ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

sri7ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ.  ವೇಗದ ಬೋಲರ್ಗಳೇನಿದ್ದರೂ  ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್  ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಜಾವಗಲ್ ಗ್ರಾಮದ ಮೂಲದವರಾದ ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ದಂಪತಿಗಳಿಗೆ. ಆಗಸ್ಟ್    31, 1969ರಲ್ಲಿ ಶ್ರೀನಾಥ್ ಅವರು ಜನಿಸುತ್ತಾರೆ. ವ್ಯವಹಾರಸ್ಥರಾಗಿದ್ದ ಅವರ ತಂದೆಯವರು ಮೈಸೂರಿನಲ್ಲೇ ನೆಲೆಸಿದ್ದ ಕಾರಣ, ಶ್ರೀನಾಥ್ ಅವರ ಬಾಲ್ಯವೆಲ್ಲಾ ಮೈಸೂರಿನಲ್ಲೇ ಆಗಿ ಮರಿಮಲ್ಲಪ್ಪ ಶಾಲೆಯಲ್ಲಿ ಅವರ ಪೌಢಶಿಕ್ಷಣ ಪಡೆಯುತ್ತಿರುವಾಗಲೇ ಶಾಲೆಯ ಕ್ರಿಕೆಟ್ ತಂಡದ ನಾಯಕರಾಗಿರುತ್ತಾರೆ. ಪೋಷಕರ ಆಸೆಯಂತೆ ಇಂಜೀನಿಯರಿಂಗ್ ಮೊದಲ 2 ವರ್ಷಗಳನ್ನು ಹಾಸನದ ಮಲ್ನಾಡ್ ಕಾಲೇಜಿನಲ್ಲಿ ನಡೆದು ನಂತರದ 2 ವರ್ಷಗಳು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜೀನಿಯರಿಂಗ್ ನಲ್ಲಿ ಪದವಿ ಮಾಡುತ್ತಿರುವಾಗಲೇ,  ಕ್ಲಬ್ ಕ್ರಿಕೆಟ್ ಆಡುತ್ತಿರುವಾಗ 6.3″ ಎತ್ತರದ ಈ ವೇಗದ ಬೌಲರ್ ಕರ್ನಾಟಕದ ಮತ್ತೊಬ್ಬ ಕನ್ನಡದ ಕಲಿಗಳಾದ ಶ್ರೀ ಗುಂಡಪ್ಪ ವಿಶ್ವನಾಥ್ ಅವರ ಕಣ್ಣಿಗೆ ಬಿದ್ದದ್ದೇ ತಡಾ ಕರ್ನಾಟಕದ ರಣಜೀ ತಂಡಕ್ಕೆ ಆಯ್ಕೆಯಾಗುತ್ತಾರೆ.

sri81989/90 ರಲ್ಲಿ ಕರ್ನಾಟಕ ತಂಡದ ಪರವಾಗಿ ಹೈದರಾಬಾದ್ ವಿರುದ್ಧ  ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ  ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭರವಸೆಯನ್ನು ಮೂಡಿಸುವುದಲ್ಲದೇ ಮುಂದಿನ ಆರು ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಋತುವನ್ನು ಮುಗಿಸಿ, ಎರಡನೇ ಋತುವಿನಲ್ಲಿ 20 ವಿಕೆಟ್ ಪಡೆಯುವಷ್ಟರಲ್ಲಿಯೇ ಭಾರತದ ಪರ  18, ಆಕ್ಟೋಬರ್ 1991ರಂದು ಪಾಕ್ ವಿರುದ್ಧ ಶಾರ್ಜಾದಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರೆ, ಅದೇ ವರ್ಷ

29  ಅಕ್ಟೋಬರ್ 1991ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ಭಾರತದ ಪರ ಮೊದಲ ಟೆಸ್ಟ್ ಆಡುತ್ತಾರೆ. ಭಾರತದ ತಂಡದಲ್ಲಿ ಅದಾಗಲೇ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಅವರುಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾರಣ ಬಹಳ ದಿನಗಳ ವರೆಗೂ ಶ್ರೀನಾಥ್ ಬೆಂಚು ಕಾಯಿಸುವ ಪರಿಸ್ಥಿತಿಯುಂಟಾಗುತ್ತದೆ.

sri4ಕಪಿಲ್ ದೇವ್ ಅವರ ನಿವೃತ್ತಿಯಾದ ನಂತರ ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಯ ತಂಡಕ್ಕೆ ಶ್ರೀನಾಥ್ ವೇಗದ ಬೌಲರ್ ಆಗಿ ಮೊದಲ  ಆಯ್ಕೆಯಾಗಿ ಪರಿಗಣಿಸಲ್ಪಡುವುದಲ್ಲದೇ,  ಕರ್ನಾಟಕದ ಮತ್ತೊಬ್ಬ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರ ಜೊತೆಯಲ್ಲಿ ಭಾರತದ ಪರ ಅತ್ಯುತ್ತಮ ವೇಗದ ಜೋಡಿ ಎನಿಸಿಸುತ್ತಾರೆ. ಅದೊಮ್ಮೆ ಭಾರತದ ತಂಡದಲ್ಲಿ ದ್ರಾವಿಡ್, ವಿಜಯ್ ಭಾರದ್ವಾಜ್, ಕುಂಬ್ಲೆ, ಜೋಷಿ, ವೆಂಕಿ, ದೊಡ್ಡಗಣೇಶ್  ಜೊತೆಯಲ್ಲಿ ಶ್ರೀನಾಥ್ ಹೀಗೆ  11ರ ಬಳಗದಲ್ಲಿ 5-6 ಕರ್ನಾಟಕದ ಆಟಗಾರೇ ಇದ್ದ ಸಂದರ್ಭದಲ್ಲಿಯೂ ಶ್ರೀನಾಥ್ ತಂಡದ ಪರ ಅವಿಭಾಜ್ಯ ಅಂಗವಾಗಿದ್ದರು.

ಅಂದೆಲ್ಲಾ ಭಾರತದ ಪಿಚ್‍ಗಳು ಹೆಚ್ಚಾಗಿ  ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತಿದ್ದ  ಕಾರಣ  ಆರಂಭದಲ್ಲಿ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆ ಎನಿಸಿದ್ದರೂ ನಂತರ ದಿನಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡು , ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್‍ಗಳನ್ನು ಪಡೆದರೆ, ಕರ್ನಾಟಕದ ಪರ . ಮೊದಲ ದರ್ಜೆ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆಯುವ ಮೂಲಕ ಎಲ್ಲಾ ವಿಧದ ಕ್ರಿಕೆಟ್ಟಿಗೂ ಸೈ ಎನಿಸಿಕೊಂಡರು.  ಬೌಲಿಂಗ್ ಜೊತೆಯಲ್ಲಿಯೇ ಕೆಳ ಹಂತದಲ್ಲಿ ಉತ್ತಮವಾದ ಹೊಡೆತಗಳೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುವ ಮೂಲಕ ಹತ್ತು ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.  ಚಂಡನ್ನು  ಅತ್ಯಂತ ಭರ್ಜರಿಯಾಗಿ ಬಾರಿಸುತ್ತಿದ್ದ ಕಾರಣ, ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟ್ಟರ್” ಅಗಿಯೂ  ನಿರ್ವಹಿಸಿರುವುದಲ್ಲದೇ, ಟೆಸ್ಟ್ ಪಂದ್ಯಗಳಲ್ಲಿ ಕೆಲವೊಮ್ಮೆ ನೈಟ್ ವಾಚ್ ಮೆನ್ ಆಗಿಯೂ ನಿಭಾಯಿಸಿದ್ದಾರೆ. ಕರ್ನಾಟಕ ಮತ್ತು  ಭಾರತದ ರಾಷ್ಟ್ರೀಯ ತಂಡವಲ್ಲದೇ,  ಇಂಗ್ಲೆಂಡಿನ  ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಸಾಧಾರಣವಾಗಿ ವೇಗದ ಬೌಲರ್ಗಳು 135-145ಕಿಮೀ ವೇಗದಲ್ಲಿ ಬೋಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, 1996 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಅವರು  ಗಂಟೆಗೆ 156 ಕಿ.ಮೀ ವೇಗದಲ್ಲಿ ಬೋಲಿಂಗ್ ಮಾಡಿದ್ದರೇ, ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ, ಗಂಟೆಗೆ 154.5 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿರುವುದು  ಭಾರತದ ಪರ ಇಂದಿಗೂ ಅತ್ಯಂತ ಮಾರಕದ ಬೌಲಿಂಗ್ ದಾಖಲೆಯಾಗಿದೆ.

sri5ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ಫಾರ್ಮಿನಲ್ಲಿ ಇರುವಾಗಲೇ, ತಮ್ಮ 30ನೇ ವಯಸ್ಸಿನಲ್ಲಿ  1999 ರಲ್ಲಿ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಕಾಕತಾಳೀಯವೆಂದರೆ ಅದೇ ದಿನ ಕನ್ನಡ ಮತ್ತೊಬ್ಬ ಕಲಿ ಅನಿಲ್ ಕುಂಬ್ಲೆಯವರೂ ವಿವಾಹವಾದರು. ದುರಾದೃಷ್ಟವಷಾತ್ ನಾನಾ ಕಾರಣಗಳಿಂದಾಗಿ ಅವರ ವೈವಾಹಿಕ ಜೀವನ ಯಶಸ್ವಿಯಾಗದೆ ತಮ್ಮ ಮೊದಲ ಪತ್ರಿಯವರಿಗೆ ವಿಚ್ಚೇದನ ನೀಡಿದನ ನಂತರ 2008 ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

ನೀಳಕಾಯದ ಸಸ್ಯಾಹಾರಿಯಾಗಿ ವೇಗದ ಬೌಲರ್ ಆಗಿದ್ದ ಶ್ರೀನಾಥ್ ವಿಪರೀತ ಕ್ರಿಕೆಟ್ ಆಡುತ್ತಿದ್ದ ಪರಿಣಾಮವಾಗಿ ರೊಟೇಟರ್ ಕಫ್ ಖಾಯಿಲೆಗೆ ತುತ್ತಾಗಿ  ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಾರ್ಚ್ 1997 ರಿಂದ ನವೆಂಬರ್ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು.  ಆದಾದ ನಂತರ ಶ್ರೀನಾಥ್ ಮತ್ತೆ ಅದೇ ರೀತಿಯಲ್ಲಿ  ಚಂಡನ್ನುಎಸೆಯಬಲ್ಲರೇ ಎಂಬ ಎಲ್ಲರ ಅನುಮಾನಕ್ಕೆ ಸಡ್ಡು ಹೊಡೆಯುವಂತೆ ಬೌಲಿಂಗ್ ಮಾಡುವ ಮುಖಾಂತರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. 2000ದ ನಂತರ ಭಾರತ ತಂಡಕ್ಕೆ  ಅಜಿತ್ ಅಗರ್ಕರ್, ಜಹೀರ್ ಖಾನ್ ರಂತಹ ವೇಗಿಗಳು ಸೇರಿಕೊಂಡಾಗ ನಿಧಾನವಾಗಿ ನೇಪತ್ಯಕ್ಕೆ ಸರಿಯ ತೊಡಗಿದ ಶ್ರೀನಾಥ್ 2002 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.  ಆದರೆ ಅಂದಿನ ತಂಡದ ನಾಯಕ ಸೌರವ್ ಗಂಗೂಲಿ  ಅವರ ಒತ್ತಾಯದ ಮೇರೆಗೆ  2003 ರ ವಿಶ್ವಕಪ್‌ನವರೆಗೂ ಏಕದಿನ ಪಂದ್ಯಗಳನ್ನು ಮುಂದುವರೆಸಿ, ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆದ 2003ರ ವಿಶ್ವಕಪ್ ಪಂದ್ಯಾಗಳಿಗಳ ನಂತರ   ಅವರು ಎಲ್ಲಾ ಪ್ರಕಾರದ ಕ್ರಿಕೆಟ್ಟಿನಿಂದ ನಿವೃತ್ತಿ ಘೋಷಿಸಿದರು.

sri2ತಮ್ಮ ನಿವೃತ್ತಿಯ ನಂತರ ಕೆಲ ಕಾಲ ವೀಕ್ಷಕ ವಿವರಣೆಕಾರರಾಗಿ ಗುರುತಿಸಿಕೊಂಡರೂ ನಂತರ ತಮ್ಮ ಸೌಮ್ಯ ಸ್ವಭಾವ ಮತ್ತು ಸನ್ನಡತೆ ಮತ್ತು ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಪಾರವಾದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಏಪ್ರಿಲ್ 2006 ರಲ್ಲಿ, ಶ್ರೀನಾಥ್ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನಿಂದ ಮ್ಯಾಚ್ ರೆಫರಿಯಾಗಿ ಆಯ್ಕೆಯಾಗಿದ್ದಲ್ಲದೇ, 2007 ರ ವಿಶ್ವಕಪ್ನಲ್ಲಿ ಸೇವೆ ಸಲ್ಲಿಸಿದರು. ಇದುವರೆಗೂ ಅವರು 35 ಟೆಸ್ಟ್ ಪಂದ್ಯಗಳು, 194 ODIಗಳು ಮತ್ತು 60 T20I ಗಳಲ್ಲಿ ರೆಫರಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರ್ಷಗಳ ಹಿಂದೆ ಅನಿಲ್ ಕುಂಬ್ಲೆ ಅವರ ಸಾರಥ್ಯದಲ್ಲಿ  ಶ್ರೀನಾಥ್  ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಲ್ಲದೇ  ಅವರ ಸಮಯದಲ್ಲೇ ಚಿನ್ನಸ್ವಾಮೀ ಕ್ರೀಡಾಂಗಣದ ನವೀಕರಣ ಮತ್ತು ನೆಲಮಂಗಲದ  ಬಳಿಯ ಆಲೂರಿನ ಮೈದಾನಗಳಲ್ಲದೇ ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಕ್ರೀಡಾಂಗಣಗಳು ಆರಂಭವಾಗಲು ಕಾರಣೀಭೂತರಾಗಿದ್ದಾರೆ.

ಶ್ರೀನಾಥ್ ಅವರ ಕೆಲವೊಂದು ದಾಖಲೆಗಳು ಈ ರೀತಿಯಾಗಿವೆ.

  • ಭಾರತದ ಪರ  ಏಕದಿನ ಪಂದ್ಯಾವಳಿಗಳಲ್ಲಿ 300  ವಿಕೆಟ್ ಪಡೆದ ಮೊದಲ ಆಟಗಾರ
  • ವೇಗದ ಬೌಲರ್ ಆಗಿ 1992, 1996, 1999 ಮತ್ತು 2003 ಹೀಗೆ  ಸತತವಾಗಿ 4 ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿರುವ ಏಕೈಕ ಭಾರತೀಯ ಆಟಗಾರ
  • ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್(44) ಕಬಳಿಸಿರುವ ಭಾರತೀಯ ಬೌಲರ್
  • ಕ್ರಿಕೆಟ್ಟಿನಲ್ಲಿ ಶ್ರೀನಾಥ್ ಅವರ ಕೊಡುಗೆಯನ್ನು ಮನ್ನಿಸಿ ಭಾರತ ಸರ್ಕಾರ  1999 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀನಾಥ್ ಅವರ ಕ್ರಿಕೆಟ್ ಬದುಕಿನ ಈ ಕೆಲವೊಂದು ರೋಚಕ ಘಟನೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಇರುತ್ತಾರೆ.

  • 1996 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿದ್ದ ಟೈಟಾನ್ ಕಪ್‌ ಪಂದ್ಯದಲ್ಲಿ ಗೆಲ್ಲಲು 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಮೊತ್ತ 164/8 ಆಗಿರುವಾಗ  88 ರನ್‌ಗಳಿಸಿ ಸಚಿನ್ ತೆಂಡೂಲ್ಕರ್ ಔಟಾದ ನಂತರ ಪಂದ್ಯ ಕೈಚೆಲ್ಲಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದಾಗ ಅನಿಲ್ ಕುಂಬ್ಲೆ ಅವರ ಜೊತೆ 9ನೇ ವಿಕೆಟ್ ಜೊತೆಯಾಟಕ್ಕೆ 52 ರನ್ ಸೇರಿಸಿದ ಶ್ರೀನಾಥ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 23 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿ  ಭಾರತ ತಂಡವನ್ನು ಫೈನಲ್‌ ತಲುಪಿಸಿದ್ದಲ್ಲದೇ, ರಾಜ್‌ಕೋಟ್‌ನಲ್ಲಿ ನಡೆದ ಫೈನಲ್ಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ತಂಡ ಪ್ರಶಸ್ತಿಯನ್ನು ಪಡೆಯುವುದರ ಕಾರಣೀಭೂತರಾದರು.
  • sri91999ರಲ್ಲಿ ದೆಹಲಿಯಲ್ಲಿ ನಡೆದ  ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೆ ಅದಾಗಲೇ 9 ವಿಕೆಟ್ ಪಡೆದಿದ್ದಾಗ ಮತ್ತೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ  ಶ್ರೀನಾಥ್ ಎಸೆತವೊಂದರಲ್ಲಿ ಪಾಕ್ ಆಟಗಾರ ಹೊಡೆದ ಚೆಂಡನ್ನು ಭಾರತದ ಆರಂಭಿಕ ಆಟಗಾರ ಸಡಗೊಪನ್ ರಮೇಶ್ ಹಿಡಿಯಲು ಪ್ರಯತ್ನಿಸಿದಾಗ, ಅನಿಲ್ ಕುಂಬ್ಳೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಲಿ ಎನ್ನುವ ಸದಾಶಯದಿಂದ  ಕ್ಯಾಚ್ ಹಿಡಿಯದಿರು ಎಂದು ಕೂಗಿದ್ದನ್ನು ಟಿವಿಯಲ್ಲಿ ಕೇಳಿ ಅಚ್ಚರಿ ಪಟ್ಟಿದ್ದೇವೆ. ನಂತರ ಎಲ್ಲಾ ಚೆಂಡುಗಳನ್ನು ವಿಕೆಟ್ ನಿಂದ ದೂರ ಎಸೆದ್ ತಮ್ಮ ಓವರ್ ಮುಗಿಸಿ ಮುಂದಿನ ಓವರಿನಲ್ಲಿ ಕುಂಬ್ಲೆ ಬೌಲಿಂಗಿನಲ್ಲಿ ವಾಸಿ ಅಕ್ರಮ್ ಔಟಾದಾಗ ಕುಂಬ್ಲೆ ಅವರನ್ನು ಭುಜದ ಮೇಲೆ ಎತ್ತಿ ಮೆರೆಸಾಡುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

12-13 ವರ್ಷಗಳ ಕಾಲ ಭಾರತದ ಪರ ಅಂತರಾಷ್ಟ್ರೀಯ ಪಂದ್ಯಗಳನ್ನು ದೇಶ ವಿದೇಶಗಳಲ್ಲಿ ಆಡಿದ ಶ್ರೀನಾಥ್, ವೇಗದ ಬೌಲರ್ ಆಗಿದ್ದರೂ ತಮ್ಮ ಇಡೀ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಎದುರಾಳಿ ತಂಡದ ವಿರುದ್ಧ ಕೋಪತಾಪಗಳನ್ನು ತೋರದೇ ಸಹನಾಮೂರ್ತಿಯಂತಿದ್ದು ವಿಶ್ವಾದ್ಯಂತ  ಕನ್ನಡಿಗರ ಸೌಮ್ಯತನವನ್ನು ಎತ್ತಿ ಮೆರೆಸಿದ ಜಾವಗಲ್ ಶ್ರೀನಾಥ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ

1947ರಲ್ಲಿ ಬ್ರಿಟೀಷರು ಈ ದೇಶದಿಂದ ಹೊರ ಹೋಗುವಾಗ ಕೆಲವು ಪಟ್ಟಭಧ್ರ ಸ್ವಾರ್ಥ ಹಿತಾಸಕ್ತಿಯಾಗಿ ನಮ್ಮ ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಎರಡು ಭಾಗಗಳಾಗಿ (ನಂತರ ಅದು ಮೂರು ಭಾಗಗಳಾಗಿದೆ) ತುಂಡರಿಸಿ ಭಾರತ ಮತ್ತು ಪಾಕೀಸ್ಥಾನ ಎಂಬ ಎರಡು ಸ್ವತಂತ್ರ ದೇಶಗಳ ಕಾರಣಕ್ಕೆ ಕಾರಣವಾಗಿರುವುದು ಆದಾದ ನಂತರ ಹತ್ತು ಹಲವು ಬಾರಿ ಕಾಲು ಕೆರೆದುಕೊಂಡು ಭಾರತದ ಮೇಲೆ ಬಂದ ಪಾಪಿಗಳಿಗೆ ಭಾರತದ ಕೆಚ್ಚೆದೆಯ ಸೈನಿಕರು ತಕ್ಕ ಉತ್ತರವನ್ನೇ ನೀಡಿರುವುದು ಈಗ ಇತಿಹಾಸ.

ಇಷ್ಟೆಲ್ಲಾ ಹೊಡೆತಗಳಿಂದ ಬುದ್ಧಿ ಕಲಿಯದ ಪಾಪೀಸ್ಥಾನ ಪದೇ ಪದೇ ಭಯೋತ್ಪಾದಕರನ್ನೂ ನುಸುಳುಕೋರರನ್ನು ಭಾರತಕ್ಕೆ ಕಳುಹಿಸಿ ದಂಗೆ ನಡೆಸಿದಾಗ ಭಾರತ ದೇಶ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಅವರ ನೆಲಕ್ಕೇ ನುಗ್ಗಿ ಅವರಿಗೆ ಬುದ್ಧಿ ಕಲಿಸಿದ್ದಲ್ಲದೇ, ಎಲ್ಲಿಯವರೆಗೂ ಪಾಕೀಸ್ಥಾನ ಭಯೋತ್ಪಾದನೆಯನ್ನು ನಿಲ್ಲಿಸುವುದಿಲ್ಲವೋ? ಅಲ್ಲಿಯವರೆಗೂ ಅವರ ಜೊತೆ ಯಾವುದೇ ದ್ವಿಪಕ್ಷೀಯ ರಾಜಕೀಯ, ಕ್ರೀಡೆ ಕಲೆ ಯಾವುದೇ ಚಟುವಟಿಗಳನ್ನು ಇಟ್ಟು ಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ind_pakಅದರೆ ಒಲಂಪಿಕ್ಸ್, ವಿಶ್ವಕಪ್ ನಂತಹ ಕ್ರೀಡಾಕೂಟಗಳು ತಟಸ್ಥ ಸ್ಥಳಗಳಲ್ಲಿ ನಡೆದಾಗ ಅನಿವಾರ್ಯವಾಗಿ ಆಡಲೇ ಬೇಕಾಗುತ್ತದೆ. ಅದೇ ರೀತಿ 24.10.2021ರಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ಜೊತೆ ಆಡಲೇ ಬೇಕಾದಾಗ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳೆಲ್ಲರ ಚಿತ್ತ ದುಬೈನಲ್ಲಿ ನಡೆಯುತ್ತಿದ್ದ ಆಟದ ಬಗ್ಗೆಯೇ ಇತ್ತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತವಾಗಿ 6 ಬಾರಿ ಪಾಕೀಸ್ಥಾನವನ್ನು ಸೋಲಿಸಿದ್ದ ಭಾರತವೇ ಅಂದೂ ಸಹಾ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಭಾರತೀಯ ಆಟಗಾರರ ಆತಿಯಾದ ಆತ್ಮವಿಶ್ವಾಸದ ಎದುರು ಪಾಕೀಸ್ಥಾನದ ಆಟಗಾರ ಸಾಂಘೀಕ ಪ್ರಯತ್ನವೇ ಮೇಲ್ಗೈಯ್ಯಿ ಪಡೆದು ಅಂತಿಮವಾಗಿ ಪಾಕ್ ಪಾಕೀಸ್ಥಾನದ ವಿರುದ್ದ 10 ವಿಕೆಟ್ ನಿಂದ ಪಂದ್ಯವನ್ನು ಗೆದ್ದಾಗ ಇಡೀ ಭಾರತವೇ ಒಂದು ಕ್ಷಣ ಸ್ಥಬ್ಧವಾಗಿತ್ತು. ಅಲ್ಲಲ್ಲಿ ಕೆಲ ದೇಶವಿರೋಧಿ ವಿಕೃತ ಬುದ್ಧಿಗಳು ಬಾಲ ಬಿಚ್ಚಿದ್ದ ಸಂಗತಿ ಮಾರನೇ ದಿನ ಗೊತ್ತಾದಾಗ ಹೆತ್ತ ತಾಯಿಯನ್ನೂ ಮತ್ತು ಹಾಲು ಕೊಡುವ ಹಸುವಿನ ಕೆಚ್ಚಲನ್ನೇ ಕತ್ತರಿಸಿದಾಗ ಆಗುವಂತಹ ನೋವುಂಟಾಗಿತ್ತು.

ಎಲ್ಲದ್ದಕ್ಕಿಂತಲೂ ಅಪರೂಪವೆಂದರೆ 30 ವರ್ಷಗಳ ನಂತರ ವಿಶ್ವಕಪ್ ನಲ್ಲಿ ಭಾರತದ ತಂಡವನ್ನು ಆ ಪರಿಯಾಗಿ ಸೋಲಿಸಿದ್ದರೂ, ಪಾಕೀಸ್ಥಾನದ ಆಟಗಾರರು ಅತಿರೇಕದ ವರ್ತನೆ ತೋರದೇ ಭಾರತೀಯ ತಂಡದ ವಿರುದ್ಧ ಸಹಜವಾಗಿಯೇ ಹಸ್ತಲಾಘವನ್ನು ನೀಡಿದ್ದಲ್ಲದೇ ಡ್ರೆಸಿಂಗ್ ರೂಮಿನಲ್ಲಿಯೂ ನಾಯಕ ಬಾಬರ್ ಅಜಂ ಮಾತನಾಡಿದ ರೀತಿ ಎಲ್ಲರ ಮೆಚ್ಚುಗೆ ಪಡೆದಿತ್ತು.

WhatsApp Image 2021-10-27 at 4.20.10 PMಆದರೆ ಹುಟ್ಟು ಗುಣ ಸುಟ್ಟರು ಹೋಗುವುದಿಲ್ಲ ಎನ್ನುವಂತೆ ಪಾಕೀಸ್ಥಾನ ತಂಡ ಮಾಜೀ ವೇಗದ ಬೌಲರ್, ಮಾಜೀ ನಾಯಕ, ಮಾಜೀ ತರಭೇತುದಾರ ವಖಾರ್ ಯೂನಿಸ್ ಎಂಬ ವಿಕೃತ ಮನಸ್ಸಿನವನು. ಅಲ್ಲಿ ಹಿಂದೂಗಳ ಎದುರು ಮೈದಾನದಲ್ಲಿ ರಿಜ್ವಾನ್ ನಮಾಜು ಮಾಡುತ್ತಿದ್ದ ದೃಶ್ಯ ನನಗೆ ಅತ್ಯಂತ ವಿಶೇಷವಾಗಿತ್ತು ಎಂಬ ಟ್ವಿಟ್ ಮಾಡುವ ಮುಖಾಂತರ ತನ್ನ ಮನಸ್ಸಿನಲ್ಲಿದ್ದ ಕೊಳಕನ್ನು ಹೊರಗೆ ಹಾಕಿದ್ದಾನೆ.. ಈ ರೀತಿ ಯಾವುದೋ ಜಿಹಾದಿ ಮನಸ್ಥಿತಿಯ ಭಯೋತ್ಪಾದಕ ಸಂಘಟನೆ ವ್ಯಕ್ತಿ / ನಾಯಕ ಹೇಳಿದ್ದರೆ ಯಾರೂ ತಲೆ ಕೆಡಸಿಕೊಳ್ಳುತಿರಲಿಲ್ಲ. ಆದರೆ  ಕ್ರಿಕೆಟ್ ಜಗತ್ತಿನಲ್ಲಿ ತನ್ನ ಕರಾರುವಾಕ್ ವೇಗದ ಎಸೆತಕ್ಕೆ ಹೆಸರಾಗಿದ್ದವನು ಕ್ರೀಡಾ ರಾಯಭಾರಿ ಎನಿಸಿಕೊಂಡಿದ್ದವನ ಬಾಯಿಯಲ್ಲಿ ಈ ರೀತಿಯ ಮಾತು ನಿಜಕ್ಕೂ ಅಸಹ್ಯ ಎನಿಸಿದೆ.

ಇಡೀ ಪ್ರಪಂಚಾದ್ಯಂತ ಈ ರೀತಿಯ ವಿಕೃತ ಮಾತುಗಳನ್ನು ಖಂಡಿಸುತ್ತಿದ್ದಂತೆಯೇ, ಗೆಲುವಿನ ಸಂಭ್ರಮದ ಕ್ಷಣಗಳಲ್ಲಿ, ಮಾತಿನ ಭರದಲ್ಲಿ ಈ ರೀತಿಯ ತಪ್ಪಾದ ಮಾತುಗಳು ನನ್ನ ಬಾಯಿಯಿಂದ ಹೊರಬಂದಿದೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಪ್ಪೇ ಸಾರಿಸಿದ್ದಲ್ಲದೇ, ಕ್ರೀಡೆ, ಜನಾಂಗ, ವರ್ಣ ಮತ್ತು ಧರ್ಮ ಎಲ್ಲವನ್ನು ಮೀರಿ ಜನರನ್ನು ಒಗ್ಗೂಡಿಸುತ್ತದೆ. ಎರಡು ದೇಶಗಳ ಸಂಬಂಧವನ್ನು ಬೆಸೆಯುತ್ತವೆ ಎಂದು ಮರು ಟ್ವೀಟ್ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾನೆ. ಹೇಗೂ ಹಿಂದೂಗಳು ತಾನೇ, ಅವರಿಗೆ ಹೇಳಬಾರದದ್ದೆಲ್ಲವನ್ನು ಹೇಳಿ ತನ್ನ ಮನಸ್ಸಿನಲ್ಲಿದ್ದ ನಂಜನ್ನೆಲ್ಲ ಹೊರಹಾಕಿ ನಂತರ ಕಾಟಾಚಾರಕ್ಕೆ ಕ್ಷಮೆ ಯಾಚಿಸಿರುವುದು ನಿಜಕ್ಕೂ ಕ್ಷಮೆಗೆ ಅರ್ಹವಾಗಿಲ್ಲದ್ದಾಗಿದೆ.

WhatsApp Image 2021-10-27 at 4.19.46 PMಭಾರತದ ಹೆಸರಾಂತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರು ಇದು ಆಘಾತಕಾರಿ ಹೇಳಿಕೆ ಮತ್ತು ಅತ್ಯಂತ ನಿರಾಶಾದಾಯಕ ಸಂಗತಿ ಎಂದು ಟ್ವೀಟ್ ಮಾಡಿದ್ದರೆ, ಯೂನಿಸ್‌ನದ್ದು ಜಿಹಾದಿ ಮನಸ್ಥಿತಿ, ಎಂಥಾ ನಾಚಿಕೆಗೇಡಿನ ಮನುಷ್ಯನೀತ ಎಂದು ಕರ್ನಾಟಕದ ಹೆಮ್ಮೆಯ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹೇಳಿರುವುದು ನಿಜಕ್ಕೂ ಸರಿಯಾಗಿದೆ.

shoibಇದೇ ಸಮಯದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅವರು ಹೇಳಿರುವ ಅಖ್ತರ್ ‘ಗಜ್ವಾ-ಎ-ಹಿಂದ್‘ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗಜ್ವಾ ಇ ಹಿಂದ್ ಅನ್ನು ನಮ್ಮ ಪವಿತ್ರ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ ಮತ್ತು ನಂತರ ಘಜ್ವಾ ಇ ಹಿಂದ್‌ಗಾಗಿ ಭಾರತವನ್ನು ಎಲ್ಲಾ ಕಡೆಯಿಂದ ಆಕ್ರಮಿಸುತ್ತೇವೆ ಎಂಬ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಎಂದೋ ಹೇಳಿದ್ದ ಮಾತುಗಳು ಎಂದು ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರಾದರು ಭಾರತದ ವಿರುಧ ಅವರ ಮನಸ್ಸಿನಲ್ಲಿದ್ದ ವಿಕೃತ ಮನೋಭಾವನೆ ಹೊರ ಬಿದ್ದಿದೆ. ಭಾರತದ ವಿರುದ್ಧ ಈ ರೀತಿಯಾಗಿ ವಿಷಕಾರುವುದರಲ್ಲಿ ಅಖ್ತರ್ ಒಬ್ಬರೇ ಮೊದಲ ಕ್ರಿಕೆಟ್ಟಿಗರೇನಲ್ಲ. ಭಾರತದ ವಿರುದ್ಧ ಈ ಹಿಂದೆ ಶಾಹಿದ್ ಅಫ್ರಿದಿ, ಜಾವೇದ್ ಮಿಯಾಂದಾದ್ ಸೇರಿದಂತೆ ಹಲವಾರು ಕ್ರಿಕೆಟಿಗರು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ.

salmanBhatಏತನ್ಮಧ್ಯೆ, ಭಾರತದ ನಿಗೂಢ ಸ್ಪಿನ್ನರ್ ವರುಣ್ ಚಕ್ರವರ್ತಿ ಪಾಕಿಸ್ತಾನದ ವಿರುದ್ಧದ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ಕೇವಲ 2 ರನ್ ನೀಡಿ ಮೆಚ್ಚುಗೆ ಗಳಿಸಿದ್ದರೂ ನಂತರ ದುಬಾರಿಯಾಗಿ ತಮ್ಮ 4 ಓವರ್‌ಗಳ ಕೋಟಾದಲ್ಲಿ ಯಾವುದೇ ವಿಕೆಟ್ ಪಡೆಯದೇ 33 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಭಾರತೀಯರಿಗೆ ಅಚ್ಚರಿಯನ್ನು ಮೂಡಿಸಿದ್ದರು. ಇವರ ಕುರಿತಂತೆಯೇ ತಮ್ಮ ಕೊಳಕು ನಾಲಿಗೆಯನ್ನು ಹರಿಬಿಟ್ಟಿರುವ ಸಲ್ಮಾನ್ ಭಟ್ ಎಂಬ ಪಾಕಿಸ್ಥಾನದ ಮಾಜೀ ಆರಂಭ ಆಟಗಾರ. ವರುಣ್ ಚಕ್ರವರ್ತಿಯಂತಹ ನಿಗೂಢ ಸ್ಪಿನ್ನರ್‌ಗಳು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿಯೂ ಹೇರಳವಾಗಿ ಕಾಣಸಿಗುತ್ತಾರೆ. ಅವನ ಬೌಲಿಂಗ್ ಶೈಲಿ ತುಂಬಾ ಸಾಮಾನ್ಯವಾಗಿರುವ ಕಾರಣ ಪಾಕೀಸ್ಥಾನದ ದಾಂಡಿಗರು ತುಂಬಾ ಸುಲಭವಾಗಿ ಅವನನ್ನು ಎದುರಿಸಲು ಸಾಧ್ಯವಾಯಿತು. ಐಪಿಎಲ್ ನಲ್ಲಿ ವಿದೇಶೀ ಆಟಗಾರರ ಎದುರು ಆತ ಮಿಂಚಿರ ಬಹುದು ಆದರೆ ಪಾಕಿಸ್ತಾನದ ವಿರುದ್ಧ ಆತ ಎಂದಿಗೂ ಪರಿಣಾಮಕಾರಿಯಾಗುವುದಿಲ್ಲ. ಎಂದು ಸಲ್ಮಾನ್ ಭಟ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹರಿಬಿಟ್ಟಿದ್ದಾರೆ.

ಮೊದಲೇ ಭಾರತ ಮತ್ತು ಪಾಕಿಸ್ಥಾನಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿ ಹೋಗಿದೆ. ಇಂತಹ ಸಮಯದಲ್ಲಿ ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಅತ್ಯಂತ ಸಂಯಮದಿಂದ ಮತ್ತು ಬಹಳ ನಾಜೂಕಿನಿಂದ ಭಾರತ ಮತ್ತು ಪಾಕಿಸ್ಥಾನದ ಆಟಗಾರರು ನಿಭಾಯಿಸ ತೊಡಗಿದ್ದರೆ ಕೆಲಸವಿಲ್ಲದ ಬಡಗಿ ಮಗಳ ಕುಂ.. ಕೆತ್ತಿದನಂತೆ ಎನ್ನುವಂತೆ ಯಾರನ್ನೋ ಮೆಚ್ಚಿಸುವ ಸಲುವಾಗಿಯೋ ಇಲ್ಲವೇ ಯಾವುದೋ ವಯಕ್ತಿಕ ಹಿತಾಸಕ್ತಿಗಳಿಗೆ ಈ ರೀತಿಯ ಮಾತುಗಳನ್ನು ಆಡುವ ಮುಖಾಂತರ ಉರಿಯುವ ಬೆಂಕಿಗೆ ತುಪ್ಪವನ್ನು ಹಾಕುವುದು ನಿಜಕ್ಕೂ ಉತ್ತಮವಾದ ಲಕ್ಷಣವಲ್ಲ.

rameezನಿಜ ಹೇಳಬೇಕೆಂದರೆ ಯಾವುದೇ ವಿಧದಲ್ಲಿ ತಾಳೆ ಹಾಕಿದರೂ ಪಾಕೀಸ್ಥಾನ ಭಾರತದೊಂದಿಗೆ ಸರಿಸಮನಾಗದು ಎಂದರೂ ಅತಿಶಯವಲ್ಲ. ಅದರಲ್ಲೂ ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದ ತಕ್ಷಣವೇ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿರುವ ಕೆಲ ವಿಕೃತ ಮನಸ್ಥಿಯವರಿಗೆ ಕೆಲವೇ ಕಲವು ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಇತ್ತೀಚೆಗೆ ಬಿಸಿಸಿಐ ಪಿಸಿಬಿಗೆ ಪರೋಕ್ಷವಾಗಿ ಹಣ ನೀಡುತ್ತಿದೆ ಎಂಬ ಹೇಳಿಕೆ ನೀಡಿರುವುದನ್ನು ಮರೆತಂತಿದೆ. ಐಸಿಸಿಯ ಸುಮಾರು 90%ರಷ್ಟು ಆದಾಯ ಬಿಸಿಸಿಐನಿಂದ ಬರುತ್ತದೆ. ಐಸಿಸಿಯು ಅದೇ ಹಣದಿಂದ ಪಿಸಿಬಿಯೂ ಸೇರಿದಂತೆ ಉಳಿದ ಎಲ್ಲಾ ಕ್ರಿಕೆಟ್ ಮಂಡಳಿಗಳಿಗೆ ಹಣವನ್ನು ನೀಡುತ್ತದೆ ಎಂಬ ಕಠು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಭಾರತ ಇಚ್ಚಿಸಿದಲ್ಲಿ ಧನಸಹಾಯವನ್ನು ನಿಲ್ಲಿಸುವ ಪಾಕಿಸ್ತಾನದ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂಬ ಎಚ್ಚರಿಕೆಯ ಮಾತುಗಳನ್ನೂ ರಮೀಜ್ ಆಡಿರುವುದನ್ನು ಈ ವಿಕೃತ ಮನಸ್ಸುಗಳು ಆಲಿಸಬೇಕಿದೆ.

ಪಿಸಿಬಿಯ ಮಾಜಿ ಅಧ್ಯಕ್ಷರಾದ ರಮಿಜ್ ಅವರ ಈ ಹೇಳಿಕೆಗಳು ಅನಗತ್ಯ ಮತ್ತು ಇದು ದೇಶದ ಘನತೆಗೆ ವಿರುದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಮಾತುಗಳನ್ನು ಅವರೆಂದೂ ಆಡಬಾರದು ಎಂದು ಅನೇಕರು ಹೇಳಿರುವುದಲ್ಲದೇ ಇನ್ನೂ ಕೆಲವರು ಅವರು ರಾಷ್ಟ್ರದ ಕ್ಷಮೆಯಾಚಿಸುವಂತೆ ತಾಕೀತು ಮಾಡಿರುವುದು ಗಮನಾರ್ಹವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಟಿ20 ಕ್ರಿಕೆಟ್ ಪಂದ್ಯದಲ್ಲಿ ಆಕಸ್ಮಾತ್ ಪಾಕಿಸ್ತಾನವು ಭಾರತ ತಂಡವನ್ನು ಸೋಲಿಸಿದಲ್ಲಿ ರಮೀಜ್ ರಾಜಾರವರಿಗೆ ಖಾಲಿ ಚೆಕ್ ಕೊಡಲು ಉದ್ಯಮಿಯೊಬ್ಬರು ಸಿದ್ಧ ಇರುವುದಾಗಿ ಹೇಳುವ ಮುಖಾಂತರ ಅಚ್ಚರಿಯನ್ನು ಮೂಡಿಸಿದ್ದಾರೆ.

relationshipಟ್ಟಿನಲ್ಲಿ ಎಲ್ಲಾ ರೀತಿಯಲ್ಲೂ ಗೊಂದಲದ ಗೂಡಾಗಿರುವ ಪಾಕೀಸ್ಥಾನದಲ್ಲಿ ಸುಮ್ಮನಿರಲಾದೇ ಇರುವೆ ಬಿಟ್ಟು ಕೊಂಡ ಎನ್ನುವಂತೆ ಅನಗತ್ಯವಾಗಿ ವಿವಾದಗಳನ್ನು ಮೈ ಮೇಲೆ ಎರಚಿಕೊಳ್ಳುತ್ತಿದ್ದಾರೆ, ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ ಎಂದು ಎಲ್ಲರೂ ಹೇಳುತ್ತಾರಾದರು ಪಾಕಿಸ್ಥಾನದ ಕೆಲ ಕುಹಕಿಗಳು ತಿಳಿದೋ ತಿಳಿಯದೋ ಮತಾಂಧತೆಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧದ ನಡುವಿರುವ ಕಂದಕವನ್ನು ಮತ್ತಷ್ಟು ತೋಡುತ್ತಿರುವುದಂತೂ ಸತ್ಯ.

ಏನಂತೀರೀ?
ನಿಮ್ಮವನೇ ಉಮಾಸುತ