ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ, ಜೀವನ ಶೈಲಿ ಎಲ್ಲವೂ ಬದಲಾಗಿ ಅವಿಭಕ್ತ ಕುಟುಂಬ ವಿಭಕ್ತಗಳಾಗಿ, ಐಶಾರಾಮ್ಯವಾದ ಜೀವನದ ಹಿಂದೆ ಬಿದ್ದು, ಗಂಡ ಹೆಂಡತಿ ಇಬ್ಬರೂ ಹೊರಗೆ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮದಿಂದಾಗಿ ಆಗಿರುವ ಈ ಹೃದಯವಿದ್ರಾವಕ ಪ್ರಸಂಗಗಳು ನಿಜಕ್ಕೂ ಎಚ್ಚರದ ಗಂಟೆಯಾಗಿದೆ.… Read More ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಬಹಳ ಹಿಂದೆ ಕರಾವಳಿ ಪ್ರದೇಶದವರು ಎಂದರೆ ಬಹಳ ಶಾಂತಿ ಪ್ರಿಯರು. ಸಂಪ್ರದಾಯ, ಸಂಸ್ಕಾರವಂತರಷ್ಟೇ ಅಲ್ಲದೇ ಸಹೃದಯಿಗಳಾಗಿ ಕುಡಿಯಲು ನೀರು ಕೇಳಿದರೂ, ನೀರಿನ ಜೊತೆ ಸಿಹಿಯಾದ ಬೆಲ್ಲದುಂಡೆಗಳನ್ನು ನೀಡುವಂತಹ ವಿಶಾಲಹೃದಯಿಗಳು. ಇವೆಲ್ಲದರ ಜೊತೆಗೆ ಓದಿನಲ್ಲಿ ಸದಾ ಕಾಲವೂ ಮುಂದಿರುವುದಲ್ಲದೇ, ಬಹಳ ಶ್ರಮದಿಂದ ಎಂತಹ ಕೆಲಸವನ್ನು ಮಾಡಬಲ್ಲವರು ಎಂದೇ ಎಂದೇ ಪ್ರಖ್ಯಾತರಾದವರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಕರಾವಳಿ ಮತ್ತು ಕೇರಳದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಬಹಳ ಬೇಸರವನ್ನು ತರಿಸುತ್ತಿದೆ. ಯಾವುದೋ ಮತಾಂಧರ ಮಾತುಗಳಿಗೆ ಬಲಿಯಾಗಿ ವಿದ್ಯೆಗಿಂತಲೂ ಧರ್ಮವೇ ಮುಖ್ಯ… Read More ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಗುಬ್ಬಚ್ಚಿ

ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಶಾಲೆಗಳಲ್ಲಿ ಕವಿ ಶ್ರೀ ಎ. ಕೆ. ರಾಮೇಶ್ವರ ಅವರು ಬರೆದಿರುವಂತಹ ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು? ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನಲ್ಲಿ? ಕಾಳನು ಹುಡುಕುತ ನೀರನು ನೋಡುತ ಅಲೆಯುವೆ ಏಕಿಲ್ಲಿ? ಕಾಳನು ಕೊಟ್ಟು ನೀರನು ಕುಡಿಸುವೆ ಆಡಲು ಬಾ ಇಲ್ಲಿ ಹಣ್ಣನು ಕೊಟ್ಟು ಹಾಲನು ನೀಡುವೆ ನಲಿಯಲು ಬಾ ಇಲ್ಲಿ? ಎಂಬ ಕವಿತೆಯನ್ನು ಹೇಳಿಕೊಡುತ್ತಿದ್ದರು. ಆಗೆಲ್ಲಾ ನಮ್ಮೆಲ್ಲರ… Read More ಗುಬ್ಬಚ್ಚಿ

ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಮೊಬೈಲ್ ಹೆಸರೇ ಹೇಳುವಂತೆ ಜಂಗಮವಾಣಿ. ಎಲ್ಲೆಂದರೆಲ್ಲಿ , ಎಷ್ಟು ಹೊತ್ತಿನಲ್ಲಿಯೂ, ಯಾರನ್ನು ಬೇಕಾದರೂ ಸಂಪರ್ಕಿಸ ಬಹುದಾದ ಸುಲಭವಾದ ಸಾಧನ. ಭಾರತದಲ್ಲಿ ಎಂಭತ್ತರ ದಶಕದಲ್ಲಿ ದೂರವಾಣಿಯ ಸಂಪರ್ಕ ಕ್ರಾಂತಿಯಾಗಿ ಮನೆ ಮನೆಗಳಲ್ಲಿ ಟೆಲಿಫೋನ್ ರಿಂಗಣಿಸತೊಡಗಿದರೆ, ತೊಂಭತ್ತರ ದಶಕದಲ್ಲಿ ಸಿರಿವಂತರ ಕೈಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸಿಕೊಳ್ಳುವ ಸಾಧನವಾಗಿ ದೊಡ್ಡ ದೊಡ್ಡ ಮೊಬೈಲ್ ಫೋನ್ಗಳು ಬಂದರು. ಆದರೆ, ಯಾವಾಗ 2001-2002ರಲ್ಲಿ ರಿಲೆಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಮಾರುಕಟ್ಟೆಯಲ್ಲಿ ಕಾಸಿಗೊಂದು ಕೊಸರಿಗೊಂದು ಎನ್ನುವಂತೆ 500-2000 ರೂಪಾಯಿಗಳ ಮೊಬೈಲ್ ಬಿಡುಗಡೆ ಮಾಡಿತೋ ಅಂದಿನಿಂದ ಭಾರತದಲ್ಲಿ… Read More ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ