯೇ ಇಲ್ಲದಂತಾಗಿ ಹೋಗಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಹಿಂದೂಗಳಿಗೆ ಒಂದು ಕಾನೂನು ಅನ್ಯ ಮತದವರಿಗೆ ಮತ್ತೊಂದು ಕಾನೂನು ಎಂಬುವಂತಾಗಿರುವುದು ವಿಪರ್ಯಾಸವಾಗಿದೆ.

ಅದೇ ಸುಪ್ರೀಂ ಕೋರ್ಟ್ ಹೊತ್ತಲ್ಲದ ಹೊತ್ತಿನಲ್ಲಿ ಕರ್ಕಶವಾಗಿ ಪ್ರತೀ ದಿನವೂ ಎತ್ತರದ ಧ್ವನಿವರ್ಧಕಗಳ ಮೂಲಕ ಕೂಗುವುದನ್ನೂ ನಿಷೇಧಿಸಲು ಆದೇಶನೀಡಿದೆ, ಬಲವಂತದ ಮತಾಂತರ ಮಾಡಬಾರದು ಎಂಬ ಆದೇಶವಿದೆ. ಲವ್ ಜಿಹಾದ್ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ. ಆದರೆ ಈ ಯಾವುದೇ ಆದೇಶಗಳಿಗೂ ಕವಡೆಯ ಕಾಸಿನ ಕಿಮ್ಮತ್ತೂ ಕೊಡದವರು ಈಗ ದೇವಾಲಯಗಳನ್ನು ಒಡೆಯುತ್ತಿರುವುದು ನಿಜಕ್ಕೂ ಅಮಾನವೀಯ ಕ್ರಿಯೆಯಾಗಿದೆ.

ದೇಶ ಮೊದಲು ಧರ್ಮ ಆನಂತರ ಹಾಗಾಗಿ ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಇದೇ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಜಾರಿಗೆ ತರುವುದಕ್ಕೆ ಹಿಂದೇಟು ಹಾಕುತ್ತಿರುವ ಈ ಸರ್ಕಾರಕ್ಕೆ ಪುರಾತನ ದೇವಾಲಯಗಳನ್ನು ಒಡೆಯಲು ಮುಂದಾಗಿರುವುದು ಎಷ್ಟು ಸರಿ?

ಹಿಂದೂಗಳು ಅತ್ಯಂತ ಶ್ರದ್ಧೆಯಿಂದ ಗೋಮಾತೆ ಎಂದು ಪೂಜಿಸುವ ಹಸುಗಳನ್ನು ಅಕ್ರಮವಾಗಿ ಕಳ್ಳತನ ಮಾಡಿ ಎಗ್ಗಿಲ್ಲದೇ ಅನಧಿಕೃತ ಕಸಾಯಿಖಾನೆಗಳಲ್ಲಿ ಕತ್ತರಿಸುವುದನ್ನು ನಿಯಂತ್ರಿಸಲಾಗದ ಈ ಸರ್ಕಾರ ದೇವಾಲಯಗಳಲ್ಲಿ ಭಕ್ತಿಯಿಂದ ಪೂಜಿಸುವ ಆನೆಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ದ್ರೋಹ ಮಾಡುವುದು ಎಷ್ಟು ಸರಿ?

ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿರುದ್ಧ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅದನ್ನು ತಡೆಯಲು ಅಲ್ಲಿನ ಸರ್ಕಾರ ದಿಟ್ಟ ಕ್ರಮ ತೆಗೆದು ಕೊಳ್ಳ ಬಹುದಾದರೇ, ನಮ್ಮ ರಾಜ್ಯ ಸರ್ಕಾರಕ್ಕೇಕೆ ದೇವಾಲಯಗಳನ್ನು ಕೆಡವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ನಿಜ ಹೇಳ ಬೇಕೆಂದರೆ ಸರ್ಕಾರಕ್ಕೆ ಅಬಕಾರಿ ಇಲಾಖೆಯನ್ನು ಬಿಟ್ಟರೆ ಅತ್ಯಂತ ಹೆಚ್ಚಿನ ಆದಾಯವನ್ನು ಬರುವುದು ನಮ್ಮ ಹಿಂದೂ ದೇವಾಲಯಗಳಿಂದಲೇ. ಅದೇ ಕಾರಣಕ್ಕಾಗಿಯೇ ರಾಜ್ಯದಲ್ಲಿ ಆರ್ಥಿಕವಾಗಿ ಸಧೃಢವಾಗಿರುವ ಬಹುತೇಕ ಖಾಸಗೀ ದೇವಾಲಯಗಳನ್ನು ಯಾವುದೋ ಕುಂಟು ನೆಪವೊಡ್ಡಿ ಒಂದೊಂದಾಗಿ ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಮುಖಾಂತರ ಅಲ್ಲಿನ ಆದಾಯವನ್ನು ಬಾಚಿಕೊಳ್ಳುತ್ತಿದೆ. ಸರ್ಕಾರಕ್ಕೆ ದೇವಾಲಯಗಳ ಹುಂಡೀ ಕಾಸಿನ ಹಣ ಬೇಕು ಅದರೆ ದೇವಾಲಯಗಳು ಬೇಡ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕತ್ತರಿಸಲು ಹೊರಟಿರುವುದು ಎಷ್ಟು ಸರಿ?

ರಾಜಕಾಲುವೆ ಮೇಲೆ ಕಟ್ಟಿರುವ ರಾಜಕಾರಣಿ ಮತ್ತು ಖ್ಯಾತ ನಟರ ಮನೆಗಳನ್ನು ಒಡೆಯುವುದನ್ನು ಸರ್ಕಾರ ತಪ್ಪಿಸ ಬಹುದಾದರೇ, ನೂರಾರು ವರ್ಷಗಳಿಂದಲೂ ಶ್ರದ್ಧಾ ಭಕ್ತಿಯಿಂದ ಪೂಜಿಸಿಕೊಂಡು ಬಂದಿರುವ ದೇವಾಲಯಗಳನ್ನು ರಕ್ಷಿಸಲು ಸಾಧ್ಯವಿಲ್ಲವೇ?

ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾವುದೂ ಅಸಾಧ್ಯ ಎನ್ನುವುದೇ ಇಲ್ಲ. ನಿಜವಾದ ಇಚ್ಛಾಶಕ್ತಿ ಇದ್ದಲ್ಲಿ ದೇವಾಲಯಗಳನ್ನು ನಾಶ‌ ಪಡಿಸುವುದರ ಬದಲು ಯಥಾವತ್ತಾಗಿ ಸ್ಥಳಾಂತರ ಮಾಡ ಬಹುದಾಗಿದೆ. ಈರೀತಿಯ ಪ್ರಯೋಗಗಳು ಈಗಾಗಲೇ ಹತ್ತು ಹಲಾವಾರು ಕಡೆಗಳಲ್ಲಿ ಯಶಸ್ವಿಯಾಗಿದೆ.

ಈ‌ ಲೇಖನ ಬರೆದು ಮುಗಿಸುವ ವೇಳೆಗೆ ಹಿಂದೂಗಳು ಮತ್ತು ಹಿಂದೂಪರ ಸಂಘಟನೆಗಳ ಎಚ್ಚರಿಕೆ, ಆಗ್ರಹ ಮತ್ತು ಪ್ರತಿಭಟನೆಗಳಿಗೆ ಮಣಿದು ಸರ್ಕಾರ ದೇವಾಲಯಗಳ ನಾಶಕ್ಕೆ ತಾತ್ಕಾಲಿಕವಾದ ತಡೆ ಹಾಕಿ ಈ ಕುರಿತಂತೆ ಸಮಗ್ರವಾಗಿ ಪರಿಶೀಲಿಸುವುದಾಗಿ ಹೇಳಿದೆ.

ಒಟ್ಟಿನಲ್ಲಿ ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರಗಳಿಂದ ರೋಸೆತ್ತು ಪರ್ಯಾಯವಾಗಿ ಬಿಜೆಪಿ ಸರ್ಕಾರವನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಕ್ಕೆ ತಂದರೆ ಹೇಳಿಕೊಳ್ಳುವಂತಹ ಭ್ರಷ್ಟಾಚಾರ ನಡೆಯಲಿಲ್ಲವಾದರೂ ಜನಸಾಮಾನ್ಯರ ದೈನಂದಿನ ಜೀವನ ಮತ್ತು ಧಾರ್ಮಿಕ ನಂಬಿಕೆಗಳಿಗೇ ಪೆಟ್ಟು ಬೀಳುವಂತಾಗಿರುವುದು ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಾಗಿ, ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ.

ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿ ಕೊಳ್ಳಲಾಗದು ಅಲ್ವೇ? ಆಧಿಕಾರಕ್ಕೆ ತಂದವರು ತಮ್ಮ ಹಿತಾಸಕ್ತಿಗಳನ್ನು ಕಾಪಡಲಾರರು ಎಂದು ತಿಳಿದಾಗ ಅವರನ್ನು ಕೆಳಗಿಳಿಸುವ ಶಕ್ತಿಯೂ ಇರುತ್ತದೆ ಅಲ್ಲವೇ?

ಕಾಲ ಇನ್ನೂ ಮಿಂಚಿಲ್ಲ. ಮಿಂಚಿ ಹೋದ ನಂತರ ಚಿಂತಿಸಿ ಫಲವಿಲ್ಲ ಎನ್ನುವಂತೆ ಎರಡೂ ಸರ್ಕಾರಗಳು ಈ ಕೂಡಲೇ ಎಚ್ಚೆತ್ತುಕೊಂಡು ಜನಪರ ಆಡಳಿತ ನೀಡದೇ ಹೋದಲ್ಲಿ ಮುಂದೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

ವಿರೋಧ ಪಕ್ಷಗಳು

oppಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹುಮತ ಪಡೆದವರು ಆಡಳಿತ ನಡೆಸುವ ಅಥಿಕಾರ ಪಡೆದರೆ, . ಬಹುಮತ ಪಡೆಯದವರು ವಿರೋಧ ಪಕ್ಷವಾಗುತ್ತಾರೆ.  ದೇಶದ ಹಿತದೃಷ್ಟಿಯಿಂದ ದೇಶದ ಆಗು ಹೋಗುಗಳ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಆಡಳಿತ ಪಕ್ಷದಷ್ಟೇ ಜವಾಬ್ಧಾರಿ ವಿರೋಧಪಕ್ಷಕ್ಕೂ ಇರುತ್ತದೆ. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳನ್ನು ಕಾವಲು ನಾಯಿಗಳಿಗೆ ಹೋಲಿಸಲಾಗುತ್ತದೆ, 

ವಿರೋಧ ಪಕ್ಷ ಎಂದ ಮಾತ್ರಕ್ಕೆ ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳನ್ನೂ ವಿರೋಧಿಸಲೇ ಬೇಕೆಂಬ ನಿಯಮವೇನಿಲ್ಲ. ವಿರೋಧ ಪಕ್ಷವು ರಚನಾತ್ಮಕವಾಗಿ ಕಾರ್ಯನಿಭಾಯಿಸುವ ಮೂಲಕ ಆಡಳಿತ ಪಕ್ಷ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡ್ಯೊಯ್ಯುವ ಗುರುತರ ಜವಾಬ್ಧಾರಿಯನ್ನು ಹೊಂದಿರುತ್ತದೆ.  ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ಒಬ್ಬ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ   ಹೇಗೆ ವರ್ತಿಸಬೇಕು? ಎಂಬುದಕ್ಕೆ ಸತ್ ಸಂಪ್ರದಾಯವನ್ನು ಹಾಕಿಕೊಟ್ಟ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ನರಸಿಂಹ ರಾಯರ ಈ ಸುಂದರ ಪ್ರಸಂಗವನ್ನು  ಇಂದಿನ ವಿರೋಧ ಪಕ್ಷದವರು ಖಂಡಿತವಾಗಿಯೂ ಮನನ ಮಾಡಲೇ ಬೇಕಾಗಿದೆ.

ಅದು 90ರ ದಶಕದ ಆರಂಭ ಕಾಲ. ಚುನಾವಣಾ ಪ್ರಚಾರದ ಸಮಯದಲ್ಲಿಏ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಮಾಜೀ ಪ್ರಧಾನ ಮಂತ್ರಿ ಶ್ರೀ ರಾಜೀವ್ ಗಾಂಧಿಯವರು ಮಾನವ ಬಾಂಬ್ ಸ್ಪೋಟದಲ್ಲಿ ಅಸುನೀಗಿ, ಕಾಂಗ್ರೇಸ್ ಮತ್ತು ಅದರ ಮಿತ್ರ ಪಕ್ಷಗಳು ಸರಳ ಬಹುಮತ ಪಡೆದು ಹಿರಿಯ ಮುತ್ಸದ್ದಿ ಶ್ರೀ ನರಸಿಂಗರಾವ್ ಅವರ ನೇತೃತ್ವದಲ್ಲಿ ಅಧಿಕಾರವನ್ನು ಗಳಿಸುತ್ತಾರೆ. ಆಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸುಮಾರು 120 ಸ್ಥಾನಗಳನ್ನು ಗಳಿಸಿ ವಿರೋಧಪಕ್ಷದ ಸ್ಥಾನ ಗಳಿಸುತ್ತದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ರಿಸರ್ವ್ ಬ್ಯಾಂಕಿನ ಮಾಜೀ ಗವರ್ನರ್ ಅಗಿದ್ದ ರಾಜಕೀಯೇತರ ವ್ಯಕ್ತಿ ಶ್ರೀ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಮಂತ್ರಿಗಳನ್ನಾಗಿ ಮಾಡುವ ಮುಖಾಂತರ ದೇಶದ ಜನರ ಹುಬ್ಬೇರುವಂತೆ ಮಾಡಿರುತ್ತಾರೆ ರಾಯರು.

nar1ಹಣಕಾಸು ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ರಾಯರು, ನಮ್ಮ ದೇಶದ ಖಜಾನೆಯಲ್ಲಿ ಸದ್ಯಕ್ಕೆ ಎಷ್ಟು ಹಣವಿದೆ? ಎಂದು ಕೇಳುತ್ತಾರೆ.  ಪ್ರಧಾನಿಗಳ ಪ್ರಶ್ನೆಗೆ ಅಷ್ಟೇ ಗಂಭೀರವಾಗಿ ಮನಮೋಹನ ಸಿಂಗರು ನಿಜ ಹೇಳಬೇಕೆಂದರೆ,  ಸದ್ಯದ ಪರಿಸ್ಥಿತಿಯಲ್ಲಿ ದೇಶ ದಿವಾಳಿತನಕ್ಕೆ ಹೋಗುವ  ಅಂಚಿನಲ್ಲಿದೆ. ಈಗ ಉಳಿದಿರುವ ಹಣದಲ್ಲಿ ಸುಮಾರು 09 ದಿನಗಳವರೆಗೆ ಮಾತ್ರ ದೇಶವನ್ನು ನಡೆಸಲು ನಮಗೆ ಸಾಧ್ಯವಾಗುವುದು ಎಂದು ಖಡಾಖಂಡಿತವಾಗಿ ಹೇಳುತ್ತಾರೆ.

ಈ ಉದ್ವಿಗ್ನ ಪರಿಸ್ಥಿತಿಯನ್ನು ಕೂಡಲೇ ಅರ್ಧೈಸಿಕೊಂಡ ರಾಯರು  ಈ ಸಮಸ್ಯೆಯಿಂದ ಹೊರಬರಲು ನಿಮ್ಮಿಂದ ಏನಾದರೂ ಪರಿಹಾರವಿದೆಯೇ? ಎಂದು ಕೇಳುತ್ತಾರೆ. ದೇಶದ ರೂಪಾಯಿ ಮೌಲ್ಯವನ್ನು ಸುಮಾರು 20% ರಷ್ಟು ಇಳಿಕೆ ಮಾಡಿದಲ್ಲಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಬಹುದು. ಆನಂತರ ಅಲೋಚಿಸಿ ದೀರ್ಘಕಾಲೀನ ನಿರ್ಧಾರಗಳನ್ನು ತೆಗೆದುಕೊಳಬಹುದು  ಎಂದು ಮನಮೋಹನ್ ಸಿಂಗ್ ಸೂಚಿಸುತ್ತಾರೆ.

ಪರಿಸ್ಥಿತಿಯ ತೀವ್ರತೆಯನ್ನು ಅರಿತ ರಾಯರು ಒಮ್ಮೆ ಧೀರ್ಘವಾದ ನಿಟ್ಟುಸಿರು ಬಿಟ್ಟು ಸರಿ, ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆಯಿರಿ. ಅಲ್ಲಿ ಇದನ್ನು ಪ್ರಸ್ತಾವನೆ  ಮಾಡಿ ನಾನು ಅನುಮೋದನೆ ಪಡೆಯುತ್ತೇನೆ ಎನ್ನುತ್ತಾರೆ. ಸರ್,  ಕ್ಯಾಬಿನೆಟ್ ಸಭೆಯಲ್ಲಿ ಇಂತಹ ಕಠಿಣ ಆರ್ಥಿಕ ನಿರ್ಧಾರಕ್ಕೆ ನಮ್ಮ ಮಿತ್ರಪಕ್ಷಗಳು ಒಪ್ಪಿಗೆ ನೀಡುವುದು ಅನುಮಾನ.  ಅವರೆಲ್ಲರರೂ ಓಟ್ ಬ್ಯಾಂಕ್ ದೃಷ್ಟಿಯಿಂದ ಇದನ್ನು ಒಪ್ಪಲಾರರು. ಹಾಗಾಗಿ ಪ್ರಧಾನಮಂತ್ರಿಯಾಗಿ, ನೀವೇ  ಒಂದು ಧೃಢವಾದ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಸಿಂಗ್ ಅವರು.

ಒಂದೆರಡು ನಿಮಿಷಗಳ ಕಾಲ ಮೌನದಿಂದ ಏನನ್ನೋ ಯೋಚಿಸಿದ ರಾಯರು, ನೀವು ನಿಮ್ಮ ಕೆಲಸ ಮುಂದುವರಿಸಿ ನಾನು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ.  ಈ ಮಾತನ್ನು ಕೇಳಿದ ಮನಮೋಹನರು ತಮ್ಮ ಕಚೇರಿಗೆ ಹೋಗಿ ಇದೇ ಕುರಿತಾಗಿ ಕೆಲಸ ಮಾಡುತ್ತಿದ್ದ ಸುಮಾರು 20 ನಿಮಿಷಗಳಲ್ಲಿಯೇ ಪ್ರಧಾನ ಮಂತ್ರಿಗಳ ಕಾರ್ಯದರ್ಶಿ ಅವರ ಮುಖೇನ ಬಂದ ಪತ್ರವನ್ನು. ಕುತೂಹಲದಿಂದ ನೋಡಿದರೆ,, ನರಸಿಂಹ ರಾವ್ ಆವರು ತಮ್ಮ ಸ್ವಹಸ್ತಾಕ್ಷರದಲ್ಲಿ  ಕೆಲಸ ಮುಗಿದಿದೆ ಎಂದಷ್ಟೇ ಬರೆದಿದ್ದಾರೆ!

ಕ್ಯಾಬಿನೆಟ್ ಸಭೆಯನ್ನೇ ಕರೆಯದೇ ಅದು ಹೇಗೆ ಇಷ್ಟು ಬೇಗ ಮುಗಿಯಿತು? ಎಂದು ಆಶ್ಚರ್ಯಗೊಂಡ  ಸಿಂಗರು ಬಹುಶಃ ಕಾಂಗ್ರೆಸ್ಸಿನ ಅನೇಕ ಹಿರಿಯ ನಾಯಕರನ್ನು ಒಪ್ಪಿಸಿರಬಹುದು ಎಂದು ಯೋಚಿಸಿ ಕುತೂಹಲದಿಂದ ಮತ್ತೊಮ್ಮೆ ಪ್ರಧಾನ ಮಂತ್ರಿಗಳ ಕಛೇರಿಗೆ  ಬಂದು ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸುತ್ತಾರೆ.

vajಅದಕ್ಕೆ ಮಂದಹಾಸದಿಂದ ಉತ್ತರಿಸಿದ ನರಸಿಂಹರಾಯರು, ಇದು ತುಂಬಾ ಸುಲಭವಾಗಿ ಪರಿಹಾರವಾಯಿತು. ನೀವು ಹೋದ ಕೂಡಲೇ ನಾನು ವಿರೋಧ ಪಕ್ಷದ ನಾಯಕರಾದ  ಅಟಲ್  ಬಿಹಾರಿ ಅವರೊಂದಿಗೆ ಮಾತನಾಡಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದೆ. ದೇಶದ ಹಿತದೃಷ್ಟಿಯಿಂದ ನೀವು ತೆಗೆದುಕೊಳ್ಳಲಿರುವ ಈ ಕಠಿಣ ಆರ್ಥಿಕ ನಿರ್ಧಾರಕ್ಕೆ ವಿರೋಧಪಕ್ಷವಾಗಿ ನಮ್ಮ ಬೆಂಬಲವಿದೆ ಎಂದು ಸೂಚಿಸಿದ ಕಾರಣ, ನಾನು ನಿಮಗೆ ಎಲ್ಲವೂ ಮುಗಿದಿದೆ. ನಿಮ್ಮ ಕೆಲಸ ಮುಂದುವರೆಸಿ ಎಂಬ ಸಂದೇಶ ರವಾನಿಸಿದೆ  ಎಂದು ಹರ್ಷದಿಂದ ಹೇಳುತ್ತಾರೆ.

ಅರೇ, ಇದೆಂತಹ ಆಶ್ಚರ್ಯ? ನೀವು ನಿಮ್ಮ ಸ್ವಂತ ಕ್ಯಾಬಿನೆಟ್ಗಿಗಿಂತ ಅಟಲ್ ಜೀ  ಅವರನ್ನು ನಂಬುತ್ತೀರಾ? ಎಂಬ ಮನಮೋಹನ್ ರ ಪ್ರಶ್ನೆಗೆ, ರಾಯರು ನಗುತ್ತಾ, ಹೌದು. ದೇಶದ ಹಿತದೃಷ್ಟಿಯಿಂದ ನಾವು ತೆಗೆದುಕೊಂಡ ಧೃಢ ನಿರ್ಧಾರವನ್ನು ಒಪ್ಪಿಕೊಳ್ಳುವ ಏಕೈಕ ವ್ಯಕ್ತಿ ಎಂದರೆ ಅಟಲ್ ಜೀ  ಎಂಬ ವಿಷಯ ನನಗೆ ತಿಳಿದಿದೆ ಎನ್ನುತ್ತಾರೆ.

ದೇಶ ದಿವಾಳಿಯಾಗುವುದನ್ನು ತಪ್ಪಿಸುವ ಸಲುವಾಗಿ ಮನಮೋಹನ್  ಸಿಂಗ್ ಜಾರಿಗೆ ತಂದ ಇಂತಹ  ಕಠಿಣ ನಿರ್ಧಾಕ್ಕೆ  ಅಟಲ್ ಜೀ ನೇತೃತ್ವದ ಪ್ರತಿಪಕ್ಷವು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಪ್ರತಿಭಟನಾ ಆಂದೋಲನವನ್ನು ಆಯೋಜಿಸಲಿಲ್ಲ. ಬದಲಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಎತ್ತಿ ಹಿಡಿಯುವ ಸಲುವಾಗಿ ಸರ್ಕಾರಕ್ಕೆ ಸಂಪೂರ್ಣವಾದ ಬೆಂಬಲವನ್ನು ಸೂಚಿಸಿತ್ತು. ಇಂದು ಡಾಲರ್ ವಿರುದ್ಧ ನಮ್ಮ ದೇಶದ ಹಣ ಅಷ್ಟೇಕೆ ದುರ್ಬಲವಾಗಿದೆ? ಎಂದು ಪ್ರಶ್ನಿಸುವವರು ಈ ಪ್ರಸಂಗದ ಬಗ್ಗೆ ತಿಳಿವಳಿಗೆ ಹೊಂದಿರಬೇಕು.

modiಆಂದಿನಂತೆ ಇಂದು ಆರ್ಥಿಕ ಪರಿಸ್ಥಿತಿ ಕೆಟ್ಟಿಲ್ಲದಿದ್ದರು ಕೊರೋನಾ ಮಹಾಮಾಯಿಂದಾಗಿ ದೇಶದ ಪರಿಸ್ಥಿತಿ ಇದಕ್ಕಿಂತಲೂ ವಿಭಿನ್ನವಾಗಿ ಇಲ್ಲ.  ಇಂದು ಪ್ರಧಾನ ಮಂತ್ರಿಗಳ ಹಾಟ್ ಸೀಟಿನಲ್ಲಿ ಶ್ರೀ ನರೇಂದ್ರ ಮೋದಿಯವರಿದ್ದರೆ, ದುರಾದೃಷ್ಟವಶಾತ್ ಅಟಲ್ ಜೀ ಅವರಂತರ ಸಮರ್ಥ ವಿರೋಧ ಪಕ್ಷದ ನಾಯಕರೇ ಇಲ್ಲದಿರುವುದು ದೇಶದ ದೌರ್ಭಾಗ್ಯವಾಗಿದೆ.  ಮೋದಿಯವರು ಅಧಿಕಾರಕ್ಕೆ ಬಂದ ಕಳೆದ ಏಳು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು  ಎತ್ತಿ ಹಿಡಿದಿರುವುದಲ್ಲದೇ, ಜಗತ್ತಿನೆಲ್ಲೆಡೆ ತಾವೊಬ್ಬ ಸಮರ್ಥ ನಾಯಕ ಎಂಬ ಜನಪ್ರಿಯತೆಯನ್ನು ಗಳಿಸಿದ್ದಾರೆ.  ಪ್ರಪಂಚದ ಯಾವುದೇ ಮೂಲೆಯ ಸಮಸ್ಯೆಯಿದ್ದರೂ ಅದರ ಪರಿಹಾರಕ್ಕೆ ಭಾರತದತ್ತ ಚಿತ್ತ ಹರಿಸುವಂತೆ ಮಾಡಿರುವುದು ಪ್ರಸ್ತುತ ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.

ಅಧಿಕಾರಕ್ಕೆ ಏರುವಾಗ ನಾ ಖಾವುಂಗಾ, ನಾ ಖಾಣೇ ದೂಂಗಾ ಎಂಬ ಹೇಳಿಕೆಗೆ ಇಂದಿಗೂ ಬದ್ಧರಾಗಿ ಇದುವರೆವಿಗೂ  ಹಗರಣ ಮುಕ್ತ ಸರ್ಕಾರವನ್ನು  ಮುನ್ನಡೆಸುತ್ತಿದ್ದಾರೆ. ಅವರನ್ನು ವಿರೋಧಿಸಲು ಅಂಬಾನಿ, ಅದಾನಿ, ರಫೇಲ್ ಮುಂತಾದ  ವಿಷಯಗಳಿಗೆ ಜನರು ಮನ್ನಣೆ ಹಾಕದೇ ಎರಡನೇ ಬಾರಿಗೂ ಅಭೂತಪೂರ್ವ ಬಹುಮತವನ್ನು ಜನರು ಕೊಟ್ಟಿರುವುದು ವಿರೋಧ ಪಕ್ಷಗಳು ಸಹಿಸಲಾರದೇ,  ಈ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಲಸಿಕೆಯನ್ನು ತಯಾರಿಸಿ ಪ್ರಪಂಚದ ಬಹುತೇಕ ರಾಷ್ಟ್ರಗಳಿಗೆ ಯಾವುದೇ ವ್ಯಾವಹಾರಿಕ ಲಾಭಾಂಶ ನೋಡದೇ,  ಅತ್ಯಂತ ಕಡಿಮೆ ಬೆಲೆಯಲ್ಲಿ ಲಸಿಕೆಯನ್ನು ಹಂಚುವ ಮೂಲಕ ವಸುದೈವ ಕುಟುಂಬಕಂ ಎಂಬ ನಮ್ಮ ತತ್ವವನ್ನು ಎತ್ತಿ ಹಿಡಿದಿದ್ದನ್ನೇ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಇಂದು ನಮ್ಮಲ್ಲಿ ಆಮ್ಲಜನಕ ಮತ್ತು ರೆಮ್ದಿಸಿವರ್ ಔಷಧಿಯ ಕೊರತೆ ಇದೆ ಎಂದು ತಿಳಿದ  ಕೂಡಲೇ ಬಹುತೇಕ ರಾಷ್ಟ್ರಗಳು ಖುದ್ದಾಗಿ ಸ್ವಯಂ ಪ್ರೇರಣೆಯಿಂದ ಸಹಾಯ ಹಸ್ತವನ್ನು ಚಾಚಿರುವುದು ನಮ್ಮ ಪ್ರಧಾನ ಮಂತ್ರಿಗಳ ವಿದೇಶಗಳೊಂದಿಗೆ ಬೆಳಸಿಕೊಂಡಿರುವ ಸೌಹಾರ್ಧತೆಗೆ ಸಾಕ್ಷಿಎಂಬುದನ್ನು ಅರಿತಿದ್ದರೂ ಜಾಣ ಕುರುಡುತನವನ್ನು ವಿರೋಧಪಕ್ಷದವರು ತೋರುತ್ತಿದ್ದಾರೆ.

opp2ಸದಾ ಕಾಲವೂ ತಮ್ಮ ಓಟ್ ಬ್ಯಾಂಕ್ ರಾಜಕಾರಣದಲ್ಲೇ ಮುಳುಗಿರುವ ನಮ್ಮ ವಿರೋಧ ಪಕ್ಷಗಳಿಗೆ  ಪ್ರಧಾನಿಗಳ  ಇಂತಹ ಜನಪ್ರಿಯತೆ ಸಹಿಸಲಾರದೇ ಅನಗತ್ಯವಾಗಿ, ಅಹಸ್ಯಕರ ರೀತಿಯಲ್ಲಿ ಅವಾಚ್ಯ ಶಭ್ಧಗಳಿಂದ ಸರ್ಕಾರವನ್ನು ಮತ್ತು ಪ್ರಧಾನ ಮಂತ್ರಿಗಳನ್ನು ಟೀಕಿಸುತ್ತಾ, ಲಸಿಕಾ ಆಭಿಯಾನದಲ್ಲಿ ಜನರು ಭಾಗಿಯಾಗುವುದನ್ನು ತಡೆ ಒಡ್ಟುತ್ತಾ, ಗಳಿಗೆ ಸಿದ್ದ ಒಳಗೊಳಗೇ ಮೆದ್ದ ಎನ್ನುವಂತೆ ಸದ್ದಿಲ್ಲದೇ ತಾವು ಮಾತ್ರಾ ಎರಡು ಬಾರಿ  ಉಚಿತವಾಗಿ ಲಸಿಕೆಯನ್ನು ಹಾಕಿಸಿಕೊಂಡಿರುವುದು ಮಾತ್ರಾ ವಿಪರ್ಯಾಸವೇ ಸರಿ.

ಇಂತಹ ಸಂಕಷ್ಟ ಕಾಲದಲ್ಲಿ ವಿದೇಶಿಗರು ಮುಕ್ತವಾಗಿ ಸಹಾಯ ಹಸ್ತವನ್ನು ಚಾಚಿರುವುದನ್ನು ಮೋದಿಯವರ ವಿರುದ್ಧದ ತಮ್ಮ ವಯಕ್ತಿಕ ದ್ವೇಷ ಅಥವಾ ಅಸೂಯೆಯಿಂದಾಗಿ ಸಹಿಸದ ನಮ್ಮ  ವಿರೋಧ ಪಕ್ಷಗಳು  ಇದೇನೇ ಅಚ್ಚೇ ದಿನ್? ಇದೇನೇ ಆತ್ಮ ನಿರ್ಭರ್?  ಎಂದು ಕುಹಕವಾಡುತ್ತಾ ವಿಕೃತಿಯಲ್ಲಿ ಮೆರೆಯುವ ಮುಖಾಂತರ ಮೋದಿಯವರನ್ನು ಸಂವಿಧಾನಾತ್ಮಕವಾಗಿ ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗದೇ ಈ ರೀತಿಯಾಗಿ ಅಪಪ್ರಚಾರ ಮಾಡುವ ಮುಖಾಂತರ ತಮ್ಮ ಬೇಳೆ ಬೇಯಿಸಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.

nationದೇಶದ ಒಬ್ಬ ಜವಾಬ್ಧಾರಿ ನಾಗರೀಕರಾಗಿ ನಮಗೇ ದೇಶದ ಬಗ್ಗೆ ಈಪರಿಯ ಕಾಳಜಿ ಇರುವಾಗ ಇನ್ನು135 ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನ ಮಂತ್ರಿಗಳಿಗೆ ಇದರ  ಅರಿವಿರುವುದಿಲ್ಲವೇ? ವಿರೋಧಿಗಳ ನಿರಂತರ ಅಸಹಕಾರದ ನಡುವೆಯೂ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಕಾಯಾ ವಾಚಾ ಮನಸಾ ಸತತವಾಗಿ ವಿವಿಧ ಪ್ರಯತ್ನಗಳನ್ನು ಮಾಡುತ್ತಿರುವ ನಮ್ಮ ಪ್ರಧಾನಿಗಳ ಮೇಲೆ ವಿಶ್ವಾಸವನ್ನು ಇರಿಸೋಣ. ಕೋವಿಡ್  ಸಂಬಂಧಿತ ಎಲ್ಲಾ ಸುರಕ್ಷೆಗಳನ್ನೂ ಸ್ವಪ್ರೇರಣೆಯಿಂದ ಪಾಲಿಸಿ, ಲಸಿಕಾ ಆಭಿಯಾನದಲ್ಲಿ ಪಾಲ್ಗೊಂಡು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಲ್ಲದೇ ದೇಶ ವಿರೋಧಿ ಶಕ್ತಿಗಳನ್ನೂ ಬಗ್ಗು ಬಡಿಯುವಂತಹ ಶಕ್ತಿಯನ್ನು ಬೆಳಸಿಕೊಳ್ಖೋಣ.

modi10ಪ್ರಧಾನ ಮಂತ್ರಿಗಳೇ ಹೇಳಿರುವಂತೆ, ಮೋದಿ ಬರ್ತಾನೇ, ಹೋಗ್ತಾನೆ. ಆದರೆ ಈ ಭಾರತ ದೇಶ ಇಲ್ಲೇ ಇರುತ್ತದೆ. ದಯವಿಟ್ಟು ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ದೇಶವನ್ನು ದುರ್ಬಲಗೊಳಿಸುತ್ತಿರುವ ವಿರೋಧ ಪಕ್ಷಗಳ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗದಿರೋಣ. ನಮಗೆ ವ್ಯಕ್ತಿಗಿಂತ ಅಭಿವ್ಯಕ್ತಿ ಮುಖ್ಯ. ಪಕ್ಷಕ್ಕಿಂತ  ರಾಷ್ಟ್ರ ಮುಖ್ಯ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರುವಂತೆ ಸುಧೀರ್ಘ ಮಾತುಕತೆ ನಡೆಯುತ್ತಲೇ ಇವೆ.

ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಲು, ಪೂರ್ವನಿರ್ಧಾರಿತವಾಗಿದ್ದಂತೆ ಜನರಲ್ ಎಂ.ಎಂ.ನರವಣೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್ ಪ್ರಾಂತ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಕಳೆದ ಸಂಜೆ ಕಡೆಯ ನಿಮಿಷದ ಬೆಳವಣಿಗೆಯಲ್ಲಿ ರಾಜನಾಥ್ ಸಿಂಗ್ ಅವರ ಲೇಹ್ ಭೇಟಿ ಮುಂದೂಡಿದ್ದದ್ದು ಎಲ್ಲರಿಗೂ ಅಚ್ಚರಿ ಮೂಡಿಸುತ್ತು.

ಚೀನಾ ದೇಶದ ಸೈನಿಕರ ಈ ಉದ್ಧಟತನದ ದುಷ್ಕೃತ್ಯವನ್ನು ನಮ್ಮ ಸೈನಿಕರು ಆ ಕ್ಷಣದಲ್ಲಿಯೇ ಮಟ್ಟಹಾಕಿ, ಅವರನ್ನು ಭಾರತದ ಗಡಿಯೊಳಗೆ ಒಂದಿಚೂ ಆಕ್ರಮಣ ಮಾಡದಂತೆ ತಡೆದಿದ್ದರೂ, ನಮ್ಮ ದೇಶದ ವಿರೋಧ ಪಕ್ಷಗಳಾದ ಕಾಂಗ್ರೇಸ್ ಮತ್ತು ಸದಾ ಚೀನಾದ ಪರವಾಗಿರುವ ಕಮ್ಯೂನಿಷ್ಟರು ದೇಶದ ರಕ್ಷಣೆಯ ಬಗ್ಗೆ ಕಿಂಚಿತ್ತೂ ಗಂಭಿರವಿಲ್ಲದೇ, ತಪ್ಪೆಲ್ಲವೂ ನಮ್ಮ ಸೈನಿಕರದ್ದೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶತ್ರುಗಳಿಗೆ ನೆರವಿನ ಹಸ್ತವನ್ನು ಚಾಚಿದ್ದರು ಎಂದರೂ ತಪ್ಪಾಗಲಾರದು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ರಾಹುಲ್ ಗಾಂಧಿ, ಭಾರತ ಮತ್ತು ಚೀನಾದ ನಡುವೆ ದೇವೇಗೌಡುರು ಮತ್ತು ಮನ್ಮೋಹನ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಆದ ಗಡಿ ಒಪ್ಪಂದದ ಅರಿವಿಲ್ಲದೇ, ಗಡಿ ಕಾಯುವ ಸೈನಿಕರು ನಿಶ್ಯಸ್ತ್ರರಾಗಿ ಹೋರಾಡಿದ್ದು ಏಕೆ? ಚೀನಾ ಸೈನಿಕರು ಭಾರತದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದರೂ 56 ಇಂಚಿನ ನಮ್ಮ ಪ್ರಧಾನಿಗಳು ಏಕೆ ಮಾತನಾಡುತ್ತಿಲ್ಲ? ಎಂದು ಬಹಿರಂಗವಾಗಿಯೇ ಪ್ರಧಾನಿಗಳನ್ನು ಪ್ರಶ್ನಿಸಿದ್ದರು.

WhatsApp Image 2020-07-03 at 11.41.01 AM

ಒಬ್ಬ ಸಮರ್ಥ ನಾಯಕನಾದವನ್ನು ಪರಿಸ್ಥಿತಿಯನ್ನು ಕೂಲಂಕುಶವಾಗಿ ಸಾಧಕ ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸಮಯೋಜಿತವಾಗಿ ಉತ್ತರಿಸಬೇಕೇ ಹೊರತು, ಕತ್ತೆ ಎಲ್ಲೆಂದರಲ್ಲಿ ಉಚ್ಚೆ ಹುಯ್ದಂತೆ ಆ ಕೂಡಲೇ ಉತ್ತರಿಸಬಾರದು ಎಂಬುದನ್ನು ಅಚ್ಚರಿಯ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆ ಲೇಹ್ ಪ್ರಾಂತ್ಯಕ್ಕೆ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಭೂ ಸೇನಾ ಪಡೆ ಮುಖ್ಯಸ್ಥ ಜ. ಎಂ. ಎನ್ ನರವಣೆ ಯವರ ಸಹಿತ ಭೇಟಿ ನೀಡಿ ತಮ್ಮ ಪ್ರಭುದ್ಧತೆಯನ್ನು ಮೆರೆದಿದ್ದಾರೆ ಎಂದರೆ ತಪ್ಪಾಗಲಾರದು.

ಸೈನಿಕರನ್ನು ಉದ್ದೇಶಿಸಿ ಮಾತನಾಡಿದಾಗ ಕೊಳಲನ್ನು ನುಡಿಸುವ ಕೃಷ್ಣನನ್ನು ಪ್ರಾರ್ಥಿಸುವ ಜನರೂ ನಾವೇ, ಅದೇ ಸುದರ್ಶನ ಚಕ್ರವನ್ನು ಹೊತ್ತ ಭಗವಾನ್ ಕೃಷ್ಣನನ್ನು ಆರಾಧಿಸುವ ಮತ್ತು ಅನುಸರಿಸುವ ಜನರೂ ನಾವೇ. ನಮಗೆ ಕೊಳಲು ಊದಲೂ ಗೊತ್ತಿದೆ, ಸುದರ್ಶನ ಚಕ್ರ ಪ್ರಯೋಗಿಸಲೂ ಗೊತ್ತಿದೆ. ಎಂದು ನಮ್ಮ ಗಡಿ ಕಾಯುವ ಸೈನ್ಯಕರಿಗೆ ಹುರಿದುಂಬಿಸಿ, ಪರೋಕ್ಷವಾಗಿ ಶತ್ರು ರಾಷ್ಟ್ರಗಳಿಗೆ ಸ್ನೇಹಕ್ಕೆ ಬದ್ಧ. ಸಮರಕ್ಕೂ ಸಿದ್ಧ ಎಂಬ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನ ಮಂತ್ರಿಗಳು ತಮ್ಮ ಇತ್ತೀಚಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಲಡಾಖ್ ಗಡಿಯಲ್ಲಿ ನಮ್ಮ ನೆಲ ಕಬಳಿಸಲು ಬಂದಿದ್ದ ಚೀನಾ ಸೇನೆಗೆ ನಮ್ಮ ಸೇನೆ ತಕ್ಕದಾದ ಉತ್ತರವನ್ನು ನೀಡಿದ್ದಾರೆ. ಈ ಸಂಘರ್ಷದಲ್ಲಿ ನಮ್ಮ ದೇಶಕ್ಕಾಗಿ ಮಡಿದ ಆ 20 ಸೈನಿಕರ ಬಲಿದಾನ ಖಂಡಿತವಾಗಿಯೂ ನಾವು ವ್ಯರ್ಥವಾಗಲು ಎಂದಿಗೂ ಬಿಡುವುದಿಲ್ಲ ಎಂದಿದ್ದರು. ಪ್ರಧಾನಿ ಮೋದಿಯವರ ಇಂದಿನ ಲೇಹ್ ಭೇಟಿ ಆ ಮಾತಿಗೆ ಪುಷ್ಟಿ ಕೊಡುವಂತಿದೆಯಲ್ಲದೇ, ಭಾರತೀಯ ಸೈನಿಕರಿಗೆ ಮತ್ತಷ್ಟೂ ಹುರುಪು ನೀಡುವುದರಲ್ಲಿ ಸಂದೇಹವೇ ಇಲ್ಲ.

pm1

ಪ್ರಧಾನಿಗಳು ಲಡಾಖ್ಖಿನ ನಿಮುನಲ್ಲಿರುವ ಫಾರ್ವರ್ಡ್ ಲೊಕೇಶನ್ ಪ್ರದೇಶದಲ್ಲಿ ಸೈನ್ಯ, ವಾಯುಪಡೆ ಮತ್ತು ಐಟಿಬಿಪಿಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದ್ದಾರೆ. ಸಮುದ್ರ ಮಟ್ಟಕ್ಕಿಂತ ಸುಮಾರು 11,000 ಅಡಿ ಎತ್ತರದಲ್ಲಿರುವ ಈ ನಿಮು, ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿ ಒಂದಾಗಿದೆ. ಸಿಂಧೂ ನದಿಯ ತೀರದಲ್ಲಿರುವ ಈ ನಿಮು ಪ್ರದೇಶ ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದೆ. ಪ್ರಧಾನಿಗಳೇ ಇಂತಹ ದುರ್ಗಮ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸೈನಿಕರು ಮತ್ತು ಸೈನ್ಯಾಧಿಕಾರಿಗಳನ್ನು ಮುಖಃತಹ ಭೇಟಿ ನೀಡಿ ಭಾರತ ಮತ್ತು ಚೀನಾ ನಡುವಿನ ಪ್ರಸಕ್ತ ಸಂಘರ್ಷದ ಸ್ಥಿತಿಗತಿಗಳನ್ನು ಅವರ ಬಾಯಿಯಿಂದಲೇ ಕೇಳಿ ಅರ್ಥ ಮಾಡಿಕೊಂಡಿರುವುದು ಮುಂದಿನ ದಿನಗಳಲ್ಲಿ ಅಲ್ಲಿ ನಡೆಯ ಬಹುದಾದ ಒಂದು ಭಾರೀ ಯೋಜನೆಗೆ ಈ ಭೇಟಿ ಪುಷ್ಠಿಯಾಗಲಿದೆ ಎಂದರೂ ತಪ್ಪಾಗಲಾರದು.

WhatsApp Image 2020-07-03 at 1.17.36 PM

ಯಾವುದೇ ಮುನ್ಸೂಚನೆ ನೀಡದೇ ಸ್ವತಃ ಪ್ರಧಾನಿಗಳೇ ಗಡಿ ಭಾಗಕ್ಕೆ ಭೇಟಿ ನೀಡಿ ಸೈನಿಕರ ಸ್ಥಿತಿಗತಿಗಳನ್ನು ಅರಿತು, ಭಯಪಡದಿರಿ. ನಾವು ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಸುಖಃ ದುಃಖಗಳಿಗೆ ಭಾಜನರಾಗುತ್ತೇವೆ ಎಂದು ಬೆನ್ನು ತಟ್ಟಿ ಹೇಳಿದರೆ ನಮ್ಮ ಸೈನಿಕರ ಹುಮ್ಮಸ್ಸು ಮತ್ತು ಮನಸ್ಥೈರ್ಯ ಖಂಡಿತವಾಗಿಯೂ ಹೆಚ್ಚುತ್ತಲ್ಲದೇ, ನಮ್ಮ ಪ್ರಧಾನಿಗಳು ಈ ಸಂಘರ್ಷವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂದಿದ್ದಾರೆ ಎಂಬುದನ್ನು ನಮ್ಮ ಶತ್ರುದೇಶಗಳಿಗೂ ಒಂದು ಎಚ್ಚರಿಕೆಯ ಗಂಟೆಯಾಗಿ ತಿಳಿಸಿದಂತಾಗುತ್ತದೆ.

WhatsApp Image 2020-07-03 at 1.17.36 PM (1)

ಕೆಲವೊಮ್ಮೆ ಗಡಿಭಾಗದಲ್ಲಿ ದೇಶದ ಅತ್ಯುನ್ನತ ನಾಯಕರ ಈ ರೀತಿಯ ಮೌನವಾದ ಧಿಢೀರ್ ಭೇಟಿಗಳನ್ನು ಗಮನಿಸಿ ಅದರ ತೀಕ್ಷಣತೆಯನ್ನು ಅಥವಾ ತೀವ್ರತೆಯನ್ನು ಅರ್ಥೈಸಿಕೊಳ್ಳುವ ಶತ್ರುರಾಷ್ಟಗಳು ಸಂಘರ್ಷವನ್ನು ಬದಿಗೊತ್ತಿ ಶಾಂತಿ ಸುವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗವಂತೆ ಮಾಡುವ ಒಂದು ತಂತ್ರಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. . ಇಲ್ಲಾ ಆನೇ ನಡೆದದ್ದೇ ಹಾದಿ ಎಂದು ನಮ್ಮ ಮೇಲೇ ಆಕ್ರಮಣ ಮಾಡಿದರೇ ಈಗಾಗಲೇ ಶಸ್ತ್ರ ಸನ್ನದ್ಧರಾಗಿರುವ ಮತ್ತು ಪ್ರಧಾನಿಗಳ ಭೇಟಿಯಿಂದ ಪ್ರೇರೇಪಿತರಾಗಿರುವ ಸೈನಿಕರ ಗುಂಡೇಟಿಗೆ ಬಲಿಯಾಗುವುದು ನಿಶ್ವಿತ. ಇದು ಖಂಡಿತವಾಗಿಯೂ 1962ರಲ್ಲಿ ಇದ್ದ ಸರ್ಕಾರವಲ್ಲ. ಈಗಾಗಲೇ ನಮ್ಮ ಸೈನಿಕರಿಗೆ ಅಗತ್ಯವಾದ ಶಸ್ತ್ರಾಸ್ತ್ಯಗಳು ಮತ್ತು ಯುದ್ದೋಪಕರಣಗಳನ್ನು ಗಡಿ ಪ್ರದೇಶಕ್ಕೇ ರವಾನಿಸಲಾಗಿದೆ ಮತ್ತು ಮತ್ತಷ್ಟನ್ನು ಅತೀ ಶೀಘ್ರದಲ್ಲಿ ತಲುವಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದೆ. ಎಲ್ಲದ್ದಕ್ಕೂ ಮಿಗಿಲಾಗಿ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳದಲ್ಲಿಯೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಸೇನೆಗಳಿಗೇ ನೀಡಲಾಗಿರುವುದು ಗಮನಾರ್ಹವಾದ ಅಂಶ.

ನಿಜ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ದಲ್ಲಿ ಯುದ್ದವೇ ಎಲ್ಲದಕ್ಕು ಪರಿಹಾರವಲ್ಲವಾದರೂ ಕಾಲು ಕೆರೆದುಕೊಂಡು ನಮ್ಮ ಮೇಲೇ ಆಕ್ರಮಣ ಮಾಡುವವರನ್ನು ಹಿಂದಿನಂತೆ ಎಷ್ಟು ದಿನ ಎಂದು ಸಹಿಸಿಕೊಳ್ಳುವುದು? ಸುಮ್ಮನಿದ್ದಲ್ಲಿ ನಾಯಿ ಬೊಗುಳುತ್ತಲೇ ಹೋಗುತ್ತದೆ. ತಿರುಗಿ ನಿಂತು ಒಂದು ಕಲ್ಲನ್ನು ಒಗೆಯದೇ, ಸುಮ್ಮನೆ ಒಗೆದ ಹಾಗೇ ಮಾಡಿದರೂ ಸಾಕು. ನಾಯಿ ಬಾಲ ಮುದುರಿಕೊಂಡು ಹೋಗುತ್ತದೆ. ಪ್ರಧಾನಿಗಳ ಇಂದಿನ ಭೇಟಿ ಅಂತಹದ್ದೇ ಇಂದು ದಿಟ್ಟ ಉತ್ತರವಾಗಿದೆ. ಗಡಿಗಳಲ್ಲಿ ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ಹೋರಾಡುತ್ತಿರುವಾಗ ಒಬ್ಬ ಜವಾಬ್ಧಾರೀ ನಾಗರೀಕರಾಗಿ ನಾವೂ ನೀವು ಬಾಯಿ ಚಪಲಕ್ಕೆ ಏನೇನೋ ಒದರದೇ, ದೇಶ ಮತ್ತು ಸೈನಿಕರ ಧೈರ್ಯ ಮತ್ತು ಸ್ಥೈರ್ಯವನ್ನು ಹೆಚ್ಚಿಸುವ ಮಾತುಗಳನ್ನೇ ಆಡೋಣ. ಆ ಮಾತುಗಳನ್ನು ಆಡಲು ಬಾರದಿದ್ದಲ್ಲಿ ಕನಿಷ್ಟ ಪಕ್ಷ ಸುಮ್ಮನಾಗಿದ್ದರೂ ಸಾಕು.

ಏನಂತೀರೀ?

ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

kame4ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಅನಕ್ಷರಸ್ಥ ಕುರಿ ಕಾಯುವ ವೃತ್ತಿಯನ್ನು ಮಾಡುವ 84 ವರ್ಷ ಕುರುಬ ಕಲ್ಮನೆ ಕಾಮೇಗೌಡ ಎಂಬ ಹೆಸರು ಬಹುಶಃ ಅವರ ಊರು ಅಥವಾ ಅವರ ತಾಲ್ಲೂಕಿನ ಹೊರತಾಗಿ ಹೊರಗಿನವರಿಗೆ ಹೆಚ್ಚಾಗಿ ಪರಿಚಯವೇ ಇರಲಿಲ್ಲ. ಆದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್  ನಲ್ಲಿ ಈ ವ್ಯಕ್ತಿಯ ಬಗ್ಗೆ  ಯಾವಾಗ ಮಾತನಾಡಿದರೋ ಆ ಕೂಡಲೇ ಅವರ ಹೆಸರು ದೇಶಾದ್ಯಂತ ಪರಿಚಿತವಾಗಿ ಗೂಗಲ್ಲಿನಲ್ಲಿ ಅತ್ಯಂತ ಹೆಚ್ಚಿನ ಜನರು  ಅವರ ಬಗ್ಗೆ ಹುಡುಕಿದ್ದಾರೆ ಎಂದರೆ ತಪ್ಪಾಗಲಾರದು.

 

kame1ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಮಾಡುತ್ತಿದ್ದ ಕೆಲಸವನ್ನು ಮತ್ತು ಇಂದಿನ  ಅನೇಕ ಸರ್ಕಾರಗಳೂ ಮಾಡದಂತಹ ಶ್ಲಾಘನೀಯವಾದ ಕೆಲಸವನ್ನು ಅವರು ಯಾವುದೇ ಆರ್ಥಿಕ ನೆರವಿಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿರುವುದು ನಿಜಕ್ಕೂ ಅದ್ಭುತ, ಅಮೋಘ, ಅನನ್ಯ, ಆಭಿನಂದನಾರ್ಹ ಮತ್ತು ಅನುಕರಣಿಯವಾದುದು. ಇಂದಿನ ಕಾಲದಲ್ಲಿ ಇರುವ ಕೆರೆ ಕಟ್ಟೆಗಳನ್ನೇ  ದುರಾಸೆಯಿಂದ  ತಮ್ಮ ಸ್ವಾರ್ಥಕ್ಕಾಗಿ  ಮುಚ್ಚಿ ಹಾಕಿ ಅದರ ಮೇಲೆ  ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುವವರೇ ಹೆಚ್ಚಾಗಿರುವಾಗ, ಕಳೆದ 42 ವರ್ಷಗಳಲ್ಲಿ ಅವರು ತಮ್ಮ ಹಳ್ಳಿಯಲ್ಲಿ 16 ಕೊಳಗಳನ್ನು  ನಿರ್ಮಿಸಿ  ತಮ್ಮ ಗ್ರಾಮದಲ್ಲಿ ಹಸಿರು ಪರಿಸರದ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಬೇಸಿಗೆಯೂ ಸೇರಿದಂತೆ ವರ್ಷವಿಡೀ ನೀರಿನಿಂದ ತುಂಬಿ ತುಳುಕುತ್ತಾ  ಸುತ್ತ ಮುತ್ತಲಿನ  ಪಶು ಪಕ್ಷಿಗಳಿಗೆ ನೀರುಣಿಸುತ್ತಿದೆಯಲ್ಲದೇ ಇಡೀ ಅವರ ಹಳ್ಳಿಯನ್ನು  ಹಚ್ಚ ಹಸಿರು ವಲಯವನ್ನಾಗಿಸಿದೆ.

ಸುಮಾರು 42 ವರ್ಷಗಳ ಹಿಂದೆ ಮಳವಳ್ಳಿ ತಾಲೂಕ್ಕಿನಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ದಾಸನದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಕುಂದನ ಬೆಟ್ಟ ಬಹುತೇಕ ಬಂಜರನಿಂದ ಕೂಡಿದ್ದು ಬೆಟ್ಟದಲ್ಲಿ ಯಾವುದೇ ಹಸಿರು ಇಲ್ಲದೆ ವಿರಳವಾದ ಪೊದೆಗಳಿದ್ದವು. ಈ ಬೆಟ್ಟಕ್ಕೆ ತಮ್ಮ ಕುರಿಗಳನ್ನು ಮೇಯಿಸಲು ಕರೆದು ಕೊಂಡು ಹೋದಾಗ ಕುರಿಗಳಿಗೆ ನೀರಿನ ಕೊರತೆ ಕಾಣಿಸಿದಾಗ ಇದಕ್ಕೊಂದು ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂದು ನಿರ್ಧರಿಸಿ, ಬೆಟ್ಟದ ಮೇಲೆ ಸುರಿಯುತ್ತಿದ್ದ ಮಳೆಯ ಎಲ್ಲಿಯೂ ನಿಲ್ಲದೇ ಸುಮ್ಮನೆ  ಇಳಿಜಾರುಗಳಲ್ಲಿ  ಹರಿದು ಹೋಗುತ್ತಿದ್ದನ್ನು ಗಮನಿಸಿ ಅವುಗಳನ್ನು ಆ ಬೆಟ್ಟದ ಮೇಲೆಯೇ ಹಿಡಿದಿಡಬೇಕೆಂದು ನಿರ್ಧರಿಸಿ ಅಲ್ಲಿಯೇ ಹೊಂಡವನ್ನು ನಿರ್ಮಿಸಲು ಯೋಚಿಸಿದರು.

ಕೊಳವನ್ನೇನೋ ನಿರ್ಮಿಸಲು ನಿರ್ಧರಿಸಿಯಾಗಿತ್ತು. ಅದರೆ ಅದಕ್ಕೆ ಬೇಕಾದ ಹಾರೆ, ಪಿಕಾಸಿ, ಗುದ್ದಲಿಯಂತಹ ಪರಿಕರಗಳನ್ನು ಕೊಳ್ಳಲು ಆವರ ಬಳಿ ಹಣವಿಲ್ಲದಿದ್ದಾಗ, ತಮ್ಮ  ಒಂದೆರಡು ಕುರಿಗಳನ್ನು ಮಾರಿ ಹಣವನ್ನು ಹೊಂಚಿಕೊಂಡು ತಮ್ಮ ಕೆಲಸವನ್ನು ಆರಂಭಿಸಿಯೇ ಬಿಟ್ಟರು. ಮೊದಲ ಕೊಳವನ್ನು ಅವರೊಬ್ಬರ ಪರಿಶ್ರಮದಿಂದಲೇ ನಿರ್ಮಿಸಲು ಸುಮಾರು ಆರು ತಿಂಗಳುಗಳ ಕಾಲ ತೆಗೆದುಕೊಂಡರು. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 9 ರವರೆಗೆ ಕೊಳಗಳನ್ನು ಅಗೆದು  ಆನಂತರ 9 ರಿಂದ ಸಂಜೆ 7 ರವರೆಗೆ ಕುರಿಗಳನ್ನು ಮೇಯಿಸುವ ವೇಳಾಪಟ್ಟಿಯನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಂಡು ಇದನ್ನೇ ಸುಮಾರು 42 ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

kame3ಆರು ತಿಂಗಳುಗಳ ಕಾಲ ಸತತ ಪರಿಶ್ರಮದಿಂದ ಬೆಟ್ಟದ ತಪ್ಪಲಿನಲ್ಲಿ ಅಗೆದ ಕೊಳದಲ್ಲಿ ಮಳೆಯ ನೀರು, ಹನಿ ಹನಿ ಗೂಡಿದರೇ ಹಳ್ಳ ಎನ್ನುವಂತೆ ಅವರ ಕೊಳದಲ್ಲಿ ನೀರು ತುಂಬಿದೊಡನೇ ಆ ನೀರನ್ನು ಕುಡಿಯಲು ಬೆಟ್ಟದ ಸುತ್ತಮುತ್ತಲಿನ ಪಶುಪಕ್ಷಿಗಳು ಬರತೊಡಗಿದ್ದನ್ನು ನೋಡಿದಾಗ ಕಾಮೇಗೌಡರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಮತ್ತು ಆದಕ್ಕೆ ಬೆಲೆ ಕಟ್ಟಲಾಗಲಿಲ್ಲ. ಈ ಕಾರ್ಯದಿಂದ ಪ್ರೋತ್ಸಾಹಿತರಾಗಿ ಮತ್ತಷ್ಟೂ ಹಳ್ಳಗಳನ್ನು ತೋಡಲು ನಿರ್ಧರಿಸಿದರು. ಆದರೆ ಈಗ ಅವರೊಬ್ಬರಲ್ಲದೇ ಅವರೊಂದಿಗೆ ಕೈಜೋಡಿಸಲು ಕೆಲವು ಗ್ರಾಮಸ್ಥರೂ ಒಪ್ಪಿಕೊಂಡರು. ಅವರೆಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಈಗ ಕುಂಡಿನಿ ಬೆಟ್ಟದ ಸುತ್ತ ಮುತ್ತಲು ಒಟ್ಟು 16 ಕೊಳಗಳನ್ನು ನಿರ್ಮಿಸಿದ್ದಾರೆ. ವರ್ಷವಿಡೀ ಇಲ್ಲಿ ನೀರು ಇರುವುದರಿಂದ ಕುಂಡಿನಿಬೆಟ್ಟವು ಹಚ್ಚ ಹಸಿರಿನಿಂದ ಕೂಡಿರುವುದಲ್ಲದೇ ಅಲ್ಲಿಯ ಅಂತರ್ಜಲದ ಪ್ರಮಾಣವೂ ಹೆಚ್ಚಾಗಿದೆ. ಇನ್ನೂ ಒಂದು ಗಮನಾರ್ಹವಾದ ಅಂಶವೆಂದರೆ ಈ ಎಲ್ಲಾ ಕೊಳಗಳಿಗೂ ಒಂದಕ್ಕೊಂದು ಸಂಪರ್ಕ ಹೊಂದಿದ್ದು ಈ ಎಲ್ಲಾ ಕೊಳಗಳು ತುಂಬಿ ತುಳುಕಿದ ನಂತರ ಹೆಚ್ಚುವರಿ ನೀರು ಕೆಳಗಿನ ಕೊಳಗಳಿಗೆ ಹರಿಯುವಂತೆ ನಿರ್ಮಿಸಿರುವುದು ಅವರ ಜಾಣ್ಮೆಯನ್ನು ತೋರಿಸುತ್ತದೆ. ತಮ್ಮೆಲ್ಲಾ ಸಮಯವನ್ನು ಈ ಕೊಳಗಳ ನಿರ್ಮಾಣ ಮತ್ತು ನಿರ್ವಹಣೆಗೇ ಮೀಸಲಿಟ್ಟಿರುವುದರಿಂದ ಶ್ರೀ ಕಾಮೇಗೌಡರನ್ನು ಅಲ್ಲಿಯ ಜನ ಹುಚ್ಚ ಎಂದು ಕರೆದರೂ ಅದಕ್ಕೆ ಇವರು ಸೊಪ್ಪು ಹಾಕದೇ ತಮ್ಮ ಕೆಲಸವನ್ನು ತಾವು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಬೆಟ್ಟದ ಮೇಲಿನ ಬಿದ್ದ ನೀರು ಹಾಗೆಯೇ ಹರಿದು ಹೋಗಬಾರದೆಂದು ಹೊರಗಿನಿಂದ ಹುಲ್ಲನ್ನು ತಂದು ಇಡೀ ಬೆಟ್ಟದ ಮೇಲೆ ಬೆಳೆಸಿದ್ದರಿಂದ  ಅಲ್ಲಿನ ಮಣ್ಣಿನ ತೇವಾಂಶ  ಹಾಗೆಯೇ ಉಳಿದಿದೆಯಲ್ಲದೇ ಮಣ್ಣಿನ ಸವಕಳಿಯನ್ನು ತಡೆದು ಮರ ಗಿಡಗಳು ಸದಾಕಾಲವೂ ಹಚ್ಚ ಹಸಿರಾಗಿರುತ್ತವೆ. ಇಷ್ಟೋಂದು ಕೊಳಗಳನ್ನು ನಿರ್ಮಿಸಲು ಸುಮಾರು 10 ರಿಂದ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರಾದರೂ ಅವರು ಎಂದಿಗೂ ಸಾಲ ತೆಗೆದುಕೊಂಡಿಲ್ಲ ಎನ್ನುವುದು ಮೆಚ್ಚ ಬೇಕಾದ ಸಂಗತಿ. ಅವರ ಈ ಹೆಮ್ಮೆಯ ಕಾರ್ಯವನ್ನು ಗುರುತಿಸಿ ಅವರಿಗೆ ಬಸವಶ್ರೀ  ಪ್ರಶಸ್ತಿಯಲ್ಲದೇ ಇನ್ನೂ ಹಲವಾರು ಪುರಸ್ಕಾರಗಳು ಮತ್ತು ನಗದುಗಳು ಬಂದಾಗ  ಅದೆಲ್ಲವನ್ನೂ ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೇ ಎಲ್ಲವನ್ನೂ ಈ ಕೊಳಗಳ ನಿರ್ಮಾಣಕ್ಕೇ ಸುರಿದಿದ್ದಾರೆ.

ಪಿತ್ರಾರ್ಜಿತವಾಗಿ ಬಂದಿರುವ  ಎರಡು ಎಕರೆ ಭೂಮಿ ಮತ್ತು ಒಂದು ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿಯೇ ಇಂದಿಗೂ ವಾಸಿಸುತ್ತಿರುವ ಕಾಮೇಗೌಡರು ತಮ್ಮ ಆದಾಯವನ್ನು ಕೊಳಗಳ ನಿರ್ಮಾಣಕ್ಕೆ ಬಳಸಿಕೊಳ್ಳದೇ ಸ್ವಾರ್ಥಕ್ಕೆ ಬಳಸಿಕೊಂಡಿದ್ದಲ್ಲಿ ಇಂದು ಅನೇಕ ಎಕರೆಗಳ ಭೂಮಿಯ ಒಡೆಯರಾಗುವುದಲ್ಲದೇ, ಉತ್ತಮವಾದ ಮನೆಯಲ್ಲಿರಬಹುದಾಗಿತ್ತೇನೋ?

ತಮ್ಮ ಪರಿಶ್ರಮದಿಂದ ನಿರ್ಮಿಸಿದ ಈ ಎಲ್ಲಾ ಕೊಳಗಳಿಗೂ ತಮ್ಮ ಮೊಮ್ಮಕ್ಕಳ ಹೆಸರನ್ನು ಇಟ್ಟಿರುವುದು ಒಂದು ಗಮನಿಸ ಬೇಕಾದ ಅಂಶ. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಣವನ್ನು ನೀಡಿದರೆ, ಅದನ್ನು ಅವರು ಖರ್ಚು ಮಾಡಿ ದಿವಾಳಿಯಾಗಿ ಬಿಡುತ್ತಾರೆ ಆದರೆ ಅದೇ ವರ್ಷಪೂರ್ತಿ ನೀರಿರುವ ಈ ಕೊಳಗಳನ್ನು ಅವರಿಗೆ ನೀಡಿದರೆ, ಅವರು ಸದಾಕಾಲವೂ ಅತ್ಯಂತ ಶ್ರೀಮಂತರಾಗುತ್ತಾರೆ ಎಂದು ಮುಗ್ಧವಾಗಿ ಹೇಳುತ್ತಾರೆ ಶ್ರೀ ಕಾಮೇಗೌಡರು.

ತಮ್ಮೂರಿನ ಅಂತರ್ಜಲದ ವೃದ್ಧಿಗಾಗಿ ಕಾಮೇಗೌಡರು ಸ್ವಂತ ಶ್ರಮದಿಂದ ತಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ  ಸುತ್ತಮುತ್ತಲ ರೈತರಿಗೆ ಅನುಕೂಲವಾಗುವಂತೆ ಯಾರ ನೆರವಿಲ್ಲದೇ ನಿರ್ಮಿಸಿದ ಕೊಳಗಳಿಂದ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಕೊಳಗಳಲ್ಲಿ ನೀರು ಸಂಗ್ರಹವಾದುದರಿಂದ ಪ್ರಾಣಿ, ಪಕ್ಷಿಗಳಿಗಳೂ ಅಲ್ಲಿ ನೆಲೆಗೊಂಡವು. ಅದರ ಜೊತೆಗೆ ಸುತ್ತಮುತ್ತಲ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ.

ಈ ರಮಣೀಯ ನಿಸರ್ಗ ಸೌಂದರ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆಯಲ್ಲದೇ ಆ ಪರ್ವತದ ಸುತ್ತಲೂ ಇತಿಹಾಸ ಪ್ರಸಿದ್ಧವಾದ ಮಲ್ಲಪ್ಪ, ಕುಂದೂರಮ್ಮ, ಶ್ರೀ ರಷಸಿದ್ದೇಶ್ವರ ಮಠ, ಸಿದ್ದಪ್ಪಾಜಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಂದ ಕೂಡಿದ್ದು ಈಗ ಒಂದು ರೀತಿಯ ಪ್ರವಾಸಿ ತಾಣವಾಗಿ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಜಿಲ್ಲಾಡಳಿತವು ಕಲ್ಮನೆ ಕಾಮೇಗೌಡರು ನಿರ್ಮಿಸಿದ ಕೊಳಗಳ  ಪಕ್ಕದಲ್ಲಿಯೇ ಸುಂದರ ವಿಗ್ರಹಗಳನ್ನು ನಿರ್ಮಿಸಿ, ಅಲ್ಲಿಯೇ ಎಲ್ಲರೂ  ಕುಳಿತುಕೊಂಡು ವಿಶ್ರಾಂತಿ ಪಡೆಯುವಂತೆ ಆಸನದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಅಲ್ಲಿರುವ ಕಲ್ಲಿನ ಹೆಬ್ಬಂಡೆಗಳ ಮೇಲೆ ಸ್ವತಃ ಕಾಮೇಗೌಡರು ಬರೆಸಿರುವ ಸಂದೇಶಗಳು ಮನಮುಟ್ಟುವಂತಿವೆ. ಇವೆಲ್ಲವೂ ಅಂತರ್ಜಲದ ಮಹತ್ವದ ಬಗ್ಗೆ ಪ್ರವಾಸಿಗರಿಗೆ ತಿಳಿ ಹೇಳುತ್ತಿದೆ.

ಕೇವಲ ನೀರಿನ ಹೊಂಡಗಳನ್ನು ನಿರ್ಮಿಸುವುದಕ್ಕಷ್ಟೇ ತಮ್ಮನ್ನು ಸೀಮಿತರಾಗಿಸಿಕೊಳ್ಳದ ಶ್ರೀಯುತರು, ನೀರಿನೊಂದಿಗೆ ಪ್ರಕೃತಿಯ ಅಭಿವೃದ್ಧಿಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ, ಈ ಮಹತ್ಕಾರ್ಯಕ್ಕೆ ಈ ರಮಣೀಯ ಪ್ರದೇಶವನ್ನು ನೋಡಲು ರಾಜ್ಯದ ಮೂಲೆ ಮೂಲೆಯಿಂದ ಬರುತ್ತಿರುವ ಜನರು ಅವರ ಕಾರ್ಯವನ್ನು ಶ್ಲಾಘಿಸಿ, ತಾವೂ ಸಹಾ ಗಿಡಗಳನ್ನು ನೆಡುವ ಮೂಲಕ ಕೈಜೋಡಿಸುತ್ತಿದ್ದಾರೆ. ಕಾಮೇಗೌಡರ ಕಾಮನೆಯಂತೆ ಈ ಎಲ್ಲಾ ಕೆಲಸಗಳೂ ಪೂರ್ಣವಾದಲ್ಲಿ ಮಳೆಯ ನೀರು ಪೋಲಾಗುವುದನ್ನು  ತಡೆದು ಅಂತರ್ಜಲ ವೃದ್ಧಿಯನ್ನು ಮಾಡಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

kame2ಕಾಮೇಗೌಡರ ಕಾರ್ಯವೈಖರಿಯನ್ನು ಮೆಚ್ಚಿ ಈಗಾಗಲೇ ಬಸವಶ್ರೀ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮ್ತತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಸಾಮಾನ್ಯರಿಗೆ ಈ ರೀತಿಯಾಗಿ ದೊರೆತ ಹಣವನ್ನು ವಯಕ್ತಿಯ ಹಿತಾಸಕ್ತಿಗೋ ಇಲ್ಲವೇ ಮದ್ಯಕ್ಕಾಗಿ ಖರ್ಚು ಮಾಡಡಿದರೇ,  ನಾನು ಮಾತ್ರಾ ಈ  ಹಣವನ್ನು ಕೊಳಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳೆಸುತ್ತೇನೆ, ಇದೇ ನನ್ನ  ಚಟ ಎಂದು ಹೇಳಿ ಮುಗುಮ್ಮಾಗಿ ನಗುತ್ತಾರೆ.  ಇಷ್ಟೆಲ್ಲಾ ಸಾಧನೆ ಮಾಡಿರುವ ನಿಮ್ಮ ಗುರಿ ಏನು ಎಂದು ಕೇಳಿದರೆ,  ಇನ್ನೂ 4 ಕೊಳಗಳನ್ನು  ನಿರ್ಮಿಸಿ ತನ್ನ ಜೀವಿತಾವಧಿಯಲ್ಲಿ ಒಟ್ಟು 20 ಕೊಳಗಳನ್ನು ನಿರ್ಮಿಸುವುದು  ನನ್ನ ಜೀವನದ ಹೆಗ್ಗುರಿ ಎನ್ನುತ್ತಾರೆ  84 ವರ್ಷದ ಇಳೀ ವಯಸ್ಸಿನ ಕಲ್ಮನೆ ಕಾಮೇಗೌಡರು.

kame7ಭಗವಂತ ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯವನ್ನು ಕೊಟ್ಟು ಅವರ ಕನಸು ನನಸಾಗುವಂತೆ ಮಾಡಲೀ. ಆ ಮೂಲಕ ಸುತ್ತ ಮುತ್ತಲಿನ ಜನರಿಗೆ ಇನ್ನೂ ಹೆಚ್ಚಿನ ಅನುಕೂಲಗಳಾಗಲೀ ಮತ್ತು ಅವರ ಹೆಸರು ಅಚಂದ್ರಾರ್ಕವಾಗಿ ಚಿರಸ್ಥಾಯಿಯಾಗಲೀ ಎಂದು ಹಾರೈಸೋಣ.

 

ಏನಂತೀರೀ?

ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ನಮ್ಮ ದೇಶದಲ್ಲಿ ಅತ್ಯಂತ ಹಿಂದುಳಿದ ಕೆಲವೇ ಕೆಲವೂ ರಾಜ್ಯಗಳಲ್ಲಿ ಒರಿಸ್ಸಾ ರಾಜ್ಯವೂ ಒಂದು. ಇಂದೂ ಸಹ ದೇಶಾದ್ಯಂತ ಅದರಲ್ಲೂ ಬೆಂಗಳೂರಿನ ಅನೇಕ ಸಾಪ್ಘ್ವೇರ್ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್ ಗಳಲ್ಲಿ ಹೆಚ್ಚಿನವರು ಒರಿಸ್ಸಾದವರೇ ಆಗಿರುತ್ತಾರೆ ತಮ್ಮ SSLC ಅಥವಾ PUC ಎಲ್ಲೋ ಕೆಲವರು Degree ಮುಗಿಸಿ ತಕ್ಕ ಮಟ್ಟಿಗಿನ English ಕಲಿತರೆಂದರೆ ಅಲ್ಲಿಂದ ಬೆಂಗಳೂರು, ಹೈದ್ರಾರಾಬಾದ್ ಇಲ್ಲವೇ ಕಲ್ಕತ್ತಾದ ಕಡೆ ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕ್ರಮವಾಗಿ 2004, 2009, 2014 ಮತ್ತು 2019 ರ ಅಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಆಯ್ಕೆಯಾಗುತ್ತಲೇ ಇದ್ದಾರೆ. 2019 ರ ಚುನಾವಣೆಯಲ್ಲಂತೂ ಬಿಜೆಪಿ ಶತಾಯ ಗತಾಯ ಒರಿಸ್ಸಾ ರಾಜ್ಯವನ್ನು ವಶಪಡಿಸಿಕೊಳ್ಳಲೇ ಬೇಕು ಎಂದು ಹರಸಾಹಸ ಮಾಡಿತಾದರೂ ಅಲ್ಲಿಯ ಜನ ಲೋಕಸಭೆಯಲ್ಲಿ ತಕ್ಕ ಮಟ್ಟಿಗೆ ಬೆಂಬಲಿಸಿದರಾದರೂ, ವಿಧಾನಸಭೆಯಲ್ಲಿ ಬಿಜು ಜನತಾದಳದ ಕೈ ಹಿಡಿದರು. ಹೀಗೆ ರಾಜ್ಯ ಮತ್ತು ದೇಶದಲ್ಲಿ ಎರಡು ವಿಭಿನ್ನ ಪಕ್ಷದ ಆಡಳಿತವನ್ನು ನೋಡುವ ಸುಯೋಗ ಒರಿಸ್ಸಾ ಜನರದ್ದು

ಅಂತಹ ಒರಿಸ್ಸಾ ರಾಜ್ಯದ ಮುಖ್ಯಮಂತ್ರಿಗಳು ಇತ್ತೀಚೆಗೆ ತಡರಾತ್ರಿ 12.15 ಕ್ಕೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಕರೆ ಮಾಡಿ, ಇಷ್ಟು ತಡ ಹೊತ್ತಿನಲ್ಲಿ ಕರೆಮಾಡಿದ್ದಕ್ಕಾಗಿ ಮೊದಲು ನಿಮ್ಮ ಕ್ಷಮೆಯಾಚಿಸುತ್ತೇವೆ. ಸಂಧಿಗ್ಧ ಪರಿಸ್ಥಿತಿಯ ಕಾರಣದಿಂದಾಗಿ ಅನಿವಾರ್ಯವಾಗಿ ನಿಮಗೆ ತೊಂದರೆ ಕೊಡುತ್ತಿದ್ದೇನೆ. ನಮ್ಮ ರಾಜ್ಯಕ್ಕೆ ಕರೋನಾ ಪರೀಕ್ಷಾ ಕಿಟ್‌ಗಳು ಮಹಾರಾಷ್ಟ್ರದಿಂದ ಬರಬೇಕಾಗಿತ್ತು. ಆದರೆ ಕೆಲವು ಲಾಜಿಸ್ಟಿಕ್ ಸಮಸ್ಯೆಗಳಿಂದಾಗಿ ಕಿಟ್‌ಗಳನ್ನು ಹೊತ್ತ ಟ್ರಕ್‌ಗಳು ಈಗ ಮುಂಬೈನಲ್ಲಿ ಸಿಲುಕಿಕೊಂಡಿವೆ. ನಮ್ಮ ರಾಜ್ಯದಲ್ಲಿ ತುರ್ತಾಗಿ ಆ ಕಿಟ್ ಗಳ ಅಗತ್ಯವಿದೆ ಎಂದು ಸೂಕ್ಷ್ಮವಾಗಿ ಮೆಲುಧನಿಯಲ್ಲಿ ತಿಳಿಸುತ್ತಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಕೂಡಲೇ ಅರ್ಧೈಸಿಕೊಂಡ ಪ್ರಧಾನಿಗಳು ಅಷ್ಟೇ ಸಮಚಿತ್ತದಿಂದ ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ದಯವಿಟ್ಟು ಚಿಂತಿಸಬೇಡಿ, ನಾನೇ ಖುದ್ದಾಗಿ ವೈಯಕ್ತಿಕವಾಗಿ ಅದರ ಬಗ್ಗೆ ವಿಚಾರಿಸಿ ಆದಷ್ಟು ಶೀಘ್ರದಲ್ಲೇ ಆ ಕಿಟ್ ಗಳು ನಿಮ್ಮ ರಾಜ್ಯದ ರಾಜಧಾನಿಯನ್ನು ತಲುಪುವಂತೆ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ.

ನಿಮ್ಮೀ ಸಹಾಯಾಕ್ಕೆ ಧನ್ಯವಾದಗಳು. ಆದರೆ ಆ ಕಿಟ್ ಗಳು ಬೆಳಿಗ್ಗೆ ಹೊತ್ತಿಗೆ ತಲುಪಿದರೆ ಉತ್ತಮ. ಪರಿಸ್ಥಿತಿಯನ್ನು ತಹಬದಿಗೆ ತರಲು ಈ ಕಿಟ್ಗಳು ಮುಂದಿನ ಮುಂದಿನ 6 ಗಂಟೆಗಳಲ್ಲಿ ನಮಗೆ ತಲುಪಿದರೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಕೋರಿಕೊಳ್ಳುತ್ತಾರೆ

ಕೆಲ ಕ್ಷಣಗಳ ಕಾಲ ಮೌನರಾದ ಮೋದಿಯವರು, ಮುಂದಿನ ಆರು ಗಂಟೆಗಳಲ್ಲಿ ನಿಮಗೆ ತಲುಪಬೇಕೆ? ಎಂದಾಗ, ದಯವಿಟ್ಟು ಮುಂಬೈ, ಪುಣೆ ಅಥವಾ ನಾಸಿಕ್ ವಿಮಾನ ನಿಲ್ದಾಣವನ್ನು ತುರ್ತಾಗಿ ನಮಗಾಗಿ ತೆರೆದು ವಾಯುಪಡೆಯ ವಿಮಾನಗಳ ಮೂಲಕ ಕಿಟ್‌ಗಳನ್ನು ಭುವನೇಶ್ವರಕ್ಕೆ ತಲುಪಿಸಿದರೆ ಉತ್ತಮ ಎಂಬ ಸಲಹೆಯನ್ನು ನೀಡುತ್ತಾರೆ ನವೀನರು

ಸರಿ. ಚಿಂತಿಸಿದದಿರಿ ಇಂದು ಸೂರ್ಯ ಉದಯಿಸುವ ಮೊದಲೇ ನಿಮ್ಮ ಕಾರ್ಯವನ್ನು ಪೂರೈಸುವ ಜಬಾಬ್ಧಾರಿ ನಮ್ಮದು. ನೀವೀಗ ವಿಶ್ರಾಂತಿ ಪಡೆಯಿರಿ. ಶುಭ ರಾತ್ರಿ ಎಂದು ತಿಳಿಸಿ ಮೋದಿಯವರು ಕರೆಯನ್ನು ಕತ್ತರಿಸುತ್ತಾರೆ

ಆ ಕರೆ ಕತ್ತಿರುಸುತ್ತಿದ್ದಂತೆಯೇ ಪ್ರಧಾನ ಮಂತ್ರಿಗಳ ಕಛೇರಿ ಅಕ್ಷರಶಃ ಕಾರ್ಯಪ್ರವೃತ್ತವಾಗುತ್ತದೆ, ಒಂದು ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಜನರ ಹಿತದೃಷ್ಟಿಯಿಂದ ಈ ಪರಿಯಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾಗ, ದೇಶದ ಪ್ರಧಾನಿಗಳಾಗಿ ಅವರನ್ನು ನಿರಾಸೆ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಆ ಕೂಡಲೇ ಸಂಬಂಧ ಪಟ್ಟವರಿಗೆ ಅನೇಕ ಕರೆಗಳನ್ನು ಮಾಡಲಾಯಿತು. ಕೂಡಲೇ ಅಗತ್ಯವಿದ್ದ ಆದೇಶಗಳನ್ನು ಟೈಪ್ ಮಾಡಿ ನಂತರ ವಿವಿಧ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಫ್ಯಾಕ್ಸ್ ಮಾಡಲಾಯಿತು ಮತ್ತು ಅತ್ಯಂತ ದೊಡ್ಡ ಮಟ್ಟದಲ್ಲಿ ಅವಸರದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನೂ ಮಾಡಲು ಸೂಚನೆಗಳನ್ನು ನೀಡಲಾಯಿತು.

ಪಿಎಂಓ ನಿಂದ ಕರೆ ಮತ್ತು ಆದೇಶಗಳು ಸಿಗುತ್ತಿದ್ದಂತೆಯೇ ಸಂಬಂಧ ಪಟ್ಟವರೆಲ್ಲರೂ ಈ ತುರ್ತು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಆ ಮಧ್ಯರಾತ್ರಿಯಲ್ಲಿ ನಾಸಿಕ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಪುನಃ ತೆರೆಯಲಾಯಿತು. ವಾಯುಪಡೆಯ ಫ್ಲೈಟ್ ಅಲ್ಲಿಗೆ ಲ್ಯಾಂಡ್ ಆಗಿ ಪರೀಕ್ಷಾ ಕಿಟ್‌ಗಳನ್ನು ಲೋಡ್ ಮಾಡಿಕೊಂಡು ತಕ್ಷಣವೇ ಭುವನೇಶ್ವರಕ್ಕೆ ತಲುಪಿ ಅಲ್ಲಿಯ ವಿಮಾನ ನಿಲ್ದಾಣದಲ್ಲಿ ಕಿಟ್‌ಗಳನ್ನು ತಲುಪಿಸಿ ಮತ್ತೆ ಸ್ವಸ್ಥಾನಕ್ಕೆ ಯಶಸ್ವಿಯಾಗಿ ಹಿಂದಿರುಗಿತು.

ಓರಿಸ್ಸಾದಲ್ಲಿ ಬೆಳಿಗ್ಗೆ ಸೂರ್ಯ ಉದಯಿಸಿ ಮುಖ್ಯಮಂತ್ರಿಗಳು ಹಾಸಿಗೆಯನ್ನು ಬಿಟ್ಟು ಏಳುತ್ತಿದ್ದಂತೆಯೇ ಕೂರೋನಾ ಪರೀಕ್ಷಾ ಪರಿಕರಗಳು ಯಶಸ್ವಿಯಾಗಿ ತಲುಪಿದ ವಿಚಾರ ತಿಳಿಯಿತು, ಕೂಡಲೇ ಸರ್ಕಾರಿ ವಾಹನಗಳು ವಿಮಾನ ನಿಲ್ದಾಣಕ್ಕೆ ದೌಡಾಯಿಸಿದವು ಮತ್ತು ಅಗತ್ಯವಿರುವ ಕಡೆ ಅಗತ್ಯವಿದ್ದಷ್ಟು ಕಿಟ್‌ಗಳನ್ನು ತಮ್ಮ ತಮ್ಮ ನಿಗಧಿತ ಸ್ಥಳಗಳಿತ್ತ ನಿರ್ಗಮಿಸಿದವು.

ಈಗ ಒರಿಸ್ಸಾ ರಾಜ್ಯದ ಮುಖ್ಯ ಮಂತ್ರಿ ಶ್ರೀ ನವೀನ್ ಪಟ್ನಾಯಕ್ ಅವರು ತಮ್ಮ ರಾಜ್ಯ ಜನರನ್ನು ಕೋವಿಡ್ 19 ರಿಂದ ರಕ್ಷಿಸಲು ನಿರಾಳವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಭಾರತದ ಎಲ್ಲಾ ರಾಜ್ಯಗಳಿಗೆ ಸಂಪನ್ಮೂಲಗಳನ್ನು ಸಹಾಯ ಮಾಡಲು ಮತ್ತು ಸುಗಮಗೊಳಿಸಲು ಪ್ರಧಾನ ಮಂತ್ರಿಗಳು ಮತ್ತು ಅವರ ಕಛೇರಿ 24×7 ರೀತಿಯಲ್ಲಿ ಕೆಲಸ ಮಾಡುತ್ತಿರುವ ಪರಿ.

modi2

ದೇಶ ವಿಪತ್ತಿನಲ್ಲಿದ್ದಾಗ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕ್ಷುಲ್ಲಕ ರಾಜಕಾರಣ ಮಾಡದಿರುವುದು ನಿಜವಾದ ನಾಯಕತ್ವದ ಗುಣ. ಅದೇ ರೀತಿ ಸಹಾಯ ಅವಶ್ಯಕತೆ ಇರುವಾಗ ತಮ್ಮ ಹಮ್ಮು ಬಿಮ್ಮು ಬಿಟ್ಟು ನಿರ್ಭಿಡೆಯಿಂದ ಸಹಾಯ ಕೇಳುವುದು ಉತ್ತಮ ನಾಯಕತ್ವ ಗುಣವೇ. ಇಡೀ ಪ್ರಸಂಗವನ್ನು ಗಮನಿಸಿದಲ್ಲಿ ಇಬ್ಬರೂ ನಾಯಕರುಗಳಲ್ಲಿಯೂ ಸ್ವಾರ್ಥದ ವಿಚಾರಗಳಿರಲಿಲ್ಲ. ಅನಾವಶ್ಯಕ ವಾದ ವಿವಾದಗಳಿಗೆ ಆಸ್ಪದ ಕೊಡಲಿಲ್ಲ. ಏನು ಬೇಕೋ ಅದನ್ನು ಸ್ವಷ್ಟವಾಗಿ ಮತ್ತು ಅಷ್ಟೇ ವಿನಮ್ರವಾಗಿ ನವೀನರು ಕೇಳಿದರೆ ಅವರ ಪರಿಸ್ಥಿತಿಯನ್ನು ಆ ಹೊತ್ತಿನಲ್ಲಿಯೂ ನರೇಂದ್ರರು ಅರ್ಥಮಾಡಿಕೊಂಡು ಕೂಡಲೇ ಸ್ಲಂದಿಸಿ ಅದನ್ನು ಯಶ‍ಸ್ವಿಯಾಗಿ ನಿರ್ಧಾರಿತ ಸಮಯದಲ್ಲೇ ಮುಗಿಸಿ ತಮ್ಮ ಮುಂದಿನ ಕೆಲಸಗಳತ್ತ ಗಮನಹರಿಸಿದರು.

ಯಾವುದೇ ಸಮಯದಲ್ಲಿಯೇ ಆಗಲೀ ಯಾರೇ ಆಗಲಿ ಸಹಾಯವನ್ನು ಬೇಡಿ ಬಂದಾಗ, ಎಷ್ಟೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಅವುಗಳನ್ನೆಲ್ಲಾ ಬದಿಗೊತ್ತಿ ಕರ್ತವ್ಯವನ್ನು ನಿರ್ವಹಿಸುವ ಇಂತಹ ನಾಯಕರುಗಳ ಸಂಖ್ಯೆ ಅಗಣಿತವಾಗಿ ಈ ಕೊರೋನಾ ಮಾಹಾ ಮಾರೀ ಆದಷ್ಟು ಶೀಘ್ರವೇ ಮರೆಯಾಗಿ ಜನ ಸಾಮಾನ್ಯರ ಬದುಕು ಎಂದಿನಂತೆ ಸುಗಮವಾಗಿ, ದೇಶದ ಆರ್ಥಿಕ ಪರಿಸ್ಥಿತಿ ಮತ್ತೊಮ್ಮೆ ಉತ್ತಮಗೊಳ್ಳಲಿ.

ಏನಂತೀರೀ?

ವಾಟ್ಯಾಸ್ ನಲ್ಲಿ ಬಂದ ಆಂಗ್ಲ ಲೇಖನವನ್ನು ಕನ್ನಡೀಕರಿಸಿದ್ದೇನೆ.

ಜನತಾ ಕರ್ಫ್ಯೂ

ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ದಿನಾಂಕ 22.03.2020, ಬೆಳಿಗ್ಗೆ 7 ರಿಂದ ರಾತ್ರಿ 9 ಘಂಟೆಯವರೆಗೂ ಸಮಸ್ತ ಭಾರತೀಯರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಇರಬೇಕೆಂದು ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ದಿನಾಂಕ 19.03.2020 ರಂದು ರಾತ್ರಿ 8.00 ಘಂಟೆಗೆ ಮಾಡಿದ ಭಾಷಣದಲ್ಲಿ ಕೋರಿಕೊಂಡಿದ್ದಾರೆ.

ಬಹಳಷ್ಟು ಜನರಿಗೆ ಒಂದು ಕೇವಲ 14 ಘಂಟೆಗಳ ಅವಧಿಯವರೆಗೆ ಮನೆಯಲ್ಲಿದ್ದರೆ ಮಾರಕ ಸೋಂಕು ಕರೋನವನ್ನು ತಡೆಗಟ್ಟ ಬಹುದೇ? ಹಾಗಿದ್ದಲ್ಲಿ ಇದನ್ನು ಪ್ರಪಂಚಾದ್ಯಂತ ಈಗಾಗಲೇ ಮಾಡುತ್ತಿರಲಿಲ್ಲವೇ ಎಂಬ ಕುಹಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು ಕೇವಲ 14 ಘಂಟೆಗಳ ಅವಧಿಯವರೆಗೆ ಮಾತ್ರ ಜನತಾ ಕರ್ಫ್ಯೂವಲ್ಲ. ಇದು ಒಂದು ಯೋಜಿತ ಕಾರ್ಯಸಾಧುವಾಗಿದೆ.

WhatsApp Image 2020-03-20 at 10.29.51 AMಒಂದು ಸ್ಥಳದಲ್ಲಿ ಕರೋನಾ ವೈರಸ್ ಜೀವಿತಾವಧಿಯ ಆಯಸ್ಸು ಯಾವುದೇ ವಸ್ತುಗಳಾಗಲೀ, ಬಟ್ಟೆಗಳ ಮೇಲಾಗಲೀ ಅಥವಾ ಲೋಹದ ಮೇಲಾಗಲೀ 8 ಗಂಟೆಗಳು ಕರೋನ ರೋಗ ಸೋಂಕಿತ ವ್ಯಕ್ತಿ ಮುಟ್ಟಿದ ಅಥವಾ ಧರಿಸಿದ ಬಟ್ಟೆಗಳ ಮೇಲೆ ಅಬ್ಬಬ್ಬಾ ಎಂದರೆ ಸುಮಾರು 12 ಗಂಟೆಗಳ ಕಾಲ ಜೀವಂತವಾಗಿರ ಹಾಗಾಗಿ ಕರ್ಫ್ಯೂ ಸಮಯವನ್ನು 14 ಗಂಟೆಗಳ ಕಾಲ ವಿಧಿಸಿದ್ದಾರೆ. ಇದರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಇರಬಹುದಾದ ಕರೋನಾ ಸೋಂಕಿತ ವಸ್ತುಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಸುಮಾರು 14 ಗಂಟೆಗಳವರೆಗೆ ಯಾರೂ ಸ್ಪರ್ಶಿಸಿರುವುದಿಲ್ಲವಾದ್ದರಿಂದ ಆ ಸರಪಳಿ ಮುರಿಯುವ ಕಾರಣ ಕರೋನ ವೈರಸ್ ಜೀವಿತಾವಧಿ ಮುಗಿದು ಹೋಗಿರುತ್ತದೆ ಹಾಗಾಗಿ 14 ಗಂಟೆಗಳ ನಂತರ ಜನ ಜೀವನ ಮುಂದುವರೆಸುವುದು ಸುರಕ್ಷಿತ ಎನ್ನುವುದು ಇದರ ಹಿಂದಿನ ಉದ್ದೇಶ.

ಹಾಗೆ ಸರಿಯಾಗಿ ನೋಡಿದಲ್ಲಿ ಈ ಜನತಾ ಕರ್ಫ್ಯೂ ಕೇವಲ 14 ಗಂಟೆಗಳಲ್ಲದೇ 36 ಗಂಟೆಗಳು ಎಂದು ಹೇಳಿದರೆ ನಿಮಗೆ ಆಶ್ವರ್ಯವಾಗಬಹುದು. ಈ ಯೋಜನೆಯನ್ನು ಅತ್ಯಂತ ಬುದ್ಧಿವಂತ ರೀತಿಯಲ್ಲಿ ಮತ್ತು ಬಹಳ ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಯೋಜಿಸಲಾಗಿದೆ.

ಆದರೆ ನಿಜವಾಗಿಯೂ ಕರ್ಪ್ಯೂ ನಿಜವಾಗಿಯೂ ಹಿಂದಿನ ರಾತ್ರಿ ಸರಿ ಸುಮಾರು 9 ಗಂಟೆಯಿಂದಲೇ. ಆರಂಭವಾಗಿರುತ್ತದೆ. ಈಗ ಕರ್ಫ್ಯೂ ವಿಧಿಸಿರುವ ಸಮಯ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮುಗಿದ ನಂತರ ಹೆಚ್ಚೂ ಕಡಿಮೆ ಜನ ಹೊರಗೆ ಹೋಗುವುದು ಮಾರನೇ ದಿನ ಬೆಳಿಗ್ಗೆ 7 ಗಂಟೆಗೇ ಹಾಗಾಗಿ ಹೆಚ್ಚೂ ಕಡಿಮೆ 21.03.20 ರಾತ್ರಿ 9 ಗಂಟೆಗೆ ಆರಂಭವಾಗಿ 23.03.20 ಬೆಳಿಗ್ಗೆ 7.00 ಗಂಟೆಯ ವರೆಗೂ ಜನರು ತಮ್ಮ ಮನೆಗಳಲ್ಲಿಯೇ ಇರುವ ಪರಿಣಾಮ ನಮಗೆ ಅರಿವಿಲ್ಲದಂತೆಯೇ ಈ ಜನತಾ ಕರ್ಫೂ 36 ಗಂಟೆಗಳ ಅವಧಿಗಳಷ್ಟಾಗಿರುತ್ತದೆ. ಈ ಅವಧಿಯಲ್ಲಿ ವೈರಸ್ ಹರಡುವಿಕೆಯನ್ನು ಬಹಳ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ. ಆದ್ದರಿಂದ ಈ ಯೋಜನೆ ಬಹಳ ಬುದ್ಧಿವಂತ ತನದಿಂದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗದಂತೆ ಯೋಚಿಸಲಾಗಿದೆ.

ಈಗಾಗಲೇ ನಾನಾ ಕಾರಣಗಳಿಂದಾಗಿ ಕರೋನಾ ವೈರಸ್ ಸೋಂಕಿತರಾಗಿರುವವರಿಗೆ ಮರುಕ ಪಡೋಣ ಮತ್ತು ಆದಷ್ಟು ಶೀಘ್ರವಾಗಿ ಕರೋನ ಖಾಯಿಲೆಗೆ ಮದ್ದನ್ನು ಕಂಡು ಹಿಡಿಯಲಿ ಎಂದು ಆಶೀಸೋಣ. ನಮ್ಮ ಪ್ರಧಾನಿಗಳು ಹೇಳಿದಂತೆ ಹಾಗಾಗಿ ಸಮಸ್ತ ಭಾರತೀಯರೂ ಇದರಲ್ಲಿ ಸ್ವಯಂ ಪ್ರೇರಿತರಾಗಿ ಖಡ್ಡಾಯವಾಗಿ ಪಾಲ್ಗೊಳ್ಳಲೇ ಬೇಕಾಗಿದೆ.

ಸೋಂಕು ಹರಡಂತೆ ತಡೆಗಟ್ಟುವಿಕೆಯು, ಖಾಯಿಲೆಗೆ ಕೊಡುವ ಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ

ಏನಂತೀರೀ?