ರಾಮಕೃಷ್ಣ ಹೆಗಡೆ

h6

ಕರ್ನಾಟಕ ಕಂಡ ಅತ್ಯಂತ ಚಾಣಕ್ಷ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದಂತಹ ಹಳ್ಳಿಯಿಂದ ದಿಲ್ಲಿಯವರೆಗೂ ಯುವಕರಿಂದ ವಯಸ್ಸಾದವರೂ ಇಷ್ಟಪಡುತ್ತಿದ್ದ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವುಗಳ ಮೂಲಕ ಇಂದಿಗೂ ರಾಜ್ಯದ ಜನಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೀ ರಾಮಕೃಷ್ಣ ಹೆಗಡೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಉತ್ತರಕರ್ನಾಟಕದ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕೃಷಿಕ ಕುಟುಂಬದ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ದಂಪತಿಗಳಿಗೆ 1926ರ ಅಗಸ್ಟ್ 29ರಂದು ರಾಮಕೃಷ್ಣ ಹೆಗಡೆಯವರು ಜನಿಸುತ್ತಾರೆ. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ರಾಮಕೃಷ್ಣರಿಗೆ ನಾಯಕತ್ವ ಎನ್ನುವುದು ರಕ್ತಗತವಾಗಿ ಬರುವುದಕ್ಕೆ ಅವರ ಮನೆಯ ವಾತಾವರಣವೂ ಕಾರಣವಾಗಿತ್ತು ಎಂದರೂ ಎಂದರೂ ತಪ್ಪಾಗದು. ಅವರು ತಂದೆಯವರು ಸ್ವಾತ್ರಂತ್ರ ಹೋರಾಟಗಾರಾಗಿದ್ದರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಅಂಟಿಕೊಂದ್ದಂತಹ ತೋಟದ ಮಧ್ಯೆಯಲ್ಲಿದ್ದ ಅವರ ಮನೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯತಾಣವಾಗಿತ್ತು. ಹಾಗಾಗಿಯೇ ಅವರ ಮನೆಗೆ ಪೋಲೀಸರ ಧಾಳಿ ಆಗ್ಗಿಂದ್ದಾಗೆ ನಡೆಯುತ್ತಿದ್ದವು.

h3

ಸ್ವಾತ್ರಂತ್ರ್ಯ ಹೋರಾಟಗಾರರನ್ನು ಮತ್ತು ಬ್ರಿಟೀಷರ ದಬ್ಬಾಳಿಕೆಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ರಾಮಕೃಷ್ಣರು ಚಿಕ್ಕಂದಿನಿಂದಲೇ, ಪತ್ರಕರ್ತರಾಗಬಯಸಿದ್ದರು. ಹಾಗಾಗಿಯೇ ಸಿರ್ಸಿಯ ಮಾರಿಕಾಂಬ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕೈಬರಹದ ಪತ್ರಿಕೆ ಹೂವಿನ ಸರಕ್ಕೆ ಲೇಖನ ಬರೆಯುತ್ತಿದ್ದರು. ಮುಂದೆ ಬನಾರಸ್ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಅವರ ಆಸೆಗಳನ್ನು ಪೂರೈಸಿಕೊಂಡಿದ್ದರು. ಕಾಶಿ ವಿದ್ಯಾಪೀಠದಲ್ಲಿ ಪದವಿ ಮುಗಿಸಿ ಅಲ್ಲಿಂದ ಲಕ್ನೋ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಗಿಸಿಕೊಂಡು ಕರ್ನಾಟಕಕ್ಕೆ ಮರಳಿ ವಕೀಲ ವೃತ್ತಿಯೊಂದಿಗೆ ಕೆಲಕಾಲ ಸಿರ್ಸಿಯ ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ನಂತರ ರಾಜಕೀಯದತ್ತ ಮುಖ ಮಾಡಿದ ಕಾರಣ ಪತ್ರಕರ್ತನಾಗದೇ ಹೋದದ್ದಕ್ಕೆ ಅವರಿಗೆ ವಿಷಾಧವಿತ್ತು.

h1

1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೆಗಡೆಯವರು ತಮ್ಮ 20ನೇ ವಯಸ್ಸಿನಲ್ಲಿಯೇ ರೈತ ಚಳುವಳಿಯ ರೂವಾರಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಹೆಗಡೆಯವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಮಂತ್ರಿಮಂಡಲಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ಜನಪ್ರಿಯರಾದರು. ಹೆಗಡೆ ಮತ್ತು ವೀರೇಂದ್ರ ಪಾಟೀಲರ ಜೋಡಿಯನ್ನು ಲವ-ಕುಶ ಜೋಡಿ ಎಂದೇ ಜನರು ಕರೆಯುತ್ತಿದ್ದರು.

1975ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಹೆಗಡೆಯವರು ಜೈಲುವಾಸಕ್ಕೆ ತಳ್ಳಲ್ಪಟ್ಟಾಗ, ಅಲ್ಲಿ ಅವರಿಗೆ ಹಿರಿಯ ನಾಯಕರಾದ ಜಯಪ್ರಕಾಶ ನಾರಾಯಣ್ ವಾಜಪೇಯಿ, ಮಧುದಂಡವತೆ, ಅಡ್ವಾಣಿ, ಚಂದ್ರಶೇಖರ್ ಮುಂತಾದ ಹಿರಿಯ ನಾಯಕರು ಬಹಳ ಹತ್ತಿರವಾಗಿ ಜೆಪಿಯವರ ನೇತೃತ್ವದಲ್ಲಿ ಆರಂಭಗೊಂಡ ಜನತಾ ಪಕ್ಷಕ್ಕೆ ಸೇರಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

h2

1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಜಂಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಅಲ್ಪ ಸಂಖ್ಯೆಯ ಕೊರತೆ ಇದ್ದಾಗ, ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಪ್ರಪ್ರಥಮವಾದ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯದಲ್ಲಿ ಕಾಡುತ್ತಿದ ಬರಕ್ಕೆ ಪರಿಹಾರವಾಗಿ ನೀರ್ ಸಾಬ್ ಎಂದೇ ಖ್ಯಾತಿಯಾದ ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಕೊಳವೇ ಭಾವಿಯನ್ನು ತೊಡಿಸಿ ಜನರ ದಾಹವನ್ನು ತೀರಿಸಿದ್ದಲ್ಲದೇ, ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಕೆಲವೇ ದಿನಗಳಲ್ಲಿ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡರು.

ಇದೇ ಜನಪ್ರಿಯತೆಯನ್ನೇ ರಾಜಕಿಯವಾಗಿ ಬಳಸಿಕೊಳ್ಳಲು ನಿರ್ಧರಿ, ವಿಧಾನಸಭೆಯನ್ನು ವಿಸರ್ಜಿಸಿ ಮುಂದೆ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಅಧಿಕಾರದ ಹಿಂದೆ ಜೋತು ಬೀಳುವ ಅನೇಕ ರಾಜಕಾರಣಿಗಳ ಮಧ್ಯೆ ಅಧಿಕಾರವೇ ಹೆಗಡೆವರನ್ನು ಹುಡಿಕಿಕೊಂಡು ಬರುವಷ್ಟು ಅದೃಷ್ಟಶಾಲಿಯಾಗಿದ್ದರು ಎಂದರೂ ತಪ್ಪಾಗದು. ಕುರ್ಚಿಗಾಗಿ ಬಡಿದಾಡುವ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ ಅವರ ಈ ನಡೆ ಸಾರ್ವಕಾಲಿಕವಾಗಿ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ, ಮತ್ತು ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 25 ರ ಮೀಸಲಾತಿ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ದೇಶದಲ್ಲಿಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ.

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಅವರ ಬೆನ್ನು ಬಿಡದ ಬೇತಾಳದಂತೆ ಕಾಡಿದವರೆಂದರೆ ಎ.ಕೆ.ಸುಬ್ಬಯ್ಯನವರು. ರಾಮಕೃಷ್ಣ ಹೆಗಡೆಯವರ ಮೊದಲ ಬಾರಿಗೆ ಮುಖ್ಯ ಮಂತ್ರಿಗಳಾಗಿದ್ದಾಗ ರೇವಜೀತು ಹಗರಣ ಹಾಗೂ ಅವರ ಮಗ ಭರತ್ ಹೆಗಡೆ ಶಾಮೀಲಾಗಿದ್ದ ಎನ್ನಲಾದ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕತ್ವಕ್ಕೆ ಕಪ್ಪು ಚುಕ್ಕಿ ಮೂಡಿಸಿದ್ದಲ್ಲದೇ, ಅವರ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾಗಿ ಅವರೆಲ್ಲರ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿ ರಾಜ್ಯಾದ್ಯಂತ ಮನೆ ಮಾತಾದರೆ, ಎರಡನೇ ಬಾರೀ ದೂರವಾಣಿ ಕದ್ದಾಲಿಕೆಯ ಹಗರಣದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆಯವರು ರಾಜ್ಯರಾಜಕೀಯದಿಂದ ದೂರ ಸರಿಯುವಂತಾಯಿತು.

h5

ತಮ್ಮ ರಾಜಕೀಯ ಅವಧಿಯಲ್ಲಿ ಮಂತ್ರಿಗಳಾಗಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ನಂತರ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ಎಂಬುದು ಅವರ ಹೆಗ್ಗಳಿಕೆಯಾಗಿದೆ. ರಾಜಕೀಯದ ಜೊತೆ ಜೊತೆಗೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳಲ್ಲಿಯೂ ಅಪಾರವಾದ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದ್ದರು. ಅದರ ಮುಂದು ವರೆದ ಭಾಗವಾಗಿಯೇ ಹೆಸರಘಟ್ಟದ ಬಳಿ ಖ್ಯಾತ ಒಡಿಸ್ಸೀ ನೃತ್ಯಗಾರ್ತಿ ಪ್ರೋತಿಮಾ ಬೇಡಿ ಅವರ ನೃತ್ಯಗ್ರಾಮಕ್ಕೆ ಸರ್ಕಾರಿ ಜಾಗವನ್ನು ನೀಡಿದ್ದರು. ಮತ್ತೊಬ್ಬ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್ ಅವರಿಗೂ ಹೆಗಡೆಯವರ ಕೃಪಾಶೀರ್ವಾದವಿತ್ತು ಎನ್ನುವುದು ಬಲ್ಲವರ ಮಾತಾಗಿದೆ. ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆಯವರು ಮರಣ ಮೃದಂಗ ಎನ್ನುವ ಸಿನಿಮಾ ಸೇರಿದಂತೆ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ, ರಾಜ್ಯದ ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಗೆ ಶೇಕಡಾ50 ರ ರಿಯಾಯಿತಿ ಮುಂತಾದ ಯೋಜನೆಗನ್ನು ತರುವುದರ ಮೂಲಕ ಕಲಾ ಪೋಷಕರೆನಿಸಿಕೊಂಡರು.

ಈ ದೇಶ ಪ್ರಜಾಪ್ರಭುತ್ವ ದೇಶ ಎನಿಸಿದರು ಅನೇಕ ರಾಜಕೀಯ ನಾಯಕರು ತಮ್ಮ ಕುಟುಂಬಸ್ಥರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡು ಅಧಿಕಾರ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳುವಾಗ ಇದಕ್ಕೆ ಅಪರಾಧ ಎನ್ನುವಂತಿದ್ದರು ಹೆಗಡೆಯವರು. ರಾಮಕೃಷ್ಣ ಹೆಗಡೆಯವರು ತಮ್ಮ ಕಾಲದಲ್ಲಿ ಹಲವಾರು ನಾಯಕರನ್ನು ಬೆಳಸಿ ಹೋದರು. ಪ್ರಸ್ತುತ ರಾಜಕಾರಣದಲ್ಲಿರುವ ಹಲವಾರು ನಾಯಕರುಗಳು ಹೆಗಡೆಯವರ ಗರುಡಿಯಿಂದ ಹೊರಬಂದಿರುವ ಶಿಷ್ಯರೇ. ಮಾಜೀ ಮುಖ್ಯ ಮಂತ್ರಿಗಳಾದ ಎಸ್. ಆರ್. ಬೊಮ್ಮಾಯಿ, ಸಿದ್ದರಾಮಯ್ಯ, ಬಿ.ಸೋಮಶೇಖರ್, ಆರ್. ವಿ. ದೇಶಪಾಂಡೆ, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಹೀಗೆ ಇನ್ನೂ ಅನೇಕ ನಾಯಕರುಗಳನ್ನು ಬೆಳೆಸಿದರು. ಹೆಗಡೆ ತಾವೊಬ್ಬರೇ ಬೆಳೆಯದೇ ಇತರರನ್ನೂ ಬೆಳೆಸಿ ಅವರವರ ಶಕ್ತಿ ಸಾಮರ್ಥ್ಯದ ಅನುಗುಣವಾಗಿ ಅವರಿಗೆ ಅಧಿಕಾರವನ್ನು ನೀಡಿ ಬೆಳಸಿದರು.

ಬಾಯಿಮಾತಿನಲ್ಲಿ ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ರಾಜಕೀಯ ನಾಯಕರೇ ಹೆಚ್ಚಾಗಿರುವ ಇಂದಿನ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆಯವರು ಅಪ್ಪಟವಾದ ಜಾತ್ಯತೀತರಾಗಿದ್ದರು ಎಂದರೆ ಅತಿಶಯವೆನಿಸಿದು. ಅವರೆಂದೂ ತಮ್ಮ ಸ್ವಜಾತಿಯಿಂದ ಗುರುತಿಸಿಕೊಳ್ಳಲೇ ಇಲ್ಲ, ಉತ್ತರ ಕರ್ನಾಟಕದ ಲಿಂಗಾಯಿತರ ನಾಯಕರೆಂದೇ ಪ್ರಸಿದ್ಧಿ ಪಡೆದಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನಿಗೂ ಸಹಾ ಅಂತರ್ಜಾತಿ ವಿವಾಹವನ್ನು ಮಾಡಿಸಿದ್ದದ್ದು ಗಮನಾರ್ಹವಾಗಿತ್ತು.

h4

ಬದಲಾದ ರಾಜಕೀಯದಲ್ಲಿ ಯಾರನ್ನು ಹೆಗಡೆಯವರು ಬೆನ್ನು ತಟ್ಟಿ ಬೆಳೆಸಿದ್ದರೋ ಅದೇ ನಾಯಕರು ತಮ್ಮ ಬೆಂಬಲಿಗರ ಮೂಲಕ ಹೆಗಡೆಯವರಿಗೆ ವಿಧಾನಸೌಧದ ಮುಂದೆ ಚೆಪ್ಪಲಿಯ ಸೇವೆಯನ್ನು ಮಾಡಿಸಿ ಅವಮಾನಿಸಿದ್ದಲ್ಲದೇ ಮುಂದೆ ಅವರಿಗೆ ಅಚಾನಕ್ಕಾಗಿ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗ ತಾವು ಕಟ್ಟಿದ ಪಕ್ಷದಂದಲೇ ಉಚ್ಚಾಟಿಸುವ ಮೂಲಕ ಹೆಗಡೆಯವರ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಿದಾಗ, ಸ್ವಪಕ್ಷೀಯರಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ಕೊರಗಿನಲ್ಲೇ 2004ರ ವರ್ಷದ ಜನವರಿ 12ರಂದು ನಿಧನರಾದರು.

ರಾಜಕಾರಣದಲ್ಲಿದ್ದು ಜನಾನುರಾಗಿಯಾಗಿ, ಜನತೆಯ ಕೈಗೆ ಆಡಳಿತ ನೀಡಿ, ಸದುದ್ದೇಶಗಳಿಂದ, ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾದ ಶ್ರೀ ರಾಮಕೃಷ್ಣ ಹೆಗಡೆ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

cremationವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು ನಲ್ಲಿಟ್ಟು ಚಿಕಿತ್ಸೆ ಕೊಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಸ್ವತಃ ಇಡೀ ಕುಟುಂಬವೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾರಿಗೂ ತಂದೆಯವರ, ಮಾವನವರ, ತಾತನ ಮುಖವನ್ನೂ ನೋಡಲಾಗಲಿಲ್ಲ. ಆಗಿನ್ನೂ ಲಾಕ್ದೌನ್ ತೀವ್ರವಾಗಿದ್ದ ಕಾರಣ ಸರ್ಕಾರಿ ಲೆಖ್ಖದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳೇ ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದರು. ಹೆತ್ತ ತಂದೆಯ ಮುಖವನ್ನೂ ನೋಡಲಾಗಲಿಲ್ಲವಲ್ಲಾ, ಅವರ ಅಂತಿಮ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲವಲ್ಲಾ ಎಂದು ಮಗನಿಗೆ ತೀವ್ರತರವಾದ ನೋವಿನಿಂದ ಬಹಳ ದಿನಗಳವರೆಗೂ ಖಿನ್ನತೆಗೆ ಒಳಗಾಗಿ ಹಲವು ತಿಂಗಳುಗಳ ನಂತರ ಸುಧಾರಿಸಿಕೊಳ್ಳುತ್ತಿದ್ದಾರೆ.corona1ಮತ್ತೊಂದು ಕುಟುಂಬ. ಇಲ್ಲಿ ತಾಯಿ, ಮಗ ಸೊಸೆ ಮತ್ತು ಮೊಮ್ಮಗ ಇದ್ದಂತಂಹ ಕುಟುಂಬ. ಮೈಸೂರಿನಲ್ಲಿ ತಮ್ಮ ಸಂಬಂಧಿಗಳ ಸಮಾರಂಭಕ್ಕೆ ಹೋಗಿ ಬಂದ ಕೆಲವೇ ದಿನಗಳಲ್ಲಿ ಕುಟುಂಬವಿಡೀ ಕೊರೋನಾ ಸೊಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಸೇರುತ್ತಾರೆ. ಅವರ ಇಡೀ ರಸ್ತೆಯನ್ನೇ ಸೀಲ್ಡೌನ್ ಮಾಡುವ ಮೂಲಕ ಏನೂ ಮಾಡದ ಅವರ ರಸ್ತೆಯವರೆಲ್ಲರೂ ತೊಂದರೆ ಅನುಭವಿಸುವಂತಾಗುತ್ತದೆ. ಅದೃಷ್ಠವಶಾತ್ ಅಜ್ಜಿ ಮತ್ತು ಮೊಮ್ಮಗ ಬಹಳ ಬೇಗನೇ ಗುಣಮುಖರಾಗುತ್ತಾರಾದರೂ ಮಗ ಮತ್ತು ಸೊಸೆಯವರಿಗೆ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಸುಮಾರು ಒಂದು ತಿಂಗಳುಗಳ ಕಾಲ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನರಳಿ, ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ವೈದ್ಯರುಗಳ ಚಿಕಿತ್ಸೆ ಮತ್ತು ದೇವರ ದಯೆಯಿಂದಾಗಿ ಮನೆಗೆ ಬಂದು ಸುಮಾರು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಈಗ ಹುಶಾರಾಗಿದ್ದಾರೆ.corona2ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಆರೋಗ್ಯ ತಪ್ಪಿದ ಹಿರಿಯರೊಬ್ಬರನ್ನು ಕೋವಿಡ್ ಪರೀಕ್ಷೆ ಮಾಡಿಸಿದ ಒಂದು ದಿನದ ಬಳಿಕ ಅವರ ಮೊಬೈಲಿನಲ್ಲಿ ಅವರಿಗೆ ಕೋವಿಡ್+ ಬಂದಿದೆ, ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುತ್ತದೆ. ಹಾಗಾಗಿ ಸಿದ್ಧವಾಗಿರಿ ಎಂಬ ಸಂದೇಶ ಬಂದ ಕೂಡಲೇ ಆ ಹಿರಿಯರ ನಾಲ್ಕಾರು ಬಟ್ಟೆಗಳನ್ನು ಚೀಲದಲ್ಲಿಟ್ಟು ಮನೆಯ ಹಿರಿಯವರು ಎಂಬ ಮಾನವೀಯತೆಯನ್ನೂ ಮರೆತು ಅವರನ್ನು ಮನೆಯ ಹೊರಗೆ ಹಾಕಿ ಬಾಗಿಲು ಹಾಕಿ ಕೊಳ್ಳುತ್ತಾರೆ. ಅದು ಯಾವ ಕಾರಣಕ್ಕೋ ಏನೋ? ಅವರನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಆಂಬ್ಯುಲೆನ್ಸ್ ಕೂಡಾ ಬಹಳ ತಡವಾಗಿ ಬಂದು ನೋಡಿದರೆ ಮನೆಯ ಮುಂದೆಯೇ ಬೀದಿ ಹೆಣವಾಗಿರುತ್ತಾರೆ ಆ ಹಿರಿಯರು. ಅವರನ್ನು ನೋಡಲೂ ಸಹಾ ಅವರ ಮನೆಯವರು ಹೊರಗೆ ಬಾರದಂತಹ ಹೃದಯವಿದ್ರಾವಕ ಘಟನೆಯೂ ನಡೆದಿದೆ.

ಹೀಗೆ ಬರೆಯುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಇಂತಹ ದುರ್ಘಟನೆಗಳು ಕಳೆದೊಂದು ವರ್ಷದಲ್ಲಿ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ನಮ್ಮ ನಿಮ್ಮೆಲ್ಲರ ಮಧ್ಯೆ ಆರೋಗ್ಯದಿಂದ ಇದ್ದವರು ನೋಡ ನೋಡುತ್ತಿದ್ದಂತೆಯೇ ಗೋಡೆಯಲ್ಲಿ ಫೋಟೋವಾಗಿ ಬಿಟ್ಟಿದ್ದಾರೆ.

lockdownಸರ್ಕಾರವೂ ಸಹಾ ಈ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದರೂ, ಅಂತರ್ ರಾಜ್ಯಗಳ ಗಡಿಗಳನ್ನು ಮುಚ್ಚಿದ್ದರೂ, ಕೆಲವು ಅನಕ್ಷರಸ್ಥ ಕಿಡಿಗೇಡಿಗಳು ಮತ್ತು ಪುಂಡು ಪೋಕರಿಗಳು ಸರ್ಕಾರದ ನೀತಿನಿಯಮಗಳನ್ನು ಗಾಳಿಗೆ ತೂರಿದರೆ, ಜನರ ಹಿತಕ್ಕಿಂತಲೂ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ಆಡಳಿತ ಪಕ್ಷಕ್ಕೆ ಭಂಗ ತರಲೆಂದೇ ದೇಶದ ಹಿತಶತ್ರುಗಳಾಗಿ ಕಾಡಿದ ವಿರೋಧ ಪಕ್ಷಗಳು ಪ್ರಜೆಗಳ ಹಿತವನ್ನೂ ಅಲಕ್ಷಿಸಿ, ಅಂತರ್ ರಾಜ್ಯಗಳ ಗಡಿಯನ್ನು ತೆರೆಯಲು ಹೋರಾಟ ನಡೆಸಿದ್ದಲ್ಲದೇ, ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ತಮ್ಮ ಮನೆಯ ಮದುವೆ, ಮುಂಜಿ, ನಾಮಕರಣ ಹುಟ್ಟು ಹಬ್ಬಗಳಲ್ಲಿ ಸಾವಿರಾರು ಜನರನ್ನು ಒಟ್ಟು ಗೂಡಿಸಿ ಆಡಳಿತ ಪಕ್ಷಗಳ ಪ್ರತಿಯೊಂದು ನಡೆಯನ್ನೂ ವಿರೋಧಿಸುತ್ತಲೇ ಪರೋಕ್ಷವಾಗಿ ಕೊರೋನಾ ಹಬ್ಬಲು ಸಹಕರಿಸಿದವು ಎಂದರೂ ತಪ್ಪಾಗಲಾರದು.marshalಇಡೀ ಪ್ರಪಂಚವೇ ಈ ಮಹಾಮಾರಿಯಿಂದ ತಲ್ಲಣಿಸಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಗ್ಗಿದ್ದರೂ ಸರ್ಕಾರ ಕೊರೋನ ನಿಯಂತ್ರಣದ ಹೆಸರಿನಲ್ಲಿ ಮಾರ್ಷಲ್ ಗಳ ಮೂಲಕ ಮಾಸ್ಕ್ ಹಾಕಿಲ್ಲದ ಅಮಾಯಕರ ಬಳಿ ಐದು ನೂರು ಸಾವಿರ ರೂಪಾಯಿಗಳ ದಂಡ ಕಸಿಯುವ ಮೂಲಕ ಅಕ್ಷರಶಃ ಹಗಲು ದರೋಡೆಗೆ ಇಳಿಯುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದದ್ದು ನಿಜಕ್ಕೂ ಹೇಯಕರವಾದ ಸಂಗತಿಯೇ.marketಲಾಕ್ಡೌನ್ ಹಂತ ಹಂತವಾಗಿ ಸಡಿಲ ಗೊಳಿಸಿದ್ದೇ ತಡಾ ಜನ ಕೊರೋನಾ ಮಹಾಮಾರಿಯೇ ಬಂದಿಲ್ಲವೇನೋ ಇವರು ಹೋಟೇಲ್, ಮಾಲು, ಬಾರು, ಸಿನಿಮಾ, ಈಜುಗೊಳ, ಜಿಮ್, ಮಾರುಕಟ್ಟೆಗಳಿಗೆ ಹೋಗದಿದ್ದರೇ ಪ್ರಪಂಚವೇ ಮುಳುಗಿ ಹೋಗುತ್ತದೆಯೇನೋ ಎನ್ನುವಂತೆ ಎಲ್ಲಾ ಕಡೆಯಲ್ಲಿಯೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಮರೆತು,ರಾಜಾ ರೋಷದಿಂದ ಗೂಳಿ ನುಗ್ಗಿದ ಹಾಗೆ ನುಗ್ಗಿದ ಪರಿಣಾಮ ಸ್ವಲ್ಪ ತಹಬದಿಗೆ ಬಂದಿದ್ದ ಕೊರೋನ, ಮತ್ತೆ ಪ್ರಜ್ವಲಿಸುತ್ತಾ 2ನೇ ಅಲೆಯ ಮೂಲಕ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ 30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಪ್ರತಿ ದಿನವೂ ಸಹಸ್ರಾರು ಜನರು ,+veಎಂಬ ಅಂಕಿ ಅಂಶ ಕಣ್ಣ ಮುಂದೆ ರಾಚುತ್ತಿದೆ.2ndwave1ಕೊರೋನಾ ಗಿರೋನಾ ಏನೂ ಇಲ್ಲಾ ಇದೆಲ್ಲವೂ ಈ ಭ್ರಷ್ಟ ರಾಜಕಾರಣಿಗಳು ದುಡ್ಡು ಹೊಡೆಯುವ ಹುನ್ನಾರದ ಭಾಗ ಎನ್ನುವವರಿಗೆ, ಕಬ್ಬು ತಿಂದವರಿಗೆ ಮಾತ್ರವೇ ರುಚಿ ಗೊತ್ತಾಗುತ್ತದೆ ಎನ್ನುವಂತೆ ಕೊರೋನಿಂದ ಭಾಧಿತರಾದವರಿಗೆ ಮಾತ್ರವೇ ಅದರ ಅನುಭವ ಗೊತ್ತಿರುತ್ತದೆ. ಖ್ಯಾತ ಕಲಾವಿದ ದಂಪತಿಗಳಾದ ಸುನೇತ್ರ ಮತ್ತು ಪಂಡಿತ್ ದಂಪತಿಗಳು ತಮ್ಮ ಕುಟಂಬಸ್ಥರನ್ನು ಕಳೆದುಕೊಂಡು ಮಾಧ್ಯಮದ ಮುಂದೆ ರೋಧಿಸಿದ ಪರಿ ನಿಜಕ್ಕೂ ಕರುಳು ಚುರಕ್ ಎನಿಸಿತ್ತು. ನಿಜ ಕೆಲವೊಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಸಂಧರ್ಭದಲ್ಲಿಯೂ ಅಕ್ರಮ ಹಣವನ್ನು ಮಾಡಿರುವುದನ್ನು ಅಲ್ಲಗಳಿಯಲು ಆಗದಾದರೂ, ಇದೇ ಕಾರಣಕ್ಕೆ ಕೊರೋನಾನೇ ಇಲ್ಲ ಎಂದು ಹೇಳಲಾಗದು.ನಿಜ ಹೇಳ ಬೇಕೆಂದರೆ ಈ ಕೊರೋನ ಅಸ್ತಿ ಅಂತಸ್ತು ಅಧಿಕಾರ ನೋಡಿ ಕೊಂಡು ಬರೋದಿಲ್ಲ . ಈಗಾಗಲೇ ಹೆಸರಾಂತರ ಕಲಾವಿದರು, ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು,ಹಿರಿಯ ಗಣ್ಯರು, ಅಧಿಕಾರಿಗಳು, ವೈದ್ಯರುಗಳು, ಜನಸಾಮಾನ್ಯರು ಹೀಗೆ ಯಾವ ವರ್ಗವೆಂಬ ತಾರತಮ್ಯವಿಲ್ಲದೇ, ಈ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ಲಕ್ಷ್ಮೀಪುರ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರದಲ್ಲಿ ಸಾಲುಗಟ್ಟಿ ನಿಂತಿರುವ ಕೊರೋನದಿಂದ ಮೃತಪಟ್ಟ ಶವಗಳು ಸಾಲು ನೋಡಿದರೇ ಸಾಕು ಕೊರೋನ‌ ತೀವ್ರತೆಯ ಅನುಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಮೂರ್ನಾಲ್ಕು ಶವಗಳು ಬರುತ್ತಿದ್ದ ಸ್ಮಶಾನದಲ್ಲಿ ಈಗ ಪ್ರತೀ‌ ದಿನವೂ 25-30ರ ವರೆಗೆ ಬಂದು ಆಂಬ್ಯುಲೆನ್ಸ್ ಸಾಲು ಸಾಲಾಗಿ ನಿಂತಿರುವ ಹೃದಯವಿದ್ರಾವಕ ದೃಶ್ಯ ಮನಕಲಕಿಸುತ್ತದೆ.ಲಾಕ್ಡೌನ್ ಸ್ಪಲ್ಪ ಸಡಿಲಗೊಳಿಸಿದ ತಕ್ಷಣ, ಮನೆ ಮಠ ಬಿಟ್ಟು ತನ್ನ ಗಡ್ಡ ಕೆರ್ಕೊಂಡು ಸಿನಿಮಾ ಅಂತ ಮಠ ಚಲನಚಿತ್ರದ ಖ್ಯಾತಿಯ ಗುರುಪ್ರಸಾದ್ ಹುಚ್ಚು‌ ಕುದುರೆ ತರಹಾ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಬೀದಿ ಬೀದಿ ಸುತ್ತಾಡಿ ಕೊರೋನ ಹತ್ತಿಸಿಕೊಂಡು ಈಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ರಾಜ್ಯ ಸರ್ಕಾರವನ್ನು ತೆಗಳುತ್ತಾ ತನ್ನ ಸಾವಿಗೆ ಸರ್ಕಾರವೇ ಕಾರಣ ಎಂಬ ವರಾತ ತೆಗೆದರೆ ಯಾವುದೇ ಪ್ರಯೋಜನ ಆಗದು. ಸುಮ್ಮನೇ ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ರೇ ಈತನಿಗೆ ಕೊರೋನಾ ಬರ್ತಿತ್ತಾ?ದೇಶದ ಜವಾಬ್ದಾರಿಯುತ ನಾಗರೀಕರಾಗಿ ವಯಕ್ತಿವಾಗಿ ಕೆಲವೊಂದು ನೀತಿ ನಿಯಮಗಳನ್ನು ಮತ್ತು ಅನುಶಾಸನಗಳನ್ನು ಸ್ವಯಂ ಪಾಲಿಸಲೇ ಬೇಕಾಗುತ್ತದೆ

 • ಸರ್ಕಾರ ಲಾಕ್ಡೌನ್ ಮಾಡುತ್ತದೆಯೋ ಬಿಡುತ್ತದೆಯೋ, ದಯವಿಟ್ಟು ಇನ್ನೂ ಕೆಲ ಕಾಲ ಸ್ವಯಂ ಲಾಕ್ ಡೌನ್ ಒಳಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರೋಣ.
 • ನಮ್ಮ ನಮ್ಮ ವಯಸ್ಸಿನ ಅನುಗುಣವಾಗಿ ಎರಡೂ ಬಾರಿ ಖಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳೋಣ.
 • ಒಂದಷ್ಟು ದಿನ ಸಭೆ, ಸಮಾರಂಭ, ಮದುವೆ ಮುಂಜಿ, ನಾಮಕರಣ ಮುಂತಾದ ಹೆಚ್ಚು ಜನರು ಸೇರುವಲ್ಲಿ ಹೋಗುವುದನ್ನು ಮುಂದು ಹಾಕೋಣ.
 • ಅನಗತ್ಯವಾಗಿ ಹೊರಗೆಲ್ಲೂ ಓಡಾಡದೇ, ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡೋಣ ಮತ್ತು ಮನೆಗೆ ಬಂದ ತಕ್ಷಣ ಸಾಬೂನಿನಿಂದ ಕೈ ಕಾಲು ಮುಖವನ್ನು ತೊಳೆಯೋಣ.
 • ವಾರಕ್ಕೊಮ್ಮೆ ಪ್ರಾರ್ಥನೆ, ದೇವಸ್ಥಾನ, ಚರ್ಚ್ ಮಸೀದಿ ಎಂದು ತೀರ್ಥಕ್ಷೇತ್ರ, ಜಾತ್ರೆ, ಕುಂಭಮೇಳ ಎಂದು ಎಲ್ಲಿಗೂ ಹೋಗದೇ, ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಂತರ್ಯಾಮಿಯಾದ ಭಗವಂತನನ್ನು ಮನೆಯಿಂದಲೇ ಪ್ರಾರ್ಥಿಸೋಣ.
 • ಸಾಧ್ಯವಾದಷ್ಟೂ ಹೊರಗಡೆಯ ತಿಂಡಿ ತೀರ್ಥಗಳನ್ನು ಸೇವಿಸುವುದನ್ನು ನಿಲ್ಲಿಸೋಣ.
 • ಆದಷ್ಘೂ ಬಿಸಿ ನೀರು ಮತ್ತು ಬಿಸಿಬಿಸಿಯಾದ ಆಹಾರವನ್ನು ಅಚ್ಚುಕಟ್ಟಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವಿಸೋಣ.
 • ಮೆಣಸು, ಜೀರಿಗೆ, ಅರಿಶಿನ, ಚಕ್ಕೆ, ಕರಿಬೇವು, ದನಿಯಾ ಮುಂತಾದವುಗಳಿಂದ ತಯಾರಿಸಿದ ಕಷಾಯವನ್ನು ಆಗ್ಗಾಗ್ಗೆ ಸೇವಿಸುವ ಮೂಲಕ ಕೊರೋನಾ ಸೋಂಕು ನಮಗೆ ತಗುಲಿದ್ದರೂ ಅದು ನಾಶವಾಗುವಂತೆ ನೋಡಿಕೊಳ್ಳೋಣ.
 • ಸರ್ಕಸ್, ಸಿನಿಮಾ, ನಾಟಕ ಮತ್ತು ಪ್ರವಾಸಗಳನ್ನು ಕೆಲ ದಿನಗಳ ಕಾಲ ಮುಂದೂಡಿದರೆ ಜಗತ್ ಪ್ರಳಯವೇನೂ ಆಗದು ಎಂಬುದು ತಿಳಿದಿರಲಿ.
 • ಸರ್ಕಾರಕ್ಕೂ ಈ ಮೊದಲು ದೂರಲು ಚೀನ ದೇಶವಿತ್ತು, ತಬ್ಲೀಗ್ ಗಳು ಇದ್ದರು. ಆದರೆ ಈ ಬಾರೀ ಆ ಕಾರಣಗಳು ಯಾವುವೂ ಇಲ್ಲ. ಈ ಬಾರಿ ತಪ್ಪೆಲ್ಲಾ ನಮ್ದೇ.
 • ನುಡಿದಂತೆ ನಡೆ. ನಡೆಯುವುದಕ್ಕೆ ಆಗುವುದನ್ನೇ ನುಡಿ ಎನ್ನುವಂತೆ Rules is a rules even for fools ಎನ್ನುವಂತೆ ಮುಖಾಮೂತಿ ನೋಡದೇ, ಬಡವ, ಬಲ್ಲಿದ, ರಾಜಕಾರಣಿ, ಮಠಾಧಿಪತಿ, ಮೌಲ್ವಿ ಅಥವಾ ಪಾದ್ರಿ ಎನ್ನುವ ತಾರತಾಮ್ಯವಿಲ್ಲದೇ ತಪ್ಪು ಮಾಡಿದವರಿಗೆಲ್ಲರಿಗೂ ಶಿಕ್ಷೆಯಾಗಲಿ.
 • ಹಾಗೆಂದ ಮಾತ್ರಕ್ಕೆ ಶಿಕ್ಷೆಯೇ ಪರಮೋಚ್ಚ ಗುರಿಯಾಗಿರದೇ, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ.
 • ಥೂ! ಈ ಸರ್ಕಾರ ಸರೀ ಇಲ್ಲಾ, ಈ ಜನಾನೇ ಸರಿ ಇಲ್ಲಾ! ಕೊರೋನಾನೇ ಇಲ್ಲ ಎಂದು ವಿತಂಡ ವಾದ ಮಾಡುತ್ತಾ ಸಮಾಜವನ್ನು ದೂರುವುದನ್ನು ಬಿಟ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸುರಕ್ಷಿತವಾಗಿರೋಣ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲಾ ವೆಂಟಿಲೇಟರ್ಗಳಿಗೆ ಬರ ಎಂದ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳುವ ಬದಲು ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡ್ ಸಾಮಾಜಿಕ ಅಂತರ ಕಾಪಾಡಿಕೊಂಡ್ರೇ ಈ ರೀತಿಯಲ್ಲಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಇರ್ತಿರ್ಲಿಲ್ಲಾ ಅಲ್ವೇ?ಈ ಲೇಖನ ಕೇವಲ ಓದುಗರನ್ನು ಹೆದರಿಸುವುದಕ್ಕೆ ಆಗಲೀ ಸರ್ಕಾರದ ಪರ ಅಥವಾ ವಿರೋಧವಾಗಿರದೇ, ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಾನಾ ಕಾರಣಗಳಿಂದ ಕೊರೋನ ಸೋಂಕಿತರಾಗಿ ಸೂಕ್ತ ಚಿಕಿತ್ಸಾ ವಿಧಾನಗಳಿಂದ ಗುಣಮುಖರಾದ ಸಂಖ್ಯೆಯೂ ಲಕ್ಷಾಂತರವಿದೆ.ಜೀವ ಇದ್ರೇ ಮಾತ್ರ ಜೀವನ. ಸುರಕ್ಷಿತವಾಗಿ ಇದ್ದರೆ ಬರೋದಿಲ್ಲ ಕೊರೋನ ಎನ್ನುವು್ಉ ಮಾತ್ರವೇ ಸತ್ಯ. ಮೊದಲನೆಯ ಸಲಾ ತಪ್ಪು ಮಾಡಿದರೆ ಕ್ಷಮೆ ಇರುತ್ತದೆ ಆದರೆ ಎರಡನೆಯ ಸಲಾ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗಾಗಿ ಈ ಸಲ ನಮ್ಮಿಂದ ತಪ್ಪಾಗುವುದು ಬೇಡ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಆತ ದೇಶ ಕಾಯುವ ವೀರ ಯೋಧ. ತನ್ನ ಸಂಸಾರವನ್ನು ಇಲ್ಲಿ ಬಿಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿಯೇ ದೂರದ ಗಡಿಯಲ್ಲಿ ಚಳಿ ಮಳೆಯನ್ನು ಲೆಕ್ಕಿಸದೇ ತನ್ನ ಸೇವೆಯನ್ನು ಸಲ್ಲಿಸುತ್ತಾ ಕಾಲ ಕಾಲಕ್ಕೆ ತಾನು ದುಡಿಡಿದ್ದ ಹಣವನ್ನು ಕಳುಹಿಸುತ್ತಾ ಸಮಯ ಸಿಕ್ಕಾಗಲೆಲ್ಲಾ ಊರಿಗೆ ಬಂದು ಹೋಗುತ್ತಿರುತ್ತಾನೆ. ಇನ್ನು ಆತನ ಪತ್ನಿಯೂ ತಮ್ಮ ಮಕ್ಕಳಿಗೆ ಮನೆಯ ಯಜಮಾನರು ತಮ್ಮ ಜೊತೆ ಇಲ್ಲದಿರುವುದು ಗೊತ್ತೇ ಆಗದಂತೆ ಯಜಮಾನರು ಕಳುಹಿಸಿದ ಹಣದಲ್ಲಿಯೇ ಹಾಗೂ ಹೀಗೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸಾಕಿ ಸಲಹಿ ಉತ್ತಮ ವಿದ್ಯಾಭ್ಯಾಸ ಮಾಡಿಸುತ್ತಾಳೆ. ಇನ್ನು ಮನೆಯಲ್ಲಿರುವ ಅಜ್ಜಿ ತನ್ನ ಮೊಮ್ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಾ, ತಾನು ಬದುಕಿರುವಷ್ಟರಲ್ಲಿಯೇ ಮೊಮ್ಮಗಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ನೋಡಲು ಆಸೆ ಪಡುತ್ತಿದ್ದಂತಹ ಅಜ್ಜಿ. ಅಕ್ಕ ಚೆನ್ನಾಗಿ ಓದಿದರ ಅದೇ ಹಾದಿಯಲ್ಲಿ ತಾನೂ ಮುಂದುವರೆಯಬಹುದು ಎಂದು ಸಂಭ್ರಮಿಸುತ್ತಿದ್ದಂತಹ ತಮ್ಮ ಹೀಗಿತ್ತು ಆ ಸುಂದರ ಸಂಸಾರ.

ತಂದೆ,ತಾಯಿ, ಅಜ್ಜಿ ಮತ್ತು ತಮ್ಮಂದಿರ ಪ್ರೀತಿ ಮತ್ತು ಅದರಗಳಿಂದ ಮುದ್ದಾಗಿ ಬೆಳೆದ ಹುಡುಗಿ ನೋಡ ನೋಡುತ್ತಿದ್ದಂತೆಯೇ ಶಾಲಾ ಕಾಲೇಜುಗಳನ್ನು ದಾಟಿ ಬಿ.ಇ. ಪದವಿಯನ್ನು ಪಡೆಯುತ್ತಾಳೆ. ಅಷ್ಟು ಓದಿದ ನಂತರ ಮನೆಯಲ್ಲಿ ಸುಮ್ಮನೆ ಕೂಡುವುದೇಕೆ? ದೂರದ ಬೆಂಗಳೂರಿಗೆ ಹೋಗಿ ಕೆಲ ಕಾಲ ದುಡಿದು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳುತ್ತೇನೆ ಎನ್ನುತ್ತಾಳೆ. ಬೇಡ ಮಗಳೇ, ನೀನು ದುಡಿದ ಹಣದಿಂದ ನಾವೇನೂ ಬದುಕಬೇಕಿಲ್ಲ ಎಂದು ತಂದೆ ತಾಯಿಯರು ಪರಿ ಪರಿಯಾಗಿ ಹೇಳಿದರೂ ವಯೋಸಹಜ ಹುಂಬು ತನದಿಂದ ಹಾಗೂ ಹೀಗೂ ಮನೆಯವರನ್ನು ಒಪ್ಪಿಸಿ ಬೆಂಗಳೂರಿಗೆ ಬಂದು ಪಿ,ಜಿ.ಒಂದರಲ್ಲಿ ಇದ್ದು ಕೊಂಡು ತಿಂಗಳಿಗೆ ಸುಮಾರು 40,000/- ಸಂಬಳ ಪಡೆಯುವಂತಹ ಕೆಲಸ ಗಿಟ್ಟಿಸಿಕೊಂಡಿದ್ದೇ ತಡಾ ಮನೆಯವರಿಗೆಲ್ಲರಿಗೂ ಮಗಳು ಏನೋ ಮಹತ್ಕಾರ್ಯ ಸಾಧಿಸಿದಂತಹ ಮಹದಾನಂದ. ತಾವು ಹೂಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಬೆಳಸಿ ದೊಡ್ಡವರನ್ನಾಗಿ ಮಾಡಿದ್ದಕ್ಕೆ ಒಂದು ಸಾರ್ಥಕತೆ ದೊರೆಯಿತೆಂಬ ಭಾವನೆ.

ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಸಂಸ್ಕಾರವಂತರ ಮನೆಯಲ್ಲಿ ಬೆಳೆದ್ದಿದ್ದ ಹುಡುಗಿ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಬಿಚ್ಚಿ ಬಿಟ್ಟ ಕುದುರೆಯಂತಾಗಿ ಹೋಗುತ್ತಾಳೆ. ಅಕೆಯ ಆಸೆ ಆಕಾಂಕ್ಷೆ ಮತ್ತು ವಾಂಛೆಗಳಿಗೆ ಆಕೆ ದುಡಿಯುತ್ತಿದ್ದ ಸಂಬಳವು ಸಾಕಾಗದೇ ಹೋದಾಗಲೇ ಹೆಚ್ಚಿನ ಹಣಕ್ಕಾಕಿ ಹಾತೊರೆಯುತ್ತಿರುತ್ತಾಳೆ.

ಇಲ್ಲೊಬ್ಬ ಕಾನನಕೋಟೆಯ ಪುಡಾರಿ ಸಣ್ಣ ವಯಸ್ಸಿನಿಂದಲೂ ಮನೆ ಮಠ ಬಿಟ್ಟು ದುರ್ಜನರ ಸಹವಾಸ ಮಾಡುತ್ತಾ, ಅಕ್ರಮವಾಗಿ ಗಾಂಜಾ ಮಾರುತ್ತಾ, ಹಳ್ಳಿ ಹಳ್ಳಿಗಲ್ಲಿ ನೀಲೀಚಿತ್ರಗಳನ್ನು ತೋರಿಸುತ್ತಾ, ತನ್ನೂರಿನ ಸುತ್ತಲೂ ಪ್ರಕೃತಿ ದತ್ತವಾಗಿದ್ದ ಬಂಡೆಗಳನ್ನು ಸಮತಟ್ಟು ಮಾಡುತ್ತಾ ನೋಡ ನೋಡುತ್ತಿದ್ದಂತೆಯೇ ದಮ್ಮಯ್ಯಾ ಗುಡ್ಡಯ್ಯಾ ಎಂದು ಅವರಿವರ ಕೈಕಾಲು ಹಿಡಿದು ಸಮಯ ಸಂಧರ್ಭಕ್ಕೆ ತಲೆಯನ್ನೂ ಹಿಡಿದು, ರಾಜಕೀಯವಾಗಿ ಬೆಳೆದು ಶಾಸಕನಾಗುತ್ತಾನೆ. ಬರೀ ಗೈಯಲ್ಲಿ ಬೆಂಗಳೂರಿಗೆ ಬಂದವ ಕೋಟ್ಯಾಂತರ ರೂಪಾಯಿಗಳ ಒಡೆಯನಾಗಿ ಬೆಳೆಯುವ ಪರಿಯಲ್ಲಿ ಸ್ನೇಹಿತರನ್ನೂ, ಶತ್ರುಗಳನ್ನೂ ಸಮಪ್ರಮಾಣದಲ್ಲಿಯೇ ಗಳಿಸಿರುತ್ತಾನೆ.

ದೂರದ ಸಕ್ಕರೆ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಮಾಡುತ್ತಾ ಅಣ್ಣ ತಮ್ಮಂದಿರೆಲ್ಲರೂ ಒಂದೊಂದು ರಾಜಕೀಯ ಪಕ್ಷದಲ್ಲಿದ್ದು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಕುಟುಂಬದ ವ್ಯವಹಾರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡು ಹೋಗುತ್ತಿರುತ್ತಾರೆ.

ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಭರದಲ್ಲಿ, ಬಂಡೆ ರಾಜಕಾರಣಿ ಸಕ್ಕರೆ ಜಿಲ್ಲೆಗೆ ಕಾಲಿಟ್ಟಿದ್ದು ಕುಟುಂಬ ರಾಜಕಾರಣಿಗಳಿಗೆ ಇಷ್ಟವಾಗದೇ ಒಂದೇ ಪಕ್ಷದಲ್ಲಿದ್ದರೂ ಸಣ್ಣದಾದ ವೈಮನಸ್ಯ ಕಡೆಗೆ ದೊಡ್ಡದಾಗಿ ಬೆಳೆದು ಸಮ್ಮೀಶ್ರಸರ್ಕಾರವನ್ನೇ ಉರುಳಿಸಿ ತಮ್ಮದೇ ಆದ ಅವಕಾಶವಾದಿ ಸರ್ಕಾರವನ್ನು ರಚಿಸುವುದರಲ್ಲಿ ಕುಟುಂಬ ರಾಜಕಾರಣಿ ಯಶಸ್ವಿಯಾಗುತ್ತಾನೆ. ಇದನ್ನ ಸಹಿಸದ ಬಂಡೇ ರಾಜಕಾರಣಿ ಹೇಗಾದರೂ ಮಾಡಿ ಕುಂಟುಂಬ ರಾಜಕಾರಣಿಯನ್ನು ಮಣಿಸಲೇ ಬೇಕೆಂಬ ಆಲೋಚನೆ ನಡೆಸುತ್ತಿದ್ದಾಗಲೇ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುವ ತಂಡವೊಂದು ಅವನ ಕಣ್ಣಿಗೆ ಬೀಳುತ್ತದೆ.

ಇತ್ತ ಹೆಚ್ಚಿನ ಹಣ ಸಂಪಾದಿಸಲು ಏನು ಮಾಡಲೂ ಸಿದ್ಧವಿದ್ದ ಹುಡುಗಿ ಅತ್ತ, ಹುಡುಗಿಯರನ್ನೇ ಮುಂದಿಟ್ಟುಕೊಂಡು ಹಣ ಮಾಡುತ್ತಿದ್ದ ತಂಡ ಎರಡೂ ಅದಾವುದೋ ಬಾದರಾಯಣ ಸಂಬಂಧದ ರೂಪದಲ್ಲಿ ಭೇಟಿಯಾಗಿದ್ದೇ ತಡಾ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗುತ್ತದೆ. ಸುಲಭರೂಪದಲ್ಲಿ ಹಣವನ್ನು ಸಂಪಾದಿಸುವ ಭರದಲ್ಲಿದ್ದ ಆ ಹುಡುಗಿಗೆ ತನ್ನ ಶೀಲ, ವಂಶದ ಗೌರವ, ಸಮಾಜದಲ್ಲಿನ ಸಭ್ಯತೆ ಮತ್ತು ಗೌರವವೆಲ್ಲವೂ ಗೌಣವಾಗಿ ತನ್ನ ಸೆರಗನ್ನು ಹಾಸಿ ಆ ಕುಟುಂಬರಾಜಕಾರಣಿಯನ್ನು ಪಲ್ಲಂಗದ ಮೇಲೆ ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಾಳೆ. ಇದನ್ನು ಆ ಹನಿಟ್ರ್ಯಾಪ್ ತಂಡ ರೆಕಾರ್ಡ್ ಮಾಡಿಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಏಡಿಟ್ ಮಾಡಿ ಸಿಡಿ ತಯಾರಿಸಿ ಕುಟುಂಬ ರಾಜಕಾರಣಿಯನ್ನು ಬ್ಲಾಕ್ ಮಾಡಿಯೂ ಹಣ ಸಂಪಾದಿಸಿದ್ದಲ್ಲದೇ, ಮತ್ತೊಂದು ಸಿಡಿಯನ್ನು ಬಂಡೆ ರಾಜಕಾರಣಿಗೂ ಕೊಟ್ಟು ಅವನ ಆಣತಿಯ ಮೇರೆಗೆ ಏಕಾಏಕಿ ಅದೊಂದು ದಿನ ಇಡೀ ಪ್ರಪಂಚವೇ ನೋಡುವಂತೆ ಮಾಡಿ ಕುಟುಂಬ ರಾಜಕಾರಣಿಯ ಮಾನವನ್ನು ಹರಾಜು ಹಾಕುವುದರಲ್ಲಿ ಸಫಲರಾಗುವುದಲ್ಲದೇ, ಕುಟುಂಬ ರಾಜಕಾರಣಿಯನ್ನು ಮಂತ್ರಿಗಿರಿಯಿಂದ ಕೆಳಗೆ ಇಳಿಸುವುದರಲ್ಲಿಯೂ ಯಶಸ್ವಿಯಾಗುತ್ತಾರೆ.

ಮಗಳು ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಮಾನ ಸನ್ಮಾನಗಳಿಂದ ದುಡಿಯುತ್ತಿದ್ದಾಳೆ ಎಂದು ಸಂಭ್ರಮಿಸುತ್ತಿದ್ದ ಕುಟುಂಬದವರಿಗೆ ತಮ್ಮ ಮಗಳನ್ನು ಈ ರೀತಿಯ ಅವತಾರದಲ್ಲಿ ನೋಡಿ ಬೆಚ್ಚಿ ಬೆರಗಾಗುತ್ತಾರೆ. ಮಗಳೇ ಇದ್ಯಾಕೆ ಬೇಕಿತ್ತು ಎಂದು ತಂದೆಕೇಳಿದರೆ ಅಕ್ಕಾ ಮೂರು ಹೊತ್ತು ನೆಮ್ಮದಿಯಾಗಿ ತಿನ್ನಲು ನೆಮ್ಮದಿಯಾದ ಕೆಲವಿದ್ದಾಗ ಇಂತಹ ಕೆಲಸ ಬೇಕಿತ್ತೇ ಎಂದು ಕೇಳುವ ತಮ್ಮನ ಅಳಲು ನಿಜಕ್ಕೂ ಹೇಳ ತೀರದು.

ಕಂಡವರ ಮನೆಯಲ್ಲಿ ಹೆಣ ಬಿದ್ದಿದ್ದು ಅಲ್ಲಿ ಹಾಕಿದ್ದ ಬೆಂಕಿಯಲ್ಲಿ ತಮ್ಮ ಚಳಿಯನ್ನು ಕಾಯಿಸಿಕೊಳ್ಳುವಂತಹ ಮಾಧ್ಯಮದವರು ಇಂತಹ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ದಿನದ 24 ಗಂಟೆಗಳೂ ಬ್ರೇಕಿಂಗ್ ನ್ಯೂಸ್ ಎನ್ನುತ್ತಾ ತೋರಿಸಬಾರದ್ದಲ್ಲವನ್ನೂ ತೋರಿಸುತ್ತಾ ಆ ಹುಡುಗಿ ಮತ್ತವರ ಕುಟುಂಬದ ಮಾನ ಮರ್ಯಾದೆಯನ್ನು ಮೂರು ಪಾಲು ಮಾಡಿ ಬಿಡುತ್ತಾರೆ.

ಇನ್ನು ಪಾಳು ಬಿದ್ದ ಮನೆಯಲ್ಲಿ ಗಳವನ್ನು ಹಿರಿದುಕೊಂಡು ತನ್ನ ಮನೆ ಕಟ್ಟಿಕೊಳ್ಳುವಂತೆ, ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕರೀ ತಂಪುಕನ್ನಡಕ ಹಾಕಿಕೊಂಡು ಮಾಧ್ಯಮಗಳ ಮುಂದೆಯೂ ಮತ್ತು FB Live ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳಲು ಹಪಾಹಪಿ ಪಡುವ ವಕೀಲನೊಬ್ಬ ಇವರಿಗೆ ತಗಲು ಹಾಕಿಕೊಳ್ಳುತ್ತಾನೆ.

ಒಟ್ಟಿನಲ್ಲಿ ಅಪ್ಪಾ ಅಮ್ಮಾ ಜಗಳದಲಿ ಕೂಸು ಬಡವಾಯ್ತು ಎನ್ನುವಂತೆ ಈ ರಾಜಕಾರಣಿಗಳು, ಮಾಧ್ಯಮಗಳು ಮತ್ತು ಲಾಯರ್ ಗಳ ತೆವಲಿಗೆ ಒಂದು ಕುಟುಂಬದ ಮಾನ ಮರ್ಯಾದೆಯನ್ನು ಹೇಗೆ ನಾಶ ಪಡಿದಬಹುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗುತ್ತದೆ.

rape1ತಮ್ಮ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವ ಸಲುವಾಗಿಿ ಇಬ್ಬರು ಪ್ರೌಢರು ಒಪ್ಪಿಕೊಂಡು ನಾಲ್ಕು ಗೋಡೆಗಳ ಮಧ್ಯೆ ನಡೆಸಿದಂತಹ ಸಂಭೋಗವಾಗುತ್ತದೆಯೇ ಹೊರತು ಅದು ಅತ್ಯಾಚಾರ ಎನಿಸುವುದಿಲ್ಲ. ಇಂತಹ ಸಂಭೋಗದಲ್ಲಿ ಇಬ್ಬರೂ ಸಂತೃಪ್ತರೇ ಹೊರತು ಇಬ್ಬರಲ್ಲಿ ಯಾರೂ ಸಂತ್ರಸ್ತರಾಗಲು ಸಾಧ್ಯವೇ ಇಲ್ಲ. ಇಂತಹ ಅಕ್ರಮ ಸಂಬಂಧದ ಸಂಭೋಗವನ್ನು ರೆಕಾರ್ಡ್ ಮಾಡಲು ಸೂಚಿಸಿದವರು, ಮಾಡಿದವರು ಮತ್ತು ಅದನ್ನು ಇಡೀ ಪ್ರಪಂಚವೇ ನೋಡುವಂತೆ ಹರಿಬಿಡುವ ಮೂಲಕ ಕೇವಲ ಆ ರಾಜಕಾರಣಿಯ ಮತ್ತು ಆ ಒಂದು ಕುಟುಂಬದ ಮಾನ ಮರ್ಯದೆಯಲ್ಲದೇ ಇಡೀ ರಾಜ್ಯದ ಮರ್ಯಾದೆಯನ್ನೇ ಹರಾಜು ಹಾಕಿದವರೇ ನಿಜಕ್ಕೂ ಮೊದಲು ಅಪರಾಧಿ ಎನಿಸಿ ಕೊಳ್ಳುತ್ತಾರೆ. ಏಕೆಂದರೆ ಯಾರಿಗೇ ಆಗಲಿ ಮತ್ತೊಬ್ಬರ ಖಾಸಗೀ ವಿಡೀಯೋಗಳನ್ನು ಅವರ ಅನುಮತಿ ಇಲ್ಲದೇ ಸಾರ್ವಜನಿಕವಾಗಿ ಹರಿಬಿಡುವುದು ಕ್ರಿಮಿನಲ್ ಅಪರಾಧವಾಗುತ್ತದೆ.

 • ಈ ಪ್ರಕರಣದಲ್ಲಿ ಅಕ್ಷಪಣೆ ಮಾಡ ಬೇಕಾದವರು ಆ ರಾಜಕಾರಣಿ ಮತ್ತು ಆ ಹೆಣ್ಣುಮಗಳ ಕುಟುಂಬದವರು. ದುರಾದೃಷ್ಣವಷಾತ್ ತೋಳ ಜಾರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಮಾಧ್ಯಮದವರು, ವಿರೋಧಪಕ್ಷದವರು, ವಕೀಲರೂ ಎಲ್ಲರೂ ಆ ರಾಜಕಾರಣಿಯ ಮೇಲೆ ಬೀಳುವುದಲ್ಲದೇ ಆತನನ್ನು ಆರೋಪಿ ಮತ್ತು ಆಕೆಯನ್ನು ಸಂಸ್ತ್ರಸ್ತೆ ಎಂದು ಷರ ಬರೆಯುವುದಲ್ಲದೇ ಪದೇ ಪದೇ ಅತ್ಯಾಚಾರಿ ಎನ್ನುವುದು ಸರಿ ಕಾಣದು. ‘
 • ಇಡೀ ಪ್ರಕರಣವನ್ನು ನೋಡಿದರೆ ಎಂತಹ ಸಾಮಾನ್ಯ ಮನುಷ್ಯರಿಗೂ ಇದೊಂದು ಹನಿಟ್ರ್ಯಾಪ್ ಕೇಸ್ ಎಂದು ತಿಳಿದು ಬರುತ್ತದಲ್ಲದೇ ಈ ಪ್ರಕರಣದಲ್ಲಿ ಆಕೆ ಸ್ಪಷ್ಟವಾಗಿ ಬೆಲೆವೆಣ್ಣಿನ ಪಾತ್ರ ವಹಿಸಿರುವುದು ಸ್ಪಷ್ಟವಾಗುತ್ತದೆ. ಸಾಫ್ಘ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಗೆ ಅಣೆಕಟ್ಟೆಗಳ ವಿಡೀಯೋ ಮಾಡುವ ತೆವಲೇಕೆ? ಅದಾಗಲೇ ಕೈ ತುಂಬ ಸಂಬಳ ತೆಗೆದುಕೊಳ್ಳುತ್ತಿದ್ದವಳು ಯಕಚ್ಚಿತ್ ಸಂಬಳ ಕೊಡುವ ಸರ್ಕಾರಿ ಉದ್ಯೋಗಕ್ಕೆ ಹಾತೊರೆಯುತ್ತಾಳೆ ಎಂದರೆ ನಂಬಲು ಸಾಧ್ಯವೇ?
 • ತನ್ನ ಹೊಟ್ಟೆ ಪಾಡಿಗಾಗಿ ರಸ್ತೆ ಬದಿಯ ಲೈಂಗಿಕ ಕಾರ್ಯಕರ್ತೆಯರನ್ನು ಹಿಡಿದು ಬಡಿದು ಅವರಿಂದ ನಾಲ್ಕಾರು ಕಾಸುಗಳನ್ನು ಕಿತ್ತಿ ಕಾಟ ಕೊಡುವ ಪೊಲೀಸರಿಗೆ ಇಂತಹ ಬೆಲೆವೆಣ್ಣನ್ನು ಹಿಡಿಯಲು ಒಂದು ತಿಂಗಳಾದರೂ ಆಗಲಿಲ್ಲವೆಂದರೆ ಅವರ ಮೇಲೆ ಒತ್ತಡ ಹಾಕುತ್ತಿರುವ ಕಾಣದ ಕೈಗಳಾವುವು?
 • ರಾಜ್ಯದಲ್ಲಿ ಇರುವ ಸಮಸ್ಯೆಗಳನ್ನು ಕುರಿತಾಗಿ ವಿಧಾನ ಸಭೆಯಲ್ಲಿ ಚರ್ಚಿಸುವ ಸಲುವಾಗಿ ಅಧಿವೇಶನ ನಡೆಸಿದರೆ, ತಮ್ಮ ಪಕ್ಷದವರ ಪಾತ್ರವಿರುವುದು ಅಂಗೈನಲ್ಲಿ ಇರುವ ಹುಣ್ಣಿನಷ್ಟೇ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಅದರ ಕುರಿತಂತೆ ಗಲಾಟೆ ಎಬ್ಬಿಸಿ ಅಧಿವೇಶನವನ್ನೇ ಮೊಟುಕುಗೊಳಿಸಿ ಸಾಧಿಸಿದ್ದಾದರೂ ಏನು?
 • ಈ ಹಿಂದೆ ಇದೇ ರೀತಿ ಖುಲ್ಲಂ ಖುಲ್ಲಂ ಆಗಿ ಸಿಕ್ಕಿ ಬಿದ್ದಿದ್ದ ನರ್ಸ್ ರೇಣುಕಾಚಾರ್ಯ, ಹರತಾಳು ಹಾಲಪ್ಪ ಮತ್ತು ಮೇಟಿ ಕೇಸಿನಲ್ಲಿ ನಡೆಸಿದ ತನಿಖೆ ಹಳ್ಳ ಹಿಡಿದು ಕಡೆಗೆ ಆಪಾದಿತರೆಲ್ಲರೂ ಖುಲಾಸೆ ಹೊಂದಿವುದು ಕಣ್ಣ ಮುಂದಿರುವಾಗ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದೆಂಬ ಭರವಸೆ ಯಾರಿಗೂ ಇಲ್ಲವಾಗಿದೆ?
 • ನಾಳೆ ಈ ಪ್ರಕರಣವೇ ಹಳ್ಳ ಹತ್ತಿ ಎಲ್ಲಾ ಆರೋಪಿಗಳೂ ನಿರಪರಾಧಿಗಳು ಎಂದು ಬಿಡುಗಡೆ ಹೊಂದಿದರೆ, ಆ ಎರಡೂ ಕುಟುಂಬದವರ ಬೀದಿ ಪಾಲಾದ ಮಾನದ ಬಗ್ಗೆ ಮಾಧ್ಯನದವರಿಗೂ, ಹನಿಟ್ರ್ಯಾಪ್ ಮಾಡಿದವರಿಗೂ ಮತ್ತು ಅದನ್ನು ಮಾಡಿಸಿದ ರಾಜಕಾರಣಿಗಳಿಗೆ ತಂದು ಕೊಡಲು ಸಾಧ್ಯವೇ?
 • ಇಡೀ ಪ್ರಕರಣದಲ್ಲಿ ತಮ್ಮಿಬ್ಬರ ಸಮ್ಮತದ ಭಾಗವಹಿಸುವಿಗೆ ಸ್ಪಷ್ಟವಾಗಿದ್ದರೂ ಅದು ನಕಲಿ ಸಿಡಿ ಅದು ಗ್ರಾಫಿಕ್ಸ್ ಎಂದು ಬೊಬ್ಬಿರಿಯುವುದರ ಮೂಲಕ ಯಾರ ಕಿವಿ ಮೇಲೆ ಹೂವಿಡುವ ಪ್ರಯತ್ನ ಮಾಡುತ್ತೀರೀ?

sab1ಒಟ್ಟಿನಲ್ಲಿ ಪಡ್ಡೆ ಹುಡುಗರಿಗೆ ಪುಕ್ಕಟೆ ಮನರಂಜನೆ, ವಯಸ್ಕರಿಗೆ ಮುಜುಗರ ಮಾಧ್ಯಮದವರಿಗೆ ಕಾಮಪುರಾಣದ ಬಾಡೂಟದ ಮೂಲಕ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವಿಕೆ, ಕರೀ ಕೋಟಿನ ಕಪ್ಪು ಕನ್ನಡಕದ ಲಾಯರಿಗೆ ಪುಕ್ಕಟ್ಟೆ ಪ್ರಚಾರ, ಈಗಾಗಲೇ ಮೂರು ಬಿಟ್ಟೇ ರಾಜಕೀಯ ನಾಯಕನಾಗಿರುವವನಿಗೆ ಆಡಳಿತ ಪಕ್ಷವನ್ನು ಹಳಿಯಲು ಮತ್ತೊಂದು ಅಸ್ತ್ರ ಒಟ್ಟಿನಲ್ಲಿ ಹುಚ್ಚು ಮುಂಡೇ ಮದುವೇಲಿ ಉಂಡವನೇ ಜಾಣ ಎಂದು ಎಲ್ಲರೂ ಹರಿದು ಮುಕ್ಕುವವರೇ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗದು ಎಂದು ಕಚ್ಚೆ ಬಿಚ್ಚಿದವ ಮತ್ತು ಅತಿಯಾಸೆಗಾಗಿ ಸೆರಗನ್ನು ಹಾಸಿದವರು ಬಟ್ಟೆ ಬಿಚ್ಚಾಕಿ ಸಂತೃಪ್ತರಾದರೇ, ಮಾನ ಮತ್ತು ಮರ್ಯಾದೆಯನ್ನು ಕಳೆದುಕೊಂಡಿದ್ದು ಮಾತ್ರಾ ಯಾವುದೇ ತಪ್ಪು ಮಾಡದ ಇಬ್ಬರ ಕುಟುಂಬವರು. ತಮ್ಮ ತಮ್ಮ ತೆವಲುಗಳಿಗಾಗಿ ಆ ಕುಟುಂಬವರ ಮತ್ತು ರಾಜ್ಯದ ಮರ್ಯಾದೆಯನ್ನು ಹಾಕುವುದು ಬೇಕಿತ್ತಾ? ಇದೇನಾ ಸಭ್ಯತೇ? ಇದೇನಾ ಸಂಸ್ಕೃತಿ?

ಏನಂತೀರೀ?
ನಿಮ್ಮವನೇ ಉಮಾಸುತ