ಪುಳಿಯೋಗರೆ

ಇದು ದಕ್ಷಿಣ ಭಾರತದ ಜನಪ್ರಿಯ ಆಹಾರವೂ ಹೌದು ಮತ್ತು ದೇವಸ್ಥಾನಗಳಲ್ಲಿನ ಸುಪ್ರಸಿದ್ಧ ಪ್ರಸಾದವೂ ಹೌದು. ಪುಳಿಯೋಗರೇ ಎಂಬ ಹೆಸರು ಕೇಳಿದೊಡನೆ ನಮ್ಮ ಬಾಯಲ್ಲಿ ನೀರೂರುವ ಹಾಗೆಯೇ ಥಟ್ ಅಂತಾ ನೆನಪಾಗೋದೇ ಐಯ್ಯಂಗಾರ್ ಪುಳಿಯೋಗರೇ. ಬ್ರಾಹ್ಮಣರ ಒಂದು ಪಂಗಡವಾದ ಐಯ್ಯಾಂಗಾರರು ಈ ಪಾಕವಿಧಾನವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡು ಅದನ್ನು ತಮ್ಮ ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತಹ ರುಚಿಕರವಾದ ಪುಳಿಯೋಗರೇ ಗೊಜ್ಜನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಒಮ್ಮೆ ಶುಚಿಯಾಗಿ ನೀರು ಬೆರಸದೇ… Read More ಪುಳಿಯೋಗರೆ

ಕಡಲೇಕಾಯಿ ಬಾತ್

ಮನೆಯಲ್ಲಿ ಅದೇ ಚಿತ್ರಾನ್ನ, ಮೊಸರನ್ನ, ಪಲಾವ್, ಮೆಂತ್ಯಾಬಾತ್, ಫ್ರೈಡ್ ರೈಸ್ ಜೀರಾರೈಸ್ ಇಲ್ಲವೇ ಘೀರೈಸ್ ಮುಂತಾದ ಅನ್ನದ ತಿಂಡಿಗಳನ್ನು ತಿಂದು ಬೇಸರವಾಗಿದ್ದಾಗ, ಬದಲಾವಣೆಯಾಗಿ ನಾವು ತಿಳಿಸಿಕೊಡುವ ಅತ್ಯಂತ ಸರಳವಾದ ಕಡಲೇಕಾಯಿ ಬಾತ್ ಮಾಡಿಕೊಡಿ. ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ಇಷ್ಟ ಪಟ್ಟು ಮತ್ತಷ್ಟು ಮತ್ತು ಮಗದಷ್ಟು ತಿನ್ನದೇ ಇದ್ದರೆ ನೋಡಿ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಡಲೇಕಾಯಿ ಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ – 2 ಬಟ್ಟಲು ಎಳ್ಳು – 1 ಚಮಚ (ಬಿಳಿ ಅಥವಾ… Read More ಕಡಲೇಕಾಯಿ ಬಾತ್

ಶ್ರೀ ರಾಮಾನುಜಾಚಾರ್ಯರು

ಎಂಟನೇ ಶತಮಾನದ ಅಂತ್ಯ ಮತ್ತು ಒಂಬತ್ತನೇ ಶತಮಾನದಲ್ಲಿ ವಿವಿಧ ಧರ್ಮಗಳ ಸೆಳೆತಕ್ಕೆ ಸಿಕ್ಕಿ ಸನಾತನ ಧರ್ಮ ಆವಸಾನದ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ಪುನರುತ್ಥಾನದ ಆಶಾಕಿರಣವಾಗಿ ಶ್ರೀ ಶಂಕರಾಚಾರ್ಯರ ಆಗಮನವಾಗಿ ಅನ್ಯಧರ್ಮೀಯರನ್ನು ಸಮರ್ಥವಾಗಿ ವಾದದಲ್ಲಿ ಸೋಲಿಸಿ ತಮ್ಮ ಅಹಂ ಬ್ರಹ್ಮಾಸ್ಮಿ ಎನ್ನುವ ಅದ್ವೈತ ತತ್ವದ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿದ ಪರಂಪರೆಯನ್ನು 10 ಮತ್ತು 11ನೇ ಶತಮಾನದಲ್ಲಿ ಮುಂದುವರಿಸಿದ ಕೀರ್ತಿ ಶ್ರೀ ರಾಮಾನುಜಾಚಾರ್ಯರಿಗೆ ಸಲ್ಲುತ್ತದೆ. ಈ ಇಬ್ಬರು ಮಹಾನ್ ಆಚಾರ್ಯರ ನಡುವೆ ಹಲವಾರು ಸಾಮ್ಯಗಳಿದ್ದು ಮೊದಲನೆಯದಾಗಿ ಈ ಇಬ್ಬರೂ… Read More ಶ್ರೀ ರಾಮಾನುಜಾಚಾರ್ಯರು

ಅವಕಾಶ

ಆಗ ಎಂಭತ್ತರ ದಶಕ. ಆಗಿನ್ನೂ ನಾಲ್ಕನೇ ತರಗತಿಯಲ್ಲಿದ್ದೆ. ಇಂದಿನಂತೆ ಡೈರೀ ಹಾಲಿನ ಪ್ರಭಾವ ಅಷ್ಟಾಗಿರಲಿಲ್ಲ . ನಮ್ಮದೇ ಬಡಾವಣೆಯಲ್ಲಿಯೇ ಸಾಕಷ್ಟು ಮನೆಗಳಲ್ಲಿ ಇನ್ನೂ ಹಸು ಮತ್ತು ಎಮ್ಮೆಗಳನ್ನು ಸಾಕಿದ್ದರು. ನಾವೆಲ್ಲಾ ಅವರ ಬಳಿಯೇ ವರ್ತನೆಗೆ (ಪ್ರತಿ ನಿತ್ಯ ಕಡ್ಡಾಯವಾಗಿ ನಿರ್ಧಿಷ್ಟವಾದ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ ಹಣ ನೀಡುವ ಪದ್ದತಿ) ಹಾಲು ತೆಗೆದುಕೊಳ್ಳುತ್ತಿದ್ದವು. ಅದೇ ರೀತಿ ನಾವಿದ್ದ ವಠಾರದ ಮನೆಯ ಮಾಲೀಕರ ಮನೆಯಲ್ಲಿಯೂ ಹಸು ಮತ್ತು ಎಮ್ಮೆ ಸಾಕಿದ್ದರು ನಾವು ಅವರ ಬಳಿಯೇ ಪ್ರತಿನಿತ್ಯ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ… Read More ಅವಕಾಶ