ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ

ಅದೇ ಸಾರು ಹುಳೀ ಪಲ್ಯಗಳನ್ನು ತಿಂದು ಜಡ್ಡು ಹೋಗಿರುವ ನಾಲಿಗೆಗೆ ಸ್ವಲ್ಪ ಹುಳೀ ಮತ್ತು ಖಾರದ ಜೊತೆಗೆ ಒಗರು ಸೇರಿರುವ ಹುಳಿ ಮಾವಿನ ಕಾಯಿಯ ಜೊತೆಗೆ ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಅತೀ ಸುಲಭದ ದರದಲ್ಲಿ ಸಿಗುವ, ಬಹಳ  ಔಷಧೀಯ ಗುಣಗಳಿರುವ ಮೆಂತ್ಯದ ಸೊಪ್ಪು ಸೇರಿಸಿ ಅತ್ಯಂತ ರುಚಿಕರವಾದ ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ  ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ತಯಾರಿಸಲು ಬೇಕಾಗುವ ಪದಾರ್ಥಗಳು… Read More ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ

ಅಪ್ಪೆ ಸಾರು (ಮಾವಿನ ಸಾರು)

ಹೇಳಿ ಕೇಳಿ ಇದು ಮಾವಿನ ಕಾಯಿ ಕಾಲ. ಈಗಷ್ಟೇ ಮಾವಿನ ಕಾಯಿಗಳು ಚೆನ್ನಾಗಿ ಬಲಿತು ಇನ್ನೇನು ಕೆಲವೇ ದಿನಗಳಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಲಗ್ಗೆ ಇಡಲು ಸಜ್ಜಾಗಿವೆ (ಈಗಾಗಲೇ ಕೆಲವು ಮಾವಿನ ಹಣ್ಣುಗಳು ಲಭ್ಯವಿದೆ) ಈ ಬಲಿತ ಮಾವಿನ ಕಾಯಿಯಲ್ಲಿ ಉಪ್ಪಿನಕಾಯಿ, ಮಾವಿನ ಕಾಯಿ ಚಿತ್ರಾನ್ನ, ಮಾವಿನಕಾಯಿ ಕಾಯಿ ಸಾಸಿವೆ ಮಾಡಿಕೊಂಡು ಚಪ್ಪರಿಸುತ್ತೇವೆ. ಇಂದು ಉತ್ತರ ಕನ್ನಡ ಮತ್ತು ಮಲೆನಾಡಿನ ಕಡೆಯಲ್ಲಿ ಇದೇ ಮಾವಿನ ಕಾಯಿಯನ್ನು ಬಳಸಿಕೊಂಡು ಮಾಡುವ ಧಿಡೀರ್ ಆಗಿ ಅಪ್ಪೆ ಸಾರು ಮಾಡುವ… Read More ಅಪ್ಪೆ ಸಾರು (ಮಾವಿನ ಸಾರು)