ಮಹಾ ಅಘಾಡಿ, ಲಗಾಡಿ

ಕಳೆದ ಒಂದು ತಿಂಗಳಿನಿಂದಲೂ ಮಹಾರಾಷ್ಟ್ರದ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಆಗುತ್ತಿರುವ ಬದಲಾವಣೆಯನ್ನು ಇಡೀ ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿರೋಧ ಪಕ್ಷಗಳು ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರ ವಿರೋಧ ಪಕ್ಷವನ್ನು ಧಮನ ಮಾಡುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಅಬ್ಬಿರಿದು ಬೊಬ್ಬಿರಿಯುತ್ತಿರುವುದನ್ನು ಪ್ರತಿಯೊಂದು ಮಾಧ್ಯಮದಲ್ಲೂ ಕಾಣಬಹುದಾಗಿದೆ. ಆದರೆ ಈ ರೀತಿಯ ಕ್ಷಿಪ್ರಕ್ರಾಂತಿ ಕೇವಲ ಒಂದು ದಿನ ಅಥವಾ ಒಂದು ಸಂಧರ್ಭದಿಂದ ಆಗದೇ ಇದರ ಹಿಂದೆ ಹತ್ತಾರು ವಿಷಯಗಳು ಅಡಕವಾಗಿರುತ್ತದೆ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

maha2019ರ ಅಕ್ಟೋಬರ್ 21 ರಂದು ಮಹಾರಾಷ್ಟ್ರದ 288 ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಿರ್ಧಾರವಾದಾಗ, ಎಂದಿನಂತೆ ಹಿಂದೂತ್ವ ಸಿದ್ಧಾಂತದ ಅಡಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಂದಾಗಿ ಚುನಾವಣ ಪೂರ್ವತ್ತರ ಮೈತ್ರಿಯಲ್ಲಿ ಚುನಾವಣೆಯನ್ನು ಎದುರಿಸಿದರೆ, ಕಾಂಗ್ರೇಸ್ , ಎನ್.ಸಿ.ಪಿ ಮತ್ತು ಉಳಿದೆಲ್ಲಾ ಸಣ್ಣ ಪುಟ್ಟ ಪಕ್ಷಗಳು ಸ್ವತಂತ್ರ್ಯವಾಗಿ ಚುನಾವಣೆಯನ್ನು ಎದುರಿಸಿ, ಅಂತಿಮವಾಗಿ ಜನಾದೇಶ ಬಂದಾಗ, ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 54, ಎನ್.ಸಿ.ಪಿ. 44 ಮತ್ತು ಇತರೆ 29 ಶಾಸಕ ಸ್ಥಾನಗಳನ್ನು ಗೆದ್ದಿದ್ದವು.

uddavಚುನಾವಣಾ ಪೂರ್ವೋತ್ತರ ಮೈತ್ರಿಯಂತೆ ಬಿಜೆಪಿ ಮತ್ತು ಶಿವಸೇನೆ ಸೇರಿಕೊಂಡು ಒಟ್ಟಿ 161 ಸ್ಥಾನ ಗಳಿಸುವ ಮೂಲಕ, ಅಧಿಕಾರದ ಗದ್ದುಗೆಯನ್ನು ಏರಲು ಅಗತ್ಯವಿದ್ದ ಬಹುಮತದ ಸಂಖ್ಯೆ 145ಕ್ಕಿಂತಲೂ 16 ಸ್ಥಾನಗಳನ್ನು ಹೆಚ್ಚಿಗೆ ಪಡೆದ ಕಾರಣ ಸಹಜವಾಗಿ ಮತ್ತೊಮ್ಮೆ ಬಿಜೆಪಿ -ಶಿವಸೇನೆ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂದೇ ಎಲ್ಲರೂ ಭಾವಿಸಿದ್ದರು.

aghadi1ಹಿಂದೂತ್ವ ಮತ್ತು ಮರಾಠಿಗರ ಅಸ್ಮಿತೆಗಾಗಿ ಹೋರಾಟ ಮಾಡುತ್ತಾ, ಅಧಿಕಾರಕ್ಕೆ ಎಂದೂ ಆಸೆ ಪಡದಿದ್ದ ಶಿವಸೇನೆ ಸ್ಥಾಪಕರ ಮಗ ಬಾಳಾ ಸಾಹೇಬರ ಮಗ ಉದ್ಧವ್ ಠಾಕ್ರೆ ಮಾತ್ರಾ ತಮ್ಮ ತಂದೆಯವರ ಆಶಯಗಳನ್ನೆಲ್ಲಾ ಗಾಳಿಗೆ ತೂರಿ, ತಾನು ಮತ್ತು ತನ್ನ ಮಗ ಆದಿತ್ಯ ಠಾಕ್ರೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ ಬಿಜೆಪಿಯ ಅರ್ಧ ಸ್ಥಾನ ಗಳಿಸಿದ್ದರೂ, ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ ಮಾಡಿದಾಗ ಸಹಜವಾಗಿ ಬಿಜೆಪಿ ಅದಕ್ಕೆ ಒಪ್ಪದೇ ಹೋದಾಗ, ಯಾವ ಕಾಂಗ್ರೆಸ್ ವಿರುದ್ಧ ತಮ್ಮ ತಂದೆಯವರು ಜೀವಮಾನವಿಡೀ ಹೋರಾಡಿದ್ದರೋ, ಈಗ ಅದೇ ಕಾಂಗ್ರೇಸ್ ಮತ್ತು ಎನ್.ಸಿ.ಪಿ. ಜೊತೆ ಕೈ ಜೋಡಿಸಿ ಮಹಾ ವಿಕಾಸ್ ಅಘಾಡಿ ಎಂಬ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು ಉದ್ದವ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಲ್ಲದೇ, ತಮ್ಮ ಸಂಪುಟದಲ್ಲಿ ತಮ್ಮ ಮಗ ಆದಿತ್ಯನಿಗೆ ಮಂತ್ರಿಯನ್ನಾಗಿಸಿದರು.

ಮಾಜೀ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಯಪೇಯಿಯವರು ಪದೇ ಪದೇ ಹೇಳುತ್ತಿದ್ದ ಹಾಗೆ, ಕಾಂಗ್ರೇಸ್ ಅಧಿಕಾರದಲ್ಲಿ ಇರುವುದಕ್ಕಿಂತಲೂ ಅಧಿಕಾರದಲ್ಲಿ ಇಲ್ಲದಿದ್ದಾಗಲೇ ಹೆಚ್ಚು ಅಪಾಯಕಾರಿ ಎನ್ನುವಂತೆ, ದೇಶದಲ್ಲಿ ಒಂದೊಂದೇ ರಾಜ್ಯವನ್ನು ಕಳೆದು ಕೊಂಡು ಲೋಕಸಭೆಯಲ್ಲೂ ಕೇವಲ 40+ ಸ್ಥಾನ ಗಳಿಸಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಗಳಿಸಲು ಆಗದೇ ಪರದಾಡುತ್ತಿದ್ದ ಸಮಯದಲ್ಲಿ, ಅವಕಾಶ ಸಿಕ್ಕಾಗಲೆಲ್ಲಾ ದೇಶದ ಬಹುಸಂಖ್ಯಾತ ಹಿಂದೂಗಳಿಗಿಂತಲೂ ಅಲ್ಪಸಂಖ್ಯಾತರ ಬಗ್ಗೆಯೇ ಕಾಳಜಿ ತೋರುತ್ತಿದ್ದರೂ, ತನ್ನನ್ನು ತಾನು ಜಾತ್ಯಾತೀತ ಪಕ್ಷ ಎಂದು ಕರೆದುಕೊಳ್ಳುವ ಕಾಂಗ್ರೇಸ್, ಸದಾಕಾಲವೂ ಉಗ್ರ ಹಿಂದೂಪರವಾಗಿದ್ದು, ಬಹಿರಂಗವಾಗಿಯೇ ತಾನು ಬಲಪಂಥೀಯ ಎಂದು ಹೋರಾಟ ಮಾಡುತ್ತಲೇ ಇದ್ದ ಶಿವಸೇನೆ. ಈ ರೀತಿಯಾಗಿ ಪರಸ್ಪರ ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿದ್ದ ಪಕ್ಷಗಳ ನಾಯಕರು ತಮ್ಮ ಸ್ವಹಿತಾಸಕ್ತಿಗಾಗಿ ಮತ್ತು ಅಧಿಕಾರದ ಮೇಲಿನ ಲಾಲಸೆಯಿಂದ ಒಂದಾದಾಗ, ಯಾವೊಬ್ಬ ಪ್ರಗತಿ ಪರರೂ ಇದು ಜಾನಾದೇಶದ ವಿರುದ್ದದ ಅನೈತಿಕ ಮೈತ್ರಿ, ಹೀಗೆ ಮಾಡಿದರೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತದೆ ಎಂದು ಹೇಳದೇ ಹೋದ್ದದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ಬೆಕ್ಕು ಕಣ್ಣು ಮುಚ್ಚಿ ಕೊಂಡು ಹಾಲು ಕುಡಿದು ಅದು ಲೋಕಕ್ಕೆ ಕಾಣುವುದಿಲ್ಲ ಎಂದು ಭಾವಿಸಿದರೂ, ಜನರು ಅದನ್ನು ನೋಡಿರುವಂತೆ, ಶಿವಸೇನೆ ಮತ್ತು ಕಾಂಗ್ರೇಸ್ ನಾಯಕರುಗಳು ಈ ರೀತಿಯಾಗಿ ಅಸ್ವಾಭಾವಿಕವಾದ ಅಧಿಕಾರವನ್ನು ಹಂಚಿಕೊಂಡಿದ್ದು ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದ ಜನರಿಗೆ ಬೇಸರ ತರಿಸಿದ್ದರೆ, ಸ್ವತಃ ಶಿವಸೇನೆಯಿಂದ ಆಯ್ಕೆಯಾದ ಶಾಸಕರಿಗೇ ಅಸಮಧಾನವಾಗಿದ್ದು, ಪದೇ ಪದೇ ನಾವು ಬಿಜೆಪಿಯೊಂದಿಗಿನ ಸಂಬಂಧ ಮುರಿದು ಕೊಳ್ಳಬಾರಾದಾಗಿತ್ತು. ಮತ್ತೊಮ್ಮೆ ಈ ಕುರಿತು ಯೋಚಿಸುವುದು ಉತ್ತಮ ಎಂದು ಸಮಯ ಸಿಕ್ಕಾಗಲೆಲ್ಲಾ ಪಕ್ಷದ ಒಳಗಡೇ ಮತ್ತು ಬಹಿರಂಗವಾಗಿಯೂ ಹೇಳುತ್ತಿದ್ದರೂ, ಅಧಿಕಾರದ ಮಧದಲ್ಲಿ ತೇಲುತ್ತಿದ್ದ ಉದ್ದವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಇದಕ್ಕೆ ಸೊಪ್ಪು ಹಾಕಿರಲಿಲ್ಲ.

ಉದ್ದವ್ ಠಾಕ್ರೆಯ ರಾಜಕೀಯ ಜ್ಞಾನದ ಕೊರತೆ, ಆಡಳಿತ ಅನುಭವದ ಕೊರತೆ, ಪುತ್ರ ವ್ಯಾಮೋಹ, ಅಹಂಕಾರ, ಉಡಾಫೆಯ ಜೊತೆಗೆ ರಾಜ್ಯಸಭೆಯಲ್ಲಿ ಶಿವಸೇನೆ ನಾಯಕ ಮತ್ತು ಶಿವಸೇನೆಯ ಮುಖಪುಟವಾದ ದೈನಿಕ್ ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಸಂಜಯ್ ರಾವುತ್ ತಮ್ಮ ಪತ್ರಿಕೆಯ ಮುಖಪುಟದಲ್ಲಿ ಅನಗತ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಇಲ್ಲ ಸಲ್ಲದ್ದನ್ನು ಬರೆಯುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧಕ್ಕೆ ಹುಳಿ ಹಿಂಡುತ್ತಿದ್ದದ್ದು ಪಕ್ಷದ ಕಾರ್ಯಕರ್ತರಿಗೂ ಮತ್ತು ಶಾಸಕರಿಗೆ ಬೇಸರ ತರಿಸಿತ್ತು.

shivseneಇವೆಲ್ಲರದ ಪರಿಣಾಮವಾಗಿ ಮೂರು ವಾರದ ಹಿಂದೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕೆಲ ಅಡ್ಡ ಮತದಾನಗಳು ನಡೆದು ಬಿಜೆಪಿ ಒಂದು ಹೆಚ್ಚಿನ ಸ್ಥಾನವನ್ನು ಗಳಿಸಿದಾಗಲೂ, ತನ್ನ ಶಾಸಕರ ಮನದಾಳದ ಇಂಗಿತವನ್ನು ಅರಿಯದೇ ಹೋದ ಉದ್ದವ್ ಗೆ ಮತ್ತೊಮ್ಮೆ ಪಾಠ ಕಲಿಸುವ ಸಲುವಾಗಿ ಕಳೆದ ವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ 106 ಸಂಖ್ಯಾಬಲ ಇದ್ದ ಬಿಜೆಪಿಯ ಲೆಕ್ಕಾಚಾರದ ಪ್ರಕಾರ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಬಹುದಿತ್ತು. ಆದರೆ ಕೆಲವು ಸ್ವತಂತ್ರ ಶಾಸಕರ ಜೊತೆ ಶಿವಸೇನೆಯ ಕೆಲವು ಶಾಸಕರೂ ಸೇರಿ ಅಡ್ಡ ಮತದಾನ ಮಾಡಿದ ಪರಿಣಾಮ, ಅಘಾಡಿಯ ಆರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಸೋಲಿಸುವ ಮೂಲಕ ಬಿಜೆಪಿಗೆ ಹೆಚ್ಚುವರಿಯಾಗಿ ಐದು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಆಘಾತ ನೀಡಿದ್ದನ್ನು ಅರಗಿಸುಕೊಳ್ಳುವ ಮುನ್ನವೇ, ಶಿವಸೇನೆ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಏಕನಾಥ್ ಶಿಂಧೆ ನಾಯಕತ್ವದಲ್ಲಿ ಸುಮಾರು 34 ಶಾಸಕರು ತಮ್ಮ ಪಕ್ಷದ ವಿರುದ್ಧವೇ ಬಂಡಾಯ ಎದ್ದು ಗುಜರಾತಿನ ರೆಸಾರ್ಟ್ ಒಂದರಲ್ಲಿ ಬೀಡು ಬಿಟ್ಟು ನಂತರ ದೂರದ ಅಸ್ಸಾಂ ರಾಜ್ಯಕ್ಕೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ. ಇವರ ಜೊತೆ ಇನ್ನೂ ಕೆಲವು ಪಕ್ಷೇತರ ಶಾಸಕರು ಸಹಾ ಅಲ್ಲಿ ಬೀಡು ಬಿಟ್ಟಿರುವುದು ಸರ್ಕಾರದ ಅಸ್ತಿತ್ವಕ್ಕೆ ತೂಗು ಕತ್ತಿಯಾಗಿದೆ.

shindhiಪರಿಸ್ಥಿತಿಯನ್ನು ನಿಭಾಯಿಸಲು ಉದ್ದವ್ ಕರೆದಿದ್ದ ಶಾಸಕಾಂಗ ಸಭೆಯೂ ಸಹಾ ವಿಫಲವಾಗಿ ಮಹಾ ಅಘಾಡಿ ಸರ್ಕಾರದಿಂದ ಹೊರಬಂದು ಮಹಾರಾಷ್ಟ್ರದ ಜನತೆಯ ಆಶಯದಂತೆ ಅಪ್ಪಟ ಕೇಸರಿ ಸರ್ಕಾರ ಬಾರದೇ ಹೋದಲ್ಲಿ, ಸರ್ಕಾರ ಪತನವಾಗುವುದು ಬಿಡಿ, ಪಕ್ಷದ ಮೂರನೇ ಎರಡರಷ್ಡು ಶಾಸಕರು ಉದ್ದವ್ ಠಾಕ್ರೆ ವಿರುದ್ದ ಬಂಡೆದ್ದಿರುವ ಕಾರಣ ಶಿವಸೇನೆ ಪಕ್ಷವೇ ವಿಭಜನೆಯಾಗುವ ಸಂಭವವೇ ಹೆಚ್ಚಾಗಿ ಕಾಣುತ್ತಿದೆ

ಶಿವಸೇನೆಯಲ್ಲಿ ಬಂಡಾಯ ಇದೆ ಮೊದಲಲ್ಲ.‌ ಬಾಳಠಾಕ್ರೆ ಅದ್ಯಕ್ಷರಾಗಿದ್ದಾಗಲೂ ಜಗನ್ ಬುಜಬಲ್, ನಾರಾಯಣ ರಾಣೆ, ರಾಜ್ ಠಾಕ್ರೆಯಂತಯ ನಾಯಕರು ಹೊರಹೋಗಿದ್ದರೂ, ಶಿವಸೇನೆ ಎಂದೂ ತನ್ನ ಮೂಲ ಹಿಂದುತ್ವದಿಂದ ಹಿಂದೆ ಸರಿಯದಿದ್ದ ಕಾರಣ, ಪಕ್ಷದ ಕಾರ್ಯಕರ್ತರ ಬೆಂಬಲ ಸದಾಕಾಲವೂ ಮುಂದುವರೆದಿತ್ತು. ಆದರೆ ಪುತ್ರ ವ್ಯಾಮೋಹದಿಂದಾಗಿ ರಾಜಕೀಯ ಪ್ರಬುದ್ಧತೆಯನ್ನೇ ಮರೆತ ಉದ್ದವ್ ತಮ್ಮನ್ನು ಟೀಕಿಸಿದ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯ ಅನಗತ್ಯ ಬಂಧನ, ನಟಿ ಕಂಗಾನ ರಣಾವತ್ ಕಟ್ಟಡ ಒಡೆದಿದ್ದರ ಜೊತೆಗೆ ದುರಹಂಕಾರಿ ಸಂಜಯ್ ರಾವತ್ ನ ಮಾತು ಕೇಳಿ ದಾರಿ ತಪ್ಪಿದ್ದಕ್ಕಾಗಿ, ಸರ್ಕಾರದ ಅವನತಿ, ಜನವಿರೋಧಿ ಪರಿಸ್ಥಿತಿ ಮತ್ತು ಬಾಳಾಠಾಕ್ರೆಯವರು ಕಟ್ಟಿ ಅತ್ಯಂತ ಜತನದಿಂದ ಬೆಳಸಿದ್ದ ಪಕ್ಷವನ್ನು ಈಗ ಅವರದ್ದೇ ಪಕ್ಷದ ಶಾಸಕರು ಒಡೆದು ಶಿವಸೇನೆಗೆ ಅಂತ್ಯವನ್ನು ಹಾಡಲು ಮುಂದಾಗಿರುವುದು ತುಂಬಲಾರದ ನಷ್ಟವಾಗಿದೆ.

ಇವೆಲ್ಲದರ ಮಧ್ಯೆ, ಆಘಾಡಿ ಸರ್ಕಾರವನ್ನು ಉಳಿಸಲು ಎನ್ ಸಿ ಪಿ ವರಿಷ್ಠ ಶರದ್ ಪವಾರ್ ಅವರು ಏಕನಾಥ್ ಶಿಂಧೆಯವರನ್ನೇ ಮುಖ್ಯಮಂತ್ರಿ ಮಾಡಿ ಎಂಬ ಸಲಹೆಗೆ ಸರ್ಕಾರ ಮತ್ತು ಪಕ್ಷವನ್ನು ಉಳಿಸುವುದರ ಜೊತೆಗೆ ಅಳುದುಳಿದಿರುವ ಮಾನವನ್ನು ಕಾಪಾಡಿಕೊಳ್ಳಲು ಉದ್ದವ್ ಒಪ್ಪಿಕೊಂಡರೂ, ನನಗೆ ಸಿಎಂ ಸ್ಥಾನ ಬೇಡ, ನಾನು ಮುಖ್ಯಮಂತ್ರಿ ಅಗುವುದಿಲ್ಲ ಎಂದು ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ಮಹಾ ವಿಕಾಸ್ ಅಘಾಡಿ ಸರ್ಕಾರ ನಡೆಯೋದು ಸಾಧ್ಯವಿಲ್ಲ, ಶಿವಸೇನೆ ಅಘಾಡಿ ಮೈತ್ರಿಕೂಟದಿಂದ ಹೊರ ಬರಬೇಕು. ಕಳೆದ ಎರಡೂವರೆ ವರ್ಷದ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದಿಂದ ಕಾಂಗ್ರೇಸ್ ಮತ್ತು ಎನ್.ಸಿಪಿ. ಹೆಚ್ಚಿನ ಲಾಭ ಪಡೆದು ಮಹಾರಾಷ್ಟ್ರದಲ್ಲಿ ಆ ಎರಡೂ ಪಕ್ಷಗಳು ಬಲಿಷ್ಠಗೊಂಡು, ಶಿವಸೇನೆ ತನ್ನ ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಕಾರಣ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಮೈತ್ರಿ ಕಡಿದುಕೊಳ್ಳುವ ಮೂಲಕ ಮೂಲ ಶಿವಸೈನಿಕರ ಮನಸ್ಸಿನಲ್ಲಿರೋ ಭಾವನೆಗಳಿಗೆ ಬೆಲೆ ಕೊಡಿ ಎಂದಿರುವುದು ಗಮನಾರ್ಹವಾಗಿದೆ.

ಶಿವಸೇನೆಯೊಂದಿಗೆ ಒಪ್ಪಂದ ಪ್ರಕಾರ ಸ್ಪರ್ಥಿಸಿದ್ದ140 ಕ್ಷೇತ್ರಗಳಲ್ಲಿ 105 ಸ್ಥಾನಗಳನ್ನು ಗಳಿಸುವ ಮೂಲಕ ಜನಾದೇಶ ಬಿಜೆಪಿಯ ಪರವಾಗಿದ್ದರೂ ಅಧಿಕಾರ ಗಳಿಸಲಾಗಲಿಲ್ಲವಲ್ಲಾ ಎಂದು, ಅಘಾಢಿ ಸರ್ಕಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ ಸಫಲವಾಗಿರಲಿಲ್ಲ. ಆದರೆ ಈಗ ಶಿವಸೇನೆಯ ಈ ಆಂತರಿಕ ಕ್ಷಿಪ್ರ ಕ್ರಾಂತಿಯಿಂದಾಗಿ, ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿ ಸುಲಭವಾಗಿ ಭಿನ್ನಮತೀಯರು ಮತ್ತು ಪಕ್ಷೇತರ ಶಾಸಕರ ಸಂಖ್ಯಾ ಬೆಂಬಲದಿಂದ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಮರಳಬಹುದೆಂದು ಬಕ ಪಕ್ಷಿಯಂತೆ ಬಿಜೆಪಿಯೂ ಕಾಯುತ್ತಿರುವುದು ಪ್ರಜಾಪ್ರಭುತ್ವದಲಿರುವ ಹುಳುಕನ್ನು ಎತ್ತಿ ತೋರಿಸುವಂತಾಗಿದೆ.

ಶಿವಸೇನೆಯ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಯದೇ ಹೋದಲ್ಲಿ, ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಸಲುವಾಗಿ ಉದ್ದವ್ ವಿಧಾನಸಭೆಯನ್ನೇ ವಿಸರ್ಜಿಸಲೂ ಯೋಚಿಸಿದ್ದರೂ, ಮತ್ತೊಮ್ಮೆ ಜನರಿಂದ ಆಯ್ಕೆಯಾಗಿ ಬರುವ ಭರವಸೆ ಇಲ್ಲದ ಆಘಾಡಿ ಸರ್ಕಾರದ ಸಹಶಾಸಕರು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲವೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಭಾರತ ಒಕ್ಕೂಟ ಸಂಸ್ಥಾನ. ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವುದೇ ಈ ಪ್ರಜಾಪ್ರಭುತ್ವ ಸರ್ಕಾರ ಎಂದು ಎಲ್ಲಾ ಪಕ್ಷದ ರಾಜಕೀಯ ನಾಯಕರು ಅಬ್ಬಿರಿದು ಬೊಬ್ಬಿರಿದರೂ, ಒಳೊಗೊಳಗೇ, ಪ್ರಾದೇಶಿಕ ಧರ್ಮ, ಜಾತಿ, ಭಾಷೆಯ ಅಸ್ಮಿತೆ, ಅಸ್ಥಿತ್ವ ಎಂಬ ಹೆಸರಿನಲ್ಲಿ ವಂಶಪಾರಂಪರ್ಯ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿರುವುದೇ ಈ ರೀತಿಯ ರಾಜಕೀಯ ಅಸ್ಥಿರತೆಗೆ ಕಾರಣವಾಗಿರುವುದು ದೇಶದ ಮುನ್ನಡೆಗೆ ಮಾರಕವೇ ಸರಿ. ಯಾರು ಬಂದರೂ ತಮಗೇನೂ ಮಾಡುವುದಿಲ್ಲ ಎಂಬ ಉಡಾಫೆಯಿಂದ ಮತದಾನವನ್ಣೇ ಮಾಡದ ವಿದ್ಯಾವಂತರು ಮತ್ತು ರಾಜಕೀಯ ಪಕ್ಷಗಳು ಒಂದು ದಿನ ನೀಡುವ ಬಿರ್ಯಾನಿ, ಹಣ ಹೆಂಡಕ್ಕೆ ಮತಗಳನ್ನು ಮಾರಿ ಕೊಳ್ಳುವವರು, ಅಭ್ಯರ್ಥಿ ತಮ್ಮ ಧರ್ಮದವನು, ತಮ್ಮ ಜಾತಿಯವನು ಎಂದು ಅಪಾತ್ರರನ್ನು ಆಯ್ಕೆ ಮಾಡುವವರು ಎಲ್ಲರೂ ಒಮ್ಮೆ ಈ ಕುರಿತಾಗಿ ಪ್ರಭುದ್ಧರಾಗಿ ಆಲೋಚಿಸಿ ಸರ್ಕಾರವನ್ನು ‍ಚುನಾಯಿಸುವ ಪರಿಸ್ಥಿತಿ ಈಗ ಬಂದಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ.

ಆಂತರಿಕ ಹಿತಶತ್ರುಗಳು

img1

ಮೊನ್ನೆ ಪಂಜಾಬಿನಲ್ಲಿ ವಿವಿಧ ಯೋಜನೆಗಳನ್ನು ಉಧ್ಘಾಟಿಸುವ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ನಿಗಧಿಯಂತೆ ಹೆಲಿಕ್ಯಾಪ್ಟರಿನಲ್ಲಿ ಪ್ರಯಾಣಿಸಲು ನಿರ್ಧಾರವಾಗಿದ್ದರೂ, ಹವಾಮಾನದ ವೈಪರೀತ್ಯದಿಂದಾಗಿ ಕೂಡಲೇ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ನಿರ್ಧರಿಸಿ, ಆದರ ಸಂಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿ ಅವರ ರಕ್ಷಣೆಯ ಜವಾಬ್ಛಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿರುತ್ತದೆ. ನಂತರ ವಿವಿಧ ಕಾರಣಗಳಿಂದಾಗಿ ನಮ್ಮ ಪ್ರಧಾನ ಮಂತ್ರಿಗಳನ್ನು ರಸ್ತೆಯ ಮಾರ್ಗದ ಮಧ್ಯದಲ್ಲೇ ಸುಮಾರು 15-20 ನಿಮಿಷಗಳ ಕಾಲ ಮೇಲ್ಸೇತುವೆ ಮೇಲೆ ತಡೆದು ನಿಲ್ಲಿಸುವ ಮೂಲಕ ಈ ದೇಶದಲ್ಲಿ ಹಿಂದೆಂದೂ ಕಾಣದ ವಿಛಿದ್ರಕಾರಿ ಘಟನೆಗೆ ಸಾಕ್ಷಿಯಾಗುತ್ತದೆ.

img2

ಇದು ಅಚಾನಕ್ಕಾಗಿ ನಡೆದ ದುರ್ಘಟನೆ ಎಂದು ಪಂಜಾಬ್ ಸರ್ಕಾರ ವಾದಿಸಿದರೆ, ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಕೇಂದ್ರ ಸರ್ಕಾರ ವಾದಿಸುತ್ತದೆ. ಲಜ್ಜೆಗೆಟ್ಟ ಕಾಂಗ್ರೇಸ್ ನಾಯಕರು ಈ ದುರ್ಘಟನೆ ನಡೆದ ಕೇವಲ 10 ನಿಮಿಷಗಳಲ್ಲಿಯೇ ದೇಶಾದ್ಯಂತ ಸಂಭ್ರಮಿಸಲು ಆರಂಭಿಸಿದ್ದಲ್ಲದೇ, How is the Josh ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಧಾನಮಂತ್ರಿಗಳನ್ನೇ ಅಣಕಿಸುವ ಪೋಸ್ಟರ್ಗಳನ್ನು ಹರಿದುಬಿಡುವ ದುಸ್ಸಾಹಸಕ್ಕೂ ಕೈ ಹಾಕಿರುವುದು ನಿಜಕ್ಕೂ ದುರ್ದೈವವೇ ಸರಿ.

ಈ ಕುರಿತಾಗಿ ಕಾಂಗ್ರೇಸ್ ಮತ್ತು ಬಿಜೆಪಿ ನಾಯಕರುಗಳಲ್ಲದೇ ಅಯಾಯಾ ಪಕ್ಷದ ಸಮರ್ಥಕರು ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಸಮರ್ಥನೆ ಮಾಡಿಕೊಂಡ ಲೇಖನಗಳನ್ನು ಈಗಾಗಲೇ ಓದಿದ್ದೇವೆ. ಆದರೆ ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ ಈ ರೀತಿಯ ರಾಜಕೀಯ ಪಕ್ಷಗಳ ತೆವಲುಗಳಿಂದಾಗಿ, ಪ್ರಪಂಚದ ಮುಂದೆ ನಮ್ಮ ದೇಶದ ಮಾನವನ್ನು ನಾವೇ ಹರಾಜಿಗೆ ಹಾಕುತ್ತಿರುವುದಲ್ಲದೇ ತಮ್ಮ ದೇಶದ ಪ್ರಧಾನಿಗಳಿಗೇ ರಕ್ಷಣೆ ಕೊಡಲಾಗದವರ ದೇಶದ ರಕ್ಷಣಾ ವ್ಯವಸ್ಥೆ ಇನ್ನು ಹೇಗೆ ಇರಬಹುದು ಎಂದು ನಮ್ಮ ಆಂತರಿಕ ರಕ್ಷಣೆಯ ಬಗ್ಗೆ ಬೆತ್ತಲೆ ಗೊಳಿಸುತ್ತಿದ್ದೇವೆ ಎಂಬುದರ ಅರಿವಿಲ್ಲದಿರುವುದು ನಿಜಕ್ಕೂ ಗಾಭರಿಯನ್ನುಂಟು ಮಾಡುತ್ತಿದೆ.

indira_ghandhi

ಮೋದಿಯವರನ್ನು ಸೈದ್ಧಾಂತಿಕವಾಗಿಯೇ ಆಗಲಿ ಇಲ್ಲವೇ ಪ್ರಜಾತಾಂತ್ರಿಕವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ವಿರೋಧ ಪಕ್ಷಗಳು ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವಹಾಗೆ ಮೋದಿಯವರನ್ನು ಶತಾಯ ಗತಾಯ ಸೋಲಿಸಲೇ ಬೇಕು ಎಂದು ದೇಶ ವಿರೋಧಿಗಳ ಕೈ ಜೋಡಿಸುತ್ತಿರುವುದು ದೇಶದ ಭಧ್ರತೆ ನಿಜಕ್ಕೂ ಆಘಾತಕಾರಿಯಾಗಿದೆ.
80ರ ದಶಕದಲ್ಲಿ ಶತ್ರುಗಳನ್ನು ಮಣಿಸುವ ಸಲುವಾಗಿ ಬಿಂದ್ರನ್ ವಾಲೆ ಎಂಬ ಖಲಿಸ್ಥಾನಿಯನ್ನು ಪಂಜಾಬಿನಲ್ಲಿ ಪರೋಕ್ಷವಾಗಿ ಬೆಳೆಸಿದ ಕಾಂಗ್ರೇಸ್ ಕಡೆಗೆ ಅದೇ ಖಲೀಸ್ಥಾನಿ ಬಿಂದ್ರನ್ ವಾಲೆ ಅಮೃತಸರದ ಸಿಖ್ಖರ ದೇವಾಲಯವನ್ನೇ ಶಸ್ತ್ರಾಸ್ತ್ರಗಳ ಅಡುಗುತಾಣವನ್ನಾಗಿಸಿ ದೇಶಕ್ಕೆ ತಲೆ ನೋವಾದಾಗ ಅವನನ್ನು ಮಣಿಸಲು ಆಪರೇಷನ್ ಬ್ಲೂಸ್ಟಾರ್ ಕೈಗೆತ್ತಿಕೊಂಡ ಪರಿಣಾಮವಾಗಿಯೇ ಇಂದಿರಾಗಾಂಧಿಯವರನ್ನು ಕಳೆದುಕೊಂಡ ಅನುಭವವಿದ್ದರೂ ರೈತರಂತೆ ಛದ್ಮ ವೇಷ ಧರಿಸಿರುವ ಮತ್ತದೇ ಖಲಿಸ್ಥಾನಿಗಳೊಂದಿಗೆ ಕೈ ಜೋಡಿಸಿ ದೆಹಲಿಯಲ್ಲಿ ಹತ್ತಾರು ತಿಂಗಳುಗಳ ಕಾಲ ನಿರಂತರವಾದ ಚಳುವಳಿ ನಡೆಸಿದ್ದಲ್ಲದೇ ಈಗ ಪ್ರಧಾನ ಮಂತ್ರಿಯವರನ್ನು ನಡು ರಸ್ತೆಯಲ್ಲಿ ತಡೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

WhatsApp Image 2022-01-08 at 11.49.27 PM

ಪಂಜಾಬ್ ಸರ್ಕಾರವೇ ರೈತರ ವೇಷದಲ್ಲಿ ಖಲಿಸ್ತಾನಿಗಳನ್ನು ಪ್ರಧಾನ ಮಂತ್ರಿಗಳು ಸಂಚರಿಸುತ್ತಿದ್ದ ರಸ್ತೆ ಕರೆತಂದು ಪ್ರಧಾನಿಗಳನ್ನು ಘೇರಾವ್ ಮಾಡಿ, SPG ಪಡೆಗಳು ಸಂಚಾರ ಕ್ಕೆ ಅಡ್ಡಿಮಾಡಿದ ರೈತರ ಮೇಲೆ ಅಕಸ್ಮಾತ್ ಫೈರಿಂಗ್ ಮಾಡಿ ಕೆಲ ರೈತರು ಬಲಿಯಾದಲ್ಲಿ, ಪ್ರತಿಭಟನಾ ನಿರತ ರೈತರ ಮೇಲೆ ಪ್ರಧಾನಿಗಳು ಗೋಲಿಬಾರ್ ನಡೆಸಿ ಅಮಾಯಕರ ಹತ್ಯೆ ನಡೆಸಿದರು ಎಂದು ಬಿಂಬಿಸಿ ದೇಶದ್ಯಂತ ಪ್ರತಿಭಟನೆ ಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರವೂ ಅಡಗಿತ್ತು ಎನ್ನುತ್ತವೆ ಬಲ್ಲ ಮೂಲಗಳು. ಆದರೆ ಇಷ್ಟೆಲ್ಲಾ ಅವಘಡಗಳ ನಡುವೆಯೂ ತಾಳ್ಮೆಯನ್ನು ಕಳೆದು ಕೊಳ್ಳದೇ ಸಹನಾಮೂರ್ತಿಯಾಗಿ ಕುಳಿತಿದ್ದ ಮೋದಿಯವರು ಅಲ್ಲಿಂದ ಸದ್ದಿಲ್ಲದೇ ಹಿಂದಿರುಗುವ ಮೂಲಕ ವಿರೋಧಿಗಳ ತಂತ್ರವನ್ನು ಸಮರ್ಥವಾಗಿ ವಿಫಲ ಗೊಳಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಕೇಂದ್ರ ಮಂತ್ರಿಗಳ ಕಾರಿಗೆ ರೈತರ ಮೂಲಕ ಪ್ರತಿಭಟನೆ ಅಡ್ಡಿ ಪಡಿಸಿದ್ದಲ್ಲದೇ ಅವರ ವಾಹನದ ಮೇಲೆ ಕಲ್ಲು ಎಸೆದು ಪ್ರಚೋದನೆ ನೀಡಿ ರೈತರ ಮೇಲೆ ವಾಹನ ಹರಿಯುವಂತೆ ಮಾಡಿ ನಾಲ್ವರು ಅಮಾಯಕ ರೈತರು ಬಲಿಯಾಗಿದ್ದಲ್ಲದೇ ರೊಚ್ಚಿಗೆದ್ದ ಪ್ರತಿಭಟನಕಾರರು ಸಚಿವರ ಕಡೆಯ ನಾಲ್ವರನ್ನು ಬಡಿದು ಕೊಂದಿದ್ದ ಘಟನೆಯನ್ನು ಮರುಕಳಿಸಲು ಹೋಗಿ ವಿರೋಧಿಗಳು ಅಂಡು ಸುಟ್ಟ ಬೆಕ್ಕಿನಂತಾಗಿರುವುದಂತೂ ಸತ್ಯವಾಗಿದೆ.

ಈಗಾಗಲೇ ಹಲವಾರು ಬಾರಿ ಹೇಳಿರುವಂತೆ ಶತ್ರುಗಳು ಅಥವಾ ಭಯೋತ್ಪಾದಕರು ಹೊರ ದೇಶದವರಾಗಿದ್ದರೆ ಖಂಡಿತವಾಗಿಯೂ ಸುಲಭವಾಗಿ ಹಣಿಯಬಹುದಾಗಿದೆ ಆದರೇ ಈ ಆಂತರಿಕ ಹಿತಶತ್ರುಗಳನ್ನು ಮಣಿಸುವುದು ದುಸ್ಸಾಹಸವೇ ಸರಿ. ಅದರಲ್ಲೂ ತಮ್ಮ ಸೈದ್ಧಾಂತಿಕ ವಿರೋಧಕ್ಕಾಗಿ ರಾಜ್ಯಸರ್ಕಾರವೇ ಪರೋಕ್ಶವಾಗಿ ದೇಶದ ಪ್ರಧಾನಿಗಳ ಭದ್ರತೆಯೊಂದಿಗೆ ಚಲ್ಲಾಟವಾಡುವ ಮೂಲಕ ದೇಶದಲ್ಲಿ ಅಭದ್ರತೆಯನ್ನು ಮೂಡಿಸಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

rajiv

ಮೋದಿಯವರಿಗೆ ಈ ರೀತಿಯಾಗಿ ತೊಂದರೆ ಕೊಟ್ಟಲ್ಲಿ ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆವರ ಮೇಲೆ ಹಲ್ಲೆ ಅಥವಾ ಹತ್ಯೆ ಮಾಡಿದಲ್ಲಿ ಅದು ವಿರೋಧ ಪಕ್ಷದವರಿಗೆ ಉಪಯೋಗಕ್ಕಿಂತಲೂ ಉರುಳಾಗುವ ಸಂಭವವೇ ಹೆಚ್ಚು ಎಂದು ಈಗಾಗಲೇ ಭಾರತದ ಇತಿಹಾಸದಲ್ಲಿ ಕಂಡಾಗಿದೆ. ಇಂದಿರಾ ಎಂದರೆ ಇಂಡಿಯಾ, ಇಂದಿರಾ ಇಲ್ಲದಿದ್ದರೇ ದೇಶವೇ ಇಲ್ಲಾ ಎನ್ನುವಂತೆ ಭ್ರಮೆಯನ್ನು ಹುಟ್ಟಿಸಿದ್ದ ಕಾಲವೊಂದಿತ್ತು. ಆದರೆ ಅಂತಹ ನಾಯಕಿಯೇ ದೂರದೃಷ್ಟಿಯ ಕೊರತೆಯಿಂದಾಗಿ, ತನ್ನದೇ ಅಂಗರಕ್ಷಕರ ಕೈಯ್ಯಲ್ಲಿ ಭರ್ಭರವಾಗಿ ಹತ್ಯೆಯಾದ ನಂತರ ದಿನಗಳಲ್ಲಿ ಕಾಂಗ್ರೇಸ್ 400ಕ್ಕೂ ಹೆಚ್ಚಿನ ಸ್ಥಾನಗಳಿಸಿತ್ತು ಅದೇ ರೀತಿ ಚುನಾವಣೆಯ ಪ್ರಚಾರದ ಸಮಯದಲ್ಲಿಯೇ ಎಲ್.ಟಿ.ಟಿ.ಇ ಆತ್ಮಹತ್ಯಾದಳದಿಂದ ಅತ್ಯಂತ ದಯಾನೀಯವಾಗಿ ದೇಹವೂ ಸಿಗದಂತೆ ಛಿದ್ರ ಛಿದ್ರವಾಗಿ ರಾಜೀವ್ ಗಾಂಧಿಯವರು ಹತ್ಯೆಯಾದಾಗಲೂ ಭಾವುಕತೆಯಿಂದ ಜನರು ಕಾಂಗ್ರೇಸ್ಸನ್ನೇ ಅಧಿಕಾರಕ್ಕೆ ತಂದಿದ್ದರು ಎಂಬುದನ್ನು ಮನಗಾಣ ಬೇಕು.img4

ಸದ್ಯದ ಪರಿಸ್ಥಿತಿಯಲ್ಲಿ ಮೋದಿಯವರು ಕೇವಲ ಭಾರತದ ಪ್ರಧಾನಿಗಳಾಗಿಯಷ್ಟೇ ಅಗಿರದೇ ವಿಶ್ವ ನಾಯಕರಾಗಿರುವಾಗ ಅವರನ್ನು ಈ ರೀತಿಯಾಗಿ ಅಪಮಾರ್ಗದಲ್ಲಿ ಹಣಿಯಲು ಪ್ರಯತ್ನಿಸಿದರೆ ಕೆಲ ದಿನಗಳ ವರೆಗೆ ದೇಶದಲ್ಲಿ ಆಂತರಿಕ ಅಭದ್ರತೆ ಕಾಡ ಬಹುದಾದರೂ, ಅದರಿಂದ ವಿರೋಧ ಪಕ್ಷಕ್ಕೆ ಯಾವುದೇ ಪ್ರಯೋಜನವಾಗದೇ, ಜನರು ಮತ್ತೇ ಮೋದಿಯವವರ ಜಾಗದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನನ್ನು ಅಧಿಕಾರಕ್ಕೆ ತಂದೇ ತರುತ್ತಾರೆ ಎಂಬ ಸೂಕ್ಷ್ಮ ಪ್ರಜ್ಞೆಯೂ ಇಲ್ಲದಿರುವುದು ಅಶ್ಚರ್ಯವನ್ನು ಉಂಟು ಮಾಡುತ್ತದೆ

ಗುಂಡಾಗಿರಿ ಮಾಡಿ ಜನರನ್ನು ಹೆದರಿಸಿ ಬೆದರಿಸಿ ಮತ ಹಾಕಿಸಿಕೊಳ್ಳುವ ಇಲ್ಲವೇ ಹೆದರಿಸಿ ಬೆದರಿಸಿ ಮತ ಹಾಕಲು ಬರದಂತೆ ಮಾಡುವ ಮೂಲಕ, ಇಲ್ಲವೇ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರವನ್ನು ಮಾಡುವ ಮೂಅಕ ಅಥಿಕಾರಕ್ಕೆ ಬರಬಹುದು ಎಂದು ವಿರೋಧ ಪಕ್ಷದವರು ಭಾವಿಸಿದಲ್ಲಿ ಅದು ಕೇವಲ ಅವರ ಭ್ರಮೆ ಎಂದರೂ ತಪ್ಪಾಗದು. ಈಗ ತಂತ್ರಜ್ಞಾನ ಬಹಳ ಮುಂದುವರಿದಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಇವರು ಮಾಡುವ ತಪ್ಪು ಒಪ್ಪುಗಳು ಕೆಲವೇ ಕ್ಷಣಗಳಲ್ಲಿ ದೇಶದ ಮೂಲೆ ಮೂಲೆಗೂ ತಲುಪಿ ಜನರಿಗೆ ಯಾರು ತಪ್ಪು ಮಾಡುತ್ತಿದ್ದಾರೆ, ಯಾರು ಸರಿ ಮಾಡುತ್ತಿದ್ದಾರೆ ಎಂಬುದು ತಲುಪುತ್ತಿರುವ ಕಾರಣ, ಈ ರೀತಿಯ ಕ್ಷುಲ್ಲಕ ಹೋರಾಟಗಳನ್ನು ಬದಿಗೊತ್ತಿ ರಚನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಜನರ ಮನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸಲಿ. ಅಧಿಕಾರ ಎಂಬುದು ಎಂದಿಗೂ ಶಾಶ್ವತವಲ್ಲ ಎಂಬುದು 60 ವರ್ಷಗಳ ಕಾಲ ಇಡೇ ದೇಶವನ್ನೇ ಆಳಿದ ಕಾಂಗ್ರೇಸ್ಸು ಹೇಳ ಹೆಸರಿಲ್ಲದಂತಾಗಿದ್ದಲ್ಲಿ, 80ರ ದಶಕದಲ್ಲಿ ಕೇವಲ 2 ಸಂಸದರಿದ್ದ ಬಿಜೆಪಿ ಸಮರ್ಥವಾದ ವಿರೋಧಪಕ್ಷವಾಗಿ ಅಂದಿನ ಆಡಳಿತ ಪಕ್ಷದವನ್ನು ಸಮರ್ಥವಾಗಿ, ರಚನಾತ್ಮಕವಾಗಿ ಸಂವಿಧಾನಾತ್ಮಕವಾಗಿ ಎದುರಿಸಿದ ಪರಿಣಮವಾಗಿಯೇ ಇಂದು ಸತತವಾಗಿ ಎರಡು ಬಾರಿ ಅಧಿಕಾರಕ್ಕೇ ಎರಿರುವುದೇ ಜ್ವಲಂತ ಉದಾಹರಣೆಯಾಗಿದೆ.

ಜನರು ಮೋದಿಯವರಿಗೇನೂ ಪ್ರಧಾನ ಮಂತ್ರಿಯ ಪಟ್ಟವನ್ನು ಚಿನ್ನದ ತಟ್ಟೆಯಲ್ಲಿಟ್ಟು ಸುಖಾ ಸುಮ್ಮನೇ ಕೊಡಲಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಸುಮಾರು ವರ್ಷಗಳ ಕಾಲ ಸಂಘಟನೆಯಲ್ಲಿ ತೊಡಗಿಸಿಕೊಂಡವರು, ನಂತರ 3 ಬಾರಿಗೆ ಗುಜರಾತಿನ ಮುಖ್ಯಮಂತ್ರಿಗಳಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿ, ಅವೆಲ್ಲವನ್ನೂ ಲೀಲಾಜಾಲವಾಗಿ ಎದುರಿಸಿ, ಗುಜರಾತನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ದದ್ದನ್ನು ನೋಡಿಯೇ ಜನ ಅಭೂತಪೂರ್ವವಾಗಿ ಬಹುಮತದಿಂದ ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಒಂದು ಗೆರೆಯನ್ನು ಮುಟ್ಟದೇ ಸಣ್ಣದಾಗಿ ಮಾಡಬೇಕೆಂದರೆ ಅದರ ಪಕ್ಕದಲ್ಲಿ ಒಂದು ದೊಡ್ಡ ಗೆರೆಯನ್ನು ಎಳೆಯಬೇಕು ಎನ್ನುವಂತೆ ಮೋದಿಯವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕಾದಲ್ಲಿ ಅವರ ಸಾಧನೆಗಿಂತಲೂ ಅತ್ಯುತ್ತಮವಾದದ್ದನ್ನು ಅವರ ವಿರೋಧಿಗಳು ಮಾಡಿ ತೋರಿಸಿದಲ್ಲಿ ಮಾತ್ರವೇ ಜನರ ಹೃದಯ ಗೆಲ್ಲಬಹುದೇ ಹೊರತು ಈ ರೀತಿಯ ಹಿಂಬಾಗಿಲಿನ ಪ್ರಯತ್ನ ಎಂದೂ ಕೈಗೂಡದು.

ದೇಶವಾಸಿಗಳಿಗೆ ಈ ರೀತಿಯಾದ ಅಸಹ್ಯಕರವಾದ ಅಹಿತಕರವಾದ ಘಟನೆಗಳು ರಾಜಕೀಯ ವ್ಯವಸ್ಥೆಯ ಬಗ್ಗೆ ಆಸಹ್ಯವನ್ನೇ ಮೂಡಿಸಿ ಮತದಾನದಿಂದಲೂ ದೂರಾಗುವ ಸಂಭವವೇ ಹೆಚ್ಚಾಗಿದೆ. ಇದನ್ನೇ ಮೊನ್ನೆ ಪಬ್ಲಿಕ್ ಟಿವಿಯ ರಂಗನಾಥ್ ಅವರು ಭಾರತದಲ್ಲಿ ನೆಮ್ಮದಿಯಿಂದ ಬದುಕಬೇಕು ಎಂದರೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಬೇಕು. ರಾಜಕೀಯದಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಬದುಕಬೇಕು. ಆಗ ಮಾತ್ರ ನೆಮ್ಮದಿಯಾಗಿರಲು ಸಾಧ್ಯ ಎಂದಿರುವುದು ನಿಜಕ್ಕೂ ಮಾರ್ಮಿಕವಾಗಿದೆ. ಆದರೆ ನಮ್ಮ ದೇಶ ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳು ಹಾಗಾಗಿ ಅವರುಗಳೇ ಮತದಾನದಿಂದ ವಿಚಲಿತವಾದಲ್ಲಿ ಕ್ಷುದ್ರ ಶಕ್ತಿಗಳು ದೇಶದ ಅಧಿಕಾರವನ್ನು ಹಿಡಿದು ದೇಶವನ್ನು ಅಧೋಗತಿಗೆ ತರುವ ಸಾಧ್ಯತೆ ಇರುವ ಕಾರಣ, ನಾವೆಲ್ಲರೂ ಎಚ್ಚೆತ್ತು ದೇಶದ ಆಂತರಿಕ ಹಿತಶತ್ರುಗಳನ್ನು ಸಾಂವಿಧಾನಿಕವಾಗಿಯೇ ಬಗ್ಗು ಬಡಿಯುವ ಸಮಯ ಬಂದಿದೆ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

ಅತ್ತ ದರಿ ಇತ್ತ ಪುಲಿ

ಅದು 2014 ಲೋಕಸಭಾ ಚುನಾವಣಾ ಸಮಯ. ಅದಾಗಲೇ ಎರಡು ಆಡಳಿತಾವಧಿಯಲ್ಲಿ ಹಗರಣದ ಮೇಲೆ ಹಗರಣಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಇಡೀ ದೇಶವಾಸಿಗಳ ಆಕ್ರೋಶವಿದ್ದಾಗ ಶುದ್ಧ ಹಸ್ತನಾಗಿ, ದಕ್ಷ ಆಡಳಿತಗಾರನಾಗಿ ಗುಜರಾತನ್ನು ಮುನ್ನೆಡೆಸಿದ್ದ ನರೇಂದ ಮೋದಿಯವರು ಇಡೀ ದೇಶಕ್ಕೆ ಆಶಾವಾದಿಯಾಗಿ ಕಂಡ ಪರಿಣಾಮವಾಗಿ ಅದ್ಭುತವಾದ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ.

ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಸಂಸತ್ತನ್ನು ಪ್ರವೇಶಿಸಿ ನಾ ಮೇ ಖಾವುಂಗಾ ಔರ್ ಖಾನೇ ದೂಂಗಾ! ಎಂಬ ಮಾತನ್ನು ಹೇಳಿದ್ದ ಪ್ರಧಾನಮಂತ್ರಿಗಳು ಇದುವರೆವಿಗೂ ಅದನ್ನೇ ಅಕ್ಷರಶಃ ಪಾಲಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಮೋದಿಯವರು ಆಡಳಿತಕ್ಕೆ ಬಂದಾಗ ಜನರ ನಿರೀಕ್ಷೆಗಳು ಬೆಟ್ಟದಷ್ಟಿದ್ದವು. ಆಂತರಿಕವಾಗಿ ಮತ್ತು ಬಾಹ್ಯವಾಗಿ ಬಹಳಷ್ಟು ಸಮಸ್ಯೆಗಳು ಇದ್ದವು. ಮೋದಿಯವರು ಅವುಗಳನ್ನು ಒಂದೊಂದಾಗಿ ನಿಭಾಯಿಸುತ್ತಲೇ, ದೂರದೃಷ್ಟಿಯಿಂದಾಗಿ, ಪ್ರತಿಯೊಂದು ಸರ್ಕಾರೀ ಧಾಖಲೆ ಮತ್ತು ಸೇವೆಗಳಿಗೆ ಆಧಾರ್ ಕಾರ್ಡ್ ಜೋಡಣೆ, ನೋಟ್ ಅಮಾನಿಕರಣ, ಜಿ.ಎಸ್.ಟಿ. ಎಲ್ಲವನ್ನೂ ಒಂದೊಂದಾಗಿ ಜಾರಿಗೆ ತಂದಾಗ ಬಹಳಷ್ಟು ಜನರಿಗೆ ತತ್ ಕ್ಷಣದಲ್ಲಿ ತೊಂದರೆ ಎನಿಸಿದರೂ, ದೇಶದ ಹಿತದೃಷ್ಟಿಯಿಂದಾಗಿ ಮೋದಿಯವರು ತೆಗೆದುಕೊಂಡ ನಿರ್ಧಾರಗಳನ್ನು ಸಮರ್ಥನೆ ಮಾಡಿದರು. ಇದರ ಮಧ್ಯೆ, ಪುಲ್ವಾಮಾ ಧಾಳಿಯಾದಾಗ, ನಮ್ಮ ಸೈನ್ಯವನ್ನು ಶತ್ರುಗಳ ನೆಲೆಯೊಳಗೆ ನುಗ್ಗಿಸಿ ತಕ್ಕ ಪಾಠ ಕಲಿಸಿದ ಮೇಲಂತೂ ನಮ್ಮ ಸರ್ಕಾರದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿದ ಕಾರಣ ಎಲ್ಲಾ ವಿರೋದಾಭಾಸಗಳನ್ನು ಬದಿಗಿಟ್ಟು ಎರಡನೇ ಬಾರಿ ಮೋದಿಯವನ್ನು ಮತ್ತಷ್ಟೂ ದೊಡ್ಡದಾದ ಬೆಂಬಲದೊಂದಿಗೆ ಅದರಲ್ಲೂ ಕರ್ನಾಟಕದಲ್ಲಿ 25+1 ಬಿಜೆಪಿ ಸಂಸಾದರನ್ನು ಆಯ್ಕೆ ಮಾಡುವ ಮೂಲಕ ಅಧಿಕಾರಕ್ಕೆ ತಂದರು.

ಮೋದಿಯವರು ಎರಡನೇ ಬಾರೀ ಅಧಿಕಾರಕ್ಕೆ ಬಂದ ಕೂಡಲೇ ತ್ರಿವಳಿ ತಲಾಖ್, article-370 & 35A ದಿಟ್ಟತನದಿಂದ ತೆಗೆದು ಹಾಕುವ ಮೂಲಕ ಕಾಶ್ಮೀರದ ಜನರಿಗೆ ಸ್ವಾಯುತ್ತತೆ ದೊರೆಯುವಂತೆ ಮಾಡಿದ್ದಲ್ಲದೇ, CAA & NRC ಜಾರಿಗೆ ತರುವ ಮೂಲಕ ನುಸುಳುಕೋರರನ್ನು ಹೊರದಬ್ಬಲು ಮುಂದಾದರು. ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ರಾಮ ಜನ್ಮಭೂಮಿಯ ವಿಷಯವನ್ನು ನಾಜೂಕಾಗಿ ನ್ಯಾಯಾಲಯದ ಮೂಲಕವೇ ಬಗೆಹರಿಸಿ, ರಾಮ ಮಂದಿರದ ಶಿಲಾನ್ಯಾಸಕ್ಕೆ ಪ್ರಧಾನಿಗಳು ಪೂಜೆ ಮಾಡಿದಾಗಲಂತೂ, ಅಬ್ಭಾ, ಎರಡನೇ ಬಾರಿ ಮೋದಿಯವರನ್ನು ಆಯ್ಕೆಮಾಡಿದ್ದು ಸಾರ್ಥಕವಾಯಿತು ಎಂದು ತಮ್ಮ ಬೆನ್ನನ್ನೇ ತಟ್ಟಿಕೊಂಡ ಭಾರತಿಯರ ಸಂಖ್ಯೆ ಕಡಿಮೆಯೇನಲ್ಲ.

ಇಷೃರ ಮಧ್ಯೆ ಕರ್ನಾಟಕದಲ್ಲೊಂದು ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಿ ಅಪರೇಷನ್ ಕಮಲದ ಮೂಲಕ ಕಾಂಗ್ರೇಸ್ ಮತ್ತು ಪಕ್ಷೇತರ ಶಾಸಕರ ರಾಜೀನಾಮೆ ಕೊಡಿಸಿ ಕರ್ನಾಟಕದಲ್ಲೂ ಮತ್ತೊಮ್ಮೆ ಯಡೆಯೂರಪ್ಪಾ ಅವರ ಮುಖಾಂತರ ಕಮಲವನ್ನು ಅರಳಿಸುವ ಮುಖಾಂತರ ಕೇಂದ್ರ ಮತ್ತು ರಾಜ್ಯಸರ್ಕಾರ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದಲ್ಲಿ ಕೇಂದ್ರದಿಂದ ಆರ್ಥಿಕ ನೆರವಿನ ಹೊಳೆಯೇ ಹರಿಯುವುದಲ್ಲದೇ ಎರಡೂ ಸರ್ಕಾರದ ನಡುವಿನ ಬಾಂಧ್ಯವ್ಯ ಸುಂದರವಾಗಿರುತ್ತದೆ ಎಂಬ ಭ್ರಮೆಯನ್ನು ಹರಿಸಿದ್ದಂತೂ ಸುಳ್ಳಲ್ಲ.

ನಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಕೊರೋನಾ ಮಹಾಮಾರಿ ಇಡೀ ಪ್ರಪಂಚಕ್ಕೆ ವಕ್ಕರಿಸಿ ಎಲ್ಲವೂ ಲಾಕ್ಡೌನ್ ಆದ ನಂತರ ಅದೇಕೋ ಕೇಂದ್ರ ಮತ್ತು ರಾಜ್ಯಸರ್ಕಾರ ಎರಡಕ್ಕೂ ಗರ ಬಡಿದಂತಾಗಿ, ಹೈವೇನಲ್ಲಿ ವೇಗವಾಗಿ ಹೋಗುತ್ತಿದ್ದ ವಾಹನಕ್ಕೆ ಏಕಾಏಕಿ ಬ್ರೇಕ್ ಹಾಕಿದಾಗ ಹೇಗೆ ವಾಹನ ಅಲ್ಲೋಲ ಕಲ್ಲೋಲವಾಗಿ ದಿಕ್ಕಾಪಾಲಾಗುತ್ತದೆಯೋ ಅದೇ ರೀತಿ ಈ ಸರ್ಕಾರದ್ದಾಯಿತು ಎಂದರೂ ತಪ್ಪಾಗದು.

ಹೌದು ನಿಜ ಕೋವಿಡ್ ಸಮಯದಲ್ಲಿ ಸರ್ಕಾರ ತೆಗೆದುಕೊಂಡ ನಿಯಮಗಳು ಮತ್ತು ಲಸಿಕಾ ಅಭಿಯಾನಗಳು ಜನಪರವಾಗಿದ್ದರೂ ಅದಕ್ಕೆ ಜನಸಾಮಾನ್ಯರು ತೆರಬೇಕಾದ ಬೆಲೆಯಂತೂ ತಾಳಲಾಗದಾಗಿದೆ. ಜನಾವಶ್ಯಕವಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಪದೇ ಪದೇ ಏರಿಸುತ್ತಲೇ ಹೋಗಿರುವುದರಿಂದ ಬೇರೆಲ್ಲಾ ಬೆಲೆಗಳು ಗಗನಕ್ಕೇರಿ, ಕೋವಿಡ್ ನಿಂದ ಅದಾಗಲೇ ಗಾಯಗೊಂಡಿದ್ದ ಮಧ್ಯಮವರ್ಗದ ಜನರ ಮೇಲೆ ಬರೆ ಎಳೆದಂತಾಗಿದೆ. ಇದೇ ಸಮಯದಲ್ಲಿ ಸರ್ಕಾರ ಘೋಷಿಸಿದ ಲಕ್ಷಾಂತರ ಕೋಟಿ ರೂಪಾಯಿಗಳ ಪರಿಹಾರ ಧನ ಯಾರಿಗೆ ತಲುಪಿತು ಎಂಬುದರ ಕುರಿತಾದ ಮಾಹಿತಿಯೇ ಇಲ್ಲ. ಹೀಗೆ ಕಣ್ಣಿಗ ಕಾಣದ ಪುಸ್ತಕಗಳಲ್ಲೇ ಸರಿಹೊಂದಿ ಹೋಗಬಹುದಾದ ಪರಿಹಾರಗಳನ್ನು ಘೋಷಿಸುವ ಬದಲು ಅದೇ ಧನವನ್ನು ಜನರಿಗೆ ಕಣ್ಣಿಗೆ ಕಾಣುವಂತೆ ದಿನ ನಿತ್ಯಉಪಯೋಗಿ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬಳಸಿದ್ದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತಲ್ಲವೇ?

ಪೆಟ್ರೋಲಿಯಂ ಬಿಡಿ, 80-120ರ ಆಸುಪಾಸಿನಲ್ಲಿದ್ದ ಅಡುಗೆ ಎಣ್ಣೆಯ ಬೆಲೆಯೂ 160-180ಕ್ಕೆ ಏರಿದ ಪರಿಣಾಮ ಜನರು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಂತೂ ಸುಳ್ಳಲ್ಲ. ವಿದೇಶದಿಂದ ಅಮದು ಮಾಡುವ ತಾಳೇ ಎಣ್ಣೆಯ ಬೆಲೆ ಹೆಚ್ಚಾದರೆ ದೀಪದ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೇ ಕಾಯಿ ಎಣ್ಣೆಯ ಬೆಲೆ ಹೆಚ್ಚೇಕೆ ಆಯಿತು? ಎಂಬುದನ್ನು ಅದನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ.

ಕೇಂದ್ರ ಸರ್ಕಾರದ ಪರ ಮಾತನಾಡುವ ದೇಶಭಕ್ತ ಮತ್ತು ವಿರುದ್ಧ ಮಾತನಾಡುವ ದೇಶದ್ರೋಹಿಗಳು ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿರುವ ಕಾರಣ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಯಾರೂ ಸಹಾ ಇದರ ಬಗ್ಗೆ ಮಾತನಾಡುವವರೇ ಇಲ್ಲ. ಇನ್ನು ಈ ಸರ್ಕಾರಕ್ಕೆ ಪ್ರಜೆಗಳು ಎಂದರೆ ಕೇಳಿ ಕೇಳಿದಾಗಲೂ ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬಂತಾಗಿದೆ.

ಇನ್ನು ಕರ್ನಾಟಕದ ರಾಜ್ಯ ಸರ್ಕಾರದ ಬಗ್ಗೆ ಹೇಳುವುದಕ್ಕಿಂತಲಲೂ ಸುಮ್ಮನಿರುವುದೇ ಲೇಸೇನೋ? ಕಾಂಗ್ರೇಸ್ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಆಡಳಿತಕ್ಕೆ ಬಂದಾಗಲಿಂದಲೂ ಸುಲಲಿತವಾಗಿ ಅಧಿಕಾರವನ್ನು ನಡಸಲು ಆಗಲೇ ಇಲ್ಲಾ. ಅದಕ್ಕೆ ಪ್ರಕೃತಿಯೂ ಬಿಡಲಿಲ್ಲ ಎನ್ನುವುದೂ ಸತ್ಯ. ಆರಂಭದಲ್ಲಿ ಬರ ನಂತರ ಪ್ರವಾಹ ಅದಾದ ನಂತರ ಮಂತ್ರಿಮಂಡಲ ರಚನೆ, ಉಪಚುನಾವಣೆಯಲ್ಲಿ ಕೈಪಾಳಯವನ್ನು ಬಿಟ್ಟು ಬಂದವರನ್ನು ಗೆಲ್ಲಿಸಿಕೊಳ್ಳುವುದು ಅದಾದ ನಂತರ ಮತ್ತೊಮ್ಮೆ ಮಂತ್ರಿಮಂಡಲದ ವಿಸ್ತರಣೆ. ಅತೃಪ್ತರ ಮೂಗಿಗೆ ಬೆಣ್ಣೆ ಸವರಿದಂತೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಶ ಪಟ್ಟ ಕೊಡುವುದರಲ್ಲಿ ಹೈರಾಣದ ಸರ್ಕಾರಕ್ಕೆ ಕೋವಿಡ್ ವಕ್ಕರಿಸಿದ ಮೇಲಂತೂ ರಾಜ್ಯ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಅನುಮಾನ ಕಾಡುವಂತೆ ಅದೃಷ್ಯವಾಗಿಹೋಯಿತು. ಎಲ್ಲವೂ ಪಟ್ಟಭಧ್ರ ಅಧಿಕಾರಿಗಳದ್ದೇ ಕಾರುಬಾರು. ಲಾಕ್ಡೌನ್ ಮಾಡುವುದು ನಂತರ ಅದಾವುದೋ ಸಿನಿಮಾ ನಟನ ಸಿನಿಮಾಕ್ಕೆ ಹೊಡೆತ ಬೀಳುತ್ತದೆ ಎಂದು ವಿನಾಯಿತಿ ಕೊಡುವುದು. ನೈಟ್ ಕರ್ಫೂ ಹೇರುವುದು ನಂತರ ಮತ್ತೊಬ್ಬರಿಗೆ ತೊಂದರೆ ಆಗುತ್ತದೆ ಎಂದು ಸಡಿಲಿಸುವುದು. ಲಾಕ್ದೌನ್ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ಮೀರಿ ಅಂಡೆಲೆದು ಕೋವಿಡ್ ಹರಡಿದ ಮತ್ತು ಆಶಾ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದು. ಯಾವುದೋ ಕ್ಷುಲ್ಲುಕ ಕಾರಣಕ್ಕೆ ಸಂಬಂಧವೇ ಇಲ್ಲದ ಶಾಸಕನ ಮನೆಯನ್ನು ಸುಟ್ಟು ಹಾಕಿದವರ ಸಂಪೂರ್ಣ ವಿವರಗಳು ಇದ್ದರೂ ಅವರನ್ನು ಬಂಧಿಸಲು ಮೀನಾ ಮೇಷ ಎಣಿಸುವ ಮೂಲಕ ಸರ್ಕಾರದ ಅಸ್ಥಿತ್ವವೇ ಇಲ್ಲದಂತಾಯಿತು.

ಇಷ್ಟರ ಮಧ್ಯೆ ಕಂಡ ಕಂಡವರೆಲ್ಲಾ ಮುಖ್ಯಮಂತ್ರಿ ಕುರ್ಚಿಗೆ ಕರ್ಛೀಘ್ ಹಾಕಿದರೇ ಕೆಲವರಂತೂ ಟವೆಲ್ ಹಾಕಿ ತಾವೇ ಭಾವಿ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿ ತೇಲಾಡಿ, ಕಡೆಗೆ ಜಾತೀ ಸಮೀಕರಣದಲ್ಲಿ ಅಂದರಕೀ ಮಂಚಿವಾಡು ಅನಂತರಾಮಯ್ಯ ಎನ್ನುವ ತೆಲುಗು ಗಾದೆಯಂತೆ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮಠಾಧೀಶರ ಲಾಬಿಗೆ ತನ್ನನ್ನೇ ತಾನು ಬಲಿಷ್ಟ ಎಂದು ಕರೆದುಕೊಳ್ಳುವ ಬಿಜೆಪಿ ಹೈಕಮಾಂಡ್ ಮಣಿದಿದ್ದು ಅಚ್ಚರಿ ಎನಿಸಿತು.

ಈ ಬಿಜೆಪಿ ನಾಯಕರುಗಳು ಅಧಿಕಾರಕ್ಕೆ ಬರುವ ಮನ್ನಾ ತಮ್ಮದು ಹಿಂದು ಪರ ಪಕ್ಷ ಎಂದು ಬಿಂಬಿಸಿಕೊಳ್ಳುವವವರು ಅಧಿಕಾರ ಸಿಕ್ಕ ಕೂಡಲೇ ನಿಜವಾದ ಜಾತ್ಯಾತೀತರಿಗಿಂತಲೂ ಅಧಿಕವಾದ ಜಾತ್ಯಾತೀತನವನ್ನು ತೋರುತ್ತಾ ತಮಗೆ ಮತ ನೀಡಿ ಅಧಿಕಾರಕ್ಕೆ ತಂದ ಹಿಂದೂಗಳ ಮೇಲೆಯೇ ದಬ್ಬಾಳಿಕೆ ನಡೆಸುವುದು ನಿಜಕ್ಕೂ ಅಚ್ಚರಿ ಮತ್ತು ಅಕ್ಷಮ್ಮ್ಯ ಅಪರಾಧವೇ ಸರಿ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ 9.12.2009 ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಈಗ ಪಾಲಿಸಲು ಮುಂದಾಗಿ ಏಕಾಏಕಿ ರಾತ್ರೋ ರಾತ್ರಿ ಹಿಂದೂಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳನ್ನು ಕೆಡವಲು ಮುಂದಾಗಿರುವುದು ನಿಜಕ್ಕೂ ಖಂಡನೀಯವಾಗಿದೆ. ಚೋಳರ ಕಾಲದ್ದು ಎಂಬ ನಂಬಿಕೆ ಇರುವ ಸುಮಾರು 800 ವರ್ಷಗಳ ಇತಿಹಾಸವಿದ್ದ ನಂಜನಗೂಡಿನ ಬಳಿಯ ದೇವಾಲಯವನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಿ ಹಾಕುವ ಮೂಲಕ ನಿಜಕ್ಕೂ ಹಿಂದೂಗಳ ಔದಾರ್ಯತೆಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದರು ತಪ್ಪಾಗಲಾರದು.

ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ, ಇತ್ತೀಚೆಗೆ ಅನಧಿಕೃತವಾಗಿ ನಿರ್ಮಾಣವಾಗಿರುವ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುವಂತಹ ದೇವಸ್ಥಾನಗಳನ್ನು ಕೆಡವಿ ಹಾಕಬಹುದು ಎಂಬ ನಿಯಮದ ಆಧಾರವಿದೆಯೇ ಹೊರತು, ಹಳೆಯ ದೇವಾಲಯಗಳನ್ನಲ್ಲ. ಹಾಗೆ ದೇವಾಲಯಗಳನ್ನು ಏಕಾ ಏಕಿ ಕೆಡುವಿ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಪ್ರತಿಯೊಂದು ದೇವಾಲಯದ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಿದೆಯೇ ಹೊರತು ಏಕಾ ಏಕಿ ರಾತ್ರೋ ರಾತ್ರಿ ಕೆಡವಲು ಯಾವುದೇ‌ ಹಕ್ಕಿಲ್ಲ.

ಈಗ ಕೆಡವಲು ನಿರ್ಧರಿಸಿರುವ ನೂರಾರು ದೇವಾಲಯಗಳು ನೆನ್ನೆ ಮೊನ್ನೆ ನಿರ್ಮಾಣವಾಗಿರದೇ, ಈ ರಸ್ತೆಗಳ ನಿರ್ಮಾಣವೇಕೇ? ಬದಲಿಗೆ ಭಾರತದ ಸಂವಿಧಾನ,ಕಾನೂನುಗಳು ರೂಪುಗೊಳ್ಳುವುದಕ್ಕೂ ಮೊದಲೇ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದದ್ದು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿ ಹೋಗಿ ಅವುಗಳನ್ನು ಅಕ್ರಮವೆಂದು ಘೋಷಿಸಿ ರಾತ್ರೋರಾತ್ರಿ ಒಡೆದು ಹಾಕುವುದಕ್ಕೇ ಇವರನ್ನು ಕಷ್ಟ ಪಟ್ಟು ಆಡಳಿತಕ್ಕೆ ತಂದಿದ್ದು?

ಹೀಗೆಯೇ ಸುಮ್ಮನಾಗಿ ಹೋದಲ್ಲಿ, ನದಿ ಪಾತ್ರಕ್ಕೆ ಸಮೀಪವಾಗಿದೆ ಎಂಬ ನೆಪವೊಡ್ಡಿ ನಾಳೆ ನಂಜನಗೂಡಿನ ನಂಜುಂಡೇಶ್ವರನ ದೇವಾಲಯವನ್ನೂ ಕೆಡವಿ ಹಾಕಿದರೂ ಅಚ್ಚರಿ ಪಡಬೇಕಿಲ್ಲ.

ಹಿಂದೂಸ್ಥಾನದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಹಿಂದುಗಳ ಶ್ರದ್ಧಾ ಭಕ್ತಿಗಳಿಗೆ ಬೆಲೆಯೇ ಇಲ್ಲದಂತಾಗಿ ಹೋಗಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಹಿಂದೂಗಳಿಗೆ ಒಂದು ಕಾನೂನು ಅನ್ಯ ಮತದವರಿಗೆ ಮತ್ತೊಂದು ಕಾನೂನು ಎಂಬುವಂತಾಗಿರುವುದು ವಿಪರ್ಯಾಸವಾಗಿದೆ.

ಅದೇ ಸುಪ್ರೀಂ ಕೋರ್ಟ್ ಹೊತ್ತಲ್ಲದ ಹೊತ್ತಿನಲ್ಲಿ ಕರ್ಕಶವಾಗಿ ಪ್ರತೀ ದಿನವೂ ಎತ್ತರದ ಧ್ವನಿವರ್ಧಕಗಳ ಮೂಲಕ ಕೂಗುವುದನ್ನೂ ನಿಷೇಧಿಸಲು ಆದೇಶನೀಡಿದೆ, ಬಲವಂತದ ಮತಾಂತರ ಮಾಡಬಾರದು ಎಂಬ ಆದೇಶವಿದೆ. ಲವ್ ಜಿಹಾದ್ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ. ಆದರೆ ಈ ಯಾವುದೇ ಆದೇಶಗಳಿಗೂ ಕವಡೆಯ ಕಾಸಿನ ಕಿಮ್ಮತ್ತೂ ಕೊಡದವರು ಈಗ ದೇವಾಲಯಗಳನ್ನು ಒಡೆಯುತ್ತಿರುವುದು ನಿಜಕ್ಕೂ ಅಮಾನವೀಯ ಕ್ರಿಯೆಯಾಗಿದೆ.

ದೇಶ ಮೊದಲು ಧರ್ಮ ಆನಂತರ ಹಾಗಾಗಿ ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಇದೇ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಜಾರಿಗೆ ತರುವುದಕ್ಕೆ ಹಿಂದೇಟು ಹಾಕುತ್ತಿರುವ ಈ ಸರ್ಕಾರಕ್ಕೆ ಪುರಾತನ ದೇವಾಲಯಗಳನ್ನು ಒಡೆಯಲು ಮುಂದಾಗಿರುವುದು ಎಷ್ಟು ಸರಿ?

ಹಿಂದೂಗಳು ಅತ್ಯಂತ ಶ್ರದ್ಧೆಯಿಂದ ಗೋಮಾತೆ ಎಂದು ಪೂಜಿಸುವ ಹಸುಗಳನ್ನು ಅಕ್ರಮವಾಗಿ ಕಳ್ಳತನ ಮಾಡಿ ಎಗ್ಗಿಲ್ಲದೇ ಅನಧಿಕೃತ ಕಸಾಯಿಖಾನೆಗಳಲ್ಲಿ ಕತ್ತರಿಸುವುದನ್ನು ನಿಯಂತ್ರಿಸಲಾಗದ ಈ ಸರ್ಕಾರ ದೇವಾಲಯಗಳಲ್ಲಿ ಭಕ್ತಿಯಿಂದ ಪೂಜಿಸುವ ಆನೆಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ದ್ರೋಹ ಮಾಡುವುದು ಎಷ್ಟು ಸರಿ?

ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿರುದ್ಧ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅದನ್ನು ತಡೆಯಲು ಅಲ್ಲಿನ ಸರ್ಕಾರ ದಿಟ್ಟ ಕ್ರಮ ತೆಗೆದು ಕೊಳ್ಳ ಬಹುದಾದರೇ, ನಮ್ಮ ರಾಜ್ಯ ಸರ್ಕಾರಕ್ಕೇಕೆ ದೇವಾಲಯಗಳನ್ನು ಕೆಡವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ನಿಜ ಹೇಳ ಬೇಕೆಂದರೆ ಸರ್ಕಾರಕ್ಕೆ ಅಬಕಾರಿ ಇಲಾಖೆಯನ್ನು ಬಿಟ್ಟರೆ ಅತ್ಯಂತ ಹೆಚ್ಚಿನ ಆದಾಯವನ್ನು ಬರುವುದು ನಮ್ಮ ಹಿಂದೂ ದೇವಾಲಯಗಳಿಂದಲೇ. ಅದೇ ಕಾರಣಕ್ಕಾಗಿಯೇ ರಾಜ್ಯದಲ್ಲಿ ಆರ್ಥಿಕವಾಗಿ ಸಧೃಢವಾಗಿರುವ ಬಹುತೇಕ ಖಾಸಗೀ ದೇವಾಲಯಗಳನ್ನು ಯಾವುದೋ ಕುಂಟು ನೆಪವೊಡ್ಡಿ ಒಂದೊಂದಾಗಿ ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಮುಖಾಂತರ ಅಲ್ಲಿನ ಆದಾಯವನ್ನು ಬಾಚಿಕೊಳ್ಳುತ್ತಿದೆ. ಸರ್ಕಾರಕ್ಕೆ ದೇವಾಲಯಗಳ ಹುಂಡೀ ಕಾಸಿನ ಹಣ ಬೇಕು ಅದರೆ ದೇವಾಲಯಗಳು ಬೇಡ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕತ್ತರಿಸಲು ಹೊರಟಿರುವುದು ಎಷ್ಟು ಸರಿ?

ರಾಜಕಾಲುವೆ ಮೇಲೆ ಕಟ್ಟಿರುವ ರಾಜಕಾರಣಿ ಮತ್ತು ಖ್ಯಾತ ನಟರ ಮನೆಗಳನ್ನು ಒಡೆಯುವುದನ್ನು ಸರ್ಕಾರ ತಪ್ಪಿಸ ಬಹುದಾದರೇ, ನೂರಾರು ವರ್ಷಗಳಿಂದಲೂ ಶ್ರದ್ಧಾ ಭಕ್ತಿಯಿಂದ ಪೂಜಿಸಿಕೊಂಡು ಬಂದಿರುವ ದೇವಾಲಯಗಳನ್ನು ರಕ್ಷಿಸಲು ಸಾಧ್ಯವಿಲ್ಲವೇ?

ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾವುದೂ ಅಸಾಧ್ಯ ಎನ್ನುವುದೇ ಇಲ್ಲ. ನಿಜವಾದ ಇಚ್ಛಾಶಕ್ತಿ ಇದ್ದಲ್ಲಿ ದೇವಾಲಯಗಳನ್ನು ನಾಶ‌ ಪಡಿಸುವುದರ ಬದಲು ಯಥಾವತ್ತಾಗಿ ಸ್ಥಳಾಂತರ ಮಾಡ ಬಹುದಾಗಿದೆ. ಈರೀತಿಯ ಪ್ರಯೋಗಗಳು ಈಗಾಗಲೇ ಹತ್ತು ಹಲಾವಾರು ಕಡೆಗಳಲ್ಲಿ ಯಶಸ್ವಿಯಾಗಿದೆ.

ಈ‌ ಲೇಖನ ಬರೆದು ಮುಗಿಸುವ ವೇಳೆಗೆ ಹಿಂದೂಗಳು ಮತ್ತು ಹಿಂದೂಪರ ಸಂಘಟನೆಗಳ ಎಚ್ಚರಿಕೆ, ಆಗ್ರಹ ಮತ್ತು ಪ್ರತಿಭಟನೆಗಳಿಗೆ ಮಣಿದು ಸರ್ಕಾರ ದೇವಾಲಯಗಳ ನಾಶಕ್ಕೆ ತಾತ್ಕಾಲಿಕವಾದ ತಡೆ ಹಾಕಿ ಈ ಕುರಿತಂತೆ ಸಮಗ್ರವಾಗಿ ಪರಿಶೀಲಿಸುವುದಾಗಿ ಹೇಳಿದೆ.

ಒಟ್ಟಿನಲ್ಲಿ ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರಗಳಿಂದ ರೋಸೆತ್ತು ಪರ್ಯಾಯವಾಗಿ ಬಿಜೆಪಿ ಸರ್ಕಾರವನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಕ್ಕೆ ತಂದರೆ ಹೇಳಿಕೊಳ್ಳುವಂತಹ ಭ್ರಷ್ಟಾಚಾರ ನಡೆಯಲಿಲ್ಲವಾದರೂ ಜನಸಾಮಾನ್ಯರ ದೈನಂದಿನ ಜೀವನ ಮತ್ತು ಧಾರ್ಮಿಕ ನಂಬಿಕೆಗಳಿಗೇ ಪೆಟ್ಟು ಬೀಳುವಂತಾಗಿರುವುದು ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಾಗಿ, ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ.

ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿ ಕೊಳ್ಳಲಾಗದು ಅಲ್ವೇ? ಆಧಿಕಾರಕ್ಕೆ ತಂದವರು ತಮ್ಮ ಹಿತಾಸಕ್ತಿಗಳನ್ನು ಕಾಪಡಲಾರರು ಎಂದು ತಿಳಿದಾಗ ಅವರನ್ನು ಕೆಳಗಿಳಿಸುವ ಶಕ್ತಿಯೂ ಇರುತ್ತದೆ ಅಲ್ಲವೇ?

ಕಾಲ ಇನ್ನೂ ಮಿಂಚಿಲ್ಲ. ಮಿಂಚಿ ಹೋದ ನಂತರ ಚಿಂತಿಸಿ ಫಲವಿಲ್ಲ ಎನ್ನುವಂತೆ ಎರಡೂ ಸರ್ಕಾರಗಳು ಈ ಕೂಡಲೇ ಎಚ್ಚೆತ್ತುಕೊಂಡು ಜನಪರ ಆಡಳಿತ ನೀಡದೇ ಹೋದಲ್ಲಿ ಮುಂದೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ.

ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ.

elec4

ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗಳಿಸಿದ ಕೂಡಲೇ ಮುಂದಿನ ಬಾರೀ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಹಿಡಿದೇ ತೀರುತ್ತೇವೆ ಎಂದು ಫಣ ತೊಟ್ಟ ಬಿಜೆಪಿಯ ಇಡೀ ತಂಡ ಪಶ್ಚಿಮ ಬಂಗಾಳದಲ್ಲಿ ಝಾಂಡ ಹೂಡಿದ್ದಲ್ಲದೇ ಒಂದು ರೀತಿಯ ಹಿಂದುತ್ವದ ವಾತಾವರಣವನ್ನು ಮೂಡಿಸುವುದರಲ್ಲಿ ಸ್ವಲ್ಪ ಸಫಲತೆಯನ್ನು ಕಂಡಿತ್ತು. ಇದಲ್ಲದೇ ಟಿಎಂಸಿ ಪಕ್ಷದ ಹತ್ತಾರು ಶಾಸಕರು ಮತ್ತು ಹಿರಿಯ ನಾಯಕರೂ ಸಹಾ ಬಿಜೆಪಿ ಗೆಲ್ಲಬಹುದು ಎಂದೇ ತಾಮುಂದು ನಾಮುಂದು ಎಂದು ಬಿಜೆಪಿಯನ್ನು ಸೇರಿಕೊಂಡಿದ್ದು, ಅಮಿತ್ ಶಾ. ನಡ್ಡಾ ಮತ್ತು ಮೋದಿಯವರ ಭಾಷಣಗಳಿಗೆ ಅಪಾರವಾದ ಜನಸ್ತೋಮ ಸೇರುತ್ತಿದ್ದದ್ದು ಬಿಜೆಪಿಗೆ ಅಧಿಕಾರಕ್ಕೆ ಮೂರೇ ಗೇಣು ಎನ್ನುವಂತೆ ಮಾಡಿತ್ತು.

ಬಿಜೆಪಿಯ ಅಬ್ಬರದ ಪ್ರಚಾರವಲ್ಲದೇ ತಮ್ಮದೇ ಪಕ್ಷದ ನಾಯಕರಗಳನ್ನು ಸೆಳೆದುಕೊಳ್ಳುವುದರಿಂದ ಆರಂಭದಲ್ಲಿ ಕಂಗಾಲಾದ ಮಮತ ನಂತರ ಪ್ರಾದೇಶಿಕ ಅಸ್ಮಿತೆಯನ್ನು ಸರಿಯಾಗಿ ಬಳಸಿಕೊಂಡಿದ್ದಲ್ಲದೇ, ಅಚಾನಕ್ಕಾಗಿ ಆಕೆಯ ಮೇಲಾದ ಧಾಳಿಯನ್ನು ಸಮರ್ಥವಾಗಿ ಇಡೀ ಚುನಾವಣೆಗೆ ದಾಳವಾಗಿ ಬಳಸಿಕೊಂಡಿದ್ದಲ್ಲದೇ ಇಡೀ ಚುನಾವಣೆಯನ್ನು ವೀಲ್ಹ್ ಚೇರ್ ಮೇಲೆಯೇ ಕುಳಿತುಕೊಂಡು ಜನರನ್ನು ಭಾವನಾತ್ಮಕವಾಗಿ ತನ್ನತ್ತ ಸೆಳೆಯಲು ಯಶಸ್ವಿಯಾದರು.

ತಮಿಳುನಾಡಿನಲ್ಲಿ ತಲೆ ತಲಾಂತರದಿಂದಲೂ ಪ್ರಾಭಲ್ಯವಿರುವುದೇ ಪ್ರಾದೇಶಿಕ ಪಕ್ಷಗಳ ಡಿಎಂಕೆ ಮತ್ತು ಎಐಡಿಎಂಕೆಗಳದ್ದು. ಹಾಗಾಗಿ ತಮಿಳುನಾಡಿನ ಜನರೂ ಸಹಾ ಒಮ್ಮೆ ಡಿಎಂಕೆಯ ಕರುಣಾನಿಧಿ ಮತ್ತೊಮ್ಮೆ ಎಐಡಿಎಂಕೆಯ ಜಯಲಲಿತಳನ್ನು ಆಡಳಿತಕ್ಕೆ ಒಂದು ರೀತಿ ಖೋ ಖೋ ಮಾದರಿಯಲ್ಲಿ ಆಡಳಿತಕ್ಕೆ ತರುವ ಸಂಪ್ರದಾಯವನ್ನೇ ರೂಢಿಸಿಕೊಂಡು ಬಂದಿರುವುದರಿಂದ ಈ ಬಾರಿ ಹೆಚ್ಚಿನ ಬದಲಾವಣೆ ಇಲ್ಲದೇ ನಿರೀಕ್ಷೆಯಂತೆಯೇ ಡಿಎಂಕೆ ಪಕ್ಷ ಆಡಳಿತಕ್ಕೆ ಬರುವುದು ನಿರೀಕ್ಷಿತವಾಗಿತ್ತು.

assam

CAA & NRC ಆರಂಭವಾದದ್ದೇ ಅಸ್ಸಾಂಮಿನಿಂದಲೇ. ಹಾಗಾಗಿ ಈ ಬಾರಿ ಅಲ್ಲಿನ ಚುನಾವಣೆಯಲ್ಲಿ CAA & NRCಯೇ ಪ್ರಮುಖಪಾತ್ರವಹಿಸಿತ್ತು. ಬಿಜೆಪಿ ಪುನಃ ಆಡಳಿತಕ್ಕೆ ಬಂದಲ್ಲಿ ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರೆ, ಕಾಂಗ್ರೇಸ್ಸ್ ಅದನ್ನು ಬಲವಾಗಿ ತಿರಸ್ಕರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಚುನಾವಣೆಯಲ್ಲಿ ಅಸ್ಸಾಂ ಜನತೆ ಬಿಜೆಪಿಗೆ ಎರಡನೇ ಬಾರಿಗೆ ಸ್ಪಷ್ಟ ಬಹುಮತವನ್ನು ಕೊಡುವ ಮೂಲಕ CAA & NRC ಪರ ಜನಾದೇಶವನ್ನು ನೀಡಿದ್ದಾರೆ.

ಚುನಾವಣಾ ಪೂರ್ವದಲ್ಲಿನ ಸಮೀಕ್ಷೆಯಂತೆಯೇ ಆಷ್ಟೆಲ್ಲಾ ಹಗರಣಗಳ ನಡುವೆಯೂ ಪ್ರಪ್ರಥಮ ಬಾರಿಗೆ ಕೇರಳದಲ್ಲಿ ಸತತವಾಗಿ ಎರಡನೇ ಬಾರಿಗೆ LDF ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಇದೇ UDF, ಲೋಕಸಭಾ ಚುನಾವಣೆಯಲ್ಲಿ 20ಕ್ಕೆ 19ರಲ್ಲಿ ಗೆದ್ದಿದ್ದಾಗ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಬಹುಮತ ಬರಬಹುದು ಎಂಬ ಭ್ರಮೆಯಲ್ಲಿಯೇ ತೇಲಾಡಿದರ ಪರಿಣಾಮ ಹೇಳ ಹೆಸರಿಲ್ಲದಂತಾಗಿರುವುದು ನಿಜಕ್ಕೂ ಶೋಚನೀಯವಾಗಿದೆ. ದೇಶದ ಪ್ರಧಾನ ಮಂತ್ರಿಯ ಅಭ್ಯರ್ಥಿ ಎಂದೇ ಹಲವಾರು ವರ್ಷಗಳಿಂದಲೂ ತನ್ನನ್ನೇ ತಾನು ಬಿಂಬಿಸಿಕೊಂಡು ಬಂದಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕೇರಳದಿಂದ ಸ್ಪರ್ಥಿಸಿದ್ದಕ್ಕಾಗಿ ಅಷ್ಟೊಂದು ಸಂಸದರನ್ನು ಗೆಲ್ಲಲು ಸಾಧ್ಯವಾಯಿತು ಎಂದು ರಾಹುಲನನ್ನು ಹೆಗಲಮೇಲೆ ಎತ್ತಿ ಮೆರೆಸಿದವರು ಇಂದು ಈ ಪರಿಯ ಸೋಲನ್ನು ಯಾರ ತಲೆ ಮೇಲೆ ಕಟ್ಟುತ್ತಾರೆ ಎಂದು ಕಾದು ನೋಡ ಬೇಕಿದೆ.

kerala

ಲೋಕಸಭಾ ಚುನಾವಣೆಯ ಸಮಯದಲ್ಲಿ LDF ಹೀನಾಯವಾಗಿ ಸೋಲಲು ಶಬರಿಮಲೈ ನಿರ್ಥಾರಗಳು ಕಾರಣ ಎಂದು ನಂಬಲಾಗಿದ್ದರೂ, ನಿಜವಾಗಿಯೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಬಂದರೆ ತಮಗೆ ಕುತ್ತು ಎಂದು ಭಾವಿಸಿದ ಕೆಲ ಪಟ್ಟ ಭಧ್ರಹಿತಾಸಕ್ತಿಗಳು ಕೇಂದ್ರದಲ್ಲಿ LDF ಪ್ರಭಾವ ವಿಲ್ಲದಿದ್ದ ಕಾರಣ ಅನಿವಾರ್ಯವಾಗಿ ರೊಟ್ಟಿ ಹಳಸಿತ್ತು. ನಾಯಿ ಹಸಿದಿತ್ತು ಎನ್ನುವಂತೆ ರಾಹುಲ್ ನೇತೃತ್ವದ UDF ಗೆಲ್ಲಿಸಿದ್ದದ್ದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಪ್ರಜಪ್ರಭುತ್ವವಾಗಿ ಚುನಾವಣೆ ನಡೆದರೂ, ಗವರ್ನರ್ ಆಳ್ವಿಯೇ ಪ್ರಧಾನವಾದ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ಪುದುಚರಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿರುವುದು ಕುತೂಹಲವನ್ನು ಕೆರಳಿಸಿದೆ.

elec3

ಇನ್ನು ರಾಜ್ಯದ ಎರಡು ಉಪಚುನಾವಣೆಯಲ್ಲಿ ಮಸ್ಕಿ ಅನಿರೀಕ್ಷಿತವಾಗಿ ಕಾಂಗ್ರೇಸ್ ಪಾಲಾದರೆ, ಬಸವಕಲ್ಯಾಣ ಬಿಜೆಪಿಗೆ ಸುಲಭದ ತ್ತುತಾಗಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರ RCB T20 ಪಂದ್ಯದಂತೆ ಕ್ಷಣಕ್ಷಣಕ್ಕೂ ಬದಲಾಗುತ್ತಾ ಅಂತಿಮವಾಗಿ ಕೇವಲ ಮೂರು ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಪ್ರಯಾಸದ ಗೆಲವನ್ನು ಪಡೆಯುವುದರಲ್ಲಿ ಸಫಲವಾಗಿದೆ. ಕಳೆದ ಬಾರಿ ಲಕ್ಷಾಂತರ ಮತಗಳ ಅಂತರದಲ್ಲಿ ಗೆದ್ದಿದ ಬಿಜೆಪಿ ಅಭ್ಯರ್ಥಿಗೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಶಿವಸೇನಾ ಅಭ್ಯರ್ಥಿ ಮಗ್ಗುಲ ಮುಳ್ಳಾಗಿದ್ದಂತೂ ಸುಳ್ಳಲ್ಲ.

puducery

ಆಂತಿಮವಾಗಿ ಹೇಳಬೇಕೆಂದರೆ ಅಸ್ಸಾಮ್ ಮತ್ತು ಪುದುಚೆರಿ ಬಿಜೆಪಿಯ ಪಾಲಾದರೆ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಮತ್ತೊಮ್ಮೆ LDF ಮತ್ತುಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಮೂರನೇ ಬಾರಿಗೆ ನಿರೀಕ್ಷೆಗೂ ಮೀರಿದ ಭಾರೀ ಬಹುಮತ ಪಡೆಯುವುದರೊಂದಿಗೆ ಆಡಳಿತಕ್ಕೆ ಬಂದಿದೆ.

ಮೊದಲ ಬಾರಿಗೆ EVM ಕುರಿತಾಗಿ ಇದುವರೆಗೂ ಯಾವುದೇ ಆಕ್ಷೇಪಣೆ ಬಾರದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಇಷ್ಟೆಲ್ಲಾ ಸೋಲು/ಗೆಲುವು ಸಾಧಿಸಿದ್ದರೂ ಈ ಚುನಾವಣೆಯ ಫಲಿತಾಂಶ ಎಲ್ಲಾ ಪಕ್ಷಕ್ಕೂ ಎಚ್ಚರಿಕೆಯ ಗಂಟೆಯನ್ನು ಬಾರಿಸಿರುವುದು ಸುಳ್ಳಲ್ಲ.

ಬಿಜೆಪಿ : ಈ ಚುನಾವಣೆಯಲ್ಲಿ ಅಸ್ಸಾಂ ಹೊರತಾಗಿ ಬೇರಾವ ರಾಜ್ಯದಲ್ಲಿಯೂ ಬಿಜೆಪಿ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಉಳಿದೆಲ್ಲಾ ಕಡೆ ಗೆಲ್ಲುವ ಪ್ರತಿಯೊಂದು ಸ್ಥಾನವೂ ಅವರಿಗೆ ಬೋನಸ್ ಎನ್ನುವಂತಿತ್ತು. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನ ಸಭೆಯಲ್ಲಿ ಕೇವಲ 3 ಶಾಸಕರಿದ್ದದ್ದು ಈಗ 80ರ ಆಸುಪಾಸಿಗೆ ಬಂದಿದ್ದೇವೆ ಎಂದು ಗೆದ್ದು ಬೀಗಿದರೂ, ಅಷ್ಟೆಲ್ಲಾ ಅಬ್ಬರದ ಪ್ರಚಾರದ ನಡುವೆಯೂ ಮಮತ ಬ್ಯಾನರ್ಜಿ ಗೆದ್ದದ್ದು ಕೇವಲ ತನ್ನ ಪ್ರಾದೇಶಿಕ ಅಸ್ಮಿತೆಯಿಂದಾಗಿ ಎನ್ನುವುದನ್ನು ಗಮನಿಸಬೇಕಾಗಿದೆ. ಚುನಾವಣೆಯಲ್ಲಿ ಗೆದ್ದರೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸೂಚಿಸಿದಿದ್ದ ಪರಿಣಾಮ ಮಮತಾ ಬ್ಯಾನರ್ಜಿ ಸತತವಾಗಿ ಹೊರಗಿನವರಿಗೆ ಅಧಿಕಾರ ಕೊಡಬೇಡಿ ಎಂದು ಕೇಳಿಕೊಂಡಿದ್ದು ಸಫಲವಾಗಿದೆ ಎಂದೇ ಭಾವಿಸಬಹುದಾಗಿದೆ.

ತಮಿಳುನಾಡಿನಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆ ಆರಂಭಿದೆ. ಅದರಲ್ಲೂ ಕೊಯಂಬತ್ತೂರು ದಕ್ಷಿಣ ಕ್ಷೇತ್ರದಲ್ಲಿ ಚಿತ್ರನಟ ಕಮಲಹಾಸನ್ ಅವರಿಗೆ ಸೋಲು ಉಣಿಸಿದ್ದು ಹೆಮ್ಮೆಯಾದರೆ, ಬಾರೀ ನಿರೀಕ್ಷೆ ಮೂಡಿಸಿದ್ದ ಮಾಜೀ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೋತಿರುವುದು ಬೇಸರ ತಂದಿದೆ

ಕೇರಳದಲ್ಲಿ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೂದಳತೆಯ ಅಂತರದಿಂದ ಸೋಲುಂಡಿದ್ದರೂ ಭಾರೀ ಪ್ರಮಾಣದಲ್ಲಿ ಮತಗಳನ್ನು ಹೆಚ್ಚಿಸಿಕೊಂಡಿರುವುದು ಉತ್ತಮವಾಗಿದೆ.

ಒಟ್ಟಿನಲ್ಲಿ ಈ ಚುನಾವಣೆಯಿಂದ ಸ್ಪಷ್ಟವಾಗಿ ಬಿಜೆಪಿಯವರು ಕಲಿಯ ಬೇಕಾದ್ದದ್ದು ಏನೆಂದರೆ, ಗ್ರಾಮ ಪಂಚಾಯಿತಿ, ಮಂಡಲ ಪಂಚಾಯಿತಿ, ನಗರ ಸಭೆ, ಪುರಸಭೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಾ ಚುನಾವಣೆಗಳಲ್ಲಿಯೂ ಮೋದಿಯವರ ಹೆಸರನ್ನೇ ಹೇಳಿಕೊಂಡು ಹೋಗಲಾಗದ ಕಾರಣ ಆದಷ್ಟು ಬೇಗನೇ ಎಲ್ಲಾ ರಾಜ್ಯಗಳಲ್ಲಿಯೂ ಸ್ಥಳೀಯ ನಾಯಕರನ್ನು ಗುರುತಿಸಿ, ಅವರನ್ನು ಬೆಳಸಿ ಮತ್ತು ಬೆಂಬಲಿಸಲೇ ಬೇಕಾದ ಅನಿವಾರ್ಯವಾಗಿದೆ.

rahul

ಕಾಂಗ್ರೇಸ್ : ಕೇವಲ ಅಸ್ಸಾಂನಲ್ಲಿ ಅಲ್ಪ ಸ್ವಲ್ಪ ಹೋರಾಟ ತೋರಿದರೆ ಉಳಿದೆಲ್ಲಾ ಕಡೆ ದುರ್ಬೀನು ಹಾಕಿಕೊಂಡು ಹುಡುಕುವಂತಾಗಿದೆ. ಎದುರು ಮನೆಯಲ್ಲಿ ಮಗು ಹುಟ್ಟಿದರೆ ತಮ್ಮ ಮನೆಯಲ್ಲಿ ತೊಟ್ಟಿಲು ಕಟ್ಟಿದರಂತೆ ಎನ್ನುವ ಪರಿಸ್ಥಿತಿ ಇಂದು ಕಾಂಗ್ರೇಸ್ಸಿನದ್ದಾಗಿದೆ. ಶತ್ರುವಿನ ಶತ್ರು ನನ್ನ ಮಿತ್ರ ಎನ್ನುವಂತೆ ದೇಶಾದ್ಯಂತ ಈ ಚುನಾವಣೆಯಲ್ಲಿ ಮೂಲೆ ಗುಂಪಾಗಿದ್ದರೂ ಬಿಜೆಪಿಯನ್ನು ಸೋಲಿಸಿದ ಪಶ್ಚಿಮ ಬಂಗಾಳದ ಜನರಿಗೂ ಮತ್ತು ಟಿಎಂಸಿ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಅಭಿನಂದಿಸಿದ್ದು ಆ ಪಕ್ಷದ ಅವನತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ದೇಶದ ಜನ ಕಾಂಗ್ರೇಸ್ಸಿಗರನ್ನು‌ ಮತ್ತವರ ನಾಯಕನನ್ನು ತಿರಸ್ಕರಿಸಿಯಾಗಿದೆ. ಹಾಗಾಗಿ ಇನ್ನೂ ದೇಶದ ರಾಜಕೀಯದಲ್ಲಿ ಉಳಿಯ ಬೇಕಾದಲ್ಲಿ, ಈ ನಕಲೀ ಗಾಂಧಿ ಕುಟುಂಬದ ಹೊರತಾದ ಸಮರ್ಥ ನಾಯಕತ್ವವನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂಬ ಷರಾ ಬರೆದಂತಿದೆ.

ತೃಣಮೂಲ ಕಾಂಗ್ರೇಸ್ : Operation success but patient is dead ಎನ್ನುವಂತೆ ಇಡೀ ಕೇಂದ್ರ ಸರ್ಕಾರವೇ ತನ್ನ ಎದುರಾಗಿ ನಿಂತರೂ ಚಲ ಬಿಡದ ತ್ರಿವಿಕ್ರಮನಂತೆ ಒಬ್ಬಂಟಿಯಾಗಿ 200ಕ್ಕೂ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಸಫಲವಾಗಿದ್ದರೂ, ಒಬ್ಬ ಮುಖ್ಯ ಮಂತ್ರಿಯಾಗಿ ಒಂದು ಕಾಲದ ಅತ್ಯಾಪ್ತ ಶಿಷ್ಯ ಬಿಜೆಪಿಯ ಅಭ್ಯರ್ಥಿ ಸುವೆಂದು ಅಧಿಕಾರಿ ಎದುರು ಸ್ವತಃ ಸೋತಿರುವುದರಿಂದ ವಯಕ್ತಿಕವಾಗಿ ಆಕೆಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದು ಸ್ಲಷ್ಟವಾಗುತ್ತದೆ.

ಈಗ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಮುಂದಿನ ಆರು ತಿಂಗಳೊಳಗೆ ವಿಧಾನಸಭೆಗೋ ಇಲ್ಲವೇ ವಿದಾನ ಪರಿಷತ್ತಿನ ಸದಸ್ಯೆಯಾಗಿ ಅಧಿಕಾರವನ್ನು ಉಳಿಸಿಕೊಂಡರೂ ಅದು ಹಿಂಬಾಗಿಲಿನಿಂದ ಜನಾದೇಶದ ವಿರುದ್ಧವಾಗಿದೆ. ಇನ್ನಾದರೂ ಅಲ್ಪ ಸಂಖ್ಯಾತರ ಅತೀಯಾದ ತುಷ್ಟೀಕರಣವನ್ನು ಸ್ವಲ್ಪ ಕಡಿಮೆ ಮಾಡಿ ಸಬ್ ಕಾ ಸಾತ್ ಸಬ್ಕಾ ವಿಕಾಸ್ ನತ್ತ ಗಮನ ಹರಿಸುವುದು ಉತ್ತಮವಾಗಿದೆ.

ಮಿಳು ನಾಡಿನಲ್ಲಿ ಅವರು ಬಿಟ್ಟು ಇವರು, ಇವರ ಬಿಟ್ಟು ಅವರು ಎಂಬ ರಾಜ ಕಾರಣದಿಂದ ತಮಿಳರು ಹೊರಬಾರದೇ ಇರುವುದು ಅಲ್ಲಿಯ ಜನರ ರಾಜಕೀಯ ಬೌಧ್ದಿಕ ದಿವಾಳಿತನ ಮತ್ತೊಮ್ಮೆ ಜಗಜ್ಜಾಹೀರಾತಾಗಿದೆ.

ಅಷ್ಟೆಲ್ಲಾ ಹಗರಣಗಳು ಬೆಳಕಿಗೆ ಬಂದು ತಮ್ಮ ವಯಕ್ತಿಯ ಕರಾಮತ್ತಿನಿಂದಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರೂ ಕೇರಳಿಗರು ಕಮ್ಮಿನಿಷ್ಟರನ್ನೇ ಆಡಳಿತಕ್ಕೆ ತಂದಿರುವುದಕ್ಕೆ ಮುಂದಿನ ದಿನಗಳಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುವುದು.

ದೇಶದಲ್ಲಿ ಜನರು ಬಿಜೆಪಿಗೆ ಹೆಚ್ಚಿನ ಅಧಿಕಾರ, ಡಿಎಂಕೆ, ತೃಣಮೂಲ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರಿಗೆ ಮತ್ತೊಂದು ಆವಕಾಶವನ್ನು ನೀಡಿದರೆ, ಇಲ್ಲಿ ಸ್ಪಷ್ಟವಾಗಿ ಸೋತು ಸುಣ್ಣವಾಗಿರುವುದು ತಮ್ಮದು ಅತ್ಯಂತ ಹಳೆಯ ಪಕ್ಷ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್. ಈ ಚುನಾವಣೆಯಲ್ಲಿ ಕಾಂಗ್ರೇಸ್ಸನ್ನು ಮತ್ತೊಮ್ಮೆ ಧೂಳಿಪಟ ಮಾಡುವ ಮೂಲಕ ಆ ಪಕ್ಷವನ್ನು ಇತಿಹಾಸದ ಪುಟವನ್ನು ಸೇರುವಂತೆ ಮಾಡಿರುವುದಂತೂ ಸ್ಪಷ್ಟವಾಗಿದೆ.

vaccin

ಇನ್ನು ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಈ ಜನಾದೇಶಕ್ಕೆ ಅನುಗುಣವಾಗಿ ಈ ಎಲ್ಲಾ ಪಕ್ಷಗಳು ತಮ್ಮ ಹಮ್ಮು ಬಿಮ್ಮು ರಾಜಕೀಯವೆಲ್ಲವನ್ನೂ ಬದಿಗಿಟ್ಟು ಈ ದೇಶಕ್ಕೆ ಬಂದಿರುವ ಮಹಾಮಾರಿ ಕೊರೋನಾದ ವಿರುದ್ಧ ಈಗ ಗೆಲ್ಲಲೇ ಬೇಕಾಗಿದೆ. ತಮ್ಮ ಎಲ್ಲಾ ರಾಜ್ಯಗಳಲ್ಲಿಯೂ ಕೊರೋನಾ ಲಸಿಕಾ ಅಭಿಯಾನವನ್ನು ಆದಷ್ಟೂ ಚುರುಕುಗೊಳಿಸಿ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಹೋರಾಡ ಬೇಕಾಗಿದೆ.

elec2

ಮೋದಿ ಸರಿ ಇಲ್ಲಾ ಬಿಜೆಪಿ ಸರಿ ಇಲ್ಲಾ ಎಂದು ಬೊಬ್ಬಿರಿಯುವವರಲ್ಲಿ ಒಂದು ಮನವಿಯೇನೆಂದರೆ. ಮುಂದಿನ 2024ರಲ್ಲಿ ಮೋದಿಯವರ ವಿರುದ್ಧ ಹೋರಾಡುವ ಸಲುವಾಗಿಯಾದರೂ ದಯವಿಟ್ಟು ತಪ್ಪದೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ. ಜೀವ ಇದ್ದರೆ ಮಾತ್ರ ಜೀವನ. ಜೀವನ ಸರಿಯಾಗಿದ್ದಲ್ಲಿ ಮಾತ್ರವೇ ರಾಜಕೀಯ.

ಏನಂತೀರೀ?

ನಿಮ್ಮವನೇ ಉಮಾಸುತ

ಸಂತೋಷ್ ಬಿ ಎಲ್, ಸಂಘಟನಾ ಚತುರ

sant3

ನೆನ್ನೆ ಸಂಜೆ ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಸಭೆಯನ್ನು ಉದ್ದೇಶಿಸಿ ಮೋದಿಯವರ ಕಳೆದ ಆರು ವರ್ಷಗಳ ಆಡಳಿತ ಅವರ ವಿದೇಶಾಂಗ ನೀತಿಗಳು ಮತ್ತು ಇತ್ತೀಚಿನ ಪಾಕ್, ಜೀನಾ ಆಕ್ರಮಣದ ಕುರಿತಂತೆ ಮೋದಿಯವರ ನಿರ್ಧಾರಗಳು,ಇಂತಹ ವಿಪತ್ತಿನಲ್ಲಿ ದೇಶದ ಪರವಾಗಿ ನಿಲ್ಲದೇ ಶತ್ರುಗಳಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಹಿತಶತ್ರುಗಳನ್ನು ಎಳೆ ಎಳೆಯಾಗಿ ಜಗ್ಗಾಡುತ್ತಾ ಹಿಗ್ಗಾ ಮುಗ್ಗಿ ನಯವಾಗಿಯೇ ಜಾಡಿಸಿ ಮಾತನಾಡುತ್ತಿದ್ದದ್ದನು ಮನೆಯಲ್ಲಿಯೇ ಕುಳಿತು online ಮೂಲಕ ನೋಡುತ್ತಿದ್ದಾಗ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

2009ರ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಕ್ಷದಿಂದ ಶ್ರೀಯುತ ಜನಾರ್ಧನ ಸ್ವಾಮಿ ಎಂಬ ಸಜ್ಜನ ಮತ್ತು ವಿದ್ಯಾವಂತ ಹೊಸ ಮುಖವನ್ನು ಕಣಕ್ಕಿಳಿಸಿದ್ದಾಗ ಬಹುತೇಕರು ಯಾರೀ ಮನುಷ್ಯ ಎಂದು ಹುಡುಕಾಡುತ್ತಿದ್ದರೆ, ನಾನು ಇಂತಹ ಹೊಸ ಮುಖವನ್ನು ಪರಿಚಯಿಸುವ ದಿಟ್ಟತನವನ್ನು ತೋರಿದವರು ಯಾರು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದಾಗಲೇ ನನಗೆ ಮೊತ್ತ ಮೊದಲ ಬಾರಿಗೆ ಬಿ. ಎಲ್ ಸಂತೋಷ್ ಅವರ ಹೆಸರು ತಿಳಿಯಿತು. ಅದಾದ ನಂತರ ಅವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಹತ್ತಾರು ಕಡೆ ವಿಚಾರಿಸಿದಾಗ ತಿಳಿದ ವಿಷಯವೆಂದರೆ, ಜನಾರ್ಧನ ಸ್ವಾಮಿ, ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿದ್ದರೂ ಕನ್ನಡಿಗರಿಗೆ ಅಂಕಣಕಾರರಾಗಿ ಸುಪರಿಚಿತವಾಗಿರುವ ಶ್ರೀವತ್ಸ ಜೋಶಿ ಮತ್ತು ಸಂತೋಷ್ ಇವರೆಲ್ಲರೂ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತೊಂಭತ್ತರ ದಶಕದಲ್ಲಿ ಸಹಪಾಠಿಗಳು.

ಉಡುಪಿ ಜಿಲ್ಲೆಯ ಹಿರಿಯಡ್ಕದ ಮೂಲದವರಾದ ಬೊಮ್ಮರಾಬೆಟ್ಟು ಲಕ್ಷ್ಮಿಜನಾರ್ಥನ ಸಂತೋಷ್ ಶಾಲಾ ದಿನಗಳಿಂದಲೂ ತಮ್ಮ ಚುರುಕುತನ ಮತ್ತು ಬುದ್ಧಿವಂತಿಕೆಗೆ ಹೆಸರಾದವರು. ಸಂತೋಷ್ ಆವರು ಯಾವುದೇ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದರೆ ಅವರಿಗೆ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿಯಂತಾಗಿ ಅದ್ಭುತ ವಾಗ್ಪಟುವಾಗಿದ್ದಲ್ಲದೇ, ಅತ್ಯುತ್ತಮ ನಾಯಕತ್ವ ಗುಣವುಳ್ಳ ಸಂಘಟನಾ ಚತುರ. ತನ್ನ ಸ್ವಭಾವ, ನಡುವಳಿಗೆ ಮತ್ತು ದಿಟ್ಟತನದಿಂದಾಗಿ ಬಹುಬೇಗನೆ ಎಲ್ಲರನ್ನೂ ತನ್ನತ್ತ ಸೂಜಿಗಲ್ಲಿನಂತೆ ಸೆಳೆವ ಸರಳ ಸಜ್ಜನದ ವ್ಯಕ್ತಿತ್ವ. ಇಂಜಿನೀಯರಿಂಗ್ ಅಂತಿಮ ವರ್ಷದಲ್ಲಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾದಾಗ ತನ್ನ ಆತ್ಮೀಯ ಗೆಳೆಯರಂತೆ ವಿದೇಶಕ್ಕೆ ಹಾರಿ ಹೋಗುವುದೋ ಇಲ್ಲವೇ ಇಲ್ಲಿಯೇ ದೊಡ್ಡ ದೊಡ್ಡ ಸಂಬಳದ ವೃತ್ತಿಗೆ ಹೋಗಬಹುದಿತ್ತು. ಆದರೆ ರಾಷ್ಟ್ರ ಸೇವೆಗಾಗಿಯೇ ತನ್ನ ಜೀವನ ಎಂಬುದಾಗಿ ಮೊದಲೇ ನಿರ್ಧರಿಸಿದ್ದರಿಂದ ಒಂದು ಸಾಧಾರಣ ಪಂಚೆಯುಟ್ಟು ಅದರ ಮೇಲೊಂದು ಬಿಳೀ ಅಂಗಿ ಹೆಗಲ ಮೇಲೊಂದು ಚೀಲವನ್ನು ತಗುಲಿಹಾಕಿಕೊಂಡು 1993ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು.

ಸುಮಾರು ಹದಿಮೂರು ವರ್ಷಗಳ ಕಾಲ ಸಂಘದ ಪ್ರಚಾರಕರಾಗಿ ವಿವಿಧ ಜವಾಬ್ಧಾರಿಗಳನ್ನು ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ ನಂತರ 2006ರಲ್ಲಿ ಸಂಘದಿಂದ ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಿಯುಕ್ತರಾದರೂ ಅವರು ಹೊರಗಿನ ಪ್ರಪಂಚಕ್ಕೆಲ್ಲೂ ಕಾಣಿಸಿಕೊಳ್ಳದೇ, ಸದಾ ಕಾಲವೂ ಸುದ್ದಿ ಮಾಧ್ಯಮಗಳಿಂದ ದೂರವೇ ಉಳಿದು ಪಕ್ಷವನ್ನು ತಳಮಟ್ಟದಿಂದಲೂ ಮೇಲಕ್ಕೆ ತರಲು ಬಹಳವಾಗಿ ಶ್ರಮವಹಿಸಿದವರು. ಸಂತೋಷ್ ಅವರು ಸಂಘಟನಾತ್ಮಕ ಕಾರ್ಯತಂತ್ರ ಉಳಿದೆಲ್ಲವರಿಗಿಂತಲೂ ಸ್ವಲ್ಪ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿಯ ಪ್ರಾಭಲ್ಯ ಹೆಚ್ಚಾಗಿರುವ ಕಾರಣ ಅಲ್ಲಿಯ ಜವಾಬ್ಧಾರಿಗಳನ್ನು ಸ್ಥಳೀಯ ನಾಯಕರಿಗೆ ವಹಿಸಿ ಪಕ್ಷ ದುರ್ಬಲ ಇರುವ ಕಡೆ ಸ್ವತಃ ಇವರೇ ಗಮನ ಹರಿಸಿ ಅಲ್ಲಿನ ಸ್ಥಳೀಯ ನಾಯಕರನ್ನು ಗುರುತಿಸಿ ಅವರನ್ನು ಬೆಳೆಸಿದ್ದರಿಂದಲೇ ರಾಜ್ಯಾದ್ಯಂತ ಬಿಜೆಪಿ ಪಕ್ಷ ತಳಮಟ್ಟದಲ್ಲಿ ಪ್ರಭಲವಾಗುಂತಾಯಿತು. ಇದರಿಂದಾಗಿಯೇ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲವೆಂದು ಪರಿಗಣಿಸಲಾಗಿದ್ದಂತಹ ಚಾಮರಾಜನಗರ, ಕೋಲಾರ, ಕಲಬುರ್ಗಿಯಂತಹ ಕ್ಷೇತ್ರಗಳಲ್ಲಿಯೂ ಕಮಲ ಅರಳುವಂತಾಯಿತು. ಕೇವಲ ಕಾರ್ಯಕರ್ತರನ್ನು ನಿಯೋಜಿಸಿ ಸುಮ್ಮನಾಗದೇ ಪ್ರತೀ ವಾರಕ್ಕೊಮ್ಮೆ ಕಾರ್ಯಕರ್ತರ ಸಭೆ ನಡೆಸಿ ಅವರನ್ನು ಹುರಿದುಂಬಿಸಿದ ಕಾರಣದಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಆ ರೀತಿಯ ಅಭೂತ ಪೂರ್ವ ಫಲಿತಾಂಶಕ್ಕೆ ಕಾರಣವಾಯಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

sant5

ತಮ್ಮ ವಯಕ್ತಿಕ ಕಾರಣಿದಿಂದಾಗಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಪಕ್ಷವನ್ನು ತೊರೆದು ಹೋದಾಗ ತೆರೆಯ ಮರೆಯಲ್ಲಿ ನಿಂತು ಪಕ್ಷ ಹರಿದು ಹಂಚಿಹೋಗದಂತೆ ಸಂಘಟಿಸಿದ ಬಿ.ಎಲ್. ಸಂತೋಷ್ ಪಕ್ಷದ ಸ್ಥಳೀಯ ಕಾರ್ಯಕರ್ತರು ಮತ್ತು ದೆಹಲಿಯ ಮಟ್ಟದ ನಾಯಕರುಗಳಿಗೂ ಅಚ್ಚುಮೆಚ್ಚು. ಹಾಗಾಗಿ ಎಲ್ಲರೂ ಅವರನ್ನು ಪ್ರೀತಿಯಿಂದ ಸಂತೋಷ್ ಜೀ ಎಂದೇ ಸಂಬೋಧಿಸುತ್ತಾರೆ. ಮಾತು ಕಡಿಮೆ ಕೆಲಸಕ್ಕೆ ಹೆಚ್ಚಿನ ಆದ್ಯತೆ ಕೊಡುವ ಸಂತೋಷ್ ಅವರು ವಂಶಪಾರಂಪರ್ಯ ಮತ್ತು ಜಾತೀ ಆಧಾರಿತ ರಾಜಕಾರಣವನ್ನು ವಿರೋಧಿಸಿ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿಯುವ ಕಾರ್ಯಕರ್ತರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರಲ್ಲದೇ, ಹೊಸ ಪೀಳಿಗೆಯ ನಾಯಕರನ್ನು ಬೆಳೆಸಲು ಆದ್ಯತೆ ಕೊಡುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ, ಜನಾರ್ಧನ ಸ್ವಾಮಿ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮುಂತಾದ ಯುವಕರನ್ನು ಪ್ರವರ್ದಮಾನಕ್ಕೆ ತಂದರೆ, ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೂ ಪರಿಚಯವೇ ಇರದಿದ್ದ ಅಶೋಕ ಗಸ್ತಿ ಮತ್ತು ಈರಣ್ಣ ಕಡಾಡಿ ಎನ್ನುವಂತಹ ಕಾರ್ಯಕರ್ತರಿಗೆ ಮಣೆ ಹಾಕಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದವರು.

ರಾಜ್ಯ ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು ಎಂಟು ವರ್ಷಗಳ ಸಮರ್ಥವಾಗಿ ನಿಭಾಯಿಸಿದ್ದನ್ನು ಮೆಚ್ಚಿಕೊಂಡ ಅಮಿತ್ ಶಾ ಅವರು 2014ರಲ್ಲಿ ಸಂತೋಷ್ ಅವರನ್ನು ದಕ್ಷಿಣ ರಾಜ್ಯಗಳ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದಲ್ಲದೇ ಕಳೆದ ವರ್ಷ ಅವರನ್ನು ರಾಮ್‌ಲಾಲ್ ಅವರ ಉತ್ತರಾಧಿಕಾರಿಯಾಗಿ ಭಾರತೀಯ ಜನತಾ ಪಕ್ಷದ ಹೊಸ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಅತ್ಯುನ್ನತ ಜವಾಬ್ಧಾರಿಯನ್ನೇ ನೀಡಿದ್ದಾರೆ. ಸುಮಾರು ಹತ್ತು ಹನ್ನೆರಡು ವರ್ಷಗಳ ಕಾಲ ಬಿಜೆಪಿ ಪಕ್ಷಕ್ಕಾಗಿಯೇ ಸೇವೆ ಸಲ್ಲಿಸಿದ್ದ ಅವರನ್ನು ಮರಳಿ ಹಿಂಪಡೆಯಲು ಆರ್‌ಎಸ್‌ಎಸ್ ಕೂಡಾ ಉತ್ಸುಕವಾಗಿತ್ತು ಎಂದರೆ ಅದು ಅವರ ಕಾರ್ಯತತ್ಪರತೆ ಮತ್ತು ಜನಪ್ರಿಯತೆಯನ್ನು ತೋರುತ್ತದೆ.

sant2

ಯಡಿಯೂರಪ್ಪನವರು ಮರಳಿ ಬಿಜೆಪಿಗೆ ಹಿಂದಿರುಗಿದ ನಂತರ ಅವರು ಪಕ್ಷದಲ್ಲಿ ಪ್ರಶ್ನಾತೀತ ನಾಯಕರಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳ ಶ್ರಮಿಸಿದ್ದಾರಾದರೂ ಬಿಜೆಪಿ ಪಕ್ಷದಲ್ಲಿರುವ 75 ವಯಸ್ಸಿನ ವಯೋಮಿತಿಯನ್ನು ನೋಡುವುದಾದರೇ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅವರ ನಂತರ ಪಕ್ಷವನ್ನು ಮುನ್ನೆಡಸಬಲ್ಲ ಸಮರ್ಥ ನಾಯಕರು ಯಾರಿದ್ದಾರೆ ಎಂದು ಹಿಂದಿರುಗಿ ನೋಡಿದರೇ ಸದ್ಯದ ಪರಿಸ್ಥಿತಿಯಲ್ಲಿ ನಿಜವಾಗಿಯೂ ಶೂನ್ಯವೇ ಕಾಣಿಸುತ್ತದೆ. ಯಡಿಯೂರಪ್ಪನವರ ಸಂಪುಟದಲ್ಲಿರುವ ಬಹುತೇಕ ನಾಯಕರು ವಯಕ್ತಿಯ ಬಲದಿಂದ ಆಯ್ಕೆಯಾಗಿದ್ದಕ್ಕಿಂತಲೂ ಮೋದಿ ಮತ್ತು ಯಡಿಯೂರಪ್ಪನವರ ಹೆಸರಿನ ಬಲದಿಂದ ಆಯ್ಕೆಯಾದವರೇ ಹೆಚ್ಚು ಇನ್ನೂ ಕೆಲವರು ಹಣ ಬಲದಿಂದ ಆಯ್ಕೆಯಾಗಿದ್ದರೆ ಮತ್ತೆ ಕೆಲವರು ತಮ್ಮ ಕ್ಷೇತ್ರದ ಹೊರಗಡೆ ಪರಿಚಯವೇ ಇಲ್ಲ. ಮತ್ತೆ ಹಲವರು ಆರು ಕೊಟ್ಟರೆ ಅತ್ತೇ ಕಡೇ ಮೂರು ಕೊಟ್ಟರೆ ಸೊಸೇ ಕಡೇ ಎನ್ನುವ Adujstment politicians ಇಂತಹವರೆಲ್ಲರ ಮುಂದೆ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಕಾರ್ಯಕರ್ತರ ಪರಿಚಯವಿರುವ, ತಾಳ್ಮೆವಂತ, ಬುದ್ಧಿವಂತ, ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತುಳು ಭಾಷೆಗಳಲ್ಲಿ ನಿರ್ಗಳವಾಗಿ ಮಾತನಾಡಬಲ್ಲ ಉತ್ತಮ ವಾಗ್ಮಿ, ನಿಷ್ಠುರವಾದಿ, ಸುತ್ತೀ ಬಳಸೀ ಹೇಳದೇ ನೇರವಾಗಿ ಹೇಳಬಲ್ಲವ ಮತ್ತು ಎಲ್ಲದ್ದಕ್ಕಿಂತಲೂ ಇದುವರೆಗೂ ತನಗೆ ವಹಿಸಿದ ಎಲ್ಲಾ ಕೆಲಸಗಳನ್ನೂ ಅತ್ಯುತ್ತಮವಾಗಿ ನಿಭಾಯಿಸಿರುವ, ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಆಜನ್ಮ ಬ್ರಹ್ಮಚಾರಿಯಾಗಿ ಮೋದಿಯವರ ನಾ ಖಾವೂಂಗಾ ಮತ್ತು ನಾ ಖಾನೇ ದೂಂಗ ಎನ್ನುವ ಮಾತಿಗೆ ಅನ್ವರ್ಥವಾಗಿರುವ ಸಂತೋಷ್ ಜೀ ಅವರನ್ನೇ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನಾಗಿ ಏಕೆ ಬಿಂಬಿಸ ಬಾರದು?

sanಸಂತೋಷ್ ಬಿ ಎಲ್ ಒಬ್ಬ ಸರಳ ಮತ್ತು ಸಜ್ಜನ ವ್ಯಕ್ತಿ. ಬಹಳ ಓದಿಕೊಂಡಿದ್ದಾರೆ. ಪರಿಸರ, ರಕ್ಷಣೆ, ಚೀನಾ ಸಂಬಂಧ, ವಿಭಿನ್ನ ತತ್ವಗಳು ಹೀಗೆ ಯಾವುದೇ ವಿಷಯವಾಗಲೀ ಅದರ ಆಳವಾಗಿ ಅಧ್ಯಯನ ಮಾಡಿರುವವರು ಮತ್ತು ಅದರ ಕುರಿತಂತೆ ನಿರರ್ಗಳವಾಗಿ ಮಾನತಾಡಬಲ್ಲರು. ಈಗ Boycot china ಎಂಬ ಅಭಿಯಾನ ಎಲ್ಲಾ ಕಡೆಯಲ್ಲಿಯೂ ಜಾಗೃತವಾಗಿದ್ದರೇ, ಬಿ ಎಲ್ ಸಂತೋಷ್ ಮೂರು ವರ್ಷಗಳ ಹಿಂದೆಯೇ ಇದರ ಬಗ್ಗೆ Know chaina and No chaina (ಇಂದಿಗೂ YouTube ಚಾನೆಲ್ಲಿನಲ್ಲಿ ಕೇಳಬಹುದಾಗಿದೆ) ಎಂದು ಚೀನಾದ ಕುಕೃತ್ಯಗಳ ಬಗ್ಗೆ ಯುವ ಜನತೆಗೆ ಜನಜಾಗೃತಿ ಮೂಡಿಸುವ ಅಭಿಯಾನವನ್ನು ನಡೆಸಿದ್ದದ್ದು ಅವರ ದೂರದರ್ಶಕತ್ವಕ್ಕೆ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿಯ ಶಕ್ತಿ ಸಾಮರ್ಥವನ್ನು ಕ್ಷಣಾರ್ಧದಲ್ಲಿಯೇ ಅಳೆದು ಯಾರಿಗೆ ಯಾವ ಕೆಲಸವನ್ನು ವಹಿಸಬೇಕೆಂದು ಸರಿಯಾಗಿ ನಿರ್ಧರಿಸಿ, ಅವರಿಂದ ಕೆಲಸವನ್ನು ಹೇಗೆ ಸಮರ್ಥವಾಗಿ ಮಾಡಿಸಿಕೊಳ್ಳುವ ಛಾತಿ ಅವರಿಗೆ ಕರಗತವಾಗಿದೆ.

ಅವರ ಸಂಘಟನಾ ಚಾತುರ್ಯತೆ, ನಾಯಕತ್ವದ ಗುಣ, ಯಾವುದೇ ಪ್ರಭಲ ಜಾತಿಯ ಹಂಗಿಲ್ಲದ, ತಮ್ಮ ಕುಟುಂಬದವರೇ ಮುಂಚೂಣಿಯಲ್ಲಿರಬೇಕು ಎಂದು ಭಾವಿಸುವ ನಾಯಕರಿಗಿಂತ ಕೌಟುಂಬಿಕ ನಂಟು ಇಲ್ಲದ ವ್ಯಕ್ತಿಯಾಗಿರುವ ಕಾರಣ ಅವರೊಬ್ಬ ಯೋಗಿ, ಫಡ್ನವಿಸ್, ಖಟ್ಟರ್ ಅಥವಾ ಸ್ವತಃ ನರೇಂದ್ರ ಮೋದಿಯಂತೆಯೇ ಮತ್ತೊಬ್ಬ ಸಮರ್ಥ ನಾಯಕನಾಗಬಲ್ಲ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ.

sant1

ಸಂಸ್ಕಾರವೇ ಇಲ್ಲದೇ, ತಮ್ಮ ಸಂಸಾರಕ್ಕಾಗಿಯೇ ದಿನದ 24 ಗಂಟೆಗಳೂ ರಾಜಕಾರಣ ಮಾಡುವವರೇ ಹೆಚ್ಚಾಗಿರುವಾಗ, ಸಂಸಾರವೇ ಇಲ್ಲದೇ, ಸಂಸ್ಕಾರವಂತನಾಗಿ ಪ್ರಜೆಗಳ ಹಿತಕ್ಕಾಗಿ 18 ಗಂಟೆಗಳ ಕಾಲ ದುಡಿಯಬಲ್ಲ ಛಾತಿ ಇರುವ ಸರಳ, ಸಜ್ಜನ, ಸಂತ ಸೂಕ್ತ ಎನಿಸುತ್ತದೆ ಅಲ್ಲವೇ?

ಏನಂತೀರೀ?

2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

ಲೋಕಸಭಾ ಚುನಾವಣೆಗೆ ಇನ್ನೂ 4 ವರ್ಷಗಳು ಇರುವಾಗ ಇಂತಹ ಪ್ರಶ್ನೆ ಸೂಕ್ತವೇ ? ಎಂದು ಎಲ್ಲರಿಗೂ ಅನಿಸಬಹುದು. ಆದರೆ ಪ್ರಸ್ತುತ ದೇಶದ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವನ್ನು ಗಮನಿಸಿದರೆ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಇನ್ನೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ? ಅಥವಾ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆಯೇ? ಎಂಬುದರ ಬಗ್ಗೆ ಅನೇಕ ಜಿಜ್ಞಾಸೆಗಳು ಮೂಡುತ್ತಿರುವುದು ಸುಳ್ಳಲ್ಲ. ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ಅವಲೋಕನ ಮಾಡಿದಲ್ಲಿ , ಕಾಂಗ್ರೆಸ್ ಸಹಿತ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಸಂಘಟಿತವಾಗಿ, ನಿಸ್ವಾರ್ಥವಾಗಿ ಮತ್ತು ದೇಶದ ಹಿತ ದೃಷ್ಟಿಯಿಂದ ಕಾರ್ಯ ನಿರ್ವಹಿಸದ ಕಾರಣ ಯಾವುದೇ ವಿರೋಧ ಪಕ್ಷಗಳು ಸ್ವಸಾಮರ್ಥ್ಯದಿಂದ ಹತ್ತರಿಂದ ಹದಿನೈದರ ಸಂಖ್ಯೆಗಿಂತ ಹೆಚ್ಚಿಗೆ ದಾಟಲು ಯಾವುದೇ ಅವಕಾಶವಿಲ್ಲವಾಗಿದೆ ಮತ್ತು ಈಗಿರುವ ಶಕ್ತಿಯನ್ನೇ ಉಳಿಸಿಕೊಳ್ಳುವುದೂ ಆ ಪಕ್ಷಗಳಿಗೆ ಬಹಳ ತ್ರಾಸದಾಯಕವಾಗಿದೆ ಎಂದರೆ ತಪ್ಪಾಗಲಾರದು.

ಸದ್ಯದ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವರ್ತಿಸುವ ರೀತಿ ರಾಜಕೀಯದಲ್ಲಿ ಅವರಿಗೆ ಹೆಚ್ಚಿನ ಅನುಕೂಲವನ್ನೇನೂ ತಂದು ಕೊಡುತ್ತದೆ ಎನ್ನಲಾಗುತ್ತಿಲ್ಲ . ಆ ಎಲ್ಲಾ ವಿರೋಧ ಪಕ್ಷಗಳಿಗೆ ಬಿಜೆಪಿ ಪಕ್ಷವನ್ನು ವಿರೋಧಿಸಬೇಕೋ ಅಥವಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಬೇಕೋ ಎಂಬ ಗೊಂದಲದಲ್ಲಿಯೇ ಹೆಚ್ಚು ಸಮಯವನ್ನು ಮತ್ತು ಅವಕಾಶವನ್ನು ಹಾಳುಮಾಡುತ್ತಿರುವುದು ಬಿಜೆಪಿ ಪಕ್ಷಕ್ಕೆ ಅನುಕೂಲಕರವಾಗಿದೆ.

ಈ ಎಲ್ಲಾ ಪಕ್ಷಗಳಿಗೂ ಮುಂದಿನ ಸಾರ್ವತ್ರಿಕ ಚುನಾವಣೆಯು ಬಿಜೆಪಿ ವಿರುದ್ಧ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಮಾಡು ಇಲ್ಲವೇ ಮಡಿ ಎಂಬ ಚುನಾವಣೆಯಾಗಿದೆ ಎಂದರೂ ತಪ್ಪಾಗಲಾರದು. ಈಗಾಗಲೇ ಸಂಸತ್ತಿನ ಕೆಳಮನೆ ರಾಜ್ಯಸಭೆಯಲ್ಲಿ ಅನೇಕ ಪಕ್ಷಗಳು ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳ ತೊಡಗಿದೆ. 2014 ರಲ್ಲಿ ಅದು ಬಿಎಸ್ಪಿ ಮತ್ತು 2019 ರಲ್ಲಿ ಲೋಕದಳ ಸದಸ್ಯರ ಸಂಖ್ಯೆ ರಾಜ್ಯಸಭೆಯಲ್ಲಿ ನಗಣ್ಯವಾಗಿದೆ. ಇನ್ನೂ 2024 ರಲ್ಲಿ ಬಹುತೇಕ ವಿರೋಧ ಪಕ್ಷಗಳ ಸಂಖ್ಯಾ ಬಲಾಬಲಗಳು ಕ್ಷೀಣವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾಗಿದೆ. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತನ್ನ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಂಡು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಬಹುತೇಕ ಅಂಶಗಳನ್ನು ಕಾರ್ಯರೂಪಕ್ಕೆ ತರಲು ಬಿಜೆಪಿಗೆ ಅನುಕೂಲವಾಗುತ್ತದೆ.
.
ಯಾವಾಗ ಈ ಎಲ್ಲಾ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಚುನಾಚಣೆಯಲ್ಲಿ ಬಿಡಿ ಬಿಡಿಯಾಗಿ ಸ್ಪರ್ಧಿಸುತ್ತವೋ ಆಗ ಅವರ ಸಾಂಪ್ರದಾಯಿಕ ಮತ್ತು ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಮತ್ತಷ್ಟು ವಿಭಜನೆಯಾಗಿ Article 370, 35A, ರಾಮಮಂದಿರ ನಿರ್ಮಾಣ ಮತ್ತು ಅಷ್ಟರಲ್ಲಿ ಏನಾದರೂ ಪಾಕೀಸ್ಥಾನ ಆಕ್ರಮಿತ ಭಾರತವೂ ನಮ್ಮ ಕೈವಶವಾದಲ್ಲಿ ಹಿಂದೂ ಮತಗಳು ಧೃವೀಕರಣಗೊಂಡು ಬಿಜೆಪಿ ಮತ್ತು ಎನ್‌ಡಿಎ ಸುಮಾರು 400+ ಸ್ಥಾನಗಳನ್ನು ದಾಟಿದರೂ ಆಶ್ವರ್ಯವೇನಿಲ್ಲ .

ಹಾಗಾದರೆ , ಮಾಯಾವತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ರಾಹುಲ್ ಗಾಂಧಿಯಂತಹ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಗಳು ಸುಮ್ಮನಿರುತ್ತಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವುದು ಸಹಜ. ಹಾಗಾಗಿ ಅವರೆಲ್ಲರ ಬಲಾಬಲಗಳನ್ನೇ ವಿಶ್ಲೇಷಣೆ ಮಾಡೋಣ ಬನ್ನಿ.

ರಾಹುಲ್, ಅಖಿಲೇಶ್, ಮಾಯಾವತಿ ಮತ್ತು ಮಮತಾ ಅವುರುಗಳಲ್ಲದೇ ಅರವಿಂದ್ ಕೇಜ್ರಿವಾಲ್, ನವೀನ್ ಪಟ್ನಾಯಕ್, ಕೆಸಿಆರ್, ಜಗನ್ ಮತ್ತು ಸ್ಟಾಲೀನ್ ಕೂಡಾ ಈ ಸ್ಪರ್ಧೆಯಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಾರಾದರೂ. ಇವರೆಲ್ಲರೂ ರಾಷ್ಟ್ರ ರಾಜಕಾರಣಿಕ್ಕಿಂತ ತಮ್ಮ ರಾಜ್ಯ ರಾಜಕೀಯದತ್ತಲೇ ಹೆಚ್ಚಿನ ಗಮನವನ್ನು ವಹಿಸುತ್ತಾರೆ. ಶಿವಸೇನೆ ಮತ್ತು ಎನ್.ಸಿ.ಪಿ. ಪಕ್ಷಗಳು ಮಹಾರಾಷ್ಟ್ರದ ಹೊರತಾಗಿ ಹೆಚ್ಚಿನ ಪ್ರಭಾವಶಾಲಿಯಾಗಿಲ್ಲ ಮತ್ತು ಇತ್ತೀಚಿನ ಅವರ ಅನೈತಿಕ ಮೈತ್ರಿಯೂ ಸಹಾ ಜನರನ್ನು ಕೆರಳಿಸಿ ಮುಂದಿನ ಚುನಾವಣೆಯಲ್ಲಿ ಆ ಎರಡೂ ಪಕ್ಷಗಳಿಗೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಲೂ ಬಹುದು. ರಾಜ್ಯ ರಾಜಕಾರಣದಿಂದ ರಾಷ್ಟ್ರರಾಜಕಾರಣಕ್ಕೆ ಜಿಗಿಯಲು ಹೋಗಿ, ರಾಜ್ಯದಲ್ಲೂ ಮತ್ತು ರಾಷ್ಟ್ರದಲ್ಲೂ ಸೋತು ಸುಣ್ಣವಾದ ಚಂದ್ರಬಾಬು ನಾಯ್ಡು ಕಥೆ ಇವರೆಲ್ಲರಿಗೂ ಪಾಠವಾಗಿದೆ ಎನ್ನುವುದು ಸತ್ಯವೇ ಸರಿ. ಅದೂ ಅಲ್ಲದೇ ಈ ನಾಯಕರೆಲ್ಲರೂ ತಮ್ಮ ರಾಜ್ಯದ ಹೊರತಾಗಿ ರಾಷ್ಟ್ರೀಯ ನಾಯಕರುಗಳಾಗಿ ಗುರುತಿಸಿಕೊಳ್ಳದಿರುವ ಕಾರಣ ಅವರುಗಳನ್ನು ಪ್ರಧಾನಿ ಹುದ್ದೆಗೆ ಸದ್ಯದ ಪರಿಸ್ಥಿತಿಯಲ್ಲಿ ಪರಿಗಣಿಸಲು ಸಾಧ್ಯವಾಗದು.

ಅಖಿಲೇಶ್ ಯಾದವ್

sp

ಅಪ್ಪನ ಬಲದಿಂದ ಅಧಿಕಾರಕ್ಕೇರಿ ಅಧಿಕಾರದ ಕೊನೆಯ ಹಂತದಲ್ಲಿ ಅಪ್ಪನ ವಿರುದ್ಧವೇ ಹೋರಾಟಮಾಡಬೇಕಾಗಿ ಬಂದ ಕಾರಣ ಅವರರಿನ್ನೂ ರಾಷ್ಟ್ರೀಯ ರಾಜಕಾರಣವನ್ನು ನಿಭಾಯಿಸುವಷ್ಟು ಪ್ರಬುದ್ಧರಾಗಿಲ್ಲ. ರಾಷ್ಟ್ರೀಯ ರಾಜಕಾರಣಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಲು ಅವರಿಗೆ ಹೆಚ್ಚಿನ ಸಮಯ ಮತ್ತು ಅನುಭವ ಬೇಕು. ಅವರ ಹಿಂದಿನ ಯಶಸ್ಸಿಗೆ ಕಾರಣವಾಗಿದ್ದು ಅವರ ರಾಜಕೀಯ ರಾಜವಂಶ. ಅವರ ತಂದೆ , ಚಿಕ್ಕಪ್ಪ ಮತ್ತು ಅವರ ಕುಟುಂಬದ ವಿವಾದಗಳ ನಂತರ, ಉತ್ತರ ಪ್ರದೇಶದ ಜನರು ಸಮಾಜವಾದಿ ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. 2012 ರಲ್ಲಿ ಅವರು ಯುಪಿ ಸಿಎಂ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದಾಗ, ಈತನಿಗೆ ಭಾರತೀಯ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದೇ ನಂಬಲಾಗಿತ್ತಾದರೂ ಆ ಅವಕಾಶವನ್ನು ಆತ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕಾರಣ ಆತ ತನ್ನ ಪ್ರಭಾವವನ್ನು ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ಮಾತ್ರವೇ ಸೀಮಿತಗೊಳಿಕೊಂಡರು. ಇನ್ನು ಅವರ ಯಾದವೀ ಕೌಟುಂಬಿಕ ವಿವಾದಗಳಿಂದಾಗಿಯೇ 2017 ರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸಿ ಅವರ ಸಾಂಪ್ರದಾಯಿಕ ಮತಗಳೇ ವಿಭಜಿತವಾಗಿ ಬಹಳ ಹೀನಾಯವಾಗಿ ಸೋತು ಹೋದದ್ದು ಈಗ ಇತಿಹಾಸ. ಸೋತ ನಂತರ ಬುದ್ಧಿ ಬಂದಂತೆ ಕಂಡು ಕಾಂಗ್ರೇಸ್, ಆರ್‌ಎಲ್‌ಡಿ ಮತ್ತು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆ ಗೋರಖ್‌ಪುರವನ್ನು ಗೆದ್ದರಾದರೂ, ಅದೇ ಮೈತ್ರಿಯನ್ನು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಂದುವರಿಸಿಕೊಂಡು ಹೋಗಲಾರದೇ ಕೇವಲ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡ ಅನುಕೂಲ ಸಿಂಧುರಾಜಕಾರಣವನ್ನು ಜನಾ ಸಾರಾಸಗಟಾಗಿ ತಿರಸ್ಕರಿಸಿದರು. ಪ್ರಸ್ತುತ ಯೋಗಿ ಆದಿತ್ಯನಾಥರ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತಹ ಡೇರ್ ಡೆವಿಲ್ ರಾಜಕಾರಣ ನೋಡಿದರೆ ಉತ್ತರ ಪ್ರದೇಶದ ಜನ ಮತ್ತೊಮ್ಮೆ ಯೋಗಿ ಆದಿತ್ಯನಾಥರಿಗೇ ಬಹುಮತ ಕೊಡುವುದರಲ್ಲಿ ಸಂದೇಹವೇ ಇಲ್ಲ.

ಮಾಯಾವತಿ

bsp

ಕಾಂಶೀರಾಮ್ ಅವರ ಮಾನಸಪುತ್ರಿ ಎಂದೇ ಪ್ರವರ್ಧಮಾನಕ್ಕೆ ಬಂದ ಮಾಯವಾತಿ ಆರಂಭದಲ್ಲಿ ದಲಿತವರ್ಗದ ನಾಯಕಿಯಾಗಿ ಹೊರಹೊಮ್ಮಿ ಒಮ್ಮೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ನಂತರ ಅಧಿಕಾರದ ರುಚಿಗಾಗಿ ತನ್ನ ಪಕ್ಷದ ಧ್ಯೇಯಗಳಿಗೇ ತಿಲಾಂಜಲಿ ಕೊಟ್ಟು ದಲಿತರ ಜೊತೆಗೆ ಮುಂದುವರಿದ ಜನಾಂಗದವರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಏಕಪಕ್ಷೀಯವಾಗಿ ಅಧಿಕಾರಕ್ಕೆ ಬಂದು ಎಲ್ಲರ ಹುಬ್ಬೇರಿಸಿದ್ದರೂ ನಂತರದ ದಿನಗಳಲ್ಲಿ ಅದೇ ಛವಿಯನ್ನು ಉಳಿಸಿಕೊಳ್ಳಲು ವಿಫಲಾರಾದರು. ಹೇಳಿ ಕೇಳಿ ಈಕೆ ದಲಿತ ನಾಯಕಿ ಈಕೆಯನ್ನು ನಂಬಿದಲ್ಲಿ ತಾವು ಕೆಡುತ್ತೇವೆ ಎಂದು ಮುಂದುವರಿದ ಜನಾಂಗದವರೂ ಮತ್ತು ಈಕೆ ಮುಂದುವರಿದ ಜನಾಂಗದವರ ಓಟಿಗಾಗಿ, ದಲಿತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾಳೆ ಎಂದು ದಲಿತರೂ ಭಾವಿಸಿದ್ದರಿಂದ ಇಬ್ಬರೂ ಆಕೆಯನ್ನು ನಡು ನೀರಿನಲ್ಲಿ ಕೈಬಿಟ್ಟ ಕಾರಣ, ರಾಜಕೀಯದಲ್ಲಿ ಆಕೆಯ ಸ್ಥಿತಿ ಅತಂತ್ರವಾಗಿದೆ. ಎಲ್ಲದ್ದಕ್ಕೂ ಹೆಚ್ಚಾಗಿ ಆಕೆ ತನ್ನ ಕುಟಂಬದ ಸದಸ್ಯರನ್ನು ಹೊರತಾಗಿ ಯಾರನ್ನೂ ನಂಬದ ಕಾರಣ ಆಕೆಯ ಜೊತೆ ದೀರ್ಘಾವಧಿಗೆ ಯಾರೂ ನಿಲ್ಲಲು ತಯಾರಿಲ್ಲ. ವಿಧಾನ ಸಭೆ ಚುನಾವಣೆ ಸೋತಾಗ ಲೋಕಸಭೆ ಪ್ರವೇಶಿಸುವುದು, ಲೋಕಸಭಾ ಚುನಾವಣೆಯಲ್ಲಿ ಸೋತಾಗ ವಿಧಾನ ಸಭೆಗೆ ಪ್ರಯತ್ನ ಮಾಡುವ ಎಡಬಿಡಂಗಿ ರಾಜಕಾರಣವನ್ನು ಜನರು ಮೆಚ್ಚದೇ ಆಕೆಯನ್ನೂ ಎರಡೂ ಕಡೆಯಲ್ಲೂ ಕಡೆಗಣಿಸಿ ಮನೆಯಲ್ಲಿ ಕೂರಿಸಿರುವುದು ಸದ್ಯದ ಆಕೆಯ ಸ್ಥಿತಿಗತಿಯಾಗಿದೆ.

ಮಮತಾ ಬ್ಯಾನರ್ಜಿ

TC

ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ಕಮ್ಯೂನಿಷ್ಟರ ಕಪಿ ಮುಷ್ಠಿಯಲ್ಲಿ ಪಶ್ಚಿಮ ಬಂಗಾಳ ನಲುಗಿ ಹೋಗಿದ್ದಾಗ ಕ್ರಾಂಗೇಸ್ ಪಕ್ಷದಲ್ಲಿದ್ದ ಅಂದಿನ ಯುವ ನಾಯಕಿ ಮಮತಾ ಪಶ್ಚಿಮ ಬಂಗಾಳದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದರು. ಕಾಂಗ್ರೇಸ್ ಪಕ್ಷದಿಂದ ಹೊರಬಂದು ತನ್ನದೇ ತೃಣಮೂಲ ಕಾಂಗ್ರೇಸ್ ಪಕ್ಷ ಕಟ್ಟಿದಾಗ ಅಲ್ಲಿಯ ಜನರು ಬಹಳ ಆಶಾಭಾವನೆಯಿಂದ ಆಕೆಗೆ ಅಭೂತಪೂರ್ವ ಜಯವನ್ನು ಕೊಟ್ಟು ಆಕೆಯನ್ನು ಅಧಿಕಾರಕ್ಕೆ ತಂದರು. ಅದರೆ ಈ ಸಂತೋಷ ಬಹಳ ಕಾಲ ಉಳಿಯದೇ, ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ ಪಶ್ಚಿಮ ಬಂಗಾಳದ ಪ್ರಜೆಗಳದ್ದಾಯಿತು. ತೃಣಮೂಲ ಕಾರ್ಯಕರ್ತರ ಗೂಂಡಾಗಿರಿ ಕಮ್ಯುನಿಸ್ಟ್ ಪಕ್ಷಕ್ಕಿಂದಲೂ ಅದೆಷ್ಟೋ ಪಟ್ಟು ಹೆಚ್ಚಿನ ರಾಕ್ಷಸೀಯ ಪ್ರವೃತ್ತಿಯಾಗಿದೆ. ಒಮ್ಮೆ ಆಕೆ ಅಧಿಕಾರಕ್ಕೆ ಬಂದನಂತರ ಅಲ್ಲಿಯ ಯಾವ ಚುನಾವಣೆಗಳು ನಿಶ್ಪಕ್ಷಪಾತವಾಗಿ ನಡೆದ ಉದಾಹರಣೆಯೇ ಇಲ್ಲ. ಇತ್ತೀಚೆಗಂತೂ ಅಧಿಕಾರದ ಉಳಿವಿಗಾಗಿ ಅತೀಯಾದ ಅಲ್ಪಸಂಖ್ಯಾತರ ತುಷ್ಟೀಕರಣ, ಆಕೆಯ ವಿಪರೀತವಾದ ಹಿಂದೂಗಳ ವಿರುದ್ಧ ಧಮನಕಾರಿಯಾದ ಹೇಳಿಕೆಗಳು ಮತ್ತು ದೌರ್ಜನ್ಯಗಳು ಹೆಚ್ಚುತ್ತಿರುವ ಕಾರಣಗಳಿಂದಾಗಿ ಅಕೆಯ ಪ್ರಭಾವ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕಳೆದ ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿ ಆಕೆಯ ಭದ್ರಕೋಟೆಯನ್ನು ಛಿದ್ರಗೊಳಿಸಿ ಹದಿನೈದಕ್ಕೂ ಹೆಚ್ಚಿನ ಸಾಂಸದರನ್ನು ಗೆಲ್ಲಿಸಿಕೊಳ್ಳಲು ಸಫಲರಾಗಿರುವುದು ಆಕೆಯ ನಿದ್ದೆಯನ್ನುಗೆಡಿಸಿರುವುದಂತೂ ಸುಳ್ಳಲ್ಲ. ಇತ್ತೀಚಿನ ವರದಿಯ ಪ್ರಕಾರ ಹಿಂದೂಗಳ ಮೇಲೆ ಹಲ್ಲೆಗಳನ್ನು ರಕ್ಷಿಸಲು ಆಕೆ ವಿಫಲರಾಗಿರುವುದರಿಂದ ಕೇಂದ್ರ ಸರ್ಕಾರ ಮಿಲಿಟರಿ ಸೈನ್ಯವನ್ನು ಕಳುಹಿಸಿರುವುದು ಆಕೆಯನ್ನು ಮತ್ತಷ್ಟೂ ಉಗ್ರೆ ಯನ್ನಾಗಿಸಿದೆ. ಸದಾಕಾಲವೂ ಕುರುಡು ದ್ವೇಷದ ಕಾರಣದಿಂದಾಗಿ ಕೇಂದ್ರಸರ್ಕಾರದ ಪ್ರತೀ ನೀತಿಗಳನ್ನು ವಿರೋಧಿಸುತ್ತಿರುವುದೂ ಅಲ್ಲಿಯ ಜನರ ವಿರೋಧಕ್ಕೆ ಕಾರಣವಾಗಿರುವ ಕಾರಣ ಮುಂದಿನ ವರ್ಷದ ಆರಂಭದಲ್ಲಿ ಬರುವ ವಿಧಾನಸಭೆ ‍ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರುವ ಎಲ್ಲಾ ಸಂಭವವೂ ಹೆಚ್ಚಾಗಿದೆ.

ರಾಹುಲ್ ಗಾಂಧಿ

cong

ಇವರ ಬಗ್ಗೆ ಮತ್ತು ಇವರ ಸಾಮರ್ಥ್ಯದ ಬಗ್ಗೆ ಈಗಾಗಲೇ ಹಲವಾರು ಲೇಖನದಲ್ಲಿ ಸವಿರವಾಗಿ ವಿಶ್ಲೇಷಣೆ ಮಾಡಲಾಗಿದೆ. ದೇಶದ ಪ್ರಭಾವೀ ರಾಜಕಾರಣದ ವಂಶದಲ್ಲಿ ಹುಟ್ಟಿರುವ ಏಕೈಕ ಕಾರಣದಿಂದಾಗಿಯೇ ಯಾವುದೇ ಬುದ್ಧಿ ಮತ್ತೆ ಇಲ್ಲದಿದ್ದರೂ ಅಧಿಕಾರಕ್ಕೇ ಎರಬಹುದೆಂಬ ಭ್ರಮಾಲೋಕದಲ್ಲಿ ತೇಲಾಡುತ್ತಿರುವ ಮನುಷ್ಯ. ಭಾರತೀಯ ಪುರುಷರ ವಯಸ್ಸು ಐವತ್ತಾದರೇ ತಮ್ಮ ಇಳಿವಯಸ್ಸಿನ ಆರಂಭ ಕಾಲ ಮತ್ತು ತಮ್ಮ ಮಕ್ಕಳ ಶಿಕ್ಷಣ, ಮದುವೆಯಲ್ಲಿ ತಮ್ಮನ್ನು ತೊಡಗಿಸುವ ಕಾಲ. ಆದರೆ ಈತನ ವಯಸ್ಸು ಐವತ್ತಾದರೂ ಆತ, ಇನ್ನೂ ತನ್ನ ಸಂಸಾರವನ್ನೇ ಆರಂಭಿಸಲು ಗೊಂದಲದಲ್ಲಿರುವ ಯುವನಾಯಕ. ತನ್ನ ವಯಕ್ತಿಯ ಜೀವನವನ್ನೇ ಸರಿಪಡಿಸಿಕೊಳ್ಳಲಾಗದವ ದೇಶವನ್ನು ಹೇಗೆ ನೋಡಿಕೊಳ್ಳಬಲ್ಲ ಎಂಬುದನ್ನು ಜನರು ಹೇಳುತ್ತಿರುವುದರಲ್ಲಿ ಸುಳ್ಳಿಲ್ಲ ಅಲ್ಲವೇ? ಸುಮ್ಮನೆ ರಾಜಕೀಯದಲ್ಲಿ ತನಗೆ ಭವಿಷ್ಯವಿಲ್ಲ ಎಂಬುದನ್ನು ಅರಿತು ಹತ್ತು ತಲೆಮಾರುಗಳು ಕರಗದ ಆಸ್ತಿಯನ್ನು ಸಂಭಾಳಿಸಿಕೊಂಡು ನೆಮ್ಮದಿಯಾಗಿರುವುದು ಆತನಿಗೂ ಮತ್ತು ದೇಶಕ್ಕೂ ಒಳಿತು.

ap

ಈ ಎಲ್ಲಾ ಕಾರಣಗಳಿಂದಾಗಿ ಮೇಲೆ ತಿಳಿಸಿದ ಯಾವ ನಾಯಕರಿಗೂ ಸದ್ಯದ ಪರಿಸ್ಥಿತಿಯಲ್ಲಿ ಪ್ರಧಾನಿಯಾಗುವ ಹೆಚ್ಚಿನ ಅವಕಾಶವು ಇಲ್ಲವೆಂದೇ ಸ್ಪಷ್ಟವಾಗಿ ತೋರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವು ಬಾಡಿಗೆ ಭಂಟರನ್ನು ನೇಮಿಸಿಕೊಂಡು ಅವರ ಮೂಲಕ ಟ್ರೋಲ್ ಸ್ಟಾರ್ ಮಾಡುವ ವಿಧಾನದಿಂದ ಅಥವಾ ಮೋದಿಯವರನ್ನು ಹೀನಾಮಾನವಾಗಿ ಅವಮಾನ ಮಾಡಿಸುವುದರಿಂದ ತಾವು ಪ್ರಧಾನಿ ಪಟ್ಟಕ್ಕೆ ಏರಬಹುದೆಂದು ಯಾರದರೂ ಎಣಿಸಿದ್ದಲ್ಲಿ ಅದು ಭ್ರಮೆ ಎಂದಷ್ಟೇ ಹೇಳಬಹುದು. ಜನಾ ಟ್ರೋಲ್ ಗಳನ್ನು ನೋಡಿ ಆನಂದಿಸುತ್ತಾರೆಯೇ ಹೊರತು ಅವುಗಳಿಂದ ಪ್ರಭಾವಿತರಾಗಿ ಮತ ಚಲಾಯಿಸುವುದಿಲ್ಲ. ಏಕೆಂದರೆ ಭಾರತೀಯರು ಈಗ ಹೆಚ್ಚು ಪ್ರಭುದ್ಧರಾಗುತ್ತಿದ್ದಾರೆ. ಯಾರು ಅಭಿವೃದ್ದಿಯ ಪರವಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೋ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದಕ್ಕೆ ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ವಿಭಿನ್ನವಾದ ರೀತಿಯ ಫಲಿತಾಂಶಗಳೇ ಸಾಕ್ಷಿಯಾಗಿದೆ.

ಈ ಎಲ್ಲಾ ಸಕಾರತ್ಮಕ ಅಂಶಗಳಿಂದ ಬಿಜೆಪಿ ಅತ್ಯಂತ ಸುಲಭವಾಗಿ 2024 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರುತ್ತೇವೆ ಎಂದು ಭಾವಿಸಿದರೂ ತಪ್ಪಾಗುತ್ತದೆ. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಮೋದಿ, ಶಾ, ಯೋಗಿ, ಪಿಯೂಶ್ ಮುಂತಾದ ಬೆರಳೆಣಿಕೆಯ ನಾಯಕರ ಕಾರ್ಯತತ್ಪರತೆಗಳಿಗೆ ಮಾತ್ರವೇ ಜನ ಮನ್ನಣೆ ತೋರುತ್ತಿದ್ದಾರೆ ಮತ್ತು ಸ್ಥಳೀಯ ನಾಯಕರುಗಳ ಬಗ್ಗೆ ಇನ್ನೂ ಅವರಲ್ಲಿ ಅಸಮಧಾನವಿದೆ. ಮುಂದಿನ 4 ವರ್ಷಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದಿದ್ದಲ್ಲಿ ಅಧಿಕಾರವು ಗಗನ ಕುಸುಮವಾಗಿ ಮಹಾರಾಷ್ಟ್ರದಲ್ಲಿ ಆದಂತೆ ಕೇಂದ್ರದಲ್ಲೂ ಎಲ್ಲಾ ಪಕ್ಷಗಳು ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಮತ್ತೊಮ್ಮೆ ಖಿಚಿಡಿ ಸರ್ಕಾರ ರಚಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಏನಂತೀರೀ?

ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಪಾಲು ಭಾರತೀಯರು ಶ್ರೀ ನರೇಂದ್ರ ಮೋದಿಯನ್ನು ಇಷ್ಟಪಡುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲವಾದರೂ, ಭಾರತೀಯರು ಬಿಜೆಪಿಯಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ಅದಕ್ಕೆ ಉತ್ತರವನ್ನು ಹುಡುಕುವುದು ತುಂಬಾ ಸುಲಭ. ಪ್ರಧಾನಿಗಳಾಗಿ ಮೋದಿಯವರ ಕಾರ್ಯತತ್ಪರತೆಯನ್ನು ದೇಶ ವಿದೇಶಗಳಲ್ಲಿ ಇರುವ ಕೋಟ್ಯಾಂತರ ಭಾರತೀಯರು ಬಹಳವಾಗಿ ಇಷ್ಟು ಪಡುತ್ತಾರೆ. ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವುದನ್ನು ಜನರು ಗೌರವಿಸುತ್ತಾರೆ. ನಿಜವಾಗಿಯೂ ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ವಿದೇಶೀ ಬಾಂಧವ್ಯ ಬಹಳಷ್ಟು ಸುಧಾರಣೆಯಾಗಿದೆ. ಭಾರತ ಮತ್ತು ಭಾರತೀಯರನ್ನು ವಿದೇಶಿಗರು ನೋಡುವ ರೀತಿಯೂ ವಿಭಿನ್ನವಾಗಿದೆ.

ಆದರೆ ಮೋದಿಯವರು ಒಬ್ಬರು ಮಾತ್ರಾ ಈ ರೀತಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಇಡೀ ದೇಶ ಸುಧಾರಣೆಯಾಗುವುದಿಲ್ಲ. ಅವರ ಸಂಪುಟದಲ್ಲಿ ಇರುವವರು ಮತ್ತು ಅವರ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕರು, ನಗರಪಾಲಿಕೆ ಸದಸ್ಯರು, ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿಯ ಮಟ್ಟದಲ್ಲಿಯೂ ಅವರ ಕಾರ್ಯತತ್ಪರತೆ ಮುಂದುವರೆಯುವಂತಾಗಬೇಕು. ಹಾಗಾದಲ್ಲಿ ಮಾತ್ರವೇ ಜನ ಮೋದಿಯವರ ಜೊತೆ ಬಿಜೆಪಿ ಪಕ್ಷವನ್ನೂ ಇಷ್ಟ ಪಡುತ್ತಾರೆ ಮತ್ತು ಅವರನ್ನು ಎಲ್ಲಾ ಕಡೆಯಲ್ಲಿಯೂ ಬೆಂಬಲಿಸುತ್ತಾರೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆಡಳಿತ ಅತ್ಯುತ್ತಮ ನಾಯಕನ ಕೈಯಲ್ಲಿ ಇದೆಯಾದರೂ ಅವರ ಆಜ್ಞೆಗಳನ್ನು ಅನುಶಾಸನಕ್ಕೆ ತರುವುದರಲ್ಲಿ ಅವರ ಮಂತ್ರಿಮಂಡಳದ ಸದಸ್ಯರು ಮತ್ತು ಇತರೇ ರಾಜ್ಯಗಳ ಮುಖ್ಯಮಂತ್ರಿಗಳು ಎಡವುತ್ತಿರುವುದನ್ನು ಸ್ವಪ್ಟವಾಗಿ ಕಾಣಬಹುತದಾಗಿದೆ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತಂತೆ ಎನ್ನುವ ಹಾಗೆ, ನಾ ಖಾವುಂಗಾ ನಾ ಖಾನೇ ದೂಂಗಾ. ನಾನು ತಿನ್ನುವುದಿಲ್ಲ ಮತ್ತು ತಿನ್ನುವುದಕ್ಕೂ ಬಿಡುವುದಿಲ್ಲ ಎಂಬ ತತ್ವವನ್ನು ಅತ್ಯಂತ ಕಟ್ಟುನಿಟ್ಟಾಗಿ ಪ್ರಧಾನಿಗಳು ಪಾಲಿಸುತ್ತಿದ್ದಾರೆ. ಹದಿಮೂರು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಸುಮಾರು ಆರು ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಂತಹ ಉನ್ನತ ಅಧಿಕಾರದಲ್ಲಿದ್ದರೂ, ಆಡಳಿತಲ್ಲಿ ಅವರ ಸಂಬಂಧೀಕರ ಹಸ್ತಕ್ಷೇಪವೇ ಇಲ್ಲ. ಅವರ ಸಂಬಂಧೀಕರಾರೂ ಚುನಾಚಣೆಯಲ್ಲಿ ಸ್ಪರ್ಧಿಸಿಲ್ಲ.

ಆದರೆ ಕೆಳ ಹಂತದಲ್ಲಿ ಈ ರೀತಿಯ ನೀತಿಗಳು ಪಾಲನೆಯಾಗುತ್ತಲೇ ಇಲ್ಲ. ಅಪ್ಪಾ ರಾಜ್ಯದ ಮುಖ್ಯಮಂತ್ರಿಯಾದರೆ, ಹಿರಿಯ ಮಗ ಸಂಸದ, ಕಿರಿಯ ಮಗ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರವೆಲ್ಲವೂ ಒಂದೇ ಕುಟುಂಬಕ್ಕೇ ಸೀಮಿತವಾಗಿಟ್ಟು ಕೊಂಡು ಜನರು ಮಾತ್ರ ಬಿಜೆಪಿಯನೇ ಬೆಂಬಲಿಸಬೇಕು ಎಂದರೆ ಅದು ಹೇಗೆ ಸಾಧ್ಯ?

ಉಳಿದೆಲ್ಲ ಪಕ್ಷಗಳಿಗಿಂತಲು ವಿಭಿನ್ನವಾದ, ಶಿಸ್ತಿನ ಪಕ್ಷ ಎಂದು ಆರಂಭದಲ್ಲಿ ಅನಿಸುತ್ತಿದ್ದರೂ, ಅಧಿಕಾರಕಾರ ಮಧ ತಲೆಗೇರಿದ ಕೂಡಲೇ, ನಾಚಿಕೆ, ಗೀಚಿಕೆ, ಊರಾಚೆಗೇ. ನಾವೂ ಕೂಡಾ ಉಳಿದೆಲ್ಲಾ ಪಕ್ಷಗಳಂತೆಯೇ ಪಕ್ಕಾ ರಾಜಕಾರಣಿಗಳು. ಅಧಿಕಾರದ ಇಲ್ಲದಿದ್ದಾಗ ಮಾತ್ರವೇ ಕಾರ್ಯಕರ್ತರ ಕಾಲು ಹಿಡಿಯೋದು. ಕಾರ್ಯಕರ್ತರ ನಿಸ್ವಾರ್ಥ ಪರಿಶ್ರಮದ ಪರಿಣಾಮದಿಂದ ಅಧಿಕಾರ ಗಳಿಸಿದ ಮೇಲೆ ಅದೇ ಕಾರ್ಯಕರ್ತರ ಕಾಲು ಎಳೆಯುವ ಕೆಲಸ ಮಾಡಿದರೆ ಯಾರು ತಾನೇ ಇಷ್ಟ ಪಡುತ್ತಾರೆ?

ಕಳೆದ ಒಂದು ತಿಂಗಳಿಂದಲೂ ಪ್ರಪಂಚಾದ್ಯಂತ ಆವರಿಸಿರುವ ಮಾಹಾಮಾರೀ ಕೊರೋನಾ ತಡೆಗಟ್ಟಲು ಪ್ರಧಾನ ಮಂತ್ರಿಗಳಾದಿಯಾಗಿ ಎಲ್ಲಾರೂ ಹಗಲಿರಳೂ ಶ್ರಮಿಸುತ್ತಾ, ಇಡೀ ದೇಶವನ್ನು ಎರಡು ಹಂತದಲ್ಲಿ ಒಂದು ತಿಂಗಳುಗಳು ಕಾಲ ಕಟ್ಟು ನಿಟ್ಟಿನ ಲಾಕ್ ಡೌನ್ ವಿಧಿಸಿದ್ದರೂ, ಆಡಳಿತ ಪಕ್ಷದ ಶಾಸಕರೇ ಅದ್ದೂರಿಯ ಮದುವೆ, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅದರಲ್ಲಿ ಮುಖ್ಯಮಂತ್ರಿಗಳೇ ಭಾಗವಹಿಸಿದಲ್ಲಿ ವಿಭಿನ್ನವಾದ ಶಿಸ್ತಿನ ಪಕ್ಷ ಎಲ್ಲಿಂದ ಬಂತು.?

ಪ್ರಪಂಚದಲ್ಲೇ ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾದರೂ ಕೂರೋನಾ ಸೋಂಕಿತರು ಮತ್ತು ಕೂರೋನಾದಿಂದ ಸತ್ತವರ ಸಂಖ್ಯೆ ಬೇರೇ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಅಂಕಿ ಅಂಶಗಳು ನಗಣ್ಯವಾಗಿದೆ. ದೇಶದ 85% ಜನರು ಅತ್ಯಂತ ಶಿಸ್ತಿನಿಂದ ಲಾಕ್ ಡೌನ್ ಪಾಲಿಸುತ್ತಿದ್ದಲ್ಲಿ ಕೇವಲ 15% ಜನಾ ಅದರಲ್ಲೂ ಒಂದು ಸಮುದಾಯದ ಜನರು ಧರ್ಮದ ಹೆಸರಿನಲ್ಲಿ ಲಾಕ್ ಡೌನ್ ವಿರೋಧಿಸಿ ಖುಲ್ಲಂ ಖುಲ್ಲಂ ಓಡಾಡುತ್ತಿದ್ದರೆ ಮತ್ತು ಅವರ ಆರೋಗ್ಯವನ್ನು ತಪಾಸಣೆ ಮಾಡಲು ಬಂದ ವೈದ್ಯರು, ದಾದಿಯರು ಮತ್ತು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದರೆ ಅಂತಹವರನ್ನು ಗುರುತಿಸಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲು ಅವರನ್ನೇ ಸಮರ್ಥನೆ ಮಾಡುವುದು ಪೋಲೀಸರು ಅಂತಹ ಪುಂಡರನ್ನು ಶಿಕ್ಷಿಸಬಾರದು ಎಂದು ಅಧಿಕಾರದಲ್ಲಿರುವವರೇ ಪತ್ರಿಕಾಗೋಷ್ಠಿ ಮಾಡಿ ಹೇಳಿದರೆ ಅಂತಹ ಪುಂಡರಿಗೆ, ಮತಾಂಧರಿಗೆ ಇನ್ನೆಂತಹ ಸಂದೇಶ ತಲುಪುತ್ತದೆ?

ರಾಜ್ಯದ ಉಪಮುಖ್ಯಮಂತ್ರಿಗಳೇ ಎಲ್ಲರ ಸಮ್ಮುಖದಲ್ಲಿ ಪೋಲೀಸ್ ಕಮೀಶ್ನರ್ ಕಾನೂನು ಸುವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿಲ್ಲ ನಿಮಗೆ ಬೇಕಾದವರಿಗೆ ಕಾನೂನು ಸಡಿಲ ಗೊಳಿಸುತ್ತಿದ್ದೇರಿ ಎಂದು ಜರಿಯುತ್ತಾರೆ. ನಂತರದ ದಿನಗಳಲ್ಲಿ ಅದೇ ಮಂತ್ರಿಗಳೇ ಯಾರದೋ ಒತ್ತಡಕ್ಕೆ ಮಣಿದು ಕೆಂದ್ರ ಸರ್ಕಾರ ಮೇ 30ರ ವರೆಗೂ ಕಟ್ಟು ನಿಟ್ಟಾದ ಲಾಕ್ ಡೊನ್ ಮುಂದುವರಿಸಿದ್ದರೂ ಐಟಿ ಬಿಟಿಯವರು ಕೆಲಸಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬಹುದು. ದ್ವಿಚಕ್ರ ವಾಹನ ಸವಾರರಿಗೆ ಪಾಸ್ ಕಡ್ಡಾಯ ವಿಲ್ಲ ಎಂದು ಹೇಳುತ್ತಾರೆ ಮತ್ತು ಅದನ್ನು ಮುಖ್ಯಮಂತ್ರಿಗಳೂ ಅನುಮೋದಿಸುತ್ತಾರೆ. ಅದಾದ ಕೆಲವೇ ಕೆಲವು ಗಂಟೆಗಳಲ್ಲಿ ಮತ್ತದೇ ಮುಖ್ಯಮಂತ್ರಿಗಳು ಮತ್ತೊಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಲಾಕ್ ಡೊನ್ ಯಥಾಸ್ಥಿತಿಯಂತೆ ಜಾರಿಗೆಯಲ್ಲಿದೆ ಎಂದು ಹೇಳುತ್ತಾರೆ. ನಾವೆಲ್ಲರೂ ಇತಿಹಾಸದಲ್ಲಿ ತುಘಲಕ್ ಎಂಬ ರಾಜನ ಆಡಳಿತದ ಬಗ್ಗೆ ಓದಿದ್ದೆವು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಆಡಳಿತವನ್ನು ಕಣ್ಣಾರೆ ಕಾಣುತ್ತಿದ್ದೇವೆ.

ಸಾಂವಿಧಾನಿಕವಾಗಿ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳ ಪದವಿಯನ್ನು ಹೊರತು ಪಡಿಸಿದರೆ ಗೃಹಖಾತೆ ಮತ್ತು ಗೃಹಮಂತ್ರಿಗಳ ಅಧಿಕಾರದ ವ್ಯಾಪ್ತಿ ಹೆಚ್ಚೇ ಇರುತ್ತದೆ. ದೌರ್ಭಾಗ್ಯವೆಂದರೆ ಈ ಕೂರೋನಾ ವಿಪತ್ತಿನ ಸಮಯದಲ್ಲಿ ದೇಶದ ಮತ್ತು ರಾಜ್ಯದ ಗೃಹಖಾತೆ ಮತ್ತು ಗೃಹಮಂತ್ರಿಗಳನ್ನು ಒಮ್ಮೆಯೂ ಕಾಣುವಂತಹ ಸೌಭಾಗ್ಯವೇ ನಮಗೆ ಲಭಿಸಿಲ್ಲ. ಬಹುಶಃ ದೇಶದ ಗೃಹಮಂತ್ರಿಗಳು CAA ಮತ್ತು NRC ಹೇಗೆ ಕಾರ್ಯರೂಪಕ್ಕೆ ತರುವುದು ಎಂಬುದರಲ್ಲಿಯೋ ಅಥವಾ ಕರ್ನಾಟಕ, ಮಧ್ಯಪ್ರದೇಶದ ಅಧಿಕಾರವನ್ನು ಆಪರೇಷನ್ ಕಮಲದಲ್ಲಿ ಗಳಿಸಿದಂತೆ ರಾಜಸ್ಥಾನದಲ್ಲೂ ಹೇಗೆ ಪಡೆಯಬಹುದು ಎಂಬುದರಲ್ಲಿ ಮಗ್ನರಾಗಿರಬಹುದು ಎಂದು ಭಾವಿಸಿದರೆ, ರಾಜ್ಯದ ಗೃಹಮಂತ್ರಿಗಳು ಈ ಕೂರೋನಾ ಸಮಯದಲ್ಲಿ ಸ್ವಗೃಹದಿಂದ ಹೊರಬಾರದಿರುವುದು ಜನರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ದೇಶದಲ್ಲೇ ಅತೀ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ಮುಖ್ಯಮಂತ್ರಿಗಳ ನೇರ, ದಿಟ್ಟ ಮತ್ತು ನಿರಂತರ ಕಾರ್ಯತತ್ಪರತೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಯಾರೇ ಹಾಳು ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಅವರನ್ನು ಬಂಧಿಸಿ ಕಾನೂನಾತ್ಮಕವಾಗಿ ವಿಚಾರಣೆ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗಾದ ನಷ್ಟವನ್ನು ಅವರಿಂದಲೇ ಮುಟ್ಟುಗೋಲು ಹಾಕಿಸಿ ಅವರಿಗೆ ಶಿಕ್ಷೆ ಕೊಡಿಸುತ್ತಿರುವ ಅವರ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಲ್ಲರ ಮನ್ನಣೆ ಗಳಿಸುತ್ತಿದೆ ಎಂದರೆ ಅತಿಶಯೋಕ್ತಿ ಏನಲ್ಲ.

bjp2ಚುನಾವಣಾ ಸಮಯದಲ್ಲಿ ಬಹುಸಂಖ್ಯಾತರ ಭಾವನೆಗಳನ್ನು ಕೆರಳಿಸಿಯೋ ಇಲ್ಲವೇ ಪಾಕೀಸ್ಥಾನದ ಮೇಲೆ ಅಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸುತ್ತಾ, ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಮೋದಿಯವರ ಹೆಸರನ್ನೇ ಹಿಡಿದು ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿಯವರು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಿರುಕನ ಕನಸೇ ಸರಿ. ದೇಶದಲ್ಲಿ ಹೇಗೆ ಸಮರ್ಥ ನಾಯಕತ್ವ ಇದೇಯೇ ಅದೇ ರೀತಿಯಲ್ಲಿಯೂ ಸ್ಥಳೀಯವಾಗಿ ಅಷ್ಟೇ ಸಮರ್ಥ ನಾಯಕತ್ವವನ್ನು ಬೆಳೆಸಬೇಕು ಮತ್ತು ಪ್ರತಿಯೊಂದಕ್ಕೂ ಹೈಕಮ್ಯಾಂಡ್ ಕಡೆಗೆ ಹೋಗದೇ ಸ್ಥಳೀಯರಿಗೇ ಮುಕ್ತವಾಗಿ ಅಧಿಕಾರವನ್ನು ನಡೆಸುವಂತಹ ಆರೋಗ್ಯಕರ ಪರಿಸರವನ್ನು ಬೆಳೆಸಬೇಕು.

ನಾಯಕ ಎಷ್ಟೇ ಒಳ್ಳೆಯವನಾಗಿದ್ದರೂ, ಸಂಭಾವಿತನಾಗಿದ್ದರೂ, ಕಾರ್ಯಕರ್ತರ ನಿಲುವನ್ನು ಸಮರ್ಥಿಸಿದ ಪಕ್ಷ ಹೆಚ್ಚು ದಿನಗಳು ಅಧಿಕಾರದಲ್ಲಿ ಇರುವುದಿಲ್ಲ. ಅದಕ್ಕಾಗಿಯೇ ಭಾರತೀಯರು ವ್ಯಕ್ತಿಗತವಾಗಿಯೂ ಮತ್ತು ಪ್ರಧಾನಿಗಳಾಗಿಯೂ ಶ್ರೀ ನರೇಂದ್ರ ಮೋದಿಯವರನ್ನು ಮೆಚ್ಚುತ್ತಾರಾದರೂ, ಪಕ್ಷವಾಗಿ ಬಿಜೆಪಿಯನ್ನು ಒಪ್ಪಿಕೊಳ್ಳಲು ಮತ್ತು ಅಪ್ಪಿ ಕೊಳ್ಳಲು ಹಿಂಜರಿಕೆ ತೋರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಪ್ಪು ಒಪ್ಪಿಕೊಂಡು, ಪಕ್ಷ, ಪಕ್ಷದ ನಿಲುವು, ಆಡಳಿತ ಮತ್ತು ಕಾರ್ಯಕರ್ತರಿಗೆ ಮನ್ನಣೆಯನ್ನು ಕೊಡುವುದರ ಮೂಲಕ ಸರಿ ದಾರಿಗೆ ಬರಲು ಕಾಲ ಇನ್ನೂ ಮಿಂಚಿಲ್ಲ.

ಏನಂತೀರೀ?

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಎರಡು ಮೂರು ವಾರಗಳ ಹಿಂದೆ ಕೇಳಿದ್ದರೆ,
ಕೇಜ್ರಿವಾಲ್ ನಾಯಕತ್ವದ ಎಎಪಿ ಅತ್ಯಂತ ಸುಲಭವಾಗಿ ಮತ್ತೊಮ್ಮೆ ವಿಜಯಶಾಲಿಯಾಗುತ್ತದೆ ಎಂದು ಹೇಳಬಹುತಾಗಿತ್ತು. ಕಳೆದ ಬಾರಿಯಂತೆ ಅಭೂತಪೂರ್ವ ಯಶಸ್ಸಲ್ಲದಿದ್ದರೂ 70ಸೀಟಿನಲ್ಲಿ 45-55 ಮಂದಿ ಶಾಸಕರು ಗೆದ್ದು ಬಹಳ ಸುಲಭವಾಗಿ ಅಧಿಕಾರಕ್ಕೆ ಮತ್ತೊಮ್ಮೆ ಬರುತ್ತಾರೆ ಎಂದು ಹೇಳಬಹುದಾಗಿತ್ತು. ಆದರೆ ಕಳೆದ ಒಂದು ವಾರದಲ್ಲಿ ಈ ಚಿತ್ರ ಸಂಪೂರ್ಣವಾಗಿ ಬದಲಾಗಿ ಹೋಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ 50:50 ಆಗಿದೆ ಮತ್ತು ವಿಜಯಲಕ್ಷ್ಮಿ ಕಡೇ ಕ್ಷಣದಲ್ಲಿ ಬಿಜೆಪಿಯತ್ತಲ್ಲೇ ವಾಲಬಹುದು ಎಂದೂ ಹೇಳಲಾಗುತ್ತಿದೆ.

de2ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅಬ್ಬಿರಿದು ಬೊಬ್ಬಿರಿಯುತ್ತಿದ್ದ ಕೇಜ್ರಿವಾಲ್ ಆವರನ್ನು ಕಳೆದ ಒಂದು ವಾರದಿಂದ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅವರ ವರ್ತನೆ ಮತ್ತು ಭಾಷೆ ಸಂಪೂರ್ಣವಾಗಿ ಬದಲಾಗಿದೆ. ಮೋದಿಯ ಬಗ್ಗೆ ಅತಿಯಾದ ಅಥವಾ ಸೊಕ್ಕಿನ ಮನೋಭಾವದಿಂದ ಮಾತನಾಡುತ್ತಿದ್ದವರು ಈಗ ಮೋದಿಯನ್ನು ಹೊಗಳಲು ಪ್ರಾರಂಭಿಸಿದ್ದಾರೆ. ಈ ವರ್ತನೆ ಅವರ ದುರ್ಬಲತೆಯ ಸೂಚನೆಯಾಗಿದೆಯಲ್ಲದೇ ಅವರ ಗೆಲುವಿನ ಬಗ್ಗೆ ಆವರಿಗೇ ಹಿಂದಿನಷ್ಟು ಖಚಿತವಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ನಿಜಕ್ಕೂ ಹೇಳಬೇಕೆಂದರೆ ಆಡಳಿತಾತ್ಮಕ ವಿರೋಧಿ ಅಲೆಯನ್ನೇನು ಕೇಜ್ರಿವಾಲ್ ಅನುಭವಿಸುತ್ತಿಲ್ಲವಾದರೂ ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಹೋರಾಡುತ್ತಿದ್ದಾರೆ. 2015 ರಲ್ಲಿ ಗಳಿಸಿದ ಅಭೂತಪೂರ್ವ ಯಶಸ್ಸಿನ ಪುನರಾವರ್ತನೆಯನ್ನೇ ಇದುವರೆಗೂ ಗುನಗುಣಿಸಿತ್ತಿದ್ದವರು ಈಗ ತಮ್ಮದೇ ಸರ್ಕಾರವನ್ನು ಪುನರ್ರಚಿಸಲು ಕನಿಷ್ಠ 36ರನ್ನಾದರೂ ಪಡೆದರೂ ಸಾಕು ಅದಿಲ್ಲದಿದ್ದರೆ, ಕಟ್ಟ ಕಡೆಯದಾಗಿ ಕಾಂಗ್ರೆಸ್ ಮತ್ತು ಪಕ್ಷೇತರರೊಟ್ಟಿಗಾದರೂ ಸೇರಿಕೊಂಡು ಅಧಿಕಾರಕ್ಕೆ ಏರುವ ಯೋಚನೆಯಲ್ಲಿದ್ದಾರೆ.

protestಈ ರೀತಿಯ ಬದಲಾವಣೆಯ ಮೂಲ ಕಾರಣವೇ ಬಿಜೆಪಿಯ ಆರಂಭಿಸಿದ ಆಕ್ರಮಣಕಾರಿ ಅಭಿಯಾನ. ಕಳೆದ 40 ದಿನಗಳಿಂದ ಶಾಹೀನ್ ಬಾಗ್ನಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳಿಂದ ದೆಹಲಿ ಜನರು ಅತಿಯಾಗಿಯೇ ದಣಿದಿದ್ದಾರೆ ಮತ್ತು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಅಂಶ ಎಎಪಿಗೆ ಬಹಳ ಆತಂಕವನ್ನುಂಟುಮಾಡುತ್ತಿದೆ. ಆರಂಭದಲ್ಲಿ ಎಎಪಿ ಪಕ್ಷವು ಶಾಹೀನ್ ಬಾಗ್ ಪ್ರತಿಭಟನೆಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಈಗ ಅದೇ ಬೆಂಬಲವನ್ನು ಮುಂದುವರೆಸ ಬೇಕೇ ಇಲ್ಲವೇ ವಿರೋಧಿಸಬೇಕೆ ಎಂಬ ಗೊಂದಲದಲ್ಲಿದೆ. ಹಾಗಾಗಿಯೇ ಒಂದು ದಿನ ಅವರನ್ನು ಬೆಂಬಲಿಸಿದರೆ, ಮರುದಿನ ಅವರನ್ನು ವಿರೋಧಿಸುತ್ತಾ ಮತ್ತು ಮೂರನೇ ದಿನ ಅವರ ಸಂಪೂರ್ಣ ಮೌನವನ್ನು ಕಾಪಾಡಿಕೊಳ್ಳುತ್ತಾ ಗೊಸುಂಬೆ ತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಸಹಾ ಕೇಜ್ರೀವಾಲರ ಈ ರೀತಿಯ ದ್ವಂದ್ವ ನಿಲುವು ಇದೇನೂ ಹೊಸತಲ್ಲ. ಕಾಂಗ್ರೇಸ್ಸನ್ನು ವಿರೋಧಿಸುತ್ತಲೇ ಅಧಿಕಾರಕ್ಕೇರಿ ಕಳೆದ ಲೋಕಸಭಾ ಚುನಾವಣಾಸಂದರ್ಭದಲ್ಲಿ ಸೋಲುವುದನ್ನು ಮನಗಂಡು ಕಡೇ ಗಳಿಗೆಯವರೆಗೂ ಕ್ರಾಂಗ್ರೇಸ್ ಜೊತೆ ಒಪ್ಪಂದಕ್ಕೆ ಓಡಾಡಿ ಅಂತಿಮ ಕ್ಷಣದಲ್ಲಿ ಅದಾಗದು ಎಂದು ತಿಳಿದಾಗ ಕ್ರಾಂಗ್ರೇಸ್ಸನ್ನು ಹಿಗ್ಗಾಮುಗ್ಗಾ ತೆಗಳಿದ್ದು ಜನಮಾನಸದಿಂದ ಇನ್ನೂ ಅಳಿಸಿ ಹೋಗಿಲ್ಲ.

ಅವರ ಉಚಿತ ಕೊಡುಗೆಗಳು, ರಸ್ತೆಯಲ್ಲಿ ಸರಿ-ಬೆಸ ವಾಹನಗಳ ಸಂಚಾರ ಮತ್ತಿತರ ಯೋಜನೆಗಳಲ್ಲಿ ಯಾವುದೇ ರೀತಿಯ ಸ್ಥಿರತೆ ಇಲ್ಲದಿರುವುದು ಅವರಿಗೆ ಮಾರಕವಾಗಲಿದೆ. ಇದನ್ನೇ ಬಿಜೆಪಿಯವರು ದೆಹಲಿಗರಿಗೆ ಅತ್ಯಂತ ಚಾಣಾಕ್ಷವಾಗಿ ಎತ್ತಿ ತೋರಿಸುತ್ತಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿಯೇ ಕೇಂದ್ರ ಸರ್ಕಾರದ ನೀತಿ ನಿಯಮಗಳು ಜಾರಿಗೆ ಮಾಡುವುದರಲ್ಲಿ ಎಎಪಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಮತ್ತೊಮ್ಮೆ ಅದೇ ಪಕ್ಷ ಗೆದ್ದಲ್ಲಿ ಮತ್ತಷ್ಟೂ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬುದನ್ನು ದೆಹಲಿಗರು ಮನಗಂಡಿದ್ದಾರೆ.

ಆದರೆ, ಅದೇ ಬಿಜೆಪಿ ಗೆದ್ದರೆ, ಬಾಕಿ ಉಳಿದಿರುವ ತಮ್ಮ ಇತರ ಸಾಮಾಜಿಕ ಸುಧಾರಣೆಗಳನ್ನು ಒಂದೊಂದಾಗಿ ತೆಗೆದುಕೊಳ್ಳಲು ಬಿಜೆಪಿಗೆ ಧೈರ್ಯ ತುಂಬುತ್ತದೆ.ಅವರ ಮುಂದಿರುವ ಸಾಮಾಜಿಕ ಸುಧಾರಣೆಯು ಏಕರೂಪ ಸಿವಿಲ್ ಕೋಡ್ ಆಗಿರಬಹುದು ಅಥವಾ ಬೇರಾವುದೇ ಯೋಜನೆಗಳಿಗೆ ಅನಾವಶ್ಯಕ ಪ್ರತಿಭಟನೆಗಳು ಮತ್ತು ಅಡ್ಡಿ ಆತಂಕಗಳು ನಿವಾರಣೆಯಾಗಲಿದೆ. ಅದೇ ರೀತಿ CAA & NRC ಯನ್ನು ಸುಗಮವಾಗಿ ಜಾರಿಗೆ ತರುವ ಕುರಿತಂತೆ ಒಂದು ನಿರ್ಧಿಷ್ಟ ರೂಪುರೇಷಗಳನ್ನು ತಯಾರಿಸಲು ಸಹಕಾರಿಯಾಗುತ್ತದೆ. ಈ ರೀತಿಯ ಎಲ್ಲಾ ಸಾಮಾಜಿಕ ಸುಧಾರಣೆಗಳು 2021 ರ ವೇಳೆಗೆ ಮುಗಿಸಿದ ನಂತರ ಆರ್ಥಿಕ ಸುಧಾರಣೆಗಳತ್ತ ಗಮನ ಹರಿಸಲು ಸಹಕಾರಿಯಾಗುತ್ತದೆ.

shobhaಖಂಡಿತವಾಗಿಯೂ ಈ ಬಾರಿ ದೇಶದ ಆರ್ಥಿಕತೆಯನ್ನು ಸುಧಾರಿಸಲು ಎಲ್ಲಾ ರೀತಿಯ ಕ್ರಮಗಳನ್ನೂ ತೆಗೆದುಕೊಂಡು ಮುಂದಿನ 2024 ರಲ್ಲಿ ನಡೆಯುವ ಸಂಸತ್ತಿನ ಚುನಾವಣಾ ಸಮಯದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮತ್ತು ಬೆಳವಣಿಗೆಯೊಂದಿಗೆ ಹ್ಯಾಟ್ರಿಕ್ ಸಾಧಿಸಲು ನರೇಂದ್ರ ಮೋದಿ ಮತ್ತವರ ತಂಡ ಸಿದ್ದತೆಯನ್ನು ನಡೆಸುತ್ತಿದೆ. ಹಾಗಾಗಿಯೇ ದೆಹಲಿಯಲ್ಲಿ ಅಷ್ಟೆನೂ ಪ್ರಾಭಲ್ಯವಿಲ್ಲದಿದ್ದರೂ ತಮ್ಮ ಮಿತ್ರಪಕ್ಷ ಜೆಡಿ(U) ಮತ್ತು ಅಕಾಲಿದಳದೊಂದಿಗೆ ಮೈತ್ರಿಯನ್ನು ಮುಂದು ವರಿಸುತ್ತಿದೆ. ಅದೇ ರೀತಿ ಎಲ್ಲಾ ರಾಜ್ಯಗಳ ಸಂಸದರೂ ಮತ್ತು ಹಿರಿಯನಾಯಕರನ್ನು ಅಯಾಯ ರಾಜ್ಯವಾಸಿಗಳ ಮನಸ್ಸೆಳೆಯಲು ನಿಯೋಜಿಸಲಾಗಿದೆ. ಇದೇ ಕಾರಣದಿಂದಲೇ ಕಳೆದ ಒಂದು ವಾರದಿಂದ ಶೋಭಾ ಕರಂದ್ಲಾಜೆ ಮತ್ತು ನಟಿ ತಾರ ದೆಹಲಿಯ ಕನ್ನಡಿಗರ ಕದವನ್ನು ತಟ್ಟುತ್ತಿದ್ದಾರೆ.

ಇನ್ನು ದೇಶದ ರಾಜಧಾನಿಯಲ್ಲಿಯೇ ಕ್ರಾಂಗ್ರೇಸ್ ಹೀನಾಯ ಸ್ಥಿತಿ ತಲುಪಿದೆ. ಈಗಾಗಲೇ ಸಂಪೂರ್ಣವಾಗಿ ಸೋಲನ್ನು ಒಪ್ಪಿಕೊಂಡು ಕೇವಲ ನಾಮಕಾವಾಸ್ತೆಗಾಗಿ ಚುನಾವಣಾ ಕಣದಲ್ಲಿದೆ. ದೆಹಲಿಯಲ್ಲೇ ಇದ್ದರೂ ಇಷ್ಟು ದಿನಗಳಿಂದಲೂ ಚುನಾವಣಾ ಪ್ರಚಾರಕ್ಕೆ ಧುಮುಕದಿದ್ದ ರಾಹುಲ್ ಮತ್ತು ಪ್ರಿಯಾಂಕ ಕಳೆದ ಒಂದೆರಡು ದಿನಗಳಿಂದ ಅದೇ ಸವಕಲು ಉದ್ಯೋಗ ಮತ್ತು ಆರ್ಥಿಕ ಪರಿಸ್ಥಿತಿಯನ್ನೇ ಹಿಡಿದುಕೊಂಡು ಕೇಂದ್ರ ಸರ್ಕಾರ ಮತ್ತು ಕೇಜ್ರಿವಾಲ್ ಸರ್ಕಾರದ ವಿರುದ್ದ ಬಡಬಡಾಯಿಸುತ್ತಿರುವುದನ್ನು ಯಾರೂ ಸಹಾ ಗಂಭೀರವಾಗಿ ಪರಿಗಣಿಸುತ್ತಿಲ್ಲ.

delhi_elcctionಅಂತಿಮವಾಗಿ ಹೇಳಬೇಕೆಂದರೆ ಈ ಬಾರಿಯ ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶ ಕಳೆದ ಬಾರಿಯಂತೆ ಏಕಪಕ್ಷೀಯವಾಗಿರದೇ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ಖಂಡಿತವಾಗಿಯೂ ಜಿದ್ದಾಜಿದ್ದಿ ಹೋರಾಟವನ್ನು ಕಾಣಬಹುದಾಗಿದೆ. ಈಗಾಗಲೇ ಹೇಳಿದಂತೆ ಫಲಿತಾಂಶ 50:50 ಆಗಿದ್ದು ವಿಜಯಲಕ್ಷ್ಮಿ ಕಡೇ ಕ್ಷಣದಲ್ಲಿ ಯಾರ ಪರ ಒಲಿಯುತ್ತಾಳೆ ಎಂಬುದು ಇನ್ನು ಮೂರು ದಿನಗಳಲ್ಲಿ ನಿರ್ಧಾರವಾಗಿದೆಯಾದರೂ ದೆಹಲಿಗರು ಬದಲಾವಣೆಗಾಗಿ ಮನಸ್ಸು ಮಾಡಿದ್ದರೆ ಎನ್ನಲು ಅಡ್ಡಿಯಿಲ್ಲ. ಬದಲಾವಣೆ ಎನ್ನುವುದು ಜಗದ ನಿಯಮ ಮತ್ತು ಅದು ನಿರಂತರ ಪ್ರಕ್ರಿಯೆ ಕೂಡಾ.

ಏನಂತೀರೀ?

ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಇಂಡಿಯನ್ ಕೌನ್ಸಿಲ್ ಆಫ್ ಜ್ಯೋತಿಷ್ಯ ವಿಜ್ಞಾನದಲ್ಲಿ (1997) ಎಮ್ಎ ಮಾಡಿರುವಂತಹ ವೈದಿಕ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ, ಶ್ರೀಯುತರಾದ ರಾಜೀವ್ ಸೇಥಿ ಅವರು ಹೇಳುವ ಪ್ರಕಾರ

logo2

ಇಂಟರ್ನೆಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವು 6/4/1980 ರಂದು ದೆಹಲಿಯಲ್ಲಿ ಬೆಳಿಗ್ಗೆ 11.45 ಕ್ಕೆ ರಚನೆಯಾಯಿತು ಎಂದು ತಿಳಿಯಬರುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ಲೆಕ್ಕ ಹಾಕಿದಲ್ಲಿ, ಬಿಜೆಪಿ 23/02/2019 ರಿಂದ 16/08/2020 ರವರೆಗೆ ಚಂದ್ರ ಮಹಾದಾಶ-ರಾಹು ಭುಕ್ತಿ ನಡೆಸುತ್ತಿದೆ. ಚಂದ್ರ ಮತ್ತು ರಾಹು ಪರಸ್ಪರ ಶತೃಗಳು ಮತ್ತು ಅವರ ದಶಾ-ಅಂತರ್ದಶಾ ಸರಿಯಾಗಿಲ್ಲದ ಕಾರಣ, ನಿರೀಕ್ಷಿತ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಇದುವೇ 2019 ರ ಆರಂಭದಿಂದ ಪಕ್ಷಕ್ಕೆ ಕೆಲವು ಹಿನ್ನಡೆ ಉಂಟಾಗಲು ಕಾರಣವಾಗಿದೆ. ಈ ಅವಧಿ ಮುಗಿಯುತ್ತಿದ್ದಂತೆ ಮತ್ತು ಗುರು ಅಂತರ್ದಶೆ ಪ್ರಾರಂಭವಾಗುತ್ತಿದ್ದಂತೆ ಈ ಹಿನ್ನಡೆಗಳೇ ಮೆಟ್ಟಿಲುಗಳಾಗುತ್ತವೆ. 16/08/2020 ರಿಂದ 09/12/2021 ರವರೆಗಿನ ಚಂದ್ರ-ಗುರು ಅವಧಿಯು ರಾಜಕೀಯವಾಗಿ ಮತ್ತು ಚುನಾವಣಾ ದೃಷ್ಟಿಯಿಂದ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ತಮ್ಮದೇ ಆದ ಆಂತರಿಕ ಸಂಕಷ್ಟಗಳ ಮೂಲಕ ಪತನಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದೇ ಅವಧಿಯಲ್ಲಿ ಬಹುಸಂಖ್ಯಾತ ಹಿಂದುಗಳು ದೀರ್ಘಕಾಲದಿಂದಲೂ ನಿರೀಕ್ಷಿಸುತ್ತಿದ್ದ ಹಲವು ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗುತ್ತದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಅಲ್ಪಸಂಖ್ಯಾತರ ತುಷ್ಟೀಕರಣ ಕೊನೆಗೊಂಡು ದೇಶಾದ್ಯಂತ ಎಲ್ಲರಿಗೂ ಒಂದೇ ದೇಶ ಮತ್ತು ಒಂದೇ ಕಾನೂನು ಅನ್ವಯವಾಗುವಂತಹ ದಿನಗಳು ಬರಲಿವೆ. ರಾಜ್ಯ ಸರ್ಕಾರಗಳ ಹಿಡಿತದಿಂದ ಪ್ರಮುಖ ದೇವಾಲಯಗಳನ್ನು ಮುಕ್ತಗೊಳಿಸುವ ಮುಖಂತರ ಹಿಂದೂ ದೇವಸ್ಥಾನಗಳ ಆದಾಯಗಳನ್ನು ಅಲ್ಪಸಂಖ್ಯಾತರ ಹಿತಕ್ಕಾಗಿ ಬಳಸುವುದನ್ನು ನಿರ್ಭಂಧಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿಯೂ ಅನಗತ್ಯವಾದ ಪಾಶ್ವಾತ್ಯೀ ಸಂಸ್ಕೃತಿಗಳ ಅಂಧಾನುಕರಣೆಗೆ ತಡೆ ಒಡ್ದಿ ಹಿಂದೂ ಸಂಪ್ರದಾಯಗಳ ಅಚರಣೆಯೂ ಮುಖ್ಯವಾಹಿನಿಗೆ ಬರಲಿದೆ ಇದರಿಂದ ಮದರಸಾಗಳು, ಕಾನ್ವೆಂಟ್‌ಗಳು ಮತ್ತು ಹಿಂದೂ ಶಾಲೆಗಳನ್ನು ಒಂದೇ ರೀತಿಯಲ್ಲಿ ನಡೆಸುಕೊಂಡು ಹೋಗುವಂತಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಮೇಲ್ಕಂಡ ಅಭಿಪ್ರಾಯಗಳು ಜ್ಯೋತಿಷಿ ಶ್ರೀ ರಾಜೀವ್ ಸೇಥಿಅವರ ಅಭಿಪ್ರಾಯಗಳಾಗಿದ್ದು ಅವರ ಮಾತು ಸತ್ಯವಾದಲ್ಲಿ ಭಾರತೀಯ ಸನಾತನ ಸಂಸ್ಕೃತಿಗಳು ಪುನಃ ಮುಖ್ಯವಾಹಿನಿಯ ಭಾಗವಾಗಿ, ಭಾರತ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂದೇಹವೇ ಇಲ್ಲ.. ಅಂತಹ ಸುಧಿನಕ್ಕಾಗಿ ಎಲ್ಲಾ ಭಾರತೀಯರೂ ಕಾಯುತ್ತಿರುವುದಂತೂ ಸುಳ್ಳಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೆಸರಿನಲ್ಲಿ ಹುದುಗಿರುವ ಕಮಲ ಮತ್ತೊಮ್ಮೆ ಕೆಸರನ್ನು ಬದಿಗೊತ್ತಿ ಶುಭ್ರವಾದ ನೀರಿನಲ್ಲಿ ಸ್ವಚ್ಚವಾಗಿ, ದೇಶಾದ್ಯಂತ ಸ್ವಚ್ಚಂದವಾಗಿ ಅರಳಲಿ ಮತ್ತು ವಿರಾಜಮಾನವಾಗಲಿ.

ಏನಂತೀರೀ?