ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ, ಜೀವನ ಶೈಲಿ ಎಲ್ಲವೂ ಬದಲಾಗಿ ಅವಿಭಕ್ತ ಕುಟುಂಬ ವಿಭಕ್ತಗಳಾಗಿ, ಐಶಾರಾಮ್ಯವಾದ ಜೀವನದ ಹಿಂದೆ ಬಿದ್ದು, ಗಂಡ ಹೆಂಡತಿ ಇಬ್ಬರೂ ಹೊರಗೆ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮದಿಂದಾಗಿ ಆಗಿರುವ ಈ ಹೃದಯವಿದ್ರಾವಕ ಪ್ರಸಂಗಗಳು ನಿಜಕ್ಕೂ ಎಚ್ಚರದ ಗಂಟೆಯಾಗಿದೆ.… Read More ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ದೇವ, ದೈವ ಮತ್ತು ದೈವ ನರ್ತಕರು

ದೇವ ದೈವಗಳ ಕುರಿತಾಗಿ ಪರ ವಿರೋಧ ಚರ್ಚೆಗಳು ತಾರಕ್ಕಕ್ಕೇ ಏರುತ್ತಿರುವಾಗ, ದೇವ, ದೈವ ಮತ್ತು ದೈವ ನರ್ತಕರು ಎಂದರೆ ಯಾರು ಮತ್ತು ಸಮಾಜದಲ್ಲಿ ಅವರುಗಳ ಬಳಕೆ ಮತ್ತು ದುರ್ಬಳಕೆ ಹೇಗೆ ನಡೆಯುತ್ತಿದೆ ಎಂಬುದರ ಕುರಿತಾಗಿ ಸವಿರವಾದ ಉದಾಹರಣೆಗಳ ಮೂಲಕ ಉತ್ತರಿಸುವ ಸಣ್ಣ ಪ್ರಯತ್ನ… Read More ದೇವ, ದೈವ ಮತ್ತು ದೈವ ನರ್ತಕರು

ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ. ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ | ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. || ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. || ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ… Read More ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಇತ್ತೀಚೆಗೆ ವಾಟ್ಸಾಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಈ ಭಾವಾನುವಾದವನ್ನು ಮೊದಲು ಓದಿದ ನಂತರ ವಿಚಾರಕ್ಕೆ ಬರೋಣ. ಒಂದೂರಿನಲ್ಲಿದ್ದ  ದೇವಸ್ಥಾನವೊಂದಕ್ಕೆ ಪ್ರತಿದಿನ ಮುಂಜಾನೆ ಒಂದು ಚಿಕ್ಕ ಹುಡುಗಿ ಬಂದು ದೇವರ ಮುಂದೆ ನಿಂತು, ಕಣ್ಗಳನ್ನು ಮುಚ್ಚಿ, ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಸಿಕೊಂಡು ಒಂದೆರಡು ನಿಮಿಷಗಳ ಕಾಲ ಏನನ್ನೋ ಗೊಣಗುತ್ತಾ, ನಂತರ ಕಣ್ಣು ತೆರೆದು, ನಮಸ್ಕರಿಸಿ, ನಗುತ್ತಾ ಓಡಿಹೋಗುತ್ತಿದ್ದಳು. ಇದು ಆಕೆಯ ದೈನಂದಿನ ಕಾರ್ಯವಾಗಿತ್ತು. ಅ ಪುಟ್ಟ ಹುಡುಗಿಯನ್ನು ಪ್ರತಿದಿನವೂ ಗಮನಿಸುತ್ತಿದ್ದ ದೇವಸ್ಥಾನದ ಅರ್ಚಕರಿಗೆ ಅಷ್ಟು ಸಣ್ಣ ಹುಡುಗಿಗೆ ಧರ್ಮ ಆಚಾರ… Read More ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಮನೆಯಲ್ಲಿರುವ ಹಿರಿಯರು

ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ… Read More ಮನೆಯಲ್ಲಿರುವ ಹಿರಿಯರು

ನಾವೆಲ್ಲರೂ ಒಂದೇ..

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ… Read More ನಾವೆಲ್ಲರೂ ಒಂದೇ..

ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಕೊರೋನಾ ಬಂದು ಇಡೀ ಪ್ರಪಂಚವೇ ಕಳೆದು ಒಂದೂವರೆ ವರ್ಷಗಳಿಂದ ಲಾಕ್ಡೌನ್ ಆಗಿರುವಾಗ ಅರೇ ಇದೇನಪ್ಪಾ ಇಂತಹ ಶೀರ್ಷಿಕೆ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮಗೊಂದು ಅಚ್ಚರಿಯ ಸಂಗತಿಗಳೊಂದಿಗೆ ನಿಮಗೆ ಸಾದರ ಪಡಿಸುವ ಸಣ್ಣದಾದ ಪ್ರಯತ್ನ ಕೊರೋನಾ ವಕ್ಕರಿಸುವುದಕ್ಕಿಂತಲೂ ಮುಂಚೆ, ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಸಮಾರಂಭಗಳೂ ಸಹಾ ಬಹಳ ಅದ್ದೂರಿಯಿಂದ ನೂರಾರು ಜನರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇನ್ನೂ ಮದುವೆ ಮುಂಜಿ ಉಪನಯನಗಳಲ್ಲಂತೂ ಸಾವಿರಾರು ಜನರನ್ನು ಸೇರಿಸಿ ನಭೂತೋ ನ ಭವಿಷ್ಯತಿ ಎನ್ನುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜಾಂ… Read More ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ… Read More ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಕಾಲ ಹೀಗೇ  ಇರುವುದಿಲ್ಲ

ಸ್ವಲ್ಪ ದಿನಗಳಾದ ನಂತರ, ಯಾರೂ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಚಾರಿಸುವುದೇ ಇಲ್ಲಾ ನೀವು ಎಷ್ಟು ಹಣ ಸಂಪಾದಿಸಿದ್ದೀರೀ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು? ನಿಮ್ಮಲ್ಲಿ ಎಷ್ಟು ಮತ್ತು ಯಾವ ಕಾರುಗಳಿವೆ? ಅಂತಾ, ಅದರ ಬದಲು ಎಲ್ಲರೂ ಕೇಳುವುದು ಕೇವಲ ಎರಡೇ ಪ್ರಶ್ನೆಗಳು ನಿಮ್ಮ ಆರೋಗ್ಯ ಹೇಗಿದೆ? ನಿಮ್ಮ ಮಕ್ಕಳು ಏನು ಮಾಡ್ತಾ ಇದ್ದಾರೆ? ಹಾಗಾಗಿ ಈ ಕರೋನಾ ಲಾಕ್ ಡೊನ್ ಸಮಯದಲ್ಲಿ ಚೆನ್ನಾಗಿ ಊಟ ತಿಂಡಿ ಮಾಡಿ, ಸ್ವಲ್ಪ ವ್ಯಾಯಾಮಾನೂ ಮಾಡಿ , ಮನೆಯಿಂದ ಹೊರಗೆ… Read More ಕಾಲ ಹೀಗೇ  ಇರುವುದಿಲ್ಲ