ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ವಯಸ್ಸು 80+ ಎಲ್ಲಾ ರೀತಿಯ ರಾಜಕೀಯ ಅಧಿಕಾರವನ್ನೂ ಸವಿದ ನಂತರ, ಈಗ ಸ್ವತಂತ್ರವಾಗಿ ನಡೆಯಲಾಗದೇ, ಸ್ಪಷ್ಟವಾಗಿ ಮಾತನಾಡಲಾಗದೇ, ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತು ಕೊಳ್ಳುವವರೆಲ್ಲಾ ಇನ್ನೂ ಅಧಿಕಾರದ ಆಸೆಯಿಂದಾಗಿ ಸಕ್ರೀಯ ಚುನಾವಣಾ ರಾಜಕಾರಣ ಮಾಡುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದಕ್ಕೇ ಒದ್ದಾಡುತ್ತಿರುವವರಿಗೆ, ಐದು ಬಾರಿ ಜನಪ್ರಿಯ ಶಾಸಕರಾಗಿಯೂ ಮಂತ್ರಿಗಿರಿಗೆ ಲಾಭಿಯನ್ನು ನಡೆಸದೇ ತಮ್ಮ 72ನೇ ವಯಸ್ಸಿನಲ್ಲಿಯೇ ಸ್ವಯಂಪ್ರೇರಿತರಾಗಿ ಸಕ್ರೀಯ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವ ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿರ್ಧಾರ ಮೇಲ್ಪಂಕ್ತಿ ಆಗಬೇಕು ಅಲ್ವೇ?… Read More ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಕುಂಬ್ಲೆ ಸುಂದರ ರಾವ್

ಮಾತೃಭಾಷೆ ಮಲೆಯಾಳಂ ಆಗಿದ್ದರೂ, ಕನ್ನಡದಲ್ಲಿ ಯಕ್ಷಗಾನ ಮತ್ತು ತಾಳ-ಮದ್ದಳೆಯ ಖ್ಯಾತ ಕಲಾವಿದರೂ, ಬರಹಗಾರರು, ವಾಗ್ಮಿಗಳೂ, ಸರಳ ಸಜ್ಜನ ಮಾಜಿ ಶಾಸಕರಾಗಿ ರಾಜಕಾರಣಿಯಾಗಿಯೂ ಪ್ರಖ್ಯಾತರಾಗಿದ್ದ ಇಂದು ಬೆಳಿಗ್ಗೆ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದ ಶ್ರೀ ಕುಂಬ್ಲೆ ಸುಂದರ್ ರಾವ್ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕುಂಬ್ಲೆ ಸುಂದರ ರಾವ್