ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಅದೊಂದು ದಿನ ಶಂಕರನಿಗೆ ಹುಶಾರಿಲ್ಲದಿದ್ದ ಕಾರಣ ಅವರ ತಾಯಿ ಅವನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರೂ ಸಹಾ ಭಯ ಪಡುವಂತಹದ್ದೇನೂ ಇಲ್ಲ. ಮನೆಯಲ್ಲಿಯೇ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ. ಈಗ ಕೊಟ್ಟಿರುವ ಆಂಟೀಬಯಾಟಿಕ್ ಸ್ವಲ್ಪ ಸ್ಟ್ರಾಂಗ್ ಆಗಿರುವ ಕಾರಣ ಸ್ವಲ್ಪ ಹಣ್ಣುಗಳು ಮತ್ತು ಎಳನೀರನ್ನು ಕೊಡಿ ಎಂದು ಹೇಳಿದ್ದರು. ಮಾರನೇಯ ದಿನ ಶಂಕರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಅವನ ಮನೆಯ ಮುಂದಿನ ಚರಂಡಿ ಶುದ್ಧಿ ಮಾಡಲು ಒಂದ ಇಬ್ಬರು ನಗರ ಪಾಲಿಕೆ ಕೆಲಸದವರು ಚರಂಡಿಯನ್ನು… Read More ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೇ ಕೆಲವು ದಿನಗಳು ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನವೂ ಇರಲಾರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡಾರೂ ಜೀವನ ಮಾಡ್ತೀವಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಹಿಂದೆಲ್ಲಾ ನಿತ್ಯಹರಿದ್ವರ್ಣ ಕಾಡುಗಳಿದ್ದವು. ಎಲ್ಲಾ ಕಡೆಯಲ್ಲೂ ಹಸಿರು ಮಯವಾಗಿರುತ್ತಿದ್ದು. ಹಾಗಾಗಿ ಕಾಲ ಕಾಲಕ್ಕೆ ಯಥೇಚ್ಚವಾಗಿ ಮಳೆಗಳು ಆಗುತ್ತಿದ್ದವು. ಕೆರೆ ಕಟ್ಟೆಗಳು, ಕಲ್ಯಾಣಿ, ಭಾವಿ ಮತ್ತು ಮತ್ತು ನದಿಗಳು ತುಂಬಿ ಹರಿಯುತ್ತಿದ್ದವು. ಇದರಿಂದ ಯಾರಿಗೂ ನೀರಿನ… Read More ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ಅಕ್ಷಯ ತೃತೀಯ/ತದಿಗೆ

ವೈಶಾಖ ಮಾಸದ ಶುದ್ಧ ತೃತೀಯದ ತಿಥಿಯನ್ನು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ವಸ್ತುವನ್ನು ಅಥವಾ ಸಂಪತ್ತನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದಲ್ಲಿ,‌ ಯಥೇಚ್ಛವಾಗಿ ದಾನ ಧರ್ಮ ಮಾಡಿದಲ್ಲಿ ಕಾಲಕ್ರಮೇಣ ಆ ಸಂಪತ್ತು ದ್ವಿಗುಣಗೊಳ್ಳುತ್ತದೆ ಎನ್ನುವುದು ಎಲ್ಲರ ನಂಬಿಕೆ ಇರುವ ಕಾರಣ ಎಲ್ಲೆಡೆಯೂ ದಾರ್ಮಿಕ ಅಚರಣೆಗಳು ಸಂಭ್ರಮದಿಂದ ನಡೆಸಲಾಗುತ್ತದೆ. ಇನ್ನು ಪೌರಾಣಿಕವಾಗಿ ಅಕ್ಷಯ ತದಿಗೆಯ ಮಹತ್ವವನ್ನು ನೋಡಿದಲ್ಲಿ, ಕೃಷ್ಣ ಸ್ನೇಹಿತ ಕುಚೇಲ ತನ್ನ ಗೆಳೆಯನಿಂದ ಸಹಾಯ ಪಡೆಯಲು ದ್ವಾರಕೆಗೆ… Read More ಅಕ್ಷಯ ತೃತೀಯ/ತದಿಗೆ

ನೀರು, ಕಣ್ಣೀರು

ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ… Read More ನೀರು, ಕಣ್ಣೀರು