Google ಮತ್ತು ಗುರು ನಡುವಿನ ಅಂತರ, ಮಹತ್ವ

ಇತ್ತೀಚಿನ ಯುವ ಜನರಿಗೆ ಹಿರಿಯರು ಏನು ಹೇಳಿದರೂ ಅಸಡ್ಡೆಯೇ. ಮೊನ್ನೆ ನನ್ನ ಮಗಳಿಗೆ ಅಡುಗೆ ಮಾಡುವುದು ಕಲಿಯಮ್ಮ ನಾಳೇ ನೀನೇ Higher Studies ಅಂತಾ ಬೇರೆ ಎಲ್ಲಾದ್ರೂ ಹೋದ್ರೇ ಅಥವಾ, ಮದುವೆ ಮಾಡಿಕೊಂಡು ಹೋದ್ಮೇಲೆ ಅಡುಗೆ ಬರ್ದೇ ಹೋದ್ರೇ ನಿನಗೇ ಕಷ್ಟ ಆಗುತೇ ಅಂದ್ರೆ, ಹೋಗಮ್ಮಾ, ಈಗ್ಲಿಂದಾನೇ ಅಡುಗೆ ಗಿಡುಗೆ ಅಂತ ಯಾರು ಕಲೀತಾರೆ. ಹೇಗೂ Google ಇದೇ, Youtube ಇದೇ. ಅಪ್ಪಂದೇ Blog & Channel ನಲ್ಲಿ ಎಷ್ಟೋಂದು ಅಡುಗೆ ತೋರ್ಸಿದ್ದಾರೆ ಅದನ್ನ ನೋಡಿ ಮಾಡ್ತೀನಿ… Read More Google ಮತ್ತು ಗುರು ನಡುವಿನ ಅಂತರ, ಮಹತ್ವ

ಕ್ರಿಕೆಟ್ ಆಟಗಾರರಾಗಿ ಸ್ವಾಮಿ ವಿವೇಕಾನಂದ

ಲೇಖನದ ಶೀರ್ಷಿಕೆ ನೋಡಿ ಶಾಕ್ ಆಯ್ತಾ? ಆಗಿರ್ಲೇ ಬೇಕು. ನನಗೂ ಇದರ ಬಗ್ಗೆ ತಿಳಿದುಕೊಂಡಾಗ ಇದೇ ರೀತಿ ಶಾಕ್ ಆದೆ. ನಮಗೆಲ್ಲ ತಿಳಿದಿರುವಂತೆ ಸ್ವಾಮೀ ವಿವೇಕಾನಂದರ ಆಧ್ಯಾತ್ಮದ ಗುರುಗಳು. ಇಡೀ ಜಗತ್ತಿನವರಿಗೆ ಹಿಂದೂ ಧರ್ಮದವ ಬಗ್ಗೆ ಇದ್ದ ತಾತ್ಸಾರವನ್ನು ಹೋಗಲಾಡಿಸಿ ಅವರ ಮನದಲ್ಲಿ ಹಿಂದೂ ಧರ್ಮದ ಬಗ್ಗೆ ಪೂಜ್ಯ ಭಾವನೆ ಮೂಡಿಸುವುದರಲ್ಲಿ ಶ್ರಮಿಸಿದ ಅಗ್ರಗಣ್ಯರು. ಆದರೆ ಈ ಶೀರ್ಷಿಕೆಯಲ್ಲಿ ಕ್ರಿಕೆಟ್ ಆಟ ಅಂತಾ ಇದೇ? ಎಲ್ಲಿಯ ಬೆಟ್ಟದ ನೆಲ್ಲಿಕಾಯಿ? ಎಲ್ಲಿಯ ಸಮುದ್ರ ಉಪ್ಪು? ಎಲ್ಲಿಂದ ಎಲ್ಲಿಗೆ ಸಂಬಂಧ… Read More ಕ್ರಿಕೆಟ್ ಆಟಗಾರರಾಗಿ ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ದಿಗ್ವಿಜಯ

ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ. ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ… Read More ಸ್ವಾಮಿ ವಿವೇಕಾನಂದರ ದಿಗ್ವಿಜಯ