ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿವಿಧ ಭಯೋತ್ಪಾದನಾ ಚಟುವಟಿಕೆ ಮತ್ತು ಕೋಮುದಳ್ಳುರಿ ಮತ್ತು ವಿದೇಶಗಳಿಂದ ಅಕ್ರಮ ಹಣ ವರ್ಗಾವಣೆ ಕುರಿತಾಗಿ ಇಂದು ಬೆಳ್ಳಂಬೆಳಿಗ್ಗೆ 13 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಕ ಕಾಲದಲ್ಲಿ ಧಾಳಿ ನಡೆಸಿ, 100ಕ್ಕೂ ಅಧಿಕ PFI, SDPI ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ಈ ಎರಡು ಸಂಘಟನೆಗಳು ಭಾರತದಲ್ಲಿ ಬೆಳೆದು ಬಂದ ಪರಿ ಮತ್ತು ಅವುಗಳ ಧ್ಯೇಯ ಮತ್ತು ಅವುಗಳು ಮಾಡುತ್ತಿರುವ ಕೆಲಸಗಳ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದ್ದು ಅಲ್ಲಿ ನಮ್ಮ ಸನಾತನ ಧರ್ಮದ  ಆಧಾರದಲ್ಲಿ ಪೂಜೆ ಪುನಸ್ಕಾರಗಳು ನಡೆಯುವ ಮೂಲಕ ಶ್ರದ್ಧಾ ಕೇಂದ್ರಗಳಾಗಿವೆ. ಭಕ್ತಾದಿಗಳು ದೇವಾಲಯಕ್ಕೆ ಹೋಗಿ ತಮ್ಮ ಶಕ್ತ್ಯಾನುಸಾರ ದೇವರನ್ನು ಪೂಜಿಸಿ ನೈವೇದ್ಯವನ್ನು ಅರ್ಪಿಸಿ ಯಥಾ ಶಕ್ತಿ ಕಾಣಿಕೆಯನ್ನು ಅರ್ಪಿಸಿ ಬರುತ್ತಾರೆ. ಇನ್ನು ದೇವಾಲಯಗಳೂ ಸಹಾ ಭಕ್ತರಿಂದ ಆ ರೀತಿಯಾಗಿ ಪಡೆದ ದೇಣಿಗೆಯಿಂದ ಭಕ್ತಾದಿಗಳಿಗೆ ದಿನ ನಿತ್ಯವೂ ದಾಸೋಹ ನಡೆಸುವುದಲ್ಲದೇ, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಹೋಮ ಹವನಗಳನ್ನು ನಡೆಸುತ್ತಾ,… Read More ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ