ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಟ್ಯಾಗೋರ್ ಅವರು ದೇಶದ ಸ್ತುತಿಗಾಗಿ ಬರೆದಿದ್ದದ್ದಲ್ಲ ಬದಲಾಗಿ ಐದನೆಯ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿ ಬರೆದ್ದದ್ದು ಎಂಬ ವಿವಾದ ಮೊದಲಿನಿಂದಲೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇಿ ಇರುತ್ತದೆ. ಕನ್ನಡಿಗರಿಗೆ ಮೂಲ ಗೀತೆಯನ್ನು ಕೇಳಿದಾಗ ಅಷ್ಟೊಂದು ಸರಿಯಾಗಿ ಅರ್ಥವಾಗದಿದ್ದದ್ದು ಈಗ ಕನ್ನಡದಲ್ಲಿಯೇ ಅದರ ಭಾವಾನುವಾದವನ್ನು ಕೇಳಿದಾಗ ಅಂದಿನ ವಿವಾದದಲ್ಲಿ ಬಹಳಷ್ಟು ತಿರುಳಿದೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತಿದೆ.   ಸಾಮಾನ್ಯವಾಗಿ ನಾವು ಭೂಮಿಯನ್ನು… Read More ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ಶ್ರೀ ಸುಬ್ರಹ್ಮಣ್ಯ ಭಾರತಿ

ಶ್ರೀ ಸುಬ್ರಹ್ಮಣ್ಯ ಭಾರತಿಯವರು ಖಡ್ಗಕ್ಕಿಂತ ಲೇಖನಿಯೇ ಹರಿತ ಎಂದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಮ್ಮ ಉಗ್ರ ಲೇಖನಗಳು ಮತ್ತು ಕವಿತೆಗಳ ಮೂಲಕ ಇಡೀ ತಮಿಳು ನಾಡಿನ ಜನರನ್ನು ಜಾಗೃತಗೊಳಿಸಿದ ನಮ್ಮ ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ ಕವಿ ಎಂದರೆ ಅತಿಶಯೋಕ್ತಿಯಾಗಲಾರದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಾದ್ಯಂತ ತಾಂಡವವಾಡುತ್ತಿದ್ದ ಜಾತಿ ಪದ್ದತಿಯ ವಿರುದ್ಧ ಆಮೂಲಾಗ್ರ ಬದಲಾವಣೆಯಾಗುವಂತೆ ತಮ್ಮ ಕವನಗಳ ಮೂಲಕ ಜನರನ್ನು ಬಡಿದೆಬ್ಬಿಸಿದ್ದಲ್ಲದೇ, ಸ್ವತಃ ಮೇಲ್ವಾತಿಯಲ್ಲಿ ಹುಟ್ಟಿದ್ದರೂ ಅದರ ಹಮ್ಮು ಬಿಮ್ಮು ಇಲ್ಲದ್ದೇ ತಮಿಳುನಾಡಿನಲ್ಲಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ… Read More ಶ್ರೀ ಸುಬ್ರಹ್ಮಣ್ಯ ಭಾರತಿ

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಕರ್ನಾಟಕದ ಏಕೀಕರಣದ ಸಮಯದಲ್ಲಿ  ಕಾಸರಗೋಡು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತ್ತು. ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ 1956ರಲ್ಲಿ ಭಾಷಾವಾರು ರೂಪದಲ್ಲಿ ರಾಜ್ಯಗಳ ವಿಂಗಡಣೆಯಾದಾಗ, ಕನ್ನಡಿಗರೇ ಬಹುಸಂಖ್ಯಾತರಾಗಿದ್ದರೂ ಕೆಲವು ಕಾಣದ ಕೈಗಳ ಕರಾಮತ್ತಿನಿಂದ ಕಾಸರಗೋಡು ಕರ್ನಾಟಕದ ಭಾಗವಾಗದೇ ಕೇರಳದ ಪಾಲಾದಾಗ, ಅಲ್ಲಿಯ ಬಹುತೇಕ ಮಂದಿ ಬಹಳವಾಗಿ ನೊಂದುಕೊಂಡರು ಮತ್ತು ಉಗ್ರಪ್ರತಿಭಟನೆಯನ್ನೂ ಮಾಡಿದರು. ಅಂದಿನಿಂದ ಇಂದಿನವರೆಗೂ ಅಲ್ಲಿಯ ಜನ ಭೌತಿಕವಾಗಿ ಕೇರಳಕ್ಕೆ ಸೇರಿದ್ದರೂ ಮಾನಸಿಕವಾಗಿ ಕರ್ನಾಟಕ್ಕಕ್ಕೆ ಹತ್ತಿರವಾಗಿದ್ದಾರೆ. ಅಂತಹ ಕಾಸರಗೋಡು ಪ್ರಾಂತದ ತಾಯಬಾರ ಮೊಗವತೋರ ಕನ್ನಡಿಗರ ಮಾತೆಯೆ…… Read More ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ