ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ.

ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ.

elec4

ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗಳಿಸಿದ ಕೂಡಲೇ ಮುಂದಿನ ಬಾರೀ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಹಿಡಿದೇ ತೀರುತ್ತೇವೆ ಎಂದು ಫಣ ತೊಟ್ಟ ಬಿಜೆಪಿಯ ಇಡೀ ತಂಡ ಪಶ್ಚಿಮ ಬಂಗಾಳದಲ್ಲಿ ಝಾಂಡ ಹೂಡಿದ್ದಲ್ಲದೇ ಒಂದು ರೀತಿಯ ಹಿಂದುತ್ವದ ವಾತಾವರಣವನ್ನು ಮೂಡಿಸುವುದರಲ್ಲಿ ಸ್ವಲ್ಪ ಸಫಲತೆಯನ್ನು ಕಂಡಿತ್ತು. ಇದಲ್ಲದೇ ಟಿಎಂಸಿ ಪಕ್ಷದ ಹತ್ತಾರು ಶಾಸಕರು ಮತ್ತು ಹಿರಿಯ ನಾಯಕರೂ ಸಹಾ ಬಿಜೆಪಿ ಗೆಲ್ಲಬಹುದು ಎಂದೇ ತಾಮುಂದು ನಾಮುಂದು ಎಂದು ಬಿಜೆಪಿಯನ್ನು ಸೇರಿಕೊಂಡಿದ್ದು, ಅಮಿತ್ ಶಾ. ನಡ್ಡಾ ಮತ್ತು ಮೋದಿಯವರ ಭಾಷಣಗಳಿಗೆ ಅಪಾರವಾದ ಜನಸ್ತೋಮ ಸೇರುತ್ತಿದ್ದದ್ದು ಬಿಜೆಪಿಗೆ ಅಧಿಕಾರಕ್ಕೆ ಮೂರೇ ಗೇಣು ಎನ್ನುವಂತೆ ಮಾಡಿತ್ತು.

ಬಿಜೆಪಿಯ ಅಬ್ಬರದ ಪ್ರಚಾರವಲ್ಲದೇ ತಮ್ಮದೇ ಪಕ್ಷದ ನಾಯಕರಗಳನ್ನು ಸೆಳೆದುಕೊಳ್ಳುವುದರಿಂದ ಆರಂಭದಲ್ಲಿ ಕಂಗಾಲಾದ ಮಮತ ನಂತರ ಪ್ರಾದೇಶಿಕ ಅಸ್ಮಿತೆಯನ್ನು ಸರಿಯಾಗಿ ಬಳಸಿಕೊಂಡಿದ್ದಲ್ಲದೇ, ಅಚಾನಕ್ಕಾಗಿ ಆಕೆಯ ಮೇಲಾದ ಧಾಳಿಯನ್ನು ಸಮರ್ಥವಾಗಿ ಇಡೀ ಚುನಾವಣೆಗೆ ದಾಳವಾಗಿ ಬಳಸಿಕೊಂಡಿದ್ದಲ್ಲದೇ ಇಡೀ ಚುನಾವಣೆಯನ್ನು ವೀಲ್ಹ್ ಚೇರ್ ಮೇಲೆಯೇ ಕುಳಿತುಕೊಂಡು ಜನರನ್ನು ಭಾವನಾತ್ಮಕವಾಗಿ ತನ್ನತ್ತ ಸೆಳೆಯಲು ಯಶಸ್ವಿಯಾದರು.

ತಮಿಳುನಾಡಿನಲ್ಲಿ ತಲೆ ತಲಾಂತರದಿಂದಲೂ ಪ್ರಾಭಲ್ಯವಿರುವುದೇ ಪ್ರಾದೇಶಿಕ ಪಕ್ಷಗಳ ಡಿಎಂಕೆ ಮತ್ತು ಎಐಡಿಎಂಕೆಗಳದ್ದು. ಹಾಗಾಗಿ ತಮಿಳುನಾಡಿನ ಜನರೂ ಸಹಾ ಒಮ್ಮೆ ಡಿಎಂಕೆಯ ಕರುಣಾನಿಧಿ ಮತ್ತೊಮ್ಮೆ ಎಐಡಿಎಂಕೆಯ ಜಯಲಲಿತಳನ್ನು ಆಡಳಿತಕ್ಕೆ ಒಂದು ರೀತಿ ಖೋ ಖೋ ಮಾದರಿಯಲ್ಲಿ ಆಡಳಿತಕ್ಕೆ ತರುವ ಸಂಪ್ರದಾಯವನ್ನೇ ರೂಢಿಸಿಕೊಂಡು ಬಂದಿರುವುದರಿಂದ ಈ ಬಾರಿ ಹೆಚ್ಚಿನ ಬದಲಾವಣೆ ಇಲ್ಲದೇ ನಿರೀಕ್ಷೆಯಂತೆಯೇ ಡಿಎಂಕೆ ಪಕ್ಷ ಆಡಳಿತಕ್ಕೆ ಬರುವುದು ನಿರೀಕ್ಷಿತವಾಗಿತ್ತು.

assam

CAA & NRC ಆರಂಭವಾದದ್ದೇ ಅಸ್ಸಾಂಮಿನಿಂದಲೇ. ಹಾಗಾಗಿ ಈ ಬಾರಿ ಅಲ್ಲಿನ ಚುನಾವಣೆಯಲ್ಲಿ CAA & NRCಯೇ ಪ್ರಮುಖಪಾತ್ರವಹಿಸಿತ್ತು. ಬಿಜೆಪಿ ಪುನಃ ಆಡಳಿತಕ್ಕೆ ಬಂದಲ್ಲಿ ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರೆ, ಕಾಂಗ್ರೇಸ್ಸ್ ಅದನ್ನು ಬಲವಾಗಿ ತಿರಸ್ಕರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಚುನಾವಣೆಯಲ್ಲಿ ಅಸ್ಸಾಂ ಜನತೆ ಬಿಜೆಪಿಗೆ ಎರಡನೇ ಬಾರಿಗೆ ಸ್ಪಷ್ಟ ಬಹುಮತವನ್ನು ಕೊಡುವ ಮೂಲಕ CAA & NRC ಪರ ಜನಾದೇಶವನ್ನು ನೀಡಿದ್ದಾರೆ.

ಚುನಾವಣಾ ಪೂರ್ವದಲ್ಲಿನ ಸಮೀಕ್ಷೆಯಂತೆಯೇ ಆಷ್ಟೆಲ್ಲಾ ಹಗರಣಗಳ ನಡುವೆಯೂ ಪ್ರಪ್ರಥಮ ಬಾರಿಗೆ ಕೇರಳದಲ್ಲಿ ಸತತವಾಗಿ ಎರಡನೇ ಬಾರಿಗೆ LDF ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಇದೇ UDF, ಲೋಕಸಭಾ ಚುನಾವಣೆಯಲ್ಲಿ 20ಕ್ಕೆ 19ರಲ್ಲಿ ಗೆದ್ದಿದ್ದಾಗ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಬಹುಮತ ಬರಬಹುದು ಎಂಬ ಭ್ರಮೆಯಲ್ಲಿಯೇ ತೇಲಾಡಿದರ ಪರಿಣಾಮ ಹೇಳ ಹೆಸರಿಲ್ಲದಂತಾಗಿರುವುದು ನಿಜಕ್ಕೂ ಶೋಚನೀಯವಾಗಿದೆ. ದೇಶದ ಪ್ರಧಾನ ಮಂತ್ರಿಯ ಅಭ್ಯರ್ಥಿ ಎಂದೇ ಹಲವಾರು ವರ್ಷಗಳಿಂದಲೂ ತನ್ನನ್ನೇ ತಾನು ಬಿಂಬಿಸಿಕೊಂಡು ಬಂದಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕೇರಳದಿಂದ ಸ್ಪರ್ಥಿಸಿದ್ದಕ್ಕಾಗಿ ಅಷ್ಟೊಂದು ಸಂಸದರನ್ನು ಗೆಲ್ಲಲು ಸಾಧ್ಯವಾಯಿತು ಎಂದು ರಾಹುಲನನ್ನು ಹೆಗಲಮೇಲೆ ಎತ್ತಿ ಮೆರೆಸಿದವರು ಇಂದು ಈ ಪರಿಯ ಸೋಲನ್ನು ಯಾರ ತಲೆ ಮೇಲೆ ಕಟ್ಟುತ್ತಾರೆ ಎಂದು ಕಾದು ನೋಡ ಬೇಕಿದೆ.

kerala

ಲೋಕಸಭಾ ಚುನಾವಣೆಯ ಸಮಯದಲ್ಲಿ LDF ಹೀನಾಯವಾಗಿ ಸೋಲಲು ಶಬರಿಮಲೈ ನಿರ್ಥಾರಗಳು ಕಾರಣ ಎಂದು ನಂಬಲಾಗಿದ್ದರೂ, ನಿಜವಾಗಿಯೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಬಂದರೆ ತಮಗೆ ಕುತ್ತು ಎಂದು ಭಾವಿಸಿದ ಕೆಲ ಪಟ್ಟ ಭಧ್ರಹಿತಾಸಕ್ತಿಗಳು ಕೇಂದ್ರದಲ್ಲಿ LDF ಪ್ರಭಾವ ವಿಲ್ಲದಿದ್ದ ಕಾರಣ ಅನಿವಾರ್ಯವಾಗಿ ರೊಟ್ಟಿ ಹಳಸಿತ್ತು. ನಾಯಿ ಹಸಿದಿತ್ತು ಎನ್ನುವಂತೆ ರಾಹುಲ್ ನೇತೃತ್ವದ UDF ಗೆಲ್ಲಿಸಿದ್ದದ್ದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಪ್ರಜಪ್ರಭುತ್ವವಾಗಿ ಚುನಾವಣೆ ನಡೆದರೂ, ಗವರ್ನರ್ ಆಳ್ವಿಯೇ ಪ್ರಧಾನವಾದ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ಪುದುಚರಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿರುವುದು ಕುತೂಹಲವನ್ನು ಕೆರಳಿಸಿದೆ.

elec3

ಇನ್ನು ರಾಜ್ಯದ ಎರಡು ಉಪಚುನಾವಣೆಯಲ್ಲಿ ಮಸ್ಕಿ ಅನಿರೀಕ್ಷಿತವಾಗಿ ಕಾಂಗ್ರೇಸ್ ಪಾಲಾದರೆ, ಬಸವಕಲ್ಯಾಣ ಬಿಜೆಪಿಗೆ ಸುಲಭದ ತ್ತುತಾಗಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರ RCB T20 ಪಂದ್ಯದಂತೆ ಕ್ಷಣಕ್ಷಣಕ್ಕೂ ಬದಲಾಗುತ್ತಾ ಅಂತಿಮವಾಗಿ ಕೇವಲ ಮೂರು ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಪ್ರಯಾಸದ ಗೆಲವನ್ನು ಪಡೆಯುವುದರಲ್ಲಿ ಸಫಲವಾಗಿದೆ. ಕಳೆದ ಬಾರಿ ಲಕ್ಷಾಂತರ ಮತಗಳ ಅಂತರದಲ್ಲಿ ಗೆದ್ದಿದ ಬಿಜೆಪಿ ಅಭ್ಯರ್ಥಿಗೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಶಿವಸೇನಾ ಅಭ್ಯರ್ಥಿ ಮಗ್ಗುಲ ಮುಳ್ಳಾಗಿದ್ದಂತೂ ಸುಳ್ಳಲ್ಲ.

puducery

ಆಂತಿಮವಾಗಿ ಹೇಳಬೇಕೆಂದರೆ ಅಸ್ಸಾಮ್ ಮತ್ತು ಪುದುಚೆರಿ ಬಿಜೆಪಿಯ ಪಾಲಾದರೆ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಮತ್ತೊಮ್ಮೆ LDF ಮತ್ತುಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಮೂರನೇ ಬಾರಿಗೆ ನಿರೀಕ್ಷೆಗೂ ಮೀರಿದ ಭಾರೀ ಬಹುಮತ ಪಡೆಯುವುದರೊಂದಿಗೆ ಆಡಳಿತಕ್ಕೆ ಬಂದಿದೆ.

ಮೊದಲ ಬಾರಿಗೆ EVM ಕುರಿತಾಗಿ ಇದುವರೆಗೂ ಯಾವುದೇ ಆಕ್ಷೇಪಣೆ ಬಾರದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಇಷ್ಟೆಲ್ಲಾ ಸೋಲು/ಗೆಲುವು ಸಾಧಿಸಿದ್ದರೂ ಈ ಚುನಾವಣೆಯ ಫಲಿತಾಂಶ ಎಲ್ಲಾ ಪಕ್ಷಕ್ಕೂ ಎಚ್ಚರಿಕೆಯ ಗಂಟೆಯನ್ನು ಬಾರಿಸಿರುವುದು ಸುಳ್ಳಲ್ಲ.

ಬಿಜೆಪಿ : ಈ ಚುನಾವಣೆಯಲ್ಲಿ ಅಸ್ಸಾಂ ಹೊರತಾಗಿ ಬೇರಾವ ರಾಜ್ಯದಲ್ಲಿಯೂ ಬಿಜೆಪಿ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಉಳಿದೆಲ್ಲಾ ಕಡೆ ಗೆಲ್ಲುವ ಪ್ರತಿಯೊಂದು ಸ್ಥಾನವೂ ಅವರಿಗೆ ಬೋನಸ್ ಎನ್ನುವಂತಿತ್ತು. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನ ಸಭೆಯಲ್ಲಿ ಕೇವಲ 3 ಶಾಸಕರಿದ್ದದ್ದು ಈಗ 80ರ ಆಸುಪಾಸಿಗೆ ಬಂದಿದ್ದೇವೆ ಎಂದು ಗೆದ್ದು ಬೀಗಿದರೂ, ಅಷ್ಟೆಲ್ಲಾ ಅಬ್ಬರದ ಪ್ರಚಾರದ ನಡುವೆಯೂ ಮಮತ ಬ್ಯಾನರ್ಜಿ ಗೆದ್ದದ್ದು ಕೇವಲ ತನ್ನ ಪ್ರಾದೇಶಿಕ ಅಸ್ಮಿತೆಯಿಂದಾಗಿ ಎನ್ನುವುದನ್ನು ಗಮನಿಸಬೇಕಾಗಿದೆ. ಚುನಾವಣೆಯಲ್ಲಿ ಗೆದ್ದರೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸೂಚಿಸಿದಿದ್ದ ಪರಿಣಾಮ ಮಮತಾ ಬ್ಯಾನರ್ಜಿ ಸತತವಾಗಿ ಹೊರಗಿನವರಿಗೆ ಅಧಿಕಾರ ಕೊಡಬೇಡಿ ಎಂದು ಕೇಳಿಕೊಂಡಿದ್ದು ಸಫಲವಾಗಿದೆ ಎಂದೇ ಭಾವಿಸಬಹುದಾಗಿದೆ.

ತಮಿಳುನಾಡಿನಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆ ಆರಂಭಿದೆ. ಅದರಲ್ಲೂ ಕೊಯಂಬತ್ತೂರು ದಕ್ಷಿಣ ಕ್ಷೇತ್ರದಲ್ಲಿ ಚಿತ್ರನಟ ಕಮಲಹಾಸನ್ ಅವರಿಗೆ ಸೋಲು ಉಣಿಸಿದ್ದು ಹೆಮ್ಮೆಯಾದರೆ, ಬಾರೀ ನಿರೀಕ್ಷೆ ಮೂಡಿಸಿದ್ದ ಮಾಜೀ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೋತಿರುವುದು ಬೇಸರ ತಂದಿದೆ

ಕೇರಳದಲ್ಲಿ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೂದಳತೆಯ ಅಂತರದಿಂದ ಸೋಲುಂಡಿದ್ದರೂ ಭಾರೀ ಪ್ರಮಾಣದಲ್ಲಿ ಮತಗಳನ್ನು ಹೆಚ್ಚಿಸಿಕೊಂಡಿರುವುದು ಉತ್ತಮವಾಗಿದೆ.

ಒಟ್ಟಿನಲ್ಲಿ ಈ ಚುನಾವಣೆಯಿಂದ ಸ್ಪಷ್ಟವಾಗಿ ಬಿಜೆಪಿಯವರು ಕಲಿಯ ಬೇಕಾದ್ದದ್ದು ಏನೆಂದರೆ, ಗ್ರಾಮ ಪಂಚಾಯಿತಿ, ಮಂಡಲ ಪಂಚಾಯಿತಿ, ನಗರ ಸಭೆ, ಪುರಸಭೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಾ ಚುನಾವಣೆಗಳಲ್ಲಿಯೂ ಮೋದಿಯವರ ಹೆಸರನ್ನೇ ಹೇಳಿಕೊಂಡು ಹೋಗಲಾಗದ ಕಾರಣ ಆದಷ್ಟು ಬೇಗನೇ ಎಲ್ಲಾ ರಾಜ್ಯಗಳಲ್ಲಿಯೂ ಸ್ಥಳೀಯ ನಾಯಕರನ್ನು ಗುರುತಿಸಿ, ಅವರನ್ನು ಬೆಳಸಿ ಮತ್ತು ಬೆಂಬಲಿಸಲೇ ಬೇಕಾದ ಅನಿವಾರ್ಯವಾಗಿದೆ.

rahul

ಕಾಂಗ್ರೇಸ್ : ಕೇವಲ ಅಸ್ಸಾಂನಲ್ಲಿ ಅಲ್ಪ ಸ್ವಲ್ಪ ಹೋರಾಟ ತೋರಿದರೆ ಉಳಿದೆಲ್ಲಾ ಕಡೆ ದುರ್ಬೀನು ಹಾಕಿಕೊಂಡು ಹುಡುಕುವಂತಾಗಿದೆ. ಎದುರು ಮನೆಯಲ್ಲಿ ಮಗು ಹುಟ್ಟಿದರೆ ತಮ್ಮ ಮನೆಯಲ್ಲಿ ತೊಟ್ಟಿಲು ಕಟ್ಟಿದರಂತೆ ಎನ್ನುವ ಪರಿಸ್ಥಿತಿ ಇಂದು ಕಾಂಗ್ರೇಸ್ಸಿನದ್ದಾಗಿದೆ. ಶತ್ರುವಿನ ಶತ್ರು ನನ್ನ ಮಿತ್ರ ಎನ್ನುವಂತೆ ದೇಶಾದ್ಯಂತ ಈ ಚುನಾವಣೆಯಲ್ಲಿ ಮೂಲೆ ಗುಂಪಾಗಿದ್ದರೂ ಬಿಜೆಪಿಯನ್ನು ಸೋಲಿಸಿದ ಪಶ್ಚಿಮ ಬಂಗಾಳದ ಜನರಿಗೂ ಮತ್ತು ಟಿಎಂಸಿ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಅಭಿನಂದಿಸಿದ್ದು ಆ ಪಕ್ಷದ ಅವನತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ದೇಶದ ಜನ ಕಾಂಗ್ರೇಸ್ಸಿಗರನ್ನು‌ ಮತ್ತವರ ನಾಯಕನನ್ನು ತಿರಸ್ಕರಿಸಿಯಾಗಿದೆ. ಹಾಗಾಗಿ ಇನ್ನೂ ದೇಶದ ರಾಜಕೀಯದಲ್ಲಿ ಉಳಿಯ ಬೇಕಾದಲ್ಲಿ, ಈ ನಕಲೀ ಗಾಂಧಿ ಕುಟುಂಬದ ಹೊರತಾದ ಸಮರ್ಥ ನಾಯಕತ್ವವನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂಬ ಷರಾ ಬರೆದಂತಿದೆ.

ತೃಣಮೂಲ ಕಾಂಗ್ರೇಸ್ : Operation success but patient is dead ಎನ್ನುವಂತೆ ಇಡೀ ಕೇಂದ್ರ ಸರ್ಕಾರವೇ ತನ್ನ ಎದುರಾಗಿ ನಿಂತರೂ ಚಲ ಬಿಡದ ತ್ರಿವಿಕ್ರಮನಂತೆ ಒಬ್ಬಂಟಿಯಾಗಿ 200ಕ್ಕೂ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಸಫಲವಾಗಿದ್ದರೂ, ಒಬ್ಬ ಮುಖ್ಯ ಮಂತ್ರಿಯಾಗಿ ಒಂದು ಕಾಲದ ಅತ್ಯಾಪ್ತ ಶಿಷ್ಯ ಬಿಜೆಪಿಯ ಅಭ್ಯರ್ಥಿ ಸುವೆಂದು ಅಧಿಕಾರಿ ಎದುರು ಸ್ವತಃ ಸೋತಿರುವುದರಿಂದ ವಯಕ್ತಿಕವಾಗಿ ಆಕೆಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದು ಸ್ಲಷ್ಟವಾಗುತ್ತದೆ.

ಈಗ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಮುಂದಿನ ಆರು ತಿಂಗಳೊಳಗೆ ವಿಧಾನಸಭೆಗೋ ಇಲ್ಲವೇ ವಿದಾನ ಪರಿಷತ್ತಿನ ಸದಸ್ಯೆಯಾಗಿ ಅಧಿಕಾರವನ್ನು ಉಳಿಸಿಕೊಂಡರೂ ಅದು ಹಿಂಬಾಗಿಲಿನಿಂದ ಜನಾದೇಶದ ವಿರುದ್ಧವಾಗಿದೆ. ಇನ್ನಾದರೂ ಅಲ್ಪ ಸಂಖ್ಯಾತರ ಅತೀಯಾದ ತುಷ್ಟೀಕರಣವನ್ನು ಸ್ವಲ್ಪ ಕಡಿಮೆ ಮಾಡಿ ಸಬ್ ಕಾ ಸಾತ್ ಸಬ್ಕಾ ವಿಕಾಸ್ ನತ್ತ ಗಮನ ಹರಿಸುವುದು ಉತ್ತಮವಾಗಿದೆ.

ಮಿಳು ನಾಡಿನಲ್ಲಿ ಅವರು ಬಿಟ್ಟು ಇವರು, ಇವರ ಬಿಟ್ಟು ಅವರು ಎಂಬ ರಾಜ ಕಾರಣದಿಂದ ತಮಿಳರು ಹೊರಬಾರದೇ ಇರುವುದು ಅಲ್ಲಿಯ ಜನರ ರಾಜಕೀಯ ಬೌಧ್ದಿಕ ದಿವಾಳಿತನ ಮತ್ತೊಮ್ಮೆ ಜಗಜ್ಜಾಹೀರಾತಾಗಿದೆ.

ಅಷ್ಟೆಲ್ಲಾ ಹಗರಣಗಳು ಬೆಳಕಿಗೆ ಬಂದು ತಮ್ಮ ವಯಕ್ತಿಯ ಕರಾಮತ್ತಿನಿಂದಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರೂ ಕೇರಳಿಗರು ಕಮ್ಮಿನಿಷ್ಟರನ್ನೇ ಆಡಳಿತಕ್ಕೆ ತಂದಿರುವುದಕ್ಕೆ ಮುಂದಿನ ದಿನಗಳಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುವುದು.

ದೇಶದಲ್ಲಿ ಜನರು ಬಿಜೆಪಿಗೆ ಹೆಚ್ಚಿನ ಅಧಿಕಾರ, ಡಿಎಂಕೆ, ತೃಣಮೂಲ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರಿಗೆ ಮತ್ತೊಂದು ಆವಕಾಶವನ್ನು ನೀಡಿದರೆ, ಇಲ್ಲಿ ಸ್ಪಷ್ಟವಾಗಿ ಸೋತು ಸುಣ್ಣವಾಗಿರುವುದು ತಮ್ಮದು ಅತ್ಯಂತ ಹಳೆಯ ಪಕ್ಷ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್. ಈ ಚುನಾವಣೆಯಲ್ಲಿ ಕಾಂಗ್ರೇಸ್ಸನ್ನು ಮತ್ತೊಮ್ಮೆ ಧೂಳಿಪಟ ಮಾಡುವ ಮೂಲಕ ಆ ಪಕ್ಷವನ್ನು ಇತಿಹಾಸದ ಪುಟವನ್ನು ಸೇರುವಂತೆ ಮಾಡಿರುವುದಂತೂ ಸ್ಪಷ್ಟವಾಗಿದೆ.

vaccin

ಇನ್ನು ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಈ ಜನಾದೇಶಕ್ಕೆ ಅನುಗುಣವಾಗಿ ಈ ಎಲ್ಲಾ ಪಕ್ಷಗಳು ತಮ್ಮ ಹಮ್ಮು ಬಿಮ್ಮು ರಾಜಕೀಯವೆಲ್ಲವನ್ನೂ ಬದಿಗಿಟ್ಟು ಈ ದೇಶಕ್ಕೆ ಬಂದಿರುವ ಮಹಾಮಾರಿ ಕೊರೋನಾದ ವಿರುದ್ಧ ಈಗ ಗೆಲ್ಲಲೇ ಬೇಕಾಗಿದೆ. ತಮ್ಮ ಎಲ್ಲಾ ರಾಜ್ಯಗಳಲ್ಲಿಯೂ ಕೊರೋನಾ ಲಸಿಕಾ ಅಭಿಯಾನವನ್ನು ಆದಷ್ಟೂ ಚುರುಕುಗೊಳಿಸಿ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಹೋರಾಡ ಬೇಕಾಗಿದೆ.

elec2

ಮೋದಿ ಸರಿ ಇಲ್ಲಾ ಬಿಜೆಪಿ ಸರಿ ಇಲ್ಲಾ ಎಂದು ಬೊಬ್ಬಿರಿಯುವವರಲ್ಲಿ ಒಂದು ಮನವಿಯೇನೆಂದರೆ. ಮುಂದಿನ 2024ರಲ್ಲಿ ಮೋದಿಯವರ ವಿರುದ್ಧ ಹೋರಾಡುವ ಸಲುವಾಗಿಯಾದರೂ ದಯವಿಟ್ಟು ತಪ್ಪದೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ. ಜೀವ ಇದ್ದರೆ ಮಾತ್ರ ಜೀವನ. ಜೀವನ ಸರಿಯಾಗಿದ್ದಲ್ಲಿ ಮಾತ್ರವೇ ರಾಜಕೀಯ.

ಏನಂತೀರೀ?

ನಿಮ್ಮವನೇ ಉಮಾಸುತ

ರಾಹುಲ್ ತೆವಾಟಿಯ

2014ರ ಐಪಿಲ್ ಹರಾಜು ಪ್ರಕ್ರಿಯೆಯಲ್ಲಿ ಹರಿಯಾಣದ ಫರೀದಾಬಾದಿನ 21 ವಯಸ್ಸಿನ ಅಷ್ಟೇನು ಖ್ಯಾತನಾಗಿರದಿದ್ದ ಆಲ್ರೌಂಡರ್ ರಾಹುಲ್ ತೆವಾಟಿಯಾ ಎಂಬ ಯುವಕನನ್ನು ಮೂಲ ಬೆಲೆಯಾದ 10 ಲಕ್ಷಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನು ಆಡಿಸಿ ಡಗ್ ಔಟಿನಲ್ಲಿ ನೀರನ್ನು ಹೊತ್ತು ತರಲು ಬಳಸಿಕೊಳ್ಳುತ್ತದೆ. 2017ರಲ್ಲಿ ರಾಜಸ್ಥಾನ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರೂ ಹೆಚ್ಚಿನ ಬದಲಾವಣೆ ಇಲ್ಲದೇ ಒಂದೇ ವರ್ಷಕ್ಕೆ ಅವರನ್ನು ಕೈಬಿಟ್ಟಿತ್ತು.

2018ರ ಹರಾಜಿನಲ್ಲಿ 24 ವರ್ಷದ ಲೆಗ್ ಸ್ಪಿನ್ನರ್‌ ರಾಹುಲ್ ತೆವಾಟಿಯಾ ಮೂಲ ಬೆಲೆ ಕೇವಲ 10 ಲಕ್ಷ ರೂ.ಗಳಿಗೆ ಆರಂಭವಾಗಿ ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ನಿಮಿಷಗಳಲ್ಲಿ ಅವರ ಬೆಲೆ 2.5 ಕೋಟಿ ರೂ.ಗೆ ಏರುತ್ತದೆ. ಅಷ್ಟು ಕೊಡಲು ಸಾಧ್ಯವಿಲ್ಲವೋ ಅಥವಾ ಅಷ್ಟೊಂದು ಹಣಕ್ಕೆ ಅವರು ಅರ್ಹರಲ್ಲವೋ ಎನುವಂತೆ ಕಿಂಗ್ಸ್ 11 ಪಂಜಾಬ್ ಅವರನ್ನು ಕೈಬಿಟ್ಟ ಕಾರಣ ಲೆಗ್ ಸ್ಪಿನ್ ಬೋಲಿಂಗ್ ಅಲ್ಲದೇ ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಬಲ್ಲರು ಎಂಬ ಕಾರಣದಿಂದ ದೆಹಲಿ ಡೇರ್‌ಡೆವಿಲ್ಸ್ ತಂಡ ಅವರನ್ನು 3 ಕೋಟಿಗಳಿಗೆ ಖರೀದಿಸುತ್ತದೆ.

ಅದೃಷ್ಟ ತನ್ನ ಪರವಾಗಿಲ್ಲದಿದ್ದರೇ ಏನು ತಾನೇ ಮಾಡಲು ಸಾಧ್ಯ ಎನ್ನುವಂತೆ, ಅಮಿತ್ ಮಿಶ್ರಾರಂತಹ ಹಿರಿಯ ಅನುಭವಿ ಲೆಗ್ ಸ್ಪಿನ್ನರ್ ಅದಾಗಲೇ ದೆಹಲಿಯ ತಂಡದಲ್ಲಿದ್ದ ಕಾರಣ ಮತ್ತೆ ರಾಹುಲ್ ತೆವಾಟಿಯಾ ಅವರಿಗೆ ತಂಡದ 11ರ ಬಳಗದಲ್ಲಿ ಸೂಕ್ತ ಸ್ಥಾನ ಸಿಗುವುದಿಲ್ಲ. ಸಿಕ್ಕ ಒಂದೆರಡು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾದ ಕಾರಣ ಮತ್ತೆ 2019ರ ಹರಾಜಿಯಲ್ಲಿ ಭಾಗವಹಿಸಿ, ತಮ್ಮ ಮೊದಲ ತಂಡವಾದ ರಾಜಸ್ಥಾನದ ಪಾಲಾಗಿ ಅದ್ಭುತವಾದ ಓಹೋ ಎನ್ನುವಂತಹ ಪ್ರದರ್ಶನವಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡಿದ ಕಾರಣ 2020ರಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿ ಮುಂದುವರೆಯುತ್ತಾರೆ.

ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯಲ್ಲಿ ರಾಜಸ್ಥಾನ್ ತಂಡದ ಪ್ರಮುಖ ಆಟಗಾರನಾಗುವುದರಲ್ಲಿ ಯಶಸ್ವಿಯಾಗಿ, ಚನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ 3 ವಿಕೆಟ್ ಪಡೆಯುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಎಲ್ಲರೂ ವಿಕೆಟ್ ಪಡೆದಾಗ ಆರ್ಭಟಿಸಿದರೆ ಈತ ಮಾತ್ರ ತನ್ನೆರಡೂ ಕಿವಿಯನ್ನು ಹಿಡಿದುಕೊಂಡು ಸಂಭ್ರಮಿಸುವ ಪರಿ ಆಶ್ಚರ್ಯಕರವಾಗಿದೆ.
ಇನ್ನು ಎರಡನೇ ಪಂದ್ಯ, ತಮಗೆ 2.5 ಕೋಟಿ ಕೊಟ್ಟು ತೆಗೆದುಕೊಳ್ಳುವಷ್ಟು ಅರ್ಹರಲ್ಲ ಎಂಬ ಕಾರಣದಿಂದಾಗಿ ಕೈಬಿಟ್ಟ ಕಿಂಗ್ಸ್ 11 ಪಂಜಾಬ್ ವಿರುದ್ಧದ ಪಂದ್ಯವಾಗಿರುತ್ತದೆ. ಆ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಅಬ್ಬರಕ್ಕೆ ಸಿಲುಕಿ ಮೊದಲ ಓವರಿನಲ್ಲಿಯೇ 19 ರನ್ಗಳನ್ನು ಚಚ್ಚಸಿಕೊಂಡ ನಂತರ ಬೋಲಿಂಗ್ ಮಾಡುವ ಅವಕಾಶವೇ ಸಿಗದೇ ಪಂಜಾಬ್ ತಂಡ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದಾಗ ಬಹುತೇಕರು ಪಂದ್ಯ ರಾಜಸ್ಥಾನ್ ತಂಡದ ಕೈಬಿಟ್ಟಿತು ಎಂದೇ ಭಾವಿಸಿರುತ್ತಾರೆ.

ನಾಯಕ ಸ್ಮಿತ್ ಮತ್ತು ಸಂಜು ಸಾಂಸ್ಯನ್ ಭರ್ಜರಿಯ ಬ್ಯಾಟಿಂಗ್ ಮೂಲಕ ಉತ್ತಮ ರನ್ ಗಳಿಸಿ, ಕಡೆಯ ಮೂರು ಓವರುಗಳಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲ್ಲಲು ಕೊನೆಯ ಮೂರು ಓವರ್ಗಳಲ್ಲಿ ರಾಜಸ್ಥಾನಕ್ಕೆ 51 ರನ್ಗಳನ್ನು ಬೇಕಿರುತ್ತದೆ. ಅಲ್ಲಿಯವರೆಗೂ 19 ಎಸತಗಳನ್ನು ಎದುರಿಸಿ ಕೇವಲ 8 ರನ್ಗಳನ್ನು ಗಳಿಸಿದ್ದ ತೆವಾಟಿಯಾನನ್ನು ಎಲ್ಲರೂ ಹಳಿದುಕೊಳ್ಳುತ್ತಿರುವಾಗಲೇ, ಇದ್ದಕ್ಕಿದ್ದಂತೆಯೇ 18ನೇ ಓವರ್ನಲ್ಲಿ ಶೆಲ್ಡನ್ ಕೋರ್ಟೇಲ್ ಬೋಲಿಂಗಿನಲ್ಲಿ ಮೊದಲ ನಾಲ್ಕು ಎಸತಗಳನ್ನು ಭರ್ಜರಿಯಾಗಿ ಸಿಕ್ಸರ್ ಬಾರಿಸಿದ್ದಲ್ಲದೇ ಮತ್ತೇ ಆರನೇ ಎಸೆತವನ್ನೂ ಮತ್ತೊಮ್ಮೆ ಸಿಕ್ಸರ್ ಹೀಗೆ 6,6,6,6,6,0,6 ಎತ್ತಿದ್ದಲ್ಲದೇ, ನಂತರ ಕೇವಲ 11 ಬಾಲ್ಗಳಲ್ಲಿ ಅರ್ಧಶತಕ ಪೂರೈಸುತ್ತಾರೆ. ಒಟ್ಟು 7 ಭರ್ಜರಿ ಸಿಕ್ಸರ್ ಗಳೊಂದಿಗೆ 31 ಎಸತೆಗಳಲ್ಲಿ 53ರನ್ ಸಿಡಿಸುವ ಮೂಲಕ ರಾಜಸ್ಥಾನ ತಂಡ ದಾಖಲೆಯ ಮೊತ್ತವನ್ನು ಇನ್ನೂ 3 ಎಸೆತಗಳು ಇರುವಂತೆಯೇ ಗಳಿಸುವ ಮೂಲಕ ಗೆಲುವಿನ ದಡ ತಲುಪಿಸಿದ್ದಲ್ಲದೇ ಕೈಜಾರುತ್ತಿದ್ದ ಪಂದ್ಯದ ಗತಿಯನ್ನೇ ಬದಲಿಸಿದ ರಾಹುಲ್ ತೆವಾಟಿಯಾ ಹೀರೋ ಎನಿಸಿಕೊಳ್ಳುತ್ತಾರೆ.

ಈ ಮೂಲಕ ನಾನು ತೆವಾಟಿಯಾ ನನ್ನನ್ನೇ ತಂಡದಿಂದ ಕೈ ಬಿಟ್ಟೆಯಾ? ಎನ್ನುವಂತೆ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದ ಮತ್ತು ತಮ್ಮ ಸಾಮರ್ಥ್ಯವನ್ನು ಹೀನಾಯವಾಗಿ ಅಂದಾಜು ಮಾಡಿದ್ದ ಪಂಜಾಬ್ ತಂಡದವರ ಎದುರೇ ಭರ್ಜರಿಯಾಗಿ ಪ್ರದರ್ಶನ ನೀಡುವ ಮೂಲಕ ದ್ವೇಷವನ್ನು ತೀರಿಸಿಕೊಂಡಿದ್ದಾರೆ ಎನ್ನುವುದಕ್ಕಿಂತಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು. ಮೊದಲು ಎಚ್ಚರಿಕೆಯ ಆಟವಾಡಿ, ಕೊನೆಯ ಮೂರು ಓವರ್ಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುವ ಮೂಲಕ ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ ಈ ಯುವ ಆಟಗಾರ ರಾಹುಲ್ ತೆವಾಟಿಯಾನ ಆಟ ಎಲ್ಲರನ್ನೂ ಮೋಡಿ ಮಾಡಿದ್ದಲ್ಲದೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಅವಶ್ಯಕವಾಗಿರುವ ಒಬ್ಬ ಸಮರ್ಥ ಆಲ್ರೌಂಡರ್ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ತಮಗಿದೆ ಎಂಬುದನ್ನು ಸಾಭೀತು ಪಡಿಸಿದ್ದಾರೆ.

ಕಾಕತಾಳೀಯವೆಂದರೆ, ಹೆಸರಿಗೆ ಪಂಜಾಜ್ ತಂಡವಾದರೂ ಕರ್ನಾಟಕದವರೇ ಹೆಚ್ಚಾಗಿರುವ ತಂಡ ವಿರುದ್ಧ ಹೀರೋ ಎನಿಸಿಕೊಂಡ ರಾಹುಲ್ ತೆವಾಟಿಯಾ ಹರ್ಯಾಣದ ಪರವಾಗಿ 2013 ರಲ್ಲಿ ಕರ್ನಾಟಕದ ವಿರುದ್ಧವೇ ರಣಜಿ ಟ್ರೋಫಿ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದ್ದಾರೆ. ಸಾಂಪ್ರದಾಯಿಕವಾದ ಶೈಲಿಯ ಲೆಗ್ ಸ್ಪಿನ್ನರ್, ಚೆಂಡನ್ನು ಹಾರಿಸುವುದಕ್ಕಿಂತಲೂ ಗಾಳಿಯಲ್ಲಿ ತೇಲೀಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದು ದಾಂಡಿಗರಿಗೆ ದುಃಸ್ವಪ್ನವಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ.

ಅದಕ್ಕೇ ಹೇಳೋದು ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಯಾರಿಗೆ ಗೊತ್ತು? ಹಾಗಾಗಿ ಯಾರ ಸಾಮರ್ಥ್ಯ ಎಲ್ಲಿ ಮತ್ತು ಹೇಗೆ ಪ್ರಕಟವಾಗುತ್ತದೆಯೋ ಯಾರು ಬಲ್ಲರು? ರಾಹುಲ್ ತೆವಾಟಿಯಾ ಅವರ ಈ ಪ್ರದರ್ಶನ ಅದಕ್ಕೊಂದು ಉತ್ತಮ ಉದಾರಣೆ. ಅದಕ್ಕಾಗಿಯೇ ಯಾರನ್ನು ಕಡಿಮೆ ಅಂದಾಜು ಮಾಡಬಾರದು ಅಲ್ವೇ?

ಏನಂತೀರೀ?

ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?

ನನಗೆ ಬುದ್ದಿ ತಿಳಿದು ಬರುವ ಹೊತ್ತಿಗೆ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು ಮನೆಗೆ ಬರುತ್ತಿದ್ದ ನಂದೀ ಬ್ರಾಂಡ್ ಪ್ರಜಾವಾಣಿ ಅಂದಿಗೂ ಇಂದಿಗೂ ಕಾಂಗ್ರೇಸ್ ಮುಖವಾಣಿಯಾಗಿಯೇ ಇದ್ದ ಕಾರಣ ಅಲ್ಲಿ ಪ್ರಕಟವಾಗುತ್ತಿದ್ದದ್ದನ್ನೇ ಜೋಡಿಸಿ ಕೊಂಡು ಓದಿ ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ, ದೇಶದಲ್ಲಿ ಚುನಾವಣೆ ನಡೆದು ಎಲ್ಲಾ ವಿರೋಧ ಪಕ್ಷಗಳೂ ಒಮ್ಮತವಾಗಿ ಜನತಾಪಕ್ಷದ ಅಡಿಯಲ್ಲಿ ಅಭೂತಪೂರ್ವವಾಗಿ ಜಯಿಸಿ ಬಂದು ಒಂದು ಕಾಲದಲ್ಲಿ ಇಂದಿರಾ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜೀ ದೇಸಾಯಿ ದೇಶದ ಪ್ರಪ್ರಥಮ ಕಾಂಗ್ರೇಸ್ಸೇತರ ಪ್ರಧಾನ ಮಂತ್ರಿಗಳಾದರು. ಅವರ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ಮಧು ದಂಡವತೆ, ಚರಣ್ ಸಿಂಗ್ ಮುಂತಾದ ಘಟಾನುಘಟಿಗಳು ಮಂತ್ರಿಗಳಾದಾಗಲಿಂದಲೂ ಕೇಳಿ ಬರುತ್ತಿರುವ ಒಂದೇ ಒಂದು ಅರೋಪ ನೆಹರು ವಂಶ ಮತ್ತು ಕಾಂಗ್ರೇಸ್ ನಾಯಕರುಗಳು ಈ ದೇಶವನ್ನು ಲೂಟಿ ಮಾಡಿ ಕೋಟ್ಯಾಂತರ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಶೇಖರಿಸಿಟ್ಟಿದೆ.

ಅಂದಿನಿಂದ ಇಂದಿಗೆ ಸುಮಾರು 45 ವರ್ಷಗಳು ಕಳೆದಿವೆ. ಗಂಗಾ ಯಮುನಾ ಸಿಂಧು ಕಾವೇರಿ ಮುಂತಾದ ದೇಶದ ವಿವಿಧ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆಯಾದರೂ, ಇದುವರೆವಿಗೂ ಈ ನಕಲೀ ಗಾಂಧಿಗಳ ಮತ್ತು ಕಾಂಗ್ರೇಸ್ ನಾಯಕರುಗಳ ಮೇಲಿನ ಆರೋಪ ಒಂದೂ ಪೂರ್ಣಗೊಂಡಿಲ್ಲ ಎನ್ನುವುದು ವಿಪರ್ಯಾಸವಲ್ಲವೇ?

ಇಂದಿರಾಗಾಂಧಿಯವರ ಮರಣದೊಂದಿಗೆ ಅವರ ಮೇಲಿದ್ದ ಎಲ್ಲಾ ಹಗರಣಗಳಿಗೂ ಹಳ್ಳ ಹಿಡಿದಿಹೋದ ಮತ್ತು ಸರಿಯಾಗಿ ನೆನಪಿಲ್ಲದ ಕಾರಣ, ರಾಜೀವ್ ಗಾಂಧಿ ಆಡಳಿತದಿಂದ ಇತ್ತೀಚಿನವರೆಗೂ ನಡೆದ ಹಗರಣಗಳ ಕುರಿತಂತೆ ಕಣ್ಣು ಹಾಯಿಸೋಣ.

cong3

ಕೇವಲ ಇಂದಿರಾಗಾಂಧಿಯವರ ಪುತ್ರ ಎಂಬ ಕಾರಣಕ್ಕಾಗಿಯೇ, ಇಂದಿರಾಗಾಂಧಿಯವರ ಹತ್ಯೆಯಾದ ಸೂತಕ ಕಳೆಯುವ ಮುನ್ನವೇ ಪ್ರಧಾನಿಯಾದ ರಾಜೀವ್ ಆರಂಭದಲ್ಲಿ ಮಿಸ್ಟರ್ ಕ್ಲೀನ್ ಎಂಬ ಹೆಸರು ಗಳಿಸಲು ಪ್ರಯತ್ನಿಸಿದರಾದರೂ ಕಾಂಗ್ರೇಸ್ ಎಂಬ ನಾಯಿಯ ಬಾಲ ಸದಾ ಡೊಂಕು ಎಂಬಂತೆ ಅವರ ಆಳ್ವಿಕೆಯಲ್ಲಿ ಸೇನೆಗೆ ಖರೀದಿಸಿದ ಬೋಫೋರ್ಸ್ ಫಿರಂಗಿಗಳಲ್ಲಿ ಅಂದಿನ ಕಾಲಕ್ಕೇ ರಾಜೀವ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರಿಗೆ ಸ್ವೀಡಿಷ್ ಫಿರಂಗಿ ತಯಾರಕ ಬೋಫೋರ್ಸ್ 64 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಿರುವ ಪರಿಣಾಮವಾಗಿಯೇ ಭಾರತೀಯ ಸೇನೆಯಲ್ಲಿ ಬೋಫೋರ್ಸ್ ಕಂಪನಿಯ 155 ಎಂಎಂ ಹೊವಿಟ್ಜರ್ ಬಂದೂಕುಗಳನ್ನು ಖರೀಧಿಸಲಾಗಿತ್ತು. ಈ ಪ್ರಕರಣದಲ್ಲಿ ಇಟಲಿಯ ಉದ್ಯಮಿ ಮತ್ತು ಗಾಂಧಿ ಕುಟುಂಬಕ್ಕೆ ಹತ್ತಿರವಾದ ಒಟ್ಟಾವಿಯೊ ಕ್ವಾಟ್ರೊಚಿ ಮೂಲಕ ಅಪಾರವಾದ ಲಂಚ ಸಂದಾಯವಾಗಿತ್ತು ಎಂಬುದು ಮನೆಮಾತಾಗಿತ್ತು. ರಾಜೀವ್ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ.ಸಿಂಗ್ ಇದೇ ಪ್ರಕರಣವನ್ನೇ ತೋರಿಸುತ್ತಾ ಪ್ರಧಾನಮಂತ್ರಿಗಳಾದರೇ ವಿನಃ ಸುಮಾರು 35 ವರ್ಷಗಳು ಕಳೆದರೂ, ಅದರ ಆಪಾದಿತರಲ್ಲಿ ಹೆಚ್ಚಿನವರು ಈ ಲೋಕದಲ್ಲಿ ಉಳಿದಿಲ್ಲವಾದರೂ, ಕಾಂಗ್ರೆಸ್ಸಿಗೆ ಬೆಂಬಿಡದ ಭೂತವಾಗಿ ಕಾಡುತ್ತಿದೆಯಾದರೂ ಇಂದಿಗೂ ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎನ್ನುವುದು ಸತ್ಯ.

cong9

ನ್ಯಾಷನಲ್ ಹೆರಾಲ್ಡ್ : ಬಿಜೆಪಿ ರಾಜ್ಯಸಭಾ ಸಂಸದರಾದ ಶ್ರೀ ಸುಬ್ರಮಣ್ಯಂ ಸ್ವಾಮಿ ಅವರ ವಯಕ್ತಿಕ ಆಸಕ್ತಿಯಿಂದಾಗಿ ಈ ಪ್ರಕರಣ ಇನ್ನೂ ಜೀವಂತವಾಗಿದ್ದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ನಾಲ್ಕೈದು ಹಿರಿಯ ಕಾಂಗ್ರೇಸ್ ನಾಯಕರು 5 ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳನ್ನು ಅತ್ಯಂತ ಸುಲಭವಾಗಿ ಕೈ ವಶ ಮಾಡಿಕೊಂಡಿದ್ದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಲಿದ್ದು, ಸದ್ಯಕ್ಕೆ ಸೋನಿಯಾ ಮತ್ತು ರಾಹುಲ್ ಇಂದಿಗೂ ಬೇಲ್ ಮೇಲೆ ಹೊರಗಡೆ ತಿರುಗಾಡುತ್ತಿದ್ದಾರೆ.

cong10

ವಾದ್ರಾ-ಡಿಎಲ್ಎಫ್ ಹಗರಣ : ಸೋನಿಯಾಗಾಂಧಿಯವರ ಪುತ್ರಿ ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ಅವರ ರಿಯಲ್ ಎಸ್ಟೇಟ್ ವ್ಯವಹಾರದ ಹಗರಣಗಳು ನೂರಾರು. ಹರ್ಯಾಣದ ಕಾಂಗ್ರೇಸ್ಸಿನ ಭೂಪಿಂದರ್ ಹೂಡಾ ಸರಕಾರದಿಂದ ಅತ್ಯಂತ ಕಡಿಮೆ ಬೆಲೆಗಳಿಗೆ ಜಾಗವನ್ನು ಖರೀದಿಸಿ ನಂತರ ಹೂಡಾ ಸರ್ಕಾರದ ಭೂ ಬಳಕೆ ಬದಲಾವಣೆ (ಸಿಎಲ್‌ಯು) ಹಾಗೂ ಇತರ ಅನುಮತಿ ಪಡೆದ ನಂತರ 2008ರಲ್ಲಿ ಡಿಎಲ್‌ಎಫ್‌ ಕಂಪನಿಗೆ ಅದೇ ಭೂಮಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾದಿದ ಆರೋಪವಿದೆ.

ಇದಲ್ಲದೇ ರಾಬರ್ಟ್ ವಾದ್ರಾ ಅವರು ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್‌ನಿಂದ 65 ಕೋಟಿ ಬಡ್ಡಿರಹಿತ ಸಾಲವನ್ನು ತೆಗೆದುಕೊಂಡಿದ್ದಾರೆ ಈ ರೀತಿ ಡಿಎಲ್ಎಫ್ ಕಂಪನಿ ಬಡ್ಡಿ ರಹಿತ ಹಣವನ್ನು ಕೊಟ್ಟಿರುವ ಹಿಂದೆಯೂ ರಾಜಕೀಯ ಲಾಭಗಳನ್ನು ಪಡೆಯುವ ಉದ್ದೇಶ ಇದೆ ಎನ್ನುವ ಆರೋಪದಡಿಯಲ್ಲಿ ದಾವೆ ಹೂಡಲಾಯಿತಾದರೂ ಹೂಡಾ ಸರ್ಕಾರ ಈ ಎಲ್ಲಾ ಭೂಹಗರಣಗಳಲ್ಲಿಯೂ ಕ್ಲೀನ್ ಚಿಟ್ ನೀಡಿತಾದರೂ ಸದ್ಯದ ಸರ್ಕಾರ ಈ ತನಿಖೆಯನ್ನು ಪುನರ್ ಆರಂಭಿಸಿದ್ದರೂ ರಾಬರ್ಟ್ ವಾದ್ರ ಧಿಮ್ಮಲೆ ರಂಗಾ ಎಂದು ಮೀಸೆ ತಿರುತಿಸುತ್ತಲೇ ಓಡಾಡುತ್ತಿದ್ದಾನೆ.

chidara

ಚಿದಂಬರಂ ಕುಟುಂಬ : ತಮಿಳುನಾಡು ಮೂಲದ ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತೀ ಚಿದಂಬರಂ ಅವರ ಹೆಸರುಗಳು ಏರ್ಸೆಲ್-ಮಾಕ್ಸಿಸ್, ಐ ಎನ್ ಎಕ್ಸ್ ಮೀಡಿಯಾ, 14 ದೇಶಗಳಲ್ಲಿ ಅಕ್ರಮ ಸಂಪತ್ತು ಹೀಗೆ ಹಲವು ಪ್ರಕರಣಗಳಲ್ಲಿ ತಳುಕು ಹಾಕಿಕೊಂಡು ಒಂದಷ್ಟು ತಿಂಗಳುಗಳ ಕಾಲ ತಿಹಾರ್ ಜೈಲಿನಲ್ಲಿ ಮುದ್ದೇ ಮುರಿದರೂ, ಈ ಪ್ರಕ್ರರಣದ ತನಿಖೆ ಇನ್ನೂ ಆಮೆಗತಿಯಲ್ಲಿದ್ದು, ರಾಜಕೀಯ ಅಗತ್ಯಗಳಿರುವಾಗ ಮಾತ್ರ ಸದ್ದು ಮಾಡುತ್ತಾ ಉಳಿದಂತೆಲ್ಲಾ ತಣ್ಣಗಾಗಿ ರಾಜ್ಯಸಭಾ ಸದದ್ಯರಾಗಿ ಚಿದಂಬರಂ ಮತ್ತು ಲೋಕಸಭಾ ಸದಸ್ಯರಾಗಿ ಕಾರ್ತೀ ಆರಾಮಾಗಿ ಓಡಾಡಿಕೊಂಡಿದ್ದಾರೆ.

ahmedpatel

ಅಹ್ಮದ್ ಪಟೇಲ್ : ಸೋನಿಯಾ ಗಾಂಧಿಯ ಪರಮಾಪ್ತರಾದ ಅಹ್ಮದ್ ಪಟೇಲ್ ಮತ್ತು ಅವರ ಅಳಿಯನ ಹೆಸರು ಸ್ಟರ್ಲಿಂಗ್ ಬಯೋಟೆಕ್ ನ 5000 ಕೋಟಿ ಸಾಲ ವಂಚನೆ-ಲಂಚ ಪ್ರಕರಣ ಇನ್ನೂ ತನಿಖಾ ಹಂತದಲ್ಲೇ ಇದೆ. ಗುಜರಾತ್ ಚುನಾವಣೆ ಮತ್ತು ಲೋಕಸಭಾ ಸಮಯದಲ್ಲಿ ಸ್ವಲ್ಪ ಸದ್ದು ಮಾಡಿ ಈಗ ತಣ್ಣಗಿದ್ದದ್ದು ಕಳೆದ ವಾರ ಇಡಿ ಧಾಳಿಮಾಡಿ ಕೆಲ ಪ್ರಮುಖ ದಾಖಲೆಗಳ ಜೊತೆಗೆ ಮಾಜೀ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಲೆಟರ್ ಹೆಡ್ ಸಹಾ ದೊರೆತಿರುವುದು ಪ್ರಕರಣಕ್ಕೆ ಒಂದು ಚೂರು ಟ್ವಿಸ್ಟ್ ಕಂಡಿರುವುದು ಹೌದಾದರೂ ಅನೇಕ ವರ್ಷಗಳಿಂದ ತಣ್ಣಗೆಯೇ ಇದೆ.

Ndtv

NDTV : ಎಡಪಂಥೀಯ ಧೋರಣೆ ಹೊಂದಿರುವ ಮತ್ತು ಸದಾಕಾಲವೂ ಕಾಂಗ್ರೇಸ್ಸನ್ನು ಪೋಷಿಸಿಕೊಂಡು ಬಂದಿರುವ ದೇಶದ ಪ್ರಖ್ಯಾತ ಮಾಧ್ಯಮ ಸಂಸ್ಥೆಯಾದ NDTV ಮತ್ತದರ ಮುಖ್ಯಸ್ಥ ಪ್ರಣಯ್ ರಾಯ್ ಅವರ ಮೇಲೆ 5000 ಕೋಟಿ ರೂಪಾಯಿಗಳ ಅಕ್ರಮ ಹಣ ಹಸ್ತಾಂತರದ ಆಪಾದನೆ ಇದ್ದು ಇದರಲ್ಲಿಯೂ ಸಹಾ ಪಿ.ಚಿದಂಬರಂ ಸೇರಿದಂತೆ ಹಲವು ಖ್ಯಾತ ನಾಮರ ಹೆಸರುಗಳು ತಳುಕು ಹಾಕಿಕೊಂಡಿವೆ. ಆರಂಭದಲ್ಲಿ ಆರ್ಭಟಿಸಿದ ಈ ಪ್ರಕರಣವೂ ಕೂಡ ಸದ್ಯಕ್ಕೆ ಆಮೆಗತಿಯಲ್ಲಿದ್ದು, ರಾಜಕೀಯ ಅಗತ್ಯಗಳಿರುವಾಗಲೆಲ್ಲಾ ಸದ್ದು ಮಾಡುತ್ತಾ ಮತ್ತೆ ಕೋಲ್ಡ್ ಸ್ಟೋರೇಜ್ ಸೇರುತ್ತಿರುವುದು ಸುಳ್ಳಲ್ಲ.

cong2

ಆಗಸ್ಟಾ ವೆಸ್ಟ್ ಲ್ಯಾಂಡ್ : 2013 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಿಐಪಿಗಳ ಪ್ರಯಾಣಕ್ಕಾಗಿ 12 AW-101 ಹೆಲಿಕಾಫ್ಟರ್ ಖರೀದಿಯಲ್ಲಿ ಬೊಕ್ಕಸಕ್ಕೆ 2666 ಕೋಟಿ ರೂಪಾಯಿ ನಷ್ಟ ಆಗಿದೆ ಎಂಬ ಆರೋಪವಿದ್ದು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಇಟಾಲಿಯನ್ ಚಾಪರ್ ಕಂಪನಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದಲೇ 36 ಬಿಲಿಯನ್ ರೂಪಾಯಿ ಮೌಲ್ಯದ ಒಪ್ಪಂದದಡಿಯಲ್ಲಿ ಅನೇಕ ರಕ್ಷಣಾ ನಿಯಗಳನ್ನು ಗಾಳಿಗೆ ತೂರಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಯಿತು.ಈ ವ್ಯವಹಾರದ ಹಿಂದೆ ಸಾಕಷ್ಟು ಲಂಚದ ವಹಿವಾಟು ನಡೆದಿದ್ದು ಇದರ ಹಿಂದೆ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಇಟಲಿಯ ನ್ಯಾಯಾಲಯದಲ್ಲಿ 2008 ರ ಮಾರ್ಚ್ 15 ರಂದು ಬರೆದ ಟಿಪ್ಪಣಿ ಸೂಚಿಸಿದೆ. ಇದರ ಹಿನ್ನೆಲೆಯಲ್ಲಿ ನಿವೃತ್ತ ಏರ್ ಚೀಫ್ ಮಾರ್ಷಲ್ ಎಸ್ ಪಿ ತ್ಯಾಗಿ ಅವರ ಮೇಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆಯಾದರೂ, ಮುಂದಿನ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಯಾರಿಗೂ ತಿಳಿದಿಲ್ಲ.

kalmadi

ಕಾಮನ್ ವೆಲ್ತ್ ಗೇಮ್ಸ್ : 2010ರ ಕಾಮನ್ ವೆಲ್ತ್ ಗೇಮ್ಸ್ ಗುತ್ತಿಗೆ ಹಗರಣದಲ್ಲಿ ಕಾಂಗ್ರೇಸ್ ನಾಯಕ ಸುರೇಶ್ ಕಲ್ಮಾಡಿ ವಿರುದ್ಧ ಸಾವಿರಾರು ರೂಪಾಯಿಗಳ ಅವ್ಯವಹಾರದ ಆರೋಪ ಬಂದು ಸಾಮಾನ್ಯ ಜನರಿಗೂ ಅವ್ಯವಹಾರ ಅಂಗೈಯಲ್ಲಿಯೇ ಹುಣ್ಣು ಕಾಣುತ್ತಿದ್ದರೂ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಪಾರ್ಲಿಮೆಂಟರಿ ಸಮಿತಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು ನಂತರ ಎಲ್ಲರ ಒತ್ತಾಯದ ಮೇರೆಗೆ ಈ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಯಾಗಿದ್ದರೂ ವಿಚಾರಣೆ ಯಾವ ಹಂತದಲ್ಲಿದೇ ಎಂದು ಆ ಭಗವಂತನೇ ಬಲ್ಲ.

ಆದರ್ಶ : ಮುಂಬೈಯಲ್ಲಿ ನಡೆದ ಈ ಹಗರಣದಲ್ಲಿ ಅಂದಿನ ಮಹಾರಾಷ್ಟ್ರದ ಮುಖ್ಯ ಮಂತ್ರಿ ಅಶೋಕ್ ಚೌಹಾನ್ ಈ ಬಹುಮಹಡಿ ಕಟ್ಟುವ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟು ಅದರ ಪ್ರತಿಫಲವಾಗಿ ಕೆಲ ಫ್ಲಾಟ್ಗಳನ್ನು ಉಡುಗೊರೆ ಪಡೆದ ಆಪಾದನೆ ಸದ್ದು ಮಾದಿದ್ದ ಕಾರಣ ಮುಖ್ಯಮಂತ್ರಿ ಪದವಿಗೆ 2010ರಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. 2015 ರಲ್ಲಿ ಮೋದಿ ಸರಕಾರ ಬಂದ ರಾಜ್ಯಪಾಲರು ಪ್ರಕರಣವನ್ನು ಸಿಬಿಐ ಒಪ್ಪಿಸಿದ್ದರೂ ಅದನ್ನು ಮಹಾರಾಷ್ಟ್ರ ಹೈಕೋರ್ಟ್ ರದ್ದುಮಾಡಿದೆ ಈ ಪ್ರಕರಣ ಇನ್ನೂ ಹಗ್ಗ ಜಗ್ಗಾಟದಲ್ಲಿಯೇ ಮುಂದುವರೆದಿದೆ.

raja

2G: ದೇಶದಲ್ಲಿ ಅಲ್ಲಿಯವರೆಗೆ ಕಂಡೂ ಕೇಳರಿಯದಿದ್ದ ಕೋಟ್ಯಾಂತರ ರೂಪಾಯಿಗಳ ಮೊಬೈಲ್ ತರಂಗಾಂತರಗಳ ಹಗರಣದ ಅಡಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಡಿಎಂಕೆ ಪಕ್ಷದ ಎ. ರಾಜಾ ಮತ್ತು ಕನಿಮೋಳಿ ಆವರ ಮೇಲೆ ಆರೋಪ ಬಂದು ಅವರಿಬ್ಬರು ಹಲವಾರು ವರ್ಷಗಳ ಕಾಲ ಸೆರೆಮನೆಯವಾಸವನ್ನೂ ಅನುಭಬಿಸಿಯೂ ಆಗಿತ್ತು. ಅದೇನೂ ಮಾಯೆ ನಡೆಯಿತೋ? ಯಾವ ಕಾಣದ ಕೈಗಳ ಪ್ರಭಾವದಿಂದಾಗಿಯೋ ಏನೋ? ಅಂತಹ ಪ್ರಕರಣವೇ ನಡೆದಿಲ್ಲ ಎಂಬ ತೀರ್ಮಾನ ಹೊರಬಿದ್ದ ನಂತರ ದೇಶವಾಸಿಗಳಿಗೆ ನ್ಯಾಯಾಂಗ ತನಿಖೆಯ ಮೇಲೆಯೇ ನಂಬಿಕೆ ಹೋದದ್ದು ಸುಳ್ಳಲ್ಲ. ಸದ್ಯಕ್ಕೆ ಸಿಬಿಐ, ಈ ಪ್ರಕರಣದಲ್ಲಿ ಮರು ಅಪೀಲು ಹೋಗಲು ಕಾನೂನು ಇಲಾಖೆಯ ಅನುಮತಿ ಪಡೆದುಕೊಂಡಿದ್ದು, ತಮಿಳುನಾಡಿನ ರಾಜಕೀಯ ನಾಯಕರ ಮೇಲೆ ತನ್ನದೊಂದು ಹಿಡಿತ ಉಳಿಸಿಕೊಳ್ಳಲು ಮಾತ್ರವೇ ಕೇಂದ್ರ ಸರಕಾರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದ ಹಾಗೆ ಕಾಣುತ್ತಿದೆ.

ಬಹು ಕೋಟಿ ಕಲ್ಲಿದ್ದಲು ಹಗರಣ: ಜಾರ್ಖಂಡ್ ರಾಜ್ಯದ ರಾಜಹರಾ ಉತ್ತರ ಕಲ್ಲಿದ್ದಲು ಗಣಿಯನ್ನು ಕೋಲ್ಕತಾ ಮೂಲದ ಖಾಸಗಿ ಕಂಪನಿಯೊಂದಕ್ಕೆ ಭ್ರಷ್ಟ ಹಾದಿಯಲ್ಲಿ ನೀಡಿದ್ದಕ್ಕಾಗಿ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಢಾ, ಅಂದಿನ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳ ಶಾಮೀಲು ತನಿಖೆಯಲ್ಲಿ ಬೆಳಕೆಗೆ ಬಂದು ಅವರೆಲ್ಲರಿಗೂ ಸೆರೆಮನೆಯ ಪಾಲಾಗುವ ಮೂಲಕ ಅಂದಿನ ಕಲ್ಲಿದ್ದಲು ಖಾತೆಯನ್ನು ಹೊಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೂಗಿನ ಅಡಿಯಲ್ಲೇ ನಡೆದ ಈ ಬಹುಕೋಟಿ ಹಗರಣದಲ್ಲಿ ಅವರನ್ನು ನಿರ್ದೋಷಿ ಎಂದು ನ್ಯಾಯಾಲಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಹೀಗೆ ಹೇಳುತ್ತಾ ಹೋದರೇ ಇಂತಹ ನೂರಾರು ಹಗರಣಗಳು ನಕಲೀ ಗಾಂಧಿ ಕುಟುಂಬ ಮತ್ತು ಕಾಂಗ್ರೇಸ್ಸಿಗರ ಮೇಲೆ ಇದ್ದರೂ ರಾಜೀವ್ ಗಾಂಧಿ ಅಧಿಕಾರದ ನಂತರ ಬಂದ ಯಾವುದೇ ಕಾಂಗ್ರೇಸ್ಸೆತರ ಸರ್ಕಾರಗಳು ಇದರ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸಿ ಒಂದು ತಾರ್ಕಿಕ ಅಂತ್ಯವನ್ನು ನೀಡುವುದರಲ್ಲಿ ವಿಫಲವಾಗಿದೆ ಎಂದೇ ಹೇಳಬಹುದು.

ದೇಶದಲ್ಲಿ ಕೂರೋನಾ ಮಹಾಮಾರಿ ಮತ್ತು ನೆರೆರಾಷ್ಟ್ರಗಳಾದ ಪಾಪೀಸ್ಥಾನ, ಚೀನಾ ಮತ್ತು ನೇಪಾಳಗಳು ಗಡಿಯಲ್ಲಿ ಕೆಲ ತಿಕ್ಕಾಟಗಳು ನಡೆದ ಪರಿಣಾಮ ನಮ್ಮ ಸೈನಿಕರ ಬಲಿದಾನದ ಕುರಿತಂತೆ ದೇಶಾದ್ಯಂತ ಆರೋಪ ಪ್ರತ್ಯಾರೋಪ ನಡೆಯುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ ವಾದ್ರ ಗಾಂಧಿ, ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಮತ್ತವರ ಪಟಾಲಂ ಒಂದಿಷ್ಟು ಟ್ವೀಟ್ ಗಳ ಜೊತೆ ವೀಡೀಯೋಗಳನ್ನು ಹೊರತಂದಿದ್ದೇ ತಡಾ ಕೇಂದ್ರ ಸರ್ಕಾರ ಪ್ರಿಯಾಂಕಾಳಿಗೆ ಅಂದಿನ ಕಾಂಗ್ರೇಸ್ ಸರ್ಕಾರ ನೀದಿದ್ದ ಸರ್ಕಾರೀ ಬಂಗಲೆಯನ್ನು ಖಾಲಿ ಮಾಡಲು ಸೂಚಿಸಿದೆಯಲ್ಲದೇ, ಈ ನಕಲೀ ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿರುವುದು ಒಂದು ರೀತಿಯ ದ್ವೇಷದ ರಾಜಕೀಯ ಎಂಬುದಾಗಿಯೇ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಗಳ ವಿರುದ್ಧ ಆದಾಯ ತೆರಿಗೆ ವಂಚನೆ ಹಾಗೂ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯಂತಹ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್-ಸಚಿವಾಲಯ ಸಮಿತಿಯನ್ನು ರಚಿಸಿದೆ. ಗೃಹ ಸಚಿವಾಲಯದ ವಕ್ತಾರರ ಪ್ರಕಾರ ಈ ನಕಲೀ ಗಾಂಧಿ ಕುಟುಂಬಗಳು ನಡೆದಿಕೊಂಡು ಬಂದಿರುವ ಟ್ರಸ್ಟ್‌ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ),ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ)ಕಾಯ್ದೆಗಳಂತಹ ಕಾನೂನುಗಳ ಉಲ್ಲಂಘನೆಗಳು ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಕೇಂದ್ರ ಸರಕಾರದ ಈ ಪ್ರಯತ್ನ ಶ್ಲಾಘನೀಯವಾದರೂ, ಈ ಎಲ್ಲಾ ಪ್ರಕರಣಗಳ ತನಿಖೆಗೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಅವುಗಳಿಗೆಲ್ಲಾ ಒಂದು ತಾರ್ಕಿಕ ಅಂತ್ಯವನ್ನು ಕಾಣಿಸಿ ತಪ್ಪುಮಾಡಿದವರಿಗೆ ಶಿಕ್ಷೆ ಕೊಡಿಸಿದಲ್ಲಿ ಪ್ರಜೆಗಳಿಗೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಅದರ ಹೊರತಾಗಿ ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ತಕ್ಕಂತೆ ಆದಾಯ ತೆರಿಗೆ ಇಲಾಖೆ, ಸಿಬಿಐ, ಎನ್ಫೋರ್ಸ್ ಮೆಂಟ್ ಡೈರೆಕ್ಟೋರೇಟ್ ಎಂಬ ಮೂರು ಶಕ್ತಿಶಾಲಿ ಅಸ್ತ್ರಗಳನ್ನು ಬಳೆಸುತ್ತಾ ಸುಮ್ಮನೆ ಆರಂಭ ಶೂರತ್ವ ತೋರಿಸಿ ವಿರೋಧಿಗಳನ್ನು ಸುಮ್ಮನಾಗಿಸುವ Adjustment politics ಎಂದೇ ಜನ ನಂಬುವಂತಾಗುತ್ತದೆ

dks

ಇದಕ್ಕೆ ಡಿ.ಕೆ. ಶಿವಕುಮಾರ್ ಪ್ರಕರಣವೇ ಸಾಕ್ಷಿ. ಮೂವತು ವರ್ಷಗಳ ಹಿಂದೆ ಕನಕಪುರದಿಂದ ಬರೀಗೈಯಲ್ಲಿ ಬಂದು ಇಂದು ಸಾವಿರಾರು ಕೋಟಿಗಳ ಸರದಾರನಾಗಿರುವುದು ಕಣ್ಣಿಗೆ ರಾಚುತ್ತಿದ್ದರೂ, ಕೆಲ ದಿನಗಳ ಕಾಲ ಸೆರೆಮನೆಗೆ ತಳ್ಳಿ ಕಡೆಗೆ ಅನಾರೋಗ್ಯದ ಮೇಲೆ ಬೇಲ್ ಪಡೆದು ಇಂದು ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಪದವಿಯನ್ನೇರಿದರೂ ಅವರ ಮೇಲಿನ ತನಿಖೆ ಅಂತ್ಯ ಕಂಡಿಲ್ಲ. ಡಿಕೆಶಿ ತಪ್ಪು ಮಾಡಿರಬಹುದು ಇಲ್ಲವೇ ಮಾದಿಲ್ಲದಿರಬಹುದು ಆದರೆ ಅದಕ್ಕೊಂದು ತಾರ್ಕಿಕ ಅಂತ್ಯವನ್ನು ಹಾಡಬೇಕ್ಲಲ್ಲವೇ?

ನಿಜಕ್ಕೂ ಹೇಳಬೇಕೆಂದರೆ ಈ ಇಳೀ ವಯಸ್ಸಿನಲ್ಲಿಯೂ ಡಾ. ಸುಬ್ರಮಣ್ಯಂ ಸ್ವಾಮಿಯವರು ಮಾತ್ರಾ ಏಕಾಂಗಿಯಾಗಿ ನಿಸ್ವಾರ್ಥವಾಗಿ ಸರಕಾರ ಅಥವಾ ತನಿಖಾ ಸಂಸ್ಥೆಗಳಿಗಿಂತಲೂ ಹೆಚ್ಚಾಗಿ ಮತ್ತು ತೀವ್ರಗತಿಯಲ್ಲಿ ಕೆಲಸಮಾಡುತ್ತಿರುವುದು ಮಾತ್ರ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ನಾನು ಚಿಕ್ಕವನಿದ್ದಾಗಲೂ ಕಾಂಗ್ರೇಸ್ ಮತ್ತು ನಕಲೀ ಗಾಂಧಿಗಳ ಹಗರಣಗಳನ್ನೇ ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಎಲ್ಲಾ ಕಾಂಗ್ರೇಸ್ಸೇತರ ಸರ್ಕಾರಗಳೂ, ಕಾಂಗ್ರೆಸ್ಸಿನ ಹೆಸರಲ್ಲಿರುವ ಎಲ್ಲಾ ಹಗರಣಗಳಿಗೂ ಅಂತ್ಯ ತೋರಿಸುವ ಬದಲು ತಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಹೊರತೆಗೆದು ಬೆದರಿಸಲು ಬಳಸುವ ಬೆದರು ಬೊಂಬೆಗಳಾಗಿ ಬಳಸಿಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದು ಒಂದು ರೀತಿಯಲ್ಲಿ ತೋಳ ಬಂತು ತೋಳ ಎನ್ನುವ ಕಥೆಯಾಗದಿರಲಿ. ತನಿಖೆಗಳು ಚುರುಕಾಗಿ ನಿಜವಾದ ತಪ್ಪಿತಸ್ಥರಿಗೆ ಅತೀ ಶೀಘ್ರದಲ್ಲಿಯೇ ಶಿಕ್ಷೆಯಾಗಲಿ‌.

ಏನಂತೀರೀ?

ರಾಹುಲ್ ಗಾಂಧಿಯ ಸಂವಾದಕ್ಕಿಂತ ಟ್ವೀಟ್ ಗಳು ಏಕೆ ತೀಕ್ಷ್ಣ?

ಸಾಮಾನ್ಯವಾಗಿ ಗಮನಿಸಿದರೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯ ಸಂದರ್ಶನವಾಗಲೀ ಅಥವಾ ಚುನಾವಣಾ ಭಾಷಣಗಳಿಗಿಂತ ಟ್ವಿಟರ್ನಲ್ಲಿ ಮಾಡುವ ಅವರ ಟ್ವೀಟ್ ಗಳು ಹೆಚ್ಚು ತೀಕ್ಷ್ಣವಾಗಿರುವುದನ್ನು ಗಮನಿಸಿರ ಬಹುದು. ಇದಕ್ಕೆ ಹಿಂದಿನ ರಹಸ್ಯ ಕಂಡು ಹಿಡಿಯಲು ಹೆಚ್ಚಿನ ಪರಿಶ್ರಮ ಪಡಬೇಕೇನಿಲ್ಲ. ನನ್ನ ಅಭಿಪ್ರಾಯದಲ್ಲಿ ರಾಹುಲ್ ಗಾಂಧಿ ಕಳಪೆ ನೆನಪಿನ ಶಕ್ತಿಹೊಂದಿರುವ ಸಾಧಾರಣ ವ್ಯಕ್ತಿ. ಅವರ ವಂದಿಮಾಗಧರು ಹೇಳುವಂತೆ ಆತ ಸ್ವಂತ ಬುದ್ಧಿಯನ್ನು ಹೊಂದಿಲ್ಲ. ಮತ್ತು ಭಾರತೀಯ ರಾಜಕೀಯ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕತೆ, ಧಾರ್ಮಿಕ ಆಚರಣೆಗಳು, ಆಚಾರ ವಿಚಾರದ ಬಗ್ಗೆ ಪರಿಪಕ್ವವಾದ ಉತ್ತಮ ಜ್ಞಾನವಿಲ್ಲ. ಹಾಗಾಗಿ ಅವನ ಭಾಷಣದಲ್ಲಿ ಪದೇ ಪದೇ ಒಂದೇ ವಿಷಯವನ್ನೋ ಅಥವಾ ಒಂದೇ ಶಬ್ಧವನ್ನೇ ಹಿಡಿದುಕೊಂಡು ಅದನ್ನೇ ತಿರುಗು ಮುರುಗು ಹೇಳುತ್ತಾ ಸ್ವತಃ ಗೊಂದಲಕ್ಕೆ ಒಳಗಾಗುವುದಲ್ಲದೇ ಇತರರನ್ನೂ ಗೊಂದಲದ ಗೂಡಾಗಿಸುತ್ತಾನೆ. ಅವನ ಭಾಷಣದಲ್ಲಿ ರಫೇಲ್, ಅಕ್ರಮ ಹಣಗಳಿಸುವಿಕೆ, ಪಾಕಿಸ್ತಾನದ ಮೇಲೆ ಭಯೋತ್ಪಾದನೆ ಅಥವಾ ಆರ್ಥಿಕ ದೀವಾಳಿತನ ಮತ್ತು ಇತ್ತೀಚೆಗೆ ಕೊರೋನ ಮುಂತಾದ ವಿಷಯಗಳ ಹೊರತಾಗಿ ಹೆಚ್ಚಿನ ವಿಷಯಗಳ ಕುರಿತಂತೆ ಅತನಿಗೆ ಅರಿವಿಲ್ಲ ಅವನಿಗೆ ಎಂತಹ ಅಧ್ಭುತ ಭಾಷಣವನ್ನೇ ಬರೆದುಕೊಟ್ಟರೂ ಅದನ್ನು ಸರಿಯಾಗಿ ಓದಿ ಜನರಿಗೆ ತಲುಪಿಸುವುದರಲ್ಲಿ ಸಾಕ್ಷಷ್ಟು ಎಡವಿಯಾಗಿದೆ. ವಿಶ್ವೇಶ್ವರಯ್ಯ ಎಂಬ ಪದ, ಬಸವಣ್ಣನವರ ಇವನಾರವ ಇವನಾರವ ಎಂಬ ಸರಳ ವಚನವನ್ನು ಓದಿ ಹೇಳಲೇ ತಡಬಡಾಯಿಸಿ ನಗೆಪಾಟಾಲಾಗಿದ್ದು ಎಲ್ಲರ ನೆನಪಿನಲ್ಲಿ ಹಚ್ಚಹಸಿರಾಗಿದೆ.

rahul_eyeಇದೇ ಕಾರಣಕ್ಕಾಗಿಯೇ ಲೋಕಸಭೆಯಲ್ಲಿ ಆತನನ್ನು ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿಲ್ಲ ಎಂಬುದು ಗಮನಾರ್ಹವಾದ ಅಂಶ. ಕಳೆದ ಲೋಕಸಭೆಯಲ್ಲಿ ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದರೆ ಈ ಬಾರಿ ಅಧೀರ್ ರಂಜನ್ ಚೌಧರಿ ಅವರನ್ನು ಲೋಕಸಭೆಯಲ್ಲಿ ನಾಯಕರನ್ನಾಗಿ ಆಯ್ಕೆಮಾಡಲಾಗಿದೆ. ಲೋಕಸಭೆಯಲ್ಲಿ ಎಂತಹ ಚರ್ಚೆಯ ಸಮಯದಲ್ಲೂ ಅಟ ಮುಂದಿನ ಸಾಲಿನಲ್ಲಿ ಕುಳಿತದ್ದನ್ನು ಎಂದೂ ನೋಡಿಯೇ ಇಲ್ಲ. ಎಲ್ಲೋ ಎರಡನೆಯ ಸಾಲಿನ ಮೂಲೆಯೊಂದರಲ್ಲಿ  ಅಸಹ್ಯಕರವಾಗಿ  ಕಣ್ಣು ಹೊಡೆಯುತ್ತಾ  (Mr. Been ನೆನಪಿಸುವಂತೆ) ಕುಳಿತುಕೊಂಡಿರುವುದೇ ಹೆಚ್ಚು.

nirmalaರಫೇಲ್ ಚರ್ಚೆಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ನಿರ್ಭಿಡೆಯಾಗಿ ನಿರ್ಮಲಾ ಸೀತಾರಾಮನ್ ಅವರು ಒಂದು ಗಂಟೆಗೂ ಅಧಿಕವಾಗಿ ಸಕಲ ಅಂಕಿ ಅಂಶಗಳ ಜೊತೆಗೆ ಮಾತನಾಡುತ್ತಿದ್ದರೆ ಈ ಮನುಷ್ಯ ಅದು ತನ್ನ ಪ್ರಶ್ನೆನೆಗೆ ನೀಡುತ್ತಿರುವ ಉತ್ತರ ಎಂದು ಗಮನಿಸಿಸದೇ ತನಗೆ ಸಂಬಂಧವೇ ಇಲ್ಲದಂತೆ ಒಂದೂ ಮರು ಪ್ರಶ್ನೆಯನ್ನೂ ಕೇಳದೆ ಸುಮ್ಮನಿದ್ದದ್ದನು ನೋಡಿದರೆ ಅತನಿಗೆ ಮುಂದೆ ಏನು ಮಾಡಬೇಕು ಎಂಬುದನ್ನು ಅವನ ಸ್ಕ್ರಿಪ್ಟಿನಲ್ಲಿ ಬರೆದುಕೊಟ್ಟಿರಲಿಲ್ಲ ಎಂಬುದು ಸ್ಪಷವಾಗಿ ಅರಿವಾಗುತ್ತದೆ ಮತ್ತು ಆತನಿಗೆ ರಫೇಲ್ ಒಪ್ಪಂದದ ಕುರಿತಾಗಿ ತಲೆ ಅಥವಾ ಬಾಲವೂ ಗೊತ್ತಿಲ್ಲ ಎಂಬುದು ಮತ್ತೊಂದು ಅಂಶ. ರಫೇಲ್ ಕುರಿತಂತೆ ಆತ ಮಾಡಿದ ಪ್ರತಿಯೊಂದು ಭಾಷಣದಲ್ಲಿಯೋ ಆ ಕ್ಷಣದಲ್ಲಿ ಮನಸ್ಸಿಗೆ ಬಂದಂತಹ ಒಂದೊಂದು ಅಂಕಿ ಅಂಶವನ್ನು ಹೇಳಿದನೇ ವಿನಃ ಎಲ್ಲೂ ಸರಿಯಾದ ಅಂಕಿ ಅಂಶ ಹೇಳಲೇ ಇಲ್ಲ ಎಂಬು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಅದೊಮ್ಮೆ ನೇಪಾಳಕ್ಕೆ ಭೇಟಿ ನೀಡಿದಾಗ ಅಲ್ಲಿ ಸಂದರ್ಶಕರ ಪುಸ್ತಕದಲ್ಲಿ ತನ್ನ ಸ್ವಂತ ಪ್ರತಿಕ್ರಿಯೆಯನ್ನು ಬರೆಯಲೂ ಸಾಧ್ಯವಾಗದೇ ಯಾರೋ ಬರೆದು ಕೊಟ್ಟದ್ದನ್ನು ಮೊಬೈಲಿನಿಂದ ನೋಡಿ ನೋಡಿ ಬರೆಯುತ್ತಿದ್ದ ವೀಡೀಯೋ ಅಕಾಲದಲ್ಲೇ ಸಾಕಷ್ಟು ವೈರಲ್ ಆಗಿ ರಾಹುಲ್ ಗಾಂಧಿ ಮತ್ತು ಆ ಕಾಲದ ಮಿತ್ರ ಜೋತೀರಾಧ್ಯಾ ಸಿಂಧ್ಯಾರನ್ನು ಮುಗುಜರಕ್ಕೀಡು ಮಾಡಿತ್ತು.

rahul_modiಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಕಳೆದ ಲೋಕಸಭೆಯಲ್ಲಿ ಏನೇನೋ ಬಡಬಡಾಯಿಸಿ ಕೊನೆಗೆ ಮೋದಿಯವರು ತನ್ನನ್ನು ಎಷ್ಟೇ ದ್ವೇಷಿಸಿದರೂ ನಾನು ವಯಕ್ತಿಕವಾಗಿ ಅವರನ್ನು ಪ್ರೀತಿಸುತ್ತೇನೆ ಎಂಬುದನ್ನು ತೋರಿಸಲು ಇದ್ದಕ್ಕಿದ್ದಂತೆಯೇ ಮೋದಿಯವರನ್ನು ಎಲ್ಲರ ಸಮ್ಮುಖದಲ್ಲಿ ಅಪ್ಪಿಕೊಂಡು ನಗೆಪಾಟಾಲು ಆಗಿದ್ದು ಇದೇ ವ್ಯಕ್ತಿಯೇ.

ಇನ್ನು ಪ್ರತಿಯೊಂದು ಸಂದರ್ಶನಗಳಲ್ಲಿಯೂ ಒಂದೇ ಪದವನ್ನು ಹಿಡಿದು ಅದನ್ನೇ ಜಗ್ಗಿ ಜಗ್ಗೀ ಹೇಳುವ ಚಾಳಿ ಬಲು ಮೋಜಾಗಿರುತ್ತದೆ. ಅರ್ನಾಬ್ ಗೋಸ್ವಾಮಿಯ ಸಂದರ್ಶನವೊಂದರಲ್ಲಿ ಯಾವುದೇ ಪ್ರಶ್ಣೆಯನ್ನು ಕೇಳಿದರೂ ಮಹಿಳಾ ಸಬಲೀಕರಣ (women empowerment) ಎಂದು ಬಡಬಡಾಯಿಸಿದರೆ, ಒಂದು ವಾರದ ಕೆಲಗೆ ನಡೆಸಿದ online ಪತ್ರಿಕಾ ಗೋಷ್ಟಿಯಲ್ಲಿ strategy ಪದದ ಹೊರತಾಗಿ ಇನ್ನೇನೂ ಹೇಳಿದ್ದು ಅರ್ಥವೇ ಆಗಲಿಲ್ಲ.

ಆದರೇ ಟ್ವೀಟರ್ ಹ್ಯಾಂಡಲ್ ಮಾಡುವ ವಿಷಯದಲ್ಲಿ ಇದೇ ರೀತಿಯಾಗಿ ತೆಗಳಲು ಸಾಧ್ಯವಿಲ್ಲ. ನಮ್ಮ ಹಳೆಯ ಕಂಪನಿಯಲ್ಲಿದ್ದ ಮ್ಯಾನೇಜರ್ ಒಬ್ಬರು ಕಛೇರಿಯಲ್ಲಿ ಮೀಟಿಂಗಿನಲ್ಲಿ ಮಾತನಾಡುವಾಗ ಅಥವಾ ಕಛೇರಿಯಲ್ಲಿದ್ದಾಗ ಕಳುಹಿಸುತ್ತಿದ್ದ ಈ ಮೇಲ್ ಮತ್ತು ಮನೆಗೆ ಹೋದ ಮೇಲೆ ಕಳುಹಿಸುತ್ತಿದ್ದ ಈ ಮೇಲ್ ಗಳಲ್ಲಿ ಅಜಗಜಾಂತರ ವೆತ್ಯಾಸ ವಿರುತ್ತಿತ್ತು. ಕಭೇರಿಯಲ್ಲಿದ್ದಾಗ ಅವರ ಸಂವಹನೆ ಅತ್ಯಂತ ಪೇಲವವಾಗಿದ್ದರೆ, ತಡರಾತ್ರಿಗಳಲ್ಲಿ ಕಳುಹಿಸುತ್ತಿದ್ದ ಈ ಮೇಲ್ ಗಳು ಉತ್ತಮ ಅಂಶಗಳಿಂದ ಕೂಡಿರುತ್ತಿದ್ದವು. ಕೆಲವು ದಿನಗಳ ನಂತರ ತಿಳಿದು ಬಂದ ವಿಷಯವೇನೆಂದರೆ, ರಾತ್ರಿ ಕಳುಹಿಸುತ್ತಿದ್ದ ಬಹುತೇಕ ಈ ಮೇಲ್ ಗಳನ್ನು ಅವರ ಧರ್ಮಪತ್ನಿಯವರು ಇವರ ಪರವಾಗಿ ಬರೆಯುತ್ತಿದ್ದರು. ಇದೇ ಸಂಗತಿ ರಾಹುಲ್ ಅವರ ಟ್ವಿಟರ್ ಖಾತೆಯ ವಿಷದಲ್ಲೂ ನಿಜವಾಗಿದೆ. ಸ್ವಂತ ಬುದ್ಧಿಯಿಂದ ಒಂದು ಸಂತಾಪ ಸೂಚಕ ವಾಕ್ಯಗಳನ್ನು ಬರೆಯಲು ಬಾರದ ರಾಹುಲ್ ಟ್ವಿಟರ್ ಖಾತೆಯನ್ನು ಹೇಗೆ ಸಂಬಾಳಿಸಬಲ್ಲ?

ಆತನ ಟ್ವಿಟರ್ ಖಾತೆಯನ್ನು ಸಂಬಾಳಿಸಲೆಂದೇ ಕೆಲವು ಅದ್ಭುತ ಸಹಾಯಕರನ್ನು ನೇಮಕಮಾಡಿಕೊಂಡಿದ್ದಾನೆ. ಕೆಲವು ವರ್ಷಗಳ ಹಿಂದೆ ಕನ್ನಡದ ಸಿನಿಮಾ ನಟಿ ರಮ್ಯಾಳ ನೇತೃತ್ವದ ತಂಡ ಅದನ್ನು ನೋಡಿಕೊಳ್ಳುತ್ತಿತ್ತು. ಆಕೆ ಆರಂಭದಲ್ಲಿ ಅತ್ಯಂತ ತೀಕ್ಷ್ಣವಾಗಿ ಒಂದರ ಮೇಲೊಂದು ಟ್ವೀಟ್ ಮಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದಳಾದರೂ ತನ್ನ ಆಕ್ರಮಣಕಾರೀ ಧೋರಣೆಯಿಂದ ಅನಗತ್ಯ ವಿಚಾರಗಳನ್ನು ಮೈಮೇಲೆ ಎಳೆದುಕೊಂಡು ತಾನೂ ವಿವಾದಕ್ಕೊಳಗಾಗಿದ್ದಲ್ಲದೇ ರಾಹುಲ್ ಮರ್ಯಾದೆಯನ್ನೂ ಹಾಳು ಮಾಡಿದ ಪರಿಣಾಮ ಬಂದ ದಾರಿಗೆ ಸುಂಕವಿಲ್ಲದಂತೆ ಆಕೆಯನ್ನು ಹೊರಗೆ ಕಳುಹಿಸಲಾಯಿತು. ಈಗಂತೂ ಆಕೆಯ ಇರುವಿಕೆಯೇ ಯಾರಿಗೂ ಅರಿವಿಲ್ಲ.

ಎರಡು ದಿನಗಳ ಮಂಚೆ ಆರೋಗ್ಯ ಸೇತು ಆ್ಯಪ್ ಬಗ್ಗೆ ಭದ್ರತಾ ಕಳವಳ ವ್ಯಕ್ತಪಡಿಸುವ ಟ್ವೀಟ್ ಮಾಡಿದ ರಾಹುಲ್, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಖಾಸಗಿ ಆಪರೇಟರ್‌ಗೆ ಹೊರಗುತ್ತಿಗೆ ನೀಡುವ ಮೂಲಕ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ. ಇದರಿಂದ ಗಂಭೀರವಾಗಿ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ ಕಾಳಜಿಯನ್ನು ಹೆಚ್ಚಿಸಿದೆ ಎಂದಿದ್ದಲ್ಲದೇ, ತಂತ್ರಜ್ಞಾನವು ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ, ಆದರೆ ನಾಗರಿಕರನ್ನು ಅವರ ಒಪ್ಪಿಗೆಯಿಲ್ಲದೆ ಪತ್ತೆಹಚ್ಚಲು ಭಯವನ್ನು ಬಳಸಬಾರದು ಎಂದು ಹೇಳಿದರು

ನಿಜ ಹೇಳಬೇಕೆಂದರೆ ಕೋವಿಡ್ -19 ಸೋಂಕಿನ ಅಪಾಯವಿದೆಯೇ ಎಂದು ಗುರುತಿಸಲು ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ಆರೋಗ್ಯಸೇತು ಆಪ್ ಬಹಳಷ್ಟು ಸಹಾಯ ಮಾಡುತ್ತದೆ. ಕರೋನವೈರಸ್ ಮತ್ತು ಅದರ ರೋಗಲಕ್ಷಣಗಳನ್ನು ತಪ್ಪಿಸುವ ಮಾರ್ಗಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಇದು ಜನರಿಗೆ ಒದಗಿಸುತ್ತದೆ. ಈ ಆಪ್ ಜನರು ಸ್ವಪ್ರೇರಿತವಾಗಿ ಅಳವಡಿಸಿಕೊಂಡಿದ್ದಾರೆ ಹೊರತು ಯಾವುದೇ ಬಳವಂತದ ಪ್ರಕ್ತಿಯೆಯಿಂದಲ್ಲಾ ಎಂದು ಕೇಂದ್ರ ಸರ್ಕಾರದ ಹಿರಿಯ ಮಂತ್ರಿಯೊಬ್ಬರು ಹೇಳುತ್ತಿದ್ದಂತೆಯೇ ಅದರ ಬಗ್ಗೆ ರಾಹುಲ್ ಗಪ್ ಚುಪ್.

scriptಸ್ವಂತ ಬುಧ್ದಿ ಇಲ್ಲದೇ ಕಂಡವರು ಬರೆದುಕೊಟ್ಟಿದ್ದನ್ನೋ ಇಲ್ಲವೇ ಯಾರೋ ಹೇಳಿಕೊಟ್ಟಿದ್ದನ್ನೇ  ಗಿಳಿ ಪಾಠದಂತೆ ಒಪ್ಪಿಸುತ್ತಾ  ಎಷ್ಟು ದಿನ ಅಂತಾ ಜನರನ್ನು ಬೇಸ್ತು ಗೊಳಿಸಬಹುದು? ಇನ್ನೂ ಹತ್ತಾರು ತಲೆಮಾರು ಕೂತು ತಿಂದರೂ ಕರಗಲಾರದಷ್ಟು ಆಸ್ತಿ ಪಾಸ್ತಿ ಇದೆ. ಸುಮ್ಮನೆ ಒಗ್ಗಿಬಾರದ ರಾಜಕಾರಣದಲ್ಲಿ ಮುಂದುವರಿಯುವ ಬದಲು ನೆಮ್ಮದಿಯಾಗಿ ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ದೇಶ ವಿದೇಶ ಸುತ್ತುತ್ತಾ ಕಾಲ ಕಳೆದರೆ ಅತನಿಗೂ ನೆಮ್ಮದಿ ದೇಶಕ್ಕೂ ಸಂವೃದ್ದಿ.

ಏನಂತೀರೀ?

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ

ನಿಜವಾಗಿ & ಖಡಾಖಂಡಿತವಾಗಿ ಹೇಳಬೇಕೆಂದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ ಅಷ್ಟೇನೂ ಉತ್ತಮವಾಗಿಲ್ಲ ಮತ್ತು ಅದನ್ನು ಉತ್ತಮ ಪಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಲೇ ಇಲ್ಲ. ಅವರ ಸದ್ಯದ ಮನೋಸ್ಥಿತಿ ಹೇಗಿದೆಯೆಂದರೆ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಸಹಾ ತಾವು ಪ್ರಧಾನ ಮಂತ್ರಿಯಾಗಲೆಂದೇ ಹುಟ್ಟಿದವರು ಎಂದೇ ನಂಬಿದ್ದಾರೆ ಅಥವಾ ಅವರ ಸುತ್ತಮುತ್ತಲಿರುವ ಅವರ ವಂದಿಮಾಗದರು ಅವರನ್ನು ಹಾಗೇ ನಂಬಿಸಿದ್ದಾರೆ. ಅವರ ಮುತ್ತಾತ, ಅಜ್ಜಿ ಮತ್ತು ಅಚಾನಕ್ಕಾಗಿ ಅವರ ತಂದೆ ಪ್ರಧಾನಿಯಾಗಿದ್ದರಿಂದ ಪ್ರಧಾನಮಂತ್ರಿಯ ಹುದ್ದೆ ತಮ್ಮ ಕುಟುಂಬದ ಜಹಾಗೀರು ಹಾಗಾಗಿ ತಮ್ಮಲ್ಲೊಬ್ಬರು ನಿಶ್ವಿತವಾಗಿ ಪ್ರಧಾನ ಮಂತ್ರಿಗಳಾಗಲೇ ಬೇಕು ಎಂದು ತಿಳಿದಂತಿದೆ.

ದೇಶದ ಯಾವುದೇ ಪ್ರಜೆ, ಪ್ರಧಾನ ಮಂತ್ರಿಯಂತಹ ಹುದ್ದೆಗೆ ಏರಬೇಕೆಂದು ಬಯಸುವುದು ತಪ್ಪಲ್ಲ. ಈ ಪ್ರಜಾಪ್ರಭುತ್ವ ಪದ್ದತಿಯಲ್ಲಿ ಜನರಿಂದ ಆಯ್ಕೆಯಾಗಿ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂಬುದನ್ನು ಈಗಾಗಲೇ ನಾವು ನೋಡಿದ್ದೇವೆ. ಆದರೆ ಒಂದಿಬ್ಬರನ್ನು ಹೊರತು ಪಡಿಸಿ ಮಿಕ್ಕೆಲ್ಲರೂ ಹಲವಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ನಾನಾ ವಿಧದ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಜನರ ಮನ್ನಣೆಗಳಿಸಿ ಪ್ರಧಾನಿಗಳಾಗಿದ್ದರು. ಹಾಗೆ ಪ್ರಧಾನಿಗಳಾದವರಲ್ಲಿ ಕೆಲವೇ ಕಲವರು ಯಶಸ್ವಿಯಾದರೆ ಹಲವರು ಜನರ ನಂಬಿಕೆಗಳನ್ನು ಹುಸಿಗೊಳಿಸಿದ್ದನ್ನು ರಾಜಕಾರಣದ ಕುಟುಂಬದಲ್ಲಿರುವ ರಾಹುಲ್ ಮತ್ತು ಪ್ರಿಯಾಂಕ ಗಮನಿಸಿಲ್ಲವೆನಿಸುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರು ಸದಾಕಾಲವೂ ಜನರ ಜೊತೆ ನೇರವಾದ ಸಂಪರ್ಕವನ್ನು ಇಟ್ಟುಕೊಂಡಿರ ಬೇಕು ಅವರ ಕಷ್ಟ ಸುಖಃಗಳಲ್ಲಿ ಭಾಗಿಯಾಗ ಬೇಕು ಮತ್ತು ಕಠಿಣ ಸವಾಲನ್ನು ಎದುರಿಸಲು ಮತ್ತು ಪಕ್ಷವನ್ನು ಅಭಿವೃದ್ಧಿಪಡಿಸಲು ಸ್ವಸಾಮರ್ಥ್ಯವಿರಬೇಕು. ಆದರೆ ಸುಮಾರು ಐವತ್ತರ ಆಸುಪಾಸಿನಲ್ಲಿರುವ ಅಣ್ಣ ತಂಗಿಯರಿಬ್ಬರಲ್ಲೂ ಯಾವುದೇ ಸ್ವಂತಿಕೆ ಇಲ್ಲದಿರುವುದು ಸ್ಪಷ್ಟವಾಗಿದೆ. ಯಾರೋ ಬರೆದು ಕೊಟ್ಟದ್ದನ್ನೂ ಸಹಾ ಸರಿಯಾಗಿ ಓದಲಾಗದೇ ಅನೇಕ ಜನರ ಮುಂದೆ ನಗಪಾಟಲಾಗಿರುವ ಉದಾಹರಣೆಗಳು ಸಾಕಷ್ಟಿವೆ.

2014 ಮತ್ತು 2019 ರಲ್ಲಿ ಪ್ರಧಾನ ಮಂತ್ರಿಯ ಹುದ್ದೆಗೆ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರೊಂದಿಗೆ ನೇರಾ ನೇರವಾಗಿ ಸ್ಪರ್ಧಿಸಿ ವಿಫಲರಾದರು. ಎರಡೂ ಬಾರಿಯೂ ಕನಿಷ್ಠ ಪಕ್ಷ ಅಧಿಕೃತ ವಿರೋಧಪಕ್ಷವಾಗಲು ಬೇಕಾದ 10% ಅಂದರೆ 54 ಸಂಸದರನ್ನು ತಮ್ಮ ನಾಯಕತ್ವದಲ್ಲಿ ಗೆಲ್ಲಿಸಿಕೊಂಡು ಬರುವುದರಲ್ಲಿ ವಿಫಲರಾದರು. 2019ರಲ್ಲಂತೂ ತಮ್ಮ ಪರಂಪರಾಗತ ಕ್ಷೇತ್ರ ಅಮೇಠಿಯಿಂದಲೇ ಬಾರೀ ಅಂತರದಿಂದ ಸೋತು, ವೈನಾಡಿನಲ್ಲಿ ಗೆಲ್ಲುವ ಮೂಲಕ ಅಲ್ಪ ಸ್ವಲ್ಪ ಮರ್ಯಾದೆಯನ್ನು ಕಾಪಾಡಿಕೊಂಡರು. ಇನ್ನು 2014 ರ ಚುನಾವಣೆಯಲ್ಲಿ ಮೋದಿಯವರನ್ನು ಚಾಯ್ ವಾಲ ಎಂದು ಮೂದಲಿಸಿದರೆ, 2019 ರಲ್ಲಿ ಚೊಕೀದಾರ್ ಚೋರ್ ಹೈ ಎಂಬ ವಯಕ್ತಿಕ ನಿಂದನೆ ಮತ್ತು ರಫೇಲ್ ಕುರಿತಾದ ಸುಳ್ಳು ಆರೋಪದ ಹೊರತಾಗಿ ಇನ್ನಾವುದರ ಕುರಿತಾಗಿ ಮಾತನಾಡಲು ಅಥವಾ ಅರೋಪ ಮಾಡಲು ಸಾಧ್ಯವಾಗಲೇ ಇಲ್ಲ. ಮೋದಿಯವರಿಗೆ ಹೋಲಿಸಿದಲ್ಲಿ ರಾಹುಲ್ ಅವರ ರಾಜಕೀಯ ಭಾಷಣಗಳೆಂದೂ ಪ್ರಭಾವಶಾಲಿಯಾಗಿರಲೇ ಇಲ್ಲ. ಅವರ ಸ್ವಂತ ಯೋಚನಾ ಲಹರಿ ಇಲ್ಲದೇ ಯಾರೋ ಬರೆದು ಕೊಟ್ಟದ್ದನ್ನು ಗಿಳಿ ಪಾಠದಂತೆ ಓದಿ ಜನರನ್ನು ಮರಳು ಮಾಡಬಹುದೆಂಬ ಅವರ ನಂಬಿಕೆ ಸುಳ್ಳಾಯಿತು. ಇನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂದರ್ಶನಗಳಲ್ಲಿ ಪೆದ್ದು ಪೆದ್ದಾದ ಹಾವ ಭಾವಗಳನ್ನು ಪ್ರದರ್ಶಿಸುತ್ತಾ, ಅವರು ಕೇಳಿದ ಪ್ರಶ್ನೆಗಳಿಗೆ ಅಸಂಬದ್ದ ಉತ್ತರಗಳನ್ನು ನೀಡುತ್ತಾ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ತಾವೇ ಜಗಜ್ಜಾಹೀರಾತು ಪಡಿಸಿಕೊಂಡಿದ್ದಲ್ಲದೇ ದೇಶದ ಮಾನವನ್ನು ವಿದೇಶಗಳಲ್ಲಿ ಹರಾಜು ಹಾಕಿದರು ಎಂದರೂ ತಪ್ಪಾಗಲಾರದು. ಎಲ್ಲರಿಗೂ ಎಲ್ಲಾ ವಿಷಯಗಳ ಬಗ್ಗೆ ತಿಳಿದಿರಬೇಕು ಎಂದೇನೂ ಇಲ್ಲ ಮತ್ತು ತನಗೆ ಗೊತ್ತಿಲ್ಲ ವಿಷಯವಾಗಿದ್ದರೆ ಅದು ಗೊತ್ತಿಲ್ಲ ಎಂದು ಹೇಳಿದರೆ ತಪ್ಪೇನಿಲ್ಲ. ತನಗೆ ಗೊತ್ತಿಲ್ಲದಿದ್ದರೂ ಗೊತ್ತಿರುವ ಹಾಗೆ ನಟಿಸುತ್ತಾ ಅಸಂಬದ್ಧವಾಗಿ ಉತ್ತರವನ್ನು ನೀಡಿದಲ್ಲಿ ಅವ್ಯಕ್ತಿ ಜನರ ಮುಂದೆ ಹಾಸ್ಯಾಸ್ಪದವಾಗುತ್ತಾನೆ. ಇದು ರಾಹುಲ್ ಗಾಂಧಿಯ ವಿಷಯದಲ್ಲಿ ಅನೇಕ ಬಾರಿ ಸತ್ಯವಾಗಿದೆ.

rps2ಇನ್ನು ನೋಡಲು ಸ್ವಲ್ಪ ಇಂದಿರಾ ಗಾಂಧಿಯ ಹೋಲಿಕೆ ಇರುವ ಪ್ರಿಯಾಂಕಾ ಗಾಂಧಿ ಅದೊಂದೇ ತಮ್ಮನ್ನು ರಾಜಕೀಯವಾಗಿ ಪ್ರವರ್ಧಮಾನಕ್ಕೆ ತರುತ್ತದೆ ಎಂದು ಅತೀಯಾಗಿ ನಂಬಿಕೊಂಡು ವಿಫಲರಾದರು. ಆಕೆಯ ಈ ವರ್ಚಸ್ಸು ಅಮೆಥಿಯಲ್ಲಿ ತನ್ನ ಅಣ್ಣ ರಾಹುಲ್ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಮತ್ತು ದೇಶಾದ್ಯಂತ ಕಾಂಗ್ರೆಸ್ ಮುಖವನ್ನು ಉಳಿಸುವಲ್ಲಿಯೂ ವಿಫಲವಾಯಿತು. ಆರಂಭದಲ್ಲಿ ಮೋದಿಯವರ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುವ ಭರವಸೆಗೆ ಹುಟ್ಟಿಸಿದರೂ ನಂತರ ತಮ್ಮ ಸಾಮರ್ಥ್ಯ ಅರಿವಾಗಿ ಚುನಾವಣಾ ಕಣಕ್ಕೇ ಇಳಿಯದೇ ರಣಹೇಡಿಯಾದದ್ದಂತೂ ಸುಳ್ಳಲ್ಲ. ಅದಕ್ಕಿಂತಲೂ ಹೆಚ್ಚಾಗಿ ಯಾವುದೇ ಅಧಿಕಾರವಿಲ್ಲದಿದ್ದರೂ ಕೇವಲ ಅವರ ಕುಟುಂಬದ ಸದಸ್ಯನಾಗಿ ಅಕೆಯ ಗಂಡಾ ರಾಬರ್ಟ್ ವಾದ್ರಾ ಮಾಡಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಹಗರಣಗಳು ಒಂದೊಂದಾಗಿ ಬೀದಿಗೆ ಬರುತ್ತಿರುವುದು ಪ್ರಿಯಾಂಕಾ ರಾಜಕೀಯ ಭವಿಷ್ಯಕ್ಕೆ ಮಾರಕವಾಗಿದೆ.

neh_familytreeಸಾರ್ವಜನಿಕ ಜೀವನದಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಮೊದಲು ತನ್ನ ಗುರುತನ್ನು ಜನಮಾನಸದಲ್ಲಿ ಛಾಪು ಮೂಡಿಸಬೇಕು ಮತ್ತು ನಂತರ ಅದೇ ಛಾಪನ್ನು ವಿಸ್ತರಿಸಿಕೊಂಡು ಹೋಗಬೇಕು. ದುರಾದೃಷ್ಟವಷಾರ್ ರಾಹುಲ್ ಗಾಂಧಿ ಈ ವಿಷಯದಲ್ಲಿ ಎಡವಿದ್ದಾರೆ. ಮುತ್ತಾತ ಕಾಶ್ಮೀರೀ ಬ್ರಾಹ್ಮಣ (ಅದರ ಬಗ್ಗೆಯೂ ಅನೇಕ ವಿವಾದಗಳಿವೆ) ಅವರ ಮಗಳು ಇಂದಿರಾ ಪಾರ್ಸೀ ಮೂಲದ ಫಿರೋಜ್ ಗಾಂದಿಯನ್ನು ಮದುವೆಯಾಗಿ ಇಲ್ಲಿಯ ಕಾನೂನು ಕಟ್ಟಳೆಯ ಪ್ರಕಾರ ಪಾರ್ಸಿಯಾದರು ಇವರಿಬ್ಬರ ಮಗ ರಾಜೀವ್ ಗಾಂಧಿ, ಇಟಲಿಯ ಮೂಲದ ರೋಮನ್ ಕ್ಯಾಥೋಲಿಕ್ ಧರ್ಮೀಯರಾದ ಸೋನಿಯಾರನ್ನು ಮದುವೆಯಾದರು. ಅವರಿಬ್ಬರಿಗೆ ಹುಟ್ಟಿದವರು ರಾಹುಲ್ ಮತ್ತು ಪ್ರಿಯಾಂಕ. ಹೀಗೆ ಅವರ ವಂಶವಾಹಿನಿಯನ್ನು ನೋಡುತ್ತಾ ಹೋದಲ್ಲಿ ಸರ್ವಧರ್ಮ ಸಮ್ಮಿಳಿತವಾಗಿದೆ. ಹಾಗಾಗಿ ಅವರು ತಮ್ಮನ್ನು ಜಾತ್ಯಾತೀತರೆಂದು ಗುರುತಿಸಿಕೊಂಡಿದ್ದಲ್ಲಿ ಅವರಿಗೆ ಅನುಕೂಲವಾಗಿರುತ್ತಿತ್ತು. ಆದರೆ ಸಮಯಕ್ಕೆ ಬಣ್ಣ ಬದಲಿಸುವ ಗೋಸುಂಬೆಯಂತೆ ಗುಜರಾತ್ ಚುನಾವಣಾ ಸಮಯದಲ್ಲಿ ತಾವು ಜನಿವಾರಧಾರಿ ದತ್ತಾತ್ರೇಯ ಗೋತ್ರದ ಕಾಶ್ಮೀರೀ ಕೌಲ್ ಬ್ರಾಹ್ಮಣ ಎಂದು ಗುರುತಿಸಿಕೊಂಡು ಜನರನ್ನು ಮರುಳು ಮಾಡಲು ಪ್ರಯತ್ನಿಸಿದರು. ಇನ್ನು ಗೋವಾ ಚುನವಣಾ ಸಮಯದಲ್ಲಿ ಅಣ್ಣಾ ತಂಗಿಯರಿಬ್ಬರೂ ಕತ್ತಿನಲ್ಲಿ ಶಿಲುಬೆ ಧರಿಸಿ ತಾವು ರೋಮನ್ ಕ್ಯಾಥೋಲಿಕ್ ಎಂದು ಜನರನ್ನು ನಂಬಿಸಲು ಪ್ರಯತ್ನಿಸಿದರೆ, ತಮ್ಮ ರಾಜಕೀಯ ಅಸ್ಥಿತ್ವ ಮತ್ತು ಅಸ್ಮಿತೆಗಾಗಿ ಮುಸಲ್ಮಾನರೇ ಹೆಚ್ಚಾಗಿರುವ ಕೇರಳದ ವೈನಾಡಿನಲ್ಲಿ ಸ್ಪರ್ಥಿಸಿದಾಗ ತಲೆಯಮೇಲೆ ಟೋಪಿ ಧರಿಸಿ ಪರೋಕ್ಷವಾಗಿ ತಾವು ಮುಸ್ಲಿಂ ಎಂದು ತೋರಿಸಿಕೊಂಡು ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ತಮ್ಮ ಅಸ್ತಿತ್ವವನ್ನೇ ಬದಲಿಸಿಕೊಳ್ಳುವವರನ್ನು ಜನಾ ಹೇಗೆ ತಾನೇ ನಂಬುತ್ತಾರೆ.

ಒಬ್ಬ ನಾಯಕ ರಾಜಕೀಯವಾಗಿ ಯಶಸ್ವಿಯಾಗಲು, ಮೊದಲು ಆತನಿಗೆ ತನ್ನ ಸ್ವಸಾಮರ್ಥ್ಯದ ಅರಿವಿನೊಂದಿಗೆ ತನ್ನ ವಿರೋಧಿಗಳ ಶಕ್ತಿ ಮತ್ತು ಸಾಮರ್ಥ್ಯದ ಅರಿವಿರಬೇಕು. ಹಾಗಾದಲ್ಲಿ ಮಾತ್ರವೇ ಬರುವ ಸವಾಲುಗಳನ್ನು ಎದುರಿಸಲು ತನ್ನದೇ ಆದ ರೀತಿಯಲ್ಲಿ ಯೋಜನೆಯನ್ನು ಮಾಡುತ್ತಾ ವಿರೋಧಿಗಳನ್ನು ಮಣಿಸಲು ಅಥವಾ ಸಮರ್ಥವಾಗಿ ಪ್ರತಿರೋಧವನ್ನು ಒಡ್ಡಲು ಸಹಕಾರಿಯಾಗುತ್ತದೆ. ತನ್ನ ಪಕ್ಷವನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗಲು ಆತನ ಜೊತೆ ಸದಾಕಾಲವೂ ಒಂದು ಸಮರ್ಥವಾದ ಬುದ್ಧಿವಂತ ತಂಡವಿರಬೇಕು. ಆ ತಂಡ ತನ್ನ ನಾಯಕನ ಎಲ್ಲಾ ಆಗುಹೋಗುಗಳನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಅಕಸ್ಮಾತ್ ತನ್ನ ನಾಯಕ ಎಲ್ಲಿಯಾದರೂ ಎಡವಿದಲ್ಲಿ ಅಥವಾ ತಪ್ಪು ಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಹೇಳುವಂತಿರ ಬೇಕು. ದುರದೃಷ್ಟವಷಾತ್ ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಜೊತೆ ಅಂತಹ ಸಾಮರ್ಥ್ಯ ಹೊಂದಿರುವ ಮಿತ್ರವೃಂದ ಇಲ್ಲವಾಗಿದೆ. ರಾಜಕೀಯವಾಗಿ ಏನೂ ತಿಳಿಯದಿದ್ದ ಅವರ ತಂದೆ ರಾಜೀವ್ ಗಾಂಧಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಲು ಅವರ ಜೊತೆಗಿದ್ದ ಮಾಧವ್ ರಾವ್ ಸಿಂಧ್ಯಾ ಮತ್ತು ರಾಜೇಶ್ ಪೈಲೆಟ್ ಅರುಣ್ ನೆಹರು ಅವರುಗಳ ಉಪಯುಕ್ತ ಸಲಹೆಗಳು ಕಾರಣವಾಗಿದ್ದವು. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ರಾಜೀವ್ ಗಾಂಧಿಯವರಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿತ್ತು.

spsindಆರಂಭದಲ್ಲಿ ರಾಹುಲ್ ಮತ್ತು ಪ್ರಿಯಾಂಕ ಗಾಂಧಿಯವರ ಜೊತೆ ಜೋತಿರಾಧ್ಯ ಸಿಂಧ್ಯ ಮತ್ತು ‍ಸಚಿನ್ ಪೈಲಟ್ ಇದ್ದರಾದರೂ, ನಂತರದ ದಿನಗಳಲ್ಲಿ ತಮ್ಮ ಅಸ್ಥಿತ್ವವನ್ನು ಹುಡುಕಿಕೊಂಡು ಸಿಂಧ್ಯಾ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದರೆ, ಒಲ್ಲದಿದ್ದರೂ, ಸದ್ಯಕ್ಕೆ ಸಚಿನ್ ಪೈಲಟ್ ರಾಜಾಸ್ಥಾನದ ಅಶೋಕ್ ಗೆಹ್ಲಾಟ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಪ್ರಿಯಾಂಕಾ ಮತ್ತು ರಾಹುಲ್ ಸಖ್ಯವನ್ನು ತೊರೆದಿದ್ದಾರೆ,. ರಾಹುಲ್ ಮತ್ತು ಪ್ರಿಯಾಂಕ ಅವರಿಗೆ ಯಾರಾದರೂ ಏನಾದಾರೂ ಬುದ್ದಿವಾದ್ವನ್ನು ಹೇಳಿದಲ್ಲಿ ಅಥವಾ ಅವರ ತಪ್ಪನ್ನು ತಿದ್ದಿ ಹೇಳಿದಲ್ಲಿ ಅದನ್ನು ಅವರ ತಂದೆ ರಾಜೀವರಂತೆ ಒಪ್ಪಿಕೊಳ್ಳುವ ಮನೋಭಾವ ಅವರಿಬ್ಬರಲ್ಲಿಯೂ ಇಲ್ಲವಾಗಿದೆ. ಎರಡು ಅವಧಿಯಲ್ಲಿ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರ ಅನೇಕ ನಿರ್ಣಯಗಳನ್ನು ರಾಹುಲ್ ಗಾಂಧಿ ಬಹಿರಂಗವಾಗಿಯೇ ಟೀಕಿಸಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

RP2ರಾಹುಲ್ ನಿಜವಾಗಿಯೂ ಪ್ರಧಾನ ಮಂತ್ರಿಯಾಗಬೇಕಿದ್ದಲ್ಲಿ ಆತ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದ ಮಂತ್ರಿಮಂಡಳದಲ್ಲಿ ಯಾವುದಾದರೂ ಪ್ರಭಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ತನ್ನ ನಾಯಕತ್ವವನ್ನು ಮತ್ತು ಆಡಳಿತದ ಸಾಮರ್ಥ್ಯವನ್ನು ಎಲ್ಲರಿಗೂ ಪರಿಚಯಿಸಿದ್ದಲ್ಲಿ ಅವರಿಗೇ ಒಳ್ಳೆಯದಾಗುತ್ತಿತ್ತು. ಆದರೆ ತಾನು ಹುಟ್ಟಿರುವುದೇ ಭಾರತ ದೇಶದ ಪ್ರಧಾನಿಯಗಲು ಎಂದು ರಾಹುಲ್ ತಲೆಯಲ್ಲಿ ಹೊಕ್ಕಿರುವುದರಿಂದ ತನ್ನ ನಾಯಕತ್ವ ಮತ್ತು ತಮ್ಮ ಪಕ್ಷವನ್ನು ಬಲಪಡಿಸಲು ಏನನ್ನೂ ಮಾಡಲಾಗುತ್ತಿಲ್ಲ ಮತ್ತು ಮಾಡುತ್ತಿಲ್ಲ. ಬದಲಾಗಿ ತಮ್ಮನ್ನು ತಾವು ಅಗ್ಗದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದಲ್ಲದೆ,ಯಾವುದಾದರೂ ಅದೃಷ್ಟದ ಬಲದಿಂದ ಅಧಿಕಾರವನ್ನು ಗಳಿಸಲು ಬಯಸುತ್ತಿದ್ದಾರೆ. ಆದರೆ ಪರಿಶ್ರಮ ಪಡದೇ ಯಾವುದೇ ಫಲವೂ ಸಿಗದು ಎಂಬ ಸಾಮಾನ್ಯ ಸಂಗತಿಯನ್ನು ಅವರಿಗೆ ತಿಳಿಯ ಪಡಿಸಬೇಕಾಗಿದೆ. ಹಾಗಾಗಿ ಈಗ ಬೆಕ್ಕಿಗೆ ಗಂಟೆ ಕಟ್ಟುವವರಾರು? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ ತೊಡಗಿದೆ. ಹಾಗಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮುಂದಿನ ರಾಜಕೀಯ ಭವಿಷ್ಯ ಅಷ್ಟೇನೂ ಆಶಾದಾಯಕವಾಗಿರದೇ ಮಸುಕಾಗಿದೇ ಎಂದೇ ನಿಶ್ಚಯವಾಗಿ ಹೇಳಬಹುದಾಗಿದೆ

ಏನಂತೀರೀ?