ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ಮೈಸೂರು ಸಂಸ್ಥಾನದ ಕುಲದೇವತೆ ಮತ್ತು ಕನ್ನಡಿಗರ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಆವರು ಸ್ವಪ್ನದಲ್ಲಿ ಬಂದು ನಂತರ ಅವರ ಅಮೃತ ಹಸ್ತದಲ್ಲೇ ಏಕಶಿಲೆಯಲ್ಲಿ ದ್ವಿಮುಖಿ ಚಾಮುಂಡೇಶ್ವರಿಯಾಗಿ ವಿಶ್ವವಿಖ್ಯಾತ ಜೋಗದ ಜಲಪಾತದಲ್ಲಿ ಪ್ರತಿಷ್ಠಾಪನೆಯಾದ ಇತಿಹಾಸದ ಜೊತೆಗೆ ‍ಮೈಸೂರು ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಕನ್ನಡಿಗರಿಗೆ ಹೇಗೆ ಪ್ರಾಥಃಸ್ಮರಣೀಯರಾಗುತ್ತಾರೆ ಎಂಬ ರೋಚಕ ಪ್ರಸಂಗ ಇದೋ ನಿಮಗಾಗಿ… Read More ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡ ಚಲನಚಿತ್ರಗಳ ಅರ್ಥವೇ ಇಲ್ಲದ ಅಸಂಬದ್ಧ ಹಾಡುಗಳಿಗೆ ಅಷ್ಟೇ ಅಸಹ್ಯಕರವಾಗಿ ಮೈ ಕೈ ಕುಲುಕಿಸುತ್ತಾ ನರ್ತಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಭಾವಿಸಿರುವವರಿಗೆ ಬೆಂಗಳೂರಿನ ಥಣಿಸಂದ್ರ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ಎಂಬ ವಿಷಯಾಧಾರಿತವಾದ ಅದ್ಭುತ ಕಾರ್ಯಕ್ರಮದ ಮೂಲಕ 67ನೇ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಡಗರ ಸಂಭ್ರಮ ಇದೋ ನಿಮಗಾಗಿ… Read More ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ನಾಡಪ್ರಭು ಶ್ರೀ ಕೆಂಪೇಗೌಡರು

ಪ್ರಗತಿ ಪ್ರತಿಮೆ ಎಂಬ ಹೆಸರಿನಲ್ಲಿ 108 ಅಡಿ ಎತ್ತರದ 218 ಟನ್‌ ತೂಕವಿರುವ ವಿಶ್ವವಿಖ್ಯಾತ ಬೆಂಗಳೂರಿನ ನಿರ್ಮಾತರಾದ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಳ್ಳುತ್ತಿರುವ ಈ ಶುಭಸಂಧರ್ಭದಲ್ಲಿ, ಕೆಂಪೇಗೌಡರ ವ್ಯಕ್ತಿ, ವ್ಯಕ್ತಿತ್ವ, ಸಾಧನೆಯ ಜೊತೆಗೆ ಅಂತಹ ಪ್ರಾಥಃಸ್ಮರಣೀಯ ಯಶೋಗಾಧೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.… Read More ನಾಡಪ್ರಭು ಶ್ರೀ ಕೆಂಪೇಗೌಡರು

ವಿಜಯನಗರದ ಶ್ರೀ ಕೃಷ್ಣದೇವರಾಯ

ಶ್ರೀ ಕೃಷ್ಣದೇವರಾಯ. ಈ ಹೆಸರು ಕೇಳಿದೊಡನೆಯೇ ನಮ್ಮ ಕಣ್ಣ ಮುಂದೆ ಬರುವುದು ದಕ್ಷಿಣ ಭಾರತದ ಕ್ಷಾತ್ರ ತೇಜದ ಸಮರ್ಥ ಅಡಳಿತಗಾರ. ಸಾವಿರಾರು ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನಗೊಳಿಸಿದ ಮಹಾನ್ ನಾಯಕ, ಮುತ್ತು ರತ್ನ ಪಚ್ಚೆ ಹವಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂತಹ ಸುವರ್ಣಯುಗದ ಸೃಷ್ಟಿಸಿದ್ದ ರಾಜ.  16 ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರು, ಬಹಮನಿ ಸುಲ್ತಾನರನ್ನು ಬಗ್ಗು ಬಡಿದಿದ್ದಲ್ಲದೇ, ಉತ್ತರದ ಮೊಘಲರ  ಅಧಿಪತಿ ಬಾಬರನಿಗೂ ಹುಟ್ಟಿಸಿದ ಕರ್ನಾಟಕದ ಕೆಚ್ಚೆದೆಯ ಹಿಂದೂ ಹುಲಿಯಷ್ಟೇ ಅಲ್ಲದೇ ವಿದೇಶಿಗರೊಂದಿಗೆ ಉತ್ತಮವಾದ ವ್ಯಾಪಾರ… Read More ವಿಜಯನಗರದ ಶ್ರೀ ಕೃಷ್ಣದೇವರಾಯ

ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಹರಿಹರರಾಯ ಮತ್ತು ಅವರ ಸಹೋದರ ಬುಕ್ಕ ರಾಯ ಅವರು 14 ನೇ ಶತಮಾನದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನಾಕರ್ತರು. ಈ ಸಹೋದರರು ಪ್ರಸ್ತುತ ತೆಲಂಗಾಣ ಪ್ರದೇಶದ ವಾರಂಗಲ್‌ ಪ್ರದೇಶವನ್ನು ಆಳಿದ ಕಾಕತೀಯ ಸಾಮ್ರಾಜ್ಯದ ಕೊನೆಯ ರಾಜ ಪ್ರತಾಪರುದ್ರ ದೇವ II ರ ಸೈನ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. 1324 ರಲ್ಲಿ ದೆಹಲಿ ಸುಲ್ತಾನನಾದ ಮೊಹಮ್ಮದ್ ಬಿನ್ ತುಘಲಕ್ ಆಕ್ರಮಣದಿಂದಾಗಿ ಕಾಕತೀಯ ಸಾಮ್ರಾಜ್ಯದ ಪತನದ ನಂತರ, ಈ ಸಹೋದರರು ವಿಜಯನಗರದ ಸಮೀಪದಲ್ಲಿರುವ ಆನೆಗೊಂಡಿಯಲ್ಲಿರುವ… Read More ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

ಸಾಧಾರಣವಾಗಿ ಬ್ರಿಟಿಷರು ಭಾರತಕ್ಕೆ ಬರುವ ಮುಂಚೆ ಭಾರತ ಸುವರ್ಣ ಯುಗವಾಗಿತ್ತು ಎಂದು ಹೇಳುತ್ತಾ ಅಲ್ಲಿ ಮುತ್ತು ರತ್ನ ಹವಳ ಪಚ್ಚೆ ಮುಂತಾದ ಅಮೂಲ್ಯವಾದ ಅನರ್ಘ್ಯ ಬೆಲೆಬಾಳುವ ವಸ್ತುಗಳನ್ನೂ ರಸ್ತೆಯ ಬದಿಯಲ್ಲಿ ಸೇರಿನಲ್ಲಿ ಮಾರಲಾಗುತ್ತಿತ್ತು ಎಂದು ಅನೇಕ ಪಾಹಿಯಾನ್, ಹುಯ್ಯನ್ ಸಾಂಗ್ ಅಂತಹ ವಿದೇಶೀ ಇತಿಹಾಸಕಾರರೇ ಬಣ್ಣಿಸಿದ್ದಾರೆ. ಇನ್ನು ಸಂಗೀತ ಮತ್ತು ಶಿಲ್ಪಕಲೆ ಎಂದೊನೆಯೇ ಥಟ್ಟನೆ ಎಲ್ಲರಿಗೂ ನೆನಪಾಗುವುದು ಕರ್ನಾಟಕವೇ. ಕರ್ನಾಟಕ ಎಂದೊಡನೇ ನೆನಪಾಗುವುದೇ ವೈಭವೋಪೇತ ದಸರಾ ಹಬ್ಬ. ಕನ್ನಡ ಎಂದೊಡನೆ ಎಲ್ಲರೂ ನಮಸ್ಕರಿಸುವುದೇ ತಾಯಿ ಭುವನೇಶ್ವರಿಗೇ. ಇಷ್ಟೆಲ್ಲಾ… Read More ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

ಕನಕಗಿರಿ ಕನಕಾಚಲಪತಿ

ಕಾಲಿದ್ದವರು ಹಂಪೆ ಸುತ್ತಿ ನೋಡಬೇಕು ಮತ್ತು ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂಬ ನಾನ್ನುಡಿ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಚಲಿತವಾಗಿದೆ. ಅಂದಿನ ಕಾಲದ ವಿಜಯನಗರದ ಗತವೈಭವ ಇಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಂಚಿಹೋಗಿವೆ. ಹಂಪೆಯಿಂದ ಸುಮಾರು 30 ಕಿ.ಮಿ ದೂರದಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರಮುಖ ತಾಲ್ಲೂಕ್ ಕೇಂದ್ರವೇ ಕನಕಗಿರಿ. ಇಲ್ಲಿನ ಕನಕಾಚಲಪತಿ ದೇವಸ್ಥಾನದಿಂದಾಗಿ ಇದು ಐತಿಹಾಸಿಕ ಸ್ಥಳವಾಗಿದೆ. ಈ ಶ್ರೀಕ್ಷೇತ್ರವನ್ನು ಎರಡನೆ ತಿರುಪತಿ ಎಂಬ ನಂಬಿಕೆ ಇರುವ ಕಾರಣ ಹಂಪೆಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಯೂ ಬೇಟಿ… Read More ಕನಕಗಿರಿ ಕನಕಾಚಲಪತಿ

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ… Read More ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು