ಪಾತಾಳ ಗರಡಿ

ಅದು ಎಪ್ಪತ್ತರ ದಶಕ. ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲ. ಆಗಿನ್ನೂ ಈಗಿನ ತರಹದಲ್ಲಿ ಮನೆ ಮನೆಗೂ ನಲ್ಲಿಗಳು ಇಲ್ಲದ ಕಾಲ. ನೀರಿಗಾಗಿ ಬಹುತೇಕ ಎಲ್ಲರ ಮನೆಗಳಲ್ಲಿಯೂ ಬಾವಿಯನ್ನೇ ಆಶ್ರಯಿಸುತ್ತಿದ್ದ ಕಾಲವದು. ನಮ್ಮ ತಂದೆಯವರು ಪ್ರತೀ ದಿನ ತಮ್ಮ ಕಛೇರಿಯಿಂದ ಬಂದ ತಕ್ಷಣ ಸ್ವಲ್ಪ ವಿರಾಮ ತೆಗೆದುಕೊಂಡು ಕತ್ತಲಾಗುವ ಮುನ್ನಾ ಬಾವಿಯಿಂದ ಸರಾಗವಾಗಿ ನೀರನ್ನು ಸೇದಿ ನಮ್ಮ ಮನೆಯ ಬಚ್ಚಲು ಮನೆಯಲ್ಲಿದ್ದ ಹಂಡೆ, ನೀರಿನ ತೊಟ್ಟಿಗಳು ಬಕೆಟ್ ಎಲ್ಲದಕ್ಕೂ ತುಂಬಿಸಿಡುತ್ತಿದ್ದದ್ದನ್ನು ನೋಡಿ ನಮಗೆ ಸೋಜಿಗವುಂಟಾಗುತ್ತಿತ್ತು. ಅದೊಮ್ಮೆ ಬಾವಿಯ… Read More ಪಾತಾಳ ಗರಡಿ