ಸಮಸ್ಯೆ ಒಂದು ಪರಿಹಾರ ನೂರು

ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ‌ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ… Read More ಸಮಸ್ಯೆ ಒಂದು ಪರಿಹಾರ ನೂರು

ದೇವರ ಲೆಕ್ಕಾಚಾರ

ಒಮ್ಮೆ ಇಬ್ಬರು ವ್ಯಕ್ತಿಗಳು ಅರಳೀ ಕಟ್ಟೆಯ ಬಳಿ ಕುಳಿತು ಲೋಕೋಭಿರಾಮವಾಗಿ ಹರಟುತ್ತಿದ್ದರು. ಅದಾಗಲೇ ಸಂಜೆಯಾಗಿದ್ದು ದಟ್ಟವಾದ ಕಾರ್ಮೋಡ ಕವಿದಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಆಗಮನವಾಗಿ, ಅಭ್ಯಂತರವಿಲ್ಲದಿದ್ದರೆ, ನಾನೂ ನಿಮ್ಮೊಂದಿಗೆ ಸೇರಿಕೊಳ್ಳಬಹುದೇ ಎಂದು ಕೇಳಿದಾಗ ಅವರಿಬ್ಬರೂ ಓಹೋ ಅಗತ್ಯವಾಗಿ ಎಂದು ಹೇಳಿದರು. ಅವರೆಲ್ಲರೂ ತಮ್ಮ ಮಾತುಕಥೆ ಮುಂದುವರೆಸುತ್ತಿದ್ದಂತೆಯೇ, ಜೋರಾಗಿ ಮಳೆ ಬರಲು ಪ್ರಾರಂಭಿಸಿದಾಗ ಎಲ್ಲರೂ ಹತ್ತಿರದ ದೇವಸ್ಥಾನದ ಒಳಗೆ ಹೋಗಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರು. ಆಷ್ಟರಲ್ಲಿ ಆ ಆಗಂತುಕನು ನನಗೆ ಹಸಿವಾಗುತ್ತಿದೆ ಎಂದಾಗ ಉಳಿದ್ದಬ್ಬರೂ ಸಹಾ ಹೌದು… Read More ದೇವರ ಲೆಕ್ಕಾಚಾರ

ಮಲೆನಾಡಿನ ಮಳೆ

ಮಳೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳ್ರೀ ಇಳೆಯ ಕೊಳೆಯನ್ನೆಲ್ಲಾ ತೆಗೆದು ಹಾಕಿ ನಾಡಿಗೆ ಸಮೃದ್ಧಿಯನ್ನು ಕೊಡುವ ಪ್ರಾಕೃತಿಕ ಪ್ರಕ್ರಿಯೆ. ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವ ಪ್ರಕ್ರಿಯೆಯೇ ಮಳೆ . ಅಂತಹ ಮಳೆಗಾಗಿ ಬಾರದೇ ಭೂಮಿಯೆಲ್ಲಾ ಬಾಯ್ಬಿರಿದಿದ್ದರೆ, ತೆರೆದ ಬಾಯಿ ಮುಚ್ಚದೇ ಮೋಡಗಳತ್ತ ದಿಕ್ಕೆಟ್ಟು ನೋಡುತ್ತಿತ್ತಾನೆ ರೈತ. ಅಂತಹ ಸಮಯದಲ್ಲಿ ಆಗದಲ್ಲಿ ಕಾರ್ಮೋಡ ಕವಿದಾಗ ರೈತನಿಗೆ ಖುಷಿಯೋ ಖುಷಿ.   ಒಂದು ಹದ ಮಳೆ ಬೀಳುತ್ತಲೇ ರೈತನ ಮುಖದಲ್ಲಿ… Read More ಮಲೆನಾಡಿನ ಮಳೆ

ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ಕಳೆದ ಎರಡು ವಾರಗಳಿಂದ ನಮ್ಮ ರಾಜ್ಯದ ಬಹುತೇಕ ಪ್ರದೇಶಗಳು ಆಶ್ಲೇಷ ಮಳೆಗೆ ಬಲಿಯಾಗಿ ಮುಳುಗಿ ಹೋಗಿದೆ. ನೆನ್ನೆ ತನಕ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ಥಾರ ಮಾಡಿಕೊಂಡು ಸಾವಿರಾರು ಎಕರೆ ತೋಟ ಮಾಡಿ ಕೊಂಡು ಐಶಾರಾಮಿ ಬಂಗಲೆಯಲ್ಲಿ ವಾಸ ಮಾಡಿ ಕೊಂಡು ನೂರಾರು ಕೂಲಿ ಕಾರ್ಮಿಕರಿಗೆ ಮಾಲಿಕರಾಗಿದ್ದವರು ಇಂದು ಎಲ್ಲವನ್ನೂ ಕಳೆದು ಕೊಂಡು ಅದೇ ಕೂಲಿಗಳ ಜೊತೆಯಲ್ಲಿಯೇ ಗಂಜೀ ಕೇಂದ್ರದಲ್ಲಿ ನಿರಾಶ್ರಿತರಾಗಿರುವವರು ಬಹಳ ಮಂದಿ ಇದ್ದಾರೆ. ನಮ್ಮ ರಾಜ್ಯದಂತೆ ನೆರೆ ರಾಜ್ಯವಾದ ಕೇರಳದಲ್ಲೂ ವಿಪರೀತವಾದ… Read More ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ಸುಮಾರು ವರ್ಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಜಪಾನ್ ದೇಶದ ಟೋಕೀಯೋ ನಮ್ಮ ಮತ್ತೊಂದು ಶಾಖೆಗೆ ಹೋಗುವ ಸಂದರ್ಭ ಒದಗಿ ಬಂದಿತ್ತು. ಅದು ನನ್ನ ಮೊತ್ತ ಮೊದಲ ವಿದೇಶೀ ಪ್ರವಾಸವಾಗಿದ್ದ ಕಾರಣ ಬಹಳ ಉತ್ಸುಕನಾಗಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರುಗಳನ್ನು ಮಾಡಿಕೊಂಡಿದ್ದೆ. ಅದರಲ್ಲೂ ವಿಶೇಷವಾಗಿ ಸಸ್ಯಹಾರೀ ಊಟದ ವ್ಯವಸ್ಥೆಯ ಬಗ್ಗೆ ಬಹಳ ತಲೆ ಕೆಡಿಸಿಕೊಂಡು ಲಗೇಜಿನಲ್ಲಿ ನನ್ನ ಆರ್ಧದಷ್ಟು ಎಂಟಿಆರ್ ರೆಡಿ ಟು ಈಟ್ ಪದಾರ್ಥಗಳೇ ಆಗಿತ್ತು. ತಡ ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ಮಲೇಷಿಯಾದ… Read More ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೇ ಕೆಲವು ದಿನಗಳು ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನವೂ ಇರಲಾರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡಾರೂ ಜೀವನ ಮಾಡ್ತೀವಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಹಿಂದೆಲ್ಲಾ ನಿತ್ಯಹರಿದ್ವರ್ಣ ಕಾಡುಗಳಿದ್ದವು. ಎಲ್ಲಾ ಕಡೆಯಲ್ಲೂ ಹಸಿರು ಮಯವಾಗಿರುತ್ತಿದ್ದು. ಹಾಗಾಗಿ ಕಾಲ ಕಾಲಕ್ಕೆ ಯಥೇಚ್ಚವಾಗಿ ಮಳೆಗಳು ಆಗುತ್ತಿದ್ದವು. ಕೆರೆ ಕಟ್ಟೆಗಳು, ಕಲ್ಯಾಣಿ, ಭಾವಿ ಮತ್ತು ಮತ್ತು ನದಿಗಳು ತುಂಬಿ ಹರಿಯುತ್ತಿದ್ದವು. ಇದರಿಂದ ಯಾರಿಗೂ ನೀರಿನ… Read More ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ