ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ದೊರೈ-ಭಗವಾನ್

ಸದಭಿರುಚಿಯ ಚಿತ್ರಗಳು ಅದರಲ್ಲೂ 24 ಕಾದಂಬರಿ ಚಿತ್ರ ಆಧಾರಿತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ರಾಜಕುಮಾರ್ ಅವರನ್ನು ಜೇಮ್ಸ್ ಬಾಂಡ್ ರೂಪದಲ್ಲಿ ಕನ್ನಡದಲ್ಲಿ ತೋರಿಸಿದ್ದ, ೮೦ರ ದಶಕದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮೀ ಯಶಸ್ವಿ ಜೋಡಿಯನ್ನಾಗಿಸಿದ್ದ ಎಸ್. ಕೆ. ಭಗವಾನ್ ಎಂಟಾಣೆಯ ಮೂಲಕ ದೊರೈ-ಭಗವಾನ್ ಎಂಬ ಯಶಸ್ವಿ ಜೋಡಿಯಾದ ರೋಚಕದ ಕಥೆಯ ಜೊತೆ ಭಗವಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ನುಡಿ ನಮಗಳು ಇದೋ ನಿಮಗಾಗಿ… Read More ದೊರೈ-ಭಗವಾನ್

ಕಾಡಿನರಾಜ ಎಂ. ಪಿ. ಶಂಕರ್

ಹಲವಾರು ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ್ದಲ್ಲದೇ ಕಾಡು ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆಯ ಕುರಿತಾದ ಗಂಧದ ಗುಡಿ, ಮೃಗಾಲಯ, ಕಾಡಿನ ರಾಜ, ಕಾಡಿನ ರಹಸ್ಯ, ರಾಮಾ ಲಕ್ಷ್ಮಣ ಮುಂತಾದ ಪರಿಸರದ ಕುರಿತಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶನ ಮಾಡುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಸರಳ ಸಜ್ಜನ, ಶ್ರೀ ಎಂ.ಪಿ. ಶಂಕರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳನ್ನು ನಮ್ಮ ಇಂದಿನ್ಗ ಕನ್ನಡದ ಕಲಿಗಳು ಮಾಲಿಕೆಯುಲ್ಲಿ ಇದೋ ನಿಮಗಾಗಿ… Read More ಕಾಡಿನರಾಜ ಎಂ. ಪಿ. ಶಂಕರ್

ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ತಮ್ಮ ಮನೋಜ್ಞ ಅಭಿನಯದ ಮೂಲಕ ನೂರಾರು ನಾಟಕಗಳು, ಲೆಕ್ಕವಿಲ್ಲದಷ್ಟು ಧಾರಾವಾಹಿಗಳು ಮತ್ತು ಸುಮಾರು 500 ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಸದಾಕಾಲವೂ ಹಚ್ಚ ಹಸುರಾಗಿದ್ದ ಮತ್ತು ನೆನ್ನೆ ತಾನೇ ಹೃದಯಾಘಾತದಿಂತ ನವೆಂಬರ್ 8, 2022ರಂದು ನಿಧನರಾದ ಕಂಚಿನ ಕಂಠದ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ವ್ಯಕ್ತಿ ಚಿತ್ರಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ಛೇ, ಛೇ, ಛೇ, ಹೀಗಾಗ್ಬಾರ್ದಿತ್ತು

ಭಾರತೀಯ ಚಿತ್ರರಂಗದಲಿ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಇತಿಹಾಸವಿದ್ದು ಪ್ರತೀವರ್ಷವೂ ಸರ್ಕಾರ ಕೊಡುವ ಸ್ವರ್ಣ ಕಮಲ ಪ್ರಶಸ್ತಿಗಳಲ್ಲಿ ಮೊದಲ ಮೂರು ಸ್ಥಾನದಲ್ಲಿ ಕರ್ನಾಟಕದ ಹೆಸರೂ ಇದ್ದೇ ಇದೆ. ಈ ರೀತಿಯ ಸಾಥನೆಯನ್ನು ಮಾಡಲು ವರನಟ ಡಾ.ರಾಜಕುಮಾರ್, ವಿಷ್ಣುವರ್ಥನ್, ಅನಂತ್ ನಾಗ್, ರಮೇಶ್ ಅಂತಹ ದಿಗ್ಗಜ ನಟರುಗಳಲ್ಲದೇ ಜಿವಿ ಐಯ್ಯರ್, ಬಿ. ಆರ್ ಪಂತಲು, ಲಕ್ಷ್ಮೀನಾರಾಯಣ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ ಶೇಷಾದ್ರಿ ಅವರಂತಹ ನಿರ್ದೇಶಕರ ಪಾಲೂ ಇದೆ ಎನ್ನುವುದೂ ಸತ್ಯ. ನಟನೆಯಲ್ಲಿ ಕುರಿಗಳು, ಕೋತಿಗಳು, ಕತ್ತೆಗಳ ಚಿತ್ರಗಳಿಗಷ್ಟೇ… Read More ಛೇ, ಛೇ, ಛೇ, ಹೀಗಾಗ್ಬಾರ್ದಿತ್ತು

ದ್ವಾರಕೀಶ್

ಕರ್ನಾಟಕದ ಕುಳ್ಳ ಎಂದೇ ಪ್ರಖ್ಯತವಾಗಿರುವ ದ್ವಾರಕೀಶ್ ಕನ್ನಡ ಚಲನಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕರಾಗಿ ಖ್ಯಾತರಾಗಿರುವುದಲ್ಲದೇ ಕನ್ನಡ ಚಿತ್ರರಂಗದಲ್ಲಿ ಅನೇಕರಿಗೆ ಆಶ್ರಯದಾತರಾಗಿರುವುದಲ್ಲದೇ, ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾಗಿದ್ದಾರೆ. ಅಂತಹ ದ್ವಾರಕೀಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ. ಬಂಗ್ಲೆ ಶಾಮರಾವ್ ದ್ವಾರಕಾನಾಥ್ ಎಂಬುದು ದ್ವಾರಕೀಶ್ ಅವರ ನಿಜನಾಮವಾಗಿದ್ದು, ಹುಣಸೂರಿನ ಬಂಗ್ಲೆ ಶಾಮಾರಾವ್ ಮತ್ತು ಜಯಮ್ಮದಂಪತಿಗಳಿಗೆ ಆಗಸ್ಟ್ 19 1942 ರಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸುತ್ತಾರೆ. ಮುಂದೆ ಅವರ… Read More ದ್ವಾರಕೀಶ್

ಬೇಬಿ ಶ್ಯಾಮಿಲಿ

ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ. ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ… Read More ಬೇಬಿ ಶ್ಯಾಮಿಲಿ

ಸಾಹಸಸಿಂಹ ವಿಷ್ಣುವರ್ಧನ್

ಆತ ಕನ್ನಡ ಚಿತ್ರರಂಗ ಕಂಡ ಆತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ಆದರೆ ಅಷ್ಟೇ ದುರದೃಷ್ಟವಂತ ನಟ. ಸಾಮಾಜಿಕವಾಗಿರಲೀ, ಪೌರಾಣಿಕವಾಗಿರಲೀ, ಕಮರ್ಷಿಯಲ್ ಆಗಿರಲೀ, ಕಲಾತ್ಮಕವಾಗಿರಲೀ ಯಾವುದೇ ಸಿನಿಮಾ ಅದರೂ ಅದಕ್ಕೊಪ್ಪುವ ನಟ. ನಟನೆ, ನೃತ್ಯ, ಸಾಹಸ ಯಾವುದೇ ಇರಲಿ ಎಲ್ಲದ್ದಕ್ಕೂ ಸೈ. ಸ್ಪಷ್ಟವಾದ ಉಚ್ಚಾರ, ನೇರವಾದ ಸಂಭಾಷಣೆ, ಹಾಡುಗಾರಿಕೆಯಲೂ ತನ್ನ ಛಾಪನ್ನು ಮೂಡಿಸಿದ್ದ ನಟ ಅವರೇ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್. ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಗ್ರಾಮದ ಮೂಲದ ಆದರೆ ಮೈಸೂರಿನಲ್ಲಿ ನೆಲೆಸಿದ್ದ ಹೆಚ್.ಎಲ್.ನಾರಾಯಣರಾವ್ ಮತ್ತು… Read More ಸಾಹಸಸಿಂಹ ವಿಷ್ಣುವರ್ಧನ್