ನೆಮ್ಮದಿ

ಶಂಕರಪ್ಪ ನಗರದ ಮಾರುಕಟ್ಟೆಯ ಬಳಿ ಸಣ್ಣದಾದ ಕಾಫಿ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಪ್ರತೀ ದಿನ ನೂರಾರು ಜನರು ಅವರ ಅಂಗಡಿಗೆ ಬಂದು ಕಾಫೀ, ಟೀ ಕುಡಿದು ತಮ್ಮ ಮನಸ್ಸಿನ ದುಗುಡವನ್ನು ಕಳೆದುಕೊಂಡು ಉಲ್ಲಾಸಿತರಾಗಿ ಹೋಗುತ್ತಿರುತ್ತಾರೆ. ಅದೋಂದು ಸಂಜೆ‌ ಶಂಕರಪ್ಪನವರಿಗೆ ವಿಪರೀತ ತಲೆ ನೋವು ಕಾಡತೊಡಗಿ, ತಲೆ ಸಿಡಿದು ಹೋಗುವಷ್ಟು ನೋವು ಬಾಧಿಸ ತೊಡಗುತ್ತದೆ. ಅದಾಗಲೇ ಮಬ್ಬುಗತ್ತಲು ಸಮೀಪಿಸುತ್ತಿದ್ದ ಕಾರಣ, ಅಂಗಡಿಯಲ್ಲಿಯೂ ಗ್ರಾಹಕರು ಕಡಿಮೆ ಇದ್ದದನ್ಬು ಕಂಡು, ತಮ್ಮ ಹುಡುಗನಿಗೆ ಅಂಗಡಿಯ ಉಸ್ತುವಾರಿ ವಹಿಸಿ ಹತ್ತಿರದ ಮೆಡಿಕಲ್ ಸ್ಟೋರಿಗೆ… Read More ನೆಮ್ಮದಿ