ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

ಪಾಂಡವರ ತಾಯಿ ಕುಂತೀ ಮದುವೆಗೆ ಮುಂಚೆ, ಅವರ ತಂದೆಯ ಮನೆಯಲ್ಲಿದ್ದಾಗ ದೂರ್ವಾಸಮುನಿಗಳು ಬಂದಿದ್ದಾಗ ಅವರ ಆರೈಕೆಗಳಿಂದ ಸಂತೃಪ್ತರಾಗಿ ದೂರಲೋಚನೆಯಿಂದ ಮಕ್ಕಳಾಗುವ ಐದು ವರಗಳನ್ನು ಕೊಟ್ಟಾಗ, ಬಾಲಕಿ ಕುಂತೀದೇವಿ ಆ ವರಗಳನ್ನು ಪರೀಕ್ಷಿಸಿ ಸೂರ್ಯದೇವನ ವರದಿಂದ ಕರ್ಣನ ಜನವಾದಾಗ, ಮದುವೆಗೆ ಮುಂಚೆಯೇ ಮಗುವೇ ಎಂದು ಸಮಾಜಕ್ಕೆ ಅಂಜಿ ಆ ಮಗುವನ್ನು ಒಂದು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟು ನಂತರ ಆ ಮಗು ಅಗಸರಿಗೆ ಸಿಕ್ಕಿ ಬೆಳೆದು ದೊಡ್ಡವನಾದ ಕಥೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ಮಂಗಳೂರಿನ… Read More ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

ಧೋಲ್ಕಲ್ ಗಣೇಶ

ನಮ್ಮ ದೇಶದಲ್ಲಿ ಹಲವಾರು ಗಣೇಶನ ಪ್ರಸಿದ್ಧ ದೇವಾಲಯಗಳಿವೆ. ಆದರೆ, ಛತ್ತೀಸ್ ಘಡದ ರಾಯ್‌ಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ದಾಂತೇವಾಡ ಜಿಲ್ಲೆಯ ದಟ್ಟವಾದ ಕಾಡಿನ ಮಧ್ಯದಲ್ಲಿ ಧೋಲ್ಕಲ್ ಎಂಬ ಪರ್ವತದ ತುತ್ತ ತುದಿಯಲ್ಲಿ ಯಾವುದೇ ಮಂಟಪವಿಲ್ಲದೇ ಬಟ್ಟ ಬಯಲಿನಲ್ಲಿರುವ ಈ ಸುಂದರ ವಿಘ್ನವಿನಾಶಕನ ಬಗ್ಗೆ ಬಹುತೇಕರಿಗೆ ತಿಳಿದೇ ಇರಲಿಲ್ಲ. ಸುಮಾರು 13,000 ಅಡಿಗಳಷ್ಟು ಎತ್ತರದ ಈ ಡೋಲ್ಕಲ್ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿಯನ್ನು ಸ್ಥಳೀಯ ಪತ್ರಕರ್ತ ಮತ್ತು ಪುರಾತತ್ವ ಇಲಾಖೆಯಿಂದ ನಡೆಸುತ್ತಿದ್ದ ಭಾರಿ ಶೋಧ… Read More ಧೋಲ್ಕಲ್ ಗಣೇಶ