ಅನ್ನದಾತ ಸುಖೀ ಭವ

ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಯವರು ಬರೆದಿರುವ ಈ ಪದ್ಯವನ್ನು ನಮ್ಮ ಒಂದನೇ ತರಗತಿಯಲ್ಲಿ ನಲವತ್ತೈದು ವರ್ಷಗಳ ಹಿಂದೆ ಓದಿದ್ದರೂ ಇನ್ನೂL pm ಹಚ್ಚ ಹಸಿರಾಗಿಯೇ ನಮ್ಮೆಲ್ಲರ ಮನಗಳಲ್ಲಿ ಅಚ್ಚಳಿಯದೇ ಉಳಿದಿದೆ.

ಇವನೇ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸಮನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು

ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

ನಮ್ಮ ರೈತನ ಬದುಕು ಹಸನಾಗಿರಲೆಂದೇ ಸ್ವಾತಂತ್ರ್ಯ ಬಂದ ನಂತರ ಎಲ್ಲಾ ಸರ್ಕಾರಗಳೂ ಅನೇಕ ಸವಲತ್ತುಗಳನ್ನು ನೀಡುತ್ತಲೇ ಇದೆ. ರೈತರಿಗೆ ಪಂಪ್ ಸೆಟ್ಟುಗಳಿಗೆ ಉಚಿತ ನೀರು, ಸಬ್ಸಿಡಿ ದರದಲ್ಲಿ ರಸಗೊಬ್ಬರ, ಬಿತ್ತನೇ ಬೀಜಗಳು ಕೃಷಿ ಉಪಕರಣಗಳು, ಕೃಷಿ ಉತ್ಪನ್ನಗಳಿಗೆ ತೆರಿಗೆ ಉತ್ಪನ್ನಗಳು ಹೀಗೆ ಎಲ್ಲವನ್ನೂ ನೀಡುತ್ತಿದ್ದರೂ ಇನ್ನೂ ನಮ್ಮ ರೈತನ ಬದುಕು ದಿನದಿಂದ ದಿನಕ್ಕೆ ಹದಗೆಡುತ್ತಿದೆಯೇ ಹೊರತು ಹಸನಾಗಿಯೇ ಇಲ್ಲದಿರುವುದು ವಿಪರ್ಯಾಸವೇ ಸರಿ.

ಇದಕ್ಕೆ ಕಾರಣವೇನೆಂದು ಹುಡುಕಲು ಹೊರಟಾಗ ತಿಳಿದು ಬಂದ ಕುತೂಹಲಕಾರಿ ವಿಷಯವೆಂದರೆ ಅತೀ ವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಸರಿಯಾದ ಬೆಳೆ ಬಾರದಿರುವುದು ಒಂದು ಸಂಗತಿಯಾದರೇ, ಸೂಜಿಯಿಂದ, ವಿಮಾನದವರೆಗೂ ಪ್ರತಿಯೊಂದಕ್ಕೂ ನಿಗಧಿತವಾದ ಬೆಲೆ ಇದ್ದರೆ ರೈತರ ಬೆಳೆಗೆ ಮಾತ್ರಾ ನಿಗಧಿತ ಬೆಲೆ ಇಲ್ಲದೇ ಪ್ರತೀಬಾರಿಯೂ ಏರೂ ಪೇರಾಗುವುದೂ ಮತ್ತೊಂದು ಕಾರಣ. ಇದಕ್ಕಿಂತಲೂ ಮತ್ತೊಂದು ಅಘಾತಕಾರಿ ಅಂಶವೆಂದರೆ, ರೈತರು ತಾವು ಬೆಳೆದ ವಸ್ತುಗಳನ್ನು ಮಾರಾಟ ಮಾಡಲು ಅವರಿಗೆಂದೇ APMC ಮಾರುಕಟ್ಟೆ ಆರಂಭಿಸಿದರೂ, ನೇರವಾಗಿ ಮಾರಲು ಸಾಧ್ಯವಾಗದೇ, ದಳ್ಳಾಳಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಅವರು ಹೇಳಿದ್ದೇ ದರ ಕೊಟ್ಟಷ್ಟೇ ಹಣಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾದ ಪರಿಸ್ಥಿತಿಯೇ ರೈತನ ಈ ಬಡತನಕ್ಕೆ ಸಾಕ್ಷಿಯಾಗಿತ್ತು.

ಇದನೆಲ್ಲವನ್ನೂ ಗಮನಿಸಿದ ಪ್ರಸಕ್ತ ಕೇಂದ್ರ ಸರ್ಕಾರ ರೈತರ ಪ್ರಸ್ತುತ ಇದ್ದ ಕೃಷಿ ನೀತಿಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಇರುವ ಕೃಷಿ ಪದ್ದತಿಯಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರದೇ, ರೈತರಿಗೆ ನೇರವಾಗಿ ಅನುಕೂಲವಾಗಲೆಂದೇ, ಒಂದೆರಡು ಹೊಸಾ ಪದ್ದತಿಗಳನ್ನು ಜಾರಿಗೆ ತಂದು, ರೈತ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆಯನ್ನು ನಿಗಧಿ ಪಡಿಸಿತಲ್ಲದೇ, ರೈತರು ತಮ್ಮ ಬೆಳೆಗಳ ಮಾರುಕಟ್ಟೆಗೆ APMC ಮಾರುಕಟ್ಟೆಯ ದಲ್ಳಾಳಿಗಳ ಹೊರತಾಗಿಯೂ, ತಮ್ಮಿಷ್ಟ ಬಂದವರಿಗೆ ಮತ್ತು ತಮ್ಮ ಅನುಕೂಲದ ಬೆಲೆಗೆ ಯಾರು ಕೊಂಡು ಕೊಳ್ಳುತ್ತಾರೋ ಅಂತಹವರಿಗೂ ಮಾರಾಟ ಮಾಡುವಂತಹ ಮುಕ್ತ ಅವಕಾಶವನ್ನು ತಂದು ಕೊಡುವ ಮೂಲಕ ರೈತನ ಹಿತವನ್ನು ಕಾಪಾಡುವುದಕ್ಕೆ ಮುಂದಾಯಿತು.

ಈ ಬದಲಾದ ಕೃಷಿ ನೀತಿ ಕೇಂದ್ರ ಸರ್ಕಾರದ ಸಂಸತ್ತಿನ ಎರಡೂ ಮನೆಗಳಲ್ಲಿ ಚರ್ಚೆಗೆ ಒಳಪಟ್ಟು ಸಾಂಸದರ ಬಹುಮತದಿಂದ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಧಿಕೃತ ಮುದ್ರೆ ಬೀಳುತ್ತಿದ್ದಂತೆಯೇ ದೇಶದ ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಮೂಲ ಆದಾಯಕ್ಕೇ ಬಾರೀ ಪೆಟ್ಟು ಬಿದ್ದಂತಾಗಿ ಒಮ್ಮಿಂದೊಮ್ಮೆಲೇ ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದವು. ಎಲ್ಲದಕ್ಕಿಂತಲೂ ಅಚ್ಚರಿಯೆನ್ನುವಂತೆ ಸರ್ಕಾರ ಅಂಗ ಪಕ್ಷವಾಗಿದ್ದ ಅಕಾಲೀ ದಳ ಶಿರೋಮಣಿ ಮೊದಲು ಮುಗಿಬಿದ್ದು ಈ ಕೃಷಿ ನೀತಿಯನ್ನು ಬದಲಿಸದೇ ಹೋದಲ್ಲಿ ಸರ್ಕಾರದಿಂದ ಹೊರಬೀಳುತ್ತೇವೆ ಎಂಬ ಬೆದರಿಕೆ ಹಾಕಿತು. ಇಂತಹ ಗೊಡ್ಡು ಬೆದರಿಕೆಗಳಿಗೆ ಸರ್ಕಾರ ಬಗ್ಗದಿದ್ದಾಗ ವಿಧಿ ಇಲ್ಲದೇ ಸರ್ಕಾರ ಮತ್ತು ಎನ್.ಡಿ.ಎ ದಿಂದ ಹೊರಬಿದ್ದಿತು. ಇನ್ನು ಕೇವಲ ಈರುಳ್ಳಿಯ ಸಗಟು ಸಂಗ್ರಹಣೆ ಮತ್ತು ದಲ್ಲಾಳಿತನದಿಂದಲೇ, ಸಾವಿರ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತಿದ್ದ ಮಹಾರಾಷ್ಟ್ರದ ಶರದ್ ಪವಾರ್ ಕುಟುಂಬಕ್ಕೆ ಮರ್ಮಘಾತವಾಗಿದ್ದಂತೂ ಸುಳ್ಳಲ್ಲ.

ರಾಜ್ಯದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಸೋತು ಸೊರಗಿರುವ ಕಾಂಗ್ರೇಸ್ ಪಕ್ಷಕ್ಕೆ ಶತ್ರುವಿನ ಶತ್ರು ಮಿತ್ರ ಎಂಬ ಗಾದೆಯಂತೆ ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಕಾಯುತ್ತಿದ್ದ ಕಾಂಗ್ರೇಸ್, ಕಮ್ಯೂನಿಷ್ಟರು, ತುಕ್ಡೇ ತುಕ್ಡೇ ಗ್ಯಾಂಗ್ ಜೊತೆ CAA & NRC ವಿರುದ್ಧ ದೇಶಾದ್ಯಂತ ಹೋರಾಟನಡೆಸಿ, ಕಡೆಗೆ ದೆಹಲಿಯ ಷಹೀನ್ ಬಾಗಿನಲ್ಲಿ ತಿಂಗಳಾನುಗಟ್ಟಲೆ ದಿನಗೂಲಿ ಮತ್ತು ಬಿರ್ಯಾನಿಯಾಧಾರಿತ ಹೆಣ್ಣು ಹೋರಾಟಗಾರರನ್ನು ಬಿಟ್ಟು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಇತ್ತೀಚಿಗೆ ಸಿದ್ದರಾಮಯ್ಯನವರು ಹೇಳಿದ ಮೊಘಲರ ಕಲಬೆರೆಕೆಯವರು ಸೇರಿ ಒಂದಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಹುನ್ನಾರ ಮಾಡತೊಡಗಿದರು.

ದೆಹಲಿಯ ಹಿಂದೂಗಳು ಬಹಿರಂಗವಾಗಿ ಛತ್ ಪೂಜಾ ನಡೆಸಲು ದೆಹಲಿ ಸರ್ಕಾರದ ಅನುಮತಿ ಕೇಳಿದಾಗ ಕರೋನಾ ನೆಪವೊಡ್ಡಿ ಅನುಮತಿ ನೀಡದ ಕೇಜ್ರೀವಾಲ್ ಸರ್ಕಾರವೂ, ತನ್ನ ಪರಮ ಶತ್ರು ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ಹುನ್ನಾರಕ್ಕೇ ತುಪ್ಪ ಎರೆಯದಿದ್ದರೇ ಹೇಗೇ? ತಮ್ಮ ಸರ್ಕಾರ ರೈತರ ಪರವಾಗಿದೆ ಎಂಬ ಬಹಿರಂಗ ಹೇಳಿಕೆ ಕೊಟ್ಟಿದ್ದಲ್ಲದೇ, ಲಕ್ಷಾಂತರ ರೈತರು ಒಟ್ಟಿಗೆ ದೆಹಲಿಗೆ ಬರಲು ಒಪ್ಪಿಗೆ ನೀಡಿದ್ದಲ್ಲದೇ, ಪಂಜಾಬ್‌ ಹಾಗೂ ಹರ್ಯಾಣದ ರೈತರು ದಿಲ್ಲಿ ಗಡಿ ಭಾಗದ ಸಂಘು, ತಕ್ರಿ ಹಾಗೂ ಗಾಝಿಪುರದಲ್ಲಿ ಪ್ರತಿಭಟನೆ ಕುಳಿತಿರುವವರಿಗೆ ಚಳಿಯ ನೆಪವೊಡ್ಡಿ ಬಂದವರಿಗೆಲ್ಲರಿಗೂ ದೆಹಲಿ ಸರ್ಕಾರದ ಪರವಾಗಿ ಹೊದಿಕೆಗಳನ್ನು ಒದಗಿಸಲು ಮುಂದಾಯಿತು. ಛತ್ ಪೂಜೆಯಲ್ಲಿದ್ದ ಕರೋನಾ ನೆಪ ಸಾಮೂಹಿಕವಾಗಿ ಛಾದರ್ ಗಳನ್ನು ಒದಗಿಸಿದಾಗ ಬರಲಿಲ್ಲ ಎನ್ನುವುದು ಇಲ್ಲಿ ಗಮನಿಸ ಬೇಕಾದ ವಿಷಯ.

ನಿಜವಾದ ರೈತ ತಾನು ಬೆಳೆದಿದ್ದ ಬೆಳೆಯನ್ನು ಮಾರಲು ಓಡಾಡುತ್ತಿದ್ದಾಗ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ರೈತರನ್ನು ಹೇಗೆ ಕರೆತರುವುದು ಎಂದು ಯೋಚಿಸುತ್ತಿರುವಾಗಲೇ ನೆರವಿಗೆ ಬಂದದ್ದು ಅದೇ ಬಾಂಧವರೇ. ಸಿಖ್ಖರು ಉದ್ದುದ್ದ ಮೀಸೆ ಮತ್ತು ಗಡ್ಡವನ್ನು ಬಿಟ್ಟು ತಲೆಯ ಮೇಲೆ ಪಗಡಿ ಧರಿಸಿರುತ್ತಾರೆ. ಇನ್ನು ಬಾಂಧವರೂ ಉದ್ದುದ್ದ ಗಡ್ಡ ಬಿಟ್ಟಿರುತ್ತಾರೆ. ಅವರ ತಲೆಯ ಮೇಲಿರುವ ಸೊಳ್ಳೆ ಪರೆದೇ ಟೋಪಿಯ ಬದಲು ಪಗಡೀ ಧರಿಸಿದರೇ ಸಿಖ್ಖರಾಗಿ ಬಿಡುತ್ತಾರೆ ಎಂಬ ಉಪಾಯ ಅದಾರು ಕೊಟ್ಟರೋ ತಿಳಿಯದು. ಈ ಉಪಾಯ ಎಲ್ಲರಿಗೂ ಇಷ್ಟವಾಗಿ ಅದನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟರು. ಅಪರಾಧಿ ಎಷ್ಟೇ ಚಾಣಾಕ್ಷನಾದರೂ, ಪ್ರತೀ ಅಪರಾಧ ನಡೆಸಿದ ನಂತರ ಒಂದಲ್ಲಾ ಒಂದು ಕುರುಹನ್ನು ಬಿಟ್ಟೇ ಹೋಗಿರುತ್ತಾನೆ ಎನ್ನುವಂತೆ, ಇಲ್ಲೂ ಸಹಾ ಕೇವಲ ಉದ್ದನೆ ಗಡ್ಡ ಮತ್ತು ತಲೆ ಮೇಲೆ ಪಗಡಿ ಧರಿಸಿದರೇ ಸಿಖ್ಖರಾಗುವುದಿಲ್ಲ. ಸಿಖ್ಖರ ಗಡ್ಡಕ್ಕೆ ತಕ್ಕಂತೆ ಅನುಗುಣವಾಗಿಯೇ ಗಿರಿಜಾ ಮೀಸೆ ಇರುತ್ತದೆ. ಆದರೆ ಬಾಂಧವರಿಗೆ ಕೇವಲ ಗಡ್ಡ ಇರುತ್ತದೆ ಮೀಸೆ ಇರುವುದಿಲ್ಲ ಎಂಬ ಸತ್ಯವನ್ನು ಮರೆತ ಪರಿಣಾಮ ನಕಲೀ ಹೋರಾಟಗಾರರು ಪೋಲಿಸರಿಗೆ ಸುಲಭವಾಗಿ ಸಿಕ್ಕಿ ಬಿದ್ದರು.

ಇನ್ನು ಬಾಡಿಗೆ ಭಂಟರಿಗೆ ಸುಪಾರಿ ಕೊಟ್ಟು ತಾವು ಸಿಕ್ಕಿ ಕೊಳ್ಳಬಾರದೆಂದು ಊರು ಬಿಟ್ಟು ಹೋಗುವ ಅಪರಾಧಿಗಳಂತೆ, ಪಂಜಾಬಿನ ಕಾಂಗ್ರೇಸ್ ಸರ್ಕಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತೆ ಛೂ ಬಿಟ್ಟು, ಆರೋಗ್ಯ ಮತ್ತು ಕೆಟ್ಟ ಹವಾಮಾನದ ಕುಂಟು ನೆಪವೊಡ್ಡಿ ಅಮ್ಮಾ ಮತ್ತು ಮಗ ಸದ್ದಿಲ್ಲದೇ ಗೋವಾ ಸೇರಿಕೊಂಡು ಪ್ರತಿಭಟನೆಗೂ ನಮಗೂ ಯಾವ ಸಂಬಂಧವೇ ಇಲ್ಲ ಎಂದು ತೋರಿಸಲು ಹೊರಟರೂ ಕಾಂಗ್ರೇಸ್ಸಿನ ಬಿರ್ಯಾನಿಯ ಘಮಲು ದೆಹಲಿಯಿಂದ ಗೋವಾವರೆಗೂ ಹಬ್ಬಿದ್ದಂತೂ ಸುಳ್ಳಲ್ಲ.

ಎಲ್ಲಾ ಹೋರಾಟದಲ್ಲೂ ಅದೇ ಬಾಡಿಗೆ ಓಲಾಟಗಾರಿಗೆ ಬೇರೆ ಬೇರೆ ದಿರಿಸಿನಲ್ಲಿ ಕಳುಹಿಸಿದರೂ, ಹುಟ್ಟು ಗುಣ ಸುಟ್ಟರೂ ಬಿಡದು ಎನ್ನುವಂತೆ, ಕೇಂದ್ರ ಸರ್ಕಾರದ ಕೃಷಿ ನೀತಿಯ ವಿರುದ್ಧ ರೈತರ ಹೋರಾಟದಲ್ಲಿ ಯಾವಾಗ CAA & NRC , Article 370 & 35A ಭಿತ್ತಿ ಫಲಕಗಳು ಕಂಡು ಬಂದ ಕೂಡಲೇ ಇಡೀ ದೇಶಕ್ಕೆ ಈ ನಕಲೀ ಓಲಾಟಗಾರು, ನಿಜವಾದ ರೈತರಲ್ಲ. ಅವರೆಲ್ಲರೂ ಬಿರ್ಯಾನಿ ಬಾಂಧವರು ಎಂಬುದು ಖಚಿತವಾಯಿತು. ಇದಲ್ಲದೇ ಎಂಭತ್ತರ ದಶಕದಲ್ಲಿ ಇದೇ ಕಾಂಗ್ರೇಸ್ಸಿನ ಅಂದಿನ ಅದಿದೇವತೆ ಇಂದಿರಾಗಾಂಧಿ ಪಂಜಾಬಿನಲ್ಲಿ ಬೆಳೆಸಿದ್ದ ಬಿಂದ್ರನ್ ವಾಲೆ ಎಂಬ ಬಂಟ ಸಿಖ್ಖರ ಪವಿತ್ರ ಗುರುದ್ವಾರ ಅಮೃತಸರದ ಸ್ವರ್ಣಮಂದಿರದಲ್ಲೇ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಾ, ಖಲಿಸ್ತಾನದ ಬೇಡಿಕೆ ಒಡ್ಡುತ್ತಾ ಸರ್ಕಾರಕ್ಕೇ ಮುಳ್ಳಾದನೋ ಅಗ ಅದೇ ಇಂದಿರಾಗಾಂಧಿ Operation Blue Star ಹೆಸರಿನಲ್ಲಿ ಗುರುದ್ವಾರದ ಮೇಲೆ ವಾರಗಟ್ಟಲೆ ಧಾಳಿ ನಡೆಸಿ ಹತ್ತಿಕ್ಕಿದ್ದ ಖಲಿಸ್ತಾನ್ ಬೇಡಿಕೆಗೆ ಈಗ ಅದೇ ಕಾಂಗ್ರೇಸ್ ಪರೋಕ್ಷವಾಗಿ ವೇದಿಕೆ ಒದಗಿಸುತ್ತಿರುವುದು ನಿಜಕೂ ದೇಶವಿರೋಧಿ ಚಟುವಟಿಕೆಯಾಗಿದೆ.

ಇನ್ನು ಮೊನ್ನೆ ಕೇಂದ್ರ ಸರ್ಕಾರ ಕೇವಲ 30 ರೈತ ಸಂಘಟನೆಗಳನ್ನು (ಉಳಿದ 800 ಕ್ಕೂ ಹೆಚ್ಚಿನ ರೈತ ಸಂಘನೆಗಳು ಇಂತಹ ಅನಾವಶ್ಯಕ ಪ್ರತಿಭಟನೆಯತ್ತ ತಲೆ ಹಾಕದೇ ತಮ್ಮ ಕೃಷಿ ಚಟುವಟಿಕೆಗಳಲ್ಲಿ ನಿರತವಾಗಿದೆ) ಇನ್ನು ರೈತರಿಗೆ ಮೋಸವಾಗಿದೆ ಎಂದು ಪ್ರತಿಭಟನೆ ಮಾಡಲು ಬಂದಿರುವರಾರು ನಿರ್ಗತಿಕ ರೈತರಾಗಿರದೇ ಬಹುತೇಕರು, ಐಶಾರಾಮಿ ಕಾರ್ ಗಳಾದ Nissa, Fartunure, Tyota ಗಳಲ್ಲಿ ಬಂದರೆ, ಇನ್ನೊಬ್ಬರು ನೇರವಾಗಿ ಹೆಲಿಕ್ಯಾಪ್ಟರ್ನಲ್ಲಿ ಬಂದದ್ದಾರೆ. ಜನ ಸಾಮಾನ್ಯರು ಹತ್ತು ಹದಿನೈದು ಸಾವಿರದ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವುದಕ್ಕೇ ಹಿಂದೂ ಮುಂದು ನೋಡುತ್ತಿರುವಾಗ ಇಲ್ಲಿ ಬಂದಿರುವ ಅನೇಕ ರೈತರುಗಳ ಕೈಯಲ್ಲಿ ಸುಮಾರು ಒಂದು ಲಕ್ಷ ಬೆಲೆಬಾಳುವ ಸ್ಮಾರ್ಟ್ ಫೋನ್ಗಳು ಓಡಾಡುತ್ತಿವೆ ಎಂದರೆ ಅವರೆಂತಹ ಹೊಟ್ಟೇ ತುಂಬಿದ ರೈತರು ಎಂದು ಅರ್ಥವಾಗುತ್ತದೆ. ಸರ್ಕಾರದ ಅಧಿಕಾರಿಗಳು ಮತ್ತು ಮಂತ್ರಿಗಳ ಜೊತೆ ಮಾತು ಕತೆಗೆ ನಡೆಯುತ್ತಿದ್ದ ತಿಳಿದು ಬಂದ ಆಶ್ವರ್ಯಕರವಾದ ವಿಷವೇನೆಂದರೆ ಆ 30 ಸಂಘಟನೆಗಳ ನಾಯಕರುಗಳಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿಲ್ಲದೆ ಹೆಚ್ಚಿನವರಿಗೆ ತಾವು ಯಾವುದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಮತ್ತು ಆವರ ಆಕ್ಷೇಪಕ್ಕೆ ಇರುವ ಪರಿಹಾರವೇನು ಎಂಬುದೇ ತಿಳಿಯದಿರುವನ್ನು ಅರಿತ ಸರ್ಕಾರ ಮತ್ತೆ ಎರಡು ದಿನಗಳ ನಂತರ ನಿಮ್ಮೊಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ನಿಮ್ಮ ಆಕ್ಷೇಪಕ್ಕೆ ಸೂಕ್ತವಾದ ಉಪಾಯವನ್ನು ಕಂಡು ಹಿಡಿದುಕೊಂಡು ಬನ್ನಿ ಎಂದು ತಿಳಿಹೇಳಿ ಕಳುಹಿಸಿದೆ.

ಇದೆಲ್ಲಾ ಗಮನಿಸುತ್ತಿದ್ದಲ್ಲಿ ಈ ಹೋರಾಟ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರು ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ನಕಲೀ ರೈತರನ್ನು ಭಾವಿಗೆ ದೂಡಿ ಆಳ ನೋಡುವಂತಿದೆ. ಇನ್ನು ಬಾಂಧವರು ತಮ್ಮ ಬಂಧುಗಳಿಗೆ ಬಿರ್ಯಾನಿ ಕೊಡುತ್ತಿದ್ದರೆ, ಕೇಜ್ರೀವಾಲ್ ಈ ನಕಲೀ ಓಲಾಟಾಗಾರರಿಗೆ ಹೊದಿಕೆಗಳನ್ನು ಕೊಡುತ್ತಾ, ಶಹೀನ್ ಭಾಗ್ -1ರಲ್ಲಿ ಪ್ರವರ್ಧಮಾನಕ್ಕೆ ಬಂದ ಬಲ್ಕಿಸ್ ಬಾನೂ ಎಂಬ ವಯೋವೃದ್ದ ಮಹಿಳೆಯನ್ನು ಕರೆತಂದು ಈ ಓಲಾಟವನ್ನು ಶಹೀನ್ ಭಾಗ್-2 ಮಾಡುವುದರಲ್ಲಿ ನಿರತವಾಗಿದೆ.

ಈ ರೀತಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ವಿವಿಧ ವೇಷಗಳಲ್ಲಿ ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಈ ನಕಲೀ ಓಲಾಟಗಳು ಸದ್ಯಕ್ಕಂತೂ ಸಫಲವಾಗದೇ, ತಮ್ಮ ತಮ್ಮಲ್ಲಿನ ಒಳಜಗಳಗಳಿಂದಲೇ ವಿಫಲವಾಗುವುದಲ್ಲದೇ, ಜನರ ಮುಂದೆ ಇವರ ಆಟೋಟಗಳೆಲ್ಲವೂ ಒಂದೊಂದೇ ಬಯಲಾಗುತ್ತಾ ಹೋಗಿ ಕಡೆಗೆ ಬೆತ್ತಲಾಗಿ ನಿಲ್ಲುವುದಂತೂ ನಿಚ್ಚಳವಾಗಿದೆ ಎನ್ನುವುದಂತೂ ಸತ್ಯ.

ರೈತ ದೇಶದ ಬೆನ್ನುಲುಬು. ಈ ನಕಲೀ ಓಲಾಟವನ್ನು ಎಲ್ಲರಿಗೂ ತಿಳಿಯಪಡಿಸುವ ಮೂಲಕ, ಇಷ್ಟು ವರ್ಷಗಳ ಕಾಲ ಅಂತಹ ರೈತನ ಬೆನ್ನು ಹಿಡಿದ ಬೇತಾಳರಾಗಿದ್ದಂತಹ ಬಂಡವಾಳಶಾಹಿಗಳು ಮತ್ತು ದಲ್ಲಾಳಿಗಳ ಪಕ್ಕೆಲುಬು ಮುರಿಯುವ ಸುಸಂಧರ್ಭವನ್ನು ಸದುಪಯೋಗ ಪಡಿಸಿಕೊಳ್ಳೋಣ.

ಏನಂತೀರೀ?

ಹಲಸಿನಕಾಯಿ ಬಿರಿಯಾನಿ

ಬಿರ್ಯನಿ ಭಾರತೀಯ ಉಪಖಂಡದ ಒಂದು ಜನಪ್ರಿಯ ಖಾದ್ಯವಾಗಿದೆ. ಇದನ್ನು ಅಕ್ಕಿ, ತರಕಾರಿಗಳು, ಮತ್ತು ಮಸಾಲಾಗಳನ್ನು ಬೆರೆಸಿ ತಯಾರಿಸಲಾಗುತ್ತದಾದರೂ ಕುರಿ ಇಲ್ಲವೇ ಕೋಳಿ ಪೀಸ್ ಹಾಕಿದ ಬಿರ್ಯಾನಿಯೇ ಅತ್ಯಂತ ಜನ ಪ್ರಿಯ ಖಾದ್ಯವಾಗಿದೆ. ಸಸ್ಯಾಹಾರಿಗಳಿಗೂ ತಮ್ಮ ಬಿರ್ಯಾನಿಯಲ್ಲಿ ಪೀಸ್ ತಿನ್ನುವ ಅನುಭವವಾಗುಂತಹ ಹಲಸಿನ ಕಾಯಿ ಬಿರಿಯಾನಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿ ಕೊಡುತ್ತಿದ್ದೇವೆ.

ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಲಸಿನಕಾಯಿ ಬಿರ್ಯಾನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

 • ಬಾಸ್ಮತಿ ಅಕ್ಕಿ -2 ಬಟ್ಟಲು
 • ಟೊಮೆಟೊ – 2
 • ಶುಂಠಿ – 2 ಇಂಚು
 • ಈರುಳ್ಳಿ – 4
 • ಬೆಳ್ಳುಳ್ಳಿ – 10 ಎಸಳುಗಳು
 • ಹಸಿರು ಮೆಣಸಿನಕಾಯಿ – 2
 • ಕೆಂಪು ಮೆಣಸಿನಕಾಯಿ – 4
 • ಏಲಕ್ಕಿ – 6
 • ಲವಂಗ – 6
 • ದಾಲ್ಚಿನ್ನಿ -2 ಇಂಚು
 • ಸೋಂಫು -1 ಚಮಚ
 • ಅರಿಶಿನ ಪುಡಿ- 1/2 ಚಮಚ
 • ಪುದೀನ ಎಲೆಗಳು -1 ಚಮಚ
 • ಕೊತ್ತಂಬರಿ ಸೊಪ್ಪು -1 ಚಮಚ
 • ತುಪ್ಪ -3 ಚಮಚ
 • ರುಚಿಗೆ ಉಪ್ಪು
 • ಕೇಸರಿ (ಕೇಸರಿ) -5/6 ಎಳೆಗಳನ್ನು ಅರ್ಧ ಕಪ್ ಹಾಲಿನಲ್ಲಿ ನೆನೆಸಿ (ಐಚ್ಚಿಕ)

ಹಲಸಿನಕಾಯಿ ಬಿರ್ಯಾನಿ ತಯಾರಿಸುವ ವಿಧಾನ:

 • ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರು ಉದುರಾಗಿರುವಂತೆ ಅನ್ನ ಮಾಡಿಕೊಂಡು ಸಲ್ಪ ಆರಲು ಬಿಡಬೇಕು.
 • ಸಿಪ್ಪೆ ತೆಗೆದ ಹಲಸಿನಕಾಯಿಯನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ಸ್ವಲ್ಪ ಹಸೀ ಹೋಗುವವರೆಗೂ ಬೇಯಿಸಿಕೊಂಡು ಸ್ವಲ್ಪ ಆರಲು ಬಿಡಬೇಕು.
 • 2 ಈರುಳ್ಳಿ, ಟೊಮೆಟೊ, ಪುದೀನ ಎಲೆಗಳು, ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ಲವಂಗ, ಸೋಂಪು, ದಾಲ್ಚಿನ್ನಿ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಮಿಕ್ಸಿಯಲ್ಲಿ ಸ್ವಲ್ಪವೇ ನೀರನ್ನು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ.
 • 2 ಈರುಳ್ಳಿಯನ್ನು ತೆಗೆದುಕೊಂಡು ತೆಳುವಾದ ಹೋಳುಗಳನ್ನಾಗಿ ಕತ್ತರಿಸಿ ಕೊಳ್ಳಿ
 • ಒಂದು ಗಟ್ಟಿ ತಳದ ಬಾಣಲೆಗೆ ಬಿಸಿ ತುಪ್ಪ ಹಾಕಿ, ತುಪ್ಪ ಕಾದ ನಂತರ ಸೋಂಪನ್ನು ಹಾಕಿ ಹಸಿ ಹೋಗುವವರೆಗೂ ಹುರಿದುಕೊಳ್ಳಿ.
 • ಈಗ ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಗರಿಗರಿಯಾಗಿ ಕಂದು ಬಣ್ಣ ಬರುವವರೆಗೆ ಹುರಿದು ಕೊಂಡು ಅದನ್ನು ಒಂದು ತಟ್ಟೆಯಲ್ಲಿ ತೆಗೆದಿಟ್ಟು ಕೊಳ್ಳಿ.
 • ಈಗ ಆದೇ ತುಪ್ಪಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ, ರುಬ್ಬಿಟ್ಟು ಕೊಂಡ ಮಸಾಲಾವನ್ನು ಬೆರೆಸಿ ಹಸಿ ವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಿ
 • ಈಗ ಬೇಯಿಸಿದ ಹಲಸಿನಕಾಯಿ ತುಂಡುಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 2-3 ನಿಮಿಷಗಳ ಕಾಲ ಮುಚ್ಚಿಡಿ.
 • ಒಂದು ದಪ್ಪವಾದ ತಳವುಳ್ಳ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಪದರ ಆರಿದ ಬಾಸುಮತಿ ಅನ್ನವನ್ನು ಹರಡ ಬೇಕು. ನಂತರ ಅದರ ಮೇಲೆ ಹಲಸಿನಕಾಯಿ ಮಸಾಲವನ್ನು ಒಂದು ಪದರ ಹರಡಬೇಕು, ಇದೇ ವಿಧಾನವನ್ನು ಮತ್ತೊಮ್ಮೆ ಪುನರಾವರ್ತಿಸಿ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಮತ್ತು ಗರಿಗರಿಯಾಗಿ ಹುರಿದಿಟ್ಟು ಕೊಂಡಿದ್ದ ಈರುಳ್ಳಿ ಚೂರುಗಳನ್ನು ಹರಡಿ. ಇದರ ಮೇಲೆ ಕೇಸರಿ ಬೆರಸಿದ ಹಾಲನ್ನು ಸೇರಿಸಿದಲ್ಲಿ ರುಚಿ ಮತ್ತಷ್ಟೂ ಹೆಚ್ಚಿಸುತ್ತದೆ.
 • ಈಗ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಸುಮಾರು 2-3 ನಿಮಿಷಗಳ ಸಣ್ಣ ಉರಿಯಲ್ಲಿ ಬೇಯಿಸಿದಲ್ಲಿ ರುಚಿ ರುಚಿಯಾದ ಬಿಸಿ ಬಿಸಿಯಾದ ಹಲಸಿನಕಾಯಿ ಬಿರ್ಯಾನಿ ಸಿದ್ದ.

ರುಚಿಕರವಾದ ಹಲಸಿನಕಾಯಿ ಬಿರ್ಯಾನಿ ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ ಮತ್ತು ಮಾಡಿದ ನಂತರ ರುಚಿ ಹೇಗಿತ್ತು ಅನ್ನುವುದನ್ನು ನಮಗೆ ತಿಳಿಸುವುದನ್ನು ಮಾತ್ರ ಮರೆಯಬೇಡಿ.

ಏನಂತೀರೀ?

biryani-removebg-preview

ಮನದಾಳದ ಮಾತು : ಮೂಲತಃ ಮೊಘಲರ ಮೂಲಕ ಭಾರತಕ್ಕೆ ಬಿರಿಯಾನಿ ಮಾಡುವ ಕಲೆ ರೂಢಿಗೆ ಬಂದಿದೆ. ಬಿರಿಯನ್ ಎಂಬ ಪರ್ಷಿಯನ್ ಪದದ ಮೂಲಕ ಬಿರಿಯಾನಿ ಎಂಬ ಪದ ಪ್ರಸಿದ್ಧವಾಗಿದೆ. ಭಾರತದ್ಯಂತ ಈ ಖಾದ್ಯ ಅದರಲ್ಲೂ ಅಕ್ಕಿಯೇ ಪ್ರಧಾನವಾಗಿರುವ ದಕ್ಷಿಣ ಭಾರತದ ಮನೆಮನೆಗಳಲ್ಲಿಯೂ ಬಿರಿಯಾನಿಯ ಪರಿಮಳವನ್ನು ಸವಿಯಬಹುದಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹೈದರಾಬಾದ್ ಬಿರಿಯಾನಿ ಸುಪ್ರಸಿದ್ಧವಾಗಿದೆ.

ಹಲಸಿನ ಕಾಯಿ ಇಲ್ಲದಿದ್ದಲ್ಲಿ ಅದರ ಬದಲಾಗಿ ಹೂಕೋಸು (ಕಾಲೀ ಫ್ಲವರ್) ಬಳಸಿಕೊಂಡು ಮನೆಯಲ್ಲಿಯೇ ಇದೇ ರೀತಿಯಾಗಿ ಘಮ ಘಮವಾದ ಬಿರ್ಯಾನಿ ತಯಾರು ಮಾಡಬಹುದಾಗಿದೆ. ಪುರುಸೊತ್ತು ಇದ್ದಲ್ಲಿ ರಂಜಾನ್ ಸಮಯದಲ್ಲಿ ಹೋಟೆಲ್ಲಿನಲ್ಲಿ ಬಿರ್ಯಾನಿ ತಿನ್ನಲೂ ಹೋಗಿ ಪೇಚಿಗೆ ಸಿಕ್ಕಿಕೊಂಡ ನಮ್ಮ ಈ ಪ್ರಸಂಗವನ್ನು ಓದಲು ಮರೆಯದಿರಿ.

ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಇದ್ದಕ್ಕಿದ್ದಂತೆಯೇ ಎರಡ್ಮೂರು ದಿನಗಳಿಂದ ನಮ್ಮ ಖನ್ನಢ ಉಟ್ಟು ಓರಾಟಗಾರರು ಎದ್ದೂ ಬಿದ್ದು ಓಡಾಡ್ತಾ ಅವ್ರೇ ಮತ್ತು ಸ್ಯಾನೇ ಮಾತಾಡ್ತಾ ಅವ್ರೆ!! . ಅರೇ ಯಾಕಪ್ಪಾ!! ಇಷ್ಟು ಬೇಗ ನವೆಂಬರ್ ತಿಂಗಳು ಬಂದು ಬಿಡ್ತಾ?. ಮೊನ್ನೇ ಇನ್ನೂ ಆಗಷ್ಟ್ 15, ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿರೋ ಖುಷೀನೇ ಇನ್ನೂ ತಣ್ಣಗಾಗಿಲ್ಲ. ಆಷ್ಟರೊಳಗೆ ಕರ್ನಾಟಕ ರಾಜ್ಯೋತ್ಸವ ಬಂದು ಬಿಡ್ತಾ ಅಂತಾ ಯೋಚಿಸಿ ಅಲ್ಲೇ ಬಿಳಿ ಪ್ಯಾಂಟ್ ಬಿಳೀ ಶರ್ಟ್ ಹಾಕಿಕೊಂಡು, ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಚೈನ್ ಅದರ ಜೊತೆಗೆ ಮ್ಯಾಚಿಂಗ್ ಇರಲೀ ಅಂತಾ ಹಳದೀ ಕೆಂಪು ಬಣ್ಣದ ಶಾಲು ಹಾಕ್ಕೊಂಡು ಕೈಗಳಲ್ಲಿ ಬೇಡಿ ತರದ ಬ್ರೇಸ್ಲೇಟ್ ಹಾಕಿ ಕೊಂಡು ಓಡಾಡ್ತಿದ್ದ ಒಬ್ಬ ಓರಾಟಗಾರನ್ನನ್ನು ತಡೆದು ನಿಲ್ಲಿಸಿ, ಅಣ್ಣಾ ಏನ್ ಸಮಾಚಾರ ? ಇಷ್ಟೋಂದು ಓಡಾಡ್ತಾ ಇದ್ದೀರಿ? ಎಂದೆ. ಏನು ಸಮಾಚಾರ ಎಂದು ಕೇಳಿದ್ದೇ ತಡಾ, ದುರು ದುರುಗುಟ್ಟಿ ನನ್ನನ್ನೇ ಕೆಕ್ಕರಿಸಿಸುವ ಹಾಗೆ ನೋಡಿ, ಎನ್ ಜನಾ ಸಾ.. ನೀವೂ.. ಪೇಪರ್ ಓದಾಕಿಲ್ವಾ, ಇಂದಿ ಏರಿಕೆಯ ವಿರುದ್ಧ ಟೌನ್ ಆಲ್ ಮುಂದೆ ಪ್ರತಿಭಟನೆ ಮಾಡ್ತಾ ಇದ್ದೀವಿ !! ಸುಕ್ರವಾರನೋ ಇಲ್ಲಾ ಸನಿವಾರನೋ ಕರ್ನಾಟಕ ಬಂದ್ ಕೂಡಾ ಮಾಡ್ತೀವಿ ಅಂದ. ಓಹೋ ಹೌದಾ!! ನನಗೆ ಗೊತ್ತೇ ಇರಲಿಲ್ಲ. ಯಾಕೀ ಈ ಪ್ರತಿಭಟನೆ? ಹಿಂದಿ ಹೇರಿಕೆ ಎಲ್ಲಿ, ಯಾರಿಂದ ಆಗಿದೆ. ನನಗೆ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರ ಅಂತಾ ಯಾವುದೂ ಕಾನೂನನ್ನೂ ಇತ್ತೀಚಿಗೆ ಮಾಡಲಿಲ್ಲ. ಇನ್ನು ರಾಜ್ಯಸರ್ಕಾರ ಇಂತಹ ತೀರ್ಮಾನ ತೆಗೆದು ಕೊಳ್ಳಲು, ನೋ.. ವೇ.. ಛಾನ್ಸೇ ಇಲ್ಲಾ.. ಏಕೆಂದರೆ ಸರ್ಕಾರವೇ ಇಲ್ಲ, ಇರುವುದೆಲ್ಲಾ ಒನ್ ಮ್ಯಾನ್ ಆರ್ಮಿ ಅಂದೆ. ಅದಕ್ಕವನು ಅದೆಲ್ಲಾ ನನಗೆ ಗೊತ್ತಿಲ್ಲಾ ಸಾ.. ನಮ್ ಗುರು ಏಳವ್ರೇ.. ಮಗಾ.. 300 ರೂಪಾಯಿ ಒಂದು ಚಿಕನ್ ಬಿರ್ಯಾನಿ ಒಂದು ಕ್ವಾಟ್ರು ಕೊಡ್ತೀವಿ ಅಂತ ಏಳಿ ಒಂದೈವತ್ತು- ನೂರು ಜನಾನಾ ಎತ್ತಾಕ್ಕೊಂಡ್ ಟೌನ್ ಆಲ್ ತವಾ ಬಾ.. ಅಂತಾ ಅದಕ್ಕೇ ಓಡಾಡ್ತಾ ಇವ್ನಿ, ನೀವು ಬರೋಂಗಿದ್ರೆ ಏಳಿ, ಕರ್ಕೊಂಡು ಓಯ್ತೀನಿ ಅಂದಾ. ಇಲ್ಲಪ್ಪಾ ನನಗೆ ಕೆಲಸ ಇದೇ. ಬಹಳ ಒಳ್ಳೇ ಕೆಲಸ ಮಾಡ್ತಾ ಇದ್ದೀರಿ. ನಿಮ್ಮಂತಹವರು ಇರೋದ್ರಿಂದಾನೇ ಇನ್ನೂ ನಮ್ಮ ರಾಜ್ಯದಲ್ಲಿ ಕನ್ನಡ ಅಂತಾ ಉಳ್ಕೊಂಡಿದೇ ಅಂತಾ ಹೇಳಿ ಸುಮ್ಮನೆ ಸಾಗ ಹಾಕಿದೆ.

hindhi1

ಇಷ್ಟಕ್ಕೂ ಆಗಿದ್ದೇನು ಎಂದರೆ, ಇನ್‌ಫೆಂಟ್ರಿ ರಸ್ತೆಯ ಬಳಿ ಮಾರವಾಡಿಗಳ ಗಣೇಶ ಬಾಗ್‌ ಪ್ರಾರ್ಥನಾ ಮಂದಿರದಲ್ಲಿ ಅವರ ಗುರುಗಳು ಚಾತುರ್ಮಾಸ ಆಚರಣೆ ಮಾಡುತ್ತಿದ್ದು ಅದರ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್‌ ಕಟ್ಟಲಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಹಿಂದಿ ಭಾಷೆಯಲ್ಲಿ ಬ್ಯಾನರ್‌ ಕಟ್ಟಿದ್ದರಿಂದ ಕೆಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬ್ಯಾನರ್‌ ಹರಿದು ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್‌ ಕಿತ್ತು ಹಾಕಿ, ಅಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಕನ್ನಡ ಭಾಷೆಯ ಬಗ್ಗೆ ಸಣ್ಣದಾಗಿ ಭಾಷಣ ಬಿಗಿದು ‘ಕನ್ನಡವಿದ್ದರೆ ಶಾಂತಿ-ಇಲ್ಲದಿದ್ದರೆ ಕ್ರಾಂತಿ’ ಎಂದು ಎಚ್ಚರಿಸಿ, ಈ ಘಟನೆಯನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದನ್ನು ಗಮನಿಸಿದ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು, ಬ್ಯಾನರ್‌ ಹರಿದು ಹಾಕಿದ್ದಕ್ಕಾಗಿ, ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ಎಂದು ದಾಖಲಿಸಿ, ಆ ಕನ್ನಡಪರ ಸಂಘಟನೆಗಳ ಆರು ಮಂದಿಯನ್ನು ಬಂಧಿಸಿ ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ವಿಚಾರಣೆಗಾಗಿ ಆ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿದ್ದಾರೆ.

ಈ ಘಟನೆ ಬಗ್ಗೆ ಗುರು ಆನಂದ ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಫ್ಯಾನ್‌ಚಂದ್‌ ಜೈನ್‌ ಅವರನ್ನು ಮಾಧ್ಯಮಗಳು ವಿಚಾರಿಸಿದಾಗ, ಈ ಕಾರ್ಯಕ್ರಮ ಸಂಪೂರ್ಣವಾಗಿ ಜೈನ ಸಮುದಾಯಕ್ಕಾಗಿಯೇ ಇದ್ದ ಕಾರ್ಯಕ್ರಮವಾಗಿದ್ದು ರಾಜ್ಯ ಮತ್ತು ದೇಶದ ಮೂಲೆ ಮೂಲೆಗಳಿಂದ ಹಲವಾರು ಜೈನ ಮುದಾಯದವರು ಬರುವವರಿದ್ದು ಹಾಗು ಇತರೇ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿದ್ದ ಕಾರಣ, ಬ್ಯಾನರನ್ನು ಹಿಂದಿಯಲ್ಲಿ ಮಾತ್ರವೇ ಹಾಕಿಸಲಾಗಿತ್ತು ಮತ್ತು ಕನ್ನಡದಲ್ಲಿ ಬ್ಯಾನರ್‌ ಹಾಕಿರಲಿಲ್ಲ ಎಂದು ತಿಳಿಸಿದರು. ಹಾಗೇ ತಮ್ಮ ಮಾತನ್ನು ಮುಂದುವರೆಸಿ, ನಾವು ಹಿಂದೆಯೂ ನಮ್ಮ ಅನೇಕ ಕಾರ್ಯಕ್ರಮಗಳಲ್ಲಿ ಇದೇ ರೀತಿ ಹಿಂದಿ ಭಾಷೆಯಲ್ಲಿಯೇ ಬ್ಯಾನರ್‌ ಹಾಕಿದ್ದೇವೆ, ಎಂದೂ ಕೂಡ ಇಂತಹ ಕಹಿ ಅನುಭವ ಆಗಿಲ್ಲ. ಈ ಶುಕ್ರವಾರ ಮಾತ್ರವೇ ಕೆಲ ಕನ್ನಡ ಕಾರ್ಯಕರ್ತರು ಬ್ಯಾನರ್‌ ಹರಿದಿದ್ದಾರೆ. ನಿಜವಾಗಿಯೂ ನಾವುಗಳಾರೂ, ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸಕ್ಕೆ ಕನ್ನಡಿಗರಿಗೆ ಆಹ್ವಾನ ಇರದ ಕಾರಣ ಕೇವಲ ಹಿಂದಿಯಲ್ಲಿ ಮಾತ್ರವೇ ಬ್ಯಾನರ್‌ ಹಾಕಲಾಗಿತ್ತು ಎಂದು ಸ್ಪಷ್ಟೀಕರಿಸಿದ್ದಾರೆ.

ಇಡೀ ಪ್ರಕರಣವನ್ನು ಅವಲೋಕಿಸಿದರೆ ಅದೊಂದು ಸಮುದಾಯದ ಖಾಸಗೀ ಕಾರ್ಯಕ್ರಮ. ಭಾರತ ದೇಶ ಸರ್ವ ಸ್ವತಂತ್ಯ ದೇಶ ಮತ್ತು ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಇದೆ. ಅದಕ್ಕೂ ಹೆಚ್ಚಾಗಿ ಹಿಂದಿ ಭಾಷೆ ದೇಶದ ಹದಿನೈದು ಅಧಿಕೃತ ಭಾಷೆಗಳಲ್ಲಿ ಒಂದು. ಯಾರೋ ಕೆಲವು ಹುಡುಗರು ಯಾರದ್ದೋ ಕುಮ್ಮಕ್ಕಿನಿಂದ ಈ ರೀತಿಯ ಪ್ರಕರಣವನ್ನು ಅಚಾತುರ್ಯವಾಗಿ ಮಾಡಿದ್ದಾರೆ. ಪೋಲೀಸರು ಎರಡೂ ಕಡೆಯವರನ್ನು ಕರೆಸಿ ಮಾತಾನಾಡಿಸಿ ಸಮಾಧಾನ ಪಡಿಸಿ ಪ್ರಕರಣವನ್ನು ಅಲ್ಲೇ ಇತ್ಯರ್ಥ ಮಾಡಿಸಿ ಕಳುಹಿಸಬಹುತಾಗಿತ್ತು.

ಆದರೇ, ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದರು ಹಿಂದಿ ಬೋರ್ಡ್ ತೆಗೆಸುವ ನೆಪದಲ್ಲಿ ಗದ್ದಲ ಮಾಡಿದವರು ಗೂಂಡಾಗಳು ಎಂದು ಕರೆದದ್ದು ಕೆಲವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಯ್ತು. ಸಣ್ಣದಾಗಿ ಇದ್ದ ಪೆಟ್ಟಿ ಕೇಸ್ ಒಂದಕ್ಕೆ ರಾಜಕೀಯ ಬಣ್ಣ ಬಳೆದು ಟಿಲಿಫೋನ್ ಕದ್ದಾಲಿಕೆಯಲ್ಲಿ ತಮ್ಮ ಬಂಡವಾಳ ಬಯಲಾಗಿದ್ದನ್ನು ಕಂಡು ಹೇಗಾದರೂ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಪರದಾಡುತ್ತಿದ್ದ ಕೆಲ ರಾಜಕೀಯ ನಾಯಕರುಗಳು ಮತ್ತೊಮ್ಮೆ ಅಪವಿತ್ರ ಮೈತ್ರಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು, ಕನ್ನಡ ಪರ ಹೋರಾಟಗಾರ ತಿದಿ ತೀಡಿದ ಪರಿಣಾಮವೇ ಎಲ್ಲಾ ಖನ್ನಡ ಉಟ್ಟು ಓರಾಟಗಾರರೂ ಒಮ್ಮಿಂದ್ದೊಂಮ್ಮೆಲೆ ಅಖಾಡಕ್ಕೆ ಧುಮುಕಿದರು.

ಕಳೆದ ಮೂರು ವಾರಗಳಿಂದ ಆಶ್ಲೇಷ ಮಳೆ ಧಾಳಿಗೆ ಸಿಕ್ಕಿ ಮುಕ್ಕಾಲು ರಾಜ್ಯ ನೀರಾಪಾಲಾಗಿದೆ. ಇಂತಹ ಸಮಯದಲ್ಲಿ ಮಂತ್ರಿಮಂಡಲ ರಚನೆ ಎಂದು ಸಮಯ ವ್ಯರ್ಥ ಮಾಡದೇ ಮುಖ್ಯಮಂತ್ರಿಗಳು ಈ ಇಳೀ ವಯಸ್ಸಿನಲ್ಲಿಯೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನೆರೆ ಸಂತ್ರಸ್ತರ ಜಾಗಗಳಿಗೆ ಹೋಗಿ ಸ್ಥಳೀಯ ಅಧಿಕಾರಿಗಳ ಬೆಂಬಲದಿಂದ ಸರ್ಕಾರದ ವತಿಯಿಂದ ಅಗತ್ಯ ನೆರವುಗಳನ್ನು ಕೊಡಿಸುತ್ತಿದ್ದಾರೆ. ಇನ್ನೂ ನಾನಾ ಸಂಘ ಸಂಸ್ಥೆಗಳೂ ತಮ್ಮ ಕೈಯಲ್ಲಾದ ಮಟ್ಟಿಗೆ ತನು ಮನ ಧನ ಅರ್ಪಿಸುವುದರೊಂದಿಗೆ ಜನರ ಸಂಕಷ್ಟಗಳಿಗೆ ನೆರವಾಗುತ್ತಿದ್ದಾರೆ. ಆಗೆಲ್ಲಾ ಕೈನೋವು, ಕಣ್ಣು ನೋವು, ಆರೋಗ್ಯ ಸರೀ ಇಲ್ಲಾ ಅಂತಾ ಸಬೂಬು ಹೇಳುತ್ತಾ, ಕೆಲಸಕ್ಕೆ ಕರೀ ಬೇಡಿ, ಬಿರ್ಯಾನಿಗೆ ಮರೀ ಬೇಡಿ ಎಂದು ಬಕ್ರೀದ್ ಬಿರ್ಯಾನಿ ತಿನ್ನುತ್ತಾ, ಇಲ್ಲಿಂದ ದಿಲ್ಲಿ- ದಿಲ್ಲಿಯಿಂದ ಇಲ್ಲಿ ಎಂದು ಐಶಾರಾಮ್ಯವಾಗಿ ಓಡಾಡುತ್ತಿದ್ದ ಈ ರಾಜಕೀಯ ಧುರೀಣರು ಸೀದಾ ಆ ಕನ್ನಡ ಸಂಘಟನೆಯ ಹಿರಿಯ ಮುಖಂಡರ ಆ ತತ್ ಕ್ಷಣದ ಅಗತ್ಯತೆಗಳನ್ನು ಪೂರೈಸಿ ಅವರನ್ನು ರಾಜ್ಯಸರ್ಕಾರ ಮತ್ತು ಕೇಂದ್ರ ಸರ್ಕಾರದ ಮೇಲೆ ಹಿಂದಿ ಹೇರಿಕೆ ಎಂದು ಛೂ.. ಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೆಲ ವರ್ಷಗಳ ಹಿಂದೆ ಹೊಟ್ಟೆಗೆ ಹಿಟ್ಟಿಲ್ಲದೆ, ಜೀವನ ಸಾಗಿಸಲು ಮುಂಬೈಯಲ್ಲಿ ಬಾರ್ ಮತ್ತು ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ಪುಡಿಗಾಸಿನಲ್ಲಿ ಜೀವನ ಸಾಗಿಸುತ್ತಿದ್ದವರು ಇಂದು ಅಧಿಕೃತವಾಗಿ ಅವರೇ ಘೋಷಿಸಿಕೊಂಡಂತೆ ನೂರಾರು ಕೋಟಿಗಳಷ್ಟು ಆಸ್ತಿ ಮಾಡಿ ಕೊಂಡಿದ್ದಾರೆ. ಕಷ್ಟ ಪಟ್ಟು ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದನೆ ಮಾಡಿ ಅಷ್ಟೂ ಹಣವನ್ನು ಖರ್ಚು ಮಾಡದೇ ಉಳಿಸಿದರೂ 1 ಕೋಟಿಯಾಗಿ ಸಂಗ್ರಹಿಸಿ ಇಡಲು 8 ವರ್ಷ 3 ತಿಂಗಳು ಬೇಕು. ಇನ್ನು ಯಾವುದೇ ಕೆಲಸವನ್ನೂ ಮಾಡದೇ, ಯಾವುದೇ ವ್ಯವಹಾರವನ್ನೂ ಮಾಡದೇ ಐಶಾರಾಮ್ಯವಾಗಿ ಜೀವನ ನಡೆಸುತ್ತಾ ದುಬಾರೀ ಕಾರುಗಳಲ್ಲಿಯೇ ಓಡಾಡುತ್ತಾ ಕೆಲವೇ ಕೆಲವು ವರ್ಷಗಳಲ್ಲಿ ನೂರಾರು ಕೋಟಿಗಳಷ್ಟು ಆಸ್ತಿ ಮಾಡಲು ಹೇಗೆ ಸಾಧ್ಯ? ಕನ್ನಡ ಸಂಘಟನೆಗಳಲ್ಲಿ ಈ ಪರಿಯಾಗಿ ದುಡ್ದಿದೆ ಎಂದು ತಿಳಿದಿದ್ದೇ ತಡಾ, ಒಂದಾಗಿದ್ದ ಕನ್ನಡ ಸಂಘಟನೆ ಛಿದ್ರ ಛಿದ್ರವಾಗಿ ನೂರಾರು ಸಂಘಟನೆಗಳಾಗಿ ಆಗಿ ಹೋದವು. ಒಮ್ಮಿಂದೊಮ್ಮೆಲ್ಲೆ ಎಂಕಾ, ನಾಣೀ, ಸೀನಾ ಎಲ್ಲರೂ ಉಟ್ಟು ಖನ್ನಡ ಓರಾಟಗಾರರಾಗಿ ಪರಿವರ್ತಿತರಾಗಿ ಹೋದರು.

ಈ ಕನ್ನಡ ಪರ ಸಂಘಟನೆಗಳು ಕರ್ನಾಟಕ ರಾಜ್ಯ ಮತ್ತು ಕನ್ನಡ ಭಾಷೆಯನ್ನು ಗುತ್ತಿಗೆ ತೆಗೆದು ಕೊಂಡಂತೆ ತಮ್ಮ ಹದ್ದು ಮೀರಿ ಎಲ್ಲೆ ಮೀರಿ ವರ್ತಿಸುತ್ತ ಭಯದ ವಾತಾವರಣ ನಿರ್ಮಿಸತೊಡಗಿದವು. ಯಾವುದೇ ಸಭೆ ಸಮಾರಂಭಗಳು ಆಗಬೇಕಿದ್ದರೆ ಇಂತಿಷ್ಟು ಕಪ್ಪ ಕಾಣಿಕೆ ಆ ಸಂಘಟನೆಗಳಿಗೆ ಕೊಟ್ಟಲ್ಲಿ ಮಾತ್ರವೇ ಕಾರ್ಯಕ್ರಮ ಸುಗಮವಾಗಿ ಸಾಗುತ್ತದೆ ಇಲ್ಲದಿದ್ದಲ್ಲಿ ಅನಾವಶ್ಯಕ ಕಿರಿಕಿರಿ ಮಾಡಿಸ ತೊಡಗಿದವು. ಒಂದೆರಡು ವರ್ಷದ ಹಿಂದೆ ಇದೇ ಕನ್ನಡ ಪರ ಸಂಘಟನೆಯ ಹಿರಿಯ ಕಾರ್ಯಕರ್ತ ಬೆಂಗಳೂರಿನಲ್ಲಿ Sunny Leone ಕಾರ್ಯಕ್ರಮ ನಿಗದಿಯಾಗಿದ್ದಾಗ, ಗಲಾಟೆ ಮಾಡುತ್ತೇವೆಂದು ಆಯೋಜಕರನ್ನು ಬೆದರಿಸಿ ಮೊದಲು 50 ಲಕ್ಷ ನಂತರ 25 ಕೊಟ್ಟರೆ ಇಡೀ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ತಮ್ಮ ಮುಂದಾಳತ್ವದಲ್ಲಿಯೇ ನಡೆಸಿಕೊಡುತ್ತೇವೆ ಎಂದು ಹೇಳಿದ ವೀಡೀಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿ ಕಡೆಗೆ ಆ ಕಾರ್ಯಕ್ರಮವೇ ರದ್ದಾಗಿದ್ದು ಈಗ ಇತಿಹಾಸ.

hindhi2

ಅಷ್ಟಕ್ಕೂ ಈ ಸಂಘಟನೆಗಳಿಗೆ ಕನ್ನಡದ ಬಗ್ಗೆ ಅಷ್ಟೊಂದು ಕಾಳಜಿ ಹೊಂದಿದೆಯಾ ಎಂದು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಕನ್ನಡದ ಸಂಘಟನೆಯ ಮುಂದಾಳತ್ವ ಹೊಂದಿರುವ ಬಹುತೇಕರು ಅನ್ಯಭಾಷಿಕರೇ. ಕನ್ನಡ ನಾಡಿನಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಕನ್ನಡ ಭಾಷೆಯನ್ನು ದುರ್ಬಳಕೆ ಮಾಡಿಕೊಂಡು ಒಂದಷ್ಟು ಜನರನ್ನು ಸದಾ ಹಿಂದೆ ಮುಂದೆ ಇಟ್ಟು ಕೊಂಡು ಓಡಾಡುತ್ತಾ ಜನರನ್ನು ಭಯಭೀತರನ್ನಾಗಿ ಮಾಡುತ್ತಾ ತಿಂಗಳು ತಿಂಗಳು ಕಪ್ಪಾ (ಹಫ್ತಾ) ವಸೂಲು ಮಾಡುವವರೇ ಬಹಳಷ್ಟು ಮಂದಿ ಇದ್ದಾರೆ.

ಚುನಾವಣಾ ಸಮಯದಲ್ಲಿ ಜೆಸಿ ನಗರ ಶಿವಾಜೀ ನಗರ, ತಿಲಕ್ ನಗರ, ಟ್ಯಾನರೀ ರೋಡ್, ವಿಲ್ಸನ್ ಗಾರ್ಡನ್ ಈ ಭಾಗಗಳಲ್ಲಿ ಹುಡುಕಿದರೂ ಒಂದಾದರೂ ಕನ್ನಡ ಬ್ಯಾನರ್ ಕಾಣದೇ ಅಲ್ಲೆಲ್ಲಾ ಉರ್ದು ಮಯವಾಗಿರುತ್ತದೆ.

ಅದೇ ರೀತಿ, ಹಲಸೂರು, ಇಂದಿರಾನಗರದ ಕೆಲಭಾಗ, ಶ್ರೀರಾಮ ಪುರ, ಚಿಕ್ಕ ಪೇಟೆಯ ಕೆಲ ಭಾಗ, ಬೆಂಗಳೂರಿನ ದಂಡು ಪ್ರದೇಶದಲ್ಲಿ ಸಂಪೂರ್ಣ ತಮಿಳುಮಯ.

ಇನ್ನು ಕಲಬುರಗಿಯ ನಗರ ಪಾಲಿಕೆಯ ಕಟ್ಟಡದ ಮೇಲೆ ಉರ್ದು ಬೋರ್ಡ್ ಹಾಕಲೇಬೇಕು. ಉರ್ದು ಇಲ್ಲದಿದ್ದಲ್ಲಿ ಕನ್ನಡವೂ ಬೇಡಾ ಎಂದು ಉದ್ಧಟತನದ ಇಬ್ಬಂದಿತನದ ಧೋರಣೆ ಪ್ರದರ್ಶಿಸಿದವರು ಇದೇ ಖನ್ನಡ ಪರ ಓರಾಟಗಾರರೇ.

ಹಾಗೆ ನೋಡಿದರೆ ಆಗ್ಗಿಂದ್ದಾಗೆ ನಡೆಯುವ ಅನ್ಯ ಧರ್ಮೀಯರ ಅನೇಕ ಧಾರ್ಮಿಕ ಸಮಾವೇಶಗಳು ಮತ್ತು ಸುವಾರ್ತಾ ಕೂಟಗಳ ಫೆಕ್ಸ್ ಗಳು ಮತ್ತು ಪೋಸ್ಟರ್ಗಳು ಕನ್ನಡಕ್ಕಿಂತ, ಉರ್ದು, ತಮಿಳು ಮತ್ತು ತೆಲುಗು ಮಯವಾಗಿಯೇ ಇರುತ್ತದೆ. ಆಗೆಲ್ಲಾ ಈ ಓರಾಟಗಾರರು ಈ ರೀತಿಯಾಗಿ ಫ್ಲೆಕ್ಸ್ ಅಥವಾ ಪೋಸ್ಟರ್ ಹರಿದು ಪ್ರತಿಭಟನೆ ಮಾಡಿದ್ದು ಯಾರೂ ಕಂಡೆ ಇಲ್ಲ.

ಇನ್ನು ಬಹುತೇಕ ರಾಜಕೀಯ ಪಕ್ಷದವರು ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮ ಬಾಂಧವರ ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಆ ಬಾಂಧವರ ಭಾಷೆಯಲ್ಲೇ ಕರಪತ್ರ ಹೊರಡಿಸಿ ಅಷ್ಟೇ ಸಾಲದು ಎಂಬಂತೆ ಕಾಶ್ಮೀರದಿಂದ ಪ್ರತ್ಯೇಕತಾವಾದಿಯನ್ನು ಕರೆಸಿ ಭಾಷಣ ಬಿಗಿಸಿದ್ದಲ್ಲದೇ ,ಇಲ್ಲೇ ಇರುವ ಕೆಲ ಕುಲಬಾಂಧವರು ಕನ್ನಡ ಗೊತ್ತಿದ್ದರೂ ಅವರ ಭಾಷೆಯಲ್ಲಿಯೇು ಪ್ರಚೋದನಾತ್ಮಕವಾಗಿ ಭಾಷಣ ಬಿಗದ ಸಮಯಲ್ಲಿ ಕಾಣಿಸದ ಈ ಖನ್ನಡ ಓರಾಗಾರರು ಈಗ ಪ್ರತ್ಯಕ್ಷರಾಗಿರುವುದು ಅನುಮಾನವನ್ನು ಹುಟ್ಟು ಹಾಕುತ್ತಿದೆ.

ಆರಂಭದಲ್ಲಿ ನಾನು ಹೊಡೆದ ಹಾಗೆ ಮಾಡುತ್ತೀನಿ. ನೀನು ಅತ್ತ ಹಾಗೆ ಮಾಡು. ಯಾವಾಗ ಈ ಸಂಘಟನೆಗಳಿಗೆ ತಮಗೆ ಸಲ್ಲಬೇಕಾದ ಕಪ್ಪವನ್ನು ಎಲ್ಲಾ ರಾಜಕೀಯ ಪಕ್ಷದವರೂ ಕೊಡುತ್ತಾರೋ ಅಲ್ಲಿಂದ ಹೊಟ್ಟೆ ತುಂಬಿದ ತೋಳದ ರೀತಿ ಜಾಣ ಕುರುಡು ಮತ್ತು ಮೌನ ವಹಿಸಿ ಬಿಡುತ್ತಾರೆ.

ನಿಜಕ್ಕೂ ಜೈನ ಮತದವರು ಸಾಧು ಸ್ವಭಾವದವರು. ನಿಜ. ಪರ ಊರಿನಿಂದ ತಮ್ಮ ಹೊಟ್ಟೇ ಪಾಡಿಗೆ ಇಲ್ಲಿ ಬಂದು ಅತೀ ಶೀಘ್ರದಲ್ಲಿಯೇ ಅರೇ ಬರೇ ಕನ್ನಡವನ್ನಾದರೂ ಕಲಿತು ನಾನಾ ರೀತಿಯ ವ್ಯಾಪಾರವನ್ನು ಮಾಡಿ ನಾಲ್ಕಾರು ಕಾಸು ಸಂಪಾದಿಸಿ ಅದರಲ್ಲಿ ಕೆಲವಷ್ಟನ್ನಾದರೂ ಸಮಾಜ ಮುಖೀ ಕಾರ್ಯಗಳಲ್ಲಿ ವಿನಿಯೋಗಿಸುತ್ತಾರೆ. ಆದರೆ ಅವರಾರು ಕಳ್ಳತನವನ್ನಾಗಲೀ, ದರೋಡೆಯನ್ನಾಗಲೀ ಅಥವಾ ರೋಲ್ ಕಾಲ್ ಮಾಡಿ ಸಂಪಾದಿಸಿದ ಉದಾಹರಣೆಯೇ ಇಲ್ಲಾ.

ಇಂದಿಗೂ ಬಹುತೇಕ ಸಾರಿಗೆ ಸಂಸ್ಥೆಗಳ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ಜೈನ್ ಸಮುದಾಯದವರೇ ಉಚಿತವಾಗಿ ನಿರ್ಮಿಸಿ ಕೊಟ್ಟಿರುವುದು ನಮಗೆಲ್ಲಾ ತಿಳಿದ ವಿಷಯವೇ.

ಭಯ್ಯಾ ಪಾನಿ ಪೂರಿ ದೇನಾ, ಭಯ್ಯಾ ತೋಡಾ ಜ್ಯಾದಾ ಟೀಕಾ ಡಾಲ್ನಾ ಅಂತಾನೋ, ಇಲ್ಲವೇ ಭಯ್ಯಾ ಏ ಬಿಂದಿ ಪ್ಯಾಕೇಟ್ ಕಿತ್ನಾಕಾ ಹೈ? ತೋಡಾ ಕಮ್ ಕರ್ಕೇ ದೇನಾ ಎಂದು ನಮ್ಮವರೇ ಹಿಂದಿಯಲ್ಲಿ ಮಾತಾನಾಡಿಸುವುದನ್ನು ಕಣ್ಣಾರೆ ಇಂದಿಗೂ ನೋಡಬಹುದು. ಅದೇ ರೀತಿ, ಏ ಬಾಯ್, ಚಾರ್ ಸೌ ಬೀಸ್ ಪಾನ್ ದೇನಾ, ತೋಡಾ ಸುಪಾರೀ ದೇಖ್ ಕೇ ಡಾಲ್ನಾ ಎಂದು ಬೀಡಾ ಹಾಕಿಸಿಕೊಂಡು ತಿಂದು ಎಲ್ಲೆಂದರಲ್ಲಿ ಉಗಿಯುವ ನೂರಾರು ಖನ್ನಢ ಓರಾಟಗಾರರು ಇಂದಿಗೂ ಕಾಣ ಸಿಗುತ್ತಾರೆ.

 • ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ಕಾಶ್ಮೀರದಿಂದ (ಇತ್ತೀಚಿನ ಸುದ್ದಿ) ಹಿಡಿದು ಕನ್ಯಾಕುಮಾರಿಯ ವರೆಗೂ ಕಛ್ ನಿಂದ ಕಟಕ್ ವರೆಗೂ ಯಾವ ಭಾರತೀಯ ಬೇಕಾದರೂ ಸ್ವತಂತ್ರ್ಯವಾಗಿ ವಾಸಿಸಬಹುದು. ತಮಗಿಷ್ಟವಾದ ಭಾಷೆಯನ್ನು ಮಾತನಾಡಬಹುದು. ಆದರೆ ಬಲವಂತವಾಗಿ ಮತ್ತೊಬ್ಬರ ಮೇಲೆ ತಮ್ಮ ಭಾಷೆಯನ್ನು ಹೇರಬಾರದಷ್ಟೇ.

  ಕನ್ನಡ ಭಾಷೆಯನ್ನು ಉಳಿಸುವುದು ಮತ್ತು ಬೆಳೆಸುವುದು ಕೇವಲ ಕೆಲ ಸಂಘ ಸಂಸ್ಥೆಗಳ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ.

 

 • ಮನೆಯೇ ಮೊದಲ ಪಾಠ ಶಾಲೆಯಾದ ಕಾರಣ ಮನೆಯಲ್ಲಿ ಕನ್ನಡವೇ ಪ್ರಧಾನವಾಗಿರಲಿ. ಕನ್ನಡದ ಧಾರಾವಾಹಿಗಳು ಮತ್ತು ಕನ್ನಡದ ಚಲನ ಚಿತ್ರಗಳನ್ನು ಮಕ್ಕಳಿಗೆ ಹೆಚ್ಚಾಗಿ ತೋರಿಸಿ.
 • ನಮ್ಮ ಮಕ್ಕಳನ್ನು ಕನ್ನಡ ಶಾಲೆ ಅದರಲ್ಲೂ ಸರ್ಕಾರೀ ಶಾಲೆಗೇ ಸೇರಿಸಿ ಎಂದು ಹೇಳುವುದರ ಮೊದಲು, ಅವರು ಕಲಿಯುವ ಶಾಲೆಯಲ್ಲಿ ಕನ್ನಡ ಸರಿಯಾಗಿ ಓದುವುದುನ್ನು ಬರೆಯುವುದನ್ನು ಮತ್ತು ಮಾತನಾಡುವುದನ್ನು ಕಲಿಸಿ.
 • ಒಬ್ಬ ಕನ್ನಡಿಗನಾಗಿ ಸರ್ಕಾರೀ, ಖಾಸಗೀ ಮತ್ತು ಬ್ಯಾಂಕ್ಗಳಲ್ಲಿ ಕನ್ನಡವನ್ನೇ ವ್ಯಾವಹಾರಿಕ ಭಾಷೆಯನ್ನಾಗಿ ಬಳಸಿದಲ್ಲಿ ಉಳಿದವರೂ ಅದಕ್ಕೆ ತಕ್ಕಂತೆ ಕನ್ನಡದಲ್ಲಿಯೇ ಪ್ರತಿಕ್ರಿಯಿಸುತ್ತಾರೆ.
 • ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕೆಲವು ಉದ್ಯೋಗವನ್ನು ಮೀಸಲಿಟ್ಟಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಹೆಚ್ಚಾದೀತು.
 • ಕನ್ನಡದ ಮೇಲಿನ ಅಭಿಮಾನದಿಂದ ಅದನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಎಲ್ಲಾ ಕನ್ನಡಿಗರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೇ ಹೊರತು, ಕನ್ನಡದ ಹೆಸರಿನಿಂದಲೇ ಅನ್ಯಭಾಷಿಗರನ್ನು ಹೆದರಿಸಿ ಬೆದರಿಸಿ ನಮ್ಮ ಹೊಟ್ಟೆ ಹೊರೆಯುವ ಕಾಯಕಕ್ಕೆ ಎಂದೂ ಯಾರೂ ಇಳಿಯಬಾರದು. ಏಕೆಂದರೆ ಕನ್ನಡಿಗರದ್ದು ಕೊಡುವ ಕೈ ಹೊರತು ಬೇಡುವ ಕೈ ಅಲ್ಲಾ. ದೇಹಿ ಎಂದು ಬಂದವರಿಗೆ ಹೊಟ್ಟೆಯ ತುಂಬಾ ಅನ್ನವನಿಟ್ಟು ನೀರಿನ ಜೊತೆ ಬೆಲ್ಲವನ್ನೂ ಕೊಡುವ ವಿಶಾಲ ಹೃದಯಿಗಳು. ಇಂತಹ ಸಣ್ಣ ಪುಟ್ಟ ಕ್ಷುಲ್ಲಕ ವಿಷಯಗಳು ಕನ್ನಡಿಗರ ಸ್ವಾಭಿಮಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ತರುವ ಕಾರಣ ಅದರಿಂದ ದೂರವಿರೋಣ. ನಾವೂ ಸ್ವಾಭಿಮಾನಿಗಳಾಗಿ ತಲೆಯೆತ್ತಿ ಬಾಳೋಣ. ಇತರರನ್ನೂ ನೆಮ್ಮದಿಯಾಗಿ ಬಾಳಗೊಡೋಣ.

ಏನಂತೀರೀ?

 

 

ರಂಜಾನ್ ರಾಮಾಯಣ

biryaniಸುಮಾರು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು. ಆಗಷ್ಟೇ ನಮ್ಮನೆಯ ಹತ್ತಿರದ ಬಿಇಎಲ್ ಹೊಸಾ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ಆರಂಭವಾಗಿತ್ತು. ಹೈದರಾಬಾದ್ ಮೂಲದ ಪ್ಯಾರಡೈಸ್ ಹೊಟೆಲ್ ರುಚಿ ರುಚಿಯಾದ ಬಿರ್ಯಾನಿಗೆ ಬಲು ಖ್ಯಾತಿ. ಕೆಲಸದ ನಿಮಿತ್ತ ಹಲವು ಬಾರಿ ಹೈದರಾಬಾದ್ಗಗೆ ಹೋಗಿದ್ದಾಗ ಅಲ್ಲಿ ಬಿರ್ಯಾನಿ ಸವಿದದ್ದನ್ನು ನಮ್ಮ ಮನೆಯಲ್ಲಿ ಹಂಚಿಕೊಂಡಿದ್ದೆನಾದ್ದರಿಂದ ಬಿರ್ಯಾನಿ ಪ್ರಿಯೆ ನನ್ನ ಮಗಳು ಅಪ್ಪಾ, ಹೇಗೂ ಮನೆಯ ಸಮೀಪವೇ ಪ್ಯಾರಡೈಸ್ ಹೋಟೆಲ್ ಶುರುವಾಗಿದೆ. ಬಿರಿಯಾನಿ ತಿನ್ನಲು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ದಂಬಾಲು ಬಿದ್ದಿದ್ದಳು. ನಾನೂ ಕೂಡಾ, ಇಂದು ನಾಳೆ ಎಂದು ಹಾಗೆಯೇ ಕಾಲ ತಳ್ಳುತ್ತಿದೆ. ಅಂದೂ ಕೂಡಾ ರಂಜಾನ್. ಕಛೇರಿಗೆ ರಜೆ ಇದ್ದ ಕಾರಣ ಎಲ್ಲಿಗೋ ಹೋಗಿ ಅದೇ ರಸ್ತೆಯಲ್ಲಿ ಸಂಜೆ ಮಡದಿಯೊಂದಿಗೆ ಮನೆಗೆ ಬರುತ್ತಿದ್ದಾಗ ಮಗಳ ಬಿರಿಯಾನಿಯ ಬಯಕೆ ನೆನಪಾಗಿ ಗಾಡಿ ಪ್ಯಾರಡೈಸ್ ಹೋಟೆಲ್ ಬಳಿ ನಿಲ್ಲಿಸಿ, Take away counterನಲ್ಲಿ ಎರಡು ವೆಜ್ ಬಿರಿಯಾನಿ ಪಾರ್ಸೆಲ್ ಕೊಡಿ ಎಂದು ಕೇಳಿದೆ.

ಅಲ್ಲಿ ಆರ್ಡರ್ ತೆಗೆದುಕೊಳ್ಳುವವ, ಸಾರ್ ಎಷ್ಟು ಜನ ನಿಮ್ಮ ಮನೆಯಲ್ಲಿ ಇದ್ದೀರೀ ಎಂದು ಕೇಳಿದಾಗ, ನಾವು ಐವರಿದ್ದೇವೆ ಎಂದು ಉತ್ತರಿಸಿದೆ. ಸರ್ ಹಾಗಿದ್ದಲ್ಲಿ ಎರಡು ಬಿರಿಯಾನಿ ಬದಲು ಒಂದು Family pack ತೆಗೆದುಕೊಳ್ಳಿ. ಅದೇ ಬೆಲೆಗೆ ಐದೂ ಜನರಿಗೆ ಸಾಕಾಗುವಷ್ಟು ಬಿರಿಯಾನಿ, ಜೊತೆಗೆ ಎರಡು ರೊಟ್ಟಿ ಮತ್ತು ಒಂದು ಕರ್ರಿ ಕೊಡುತ್ತೇವೆ ಎಂದಾಗ, ನನಗೆ ಸರಿ ಎನಿಸಿ, ಸರಿ ಅದೇ ಕೊಡಿ ಎಂದು ಹೇಳಿ ಬಿಲ್ ಹಣ ಪಾವತಿಸಿ ಹಾಗೆಯೇ ಮಡದಿಯೊಂದಿಗೆ ಕುಶಲೋಪರಿ ಮಾತಾಡತೊಡಗಿದೆ. ಸುಮಾರು 20-25 ನಿಮಿಷಗಳಷ್ಟರಲ್ಲಿ ನಮ್ಮ order ಸಿದ್ದವಾಗಿ ಚೆಂದನೆಯ ಪ್ಯಾಕ್ ಮಾಡಿ ಕೈಗಿತ್ತು, ಸರ್ ರಂಜಾನ್ ಹಬ್ಬದ ಪ್ರಯುಕ್ತ ಸಿಹಿ ಪಾಯಸವನ್ನು ಉಡುಗೊರೆಯಾಗಿ ಕೊಟ್ಟಿದ್ದೇವೆ. ಸರ್ ಮನೆಗೆ ಬೇಗನೇ ಹೋಗಿ ಆಹಾರ ಬಿಸಿಯಾಗಿರುವಾಗಲೇ ತಿನ್ನಲು ಚೆನ್ನಾಗಿರುತ್ತದೆ. ಮನೆಯವರೆಲ್ಲರೂ ನಮ್ಮ ಹೋಟೇಲ್ ಅಹಾರ ಖುಷಿಯಿಂದ ಸೇವಿಸಿ ಹಾಗೂ ಮತ್ತೊಮ್ಮೆ ಎಲ್ಲರೊಂದಿಗೆ ಇಲ್ಲಿಗೇ ಬಂದು ಊಟ ಮಾಡಿ ಕೊಂಡು ಹೋಗಿ ಎಂದು ಬಹಳ ಆತ್ಮೀಯವಾಗಿ ಬೀಳ್ಕೊಟ್ಟರು.

ಅಷ್ಟರಲ್ಲಾಗಲೇ ಗಂಟೆ ಏಳಾಗಿದ್ದರಿಂದ ಮನೆಗೆ ಕರೆ ಮಾಡಿ ಮಗಳಿಗೆ ಅವಳ ನೆಚ್ಷಿನ ಬಿರಿಯಾನಿ parcel ತರುತ್ತಿರುವ ವಿಷಯ ತಿಳಿಸಿ ತಟ್ಟೆ, ಲೋಟಗಳನ್ನು ಸಿದ್ಧ ಪಡಿಸಲು ತಿಳಿಸಿ ಭರದಿಂದಲೇ ಮನೆಗೆ ಹೋದಾಗ ಕೇವಲ ನಾಲ್ಕೇ ತಟ್ಟೆಗಳನ್ನು ಜೋಡಿಸಿ ಊಟಕ್ಕಾಗಲೇ ಸಿದ್ದವಾಗಿದ್ದರು ನನ್ನ ಮಕ್ಕಳು. ಆರೇ ಇದೇನು ನಾಲ್ಕೇ ತಟ್ಟೆಗಳನ್ನು ಇಟ್ಟಿದ್ದೀರೀ? ತಾತನ ತಟ್ಟೇನೇ ಇಟ್ಟಿಲ್ಲವಲ್ರೋ ಎಂದಾಗ, ಅಪ್ಪಾ ತಾತಾ ನನಗೆ ಬಿರ್ಯಾನಿ, ಗಿರ್ಯಾನಿ ಆಗಿ ಬರುವುದಿಲ್ಲವಾದ್ದರಿಂದ ಮಧ್ಯಾಹ್ನದ ಅಡುಗೆಯನ್ನೇ ತಿನ್ನುವುದಾಗಿ ಹೇಳಿರುವ ಕಾರಣ, ನಾಲ್ಕೇ ತಟ್ಟೆಗಳನ್ನು ಜೋಡಿಸಿಟ್ಟಿದ್ದೇವೆ ಎಂದು ಹೇಳಿದಾಗ, ತಂದೆಯವರ ಕೋಣೆಗ ಹೋಗಿ, ಅಣ್ಣಾ ಬನ್ನಿ ಸ್ವಲ್ಪ ಬಿರ್ಯಾನಿ ತಿನ್ನುವಿರಂತೆ. ಚೆನ್ನಾಗಿರುತ್ತದೆ ಎಂದಾಗ, ಬೇಡಪ್ಪಾ ಬೇಡ. ನಾನು ಅದೆಲ್ಲಾ ತಿನ್ನೋದಿಲ್ಲ. ನೀವು ಬೇಕಿದ್ದರೆ ತಿನ್ನಿ ಎಂದು ಖಡಾ ಖಂಡಿತವಾಗಿ ಹೇಳಿದ್ದನ್ನು ಕೇಳಿ ಅವರನ್ನು ಬಿಟ್ಟು ತಿನ್ನ ಬೇಕಲ್ಲಾ ಎಂದು ಮನಸ್ಸಿಗೆ ಸ್ವಲ್ಪ ಬೇಸರ ಎನಿಸಿದರೂ ಹಿರಿಯರನ್ನು ಬಲವಂತ ಮಾಡಬಾರದು ಎಂದೆನಿಸಿ ನಮ್ಮ ಕೋಣೆಗೆ ಬಂದು ತಟ್ಟೆಗೆ ಆಹಾರವನ್ನು ಬಡಿಸಲು ಸಿದ್ದವಾಗಿ ಎಲ್ಲವನ್ನೂ ತೆಗೆದಿಡುತ್ತಾ ಬಿರ್ಯಾನಿ ಪ್ಯಾಕೆಟ್ ಮತ್ತು ರೋಟಿ ಪ್ಯಾಕ್ ತೆಗೆದು ಪಕ್ಕಕ್ಕಿಟ್ಟೆ. ಆದರೆ ‍curry boxಗೆ ಕೈ ಹಾಕಿದಾಗ ಅದರ ಮೇಲೆ ಕೆಂಪು ಬಣ್ಣದ ಚುಕ್ಕಿ ಇದ್ದದ್ದನ್ನು ಕಂಡು ಅನುಮಾನವಾಗಿ ತೆರೆದು ನೋಡಿದರೆ veg curry box ಬದಲಾಗಿ non-veg curry box ಕೊಟ್ಟಿರುವುದು ಸ್ಪಷ್ಟವಾಗಿ ಗಮನಕ್ಕೆ ಬಂದು ಕೋಪ ಸರ್ರನೆ ನೆತ್ತಿಗೇರಿತು. ಕೂಡಲೇ ಬಿರ್ಯಾನಿ ಪ್ಯಾಕ್ ತೆರೆದು ನೋಡಿದಾಗ ಸದ್ಯ ವೆಜ್ ಬಿರ್ಯಾನಿಯನ್ನೇ ಕೊಟ್ಟಿದ್ದರು. ಕೂಡಲೇ ಪ್ಯಾಕ್ ಮೇಲಿದ್ದ ಫೋನ್ ನಂಬರ್ಗೆ ಕರೆ ಮಾಡಿ ಅವರ ಮೇಲೆ ಜೋರು ಮಾಡಬೇಕು ಎಂದು ನಡೆದ ವಿಷಯ ಕೂಲಂಕುಶವಾಗಿ ತಿಳಿಸಿದಾಗ. ಓಹೋ ಸಾರಿ ಸರ್ ಸಾರಿ, ನಮ್ಮಿಂದ ತಪ್ಪಾಗಿ ಹೋಗಿದೆ. ನಿಮ್ಮ ಮನೆಯ ವಿಳಾಸ ತಿಳಿಸಿ ನಾವು ಸರಿಯಾದದ್ದನ್ನು ಈ ಕೂಡಲೇ ಕಳುಹಿಸುತ್ತೇವೆ ಎಂದು ಬಹಳ ಶಾಂತಿಯಿಂದ ತಿಳಿಸಿ, ಮನೆಯ ವಿಳಾಸ ತೆಗೆದುಕೊಂಡು ಆವರ ಡೆಲಿವರಿ ಬಾಯ್ ಹೆಸರು ಮತ್ತು ಫೋನ್ ನಂಬರ್ ನಮಗೆ ತಿಳಿಸಿ ಇನ್ನು ಹದಿನೈದು ಇಪ್ಪತ್ತು ನಿಮಿಷಗಳ ಒಳಗೆ ನಿಮ್ಮ ಮನೆಗೆ ಡೆಲಿವರಿ ಮಾಡ್ತೀವಿ ಎಂದು ತಿಳಿಸಿದರು. ಅವರು ಮಾತನಾಡಿದ ರೀತಿ ಮತ್ತು ಯಾವುದೇ ರೀತಿಯ ವಾಗ್ವಾದ ಮಾಡದೇ ತಪ್ಪನ್ನು ಒಪ್ಪಿಕೊಂಡು, ತಪ್ಪನ್ನು ಸರಿ ಪಡಿಸುತ್ತೇವೆ ಎಂದು ವಿನಮ್ರವಾಗಿ ಕೇಳಿಕೊಂಡಾಗ ಅವರ ಮೇಲೆ ಜೋರು ಮಾಡಲು ಮನಸ್ಸೇ ಆಗಲಿಲ್ಲ.

ಮಕ್ಕಳೋ ಅದಾಗಲೇ ತಿನ್ನೋದಕ್ಕೆ ಸಿದ್ದರಾಗಿದ್ದವರು ಈ ರೀತಿಯಾದ ಅಚಾತುರ್ಯದಿಂದ ವಿಚಲಿತರಾಗಿದ್ದರು. ಅವರನ್ನು ಹೇಗೋ ಸಮಾಧಾನ ಪಡಿಸುವಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದಾಗಿ ಹೊರಗೆ ಹೋಗಿ ನೋಡಿದಾಗ ಪ್ಯಾರಡೈಸ್ ಹೋಟೆಲ್ಲಿನ ವ್ಯಕ್ತಿ ನಮ್ಮ ಆಹಾರದ ಡಬ್ಬಿಯೊಂದಿಗೆ ನಿಂತಿದ್ದರು. ಸರಿ ಒಳಗೆ ಬನ್ನಿ ಎಂದು ಕರೆದಾಗ ಬೇಡಾ ಸರ್. ಈಗಾಗಲೇ ನಮ್ಮಿಂದ ತಪ್ಪಾಗಿ ಹೋಗಿದೆ ಮತ್ತು ತಡವಾಗಿ ಹೋಗಿದೆ. ಎಲ್ಲರೂ ಕಾಯುತ್ತಿರುತ್ತಾರೆ. ತೊಗೊಳ್ಳಿ ಸಾರ್ ಎಂದು ಎರಡು ಪ್ಯಾಕ್ ಕೈಗಿತ್ತರು. ಇದೇನಿದು ಎರಡು ಪ್ಯಾಕ್? ಎಂದಾಗ ಸರ್ ಸಸ್ಯಹಾರಿಗಳಿಗೆ ಮಾಂಸಾಹಾರವನ್ನು ಕೊಟ್ಟಾಗ ಅಗಬಹುದಾದ ಕಸಿವಿಸಿ ನಮಗೆ ಅರ್ಥವಾಗುತ್ತದೆ. ಅದಕ್ಕೆ ನಾವು ಎಷ್ಟೇ ಸಮಜಾಯಿಷಿ ಕೊಟ್ಟರೂ ಏನೇ ಕೊಟ್ಟರೂ ಸರಿ ಪಡಿಸಲಾಗದಾದರೂ ನಮ್ಮಿಂದ ನಿಮಗಾದ ಕಸಿವಿಸಿಗಾಗಿ ಮತ್ತೆ ಎರಡು ರೋಟಿಗಳನ್ನು ಕೊಡುತ್ತಿದ್ದೇವೆ. ದಯವಿಟ್ಟು ತೆಗೆದುಕೊಳ್ಳಿ ಎಂದು ಬಹಳ ವಿನಯವಾಗಿ ಹೇಳಿದಾಗ ಆ ವ್ಯಕಿತ್ಯ ಮನವರಿಕೆಗೆ ಮಾರು ಹೋಗಿ ಅವರನ್ನು ಬೈಯ್ಯಲು ಮನಸ್ಸೇ ಬರಲಿಲ್ಲ. ಒಳಗಿನಿಂದ ಡಬ್ಬಿಯನ್ನು ತಂದು ಕೊಟ್ಟಾಗ, ಸರ್, ಇಂದು ರಂಜಾನ್ ಪ್ರಯುಕ್ತ ತುಂಬಾ ಜನ ನಮ್ಮ ಹೋಟೆಲ್ಗೆ ಬಂದ್ದಿದ್ದರು. ತುಂಬಾನೇ ರಷ್ ಇದ್ದ ಕಾರಣ ಏನೋ ಈ ರೀತಿಯ ತಪ್ಪಾಗಿ ಹೋಗಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ. ಮತ್ತೊಮ್ಮೆ ಇಡೀ ಕುಟುಂಬದ ಸಮೇತ ನಮ್ಮ ಹೋಟೆಲ್ಗೆ ಬನ್ನಿ. ನಾನೇ ಖುದ್ದಾಗಿ ನಿಮ್ಮ ಆತಿಥ್ಯ ವಹಿಸುತ್ತೇನೆ ಎಂದು ಹೇಳಿದರು. ಪರವಾಗಿಲ್ಲ ಒಮೊಮ್ಮೆ ಹೀಗೆ ಆಗಿ ಹೋಗುತ್ತದೆ ಎಂದು ಅವರನ್ನು ಸಮಾಧಾನ ಪಡಿಸಿ ಕಳುಹಿಸಿ ಕೊಟ್ಟು ಒಳಗೆ ಬರುವಷ್ಟರಲ್ಲಿ ಮಕ್ಕಳು ತಟ್ಟೆಗೆ ಆಹಾರವನ್ನು ಬಡಿಸಿ ನನ್ನ ಆಗಮನಕ್ಕಾಗಿ ಕಾಯುತ್ತಿದ್ದರು.

ನಂತರ ಎಲ್ಲರೂ ಸಮಚಿತ್ತದಿಂದ ನೆಮ್ಮದಿಯಾಗಿ ಮನಸೋ ಇಚ್ಘೆ, ಹೊಟ್ಟೆ ತುಂಬಾ ಊಟ ಮಾಡಿದರೂ ಅರ್ಧದಷ್ಟು ಬಿರಿಯಾನಿ ಹಾಗೆಯೇ ಉಳಿದು ಹೋಗಿತ್ತು. ಆಹಾರ ಚೆಲ್ಲಲು ಮನಸ್ಸು ಬಾರದೇ ತಂಗಳು ಡಬ್ಬಿಯಲ್ಲಿ ಭದ್ರವಾಗಿ ಎತ್ತಿಟ್ಟು ಮಾರನೇ ದಿನ ಬೆಳಿಗ್ಗೆ ಮೊಸರು ಬಜ್ಜಿ ಮಾಡಿ ಬೆಳಗಿನ ತಿಂಡಿಯೊಂದಿಗೆ ತಂಗಳು ಬಿರ್ಯಾನಿ ತಿಂದಾಗ ಅದರ ರುಚಿಯೇ ಬೇರಾಗಿತ್ತು ಮತ್ತಷ್ಟೂ ಸೊಗಸಾಗಿತ್ತು ಆಗಲೇ ನಮಗೆ ರಂಜಾನ್ ಮಾರನೆಯ ದಿನ‌ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಗೆ‌‌ ಸಂಸಾರ ಸಮೇತರಾಗಿ ಬಂದು ಏಕೆ‌ ತಿನ್ನುತ್ತಾರೆ ಎಂಬ ಗುಟ್ಟು ರಟ್ಟಾಗಿತ್ತು.

ಇಂದು ಕೂಡಾ ರಂಜಾನ್. ಇಂದೂ ಕೂಡಾ ನನಗೆ ಮತ್ತು ನನ್ನ ಮಗಳಿಗೆ ರಜೆ. ಬೆಳಿಗ್ಗೇ, ಸುಮ್ಮನೆ ತಮಾಷಿಗಾಗಿ ಏನೋ ಅಕ್ಕಾ, ರಂಜಾನ್ ಬಿರ್ಯಾನಿ ತಿನ್ನಲು ಪ್ಯಾರಡೈಸ್ಗೆ ಹೋಗೋಣ್ವಾ ಎಂದು ಕೇಳಿದೆ, ಅದಕ್ಕೆ ಅವಳೂ ಕೂಡಾ ತಕ್ಷಣವೇ ಹಳೆಯ ನೆನಪನ್ನು ಮೆಲುಕು ಹಾಕುತ್ತಾ ಸಣ್ಣಗೆ ಹುಸಿ ನಗುತ್ತಾ ಸರಿ ಅಪ್ಪಾ ನಡೀರಿ ಹೋಗೋಣ ಎಂದಿದ್ದೇ ತಡಾ, ನನ್ನಾಕೀ, ಏನೂ ಬೇಡ , ಒಂದು ಸರಿ ಆದ ರಂಜಾನ್ ರಾಮಾಯಣವೇ ಸಾಕು ಸಾಕು. ಮತ್ತೆ ಮತ್ತೆ ಅಲ್ಲಿಗೇ ಹೋಗ್ಬೇಕಾ? ನಾನೇ ರುಚಿ ರುಚಿಯಾಗಿ ಮಂಗಳೂರು ಸೌತೇಕಾಯಿ ಹುಳಿ ಮಾಡಿದ್ದೇನೆ ಎಲ್ಲೂ ಹೋಗುವುದೂ ಬೇಡ ಎನ್ನುವಷ್ಟರಲ್ಲಿ ನಮ್ಮ ಮಾವನವರು ಕರೆ ಮಾಡಿ ಎಲ್ಲರೂ ನಮ್ಮ ಮನೆಗೇ ಬನ್ನಿ ಒಟ್ಟಿಗೆ ಊಟ ಮಾಡೋಣ ಎಂದಾಗ, ಹಿರಿಯರ ಮನ ನೋಯಿಸುವುದು ಬೇಡ ಎಂದು ಹೇಳಿ ನಮ್ಮ ಮನೆಯ ಹುಳಿಯ ಕೊತೆಗೆ ಅವರ ಮನೆಯ ಚಪಾತಿ, ಸಾಗು ಅವರ ಮನೆಯಲ್ಲಿಯೇ ಎಲ್ಲರೂ ಗಡದ್ದಾಗಿ ತಿಂದು ಭುಕ್ತಾಯಾಸವನ್ನು ಪರಿಹರಿಸಿ ಕೊಳ್ಳುತ್ತಿದ್ದೇವೆ.

ಒಟ್ಟಿನಲ್ಲಿ ಈ ಪ್ರಕರಣ ಹಾಸ್ಯವೆನಿಸಿ ಸುಖಾಂತ್ಯದಲ್ಲಿ ಕೊನೆಗೊಂಡರೂ ಸಂಪ್ರದಾಯಸ್ಥರ ಮನೆಯಗಳಲ್ಲಿ ಆಗಬಹುದಾದ ಕಸಿವಿಸಿ ನಿಜಕ್ಕೂ ಅವರ್ಣನೀಯ ಮತ್ತು ಅಸಹನೀಯ. ಗೊತ್ತಿದ್ದೂ ಗೊತ್ತಿದ್ದೂ ನಾಲಿಗೆಯ ರುಚಿಗಾಗಿ ಮಾಂಸಾಹಾರಿ ಹೋಟೆಲ್ನಲ್ಲಿ ಸಸ್ಯಾಹಾರವನ್ನು ಬಯಸಿದರೆ ಈ ರೀತಿಯ ಅವಗಡಗಳು ಸಂಭವಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೇ ಈ ಪ್ರಸಂಗ.

ಈ ವೀಡೀಯೋ ಮತ್ತು ಲೇಖನ ಇಷ್ಟವಾದಲ್ಲಿ like ಮಾಡಿ, Share ಮಾಡಿ, Subscribe ಆಗೋದನ್ನ ಮರೀಬೇಡಿ

ಏನಂತೀರೀ?