ಕಾರ ಹುಣ್ಣಿಮೆ

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ ನೋಡಿಕೊಂಡ. ಒಂದೇ ರೀತಿಯ ಬದುಕಿನಿಂದ ಬೇಸತ್ತ ಮನುಷ್ಯ ಮನೋರಂಜನೆಗಾಗಿ ಹಾಡು ಹಸೆ, ನೃತ್ಯ ನಾಟಕಗಳನ್ನು ಅಭ್ಯಾಸ ಮಾಡಿಕೊಂಡಿದ್ದಲ್ಲದೇ ಅವುಗಳಿಗೆ ಒಂದು ಸೂಕ್ತವಾದ ವೇದಿಕೆ ನೀಡಲು ಹಬ್ಬ ಹರಿದಿನಗಳು ಆರಂಭವಾಯಿತು. ಈ ಹಬ್ಬ ಹರಿದಿನಗಳಲ್ಲಿ ಕಾಲ ಕಾಲಕ್ಕೆ ಅನುಗುಣವಾಗಿ ಸಿಗುವ ಪದಾರ್ಥಗಳಿಂದ ತನಗಿಷ್ಟ ಬಂದ ಭಕ್ಷ ಭೋಜನಗಳನ್ನು ತಯಾರಿಸಿ ತಿಂದು ಸಂಭ್ರಮಿಸಿದ.

kara1

ಹಬ್ಬ ಹರಿದಿನಗಳಲ್ಲಿ ಕೇವಲ ತಾನೊಬ್ಬನೇ ಸಂಭ್ರಮಿಸಿದರೆ ಸಾಲದು ತನ್ನ ಸಂಭ್ರದ ಜೊತೆಗೆ ಪ್ರಕೃತಿ, ಸಾಕು ಪ್ರಾಣಿಗಳು ಮತ್ತು ಆಯುಧಗಳು ಇದ್ದರೆ ಚೆನ್ನಾ ಎನಿಸಿದಾಗಲೇ ಸಂಕ್ರಾಂತಿ, ಯುಗಾದಿ, ಆಯುಧಪೂಜೆಗಳ ಸಂದರ್ಭದಲ್ಲಿ ಸಾಕುಪ್ರಾಣಿಗಳು ಮತ್ತು ತನ್ನ ದಿನ ನಿತ್ಯದ ಚಟುವಟಿಕೆಗಳಲ್ಲಿ ಬಳಸುವ ಸಲಕರಣೆಗಳನ್ನು ಪೂಜಿಸತೊಡಗಿದ. ರೈತರು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ರೈತಾಪಿ ಜನರು ಮಳೆಗಾಲದ ಮುಂಚೆ ಸಡಗರ ಸಂಭ್ರಮಗಳಿಂದ ತಮ್ಮ ದನ ಕರುಗಳೊಂದಿಗೆ ಆಚರಿಸುವ ಕಾರಹುಣ್ಣಿಮೆಯ ಬಗ್ಗೆ ಸವಿರವಾಗಿ ತಿಳಿಸಿಕೊಳ್ಳೋಣ.

kara4

ಜೇಷ್ಥ ಮಾಸದ ಹುಣ್ಣಿಮೆ ಬಂತೆಂದರೆ ಉತ್ತರ ಕರ್ನಾಟಕದ ಮಂದಿಗೆ ಅದೇನೋ ಸಂಭ್ರಮ. ಒಂದೆರಡು ಹದದ ಮಳೆ ಬಿದ್ದು ಆಗತಾನೆ ಕೃಷಿ ಚಟುವಟಿಕೆಗಳು ಆರಂಭವಾಗಿ ಭರ್ಜರಿಯ ಮುಂಗಾರು ಮತ್ತು ಹಿಂಗಾರಿನ ಮಳೆಯ ನಿರೀಕ್ಷೆಯಲ್ಲಿ ಇರುತ್ತಾರೆ. ಹಬ್ಬಕ್ಕೊಂದೆರಡು ದಿನಗಳ ಮುಂಚೆಯೇ ಅಂಗಡಿಗಳಿಗೆ ಹೋಗಿ, ಬಣ್ಣ ಬಣ್ಣದ ರಂಗು(ಗುಲಾಲ್) ಟೇಪುಗಳನ್ನೆಲ್ಲಾ ತಂದು ಸಿದ್ಧ ಪಡಿಸಿಕೊಂಡು ಹುಣ್ಣಿಮೆ ಹಬ್ಬದ ದಿನ ತಮ್ಮ ರಾಸುಗಳು ಅದರಲ್ಲೂ ವಿಶೇಷವಾಗಿ ಹೋರಿಗಳನ್ನು ಕೆರೆ ಕಟ್ಟೆಗಳ ಬಳಿಗೆ ಕರೆದುಕೊಂಡು ಹೋಗಿ ಚೆನ್ನಾಗಿ ತಿಕ್ಕಿ ಅವುಗಳ ಮೈ ತೊಳೆದು ಅವುಗಳ ಕೋಡುಗಳನ್ನು ಕತ್ತಿಯಿಂದ ಸವರಿ ಅವುಗಳಿಗೆ ವಿವಿಧ ಬಣ್ಣಗಳನ್ನು ಬಳಿದೋ ಇಲ್ಲವೇ ತೇಪುಗಳನ್ನು ಕಟ್ಟಿ ಅದರ ಜೊತೆಗೆ ಬಣ್ಣ ಬಣ್ಣದ ಉಸಿರುಬುಡ್ಡೆ (ಬೆಲೂನು)ಗಳನ್ನು ಕಟ್ಟಿ ಅವುಗಳ ದೇಹಕ್ಕೆ ವಿವಿಧ ಬಣ್ಣದ ಗುಲಾಲುಗಳಿಂದ ಚಿತ್ತಾರ ಬಿಡಿಸಿ ಕೊರಳಿಗೆ ಮತ್ತು ಕಾಲ್ಗಳಿಗೆ ಚಂದನೆಯ ಗೆಜ್ಜೆಗಳನ್ನು ಕಟ್ಟಿ ನೋಡುವುದಕ್ಕೆ ಚೆಂದಗೆ ಕಾಣುವ ಹಾಗೆ ಮಾಡುತ್ತಾರೆ. ಕೇವಲ ಹಸುಗಳಿಗಷ್ಟೇ ಅಲ್ಲದೇ ಮನೆ ಮಂದಿಯೆಲ್ಲಾ ಹೂಸ ಬಟ್ಟೆಗಳನ್ನು ತೊಟ್ಟು ಇಡೀ ದಿನ ತಮ್ಮೆಲ್ಲಾ ಕೃಷಿ ಚಟುವಟಿಕೆಗಳಿಂದ ತಾವೂ ಮತ್ತು ತಮ್ಮ ರಾಸುಗಳು ಮುಕ್ತವಾಗಿದ್ದು ಹೋಳಿಗೆ, ಕಡುಬು ಮತ್ತು ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ಸಿದ್ದ ಪಡಿಸಿ ಮೊದಲು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ದನ ಕರುಗಳಿಗೆ ಅವುಗಳನ್ನು ಒಳ್ಳೆಯ ಮೇವುಗಳ ಜೊತೆ ತಮ್ಮ ದನಕರುಗಳಿಗೆ ಉಣ ಬಡಿಸಿ ನಂತರ ಮನೆಯವರೆಲ್ಲರೂ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ.

kara3

ಸೂರ್ಯನ ಬಿಸಿಲು ಸಂಜೆಯ ಹೊತ್ತಿಗೆ ಕಡಿಮೆ ಆಗುತ್ತಿದ್ದಂತೆಯೇ, ಸಿಂಗರಿಸಿದ ರಾಸುಗಳನ್ನು ಎಲ್ಲರೂ ಮೆರವಣಿಗೆಯ ಮುಖಾಂತರ ಊರ ಮುಂದಿನ ಅರಳೀ ಕಟ್ಟೆಯ ಬಳಿಗೆ ಕರೆ ತರುತ್ತಾರೆ, ಉಳ್ಳವರು ಭಾಜಾಭಂಜಂತ್ರಿಯ ಸಮೇತ ತಮ್ಮ ದನಕರುಗಳನ್ನು ಮೆರವಣಿಗೆ ಕರೆತರುವುದನ್ನು ನೋಡಲು ಇಡೀ ಊರಿನ ಮಂದಿಯೆಲ್ಲಾ ಅಲ್ಲಿ ನೆರೆದಿದ್ದು ಇದು ಚೆನ್ನಾಗಿದೇ, ಇಲ್ಲಾ ಇದು ಚೆನ್ನಾಗಿದೆ ಎಂದು ತಮ್ಮ ತಮ್ಮಲೇ ಫಲಿತಾಂಶಗಳನ್ನು ನೀಡುವ ಮಂದಿಗೇನೂ ಕಡಿಮೆ ಇರುವುದಿಲ್ಲ.

kara2

ಕಾರ ಹಬ್ಬದ ವಿಶೇಷತೆಯಲ್ಲಿ ಕರಿ ಹರಿಯುವ (‌‌‌ಎತ್ತುಗಳನ್ನು ಪೂಜಿಸಿ ಓಡಲು ಬಿಡುವುದು) ಕಾರ್ಯಕ್ರಮವೇ ಒಂದು ವೈಶಿಷ್ಟ್ಯ. ಊರ ಮುಂಭಾಗದಲ್ಲಿ ಬೇವಿನ ತೋರಣದ ನಡುವೆ ಕೊಬ್ಬರಿಯನ್ನು ಕಟ್ಟಲಾಗಿರುತ್ತದೆ. ಈ ಕರಿಯನ್ನು ಹರಿಯಲು ಬಿಳಿ, ಹಾಗೂ ಕಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶವಿದ್ದು ಜೋರಾಗಿ ಭಾಜ ಭಜಂತ್ರಿ ಡೋಲು ಮತ್ತು ತಮಟೆಯ ಸದ್ದಾಗುತ್ತಿದ್ದಂತೆಯೇ, ಸಿಂಗರಿಸಿದ್ದ ತಮ್ಮ ರಾಸುಗಳೊಂದಿಗೆ ರೈತರು ತಾಮುಂದು ನಾಮುಂದು ಎಂದು ಆ ಕರಿಯನ್ನು ಹರಿಯುವತ್ತ ದೌಡಾಯಿಸುತ್ತಾರೆ. ಕರಿಯುವ ಓಟದಲ್ಲಿ ಎತ್ತುಗಳನ್ನು ಹಿಡಿದ ರೈತರು ಎದ್ದೆನೋ ಬಿದ್ದೇನೋ ಎಂದು ಓಡುತ್ತಿದ್ದರೆ, ಅದನ್ನು ನೋಡಲು ಬಂದಿರುವ ಪಡ್ಡೇ ಹುಡುಗರು ಮತ್ತು ಉಳಿದ ರೈತರುಗಳು ಸಿಳ್ಳೇ ಹೊಡೆಯುತ್ತಾ, ಜೋರಾಗಿ ಕೇಕೆ ಹಾಕುತ್ತಾ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಎತ್ತು ಮೊದಲು ಕರಿಹರಿಯುತ್ತೋ ಆ ಬಣ್ಣದ ಬೆಳೆ ಆ ಬಾರಿ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ಆ ಎಲ್ಲಾ ರೈತರದ್ದಾಗಿರುತ್ತದೆ.

ಬಿಳಿ ಎತ್ತು ಮೊದಲು ಕರಿ ಹರಿದರೆ ಬಿಳಿಜೋಳ, ಅಂದರೆ ಹಿಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ಇದ್ದು, ಇನ್ನು ಕಂದು ಬಣ್ಣದ ಎತ್ತು ಕರಿ ಹರಿದರೆ ಮುಂಗಾರು ಮಳೆಯ ಬೆಳೆಗಳು ಚೆನ್ನಾಗಿ ಆಗುತ್ತೆ ಎನ್ನುವ ನಂಬಿಕೆಯು ಅಲ್ಲಿನ ರೈತರದ್ದಾಗಿದ್ದು, ಮೊದಲು ಕರಿ ಹರಿದ ಎತ್ತಿಗೆ ರೈತರೆಲ್ಲರೂ ಸೇರಿ ಮೆರವಣಿಗೆ ಮಾಡುವುದಲ್ಲದೇ ಅದರೆ ಮಾಲಿಕನಿಗೆ ಬಹುಮಾನ ಕೊಡುವುದೂ ಕೆಲವು ಕಡೆ ರೂಢಿಯಲ್ಲಿದೆ. ಈ ಕರಿ ಹರಿದ ಬಳಿಕ ಗಂಡಸರ ಪೌರುಷದ ಪಂದ್ಯಾವಳಿಗಳು ಇದ್ದು, ಅದರಲ್ಲೂ ವಿಶೇಷವಾಗಿ ಗುಂಡು ಎತ್ತುವ ಇಲ್ಲವೇ ಮೂಟೆಗಳನ್ನು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿರುತ್ತದೆ. ವರ್ಷವಿಡೀ ಕೃಷಿ ಚಟುವಟಿಕೆಯಲ್ಲಿ ತೊಡಗಿ ದೇಹವನ್ನು ಹುರಿಗೊಳಿಸಿಕೊಂಡ ರೈತರಿಗೆ ಇಂದೊದು ರೀತಿಯ ದೈಹಿಕ ಕಸರತ್ತಿನ ಚಟುವಟಿಕೆಗಳು ನಡೆಡು ಅಲ್ಲಿ ಗೆದ್ದವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿದ ನಂತರ ಎಲ್ಲರು ತಮ್ಮ ಗ್ರಾಮ ದೇವತೆಯ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಈ ಬಾರಿ ಮಳೆ ಚೆನ್ನಾಗಿ ಆಗಿ ಬೆಳೆ ಸುಭಿಕ್ಷವಾಗುವಂತಾಗಲಿ ಎಂದು ಬೇಡಿಕೊಳ್ಳುತ್ತಾರೆ.

ಈ ಕಾರ ಹುಣ್ಣಿಮೆ ಮುಗಿದ ನಂತರವೇ ಮಳೆಗಾಲ ಆರಂಭವಾಗುವುದನ್ನು ನಮ್ಮ ವರ ಕವಿ ಬೇಂದ್ರೆಯವರೂ ಸಹಾ ತಮ್ಮ ಮೇಘದೂತ ಕವನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.

ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ

kara5

ರೈತರ ಹೆಗಲಿಗೆ ತಮ್ಮ ಹೆಗಲು ಕೊಟ್ಟು ರೈತನ ಜೀವನಕ್ಕಾಗಿ ತಮ್ಮ ಜೀವ ತೇಯುವ ಮೂಕ ಪ್ರಾಣಿಗಳಾದ ಎತ್ತುಗಳು ದೇವರು ಇದ್ದ ಹಾಗೆ‌. ಹಾಗಾಗಿ ಅವುಗಳನ್ನು ಕಾರ ಹುಣ್ಣಿಮೆಯ ದಿನದಂದು ಅವುಗಳನ್ನು ಸಿಂಗರಿಸಿ, ಪೂಜೆ ಮಾಡಿ ಸಂಭ್ರಮಿಸುವ ಒಂದು ರೀತಿಯ ಜನಪದ ಸೊಗಡಿನ ಹಬ್ಬವೇ ಕಾರ ಹುಣ್ಣಿಮೆ ಎಂದರೂ ತಪ್ಪಾಗಲಾರದು. ಹಳೇಮೈಸೂರಿನ ಕಡೆ ಸಂಕ್ರಾತಿಯ ದಿನ ಇದೇ ರೀತಿ ದನಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಆಚರಣೆಗಳು ಬೇರೆ ಬೇರೆ ದಿನಗಳಾದರೂ ಸಡಗರ ಸಂಭ್ರಮ ಮತ್ತು ಧ್ಯೇಯ ಒಂದೇ ಆಗಿ ಈ ರೀತಿಯ ಹಬ್ಬಗಳು ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಗ್ರಾಮ ಗ್ರಾಮಗಳಲ್ಲಿ ಸೌಹಾರ್ಧತೆಯನ್ನು ಮೂಡಿಸುವುದರಲ್ಲಿ ಸಹಕಾರಿಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಎತ್ತುಗಳ ಬದಲಾಗಿ ಟ್ರಾಕ್ಟರ್ಗಳು ಎಲ್ಲೆಡೆಯಲ್ಲಿಯೂ ಹೇರಳವಾಗಿರುವುದರಿಂದ ಎತ್ತುಗಳೇ ಇಲ್ಲದೇ, ಈ ಕಾರಹುಣ್ಣಿಮೆಯನ್ನು ಹೇಗೆ ಆಚರಿಸುತ್ತಾರೆ ಎಂಬ ಜಿಜ್ಞಾಸೆ ಮೂಡಿದರೆ, ನಮ್ಮ ಹಿರಿಯರೂ ಇಂತಹ ಪರಿಸ್ಥಿತಿಯನ್ನು ಅಂದೇ ಊಹಿಸಿ ಅದಕ್ಕೂ ಒಂದು ಪರಿಹಾರವನ್ನು ಸೂಚಿಸಿದ್ದಾರೆ. ಕಾರ ಹುಣ್ಣಿಮೆಗೂ ಮುಂಚೆ ಊರಿನ ಕುಂಬಾರರು ಊರ ಕೆರೆಯಿಂದ ಸಾಕಷ್ಟು ಜೇಡಿ ಮಣ್ಣನ್ನು ತಂದು ಅದನ್ನು ಹಸನು ಮಾಡಿ ಅದರಿಂದ ಮುದ್ದಾದ ಎತ್ತುಗಳನ್ನು ಮಾಡಿ ಅವುಗಳನ್ನು ಚೆನ್ನಾಗಿ ಒಣಗಿಸಿಡುತ್ತಾರೆ. ಕೆಲವಡೆ ಅದಕ್ಕೆ ಬಣ್ಣಗಳಿಂದ ಸಿಂಗರಿಸಿವುದೂ ಉಂಟು.

kara7

ಹಬ್ಬದ ಹಿಂದಿನ ದಿನ ಊರಿನ ಮನೆಗಳಿಗೆ ಹೋಗಿ ಯಾರ ಮನೆಯಗಳಲ್ಲಿ ಎತ್ತುಗಳು ಇರುವುದಿಲ್ಲವೂ ಅವರೆಲ್ಲರಿಗೂ ಮಣ್ಣೆತ್ತುಗಳ ಜೋಡಿಯನ್ನು ಕೊಡುವ ಸಂಪ್ರದಾಯವಿದೆ. ಈ ರೀತಿಯಾಗಿ ಪಡೆದ ಜೋಡೆತ್ತುಗಳಿಗೆ, ಮುಂಗಾರು ಮತ್ತು ಹಿಂಗಾರು ಎಂದು ಹೆಸರಿಟ್ಟು ಅವುಗಳನ್ನು ಭಕ್ತಿಯಿಂದ ಪೂಜೆ ಮಾಡಿ ಮಾರನೆಯ ದಿನ ನೀರಿನಲ್ಲಿ ವಿಸರ್ಜಿಸುತ್ತಾರೆ. ಮಣ್ಣೆತ್ತುಗಳನ್ನು ಮಾಡಿಕೊಟ್ಟ ಕುಂಬಾರರಿಗೆ ಹಿಂದೆಲ್ಲಾ ಯಥಾ ಶಕ್ತಿ ಧನ ಧಾನ್ಯಗಳನ್ನು ನೀಡುವ ಪದ್ದತಿ ಇದ್ದು ಈಗೆಲ್ಲಾ ಹಣವನ್ನೇ ನೀಡುತ್ತಾರೆ. ಈ ರೀತಿಯಾಗಿ ಗುಡಿ ಕೈಗಾರಿಕೆಗೂ ಒತ್ತು ನೀಡುವುದನ್ನು ನಮ್ಮ ಹಿಂದಿನವರು ಹಬ್ಬಗಳ ಮೂಲಕ ರೂಢಿಗೆ ತಂದಿರುವುದು ಗಮನಾರ್ಹವಾಗಿದೆ.

ಕಾರಹುಣ್ಣಿಮೆ ಮತ್ತು ನಾಗಪಂಚಮಿ ಹಬ್ಬಗಳಿಗೆ ಮಣ್ಣಿನ ಎತ್ತುಗಳು ಮತ್ತು ಮಣ್ಣಿನ ನಾಗಪ್ಪಗಳನ್ನು ಮಾಡುತ್ತಿದ್ದ ಕುಂಬಾರರಿಗೆ ಇತ್ತೀಚಿಗೆ ಬಂದಿರುವ ಪ್ಲಾಸ್ಟಿಕ್ ಬೊಂಬೆಗಳು ಬಹಳವಾಗಿ ತೊಂದರೆ ಕೊಡುತ್ತಿದೆಯಾದರೂ ಬಹಳಷ್ಟು ಹಿರಿಯರು ಇಂದಿಗೂ ಪ್ಲಾಸ್ಟಿಕ್ ಬೊಂಬೆಗಳನ್ನು ಬಳಸದೇ ಮಣ್ಣಿನ ಗೊಂಬೆಗಳಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯವಾಗಿದೆ.

ಬೇಸಿಗೆ ಕಳೆದು ಮುಂಗಾರು ಬರುವ ಮುನ್ನವೇ ಬರುವ ವೈಶಿಷ್ಟ್ಯ ಪೂರ್ಣ ಕಾರ ಹುಣ್ಣಿಮೆಯ ಹಾರ್ಧಿಕ ಶುಭಾಷಯಗಳು. ಮುಂಗಾರಿಗೆ ಮುನ್ನ ಬಿದ್ದ ಒಂದೆರಡು ಹದವಾದ ಮಳೆಯಲ್ಲಿ ಇದೇ ಎತ್ತುಗಳೊಂದಿಗೆ ಹೊಲವನ್ನು ಉತ್ತಿ ಹದ ಮಾಡಿ ಬಿತ್ತಿದ ನಂತರ ತಮ್ಮೊಂದಿಗೆ ದುಡಿದ ಮೂಕ ಜೀವಿಗಳಿಗೆ ಕೃತಜ್ಞತಾಪೂರ್ವಕವಾಗಿ ಈ ರೀತಿಯ ಹಬ್ಬವನ್ನು ಆಚರಿಸಿ ಅನಂತರದ ದಿನಗಳಲ್ಲಿ ಕೆಲಕಾಲ ಅವುಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ಈ ಸುಂದರ ಹಬ್ಬಗಳ ಮೂಲಕ ಮನುಷ್ಯ ಮತ್ತು ಪಶು ಪಕ್ಷಿಗಳ ಅನ್ಯೋನ್ಯ ಅವಿನಾಭಾವ ಸಂಬಂಧವನ್ನು ಕಲ್ಪಿಸಿಕೊಟ್ಟ ನಮ್ಮ ಹಿರಿಯರಿಗೆ ಎಷ್ಟು ನಮಿಸಿದರೂ ಸಾಲದು. ಇಂದು ಎತ್ತುಗಳ ಜಾಗದಲ್ಲಿ ಟ್ರಾಕ್ಟರ್ ಬಂದು ಕೆಲಸವನ್ನು ಸುಗಮಗೊಳಿಸಿದ್ದರೂ ಅದರಿಂದ ಆಗುವ ಪರಿಣಾಮಕ್ಕಿಂತ ಹಾನಿಕಾರಕವೇ ಹೆಚ್ಚು. ಟ್ರಾಕ್ಟರ್ ಸಗಣಿ ಹಾಕೋದಿಲ್ಲ. ಎತ್ತು ಹೊಗೆ ಉಗುಳುವುದಿಲ್ಲ ಎನ್ನುವುದು ನಮ್ಮ ಇಂದಿನ ಕೃಷಿ ಚಟುವಟಿಕೆಗಳಿಗೆ ಎಷ್ಟು ಮಾರ್ಮಿಕವಾಗಿದೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಅನ್ನದಾತ ಸುಖೀ ಭವ

ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಯವರು ಬರೆದಿರುವ ಈ ಪದ್ಯವನ್ನು ನಮ್ಮ ಒಂದನೇ ತರಗತಿಯಲ್ಲಿ ನಲವತ್ತೈದು ವರ್ಷಗಳ ಹಿಂದೆ ಓದಿದ್ದರೂ ಇನ್ನೂL pm ಹಚ್ಚ ಹಸಿರಾಗಿಯೇ ನಮ್ಮೆಲ್ಲರ ಮನಗಳಲ್ಲಿ ಅಚ್ಚಳಿಯದೇ ಉಳಿದಿದೆ.

ಇವನೇ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸಮನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು

ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

ನಮ್ಮ ರೈತನ ಬದುಕು ಹಸನಾಗಿರಲೆಂದೇ ಸ್ವಾತಂತ್ರ್ಯ ಬಂದ ನಂತರ ಎಲ್ಲಾ ಸರ್ಕಾರಗಳೂ ಅನೇಕ ಸವಲತ್ತುಗಳನ್ನು ನೀಡುತ್ತಲೇ ಇದೆ. ರೈತರಿಗೆ ಪಂಪ್ ಸೆಟ್ಟುಗಳಿಗೆ ಉಚಿತ ನೀರು, ಸಬ್ಸಿಡಿ ದರದಲ್ಲಿ ರಸಗೊಬ್ಬರ, ಬಿತ್ತನೇ ಬೀಜಗಳು ಕೃಷಿ ಉಪಕರಣಗಳು, ಕೃಷಿ ಉತ್ಪನ್ನಗಳಿಗೆ ತೆರಿಗೆ ಉತ್ಪನ್ನಗಳು ಹೀಗೆ ಎಲ್ಲವನ್ನೂ ನೀಡುತ್ತಿದ್ದರೂ ಇನ್ನೂ ನಮ್ಮ ರೈತನ ಬದುಕು ದಿನದಿಂದ ದಿನಕ್ಕೆ ಹದಗೆಡುತ್ತಿದೆಯೇ ಹೊರತು ಹಸನಾಗಿಯೇ ಇಲ್ಲದಿರುವುದು ವಿಪರ್ಯಾಸವೇ ಸರಿ.

ಇದಕ್ಕೆ ಕಾರಣವೇನೆಂದು ಹುಡುಕಲು ಹೊರಟಾಗ ತಿಳಿದು ಬಂದ ಕುತೂಹಲಕಾರಿ ವಿಷಯವೆಂದರೆ ಅತೀ ವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಸರಿಯಾದ ಬೆಳೆ ಬಾರದಿರುವುದು ಒಂದು ಸಂಗತಿಯಾದರೇ, ಸೂಜಿಯಿಂದ, ವಿಮಾನದವರೆಗೂ ಪ್ರತಿಯೊಂದಕ್ಕೂ ನಿಗಧಿತವಾದ ಬೆಲೆ ಇದ್ದರೆ ರೈತರ ಬೆಳೆಗೆ ಮಾತ್ರಾ ನಿಗಧಿತ ಬೆಲೆ ಇಲ್ಲದೇ ಪ್ರತೀಬಾರಿಯೂ ಏರೂ ಪೇರಾಗುವುದೂ ಮತ್ತೊಂದು ಕಾರಣ. ಇದಕ್ಕಿಂತಲೂ ಮತ್ತೊಂದು ಅಘಾತಕಾರಿ ಅಂಶವೆಂದರೆ, ರೈತರು ತಾವು ಬೆಳೆದ ವಸ್ತುಗಳನ್ನು ಮಾರಾಟ ಮಾಡಲು ಅವರಿಗೆಂದೇ APMC ಮಾರುಕಟ್ಟೆ ಆರಂಭಿಸಿದರೂ, ನೇರವಾಗಿ ಮಾರಲು ಸಾಧ್ಯವಾಗದೇ, ದಳ್ಳಾಳಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಅವರು ಹೇಳಿದ್ದೇ ದರ ಕೊಟ್ಟಷ್ಟೇ ಹಣಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾದ ಪರಿಸ್ಥಿತಿಯೇ ರೈತನ ಈ ಬಡತನಕ್ಕೆ ಸಾಕ್ಷಿಯಾಗಿತ್ತು.

ಇದನೆಲ್ಲವನ್ನೂ ಗಮನಿಸಿದ ಪ್ರಸಕ್ತ ಕೇಂದ್ರ ಸರ್ಕಾರ ರೈತರ ಪ್ರಸ್ತುತ ಇದ್ದ ಕೃಷಿ ನೀತಿಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಇರುವ ಕೃಷಿ ಪದ್ದತಿಯಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರದೇ, ರೈತರಿಗೆ ನೇರವಾಗಿ ಅನುಕೂಲವಾಗಲೆಂದೇ, ಒಂದೆರಡು ಹೊಸಾ ಪದ್ದತಿಗಳನ್ನು ಜಾರಿಗೆ ತಂದು, ರೈತ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆಯನ್ನು ನಿಗಧಿ ಪಡಿಸಿತಲ್ಲದೇ, ರೈತರು ತಮ್ಮ ಬೆಳೆಗಳ ಮಾರುಕಟ್ಟೆಗೆ APMC ಮಾರುಕಟ್ಟೆಯ ದಲ್ಳಾಳಿಗಳ ಹೊರತಾಗಿಯೂ, ತಮ್ಮಿಷ್ಟ ಬಂದವರಿಗೆ ಮತ್ತು ತಮ್ಮ ಅನುಕೂಲದ ಬೆಲೆಗೆ ಯಾರು ಕೊಂಡು ಕೊಳ್ಳುತ್ತಾರೋ ಅಂತಹವರಿಗೂ ಮಾರಾಟ ಮಾಡುವಂತಹ ಮುಕ್ತ ಅವಕಾಶವನ್ನು ತಂದು ಕೊಡುವ ಮೂಲಕ ರೈತನ ಹಿತವನ್ನು ಕಾಪಾಡುವುದಕ್ಕೆ ಮುಂದಾಯಿತು.

ಈ ಬದಲಾದ ಕೃಷಿ ನೀತಿ ಕೇಂದ್ರ ಸರ್ಕಾರದ ಸಂಸತ್ತಿನ ಎರಡೂ ಮನೆಗಳಲ್ಲಿ ಚರ್ಚೆಗೆ ಒಳಪಟ್ಟು ಸಾಂಸದರ ಬಹುಮತದಿಂದ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಧಿಕೃತ ಮುದ್ರೆ ಬೀಳುತ್ತಿದ್ದಂತೆಯೇ ದೇಶದ ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಮೂಲ ಆದಾಯಕ್ಕೇ ಬಾರೀ ಪೆಟ್ಟು ಬಿದ್ದಂತಾಗಿ ಒಮ್ಮಿಂದೊಮ್ಮೆಲೇ ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದವು. ಎಲ್ಲದಕ್ಕಿಂತಲೂ ಅಚ್ಚರಿಯೆನ್ನುವಂತೆ ಸರ್ಕಾರ ಅಂಗ ಪಕ್ಷವಾಗಿದ್ದ ಅಕಾಲೀ ದಳ ಶಿರೋಮಣಿ ಮೊದಲು ಮುಗಿಬಿದ್ದು ಈ ಕೃಷಿ ನೀತಿಯನ್ನು ಬದಲಿಸದೇ ಹೋದಲ್ಲಿ ಸರ್ಕಾರದಿಂದ ಹೊರಬೀಳುತ್ತೇವೆ ಎಂಬ ಬೆದರಿಕೆ ಹಾಕಿತು. ಇಂತಹ ಗೊಡ್ಡು ಬೆದರಿಕೆಗಳಿಗೆ ಸರ್ಕಾರ ಬಗ್ಗದಿದ್ದಾಗ ವಿಧಿ ಇಲ್ಲದೇ ಸರ್ಕಾರ ಮತ್ತು ಎನ್.ಡಿ.ಎ ದಿಂದ ಹೊರಬಿದ್ದಿತು. ಇನ್ನು ಕೇವಲ ಈರುಳ್ಳಿಯ ಸಗಟು ಸಂಗ್ರಹಣೆ ಮತ್ತು ದಲ್ಲಾಳಿತನದಿಂದಲೇ, ಸಾವಿರ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತಿದ್ದ ಮಹಾರಾಷ್ಟ್ರದ ಶರದ್ ಪವಾರ್ ಕುಟುಂಬಕ್ಕೆ ಮರ್ಮಘಾತವಾಗಿದ್ದಂತೂ ಸುಳ್ಳಲ್ಲ.

ರಾಜ್ಯದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಸೋತು ಸೊರಗಿರುವ ಕಾಂಗ್ರೇಸ್ ಪಕ್ಷಕ್ಕೆ ಶತ್ರುವಿನ ಶತ್ರು ಮಿತ್ರ ಎಂಬ ಗಾದೆಯಂತೆ ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಕಾಯುತ್ತಿದ್ದ ಕಾಂಗ್ರೇಸ್, ಕಮ್ಯೂನಿಷ್ಟರು, ತುಕ್ಡೇ ತುಕ್ಡೇ ಗ್ಯಾಂಗ್ ಜೊತೆ CAA & NRC ವಿರುದ್ಧ ದೇಶಾದ್ಯಂತ ಹೋರಾಟನಡೆಸಿ, ಕಡೆಗೆ ದೆಹಲಿಯ ಷಹೀನ್ ಬಾಗಿನಲ್ಲಿ ತಿಂಗಳಾನುಗಟ್ಟಲೆ ದಿನಗೂಲಿ ಮತ್ತು ಬಿರ್ಯಾನಿಯಾಧಾರಿತ ಹೆಣ್ಣು ಹೋರಾಟಗಾರರನ್ನು ಬಿಟ್ಟು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಇತ್ತೀಚಿಗೆ ಸಿದ್ದರಾಮಯ್ಯನವರು ಹೇಳಿದ ಮೊಘಲರ ಕಲಬೆರೆಕೆಯವರು ಸೇರಿ ಒಂದಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಹುನ್ನಾರ ಮಾಡತೊಡಗಿದರು.

ದೆಹಲಿಯ ಹಿಂದೂಗಳು ಬಹಿರಂಗವಾಗಿ ಛತ್ ಪೂಜಾ ನಡೆಸಲು ದೆಹಲಿ ಸರ್ಕಾರದ ಅನುಮತಿ ಕೇಳಿದಾಗ ಕರೋನಾ ನೆಪವೊಡ್ಡಿ ಅನುಮತಿ ನೀಡದ ಕೇಜ್ರೀವಾಲ್ ಸರ್ಕಾರವೂ, ತನ್ನ ಪರಮ ಶತ್ರು ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ಹುನ್ನಾರಕ್ಕೇ ತುಪ್ಪ ಎರೆಯದಿದ್ದರೇ ಹೇಗೇ? ತಮ್ಮ ಸರ್ಕಾರ ರೈತರ ಪರವಾಗಿದೆ ಎಂಬ ಬಹಿರಂಗ ಹೇಳಿಕೆ ಕೊಟ್ಟಿದ್ದಲ್ಲದೇ, ಲಕ್ಷಾಂತರ ರೈತರು ಒಟ್ಟಿಗೆ ದೆಹಲಿಗೆ ಬರಲು ಒಪ್ಪಿಗೆ ನೀಡಿದ್ದಲ್ಲದೇ, ಪಂಜಾಬ್‌ ಹಾಗೂ ಹರ್ಯಾಣದ ರೈತರು ದಿಲ್ಲಿ ಗಡಿ ಭಾಗದ ಸಂಘು, ತಕ್ರಿ ಹಾಗೂ ಗಾಝಿಪುರದಲ್ಲಿ ಪ್ರತಿಭಟನೆ ಕುಳಿತಿರುವವರಿಗೆ ಚಳಿಯ ನೆಪವೊಡ್ಡಿ ಬಂದವರಿಗೆಲ್ಲರಿಗೂ ದೆಹಲಿ ಸರ್ಕಾರದ ಪರವಾಗಿ ಹೊದಿಕೆಗಳನ್ನು ಒದಗಿಸಲು ಮುಂದಾಯಿತು. ಛತ್ ಪೂಜೆಯಲ್ಲಿದ್ದ ಕರೋನಾ ನೆಪ ಸಾಮೂಹಿಕವಾಗಿ ಛಾದರ್ ಗಳನ್ನು ಒದಗಿಸಿದಾಗ ಬರಲಿಲ್ಲ ಎನ್ನುವುದು ಇಲ್ಲಿ ಗಮನಿಸ ಬೇಕಾದ ವಿಷಯ.

ನಿಜವಾದ ರೈತ ತಾನು ಬೆಳೆದಿದ್ದ ಬೆಳೆಯನ್ನು ಮಾರಲು ಓಡಾಡುತ್ತಿದ್ದಾಗ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ರೈತರನ್ನು ಹೇಗೆ ಕರೆತರುವುದು ಎಂದು ಯೋಚಿಸುತ್ತಿರುವಾಗಲೇ ನೆರವಿಗೆ ಬಂದದ್ದು ಅದೇ ಬಾಂಧವರೇ. ಸಿಖ್ಖರು ಉದ್ದುದ್ದ ಮೀಸೆ ಮತ್ತು ಗಡ್ಡವನ್ನು ಬಿಟ್ಟು ತಲೆಯ ಮೇಲೆ ಪಗಡಿ ಧರಿಸಿರುತ್ತಾರೆ. ಇನ್ನು ಬಾಂಧವರೂ ಉದ್ದುದ್ದ ಗಡ್ಡ ಬಿಟ್ಟಿರುತ್ತಾರೆ. ಅವರ ತಲೆಯ ಮೇಲಿರುವ ಸೊಳ್ಳೆ ಪರೆದೇ ಟೋಪಿಯ ಬದಲು ಪಗಡೀ ಧರಿಸಿದರೇ ಸಿಖ್ಖರಾಗಿ ಬಿಡುತ್ತಾರೆ ಎಂಬ ಉಪಾಯ ಅದಾರು ಕೊಟ್ಟರೋ ತಿಳಿಯದು. ಈ ಉಪಾಯ ಎಲ್ಲರಿಗೂ ಇಷ್ಟವಾಗಿ ಅದನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟರು. ಅಪರಾಧಿ ಎಷ್ಟೇ ಚಾಣಾಕ್ಷನಾದರೂ, ಪ್ರತೀ ಅಪರಾಧ ನಡೆಸಿದ ನಂತರ ಒಂದಲ್ಲಾ ಒಂದು ಕುರುಹನ್ನು ಬಿಟ್ಟೇ ಹೋಗಿರುತ್ತಾನೆ ಎನ್ನುವಂತೆ, ಇಲ್ಲೂ ಸಹಾ ಕೇವಲ ಉದ್ದನೆ ಗಡ್ಡ ಮತ್ತು ತಲೆ ಮೇಲೆ ಪಗಡಿ ಧರಿಸಿದರೇ ಸಿಖ್ಖರಾಗುವುದಿಲ್ಲ. ಸಿಖ್ಖರ ಗಡ್ಡಕ್ಕೆ ತಕ್ಕಂತೆ ಅನುಗುಣವಾಗಿಯೇ ಗಿರಿಜಾ ಮೀಸೆ ಇರುತ್ತದೆ. ಆದರೆ ಬಾಂಧವರಿಗೆ ಕೇವಲ ಗಡ್ಡ ಇರುತ್ತದೆ ಮೀಸೆ ಇರುವುದಿಲ್ಲ ಎಂಬ ಸತ್ಯವನ್ನು ಮರೆತ ಪರಿಣಾಮ ನಕಲೀ ಹೋರಾಟಗಾರರು ಪೋಲಿಸರಿಗೆ ಸುಲಭವಾಗಿ ಸಿಕ್ಕಿ ಬಿದ್ದರು.

ಇನ್ನು ಬಾಡಿಗೆ ಭಂಟರಿಗೆ ಸುಪಾರಿ ಕೊಟ್ಟು ತಾವು ಸಿಕ್ಕಿ ಕೊಳ್ಳಬಾರದೆಂದು ಊರು ಬಿಟ್ಟು ಹೋಗುವ ಅಪರಾಧಿಗಳಂತೆ, ಪಂಜಾಬಿನ ಕಾಂಗ್ರೇಸ್ ಸರ್ಕಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತೆ ಛೂ ಬಿಟ್ಟು, ಆರೋಗ್ಯ ಮತ್ತು ಕೆಟ್ಟ ಹವಾಮಾನದ ಕುಂಟು ನೆಪವೊಡ್ಡಿ ಅಮ್ಮಾ ಮತ್ತು ಮಗ ಸದ್ದಿಲ್ಲದೇ ಗೋವಾ ಸೇರಿಕೊಂಡು ಪ್ರತಿಭಟನೆಗೂ ನಮಗೂ ಯಾವ ಸಂಬಂಧವೇ ಇಲ್ಲ ಎಂದು ತೋರಿಸಲು ಹೊರಟರೂ ಕಾಂಗ್ರೇಸ್ಸಿನ ಬಿರ್ಯಾನಿಯ ಘಮಲು ದೆಹಲಿಯಿಂದ ಗೋವಾವರೆಗೂ ಹಬ್ಬಿದ್ದಂತೂ ಸುಳ್ಳಲ್ಲ.

ಎಲ್ಲಾ ಹೋರಾಟದಲ್ಲೂ ಅದೇ ಬಾಡಿಗೆ ಓಲಾಟಗಾರಿಗೆ ಬೇರೆ ಬೇರೆ ದಿರಿಸಿನಲ್ಲಿ ಕಳುಹಿಸಿದರೂ, ಹುಟ್ಟು ಗುಣ ಸುಟ್ಟರೂ ಬಿಡದು ಎನ್ನುವಂತೆ, ಕೇಂದ್ರ ಸರ್ಕಾರದ ಕೃಷಿ ನೀತಿಯ ವಿರುದ್ಧ ರೈತರ ಹೋರಾಟದಲ್ಲಿ ಯಾವಾಗ CAA & NRC , Article 370 & 35A ಭಿತ್ತಿ ಫಲಕಗಳು ಕಂಡು ಬಂದ ಕೂಡಲೇ ಇಡೀ ದೇಶಕ್ಕೆ ಈ ನಕಲೀ ಓಲಾಟಗಾರು, ನಿಜವಾದ ರೈತರಲ್ಲ. ಅವರೆಲ್ಲರೂ ಬಿರ್ಯಾನಿ ಬಾಂಧವರು ಎಂಬುದು ಖಚಿತವಾಯಿತು. ಇದಲ್ಲದೇ ಎಂಭತ್ತರ ದಶಕದಲ್ಲಿ ಇದೇ ಕಾಂಗ್ರೇಸ್ಸಿನ ಅಂದಿನ ಅದಿದೇವತೆ ಇಂದಿರಾಗಾಂಧಿ ಪಂಜಾಬಿನಲ್ಲಿ ಬೆಳೆಸಿದ್ದ ಬಿಂದ್ರನ್ ವಾಲೆ ಎಂಬ ಬಂಟ ಸಿಖ್ಖರ ಪವಿತ್ರ ಗುರುದ್ವಾರ ಅಮೃತಸರದ ಸ್ವರ್ಣಮಂದಿರದಲ್ಲೇ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಾ, ಖಲಿಸ್ತಾನದ ಬೇಡಿಕೆ ಒಡ್ಡುತ್ತಾ ಸರ್ಕಾರಕ್ಕೇ ಮುಳ್ಳಾದನೋ ಅಗ ಅದೇ ಇಂದಿರಾಗಾಂಧಿ Operation Blue Star ಹೆಸರಿನಲ್ಲಿ ಗುರುದ್ವಾರದ ಮೇಲೆ ವಾರಗಟ್ಟಲೆ ಧಾಳಿ ನಡೆಸಿ ಹತ್ತಿಕ್ಕಿದ್ದ ಖಲಿಸ್ತಾನ್ ಬೇಡಿಕೆಗೆ ಈಗ ಅದೇ ಕಾಂಗ್ರೇಸ್ ಪರೋಕ್ಷವಾಗಿ ವೇದಿಕೆ ಒದಗಿಸುತ್ತಿರುವುದು ನಿಜಕೂ ದೇಶವಿರೋಧಿ ಚಟುವಟಿಕೆಯಾಗಿದೆ.

ಇನ್ನು ಮೊನ್ನೆ ಕೇಂದ್ರ ಸರ್ಕಾರ ಕೇವಲ 30 ರೈತ ಸಂಘಟನೆಗಳನ್ನು (ಉಳಿದ 800 ಕ್ಕೂ ಹೆಚ್ಚಿನ ರೈತ ಸಂಘನೆಗಳು ಇಂತಹ ಅನಾವಶ್ಯಕ ಪ್ರತಿಭಟನೆಯತ್ತ ತಲೆ ಹಾಕದೇ ತಮ್ಮ ಕೃಷಿ ಚಟುವಟಿಕೆಗಳಲ್ಲಿ ನಿರತವಾಗಿದೆ) ಇನ್ನು ರೈತರಿಗೆ ಮೋಸವಾಗಿದೆ ಎಂದು ಪ್ರತಿಭಟನೆ ಮಾಡಲು ಬಂದಿರುವರಾರು ನಿರ್ಗತಿಕ ರೈತರಾಗಿರದೇ ಬಹುತೇಕರು, ಐಶಾರಾಮಿ ಕಾರ್ ಗಳಾದ Nissa, Fartunure, Tyota ಗಳಲ್ಲಿ ಬಂದರೆ, ಇನ್ನೊಬ್ಬರು ನೇರವಾಗಿ ಹೆಲಿಕ್ಯಾಪ್ಟರ್ನಲ್ಲಿ ಬಂದದ್ದಾರೆ. ಜನ ಸಾಮಾನ್ಯರು ಹತ್ತು ಹದಿನೈದು ಸಾವಿರದ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವುದಕ್ಕೇ ಹಿಂದೂ ಮುಂದು ನೋಡುತ್ತಿರುವಾಗ ಇಲ್ಲಿ ಬಂದಿರುವ ಅನೇಕ ರೈತರುಗಳ ಕೈಯಲ್ಲಿ ಸುಮಾರು ಒಂದು ಲಕ್ಷ ಬೆಲೆಬಾಳುವ ಸ್ಮಾರ್ಟ್ ಫೋನ್ಗಳು ಓಡಾಡುತ್ತಿವೆ ಎಂದರೆ ಅವರೆಂತಹ ಹೊಟ್ಟೇ ತುಂಬಿದ ರೈತರು ಎಂದು ಅರ್ಥವಾಗುತ್ತದೆ. ಸರ್ಕಾರದ ಅಧಿಕಾರಿಗಳು ಮತ್ತು ಮಂತ್ರಿಗಳ ಜೊತೆ ಮಾತು ಕತೆಗೆ ನಡೆಯುತ್ತಿದ್ದ ತಿಳಿದು ಬಂದ ಆಶ್ವರ್ಯಕರವಾದ ವಿಷವೇನೆಂದರೆ ಆ 30 ಸಂಘಟನೆಗಳ ನಾಯಕರುಗಳಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿಲ್ಲದೆ ಹೆಚ್ಚಿನವರಿಗೆ ತಾವು ಯಾವುದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಮತ್ತು ಆವರ ಆಕ್ಷೇಪಕ್ಕೆ ಇರುವ ಪರಿಹಾರವೇನು ಎಂಬುದೇ ತಿಳಿಯದಿರುವನ್ನು ಅರಿತ ಸರ್ಕಾರ ಮತ್ತೆ ಎರಡು ದಿನಗಳ ನಂತರ ನಿಮ್ಮೊಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ನಿಮ್ಮ ಆಕ್ಷೇಪಕ್ಕೆ ಸೂಕ್ತವಾದ ಉಪಾಯವನ್ನು ಕಂಡು ಹಿಡಿದುಕೊಂಡು ಬನ್ನಿ ಎಂದು ತಿಳಿಹೇಳಿ ಕಳುಹಿಸಿದೆ.

ಇದೆಲ್ಲಾ ಗಮನಿಸುತ್ತಿದ್ದಲ್ಲಿ ಈ ಹೋರಾಟ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರು ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ನಕಲೀ ರೈತರನ್ನು ಭಾವಿಗೆ ದೂಡಿ ಆಳ ನೋಡುವಂತಿದೆ. ಇನ್ನು ಬಾಂಧವರು ತಮ್ಮ ಬಂಧುಗಳಿಗೆ ಬಿರ್ಯಾನಿ ಕೊಡುತ್ತಿದ್ದರೆ, ಕೇಜ್ರೀವಾಲ್ ಈ ನಕಲೀ ಓಲಾಟಾಗಾರರಿಗೆ ಹೊದಿಕೆಗಳನ್ನು ಕೊಡುತ್ತಾ, ಶಹೀನ್ ಭಾಗ್ -1ರಲ್ಲಿ ಪ್ರವರ್ಧಮಾನಕ್ಕೆ ಬಂದ ಬಲ್ಕಿಸ್ ಬಾನೂ ಎಂಬ ವಯೋವೃದ್ದ ಮಹಿಳೆಯನ್ನು ಕರೆತಂದು ಈ ಓಲಾಟವನ್ನು ಶಹೀನ್ ಭಾಗ್-2 ಮಾಡುವುದರಲ್ಲಿ ನಿರತವಾಗಿದೆ.

ಈ ರೀತಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ವಿವಿಧ ವೇಷಗಳಲ್ಲಿ ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಈ ನಕಲೀ ಓಲಾಟಗಳು ಸದ್ಯಕ್ಕಂತೂ ಸಫಲವಾಗದೇ, ತಮ್ಮ ತಮ್ಮಲ್ಲಿನ ಒಳಜಗಳಗಳಿಂದಲೇ ವಿಫಲವಾಗುವುದಲ್ಲದೇ, ಜನರ ಮುಂದೆ ಇವರ ಆಟೋಟಗಳೆಲ್ಲವೂ ಒಂದೊಂದೇ ಬಯಲಾಗುತ್ತಾ ಹೋಗಿ ಕಡೆಗೆ ಬೆತ್ತಲಾಗಿ ನಿಲ್ಲುವುದಂತೂ ನಿಚ್ಚಳವಾಗಿದೆ ಎನ್ನುವುದಂತೂ ಸತ್ಯ.

ರೈತ ದೇಶದ ಬೆನ್ನುಲುಬು. ಈ ನಕಲೀ ಓಲಾಟವನ್ನು ಎಲ್ಲರಿಗೂ ತಿಳಿಯಪಡಿಸುವ ಮೂಲಕ, ಇಷ್ಟು ವರ್ಷಗಳ ಕಾಲ ಅಂತಹ ರೈತನ ಬೆನ್ನು ಹಿಡಿದ ಬೇತಾಳರಾಗಿದ್ದಂತಹ ಬಂಡವಾಳಶಾಹಿಗಳು ಮತ್ತು ದಲ್ಲಾಳಿಗಳ ಪಕ್ಕೆಲುಬು ಮುರಿಯುವ ಸುಸಂಧರ್ಭವನ್ನು ಸದುಪಯೋಗ ಪಡಿಸಿಕೊಳ್ಳೋಣ.

ಏನಂತೀರೀ?

ಎತ್ತುಗಳ ನಿಯತ್ತು

gana3ಕೂರೋನಾ ಲಾಕ್ ಡೌನ್ ಸಮಯದಲ್ಲಿ ತನ್ನೂರಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ಅಂಡಲೆಯುತ್ತಿದ್ದ ಸಾಫ್ಟ್‌ವೇರ್ ಇಂಜೀನಿಯರ್ ಒಬ್ಬ, ತನ್ನೂರಿನ ಎಣ್ಣೆ ತೆಗೆಯುವ ಗಾಣದಲ್ಲಿ ಎತ್ತುಗಳು ತಮ್ಮ ಪಾಡಿಗೆ ತಾವು ಸುತ್ತುತ್ತಿದ್ದರೆ, ರೈತನೊಬ್ಬ ಆರಾಮವಾಗಿ ನಿದ್ರಿಸುತ್ತಿದ್ದನ್ನು ನೋಡಿ ಆಶ್ಚರ್ಯ ಚಕಿತನಾದ.

ನಿದ್ರಿಸುತ್ತಿದ್ದ ರೈತನನ್ನು ಎಬ್ಬಿಸಿ, ಈ ಎತ್ತುಗಳು ಗಾಣವನ್ನು ಅರೆಯುವುದನ್ನು ನಿಲ್ಲಿಸಿದರೆ ನಿಮಗೆ ಹೇಗೆ ತಿಳಿಯುತ್ತದೇ?ಎಂದು ಕುತೂಹಲದಿಂದ ಕೇಳಿದ.

ರೈತ ಕೂಡಾ ಹಾಗೆಯೇ ಕಣ್ತೆರೆಯದೇ, ಸ್ಚಾಮೀ, ಎತ್ತುಗಳು ಸುತ್ತುವುದನ್ನು ನಿಲ್ಲಿಸಿದರೆ ಅವುಗಳ ಕತ್ತಿನಲ್ಲಿರುವ ಗಂಟೆಯ ಶಬ್ಧ ನಿಲ್ಲುತ್ತದೆ ಎಂದ.

gana2ಬುದ್ಧಿವಂತ ಸಾಫ್ಟ್ ವೇರ್ ಇಂಜೀನಿಯರ್ ಒಂದು ಕ್ಷಣ ಯೋಚಿಸಿ, ಅಕಸ್ಮಾತ್ ಈ ಎತ್ತುಗಳು ಒಂದೇ ಸ್ಥಳದಲ್ಲಿ ನಿಂತು ಕೇವಲ ಕುತ್ತಿಗೆಯನ್ನು ಮಾತ್ರಾ ಆಡಿಸುತ್ತಿದ್ದರೇ? ಎಂದ.

ಆಗ ರೈತ ಮತ್ತೇ ಅಷ್ಟೇ ನಿರ್ಲಿಪ್ತನಾಗಿ ನಮ್ಮ ಎತ್ತುಗಳ ನಿಯತ್ತು ನಿಮಗೇನು ಗೊತ್ತು? ಅವುಗಳು ನಿಮ್ಮಂತೆ ಮನೆಯಿಂದ ಕೆಲಸ ಮಾಡುವುದಿಲ್ಲ ಸ್ವಾಮಿ ಎಂದ. 😆😆😆😆😆

 

ಪ್ರಾಣಿಗಳೇ ಗುಣದಲಿ ಮೇಲು! ಮಾನವ ಅದಕಿಂತ ಕೀಳು

ಏನಂತೀರೀ?

ವಾಟ್ಸಾಪ್ಪಿನಿಂದ ಸ್ಪೂರ್ತಿ ಪಡೆದು ಬರೆದದ್ದು

ಮಲೆನಾಡಿನ ಮಳೆ

far1ಮಳೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳ್ರೀ ಇಳೆಯ ಕೊಳೆಯನ್ನೆಲ್ಲಾ ತೆಗೆದು ಹಾಕಿ ನಾಡಿಗೆ ಸಮೃದ್ಧಿಯನ್ನು ಕೊಡುವ ಪ್ರಾಕೃತಿಕ ಪ್ರಕ್ರಿಯೆ. ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವ ಪ್ರಕ್ರಿಯೆಯೇ ಮಳೆ . ಅಂತಹ ಮಳೆಗಾಗಿ ಬಾರದೇ ಭೂಮಿಯೆಲ್ಲಾ ಬಾಯ್ಬಿರಿದಿದ್ದರೆ, ತೆರೆದ ಬಾಯಿ ಮುಚ್ಚದೇ ಮೋಡಗಳತ್ತ ದಿಕ್ಕೆಟ್ಟು ನೋಡುತ್ತಿತ್ತಾನೆ ರೈತ. ಅಂತಹ ಸಮಯದಲ್ಲಿ ಆಗದಲ್ಲಿ ಕಾರ್ಮೋಡ ಕವಿದಾಗ ರೈತನಿಗೆ ಖುಷಿಯೋ ಖುಷಿ.

 

ಒಂದು ಹದ ಮಳೆ ಬೀಳುತ್ತಲೇ ರೈತನ ಮುಖದಲ್ಲಿ ಆಗೋ ಸಂತೋಷ ಬಣ್ಣಿಸಲಾಗದು. ನೇಗಿಲನ್ನು ಎತ್ತಿಕೊಂಡು ದನಗಳನ್ನು ಕಟ್ಟಿಕೊಂಡು ಅಚ್ಚುಕಟ್ಟಾಗಿ ಗಂಟಿಲ್ಲದಂತೆ ಆರಂಭ ಮಾಡಿ ಜಮೀನನ್ನು ಹದಗೊಳಿಸಿ, ಹಸನು ಗೊಳಿಸಿ, ಬೀಜ ಚೆಲ್ಲಿ ಅದು ಮೊಳಕೆಯೊಡೆದು ಪೈರಾದಾಗ ಒಟ್ಟಲು ಹಾಕಿ ಮನೆ ಮಂದಿಯೆಲ್ಲಾ ಸೇರಿ ನಾಟಿ ಮಾಡುತ್ತಾನೆ. ಕಾಲ ಕಾಲಕ್ಕೆ. ನೀರು ಹಾಯಿಸುತ್ತಾ, ಗೊಬ್ಬರ ಹಾಕುತ್ತಾ ತನ್ನ ಸ್ವಂತ ಮಕ್ಕಳನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತಾನೆ. ಹಾಕಿದ ಪರಿಶ್ರಮಕ್ಕೆ ತಕ್ಕಂತೆ ಫಸಲು ಬಂದರಂತೂ ಅವನ ಆನಂದ ಹೇಳತೀರದು.

ಇನ್ನೂ ಮಕ್ಕಳಿಗೆ ಮಳೆ ಬಂದರಂತೂ ಅಮಿತಾನಂದ. ಸುರಿಯುತ್ತಿರುವ ಮಳೆಯಲ್ಲಿಯೇ ಶಾಲೆಯ ಚೀಲವನ್ನು ನೇತು ಹಾಕಿಕೊಂಡು ಓಡೋಡಿ ಬರುತ್ತಿದ್ದರೆ, ಮಳೆಯಲ್ಲಿ ಎಲ್ಲಿ ತಮ್ಮ ಮಕ್ಕಳು ನೆನೆದು ನೆಗಡಿ ಕೆಮ್ಮು ಶೀತ ಬಂದು ಮಕ್ಕಳ ಆರೋಗ್ಯ ಹಾಳಾಗಿ ಬಿಡುತ್ತದೋ ಎಂದು ತಂದೆ ತಾಯಿಯರು ತಂದು ಕೊಂಡುವ ಕೊಡೆ. ಆ ಕೊಡೆಯಲ್ಲಿ ಅಪ್ಪ-ಮಗಾ, ಇಲ್ಲವೇ ಅಮ್ಮಾ-ಮಗಳು ಹೋಗುವುದನ್ನು ನೋಡುವುದಕ್ಕೇ ಆನಂದ.

ಒಮ್ಮೆ ಮನೆಗೆ ಹೋದ ತಕ್ಷಣ ಶಾಲಾ ಸಮವಸ್ತ್ರ ಬಿಚ್ಚಿ ಹಾಕಿ ಸಾಧಾರಣ ಉಡುಪು ಹಾಕಿಕೊಂಡು ಸುರಿಯುತ್ತಿರುವ ಮಳೆಯಲ್ಲಿ  ಇತರೇ ಮಕ್ಕಳೊಡನೆ ಆಟ ಆಡುವುದು ಇದೆಯಲ್ಲಾ ಅದರ ಮುಂದೆ ಕ್ರಿಕೆಟ್, ಪುಟ್ಪಾಲ್ ಟೆನ್ನಿಸ್ ವಾಲಿಬಾಲ್ ಗಳನ್ನು ನೀವಾಳಿಸಿ ಹಾಕಬೇಕು. ಬಾಲ್ಯದಲ್ಲಿ ಮಳೆ ಸ್ವಲ್ಪ ನಿಂತ ಕೂಡಲೇ ಮನೆಯಿಂದ ಶಾಲೆಯ ಪುಸ್ತಕದ ಹಾಳೆಯನ್ನು ಹರಿದು ತಂದು ಅದರಲ್ಲಿ ಹಾಳೆಯ ದೋಣಿಯನ್ನು ಮಾಡಿ ದೋಣಿಯ ಪಂದ್ಯವನ್ನು ಆಡ್ತಾ ಮಜ ಮಾಡ್ತಾ ಇದ್ದದ್ದು  ಇನ್ನೂ ಹಚ್ಚ ಹಸಿರಾಗಿಯೇ ಇದೆ

rainingಸರಿಯಾದ ಮಳೆ ನೋಡ್ಬೇಕು ಅಂದ್ರೇ ಮಲೆನಾಡಿಗೇ ಹೋಗ್ಬೇಕು. ಮಟ ಮಟ ಮಧ್ಯಾಹ್ನ ಧೋ ಎಂದು ಮಳೆ ಸುರಿಯಲು ಶುರುವಾದ್ರೇ ಇನ್ನು ನಿಲ್ಲುವುದು ಎಷ್ಟು ಹೊತ್ತೋ ಯಾರಿಗೆ ಗೊತ್ತು. ಹಾಗೆ ಸುರಿಯೋ ಮಳೆನ ಮನೆಯ ಹಜಾರದಲ್ಲಿ ಕುತ್ಕೊಂಡು ನೋಡೋ ಮಜಾ ಯಾವುದೇ ಮಲ್ಟೀ ಪ್ಲೆಕ್ಸಿನಲ್ಲಿ ಕುಳಿತು ರೋಮಾನ್ಸ್ ಮೂವಿನೋ ಇಲ್ವೇ ಆಕ್ಷನ್ ಸಿನಿಮಾ ನೋಡಿದ್ರೂ ಖಂಡಿತವಾಗಿಯೂ ಬರೋದಿಲ್ಲ ನೋಡಿ.

ಮಳೆ ಜೊತೆ ದಪ ದಪ ಮನೆಯ ಹೆಂಚಿನ ಮೇಲೆ ಸದ್ದಾಯಿತೆಂದರೆ ಆಲಿಕಲ್ಲು ಬೀಳುತ್ತಿದೆ ಎಂದರ್ಥ, ಕೂಡಲೇ ಆಡುಗೇ ಮನೆಗೆ ಹೋಗಿ ಕೈಗೆ ಸಿಕ್ಕ ಲೋಟಾನೋ ಇಲ್ಲವೇ ಬಟ್ಟಲನ್ನೋ ಹಿಡಿದುಕೊಂಡು ಮನೆಯ ಮುಂದೆ ದುತ್ತೆಂದು ಬೀಳುವ ತಣ್ಣನೆಯ ಆಲಿಕಲ್ಲಿನ ಮಂದೆ ಅಮೂಲ್, ಬಾಸ್ಕಿನ್ ರಾಬಿನ್ಸ್, ವಾಡಿಲಾಲ್ ಕ್ವಾಲಿಟಿ ಐಸ್ಕ್ರೀಮ್ ಎನೂ ಇಲ್ಲ ಬಿಡಿ.

dam3ಮುಂಗಾರು ಸರಿಯಾಗಿ ಬಿದ್ದು ಕರೆ ಕಟ್ಟೆಗಳೆಲ್ಲಾ ತುಂಬಿ ಕೋಡಿ ಹರಿದು ನದಿ ಸೇರಿ ನದಿಗೆ ಆಡ್ಡಲಾಗಿ ಕಟ್ಟಿದ ಅಣೆಕಟ್ಟು ತುಂಬಿದರಂತೂ ನಾಡಿನ ಜನತೆಗೆ ಮುಂದಿನ ವರ್ಷದ ಮಳೆಗಾಲದವರೆಗೂ ನಮ್ಮೆದಿ.

ಈಗ ತಾನೇ ಮಳೆಗಾಲ ಆರಂಭ ಆಗುತ್ತಲಿದೆ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ ಉತ್ತಮವಾದ ಮಳೆ ಬೀಳುವ ಸಂಭವವಿದೆ ಎಂದಿದ್ದಾರೆ. ಅವರ ನಿರೀಕ್ಷೆ ನಿಜವಾಗಿ ಸಕಾಲದಲ್ಲಿ ಕೆರೆಕಟ್ಟೆ ತುಂಬುವಷ್ಟು ಮಳೆ ಬಂದು ರೈತರಿಗೆ ಒಳ್ಳೆಯ ಫಸಲು ಬಂದು ನಾಡು ಸುಭಿಕ್ಷವಾಗಿರಲಿ ಎಂದು ಆಶಿಸೋಣ.

ಏನಂತೀರೀ?

 

ಅನ್ನದಾತ ಸುಖೀಭವ

ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಶ್ರೀ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಅವರ ಅನ್ನದಾತ ಪದ್ಯವನ್ನು ಓದಿಯೇ ಇರುತ್ತೇವೆ. ನಮ್ಮೆಲ್ಲರ ಅನ್ನದಾತರಾದ ರೈತರನ್ನು ಇದಕ್ಕಿಂತಲೂ ಉತ್ತಮವಾಗಿ ವರ್ಣಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮನಮುಟ್ಟುವಂತಿದೆ ಈ ಪದ್ಯ.

ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸವನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

far1ನಮ್ಮ ಭಾರತ ದೇಶದ ಅತಿ ಹೆಚ್ಚಿನ ಆದಾಯದ ಮೂಲವೆಂದರೆ ಕೃಷಿ ಮತ್ತು ಇಷ್ಟು ದೊಡ್ಡ ಆದಾಯದ ಕಾರಣರ್ತರೇ ರೈತರು. ಹಾಗಾಗಿ ಕೃಷಿ ಮತ್ತು ರೈತ ಈ ದೇಶದ ಅವಿಭಾಜ್ಯ ಅಂಗವಾಗಿದ್ದರೂ, ರೈತರು ಇನ್ನೂ ಈ ದೇಶದ ಅಸಂಘಟಿತ ಕಾರ್ಮಿಕರಾಗಿಯೇ ಇರುವುದು ನಿಜಕ್ಕೂ ಬೇಸರದ ಸಂಗತಿಯಗಿದೆ. ಅತ್ಯಂತ ಕಷ್ಟಪಟ್ಟು ದುಡಿದ ನಂತರವೂ ಅವರ ಶ್ರಮಕ್ಕೆ ಸಲ್ಲಬೇಕಾಗಿರುವ ಪ್ರತಿಫಲ ಸಿಗದ ಕಾರಣ, ಸ್ವಾತಂತ್ರ್ಯ ಬಂದು ಇಷ್ತು ವರ್ಷಗಳದರು ರೈತರ ಬಾಳು ಕರುಣಾಜನಕ ಸ್ಥಿತಿಯಲ್ಲಿರುವುದಲ್ಲದೇ, ಪ್ರತಿ ದಿನವೂ ದೇಶಾದ್ಯಂತ ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಆಹಾರ ಮನುಷ್ಯರಿಗೆ ಜೀವನಾವಶ್ಯಕ ಎಂಬುದರ ಅರಿವಿದ್ದರೂ ಸಹಾ, ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವೇ ರೈತರಿಂದ ಕೃಷಿ ಭೂಮಿಗಳನ್ನು ಕಿತ್ತು ಕೊಂಡು ಅಲ್ಲಿ ದೊಡ್ಡ ದೊಡ್ಡದಾದ ಕಾರ್ಖಾನೆಗಳನ್ನು ಸ್ಥಾಪಿಸಿ ಪರಿಸರದ ಹಾನಿಗೆ ಕಾರಣವಾಗುತ್ತಿರುವುದಲ್ಲದೇ, ಅದೇ ರೈತರನ್ನೇ ಆ ಕಾರ್ಖಾನೆಗಳಲ್ಲಿ ಸಂಬಳಕ್ಕೆ ಕೈ ಚಾಚುವಂತೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದ್ದು ದೈನಂದಿನ ಚಟುವಟಿಕೆಗಳಿಗೆ ಅತ್ಯಾವಶ್ಯಕವಾಗಿದೆ. ಭಾರತವೂ ಶತಮಾನಗಳಿಂದ ಕೃಷಿ ಪ್ರಧಾನ ದೇಶವಾಗಿರುವ ಕಾರಣ, ಇಲ್ಲಿನ ರೈತರ ಹಿತಾಸಕ್ತಿಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಮ್ಮ ರೈತರೇನೂ ಬೇಡುವ ಭಿಕ್ಷುಕರೇನಲ್ಲಾ ಬದಲಾಗಿ ಅವರು ಕೈ ಎತ್ತಿ ಕೊಡುವ ಕೊಡುಗೈ ದಾನಿಗಳು. ಅವರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ದೊರೆತು ಅವರ ಜೀವನ ಹಸನಾದಲ್ಲಿ ಖಂಡಿತವಾಗಿಯೂ ಯಾವುದೇ ರೈತ ಕೃಷಿಯಿಂದ ವಿಮುಖನಾಗುವ, ಆತ್ಮಹತ್ಯೆಗೆ ಶರಣಾಗುವ ಪ್ರಮೇಯವೇ ಬರುವುದಿಲ್ಲ. ದುರಾದೃಷ್ಟವಷಾತ್ ಇಂದು ಮೈ ಬಗ್ಗಿಸಿ ದುಡಿಯುವವರಿಗಿಂತಲೂ ಮಧ್ಯವರ್ತಿಗಳ ಸಂಖ್ಯೆಯೇ ಅಧಿಕವಾಗಿರುವ ಕಾರಣ, ರೈತರಿಂದೆ ಕನಿಷ್ಟ ಬೆಲೆಗೆ ಕೊಂಡು ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರಿ ಅವರುಗಳು ಲಾಭಗಳಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಸರ್ಕಾರವೂ ಇದನ್ನೇ ಮನಗಂಡು ಕೃಷಿ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದಲ್ಲದೇ, 60 ರ ದಶಕದಲ್ಲಿ ಆರಂಭಿಸಿದ ಹಸಿರು ಕ್ರಾಂತಿಯು ಪಂಜಾಬ್ ಮತ್ತು ಹರಿಯಾಣದ ಜೊತೆಗೆ ಇಡೀ ದೇಶದ ಕೃಷಿಯ ಭೂದೃಶ್ಯವನ್ನು ಬದಲಾಯಿಸಿತು. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಯಿತು. ರೈತರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸಲೆಂದೇ ಕಿಸಾನ್ ದಿವಾಸ್ ಅರ್ಥಾತ್ ರೈತರ ದಿನಾಚರಣೆಯನ್ನು ಸಹ ಪ್ರಾರಂಭಿಸಲಾಯಿತು.

farm3ದೇಶದ ಐದನೇ ಪ್ರಧಾನಿಯಾಗಿ ಜುಲೈ 28, 1979 ರಿಂದ 1980 ರ ಜನವರಿ 14 ರವರೆಗೆ ಅಧಿಕಾರವನ್ನು ನಡೆಸಿದ ಶ್ರೀ ಚೌದರಿ ಚರಣ್ ಸಿಂಗರು ತಮ್ಮ ಅಧಿಕಾರದ ಅವಧಿಯಲ್ಲಿ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನೀತಿಗಳನ್ನು ಜಾರಿಗೆ ತಂದರು. ಭೂಮಾಲೀಕರನ್ನು ಒಗ್ಗೂಡಿಸಲು ಮತ್ತು ಹೋರಾಡಲು ಪ್ರೇರೇಪಿಸಿದರು. ದೇಶದ ಎರಡನೇ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಗಳ ಜೈ ಜವಾನ್-ಜೈ ಕಿಸಾನ್ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು ಎಂದರೂ ಅತಿಶಯವಲ್ಲ. ಸ್ವತಃ ಉತ್ತಮ ಬರಹಗಾರರಾಗಿದ್ದ ಕಾರಣ, ಅವರು ರೈತರ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದು ರೈತರ ಜೀವನ ಮಟ್ಟವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ರೈತ ಈ ದೇಶದ ಬೆನ್ನಲುಬು ಹಾಗಾಗಿ ಅವರ ಏಳಿಗೆಗೆ ಕೈಲಾದ ಮಟ್ಟಿಗೆ ಶ್ರಮಿಸಿದ ಮತ್ತು ರೈತ ಹಿನ್ನೆಲೆಯವರೇ ಆದ ಶ್ರೀ ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವಾದ ಡಿಸೆಂಬರ್ 23ರಂದು ರಾಷ್ಟ್ರೀಯ ರೈತ ದಿನಾಚರಣೆ ಅರ್ಥಾತ್ ಕಿಸಾನ್ ದಿವಸ್ ಎಂದು ದೇಶಾದ್ಯಂತ ಅಚರಿಸುವುದನ್ನು ಜಾರಿಗೆ ತರಲಾಯಿತು.


ಕೃಷಿತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಮ್ |
ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ ||

images (13)ಅಂದರೆ ವ್ಯವಸಾಯದಿಂದ ಬರಗಾಲವಿಲ್ಲ. ಜಪಮಾಡುವುದರಿಂದ ಪಾಪವಿಲ್ಲ. ಮೌನವಾಗಿರುವುದರಿಂದ ಜಗಳವಿಲ್ಲ. ಎಚ್ಚರವಾಗಿರುವವರಿಗೆ ಭಯವಿಲ್ಲ ಎಂಬ ಶುಭಾಷಿತವಿದೆ. ಅದೇ ರೀತಿ ಟ್ರಾಕ್ಟರ್ ಸಗಣಿ ಹಾಕೋದಿಲ್ಲ, ಗೋವುಗಳು ಹೊಗೆ ಉಗುಳೋದಿಲ್ಲ ಎಂಬ ಮತ್ತೊಂದು ಮಾತಿದೆ. ಇವೆರಡನ್ನು ಸಮೀಕರಿಸಿದಲ್ಲಿ, ಶ್ರಮವಹಿಸಿ ಪಾರಂಪರಿಕ ಸಾವಯವ ಕೃಷಿಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಪರಿಸರಕ್ಕೂ ಯಾವುದೇ ಹಾನಿಯಿಲ್ಲ ಮತ್ತು ರೈತರು ಸುಭಿಕ್ಷರಾಗುತ್ತಾರೆ.

ದುರಾದೃಷ್ಟವಷಾತ್ ಇಂದು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬುವ ಹಪಾಹಪಿಗೆ ಬಿದ್ದು ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ಸಾಂಪ್ರಾದಾಯಿಕ ಕೃಷಿ ಪದ್ದತಿಗೆ ತಿಲಾಂಜಲಿ ಕೊಟ್ತು, ಕೃಷಿಯನ್ನೂ ಯಾಂತ್ರೀಕೃತಗೊಳಿಸಿರುವುದಲ್ಲದೇ, ಯಥೇಚ್ಚವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಮೂಲಕ ಭೂಮಿಯ ಸಹಜ ಫಲವತ್ತತೆ ಮತ್ತು ಸಾರವನ್ನು ಕಡಿಮೆ ಮಾಡುತ್ತಿರುವುದಲ್ಲದೇ, ಭೂಮಿಯನ್ನು ವಿಷಕಾರಿಯನ್ನಾಗಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಬೆಳೆಯುವ ಭೂಮಿಯೇ ವಿಷಕಾರಿಯಾದಾಗ, ಅದರಲ್ಲಿ ಬೆಳೆದ ಬೆಳೆಗಳೂ ವಿಷಕಾರಿಗಳಾಗಿ ಪರಿಣಮಿಸಿ, ಪ್ರತ್ಯಕ್ಷವಾಗಿ ಈಗ ಕಾಣಿಸಿಕೊಳ್ಳುತ್ತಿರುವ ಬಹುತೇಕ ಖಾಯಿಲೆಗಳಿಗೆ ಮೂಲವಾಗಿದೆ ಎಂದರೂ ತಪ್ಪಾಗದು.

ಹಾಗಾಗಿ ರಾಜಕೀಯ ನಾಯಕರ ದಿನಾಚರಣೆಗೆ ರೈತರ ಹೆಸರನ್ನಿಟ್ಟು ಅ ದಿನಾಚರಣೆಗೆ ಸಾರ್ವತ್ರಿಕ ರಜೆಯನ್ನು ನೀಡಿ (ಕಿಸಾನ್ ದಿವಸ್ ಉತ್ತರ ಪ್ರದೇಶದಲ್ಲಿ ಸಾರ್ವತ್ರಿಕ ರಜೆಯ ದಿನವಾಗಿದೆ) ಜನರ ತೆರಿಗೆಯ ಹಣದಲ್ಲಿ ಮತ್ತಷ್ಟು ರಾಜಕೀಯ ನಾಯಕರುಗಳಿಗೆ ಹಾರ ತುರಾಯಿಗಳನ್ನು ಹಾಕಿ ಸನ್ಮಾನ ಮಾಡಿ ಹಣವನ್ನು ಪೋಲು ಮಾಡುವ ಬದಲು ನಿಜವಾಗಿಯೂ ರೈತರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಸದ್ಯಕ್ಕೆ ಅತ್ಯವಶ್ಯಕವಾಗಿದೆ.

ವಿಷಕಾರಕ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಹತ್ತು ಪಟ್ಟು ಬೆಳೆ ಬೆಳೆದು ದೇಶಾದ್ಯಂತ ಅನಾರೋಗ್ಯವನ್ನು ಉಲ್ಪಣಗೊಳಿಸುವ ಬದಲು ಸಾಂಪ್ರದಾಯಕ ಕೃಷಿ ಪದ್ದತಿಯಲ್ಲೇ ಪರಿಸರಕ್ಕೂ ಜನ ಜೀವನಕ್ಕೂ ಹಾನಿಯಾಗದ ರೀತಿಯಲ್ಲಿ ಸ್ವಲ್ಪವೇ ಬೆಳೆದರೂ ಅದಕ್ಕೆ ಸೂಕ್ತವಾದ ಬೆಲೆಯನ್ನು ದೊರೆಯುವಂತೆ ಮಾಡುವಂತಾದಲ್ಲಿ ಮಾತ್ರವೇ ನಿಜವಾಗಿಯೂ ರೈತ ದಿನಾಚರಣೆ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ.

far2ದೇಶದ ಬೆನ್ನೆಲುಬಾಗಿರುವ ಸಮಸ್ತ ಅನ್ನದಾತರಿಗೆ‌ ಡಿಸೆಂಬರ್ 23ರ, ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಮತ್ತೊಮ್ಮೆ ಶುಭಾಶಯಗಳು. ನಮ್ಮ ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುವುದರ‌ ಮೂಲಕ ಅವರ ಜೀವನ ಹಸನಾಗಿ ಆತ್ಮಹತ್ಯೆ ನಿಲ್ಲಲಿ ಎಂದು ಆಶೀಸೋಣ.

far4ಗೋವಿನ ಪ್ರತಿಯೊಂದು ಉತ್ಪನ್ನಗಳು ಉಪಯೋಗಕಾರಿಯಾಗಿರುವ ಕಾರಣ, ದೇಸೀ ಗೋವುಗಳ‌ ತಳಿಯನ್ನು ಉಳಿಸೋಣ ಮತ್ತು ಬೆಳೆಸೋಣ. ಆರೋಗ್ಯವಂತರಾಗಿರೋಣ. ತನ್ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು ಹಾರೈಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ