ವಿಕ್ರಮ ವಾರಪತ್ರಿಕೆಯಲ್ಲಿ ರಾಜಶೇಖರ್ (ರಾಜಾ) ಸ್ಮರಣೆ

ನನ್ನನ್ನು ವಯಕ್ತಿಕವಾಗಿ ಬಾಲ್ಯದಿಂದಲೂ ಬಲ್ಲ ಮತ್ತು ನನ್ನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಾ ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ ಶ್ರೀ ರಾಜಶೇಖರ್ ಅರ್ಥಾತ್ ಲಂಬೂರಾಜ, ಬೋರ್ವೆಲ್ ರಾಜಾ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಕಾಲಿಕವಾಗಿ ನಮ್ಮೆನ್ನೆಲ್ಲಾ ಅಗಲಿದಾಗ ಅವರ ಕುರಿತಂತೆ ಆಧುನಿಕ ಭಗೀರಥ ರಾಜಶೇಖರ್ (ರಾಜ) https://enantheeri.com/2020/10/28/borewell_raja/ಎಂಬ ಲೇಖನವನ್ನು ಬರೆದಿದ್ದೆ. ಆ ಲೇಖನ ಒಂದು ರೀತಿಯ ವೈರಲ್ ಆಗಿ ಸಾವಿರಾರು ಜನರು ಓದಿದ್ದಲ್ಲದೇ ಖುದ್ದಾಗಿ ನನಗೆ ಕರೆ ಮಾಡಿ ರಾಜನ ಅಕಾಲಿಕ ಮರಣಕ್ಕೆ ದುಖಃವನ್ನು ವ್ಯಕ್ತಪಡಿಸಿ, ರಾಜನ ವ್ಯಕ್ತಿತ್ವದ ಕುರಿತಾಗಿ ಬರೆದ… Read More ವಿಕ್ರಮ ವಾರಪತ್ರಿಕೆಯಲ್ಲಿ ರಾಜಶೇಖರ್ (ರಾಜಾ) ಸ್ಮರಣೆ

ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಅದು ಎಂಭತ್ತರ ದಶಕದ ಸಮಯ. ನನ್ನ ವಿದ್ಯಾಭ್ಯಾಸದ ಸಲುವಾಗಿ ನಾವು ನೆಲಮಂಗಲದಿಂದ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಹಿಂದಿನ ಲೊಟ್ಟೇಗೊಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೋಗುತ್ತಿದ್ದ ನನಗೆ ನಮ್ಮ ಮನೆಯ ಬಳಿ ಯಾವುದೇ ಶಾಖೆ ಇರದಿದ್ದದ್ದು ತುಸು ಬೇಸರವೆನಿಸಿತ್ತು, ನಮ್ಮ ಶಾಲೆ ಮಧ್ಯಾಹ್ನನದ ಪಾಳಿಯಲ್ಲಿದ್ದು 1 – ಸಂಜೆ 5:30ಕ್ಕೆ ಮುಗಿಯುತ್ತಿತ್ತು. ಅದೊಂದು ದಿನ ನಮ್ಮ ಶಾಲೆಯ ಹಿಂಬಾಗದಲ್ಲಿದ್ದ ಬಿಇಎಲ್ ಸೊಸೈಟಿಯ ಪಕ್ಕದಲ್ಲಿ ಶಾಖೆ ನಡೆಯುವುದನ್ನು ನೋಡಿ ಆನಂದವಾಗಿ… Read More ಆಧುನಿಕ ಭಗೀರಥ ರಾಜಶೇಖರ್(ರಾಜಾ)