ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಬಾಲ್ಯದಲ್ಲಿ ಸಣ್ಣ ಮಕ್ಕಳಿಗೆ ಅವರ ಅಪ್ಪಾ ಹೀರೋ ಎನಿಸಿದರೆ, ನನಗೆ ಮಾತ್ರಾ ನನ್ನ ಸೋದರ ಮಾವ ಚೆಲುವಣ್ಣಾ ಮಾವನೇ ಹೀರೋ. ಮೊನೆ ತಾನೇ ತಮ್ಮ 83ನೇ ವರ್ಷ ಹುಟ್ಟು ಆಚರಿಸಿಕೊಂಡು 2 ದಿನ ಕಳೆಯುತ್ತಿದ್ದಂತೆಯೇ ಗುರುವಾರ, 09.03.2023ರಂದು ನಮ್ಮನ್ನಗಲಿರುವುದು ದಃಖಕರವಾದ ಸಂಗತಿಯಾಗಿದೆ.

ಹುಟ್ಟೂ ಸಾವು ಎರಡರ ಮಧ್ಯೆ ಆ ಮೂರು ದಿನದ ಬಾಳಿನಲ್ಲಿ ಆವರೇಕೆ ನನಗೆ ಹೀರೋ ಎನಿಸಿದ್ದರು? ನನ್ನ ಮತ್ತು ಅವರ ಮಧುರ ಬಾಂಧವ್ಯ ಹೇಗಿತ್ತು? ಎಂಬ ಹೃದಯಸ್ಪರ್ಶಿ ಕಥನ ಇದೋ ನಿಮಗಾಗಿ … Read More ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಅತ್ತೆ ಮನೆ ಕೆನೆ ಮೊಸರು

ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಅದರ ಬಗ್ಗೆ ಅದೆಷ್ಟು ಹೊಗಳಿದರೂ ಮನಸ್ಸಿಗೆ ತೃಪ್ತಿನೇ ಅಗೋದಿಲ್ಲ. ಮೊನ್ನೆ ವಾರಾಂತ್ಯದಲ್ಲಿ ಸಂಕ್ರಾಂತಿ ಎಳ್ಳು ಬೀರಲು ನಮ್ಮ ಅತ್ತೆ ಅರ್ಥಾತ್ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದೇ ಊರಿನಲ್ಲಿ ಕೆಲವೇ ಕಿಮೀ ದೂರದಲ್ಲಿಯೇ ಇದ್ದರೂ ಪದೇ ಪದೇ ಅತ್ತೆ ಮನೆಗೆ ಹೋಗಲು ಸಾಧ್ಯವಾಗದಿದ್ದರೂ, ವರ್ಷಕ್ಕೆರಡು ಬಾರಿ ತಪ್ಪದೇ ಅತ್ತೇ ಮನೆಗೆ ಹೋಗಿ ಅವರ ಅದರಾತಿಧ್ಯವನ್ನು ಸವಿದು ಬಂದೇ ಬಿಡುತ್ತೇವೆ. ಒಂದು ಸಂಕ್ರಾಂತಿಗೆ ಎಳ್ಳು ಬೀರುವುದಕ್ಕಾದರೆ, ಎರಡನೆಯದು ಗೌರಿ ಹಬ್ಬಕ್ಕೆ… Read More ಅತ್ತೆ ಮನೆ ಕೆನೆ ಮೊಸರು

ಗೋವು ಕಳ್ಳರು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ… Read More ಗೋವು ಕಳ್ಳರು

ಮಕರ ಸಂಕ್ರಾಂತಿ

ದೈನಂದಿನದ ಚಟುವಟಿಗಳಿಂದ ಬೇಸತ್ತವರಿಗೆ ಮುದ ನೀಡಲು ನಮ್ಮ ಹಿರಿಯರು ಹಬ್ಬದ ಆಚರಣೆಗಳನ್ನು ರೂಢಿಗೆ ತಂದರು. ಕೇವಲ ಮಾನವರು ಮಾತ್ರವಲ್ಲದೇ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಕು ಪ್ರಾಣಿಗಳಿಗೂ ತುಸು ನೆಮ್ಮದಿ ಮತ್ತು ಸಂತೋಷವನ್ನು ನೀಡಲು ಕೆಲವು ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆ ಪ್ರಕೃತಿ, ಪ್ರಾಣಿ, ಪಶು ಮತ್ತು ಮಾನವವರು ಎಲ್ಲರೂ ಕೂಡಿ ಸಂತಸದಿಂದ ವೈವಿದ್ಯಮಯವಾಗಿ ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಸುಗ್ಗಿಯ ಹಬ್ಬವೆಂದೂ ಕರೆಯಲಾಗುತ್ತದೆ. ಇಡೀ ಭೂಸಂಕುಲದ ಎಲ್ಲಾ ಚಟುವಟಿಕೆಗಳು ಸೂರ್ಯ ಮತ್ತು… Read More ಮಕರ ಸಂಕ್ರಾಂತಿ