ಕೇಸರಿ ವೀರ ಸಂಭಾಜಿ ಮಹಾರಾಜ

128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೋಲದೇ ದೆಹಲಿ‌ಯ ಕೆಂಪು ಕೋಟೆಯ ಸಹಿತ ಜಿಹಾದಿಗಳ ಎದೆಯ ಮೇಲೆ ಕೇಸರಿ ಧ್ವಜ ನೆಟ್ಟಿದ್ದ ಕೇಸರಿ ವೀರ ಸಂಭಾಜಿ ಮಹಾರಾಜ!!

ತನ್ನ ಹದಿನಾರನೇ ವಯಸ್ಸಿನಲ್ಲೇ ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸು ನನಸು ಮಾಡಿದ ಶಿವಾಜಿ ಮಹಾರಾಜರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕಸ್ಮಾತ್ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನೆಗಾಗಿ ಸದಾ ಖಡ್ಗ ಜಳಪಿಸುತ್ತಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಿದ ಶಿವಾಜಿ ಮಹಾರಾಜರ ನಂತರ ಏನೇನಾಯ್ತು ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ. ಶಿವಾಜಿ ಮಹಾರಾಜರ ನಂತರ ಹಿಂದು ಧರ್ಮದ ಕೀರ್ತಿ ಪತಾಕೆ ಹಾರಿಸಿದ ವೀರ ಕಲಿ ಯಾರು ಗೊತ್ತೆ?

SAm4ಧರ್ಮ ಮರುಸ್ಥಾಪಕ ಶಿವಾಜಿ ಮಹಾರಾಜರ ನಂತರ ಧರ್ಮವನ್ನು ರಕ್ಷಿಸಿದ ಅವರ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಹಿಂದೂಸ್ತಾನದೆಲ್ಲೆಡೆ ಕೇಳಿಬರುವ ಘೋಷಣೆಗಳೆಂದರೆ ಧರ್ಮ ಮರುಸ್ಥಾಪಕ “ಶಿವಾಜಿ”, ಧರ್ಮ ರಕ್ಷಕ “ಸಾಂಭಾಜಿ”. ಹೌದು ಶಿವಾಜಿ ಮಹಾರಾಜರ ನಂತರ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ವೀರ ಬೇರೆ ಯಾರೂ ಅಲ್ಲ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಧರ್ಮದ ಮರುಸ್ಥಾಪಕ ಶಿವಾಜಿ ಮಹಾರಾಜರಾದರೆ, ಧರ್ಮ ರಕ್ಷಕ ಸಾಂಭಾಜಿ ಮಹರಾಜ್. ವೀರ ಸಾಂಭಾಜಿ ಮಹಾರಾಜರು ಶಿವಾಜಿ ಮಹಾರಾಜ ಮತ್ತು ಸಾಯಿಭಾಯಿ ದಂಪತಿಯ ಮಗನಾಗಿ 14ನೇ ಮೇ 1657ರಲ್ಲಿ ಪುಣೆಯ ಪುರಂಧರಘಡನಲ್ಲಿ ಜನ್ಮತಾಳಿದರು.

ಮತಾಂಧ ಇಸ್ಲಾಮಿಕ್ ಭಯೋತ್ಪಾದಕ ಅಫ್ಜಲ್ ಖಾನನನ್ನು ಸಂಹಾರ ಮಾಡಿದ ನಂತರ ಶಿವಾಜಿ ಮಹಾರಾಜರು ಅನೇಕ ಯುದ್ಧಗಳನ್ನು ಗೆದ್ದರು. ತನ್ನ 16ನೇ ವಯಸ್ಸಿನಲ್ಲೇ ತೋರಣಗಡ ಯುದ್ಧವನ್ನು ಗೆದ್ದಿದ್ದ ಶಿವಾಜಿ ಮಹಾರಾಜರು ಒಟ್ಟು 280 ದುರ್ಗಗಳನ್ನು ಗೆದ್ದಿದ್ದರು. ಧರ್ಮ ಮರುಸ್ಥಾಪನೆಗಾಗಿ ಆಗಮಿಸಿದ ಶಿವಾಜಿ ಮಹಾರಾಜರು ತಮ್ಮ ನಂತರ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜರು ಧರ್ಮ ರಕ್ಷಣೆಗಾಗಿ ತೊಡೆ ತಟ್ಟಿನಿಂತರು. ಅನೇಕ ಯುದ್ಧಗಳನ್ನು ಗೆದ್ದಿದ್ದ ಶಿವಾಜಿ ಮಹಾರಾಜರು ಔರಂಗಜೇಬನ ಸಂಹಾರ ಮಾಡಲು ದೊಡ್ಡ ಪ್ಲ್ಯಾನ್ ಮಾಡಿದ್ದರು.

ಆಗ ಅವರ ಜೊತೆ ಪುತ್ರ ಸಾಂಭಾಜಿ ಮಹಾರಾಜರು ಇದ್ದರು. ಸಾಂಭಾಜಿ ಮಹಾರಾಜ ಆಗಿನ್ನು ಬಾಲಕನಾಗಿದ್ದ. ಔರಂಗ ಜೇಬ್ ನನ್ನು ಸಂಹಾರ ಮಾಡಲು ಪ್ಲ್ಯಾನ್ ಮಾಡಿದ್ದ ಶಿವಾಜಿ ಮಹಾರಾಜರು ಆತನ ಗುಲಾಮನಾಗಿದ್ದಂತೆ ವರ್ತಿಸಿ ಅವನನ್ನು ಅವನ ಕೋಟೆಯಲ್ಲೇ ಸೀಳಬೇಕೆಂದು ಅದೊಂದು ದಿನ ಹೊರಟೇ ಬಿಟ್ಟರು. ಜೊತೆಯಲ್ಲಿ ಸಾಂಭಾಜಿ ಮಹಾರಾಜರು ಹೊರಟು ನಿಂತರು. ಆದರೆ ಈ ಪ್ಲ್ಯಾನ್ ಅಷ್ಟು ಸುಲಭದ್ದಾಗಿರಲಿಲ್ಲ. ಆಗ್ರಾದ ಔರಂಗಜೇಬನ ಕೋಟೆ ಹೊಸ ಹಿಕ್ಕ ಶಿವಾಜಿ ಮಹಾರಾಜರನ್ನು ಹಾಗೂ ಸಾಂಭಾಜಿ ಮಹಾರಾಜರನ್ನು ಔರಂಗಜೇಬ ಬಂಧಿಸಿಬಿಟ್ಟನು.

ಅಲ್ಲಿಗೆ ಹಿಂದುಗಳಿಗೆ ದೊಡ್ಡ ಚಿಂತೆ ಶುರುವಾಯತ್ತು. ಇದನ್ನು ನೋಡಿದ ಅಲ್ಲಿನ ಸೇವಕರು ಸಂಭಾಜಿಗೆ ಮಗು ಭಯವಾಗುತ್ತಿದೆಯಾ?  ಎಂದು ಕೇಳಿದ್ದಕ್ಕೆ ಶಿವಾಜಿ ಮಹಾರಾಜನ ಮಗ ನಾನು ನನಗೆ ಭಯವೇ??? ಅನ್ನೋ ಉತ್ತರ ಕೊಟ್ಟ ಧೀರ ಸಾಂಭಾಜಿ. ಬಂಧಿತರಾದ ಶಿವಾಜಿ ಹಾಗೂ ಅವರ ಪುತ್ರ ಮತ್ತೊಂದ ಪ್ಲ್ಯಾನ್ ಮಾಡಿಬಿಟ್ಟರು. ಶಿವಾಜಿ ಮಹಾರಾಜರು ಖಾಯಿಲೆ ಬಂದಂತೆ ನಟನೆ ಮಾಡಿದರು. ಶಿವಾಜಿ ಮಹಾರಾಜರಿಗೆ ಖಾಯಿಲೆ ಆಗಿದೆ ಎಂದುಕೊಂಡ ಜನ ಶಿವಾಜಿ ಮಹಾರಾಜರಿಗೆ ಬುಟ್ಟಿಯಲ್ಲಿ ಮಿಠಾಯಿಗಳನ್ನು ತಂದುಕೊಡಲು ಶುರು ಮಾಡಿದರು. ಅದೊಂದು ದಿನ ನಿತ್ಯದಂತೆ ಅಂದೂ ಮಿಠಾಯಿ ಬುಟ್ಟಿಗಳು ಒಳಕ್ಕೆ ಬಂದವು. ಖಾಯಿಲೆ ಬಂದಂತೆ ನಟನೆ ಮಾಡಿ ಮಲಗಿದ್ದ ಶಿವಾಜಿ ಚಂಗನೆ ಹಾರಿ ಒಂದು ಬುಟ್ಟಿಯಲ್ಲಿ ಕುಳಿತ. ಇನ್ನೊಂದರಲ್ಲಿ ಸಂಭಾಜಿ. ಕೂಡಲೇ ಬುಟ್ಟಿಗಳನ್ನು ಮುಚ್ಚಿ, ಬೋವಿಗಳೂ ಅವನ್ನು ಎತ್ತಿಕೊಂಡು ಹೊರಕ್ಕೆ ಹೊರಟರು.

sam2ಎಂದಿನಂತೆ ಮರುದಿನ ಬೆಳಗಾಯಿತು. ಅಂದೇ ಶಿವಾಜಿಯನ್ನು ಕೊಲ್ಲಬೇಕಾಗಿದ್ದ ದಿನ. ಔರಂಗಜೇಬನ ಆಸ್ಥಾನದ ಮತಾಂಧ ಪೋಲಾದಖಾನನಿಗರ ಸಂಶಯಬಂದು ಹೋಗಿ ನೋಡಿದಾಗ ಶಿವಾಜಿ ಮಾಹಾರಾಜರು ಹಾಗೂ ಸಾಂಭಾಜಿ ಮಹಾರಾಜರು ತಪ್ಪಿಸಿಕೊಂಡು ಬಿಟ್ಟಿದ್ದರು. ಕೂಡಲೇ ಶಿವಾಜಿಯನ್ನು ಹಿಡಿದು ತರಲು ಔರಂಗಜೇಬ ನಾಲ್ಕೂ ದಿಕ್ಕಿಗೆ ತನ್ನ ಸೈನ್ಯ ಅಟ್ಟಿದ. ಅಷ್ಟು ಹೊತ್ತಿಗಾಗಲೇ ಶಿವಾಜಿ, ಸಂಭಾಜಿ ತಮಗಾಗಿ ಊರಾಚೆ ಕಾದಿರಿಸಿದ್ದ ಕುದುರೆಗಳನ್ನೇರಿ ವಾಯುವೇಗದಲ್ಲಿ ದಕ್ಷಿಣ ದಿಕ್ಕಿನಲ್ಲಿ ಪರಾರಿಯಾಗಿದ್ದರು. ದಾರಿಯುದ್ದಕ್ಕೂ ಸಮರ್ಥ ರಾಮದಾಸರ ಮಠಗಳು ಅವರಿಗೆ ರಕ್ಷಣೆ ಕೊಟ್ಟವು. ಗೋಸಾಯಿ-ಬೈರಾಗಿಗಳ ವೇಷ ಹಾಕಿಕೊಂಡು ಕೊನೆಗೂ ಶಿವಾಜಿ ರಾಜಗಡಕ್ಕೆ ಬಂದು ತಲುಪಿದ.

ಶಿವಾಜಿ ಆಗ್ರಾದಿಂದ ತಪ್ಪಿಸಿಕೊಂಡು ಬಂದ ಸುದ್ದಿ ಕೇಳಿ ದಕ್ಷಿಣದ ಎಲ್ಲ ವೈರಿಗಳ ಜಂಘಾಬಲವೇ ಉಡುಗಿ ಹೋಯಿತು. ಅಷ್ಟೇಕೆ, ಇಡೀ ಹಿಂದುಸ್ಥಾನದಲ್ಲಿ ಶಿವಾಜಿಯ ಖ್ಯಾತಿ ಹಬ್ಬಿತ್ತು. ಔರಂಗಜೇಬನಂತಹ ಮಹಾ ಕಪಟಿಯ ಕೈಯಿಂದ, ಅವನ ಸ್ವಂತ ರಾಜಧಾನಿಯಿಂದ, ಇಪ್ಪತ್ತುನಾಲ್ಕು ಘಂಟೆಯೂ ಬಿಚ್ಚುಗತ್ತಿ ಪಹರೆಯ ನಡುವಿನಿಂದ ಔರಂಗಜೇಬನ ಮೂಗಿಗೇ ಸುಣ್ಣ ಹಚ್ಚಿ ಶಿವಾಜಿ ತಪ್ಪಿಸಿಕೊಂಡು ಬಂದಿದ್ದ. ಒಂದೂವರೆ ಸಾವಿರ ಮೈಲಿ ಉದ್ದಕ್ಕೂ ಮೊಗಲ ಸೈನಿಕರ ಕಣ್ಣಿಗೆ ಮಣ್ಣೆರಚಿ ಬಂದಿದ್ದ. ಇಡೀ ಪ್ರಪಂಚದಲ್ಲೇ ಇಂತಹ ಚಾತುರ್ಯ, ಇಂತಹ ಸಾಹಸವನ್ನು ಯಾರು ಕಂಡು ಕೇಳಿರಲಿಲ್ಲ.

ಶಿವಾಜಿ ಮಹಾರಾಜರು ಮೊಳಗಿಸಿದ ಹಿಂದವೀ ಸ್ವರಾಜ್ಯ ಮಂತ್ರ ಕೇವಲ ಮಹಾರಾಷ್ಟ್ರದ್ದು ಮಾತ್ರವಲ್ಲ, ಇಡೀ ಭಾರತದ ಹೃದಯತಂತಿಯನ್ನು ಮೀಟಲು ಸಮರ್ಥವಾಯಿತು.ಶಿವಾಜಿ ಮಹಾರಾಜರ ಜೀವ ಅನ೦ತ ಕೋಟಿ ಹಿ೦ದುಗಳ ಮನದಲ್ಲಿ 1680 ಏಪ್ರಿಲ್ 3ರ೦ದು ಲೀನವಾಯಿತು ಸಾಮಾನ್ಯರಲ್ಲಿ ಅಸಮಾನ್ಯರಾಗಿ ಬೆಳೆದ ಶಿವಾಜಿ ತನ್ನ ಆಡಳಿತದಲ್ಲಿ ಒಟ್ಟಾರೆಯಾಗಿ 280 ದುರ್ಗಗಳನ್ನು ಗೆದ್ದಿದ್ದರು. ರಜಪೂತ ಸಿಕ್ಕರ೦ತಹ ರಾಜಮನೆತನಗಳು ಅಲುಗಾಡಿಸಲಾಗದ ಮೊಘಲ ಸಾಮ್ರಾಜ್ಯವನ್ನು ಸಾಮಾನ್ಯ ಸಾಮಂತನ ಮಗ ಶಿವಾಜಿ ತನ್ನ ಪರಾಕ್ರಮ ಯುಕ್ತಿಯಿ೦ದ ಬುಡಮೇಲು ಮಾಡಿದ್ದ. ಶಿವಾಜಿ ಮಹಾರಾಜರ ನಂತರ ಇಸ್ಲಾಮಿಕ್ ಭಯೋತ್ಪಾದಕರ ಎದೆಯ ಮೇಲೆ ಕೇಸರಿ ಧ್ವಜ ನೆಡಲು ಸಿದ್ಧರಾದವರೇ ಸಾಂಭಾಜಿ ಮಹಾರಾಜರು.

ಸಾಂಭಾಜಿ ಮಹಾರಾಜರು ವಯಸ್ಕರಾದಾಗ ಅವರ ಎತ್ತರ 7.5 ಅಡಿ, ತೂಕ 170ಕೆಜಿ, ಎದೆಯ ಸುತ್ತಳತೆ 75, ಅವರು ಯದ್ದದಲ್ಲಿ ಉಪಯೋಗಿಸಿದ ಖಡ್ಗದ ಎತ್ತರ 4 ಅಡಿ, ಆ ಖಡ್ಗದ ತೂಕ ಬರೊಬ್ಬರಿ 65 ಕೆಜಿ, ಅವರ ಮಾಡುತ್ತಿದ್ದ ಊಟದ ಪದ್ಧತಿ 12, ರೊಟ್ಟಿ 2 ಲಿಟರ್ ಹಾಲು, ಇವರ ಸೈನ್ಯದಲ್ಲಿದ್ದ 500 ಜನರ ಸೈನ್ಯ ಎದುರಾಳಿಯ 10,000 ಜನರನ್ನು ಕೊಲ್ಲುವ ಶಕ್ತಿ ಹೊಂದಿತ್ತು.

ಸಾಂಭಾಜಿ ಮಹಾರಾಜರು ಹೋರಾಡಿದ 128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೊಲದೇ ಅಜೇಯನಾಗಿ ತಂದೆಯ ಮತ್ತು ಹಿಂದು ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದ ರೂವಾರಿ ಧರ್ಮರಕ್ಷಕ ಸಾಂಭಾಜಿ ಮಹಾರಾಜರು.

sam5ಸಾಂಭಾಜಿ ಮಹಾರಾಜರು ಕಾಡಿನಲ್ಲಿ ಎದುರಾದ ವ್ಯಾಘ್ರ(ಸಿಂಹ)ದ ಬಾಯಿಯನ್ನು ಸೀಳಿದ ಪರಾಕ್ರಮಿ ಸೋಲನ್ನರಿಯದ ಸರದಾರ. ಮೊಗಲರ ಆಡಳಿತವಿದ್ದಾಗ ದೆಹಲಿ ಕೆಂಪುಕೋಟೆಯ ಮೇಲೆ ಮೊದಲು ಭಗವಾ ಧ್ವಜ ಹಾರಿಸಿದ ಈ ವೀರ ಕೇಸರಿ, ಧರ್ಮ ನಿಷ್ಠೆ ಗೆ ಇವರ ತಂದೆಯೆ ಭದ್ರ ಬುನಾದಿ. ಕುತಂತ್ರಕ್ಕೆ ಒಳಗಾಗಿ ಮೋಸದಿಂದ ಸಾಂಭಾಜಿ ಮಹಾರಾಜರನ್ನು ಬಂಧಿಸಿದ ನಿಜಾಮ ನಿರಂತರ ಒಂದು ತಿಂಗಳ ಘೋರವಾಗಿ ಶಿಕ್ಷಿಸಿದ ದಿನಕ್ಕೆ ಒಂದು ಬೆರಳುಗಳನ್ನು ಕಿತ್ತೆಸೆಯುತ್ತಿದ್ದ. ಬೆರಳುಗಳು ಮುಗಿದ ಮೇಲೆ ಕೈ ಆಮೆಲೆ ಕಾಲು ಹೀಗೆ ದಿನಾಲು ಹಿಂಸಿಸುತ್ತಿದ್ದ. ಜೊತೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ನಿನಗೆ ನಿನ್ನ ರಾಜ್ಯ ಬಿಟ್ಟು ಕೊಡ್ತಿನಿ ಅಂತ ಆಮಿಷ ಒಡ್ಡುತ್ತಿದ್ದ. ಆದರೆ ಇದಕ್ಕೆ ಸಾಂಭಾಜಿ ಮಹಾರಾಜರ ಉತ್ತರ ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎಂದಿಗೂ ತನ್ನ ಧರ್ಮ ಬಿಟ್ಟು ಇನ್ನೂಂದಕ್ಕೆ ಶರಣಾಗಲ್ಲ.

ನಿನ್ನ ರಾಜ್ಯ ಬಿಟ್ಟು ಕೊಟ್ಟರು ನಾನು ನಿನ್ನ ಧರ್ಮಕ್ಕೆ ಬರಲ್ಲ. ಹೀಗೆ ಹೇಳುತ್ತಾ ಒಂದು ತಿಂಗಳವರೆಗೂ ಜೀವ ಸವೆಸಿದ ಹೊರತು ಧರ್ಮ ಬಿಡಲಿಲ್ಲ. 22 ದಿನಗಳವರೆಗೆ ಅವರನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಯಿತು. ಕೊನೆಗೆ ಆ ಪಾಪೀ ಔರಂಗಜೇಬ ಅವರ ಕಣ್ಣು ಕುಕ್ಕಿಸಿದನು, ನಾಲಿಗೆ ಕತ್ತರಿಸಿದನು ಆದರೂ ಮೃತ್ಯುವು ರಾಜನನ್ನು ಸ್ಪರ್ಷಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಅವರ ದಿವ್ಯ ಧರ್ಮಾಭಿಮಾನದಿಂದಾಗಿ ಅವರಿಗೆ ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು.

ಕೊನೆಗೆ ಅರೆಜೀವವಿರುವ ಸ್ಥಿತಿಯಲ್ಲಿ ಅವರ ದೇಹವನ್ನು ವಡೂ ಎಂಬ ಹಳ್ಳಿಯ ಕಾಡಿಗೆ ತರಲಾಯಿತು. ಅಲ್ಲಿ ಸಂಭಾಜಿ ಮಹಾರಾಜರನ್ನು ಕೊಡಲಿಯಿಂದ ಕಾಲಿನಿಂದ ಹಿಡಿದು ಎಲ್ಲ ಅಂಗಗಳನ್ನು ತುಂಡರಿಸಲಾಯಿತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ 11 ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿರಾಜರ ಕೊಲೆ ಮಾಡಲಾಯಿತು. ಅವರ ಮಸ್ತಕವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವರನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರುವರಿ 1 ರಿಂದ ಮಾರ್ಚ 11 ರವರೆಗೆ ಹೀಗೆ 39 ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿರಾಜರು ಹಿಂದುತ್ವದ ತೇಜವನ್ನು ಬೆಳೆಸಿದರು. ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದರು. ಆಗಿನ್ನು ಸಾಂಭಾಜಿ ಮಹಾರಾಜರ ವಯಸ್ಸು ಬರೀ 31 ವರ್ಷ.

ಅವರ ಕಠಿಣ ದಿನಗಳನ್ನು ಮಹಾರಾಷ್ಟ್ರದ ಜನತೆ ಇನ್ನೂ ಮರೆಯದೆ ಆ ಒಂದು ತಿಂಗಳ ಮಟ್ಟಿಗೆ ಆಹಾರ ಮುಟ್ಟದೆ, ಕಾಲಿಗೆ ಚಪ್ಪಲಿ ಧರಿಸದೇ, ಕಠಿಣ ವೃತಗೈಯುತ್ತಾರೆ. ಸಂಭಾಜಿ ಮಹಾರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು. ಇದು ಮುನ್ನೂರು ವರ್ಷಗಳ ಹಿಂದಿನ ರಾಷ್ಟ್ರ ಜೀವನದಲ್ಲಿನ ಅತ್ಯಂತ ಮಹತ್ತ್ವದ ಅಂಗವಾಗಿತ್ತು. ಇದರಿಂದ ಇತಿಹಾಸದಲ್ಲಿ ತಿರುವು ಮೂಡಿತು. ಜನರ ಬೆಂಬಲದಿಂದ ಮರಾಠರ ಸೈನ್ಯ ಬೆಳೆಯುತ್ತ ಹೋಯಿತು ಹಾಗೂ ಸೈನ್ಯದ ಸಂಖ್ಯೆಯು ಎರಡು ಲಕ್ಷದವರೆಗೆ ತಲುಪಿತು. ಅಲ್ಲಲ್ಲಿ ಮೊಘಲರಿಗೆ ಪ್ರಖರವಾದ ವಿರೋಧ ಪ್ರಾರಂಭವಾಯಿತು ಹಾಗೂ ಕೊನೆಗೆ ಮಹಾರಾಷ್ಟ್ರದಲ್ಲಿಯೇ 27 ವರ್ಷಗಳ ನಿಷ್ಫಲ ಯುದ್ಧದ ನಂತರ ಔರಂಗಜೇಬನ ಅಂತ್ಯವಾಯಿತು. ಮೊಘಲರ ಅಧಿಕಾರ ಕ್ಷೀಣಸಿ ಹಿಂದೂಗಳ ಶಕ್ತಿಶಾಲಿ ಸಾಮ್ರಾಜ್ಯವು ಉದಯಗೊಂಡಿತು.

27 ವರ್ಷ ಔರಂಗಜೇಬನ ಪಾಶವಿ ಆಕ್ರಮಣದ ವಿರುದ್ಧ ಮರಾಠರು ಮಾಡಿದ ಹೋರಾಟದಲ್ಲಿ ಹಂಬೀರರಾವ, ಸಂತಾಜಿ, ಧನಾಜಿಯಂತಹ ಅನೇಕ ಯೋಧರಿದ್ದರು; ಆದರೆ ಈ ಹೋರಾಟಕ್ಕೆ ತಿರುವು ಮೂಡಿದ್ದು ಸಂಭಾಜಿ ರಾಜರ ಬಲಿದಾನದಿಂದ ಆಗಿರುವ ಜಾಗೃತಿಯಿಂದಲೇ ಎಂಬುದನ್ನು ಮರೆಯುವಂತಿಲ್ಲ. ಇಂತಹ ಅಪ್ರತಿಮ ನಾಯಕ ವೀರ ಕೇಸರಿ ಸಂಭಾಜಿ ಮಹಾರಾಜರಿಗೆ ನನ್ನ ಅನಂತ ಕೋಟಿ ನಮನ.

ಸೂಚನೆ : ಅನಾಮಿಕ ಲೇಖಕರ ಈ ಲೇಖನ ಮನಸ್ಸಿಗೆ ತುಂಬಾ ಹಿಡಿಸಿದ್ದರಿಂದ ಯಥಾವತ್ತಾಗಿ ಪ್ರಕಟಿಸಿದ್ದೇನೆ.

ಇಂತಹ ಉತ್ಕೃಷ್ಠ ಲೇಖನ ಬರೆದ ಆ ಅನಾಮಿಕ ಲೇಖಕರಿಗೆ ನನ್ನ ಹೃದಯ ಪೂರ್ವಕ ವಂದನೆಗಳು

ಛತ್ರಪತಿ ಶಿವಾಜಿ ಮಹಾರಾಜ್

ನಮ್ಮ ಭಾರತ ದೇಶದ ಇತಿಹಾಸದ ವೀರಾಧಿವೀರ ಮತ್ತು ಶೂರಾಧಿಶೂರರ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರು ಅಗ್ರಪಂತಿಯಲ್ಲಿ ಕಾಣಸಿಗುತ್ತದೆ. ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಜನ ಮಾನಸವಲ್ಲದೇ ಅನೇಕ ಇತಿಹಾಸಕಾರರು ಇದನ್ನೇ ನಮೂದಿಸಿದ್ದಾರೆ. ಇಡೀ ದೇಶ ಮುಸಲ್ಮಾನರ ಆಕ್ರಮಣಕ್ಕೆ ಒಳಗಾಗಿದ್ದಾಗ ಬಹುಸಂಖ್ಯಾತ ಹಿಂದೂಗಳ ಪರವಾಗಿ ಮಹಾರಾಷ್ಟ್ರದಲ್ಲಿ ಸ್ವಸಾಮರ್ಥ್ಯದಿಂದ ತನ್ನ ಹದಿನಾರನೇಯ ವಯಸ್ಸಿನಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ, ಬಹುಶಃ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನಾಗಾಗಿ ಸದಾ ಖಡ್ಗ ಜಳಪಿಸುತ್ತಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಿದ ಶಿವಾಜಿ ಮಹಾರಾಜರು ಹಿಂದೂಗಳ ಹೃದಯದಲ್ಲಿ ಶಾಶ್ವತವಾಗಿ ಸಾಮ್ರಾಟರೆನಿಸಿಕೊಂಡರು. ಹಿಂದೂ ದಿನಚರಿಯ ಪ್ರಕಾರ ಅವರ ಹುಟ್ಟಿದ್ದು ಇಂದಿಗೆ 390 ವರ್ಷಗಳ ಹಿಂದೆ 1630ರ ವಿಕ್ರಮ ಸಂವತ್ಸರದ ಫಾಲ್ಗುಣ ಮಾಸದ ಕೃಷ್ಣಪಕ್ಷದ ತೃತೀಯದಂದು. ಅಂತಹ ಪ್ರಾತಃಸ್ಮರಣೀಯರನ್ನು ಮತ್ತು ಹಿಂದೂ ಸಾಮ್ರಾಜ್ಯ ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳನ್ನು ನೆನಪಿಸಿಕೊಡುವ ಸಣ್ಣ ಪ್ರಯತ್ನ.

ವಿಶ್ವದ ಇತಿಹಾಸದ ಶ್ರೇಷ್ಠ ಸಂಘಟಕರಲ್ಲಿ ಶಿವಾಜಿ ಮಹಾರಾಜರೂ ಒಬ್ಬರೆಂದೇ ಪರಿಗಣಿಸಲಾಗಿದೆ. ಮರಾಠರನ್ನು ಪ್ರಬಲ ರಾಷ್ಟ್ರ ಪ್ರೇಮಿಗಳನ್ನಾಗಿ ಎತ್ತಿ ಕಟ್ಟಿದ ವ್ಯಕ್ತಿ . ಆತ ಅತ್ಯುತ್ತಮ ಮಿಲಿಟರಿ ತಂತ್ರಜ್ಞ, ಗೆರಿಲ್ಲ ಯುದ್ಧದಲ್ಲಿ ಚಾಣಾಕ್ಷ , ನುರಿತ ರಾಜತಾಂತ್ರಿಕ ಮತ್ತು ಪ್ರಬುದ್ಧ ಆಡಳಿತಗಾರ. ತನ್ನ ಶತ್ರುಗಳನ್ನು ತನ್ನ ವಿರುದ್ಧ ಒಗ್ಗೂಡಿಸಲು ಅವನೆಂದಿಗೂ ಬಿಡಲೇ ಇಲ್ಲ . ರಾಜತಾಂತ್ರಿಕತೆಯ ಕಾರಣದಿಂದ ಅವನು ತನ್ನ ತಂದೆಯನ್ನು ಬಿಜಾಪುರದ ಸುಲ್ತಾನನಿಂದ ಮುಕ್ತಗೊಳಿಸಿದವನು. ಅಂದಿನ ಕಾಲದಲ್ಲಿ ಪ್ರಭಲನಾಗಿದ್ದ ಮತ್ತು ಶಿವಾಜಿಯ ಪ್ರಮುಖ ಶತ್ರುವಾಗಿದ್ದ ಔರಂಗಜೇಬನಂತಹವನೇ ಶಿವಾಜಿಯ ಶೌರ್ಯವನ್ನು ಪ್ರಶಂಸಿಸುತ್ತಿದ್ದ ಎಂದರೆ ಅವನ ಸಾಮರ್ಥ್ಯ ಹೇಗಿತ್ತು ಎಂಬುದರ ಅರಿವಾಗುತ್ತದೆ ಸತತ ಹತ್ತೊಂಬತ್ತು ವರ್ಷಗಳಿಂದ ಶಿವಾಜಿಯ ವಿರುದ್ಧ ಕಾದಾಡಿದರೂ ಶಿವಾಜಿಯನ್ನು ಆತ ಬಗ್ಗು ಬಡಿಯಲಾಗಲೇ ಇಲ್ಲ. ಅದಕ್ಕೆ ತದ್ವಿರುದ್ಧವಾಗಿ ಶಿವಾಜಿಯು ತನ್ನ ರಾಜ್ಯದ ಗಡಿಯನ್ನು ವಿಸ್ತರಿಸುತ್ತಲೇ ಬಂದಿದ್ದ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ನಗರದ ಬಳಿ ಶಹಾಜಿ ಭೋಸಲೆ ಮತ್ತು ಜೀಜಾಬಾಯಿ ದಂಪತಿಗಳ ಮುದ್ದಿನ ಮಗನಾಗಿ 1630 ಶಿವಾಜಿಯವರು ಜನಿಸಿದರು. ಅವರ ಜನ್ಮ ದಿನಾಂಕದ ವಿಷಯದಲ್ಲಿ ಕೆಲ ಜಿಜ್ಞಾಸೆಗಳಿವೆ. ಅನೇಕ ವಿದ್ವಾಂಸರುಗಳು ಎರಡು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರ ಪ್ರಕಾರ ಫೆಬ್ರವರಿ 19, 1630 ಎಂದರೆ ಇನ್ನು ಹಲವರು ಏಪ್ರಿಲ್ 6, 1627 ಛತ್ರಪತಿ ಶಿವಾಜಿಯ ಜನ್ಮ ದಿನಾಂಕವೆಂದು ಪ್ರಸ್ತಾಪಿಸಿದ್ದಾರೆ. ಈ ವಿವಾದವನ್ನು ಸರಿಪಡಿಸಲು ಮಹಾರಾಷ್ಟ್ರ ಸರ್ಕಾರ 1968 ರಲ್ಲಿ ಇತಿಹಾಸಕಾರರ ಸಮಿತಿಯನ್ನು ರಚಿಸಿತು. ಆ ಸತ್ಯ ಶೋಧನಾ ವರದಿಯ ಪ್ರಕಾರ ,ಶಿವಾಜಿ ಜನಿಸಿದ್ದು ಫಲ್ಗುಣ ಮಾಸದ ಕೃಷ್ಣ ಪಕ್ಷದ ತೃತೀಯ ವಿಕ್ರಮ ಸಂವತ್ಸರ 1686ದಂದು ಇದರ ಪ್ರಕಾರ ಫೆಬ್ರವರಿ 19, 1630 ಕ್ಕೆ ಸಮಾನವಾಗಿದೆ ಹಾಗಾಗಿ ಮಹಾರಾಷ್ಟ್ರ ಸರ್ಕಾರ ಫೆಬ್ರವರಿ 19 ರಂದು ಶಿವಾಜಿ ಜಯಂತಿಯ ಅಂಗವಾಗಿ ರಾಜ್ಯ ಸರ್ಕಾರಿ ರಜಾ ದಿನವಾಗಿ ಘೋಷಿಸಿದ್ದಾರೆ.

ಶಿವಾಜಿಯು ಮೂಲತಃ ಮರಾಠಿಗನಾದರೂ, ಶಿವಾಜಿಗೂ ಬೆಂಗಳೂರಿಗೂ ಬಹಳ ನಂಟಿತ್ತು ಎಂಬುದು ನಿಜಕ್ಕೂ ಅಚ್ಚರಿಯ ವಿಷಯವೇ ಸರಿ. ಶಿವಾಜಿಯ ತಂದೆ ಷಹಾಜೀ ಬೋಂಸ್ಲೆ ಬಿಜಾಪುರದ ಸುಲ್ತಾನರ ಬಳಿ ಅಧಿಕಾರಿಯಾಗಿ 1632ರಲ್ಲಿ ಬೆಂಗಳೂರಿಗೆ ವರ್ಗವಾಗಿ ಬರುತ್ತಾರೆ ಮತ್ತು ಸುಮಾರು 25 ವರ್ಷಗಳಷ್ಟು ವರ್ಷ ಇಲ್ಲೇ ಇರುತ್ತಾರೆ ಹಾಗಾಗಿ ಶಿವಾಜಿಯೂ ಸಹಾ ಅನೇಕ ಬಾರಿ ಬೆಂಗಳೂರಿಗೆ ಬಂದಿರುತ್ತಾರೆ. ಅವರ ಬಾಲ್ಯಾದ ಶಸ್ತ್ರಾಭ್ಯಾಸವೂ ಇಲ್ಲಿಯೇ ನೆಡೆದಿತ್ತು ಮತ್ತು ಬೆಂಗಳೂರಿನ ಇಂದಿನ ಚಿಕ್ಕ‌ಪೇಟೆ ಪ್ರದೇಶದ ಗೌರಿ ಮಹಲ್ ಅರಮನೆಯಲ್ಲಿಯೇ 12 ವರ್ಷದ ಶಿವಾಜಿಯ ಮದುವೆ ಸಹೀಬಾಯಿ ಎಂಬುವರೊಂದಿಗೆ ವಿವಾಹವೂ ಅಯಿತು. ಇಂದಿನ ಚಿಕ್ಕಪೇಟೆಯ ವಿಜಯಲಕ್ಷ್ಮೀ ಚಿತ್ರಮಂದಿರವೇ ಆ ಗೌರಿ ಅರಮನೆಯಾಗಿತ್ತು ಎನ್ನುತ್ತಾರೆ ಇತಿಹಾಸಕಾರರು.

ಶಿವಾಜಿ ಕೆಲವು ವರ್ಷ ಬೆಂಗಳೂರಿನಲ್ಲಿಯೂ ಇದ್ದರು. ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಇಂದಿನ ಕರ್ನಾಟಕದಲ್ಲಿನ ಕೆಲವು ಪ್ರದೇಶವನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಕನ್ನಡವೂ ಬರುತ್ತಿದ್ದ ಕಾರಣ, ಅವರು ಚಲಾವಣೆಗೆ ತಂದ ನಾಣ್ಯಕ್ಕೆ ಹೊನ್ನ ಮತ್ತು ಕೃಷಿಕರನ್ನು ರಯತ್ ಎಂದೇ ಕರೆಯುತ್ತಿದ್ದರು. . ಬೆಂಗಳೂರಿನಲ್ಲಿ ಗೌರಿಮಹಲ್, ಗವಿಗಂಗಾಧರೇಶ್ವರ ದೇವಸ್ಥಾನ ಸಮೀಪದ ಗೋಸಾಯಿ ಮಠ ಮತ್ತು ಕಾಡುಮಲ್ಲೇಶ್ವರ ದೇವಸ್ಥಾನ ಇವೆಲ್ಲದರ ನಿರ್ಮಾಣಕ್ಕೆ ಶಿವಾಜಿ ಮಹಾರಾಜರ ಸಹಾಯವಿದೆ.

sad_shiv

ಬೆಂಗಳೂರಿನ ಹೃದಯಭಾಗದಲ್ಲಿ ಮರಾಠಿಗರೇ ಅದರಲ್ಲೂ ದರ್ಜಿಗಳೇ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶನ್ನು ಶಿವಾಜಿ ನಗರ ಎಂಬುದಾಗಿ ನಾಮಕಾರಣ ಮಾಡಿದ್ದರೂ, ಇಂದು ಅಲ್ಲಿ ಕೇವಲ ಬೆರಳೆಣಿಕೆಯಷ್ಟು ಮರಾಠಿಗರಿದ್ದು ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಜೆ.ಸಿ ರಸ್ತೆಯಲ್ಲಿ ಆರಂಭದಲ್ಲಿಯೇ ಶಿವಾಜಿ ಚಿತ್ರಮಂದಿರವಿತ್ತು ಮತ್ತು ಅದರ ಮುಂದೆ ಖಡ್ಗವನ್ನು ಹಿಡಿದು ಕುದುರೆಯನ್ನೇರಿದ ಶಿವಾಜಿಯ ವಿಗ್ರಹವಿದದ್ದು ಈಗ ಇತಿಹಾಸ. ಈಗ ಬೆಂಗಳೂರು ಮಹಾನಗರ ಪಾಲಿಕೆ, ಸದಾಶಿವ ನಗರದ ಈಜುಕೊಳದ ಮುಂದೆ ಶಿವಾಜಿಯ ಪ್ರತಿಮೆಯನ್ನು ನಿರ್ಮಿಸಿ ಬೆಂಗಳೂರಿಗೂ ಶಿವಾಜಿಗೂ ಇರುವ ಸಂಬಂಧವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ.

ಚಿಕ್ಕಂದಿನಿಂದಲೇ ಶಿವಾಜಿ ಬಹಳ ಚುರಾಗಿದ್ದ ಹುಡುಗನಾಗಿದ್ದ ಕಾರಣ ಅವರ ತಾಯಿ ಜೀಜಾಬಾಯಿಯವರು ಆತನಿಗೆ ಸಕಲ ರೀತಿಯ ಧಾರ್ಮಿಕ ವಿದ್ಯಾಭ್ಯಾಸಗಳಿಗೆ ಒತ್ತಿ ನೀಡುತ್ತಾ ವೀರ ಸಾಹಸಿಗರ ಶೌರ್ಯ ಪ್ರತಾಪಗಳ ಕಥೆಗಳನ್ನು ಹೇಳುತ್ತಾ ಶಿವಾಜಿಯಲ್ಲಿ ಧರ್ಮ ಮತ್ತು ದೇಶ ಪ್ರೇಮವನ್ನು ತುಂಬುತ್ತಾಳೆ.ಆದಕ್ಕೆ ತಕ್ಕಂತೆ ಆತನಿಗೆ ದಾದಾಜಿ ಕೊಂಡ ದೇವ ಅಂತಹವರು ಆತನ ಯುದ್ಧ ತರಬೇತಿಯ ಪ್ರಾಥಮಿಕ ತರಬೇತುದಾರರಾದ ಮೇಲಂತೂ ಶಿವಾಜಿಯ ಯುದ್ದ ಕಲೆಗಳು, ಕ್ಷಾತ್ರ ತೇಜಗಳು ಮತ್ತಷ್ಟೂ ಪ್ರಭಲವಾಗುತ್ತದೆ ಮತ್ತು ಪ್ರಖರವಾಗುತ್ತದೆ. ಶಿವಾಜಿಯವರ ತಂದೆ ಶಹಾಜಿ ಮಜೋಲಿ ಭೋಸಲೆ ಯವರು ಬಿಜಾಪುರದ ಆದಿಲ್ ಶಾಹಿ ನಿಜಾಮರ ಸಾಮಂತರಾಗಿದ್ದು ಕೊಂಡು ಪುಣೆಯ ಜಹಾಂಗೇರಿ, ಬರಾಹ್ ಮಾವಲ್ ಪ್ರಾಂತ್ಯದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ತಮ್ಮ ತಂದೆಯವರ ಈ ರೀತಿಯ ದಾಸ್ಯವನ್ನು ಒಪ್ಪದ ಶಿವಾಜಿ ತನ್ನ ಶಿವಾಜಿ ತನ್ನ ಮಾವಲ್ ಸ್ನೇಹಿತರೊಂದಿಗೆ ಸಹ್ಯಾದ್ರಿ ಶ್ರೇಣಿಯ ಬೆಟ್ಟಗಳು ಮತ್ತು ಕಾಡುಗಳಲ್ಲಿ ಪ್ರಯಾಣಿಸಿ, ತನ್ನದೇ ಆದ ಒಂದು ಸೈನ್ಯವನ್ನು ಕಟ್ಟಿಕೊಂಡು 1645 ರಲ್ಲಿ, ಕೇವಲ 15 ವರ್ಷದ ಶಿವಾಜಿ, ಬಿಜಾಪುರಿ ಕಮಾಂಡರ್ ಇನಾಯತ್ ಖಾನ್ ಅವರಿಂದ ತೋರಣ ಗಡವನ್ನು ಕಸಿದು ಕೊಳ್ಳುವ ಮೂಲಕ ತನ್ನದೇ ಆದ ಸ್ವತಂತ್ರ್ಯ ಹಿಂದೂ ರಾಷ್ಟ್ರವನ್ನು ಕಟ್ಟುವುದರಲ್ಲಿ ಮುಂದಾದನು. ಆ ತೋರಣ ಗಡದ ರೋಚಕ ಕಥೆ ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ https://wp.me/paLWvR-Am

ಶಿವಾಜಿಯ ಉದ್ಧಟತನವನ್ನು ತಾಳಲಾರದ ಚಿಜಾಪುರದ ಸುಲ್ತಾನ ತನ್ನಲ್ಲಿ ಸಾಮಂತನಾಗಿದ್ದ ಶಿವಾಜಿಯ ತಂದೆಯನ್ನು 1648 ರ ಜುಲೈ 25 ರಂದು ಘೋರ್ಪಡೆ ಜೈಲಿನಲ್ಲಿ ಬಂಧಿಸಿ ಸುಮಾರು ಒಂದು ವರ್ಷಗಳ ನಂತರ 1649 ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಹಾಗೆ ಬಿಡುಗಡೆಯಾದ ಶಿವಾಜಿಯವರು ತಮ್ಮ ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ನಂತರ 1665ರಲ್ಲಿ ಬೇಟೆಯ ಅಪಘಾತ ಒಂದರಲ್ಲಿ ನಿಧನರಾದರು. ತಂದೆಯವರ ಮರಣಾನಂತರ ಶಿವಾಜಿ ಮತ್ತಷ್ಟು ಚುರುಕಾಗಿ ಸದ್ದಿಲ್ಲದೆ ತನ್ನ ಸೈನ್ಯದ ಶಕ್ತಿಯನ್ನು ಬಲಪಡಿಸಿ ಶತ್ರುಗಳ ಮೇಲೆ ಮತ್ತೆ ದಾಳಿಯನ್ನು ಪ್ರಾರಂಭಿಸಿ, 1656 ರಲ್ಲಿ, ಬಿಜಾಪುರದ ಸಹ ಮರಾಠಾ ಊಳಿಗಮಾನ್ಯನಾದ ಚಂದ್ರರಾವ್ ಮೋರ್ನನ್ನು ಕೊಂದು, ಇಂದಿನ ಮಹಾಬಲೇಶ್ವರ ಬಳಿಯ ಜಾವಲಿ ಕಣಿವೆಯನ್ನು ಅವನಿಂದ ವಶಪಡಿಸಿಕೊಂಡನು. ಈ ಸೋಲಿಗೆ ಆದಿಲ್‌ಶಾ ಅಸಮಾಧಾನಗೊಂಡು ಶಿವಾಜಿಯನ್ನು ಬಂಧಿಸಲು ಇಲ್ಲವೇ ಸಾಧ್ಯವಾದರೇ ಅವನನ್ನು ಮುಗಿಸಿಯೇ ಬಿಡಲು ತನ್ನ ಅನುಭವಿ ಜನರಲ್ ಅಫ್ಜಲ್ ಖಾನ್‌ನನ್ನು ಕಳುಹಿಸಿದನು.

shiv5

ಹಾಗೆ ದಂಡೆತ್ತಿ ಬಂದ ಅಘ್ಜಲ್, ಶಿವಾಜಿಯ ಕುಟುಂಬಕ್ಕೆ ಪವಿತ್ರವಾದ ತುಳಜಾ ಭವಾನಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಲ್ಲದೇ ಪಂಡರಾಪುರದ ವಿಠೋಬಾ ದೇವಸ್ಥಾನ ಮತ್ತು ಶಿವಾಜಿಯ ಪ್ರತಾಪಗಡ್ ಕೋಟೆಗೆ ಹಿಮ್ಮೆಟ್ಟಿದನು. ಸುಮಾರು ಎರಡು ತಿಂಗಳುಗಳ ಕಾಲ ಕೋಟೆಯನ್ನು ಸುತ್ತುವರಿದ ನಂತರ ಶಿವಾಜಿ ಸಂಧಾನಕ್ಕಾಗಿ ತನ್ನ ದೂತನೊಬ್ಬನನ್ನು ಅಫ್ಜಲ್ ಖಾನ್ ಬಳಿಗೆ ಕಳುಹಿಸುತ್ತಾನೆ, ಪ್ರತಾಪಗಡ್ ನ ತಪ್ಪಲಿನಲ್ಲಿರುವ ಶಾಮಿಯಾನದಲ್ಲಿ ಶಿವಾಜಿ ಮಹಾರಾಜ್ ಮತ್ತು ಅಫ್ಜಲ್ ಖಾನ್ ನಡುವೆ ಸಭೆ ಏರ್ಪಡಿಸಿ ಅವರಿಬ್ಬರೂ ತಲಾ ಹತ್ತು ವೈಯಕ್ತಿಕ ಅಂಗರಕ್ಷಕರನ್ನು ಮಾತ್ರ ಕರೆ ತರಬೇಕೆಂದು ಅವರೆಲ್ಲರೂ ನಿಶಸ್ತ್ರಧಾರಿಗಳಾಗಿರವೇಕೆಂದು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದ್ಯಾಗ್ಯೂ ವಿಶ್ವಾಸಘಾತುಕತನಕ್ಕೆ ಪ್ರಸ್ತಿದ್ಧನಾದ ಅಫ್ಜಲ್ ಖಾನ್ ತನ್ನ ಕೋಟ್‌ನಲ್ಲಿ ಕಟ್ಯಾರ್ (ಸಣ್ಣ ಬಾಕು) ವನ್ನು ಮರೆಮಾಚಿ ಇಟ್ಟುಕೊಂಡಿರುತ್ತಾನೆ. ಇದಕ್ಕೆ ಪ್ರತಿಯಾಗಿ ಶಿವಾಜಿಯೂ ತನ್ನ ಬಟ್ಟೆಯ ಒಳಗೆ ರಕ್ಷಾಕವಚವನ್ನು ಧರಿಸಿ, ಒಂದು ಕೈಯಲ್ಲಿ ಮರೆಮಾಚುವ ವಾಘ ನಖಾವನ್ನು ಹಿಡಿದು ಕೊಂಡು ಬಂದಿರುತ್ತಾನೆ.

shiva2

ಅವರಿಬ್ಬರೂ ಆ ಗುಡಾರದೊಳಗೆ ಬಂದಾಗ 6 ಅಡಿ 7 ಇಂಚು ಎತ್ತರದ ದೈತ್ಯ ಅಫ್ಜಲ್ ಸಾಧಾರಣ ಎತ್ತರದ ಶಿವಾಜಿಯನ್ನು ಸ್ನೇಹದ ಪ್ರತೀಕವಾಗಿ ಅಪ್ಪಿಕೊಳ್ಳುತ್ತಾರೆ . ಈ ಸಂದರ್ಭದಲ್ಲಿ ದುತರಾಷ್ಟ್ರಾಲಿಂಗನದಂತೆ ದೈತ್ಯ ಕಾಯ ಅಪ್ಜಲ್, ಕೃಶಕಾಯ ಶಿವಾಜಿಯನ್ನು ತನ್ನ ಹಿಡಿತದಿಂದ ಬಂಧಿಸಿ ಮತ್ತೊಂದು ಕೈಯಿಂದ ಅಡಗಿಸಿಟ್ತು ಕೊಂಡಿದ್ದ ಬಾಕುವಿನಿಂದ ಶಿವಾಜಿಯನ್ನು ಬೆನ್ನಿಗೆ ಇರಿಯಲು ಪ್ರಯತ್ನಿಸುತ್ತಾನೆ. ಆದರೆ ಮಂಜಾಗೃತಾ ಕ್ರಮವಾಗಿ ಬಟ್ಟೆಯ ಒಳಗೆ ಧರಿಸಿದ್ದ ರಕ್ಷಾಕವಚವು ಅವನ ಪ್ರಾಣವನ್ನು ಉಳಿಸಿದರೆ, ಇದಕ್ಕೆ ಪ್ರತೀಕಾರದಂತೆ ಶಿವಾಜಿಯೂ ಸಹಾ ತನ್ನ ಕೈಯಲ್ಲಿದ್ದ ವಾಘಾ ನಖದಿಂದ (ಲೋಹದಿಂದ ಮಾಡಿದ ಹುಲಿ ಉಗುರಿನಂತಹ ಆಯುಧ) ಅಫ್ಜಲ್ ಖಾನಿನ ಹೊಟ್ಟೆಯನ್ನು ಸೀಳಿಬಿಡುತ್ತಾನೆ. ನಂತರ ತನ್ನ ಭಟರಾದ ಸಂಭಾಜಿ ಕಾವ್ಜಿ ಕೊಂಧಲ್ಕರ್ ಮುಖಾಂತರ ಅಫ್ಜಲ್ ಖಾನ್ ಶಿರಚ್ಛೇದನ ಮಾಡಿ ಅವನ ರುಂಡವನ್ನು ಸೆರೆಯಲ್ಲಿದ್ದ ತಂದೆಯನ್ನು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದ್ದರ ಪ್ರತೀಕಾರವಾಗಿ ಶಿವಾಜಿಯ ತಾಯಿ ಜಿಜಾಬಾಯಿಗೆ ತೋರಿಸಲು ರಾಜ್‌ಗಡ್‌ಗೆ ಕಳುಹಿಸಲಾಯಿತು. ಹೀಗೆ ತಮ್ಮ ನಾಯಕನ ಹತ್ಯೆಯಾಗುತ್ತಿದ್ದಂತೆ ಆದಿಲ್‌ಶಾಹಿ ಪಡೆಗಳೂ ದಿಕ್ಕಾಪಾಲಾಗಿ ಚೆಲ್ಲಾಪಿಲ್ಲಿಯಾವುದರ ಮೂಲಕ ಶಿವಾಜಿ ಯುಕ್ತಿಯಿಂದ ತನ್ನ ಶತೃಗಳನ್ನು ಧಮನ ಮಾಡುತ್ತಾನೆ.

ಭಾರತದಲ್ಲಿ ಡಚ್ ಮತ್ತು ಪೋರ್ಚುಗೀಸರು ತಮ್ಮ ನೌಕಾಬಲದ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದದ್ದನ್ನು ಗುರುತಿಸಿದ ಶಿವಾಜಿ ಮಹಾರಾಜರು 5ನೇ ಡಿಸೆಂಬರ್ 1664ರಲ್ಲಿ ಕೊಂಕಣ ಸಮುದ್ರದಲ್ಲಿ ಸಿಂಧುದುರ್ಗ ಸ್ಥಾಪನೆಮಾಡಿ ನೌಕಾಪಡೆಗಳನ್ನು ಸ್ಥಾಪಿಸಿ ತಮ್ಮ ಸೈನಿಕರಿಗೆ ಸೂಕ್ತ ತರಭೇತಿಗಳನ್ನು ನೀಡುವ ಮೂಲಕ ಭಾರತದ ಕಡಲ ಶಕ್ತಿಯನ್ನು ಹೆಚ್ಚಿಸುವಂತೆ ಮಾಡಿದ್ದಲ್ಲದೇ ಅದಕ್ಕೆ ಪೂರಕವಾಗಿ ವಿಜಯ ದುರ್ಗ, ಸುವರ್ಣದುರ್ಗ, ಕಲ್ಯಾಣ್ ಮುಂತಾದ ಕೋಟೆಗಳನ್ನು ನಿರ್ಮಿಸುವ ಮೂಲಕ ಕಡಲ ತೀರ ಪ್ರದೇಶವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.ಇವು ಮರಾಠ ನೌಕಾದಳಕ್ಕೆ ರಕ್ಷಣೆ ಕೊಡಲು ಮತ್ತು ಶತ್ರುಗಳ ದಾಳಿ ಸಮುದ್ರದ ಮೂಲಕ ಹಿಮ್ಮೆಟ್ಟಿಸಲು ಸಹಾಯಕವಾಗಿತ್ತು. ಕೊಂಕಣದ ಪ್ರಮುಖ ಬಂದರಾಗಿದ್ದ ಬಸ್ರೂರಿನ ಮೇಲೆ ಧಾಳಿ ಮಾಡಿ ಅದನ್ನು ವಶಪಡಿಸಿಕೊಳ್ಳುತ್ತಾರೆ. ಬಸ್ರೂರು ಸ್ವಾತಂತ್ರ್ಯ ದಿವಸದ ರೋಚಕ ಕಥೆ https://wp.me/paLWvR-BB

ಹೀಗೆ ನೌಕಾದಳದಲ್ಲಿ ತಮ್ಮ ಸಾಮಥ್ಯವನ್ನು ಹೆಚ್ಚಿಸಿಕೊಂಡು 1664 ರಲ್ಲಿಯೇ ಶಿವಾಜಿ ಮೊಘಲ್ ವ್ಯಾಪಾರ ಕೇಂದ್ರವಾದ ಬಂದರು ನಗರ ಸೂರತ್ ಅನ್ನು ವಶ ಪಡಿಸಿಕೊಳ್ಳುತ್ತಾನೆ. ಇದರಿಂದ ಕೋಪೋದ್ರಿಕ್ತನಾದ ಔರಂಗಜೇಬ್ ಶಿವಾಜಿಯನ್ನು ಬಗ್ಗು ಬಡಿಯಲು ರಜಪೂತ ಮಿರ್ಜಾ ರಾಜ ಜೈ ಸಿಂಗ್ ರನ್ನು ಸುಮಾರು 15,000 ಸೈನ್ಯದೊಂದಿಗೆ ಕಳುಹಿಸಿಕೊಡುತ್ತಾನಾದರೂ ಶಿವಾಜಿಯ ಸೈನ್ಯದ ಮಂದೆ ಅವರ ಆಟವೇನು ನಡೆಯಲಿಲ್ಲ. ಅದಕ್ಕಾಗಿ 1666 ರಲ್ಲಿ, ಔರಂಗಜೇಬ್ ಶಿವಾಜಿಯನ್ನು ತನ್ನ ನ್ಯಾಯಾಲಯಕ್ಕೆ ಕರೆಸಿಕೊಂಡು ಅನಾಗರೀಕವಾಗಿ ಶಿವಾಜಿಯನ್ನು ಬಂಧಿಸಿ ಆಗ್ರಾದ ಕೊತ್ವಾಲ್ ಫೌಲಾದ್ ಖಾನ್ ಅವರ ಕಾವಲಿನಲ್ಲಿ ಗೃಹಬಂಧನದಲ್ಲಿ ಇರಿಸುತ್ತಾನಾದರೂ ಬುದ್ದಿವಂತ ಶಿವಾಜಿ ತನ್ನ ಚಾಕಚಕ್ಯತೆಗಳಿಂದ ಹಣ್ಣುಗಳ ಬುಟ್ಟಿಯೊಳಗೆ ಅಡಗಿಟ್ಟು ಕೊಂಡು ಆಗ್ರಾದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.

ಹಾಗೆ ಹಿಂತಿರುಗಿದ ನಂತರ ಮತ್ತೊಮ್ಮೆ ಮೊಘಲರ ವಿರುದ್ಧ ತೀವ್ರತರವಾದ ಆಕ್ರಮಣವನ್ನು ಮಾಡಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿಯೇ ಕಳೆದು ಕೊಂಡಿದ್ದ ಬಹುಪಾಲು ಪ್ರಾಂತ್ಯಗಳನ್ನು ಹಿಂಪಡೆಯಲು ಯಶಸ್ವಿಯಾಗುತ್ತಾನೆ. 1670 ರಲ್ಲಿ ಎರಡನೇ ಬಾರಿಗೆ ಸೂರತ್‌ನನ್ನು ವಶಪಡಿಸಿಕೊಳ್ಳುತ್ತಾನೆ. ಇದರ ಪ್ರತೀಕವಾಗಿ ಧಾಳಿ ಮಾಡಿದ ಮೊಘಲರು ಮತ್ತೊಮ್ಮೆ ಇಂದಿನ ನಾಸಿಕ್ ಬಳಿಯ ವಾಣಿ-ದಿಂಡೋರಿ ಕದನದಲ್ಲಿ ಕೆಟ್ಟದಾಗಿ ಸೋಲನುಭವಿಸುತ್ತಾರೆ.

shiv2

ಇಷ್ಟೆಲ್ಲ ಹೋರಾಟಗಳ ಮೂಲಕ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡಿದ್ದ ಶಿವಾಜಿಯನ್ನು 1674 ರ ಜೂನ್ 6 ರಂದು ( ಹಿಂದೂ ಪಂಚಾಂಗದ ಪ್ರಕಾರ 1596 ರ ಆನಂದನಾಮ ಸಂವತ್ಸರ ಜೇಷ್ಠ ಶುದ್ಧ ತ್ರಯೋದಶಿ) ರಾಯಗಡ್ ಕೋಟೆಯಲ್ಲಿ ಮರಾಠಾ ಸ್ವರಾಜ್ ರಾಜನಾಗಿ ಕಿರೀಟಧಾರಣೆ ಮಾಡಲಾಯಿತು. ಅದೇ ಸಂದರ್ಭದಲ್ಲಿ ಶಿವಾಜಿ ಮಹಾರಾಜನಿಗೆ ಶಕಕರ್ತಾ (ಒಂದು ಯುಗದ ಸ್ಥಾಪಕ) ಮತ್ತು ಛತ್ರಪತಿ (ಪರಮಾಧಿಕಾರ ಸಾರ್ವಭೌಮ) ಎಂಬ ಶೀರ್ಷಿಕೆಯಿತ್ತು. ಹೈಂದವ ಧರ್ಮಧಾರಕ್ (ಹಿಂದೂ ಧರ್ಮದ ರಕ್ಷಕ) ಎಂಬ ಬಿರುದನ್ನು ಸಹ ನೀಡಲಾಗುತ್ತದೆ.

ಅಧಿಕೃತವಾಗಿ ಮಹಾರಾಜ ಪಟ್ಟಾಭಿಷೇಕವಾದ ನಂತರ 1674 ರಿಂದ ಶಿವಾಜಿಯ ದಂಡು ಆಕ್ರಮಣಕಾರಿ ಅಭಿಯಾನವನ್ನು ಕೈಗೊಂಡು , ಖಂಡೇಶ್ (ಅಕ್ಟೋಬರ್) ಮೇಲೆ ದಾಳಿ ಮಾಡಿದರು, ಬಿಜಾಪುರಿ ಪಾಂಡಾ (ಏಪ್ರಿಲ್ 1675), ಕಾರವಾರ (ವರ್ಷದ ಮಧ್ಯಭಾಗ) ಮತ್ತು ಕೊಲ್ಹಾಪುರ (ಜುಲೈ) ವಶಪಡಿಸಿಕೊಂಡರು. ನವೆಂಬರ್ ನಲ್ಲಿ ಮರಾಠಾ ನೌಕಾಪಡೆ ಜಂಜೀರಾ ಸಿದ್ದಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ. ಶಿವಾಜಿಯು ತನ್ನ ಪಥವನ್ನು ದಕ್ಷಿಣ ಭಾರತದತ್ತ ಹರಿಸಿ ಹೊರಗಿನವರಿಂದ ದಕ್ಷಿಣ ಭಾರತವನ್ನು ಪರಕೀಯರ ಆಕ್ರಮಣದಿಂದ ರಕ್ಷಿಸಬೇಕಾದದ್ದು ತನ್ನ ಕರ್ತವ್ಯ ಎಂದು ಭಾವಿಸಿ ಶಿವಾಜಿ ವೆಲ್ಲೂರು ಮತ್ತು ಜಿಂಗೀ ಕೋಟೆಗಳನ್ನು ವಶಪಡಿಸಿಕೊಂಡರು. ಇಷ್ಟೆಲ್ಲಾ ತೀವ್ರತರನಾದ ಸತತವಾದ ಧಾಳಿಗಳಲ್ಲಿಯೇ ನಿರತನಾಗಿದ್ದ ಶಿವಾಜಿ ಮಹಾರಾಜ ತಮ್ಮ 52 ನೇ ವಯಸ್ಸಿನಲ್ಲಿ 1680 ರ ಏಪ್ರಿಲ್ 3 ರಂದು ರಾಯ್ ಗಢದಲ್ಲಿ ವಿಷಮ ಜ್ವರ ಮತ್ತು ಭೇದಿಯ ಕಾರಣದಿಂದಾಗಿ ನಿಧನ ಹೊಂದುತ್ತಾರೆ.

ಶಿವಾಜಿಯ ನಂತರ ಅವರ ಮಕ್ಕಳಾದ ಅದ್ಭುತ ಹೋರಾಟಗಾರ ವೀರ ಸಾಂಬಾಜಿ (ಲಿಂಕ್ ಮೇಲೆ ಕ್ಲಿಕ್ ಮಾಡಿ) ಮತ್ತು ರಾಜಾರಾಂ ತಂದೆಯಂತೆಯೇ ಕ್ಷಾತ್ರ ತೇಜರಾಗಿದ್ದು ಹಿಂದವೀ ರಾಷ್ಟ್ರವನ್ನು ಮುಂದುವರೆಸಿ ಕೊಂಡು ಹೋಗುವುದರಲ್ಲಿ ಸಫಲರಾಗಿ ಹಿಂದೂಸ್ಥಾನದಲ್ಲಿ ಹಿಂದೂಗಳೂ ತಲೆಯೆತ್ತಿ ನಿಲ್ಲುವಂತಹ ಪರಿಸ್ಥಿತಿಯನ್ನು ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಬ್ರಿಟಿಷರ ವಿರುದ್ಧದ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ನಮ್ಮ ಅನೇಕ ಸ್ವಾತಂತ್ಯ್ರ ಹೋರಾಟಗಾರರಿಗೆ ಶಿವಾಜಿಯವರ ಸಾಹಸಗಾಥೆ ಒಂದು ಪ್ರೇರಣೆಯಾಗಿತ್ತು ಆತನ ಸಾಹಸಗಾಥೆಯ ಕುರಿತಂತೆ ಜನಮಾನಸದಲ್ಲಿ ಪ್ರಚಲಿತವಾಗಿದ್ದ ಲಾವಣಿಗಳು ಮತ್ತು ಜಾನಪದ ಗೀತೆಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಒಂದು ಗೂಡಿಸುವುದರಲ್ಲಿ ಸಹಕಾರಿಯಾಗಿದ್ದವು.

shiv

ಹೀಗೆ ಶಿವಾಜಿ ಮಹಾರಾಜರ ಸಾಹಸಗಾಥೆಗಳನ್ನು ಹೇಳಲು ಒಂದು ದಿನವೇಕೆ ಒಂದು ವಾರ, ಒಂದು ತಿಂಗಳಾದರೂ ಬೇಕಾಗಬಹುದೇನೋ? ಶಿವಾಜಿಯ ಬಗ್ಗೆ ಸವಿರವಾಗಿ ತಿಳಿಯಲು ಶ್ರೀಯುತ ಹೊ. ವೆ. ಶೇಷಾದ್ರಿ ಯವರ ಯುಗಾವತಾರ ಪುಸ್ತಕನ್ನೊಮ್ಮೆ ಖಂಡಿತವಾಗಿಯೂ ಪುರುಸೊತ್ತು ಮಾಡಿಕೊಂಡು ಓದಲೇ ಬೇಕು. ಸುಮಾರು 323 ಪುಟಗಳ ಒಟ್ಟು ಎಂಟು ಅಧ್ಯಾಯಗಳಿರುವ ಈ ಪುಸ್ತಕ ಈಗಾಗಲೇ ಹತ್ತಾರು ಮರುಮುದ್ರಣಗಳನ್ನು ಕಂಡು ಲಕ್ಷಾಂತರ ಜನರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚನ್ನು ಹರಿಸಿದೆ. ಅತೀ ಸುಂದರ ಬರಹದ ಶೈಲಿ, ಓಜಸ್ವೀ ಭಾಷೆ, ಪ್ರತಿಯೊಂದು ಕ್ಷಣ, ಪ್ರತಿಯೊಂದು ಸ್ಥಳ, ಪ್ರತಿಯೊಂದು ಸನ್ನಿವೇಶ, ಪ್ರತಿಯೊಂದು ಪಾತ್ರಗಳ ವಿಷಯದಲ್ಲೂ ಅಷ್ಟೇ ನಿಖರವಾದ ಸ್ಖಾಲಿತ್ಯವಿಲ್ಲದ ಬರವಣಿಗೆ. ಒಮ್ಮೆ ಓದಲು ಕೈಗೆತ್ತಿಕೊಂಡರೆ ಪೂರ್ತಿ ಮುಗಿಸದೆ ಕೆಳಗಿಡಲು ಮನಸ್ಸುಬಾರದಂಥ ಓಘ. ಇನ್ನೂ ಓದಿಲ್ಲವಾದರೆ, ಇನ್ನು ತಡ ಮಾಡುವುದು ಬೇಡ ಈ ಕೂಡಲೇ ಎಲ್ಲರೂ ಯುಗಾವತಾರವನ್ನು ಓದೋಣ ಶಿವಾಜಿ ಮಹಾರಾಜನನ್ನು ಮನ ತುಂಬಿಸಿಕೊಳ್ಳೋಣ !

ಏನಂತೀರೀ?

ನಿಮ್ಮವನೇ ಉಮಾಸುತ