ಪ್ರಜಾಪ್ರಭುತ್ವ ಮತ್ತು ಅದರ ಅಣಕ

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಜುಲೈ 21 2022 ಅತ್ಯಂತ ಮಹತ್ವ ದಿನವಾಗಿದ್ದು ಇಂದು ಈ ದೇಶದ ಎರಡು ಪ್ರಭಲ ಮಹಿಳೆಯರಿಗೆ ಮೀಸಲಾಗಿದೆ. ಒಬ್ಬರು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಪ್ರಜಾತಾಂತ್ರಿಕವಾಗಿ ಹೇಗೆ ದೇಶದ ಉನ್ನತ ಪದವಿಯನ್ನೇರಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾದರೆ, ಮತ್ತೊಬ್ಬರು ಈ ದೇಶವನ್ನು ಆಳಿದ ಅತಿದೊಡ್ಡ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಬಹುದು ಎಂಬ ಕೆಟ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ.… Read More ಪ್ರಜಾಪ್ರಭುತ್ವ ಮತ್ತು ಅದರ ಅಣಕ

ಅಆಇಈ ಯಲ್ಲೂ ಅಪಸವ್ಯವೇ?

ನಾವು ಚಿಕ್ಕವರಿದ್ದಾಗ ಸಮಾಜ ಶಾಸ್ತ್ರದಲ್ಲಿ ಭಾರತವನ್ನು ಕಂಡುಹಿಡಿದವರು ಯಾರು? ಎಂಬ ಪ್ರಶ್ನೆಗೆ 1492 ರಲ್ಲಿ ಪೋರ್ಚುಗೀಸ್ ಮೂಲದ ನಾವಿಕನಾದ ವಾಸ್ಕೋ ಡಿ ಗಾಮಾ ಪೋರ್ಚುಗಲ್‌ನ ಲಿಸ್ಬನ್‌ನಿಂದ ನೌಕಾಯಾನ ಮಾಡುತ್ತಾ ಅಟ್ಲಾಂಟಿಕ್ ಸಾಗರದ ಮೂಲಕ ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಆಫ್ರಿಕಾದ ಪೂರ್ವ ಕರಾವಳಿಯ ಮಲಿಂಡಿಯಲ್ಲಿ ಕೆಲಕಾಲ ಲಂಗರು ಹಾಕಿ ಅಂತಿಮವಾಗಿ ಕೇರಳದ ಮಲಬಾರ್ ಕರಾವಳಿಯ ಕ್ಯಾಲಿಕಟ್‌ಗೆ ಬರುವ ಮೂಲಕ ಭಾರತವನ್ನು ಕಂಡು ಹಿಡಿದರು ಎಂದೇ ಹೇಳಿಕೊಡಲಾಗುತ್ತಿತ್ತು. ಹಾಗಾದರೆ ಅದಕ್ಕೂ ಮುಂಚೆ ಭಾರತದ ಅಸ್ತಿತ್ವವೇ ಇರಲಿಲ್ಲವೇ?… Read More ಅಆಇಈ ಯಲ್ಲೂ ಅಪಸವ್ಯವೇ?

ಪದ್ಮ ಪ್ರಶಸ್ತಿಗೆ ಅರ್ಹತೆ ಏನು?

ಪದ್ಮ ಪ್ರಶಸ್ತಿಗಳು ಗಣರಾಜ್ಯೋತ್ಸವದ ಮುನ್ನಾದಿನದಂದು ವಾರ್ಷಿಕವಾಗಿ ಘೋಷಿಸಲ್ಪಡುವ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆ) ಮತ್ತು ಪದ್ಮಶ್ರೀ (ವಿಶಿಷ್ಟ ಸೇವೆ). ಸಾರ್ವಜನಿಕ ಸೇವೆಯ ಅಂಶ ಒಳಗೊಂಡಿರುವ ಎಲ್ಲಾ ಚಟುವಟಿಕೆಗಳು ಅಥವಾ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 1954 ರಲ್ಲಿ ಭಾರತ ರತ್ನ ಮತ್ತು ಪದ್ಮವಿಭೂಷಣ ಎಂಬ ಎರಡು ನಾಗರಿಕ ಪ್ರಶಸ್ತಿಗಳನ್ನು ನೀಡಲು ಆರಂಭಿಸಿ, ನಂತರ… Read More ಪದ್ಮ ಪ್ರಶಸ್ತಿಗೆ ಅರ್ಹತೆ ಏನು?

ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?

ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ನೆನ್ನೆ ಪ್ರಕಟವಾಗಿ ಬೆಜೆಪಿ ಮೇಲ್ನೋಟಕ್ಕೆ 11 ಸ್ಥಾನ ಪಡೆದು ಬಹುಮತ ಗಳಿಸಿದೆ ಎನಿಸಿದರೂ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಗಳಿಸಿ ಆಡಳಿತ ಪಕ್ಷದೊಡನೆ 11 ಸ್ಥಾನ ಪಡೆದು ಸಮಬಲ ಸಾಧಿಸಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಬೀಗುತ್ತಿದೆ. ಇನ್ನು6 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸಿ ಕನಿಷ್ಟ ಪಕ್ಷ 3 ಸ್ಥಾನಗಳಲ್ಲಿ ಗೆದ್ದೇ ತೀರುತ್ತೇವೆ ಎಂದು ತೊಡೆ ತಟ್ಟಿದ್ದ ಜೆಡಿಎಸ್ ಯಥಾ ಪ್ರಕಾರ ಕೇವಲ 2 ಸ್ಥಾನವನ್ನು ಗಳಿಸಿದ್ದಲ್ಲಿ ಅಚ್ಚರಿಯಾಗಿ… Read More ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?

ಅವಿತಿಟ್ಟ ಇತಿಹಾಸ  

ಕಳೆದ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಲೇಖಕರಾದ ಶ್ರೀ ಪ್ರವೀಣ್ ಮಾವಿನಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿ ಈ ಇಬ್ಬರು ಲೇಖಕರು ಬರೆದಿರುವ ಅವಿತಿಟ್ಟ ಅಂಬೇಡ್ಕರ್ ಎಂಬ ಕೃತಿ ಖ್ಯಾತ ರಂಗಕರ್ಮಿಗಳಾದ ಶ್ರೀ ಪ್ರಕಾಶ್ ಬೆಳವಾಡಿ ಶ್ರೀ ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳದ ಶ್ರೀ ರಘುನಂದನ್ ಭಟ್ ಮತ್ತು ರಾಜ್ಯ ವಕೀಲರ ಪರಿಷತ್ತಿನ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಕುಮಾರ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಆಯಿತು. ಈ ಪುಸ್ತಕ ಬಿಡುಗಡೆಯ ಕುರಿತಂತೆ ನಾಡಿನ ಬಹುತೇಕ ದೃಶ್ಯ ಮತ್ತು… Read More ಅವಿತಿಟ್ಟ ಇತಿಹಾಸ  

ಏರ್ ಇಂಡಿಯ

ಇತ್ತೀಚೆಗೆ ದೇಶಾದ್ಯಂತ ನೆಡೆಯುತ್ತಿರುವ ಬಹುಮುಖ್ಯ ಚರ್ಚೆ ಎಂದರೆ, ಈ ಸರ್ಕಾರ ದೇಶವನ್ನು ಒಂದೊಂದಾಗಿ ಮಾರಲು ಹೊರಟಿದೆ. ಸರ್ಕಾರ ನಡೆಸಿ ಎಂದು ಅವರನ್ನು ಅಧಿಕಾರಕ್ಕೆ ತಂದರೆ ಇವರು ಹೀಗೆ ಒಂದೊಂದೇ ಸರ್ಕಾರೀ ಸಂಸ್ಥೆಗಳನ್ನು ಮಾರಾಟ ಮಾಡಲು ಅವರಿಗೆ ಯಾವ ಹಕ್ಕಿದೆ? ಎಂಬುದರ ಕುರಿತಾಗಿದೆ. ಹಾಗಾದರೆ ನಿಜವಾಗಿಯೂ ನಡೆಯುತ್ತಿರುದಾದರೂ ಏನು? ಎಂಬುದರ ಕುರಿತಾಗಿ ಚರ್ಚೆ ಮಾಡೋಣ. ಅದೊಂದು ಸಣ್ಣ ಮಕ್ಕಳ ಶಾಲೆ. ಶಾಲೆಯ ಶಿಕ್ಷಕಿ ಪ್ರತೀ ವಿದ್ಯಾರ್ಥಿಗಳಿಗೂ ಒಂದೊಂದು ಹಣ್ಣನ್ನು ತರಲು ಹೇಳಿದ್ದ ಕಾರಣ ಎಲ್ಲಾ ಮಕ್ಕಳೂ ಸಂತೋಷದಿಂದ ಮಾರನೆಯ… Read More ಏರ್ ಇಂಡಿಯ

ತಾರತಮ್ಯ

ಅಕ್ಟೋಬರ್ 2, ದೇಶದ ಇಬ್ಬರು ಮಹಾನ್ ನಾಯಕರ ಜಯಂತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ ಆದರೂ, ಒಬ್ಬರು ಚರಕ ಹಿಡಿದು ದೇಶವನ್ನು ವಿಭಜಿಸಿ ಶತ್ರುರಾಷ್ಟ್ರದ ಸೃಷ್ಟಿಗೆ ಕಾರಣೀಭೂತರಾದರೇ ಅದೇ ಮತ್ತೊಬ್ಬರು ಹಾಗೆ ಸೃಷ್ಟಿಯಾದ ಶತ್ರುರಾಷ್ಟ್ರ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಧಾಳಿ ನಡೆಸಿದಾಗ ತಮ್ಮ ದಿಟ್ಟ ನಿರ್ಧಾರಗಳಿಂದ ನರಕ ಸದೃಶವನ್ನು ತೋರಿಸಿದವರು. ಅದರೆ ಅದೇಕೋ ಏನೋ ಅಕ್ಟೋಬರ್ 2ರಂದು ಅದಾವುದೋ ಪೂರ್ವಾಗ್ರಹ ಪೀಡಿತರಾಗಿ ಮೊದಲನೆಯವರನ್ನೇ ಎತ್ತಿ ಮೆರೆದಾಡುತ್ತಾ ಎರಡನೆಯವರನ್ನು ನಗಣ್ಯರೀತಿಯಲ್ಲಿ ಕಡೆಗಾಣಿಸುವುದು ಈ ದೇಶದ ಪ್ರಾಮಾಣಿಕ ದೇಶ… Read More ತಾರತಮ್ಯ

ಅಖಂಡ ಭಾರತದ ವಿಭಜನೆ

ಅಖಂಡ ಭಾರತದ ವಿಭಜನೆ ಎಂಬ ಶೀರ್ಷಿಕೆ ಓದಿದ ತಕ್ಷಣವೇ ನಮಗೆ ನೆನಪಾಗೋದೇ 1947ರಲ್ಲಿ ಬ್ರಿಟೀಷರು ಧರ್ಮಾಧಾರಿತವಾಗಿ ಭಾರತ ಮತ್ತು ಪಾಕೀಸ್ಥಾನದ ವಿಭಜನೆ ಮಾಡಿಹೋಗಿದ್ದೇ ನೆನಪಾಗುತ್ತದೆ. ಆದರೆ ನಿಜ ಹೇಳಬೇಕೆಂದರೆ ಬ್ರಿಟಿಷರು ಭಾರತದಿಂದ ಸಂಪೂರ್ಣವಾಗಿ ಕಾಲು ಕೀಳುವ ಮೊದಲು ಕಡೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಬ್ರಿಟಿಷರು ತಾವು ಆಳುತ್ತಿದ್ದ ಬೇರೆ ಯಾವುದೇ ರಾಷ್ಟ್ರವನ್ನು ವಿಭಜನೆ ಮಾಡದಿದ್ದರೂ, ಭಾರತವನ್ನು ಮಾತ್ರಾ ಇಷ್ಟೊಂದು ಬಾರಿ ವಿಭಜನೆ ಮಾಡುವ ಮುಖಾಂತರ ಭಾರತ ದೇಶ ಏಷ್ಯಾ… Read More ಅಖಂಡ ಭಾರತದ ವಿಭಜನೆ

ಶಹೀದ್ ಉಧಮ್ ಸಿಂಗ್

ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ಕೇಂದ್ರದ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ಅಮೂಲಾಗ್ರವಾದ ಬದಲಾವಣೆ ತರಲು ಮುಂದಾಗಿದ್ದು ಅದಕ್ಕೆ ಪೂರಕವಾಗಿ ದೇಶವಾಸಿಗಳಿಂದ ಸೂಚನೆ ಮತ್ತು ಸಲಹೆಗಳನ್ನು ಕೇಳಿರುವ ಸುದ್ದಿ ಓದಿ ಮೈ ರೋಮಾಂಚನವಾಯಿತು. ಸ್ವಾತ್ರಂತ್ಯ ಬಂದು ೭೦+ ವರ್ಷಗಳ ನಂತರವೂ ಅದೇ ಅಕ್ಬರ್ ದಿ ಗ್ರೇಟ್, ಅಲೆಕ್ಶಾಂಡರ್ ದಿ ಗ್ರೇಟ್, ಆರ್ಯರು ಭಾರತಕ್ಕೆ ಬಂದರು ಎನ್ನುವ ಆಂಗ್ಲರ ಸುಳ್ಳು ಸುಳ್ಳು ಇತಿಹಾಸವನ್ನೇ ಓದಿ ಬೆಳೆದಿದ್ದ ನಾವು ಇನ್ನು ಮುಂದೆಯಾದರೂ ನಮ್ಮ ನಿಜವಾದ ರಾಜ ಮಹಾರಾಜರು ಮತ್ತು ಸ್ವಾತ್ರಂತ್ರ್ಯ ಹೋರಾಟಗಾರರ ಚರಿತ್ರೆಯನ್ನು… Read More ಶಹೀದ್ ಉಧಮ್ ಸಿಂಗ್