ರಾಜ ಗಾಂಭೀರ್ಯದ ಬಲರಾಮ ಇನ್ನಿಲ್ಲ.

ಚುನಾವಣೆಯ ಭರಾಟೆಯಲ್ಲಿ ಮೈಸೂರಿನ ದಸರಾದಲ್ಲಿ 14 ಬಾರಿ ತಾಯಿ ಶ್ರೀ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊರುವ ಮೂಲಕ ಅಪಾರವಾದ ಜನ ಮನ್ನಣೆಯನ್ನು ಪಡೆದಿದ್ದ ಬಲರಾಮ ಮೃತಪಟ್ಟಿರುವ ವಿಷಯ ಹೆಚ್ಚಿನ ಜನರಿಗೆ ತಿಳಿಯದೇ ಹೋದದ್ದು ವಿಷಾಧನೀಯವಾಗಿದೆ.

ದಸರಾ ಅಂಬಾರಿ ಹೊರುವ ಆನೆಗಳ ವಿಶೇಷತೆಗಳೇನು? ಬಲರಾಮನ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯದಿರುವ ಕೂತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಜ ಗಾಂಭೀರ್ಯದ ಬಲರಾಮ ಇನ್ನಿಲ್ಲ.

ಭಾರತೀಯ ವಿಜ್ಞಾನ ಸಂಸ್ಥೆ (IISc.)

ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc.)ಯನ್ನು ದೇಶದ ಖ್ಯಾತ ಕೈಗಾರಿಗೋದ್ಯಮಿಗಳಾದ ಜೆಮ್ ಷಡ್ ಜೀ ಟಾಟಾರವರು ಆರಂಭಿಸಲು ಸ್ವಾಮಿ ವಿವೇಕಾನಂದರು ಹೇಗೆ ಕಾರಣರಾದರು? ಮತ್ತು ಇಂತಹ ಮಹಾನ್ ಸಂಸ್ಥೆಗೆ ನಮ್ಮ ಮೈಸೂರು ಸಂಸ್ಥಾನದ ಕೊಡುಗೆಗಳೇನು? IISc. ಬೆಳೆದು ಬಂದ ಹಾದಿಯ ಕುರಿತಾದ ಅದ್ಭುತವಾದ ಮಾಹಿತಿಗಳು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಭಾರತೀಯ ವಿಜ್ಞಾನ ಸಂಸ್ಥೆ (IISc.)

ಯೋಗಾಚಾರ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್

ಅತ್ಯಂತ ಕಡು ಬಡತನದ ಅನಾರೋಗ್ಯ ಪೀಡಿತ ಹುಡುಗನಾಗಿ ಹುಟ್ಟಿ ಧೃಢಮನಸ್ಸಿನಿಂದ ಯೋಗಾಭ್ಯಾಸವನ್ನು ಕಲಿತು ಸಾಧನೆ ಗೈದು ಅದೇ ಪತಂಜಲಿ ಯೋಗವನ್ನು ಮತ್ತಷ್ಟು ಸರಳೀಕರಿಸಿ, ಅಯ್ಯಂಗಾರ್ ಯೋಗ ಪದ್ದತಿ ಹೆಸರಿನಲ್ಲಿ ಇಡೀ ವಿಶ್ವಾದ್ಯಂತ ಯೋಗವನ್ನು ಪಸರಿಸಿದ ನಮ್ಮ ಹೆಮ್ಮೆಯ ಬಿ.ಕೆ.ಎಸ್ ಅಯ್ಯಂಗಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಯೋಗಾಚಾರ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್

ಎಂ. ಎಸ್. ರಂಗಾಚಾರ್ಯ

70ರ ದಶಕದಲ್ಲಿ ಮೈಸೂರಿನಲ್ಲಿ ಓದುತ್ತಿದ್ದ ಬಡ ಮಕ್ಕಳಿಗೆ ಯಾವುದೇ ಜಾತಿ, ಕುಲ, ಧರ್ಮದ ಹಂಗಿಲ್ಲದೇ, ವಾರಾನ್ನದ ರೂಪದಲ್ಲಿ ಹೊಟ್ಟೆ ತುಂಬಾ ಊಟವನ್ನು ಹಾಗುತ್ತಿದ್ದ ಕೊಡುಗೈ ದಾನಿ, ಪ್ರಖ್ಯಾತ ವಕೀಲರಾಗಿದ್ದ ಇಚ್ಚಾಮರಣಿ ಶ್ರೀ ಎಂ. ಎಸ್. ರಂಗಾಚಾರ್ಯ ಎಲ್ಲರ ಪ್ರೀತಿಯ ಗಡ್ಡದ ರಂಗಾಚಾರ್ಯ ಅವರ ವ್ಯ್ಕಕ್ತಿ, ವ್ಯಕ್ತಿತ್ವ ಮತ್ತು ಸಮಾಜ ಸೇವೆಯ ಹೃದಯಮೀಟುವ ವಿಷಯಗಳು ಇದೋ ನಿಮಗಾಗಿ… Read More ಎಂ. ಎಸ್. ರಂಗಾಚಾರ್ಯ

ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ನವೆಂಬರ್ ತಿಂಗಳಾದ್ಯಂತ ಕನ್ನಡ ನಾಡಿನ ಅವಿಖ್ಯಾತ ಕಲಿಗಳನ್ನು ಪರಿಚಯಿಸುವ ಕನ್ನಡದ ಕಲಿಗಳು ಮಾಲಿಕೆಯಲ್ಲಿ, ಮೈಸೂರು ಸಂಸ್ಥಾನದ ರಾಜಪುರೋಹಿತರು, ಆಸ್ಥಾನ ಕವಿಗಳೂ ಆಗಿದ್ದಲ್ಲದೇ, ತಮ್ಮ ಸರಸ ಕವಿತೆಗಳು, ಹತ್ತಾರು ಅನುವಾದ ಕೃತಿಗಳಲ್ಲದೇ, ತಮ್ಮದೇ ಸ್ವಂತ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಪುಣ್ಯಪುರುಷರಾಗಿರುವ ಶ್ರೀ ಬಸವಪ್ಪ ಶಾಸ್ತ್ರಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಹೈಫಾ ಮುಕ್ತಿ ದಿನ ಮತ್ತು ಮೈಸೂರಿನ ಯೋಧರ ನಂಟು

ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪಿಗೂ ಎತ್ತಲಿಂದೆತ್ತ ಸಂಬಂಧವಯ್ಯಾ ಎನ್ನುವಂತೆ, ಇಸ್ರೇಲಿನ ಹೈಫಾ ನಗರಕ್ಕೂ ಕರ್ನಾಟಕದದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ಸುಮಾರು 4,800 km ದೂರದ ಅಂತರವಿದ್ದರೂ, ಅಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 23 ಆಚರಿಸುವ ಹೈಫಾ ಡೇ ಯಂದು ಮೈಸೂರಿನ ಅರಸರಿಗೂ ಮತ್ತು ಮೈಸೂರಿನ ಸೈನಿಕರನ್ನು ಗೌರವದಿಂದ ನೆನೆಯುವುದರ ಹಿಂದಿರುವ ರೋಚಕದ ಕಥೆ ಇದೋ ನಿಮಗಾಗಿ
Read More ಹೈಫಾ ಮುಕ್ತಿ ದಿನ ಮತ್ತು ಮೈಸೂರಿನ ಯೋಧರ ನಂಟು

ಶಿವಪುರದ ಸತ್ಯಾಗ್ರಹ ಸೌಧ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ  ಸುಮಾರು 80 ಕಿಮಿ ದೂರ ಪ್ರಯಾಣಿಸಿ ಇನ್ನೇನು ವಿಶ್ವವಿಖ್ಯಾತ ಮದ್ದೂರು ತಲುಪುವ ಕೆಲವೇ ಕೆಲವು ಕಿಮೀ ದೂರದಲ್ಲಿ ಹೆದ್ದಾರಿಯಿಂದ ಬಲಗಡೆ ಕೂಗಳತೇ ದೂರದಲ್ಲೇ,  ದೇಶದ ರಾಜಧಾನಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯಂತೆ (ಐಹೊಳೆಯ ದುರ್ಗಾ ದೇವಾಲಯದ ಪ್ರತಿರೂಪ)  ಕಾಣುವ ವಿಶಾಲವಾದ ಕಟ್ಟಡ ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ  ಹತ್ತಿರ ಹೋಗಿ ವಿಚಾರಿಸಿದಲ್ಲಿ ಸ್ವಾತಂತ್ರ್ಯ ಸಂಗ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯ ಈ ಶಿವಪುರ ಕರ್ನಾಟಕದಲ್ಲಿ  ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡ… Read More ಶಿವಪುರದ ಸತ್ಯಾಗ್ರಹ ಸೌಧ

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಮೈಸೂರಿನ ಶುಕವನ

ಮೈಸೂರು ಎಂದರೆ ನಮಗೆ ನೆನಪಿಗೆ ಬರುವುದು ಮೈಸೂರು ಅರಮನೆ, ಕನ್ನಂಬಾಡಿ ಕಟ್ಟೆ, ಚಾಮುಂಡಿ ಬೆಟ್ಟ, ಮೃಗಾಲಯ ಮತ್ತು ಜಂಜಾಟವಿಲ್ಲದ ವಿಶಾಲವಾದ ರಸ್ತೆಗಳು. ಇದರ ಜೊತೆ ಜೊತೆಗೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮುಖಾಂತರ ಹೋಗುವ ತಪ್ಪಲಿನಲ್ಲಿಯೇ ನಂಜನಗೂಡಿನ ರಸ್ತೆಗೆ ಹೋಗುವ ಮಾರ್ಗದಲ್ಲಿಯೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಪೀಠವಿದ್ದು ಅಲ್ಲಿಯ ದೇವಸ್ಥಾನಗಳ ಸಂಕೀರ್ಣ ನಯನ ಮನೋಹರವಾಗಿದೆ. ದೇವಸ್ಥಾನದ ಆವರಣದಲ್ಲಿಯೇ ಸ್ವಾಮೀಜಿಯವರು 2012 ರಲ್ಲಿ ನಿರ್ಮಿಸಿರುವ ಪಕ್ಷಿಗಳ ಪುನರ್ವಸತಿ ಕೇಂದ್ರ ಶುಕವನ ಮತ್ತು ಬೋನ್ಸಾಯ್  ಉದ್ಯಾನವನವಿದ್ದು ಮಕ್ಕಳೊಂದಿಗೆ ಅತ್ಯಗತ್ಯವಾಗಿ… Read More ಮೈಸೂರಿನ ಶುಕವನ