ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು… Read More ಹುಸ್ಕೂರು ಮದ್ದೂರಮ್ಮ ಜಾತ್ರೆ

ಪುರಿ ಜಗನ್ನಾಥ ರಥಯಾತ್ರೆ

ಪುರಿ ಒರಿಸ್ಸಾದಲ್ಲಿರುವ ಪ್ರಮುಖವಾದ ಧಾರ್ಮಿಕ ಕ್ಷೇತ್ರವಾಗಿದೆ. ಬಲಭದ್ರ, ಸುಭದ್ರ ಮತ್ತು ಜಗನ್ನಾಥ (ಇಲ್ಲಿ ಶ್ರೀಕೃಷ್ಣನನ್ನು ಜಗನ್ನಾಥ ಎಂದೇ ಸಂಭೋದಿಸುತ್ತಾರೆ) ಜೊತೆಗೆ ಇರುವ ಇಲ್ಲಿನ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದೆ. ಇಲ್ಲಿ ನಡೆಯುವ ರಥಯಾತ್ರೆ ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಪ್ರಮುಖವಾಗಿದ್ದು ಈ ರಥೋತ್ಸವದ ಉಲ್ಲೇಖ ಬ್ರಹ್ಮಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಕಪಿಲ ಸಂಹಿತೆಯಲ್ಲಿಯೂ ಕಾಣ ಸಿಗುತ್ತದೆ. ಸಾಧಾರಣವಾಗಿ ಎಲ್ಲೆಡೆಯಯಲ್ಲಿ ಬ್ರಹ್ಮ ರಥೋತ್ಸವ ಒಂದು ಅಥವಾ ಮೂರು ದಿನಗಳ ಕಾಲ ನಡೆದರೆ ಇಲ್ಲಿ ಮಾತ್ರ ಪ್ರತಿವರ್ಷದ ಆಷಾಢ… Read More ಪುರಿ ಜಗನ್ನಾಥ ರಥಯಾತ್ರೆ

ಇಕ್ಕೇರಿಯ ಅಘೋರೇಶ್ವರ ರಥೋತ್ಸವ

ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 6 ಕಿಮೀ ದೂರದಲ್ಲಿರುವ ಪಟ್ಟಣವಾಗಿದೆ. 1499-1763ರ ನಡುವೆ ಈ ಪ್ರದೇಶವನ್ನು ಆಳಿದ ಕೆಳದಿಯ ನಾಯಕರ ರಾಜಧಾನಿಯಾಗಿತ್ತು. ಇಲ್ಲಿರುವ ಅಘೋರೇಶ್ವರ ದೇವಸ್ಥಾನ ಬಹಳ ಪ್ರಖ್ಯಾತವಾಗಿದ್ದು, ಇದರ ಕುರಿತಾಗಿ ಅನೇಕ ದಂತ ದಂತಕಥೆಗಳಿವೆ. ಚೌಡೇಗೌಡ ಮತ್ತು ಭಧ್ರೇ ಗೌಡ ಎಂಬ ಇಬ್ಬರು ಸಹೋದರರು ಅದೊಮ್ಮೆ ತಮ್ಮ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ, ಅವರ ಹಸುವೊಂದು ಅಲ್ಲಿದ್ದ ಹುತ್ತದ ಮೇಲೆ ತಂತಾನೇ ಹಾಲನ್ನು ಸುರಿಸುತ್ತಿದ್ದದ್ದನು ಗಮನಿಸಿ ಆ ಹುತ್ತವನ್ನು ಅಗೆದಾಗ ಅಲ್ಲೊಂದು ಲಿಂಗವನ್ನು ಕಂಡು ಭಕ್ತಿಪೂರ್ವಕವಾಗಿ… Read More ಇಕ್ಕೇರಿಯ ಅಘೋರೇಶ್ವರ ರಥೋತ್ಸವ