ಗುಜರಾತಿ ಥೇಪ್ಲ

ಪ್ರತೀ ದಿನ ಬೆಳಿಗ್ಗೆ ಅದೇ ರೊಟ್ಟಿ, ಚಪಾತಿನಾ? ಎಂದು ಕೇಳುವ ಮಕ್ಕಳಿಗೆ ಯಾವ ತಿಂಡಿ ಮಾಡೋದಪ್ಪಾ ಎಂಬ ಜಿಜ್ಞಾಸೆ ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವುದು ಸಹಜವಾಗಿದೆ. ಅಂತಹವರಿಗಾಗಿಯೇ ಆಕರ್ಷಣೀಯವಾದ, ಅಷ್ಟೇ ಪರಿಮಳಯುಕ್ತವಾದ, ಪೌಷ್ಥಿಕವಾದ, ರುಚಿಯಾದ ಮನೆಯವರೆಲ್ಲರೂ ಇನ್ನೂ ಬೇಕು ಮತ್ತಷ್ಟು ಬೇಕು ಎಂದು ಕೇಳಿ ಕೇಳಿ ತಿನ್ನುವಂತಹ ಗುಜರಾತಿ ಥೇಪ್ಲ ಮಾಡುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದುಕೊಳ್ಳೋಣ. ಥೇಪ್ಲ ತಯಾರಿಸಲು ಬೇಕಾಗುವ ಪದಾರ್ಥಗಳು ಗೋಧಿ ಹಿಟ್ಟು – 2 ಬಟ್ಟಲು ಕಡಲೇ ಹಿಟ್ಟು – 1/4 ಬಟ್ಟಲು ಅಚ್ಚ… Read More ಗುಜರಾತಿ ಥೇಪ್ಲ

ಅವಲಕ್ಕಿ ಪರೋಟ

ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಅವಲಕ್ಕಿ ಒಗ್ಗರಣೆ, ಹುಳಿಯವಲಕ್ಕಿ, ಇಲ್ಲವೇ ಖಾರದ ಅವಲಕ್ಕಿ ಬೆಳಿಗ್ಗೆ ತಿಂಡಿಗೇ ಮಾಡಿದ್ರೇ, ಮಧ್ಯಾಹ್ನದ ಊಟಕ್ಕೋ ಇಲ್ಲವೇ ರಾತ್ರಿಯ ಊಟಕ್ಕೆ ಗೋಧಿ ಚಪಾತಿ ಮತ್ತು ಪರೋಟ ಇದ್ದೇ ಇರುತ್ತದೆ. ಹಾಗಾಗಿ ಇವತ್ತು ಅವಲಕ್ಕಿ ಮತ್ತು ಗೋಧಿ ಹಿಟ್ಟು ಎರಡೂ ಸೇರಿಸಿ ಗರಿಗರಿಯಾದ ವಿಭಿನ್ನ ರುಚಿಯ ಅವಲಕ್ಕಿ ಪರೋಟ ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಅವಲಕ್ಕಿ ಪರೋಟ ತಯಾರಿಸಲು ಬೇಕಾಗುವ ಸಾಮಗ್ರಿಗಳು ಅವಲಕ್ಕಿ – 150ಗ್ರಾಂ ಗೋಧಿಹಿಟ್ಟು –… Read More ಅವಲಕ್ಕಿ ಪರೋಟ

ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಮನೆಯಲ್ಲಿ ಮೊಸರು ಹೆಚ್ಚಿಗೆ ಉಳಿದು ಬಿಟ್ಟಲ್ಲಿ ಅಥವಾ ಮನೆಗೆ ಇದ್ದಕ್ಕಿದ್ದಂತೆಯೇ ಯಾರಾದ್ರೂ ಸಂಬಂಧೀಕರು ಬಂದು ಬಿಟ್ಟಲ್ಲಿ ಅಷ್ಟು ಹೊತ್ತಿನಲ್ಲಿ ಹುಳಿ, ಸಾರು ಮುಂತಾದವುಗಳನ್ನು ಮಾಡಲು ಪುರುಸೊತ್ತು ಇಲ್ಲದಿದ್ದಲ್ಲಿ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ – 1… Read More ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಬಾಳೇಹಣ್ಣಿನ ಜಾಮೂನು

ಸಾಧಾರಣವಾಗಿ ಎಲ್ಲರ ಮನೆಯಲ್ಲಿಯೂ ಸಂಭ್ರಮವನ್ನು  ಸಿಹಿತಿಂಡಿಯನ್ನು ಪರಸ್ಪರ  ಹಂಚಿತಿನ್ನುವ ಮೂಲಕ ಸಂಭ್ರಮಿಸುವುದು ವಾಡಿಕೆ. ಹಾಗೆ ಸಿಹಿತಿಂಡಿಯನ್ನು ತಯಾರಿಸುವ ವೇಳೆ ಥಟ್ ಅಂತಾ ನೆನಪಾಗೋದೇ ಜಾಮೂನು.  ಅಂಗಡಿಯಲ್ಲಿ ಸಿಗುವ instant jamun mix  ತಂದು ಮಾಡುವ ಬದಲು ಮನೆಯಲ್ಲಿಯೇ ಇರುವ ಬಾಳೇಹಣ್ಣು ಮತ್ತು ಉದ್ದಿನಬೇಳೆ ಬಳಸಿ  ಅತ್ಯಂತ ರುಚಿಕರವಾದ  ಬಾಳೇಹಣ್ಣಿನ ಜಾಮೂನು ತಯಾರಿಸುವ ವಿಧಾನವನ್ನು  ನಮ್ಮ ನಳಪಾಕದಲ್ಲಿ ತಿಳಿದು ಕೊಳ್ಳೋಣ. ಸುಮಾರು 20-30 ಬಾಳೇಹಣ್ಣಿನ ಜಾಮೂನು ಮಾಡಲು ಬೇಕಾಗುವ ಸಾಮಗ್ರಿಗಳು ಉದ್ದಿನ ಬೇಳೆ – 1 ಬಟ್ಟಲು ಸಕ್ಕರೆ… Read More ಬಾಳೇಹಣ್ಣಿನ ಜಾಮೂನು