ತಾರತಮ್ಯ

gs

ಅಕ್ಟೋಬರ್ 2, ದೇಶದ ಇಬ್ಬರು ಮಹಾನ್ ನಾಯಕರ ಜಯಂತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ ಆದರೂ, ಒಬ್ಬರು ಚರಕ ಹಿಡಿದು ದೇಶವನ್ನು ವಿಭಜಿಸಿ ಶತ್ರುರಾಷ್ಟ್ರದ ಸೃಷ್ಟಿಗೆ ಕಾರಣೀಭೂತರಾದರೇ ಅದೇ ಮತ್ತೊಬ್ಬರು ಹಾಗೆ ಸೃಷ್ಟಿಯಾದ ಶತ್ರುರಾಷ್ಟ್ರ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಧಾಳಿ ನಡೆಸಿದಾಗ ತಮ್ಮ ದಿಟ್ಟ ನಿರ್ಧಾರಗಳಿಂದ ನರಕ ಸದೃಶವನ್ನು ತೋರಿಸಿದವರು. ಅದರೆ ಅದೇಕೋ ಏನೋ ಅಕ್ಟೋಬರ್ 2ರಂದು ಅದಾವುದೋ ಪೂರ್ವಾಗ್ರಹ ಪೀಡಿತರಾಗಿ ಮೊದಲನೆಯವರನ್ನೇ ಎತ್ತಿ ಮೆರೆದಾಡುತ್ತಾ ಎರಡನೆಯವರನ್ನು ನಗಣ್ಯರೀತಿಯಲ್ಲಿ ಕಡೆಗಾಣಿಸುವುದು ಈ ದೇಶದ ಪ್ರಾಮಾಣಿಕ ದೇಶ ಭಕ್ತರಿಗೆ ಮಾಡುವ ಅಪಮಾನವೇ ಸರಿ ಎಂದರೂ ತಪ್ಪಾಗದು.

ಗಾಂಧಿಯವರ ಕುರಿತಾದ ಮಾಹಿತಿ ಇಡೀ ದೇಶಕ್ಕೇ ತಿಳಿದಿರುವಾಗ ಎಲೆಮರೆಕಾಯಿಯಂತಿದ್ದ ದೇಶದ ಎರಡನೇ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಗಳ ಕುರಿತಾದ ಲೇಖನವನ್ನು ಬರೆದು ಪ್ರಕಟಿಸಿದ ಕೂಡಲೇ ಅದೇಕೋ ಏನೋ ಕೆಲವರಿಗೆ ಇದ್ದಕ್ಕಿದ್ದಂತೆಯೇ ಹಾವು ತುಳಿದಂತೆ ಬೆಚ್ಚಿಬಿದ್ದು ವಿಷಯಕ್ಕೆ ಸಂಬಂಧವೇ ಇಲ್ಲದ ಮತ್ತು ನಿಸ್ಸಂದೇಹವಾಗಿ ಅನಗತ್ಯವಾಗಿ ಗೋಡ್ಸೇ ಮತ್ತು ಗಾಂಧಿಯವರ ಪ್ರಸ್ತಾಪವನ್ನು ಮಾಡುತ್ತಾ ವಿಷಯಾಂತರವನ್ನು ಮಾಡುತ್ತಾ ಉಳಿದವರನ್ನು ಕೆರಳಿಸುವ ಪ್ರಯತ್ನ ಮಾಡಲು ಯತ್ನಿಸಿದರೆ ಅದಕ್ಕೆ ಪೂರಕವಾಗಿ ಅವರದ್ದೇ ಮನಸ್ಸಿನವರು ಅವರನ್ನು ಬೆಂಬಲಿಸುತ್ತಾ ಅನೇಕ ರಾಷ್ಟ್ರಭಕ್ತರನ್ನು ಅತ್ಯಂತ ಕೀಳು ಮಟ್ಟದಲ್ಲಿ ಅವಾಚ್ಯ ಪದಗಳಿಂದ ನಿಂದಿಸುವುದು ನಿಜಕ್ಕೂ ಹೇಸಿಗೆ ಎನಿಸುತ್ತದೆ.

ಹಾಗಾದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕೇವಲ ಗಾಂಧಿ ಮತ್ತು ನೆಹರು ಅವರುಗಳು ಮಾತ್ರವೇ? ಗಾಂಧಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಳ್ಳುವ ಮೊದಲೇ ದೇಶದಲ್ಲಿ ಲಕ್ಷಾಂತರ ದೇಶಭಕ್ತರು ತಮಗೆ ತೋಚಿದಂತೆ ಹೋರಾಟ ನಡೆಸಿರಲಿಲ್ಲವೇ? 1857 ರಲ್ಲಿ ಮಂಗಲ್ ಪಾಂಡೆಯ ಹೋರಾಟವನ್ನು ದಂಗೆ ಎಂದು ಬ್ರಿಟೀಷರು ಬಣ್ಣಿಸಿದರೂ ಅದು ಖಂಡಿತವಾಗಿಯೂ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬುದು ಬ್ರಿಟೀಷರಿಗೂ ತಿಳಿದಿತ್ತು. ಈ ಪ್ರಕರಣ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಲು ಪ್ರೇರಣೆ ನೀಡುವ ಮೂಲಕ, ಬ್ರಿಟಿಷರಿಗೆ ಭಯ ಹುಟ್ಟಿಸಿದ್ದಂತೂ ಸುಳ್ಳಲ್ಲ. ಲಾಲ್-ಬಾಲ್-ಪಾಲ್ ಎಂದೇ ಪ್ರಖ್ಯಾತರಾಗಿದ್ದ, ರಾಷ್ಟ್ರೀಯತಾವಾದಿಗಳಾದ ಲಾಲಾ ಲಜಪತ್ ರಾಯ್, ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಅವರಂತಹವರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದಲ್ಲದೇ, ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಭಜನೆ ಮತ್ತು ಲಾವಣಿಗಳ ಮುಖಾಂತರ ಸ್ವಾತ್ರಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿ‍ಸುವ ಮೂಲಕ ಸಾಮಾನ್ಯ ಜನರೂ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಸರಿ.

ದೇಶದಲ್ಲಿ ಇಷ್ಟೆಲ್ಲಾ ರೀತಿಯಲ್ಲಿ ಹೋರಾಟಗಳು ನಡೆಯುತ್ತಿರುವಾಗ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಅಗಿ ಅತ್ಯಂತ ಐಶಾರಾಮ್ಯ ಜೀವನ ನಡೆಸುತ್ತಿದ್ದದ್ದನ್ನು ಸುಳ್ಳು ಎನ್ನಲಾಗದು. ಅದೇ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಬೇಧ ನೀತಿಯಿಂದಾಗಿ ಅದೊಮ್ಮೆ ರೈಲಿನಲ್ಲಿ ಹೋಗುತ್ತಿದ್ದಾಗ ಗಾಂಧಿಯವರಿಗೆ ಆದ ಅವಮಾನ ತಾಳಲಾಗದೆ ಭಾರತಕ್ಕೆ ಹಿಂದಿರುಗಿದಾಗ ಇಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಆ ಹೋರಾಟಕ್ಕೆ ಒಂದು ರೀತಿಯ ಓಘ ದೊರೆಯಿತು ಎನ್ನುವುದು ಸತ್ಯವಾದರೂ, ಗಾಂಧಿಯವರು ತೆಗೆದುಕೊಂಡ ನಿರ್ಧಾರಗಳೆಲ್ಲವೂ ಸರಿ ಎಂದು ಹೇಳಲಾಗದು. ಅವರಲ್ಲಿಯೂ ದೂರದರ್ಶಕತ್ವದ ಕೊರತೆ ಎದ್ದು‌ಕಾಣುತ್ತಿತ್ತು. ಅದರಲ್ಲೂ ಅದುವರೆಗೂ ಸ್ವಾತಂತ್ಯ್ರ ಹೋರಾಟಗಾರರು ನಡೆಸಿಕೊಂಡು ಬಂದಿದ್ದ ಉಗ್ರ ಹೋರಾಟವನ್ನು ಬಹಿರಂಗವಾಗಿಯೇ ತಮ್ಮ ಪತ್ರಿಕೆಗಳಲ್ಲಿ ಟೀಕಿಸುತ್ತಿದ್ದದ್ದಲ್ಲದೇ, ಬ್ರಿಟಿಷರ ವಿರುದ್ಧ ಆರಂಭಿಸಿದ್ದ ಅಸಹಕಾರ ಚಳುವಳಿ ದೇಶಾದ್ಯಂತ ತೀವ್ರಗೊಂಡು ಅದನ್ನು ಹತ್ತಿಕ್ಕಲು ಬ್ರಿಟಿಷರು ಹೈರಾಣಾಗಿದ್ದಾಗ ಅದೆಲ್ಲೋ ನಡೆದ ಜನಾಂಗೀಯ ದಂಗೆಯನ್ನು ಬೆಂಬಲಿಸಿ‌ ಮುಸಲ್ಮಾನರು ಖಿಲಾಫತ್ ಚಳುವಳಿ ನಡೆಸಿದರೆ ಅದಕ್ಕೆ ಸ್ಪಂದಿಸಿ ತಮ್ಮ‌ ಮಹತ್ವಾಕಾಂಕ್ಷೆಯ ಅಸಹಕಾರ ಚಳುವಳಿಯನ್ನೇ ಹಿಂಪಡೆದ ಗಾಂಧಿಯವರ ನಿರ್ಧಾರ ಚರ್ಚಾಸ್ಪದವೇ ಹೌದು. ಗಾಂಧಿಯವರಿಗೆ ಸ್ವಾತಂತ್ರ್ಯ ಪಡೆಯುವುದಕ್ಕಿಂತಲೂ ತಾವು ನಂಬಿದ್ದ ಅಹಿಂಸಾ ತತ್ವ ಸಿದ್ದಾಂತವೇ ಮುಖ್ಯವಾಗಿ ಕಾರಣ ಸಾವಿರಾರು ಪ್ರಾಮಾಣಿಕ ದೇಶಭಕ್ತರುಗಳ ಬಲಿದಾನವಾಗಿ ಹೋಗಿದ್ದು ಈಗ ಇತಿಹಾಸ.

ಸ್ವಾತಂತ್ಯ್ರ ಹೋರಾಟದ ಸಂಧರ್ಭದಲ್ಲಿ ಕೇವಲ 23 ವರ್ಷದ ತರುಣ ಭಗತ್ ಸಿಂಗ್ ಮತ್ತವರ ಸ್ನೇಹಿತರು ಬ್ರಿಟೀಷರನ್ನು ಹೆದರಿಸುವ ಸಲುವಾಗಿ ಕೋರ್ಟಿನ ಆವರಣದಲ್ಲಿ ಸಾಧಾರಣವಾದ ಬಾಂಬ್ ಹಾಕಿದ್ದಕ್ಕೆ ಬ್ರಿಟೀಷರು ಅತ್ಯಂತ ಕಠಿಣವಾದ ಗಲ್ಲು ಶಿಕ್ಷೆಯನ್ನು ವಿಧಿಸಿದ್ದರ ವಿರುದ್ಶ ಗಾಂಧಿಯವರು ಪ್ರತಿಭಟನೆ ನಡೆಸಿ, ಭಗತ್ ಸಿಂಗ್ ಅವರನ್ನು ಉಳಿಸಬೇಕೆಂದು ಅಂದಿನ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ಗಾಂಧಿಯವರನ್ನು ಕೇಳಿಕೊಂಡಾಗ, ಭಗತ್ ಸಿಂಗ್ ಅವರ ತೀವ್ರವಾದ ನಮಗೆ ಒಪ್ಪದ ಕಾರಣ ನಾವು ಅವರ ಪರವಾಗಿ ಬ್ರಿಟೀಷರ ಬಳಿ ಮಾತನಾಡುವುದಿಲ್ಲ ಎಂದು ಗಾಂಧಿಯವರು ಖಡಾಖಂಡಿತವಾದ ನಿರ್ಧಾರ ತೆಗೆದುಕೊಂಡ ಕಾರಣದಿಂದಾಗಿಯೇ, ಭಗತ್ ಸಿಂಗ್ ಮತ್ತವರ ಸ್ನೇಹಿತರ ಬಲಿದಾನವಾಯಿತು. ಅದೇ ರೀತಿ ಉಧಮ್ ಸಿಂಗ್ ಅವರ ವಿಷಯದಲ್ಲೂ ಗಾಂಧಿಯವರ ತಪ್ಪು ನಿರ್ಧಾರಗಳು ಜಗಜ್ಜಾಹೀರಾತಾಗಿತ್ತು

ಇನ್ನು ಶಾಸ್ತ್ರಿಗಳ ವಿಚಾರಕ್ಕೆ ಬಂದಲ್ಲಿ, ಹೌದು ನಿಜ. ಮೋಹನ್ ಚಂದ್ ಕರಮಚಂದ್ ಗಾಂಧಿಯವರ ಅಸಹಕಾರ ಚಳವಳಿಯಿಂದಲೇ ಪ್ರೇರಿತರಾಗಿ ವಿಧ್ಯಾರ್ಥಿಯಾಗಿದ್ದ ಶಾಸ್ತ್ರಿಗಳು ಸ್ವಾತ್ರಂತ್ರ್ಯ ಚಳುವಳಿಯಲ್ಲಿ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ಅದಕ್ಕಾಗಿ ಕಠಿಣವಾದ ಸೆರೆಮನೆಯ ವಾಸವನ್ನು ಅನುಭವಿಸಿದ ನಂತರ ತಮ್ಮ ಸ್ವಂತ ಶಕ್ತಿ ಮತ್ತು ಸಾಮರ್ಥ್ಯದಿಂದ ಎಲ್ಲರ ಮನವನ್ನು ಗೆದ್ದು ಉತ್ತರ ಪ್ರದೇಶದ ಸರ್ಕಾರದಲ್ಲಿ ಗೃಹಸಚಿವರಾಗಿ, ನಂತರ ಕೇಂದ್ರದಲ್ಲಿ ಗೃಹಖಾತೆಯೂ ಸೇರಿದಂತೆ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ, ನೆಹರು ಅವರು‌ ಕಾಲವಾದ ನಂತರ ಎಲ್ಲರ ಬಹುಮತದೊಂದಿಗೆ ದೇಶದ ಎರಡನೇ ಪ್ರಧಾನ ಮಂತ್ರಿಗಳಾಗಿ ಕೇವಲ 17 ತಿಂಗಳುಗಳ ಕಾಲ ದೇಶವನ್ನು ಮುನ್ನಡೆಸಿದರೂ, 17 ವರ್ಷಗಳ ಕಾಲ ದೇಶವನ್ನಾಳಿದ್ದ ನೆಹರು ಅವರನ್ನೇ ಮರೆಯುವಂತೆ ಮಾಡಿ, ಕಡೆಗೆ ರಷ್ಯಾದಲ್ಲಿ ಅನುಮಾನಾಸ್ಪದವಾಗಿ ಅಸುನೀಗಿದ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಕುರಿತಾದ ಲೇಖನ ಬರೆದರೆ ಅದೇಕೋ ಕೆಲವರಿಗೆ ತಡೆದುಕೊಳ್ಳಲಾಗದೇ ವಿನಾಕಾರಣ ವಾಚಾಮಗೋಚರವಾಗಿ ಇನ್ನೂ ಕೆಲವರು ಅಶ್ಲೀಲವಾಗಿ ಪ್ರತಿಕ್ರಿಯಿಸುವುದು ನಿಜವಾಗಿಯೂ ಅಚ್ಚರಿ ಮೂಡಿಸುವುದಲ್ಲದೇ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕುರಿತಾದ ಅವರ ಬೌದ್ಧಿಕ ದಿವಾಳಿತನವನ್ನು ನೆನೆದು ಕನಿಕರ ಉಂಟಾಗುತ್ತದೆ

ದೇಶದ ಬಗ್ಗೆ ನಿಜವಾದ ಭಕ್ತಿಯಿಂದ ನಿಸ್ವಾರ್ಥವಾಗಿ ಸ್ವಾತ್ರಂತ್ರ್ಯ ಹೋರಾಟದ ಹುತ್ತವನ್ನು ಲಕ್ಷಾಂತರ ಹೋರಾಟಗಾರರು ಗೆದ್ದಲು ಹುಳುಗಳಂತೆ ಕಟ್ಟಿದರೆ, ಆ ಗೆದ್ದಲು ಹುಳುಗಳ ಪ್ರಮುಖರಾಗಿ ಗಾಂಧಿಯವರು ತೊಡಗಿಸಿಕೊಂಡರೆ, ಯಾವುದೇ ರೀತಿಯ ಪ್ರಯತ್ನವನ್ನೇ ಮಾಡದೇ, ಗೆದ್ದಲು ಹುಳುಗಳನ್ನು ತಿನ್ನುತ್ತಲೇ ಆ ಹುತ್ತಕ್ಕೆ ಬಂದು ಸೇರಿಕೊಳ್ಳುವ ಹಾವಿನಂತೆ ನೆಹರು ನೆಹರು ವಂಶಜರು ಸೇರಿಕೊಂಡಿದ್ದು ಈ ದೇಶ ಕಂಡ ಅತ್ಯಂತ ದೌರ್ಭಾಗ್ಯಗಳಲ್ಲಿ ಒಂದಾಗಿದೆ ಎಂದು ಹೇಳಲು ಮನಸ್ಸಿಗೆ ಬಹಳ ನೋವಾಗುತ್ತದೆ.

ಅದಾವುದೋ ಕಾಣದ ಕಾರಣಗಳಿಂದಾಗಿ ಗಾಂಧಿಯವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದ ಜವಹರ್ ಲಾಲ್ ನೆಹರು, ಯಾರು ತನ್ನ ವಯಕ್ತಿಕ ಹಿತಾಸ್ತಕ್ತಿಗೆ ಅಡ್ಡಿಯಾಗುತ್ತಾರೆ ಎಂದು ಭಾವಿಸುತ್ತಿದ್ದರೋ ಅಂತಹವರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಮಟ್ಟ ಹಾಕುತ್ತಿದ್ದದ್ದಲ್ಲದೇ ಅವರ ವಿರುದ್ಧ ಎಂತಹ ಆರೋಪಗಳನ್ನು ಮಾಡಲೂ ಹೇಸುತ್ತಿರಲಿಲ್ಲ ಎಂಬುದಕ್ಕೆ ಲೆಖ್ಖವೇ ಇಲ್ಲ. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣಾದಾಯಕರಾಗಿದ್ದ ವಿನಾಯಕ ದಾಮೋದರ ಸಾವರ್ಕರ್, ದಲಿತ ಪರ ಹೋರಾಟದ ಮೂಲಕವೇ ದೇಶಾದ್ಯಂತ ಪ್ರವರ್ಧಮಾನಕ್ಕೆ ಬಂದ ಮತ್ತು ಈ ದೇಶ‌ ಕಂಡ ಅತ್ಯಂತ ಹೆಮ್ಮೆಯ ಜ್ಞಾನಿ‌ ಮತ್ತು ಪ್ರಕಾಂಡ ಪಂಡಿತರಾಗಿದ್ದ ಶ್ರೀ ಬಿ. ಆರ್. ಅಂಬೇಡ್ಕರ್, ಕ್ರಾಂತಿಕಾರಿಗಳ ನಾಯಕ ಸುಭಾಷ್ ಚಂದ್ರಬೋಸ್ ಅವರುಗಳನ್ನು ನೆಹರು ನಡೆಸಿಕೊಂಡ ರೀತಿ ನಿಜಕ್ಕೂ ದೇಶ ಭಕ್ತರ ರಕ್ತವನ್ನು ಕುದಿಯುವಂತೆ ಮಾಡುತ್ತದೆ. ಇವರೆಲ್ಲರ ಏಳಿಗೆಗೆ ಧಕ್ಕೆ ತಂದಿದ್ದಲ್ಲದೇ ಈ ಮಹಾನ್ ನಾಯಕರುಗಳ ಸಾಮರ್ಥ್ಯಕ್ಕೆ ಸಿಗಬೇಕಾದ ಅಧಿಕಾರ ಸಿಗದಂತೆ ಮಾಡಿದ್ದಲ್ಲದೇ ಅವರನ್ನೇ ದೇಶದ್ರೋಹಿಗಳಂತೆ ಬಿಂಬಿಸಿರುವುದನ್ನು ಇಂದಿಗೂ ಅವರ ಕುಂಟುಂಬದ ಅನುಯಾಯಿಗಳು ಮುಂದುವರೆಸಿಕೊಂಡು ಈ ನಾಯಕರುಗಳನ್ನು ಅವಹೇಳನ ಮಾಡುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ಇಂತಹ ಒಂದು ಕುಟುಂಬದ ಗುಲಾಮೀ ಮನೋಭಾವನೆಯ ವ್ಯಕ್ತಿಗಳನ್ನು ನೋಡುತ್ತಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಈ ಪ್ರಸಂಗ ನೆನಪಾಗುತ್ತದೆ.

ಅದೊಂದು ದಿನ ಸಮುದ್ರ ತೀರದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ದೂರದ ಸಮುದ್ರದ ಮಧ್ಯೆ ಪ್ರಯಾಣಿಕರಿಂದ ತುಂಬಿದ್ದ ಹಡುಗೊಂದು ಬಂಡೆಯೊಂದಕ್ಕೆ ಬಡಿದು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ನೋಡಿ ಗಾಭರಿಯಾಯಿತು. ಹಡಗು ನೀರಿನಲ್ಲಿ ಮುಳುಗುತ್ತಿದ್ದಾಗ ಈಜು ಬಾರದ ಬಹುತೇಕರು ನೀರಿನಲ್ಲಿ ಮುಳುಗಿ ಸತ್ತರೆ, ಈಜು ಬರುತ್ತಿದ್ದವರು ಅಲ್ಪ ಸ್ವಲ್ಪ ದೂರ ಈಜಿ ನಂತರ ಮುಂದುವರೆಸಲಾಗದೇ ನೀರಿನಲ್ಲಿ ಮುಳುಗಿ ಹೋದದ್ದನ್ನು ನೋಡಿಯೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದ ಆವ್ಯಕ್ತಿ ಮಮ್ಮಲ ಮರುಗಿದರು.

ಅದೇ ಸಂಜೆ, ಈ ವಿಷಯವನ್ನು ತನ್ನ ಸ್ನೇಹಿತರಿಗೆ ಹಂಚಿಕೊಂಡಾಗ ಅವರೆಲ್ಲರೂ ಹಡಗು ಮುಳುಗಿದ ಬಗ್ಗೆ ವಿಷಾಧ ವ್ಯಕ್ತ ಪಡಿಸಿದರು. ನಂತರ ತನ್ನ ಮಾತನ್ನು ಮುಂದುವರೆಸಿದ ಆ ವ್ಯಕ್ತಿ, ಹಡಗಿನಲ್ಲಿದ್ದ ಒಬ್ಬ ಪಾಪಿಯನ್ನು ಕೊಲ್ಲುವ ಸಲುವಾಗಿ ಆ ದೇವರಉ ನೂರಾರು ಅಮಾಯಕ ಜನರನ್ನು ಕೊಂದಿದ್ದು ಸರಿಯಲ್ಲ ಎಂಬ ಆಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹೀಗೆ ಹೇಳುತ್ತಿರುವಾಗಲೇ, ಆತನ ಕಾಲಿನಲ್ಲಿ ಏನೋ ಕಡಿದಂತಾಗಿ ಆತ ಕೆಳಗೆ ನೋಡಿದಾಗ ಆತನ ಕಾಲಿನ ಬೆರಳುಗಳನ್ನು ಒಂದು ಕೆಂಪು ಇರುವೆ ಕಚ್ಚುತ್ತಿದ್ದರೆ, ಇನ್ನೂ ಅನೇಕ ಇರುವೆಗಳು ಆತನ ಪಾದದ ಸುತ್ತಲೂ ಇದ್ದವು. ಇದರಿಂದ ಕೋಪಗೊಂಡ ಆ ವ್ಯಕ್ತಿ ಆ ಕೆಂಪು ಇರುವೆಗಳನ್ನು ತನ್ನ ಕಾಲಿನಿಂದ ಹೊಸಕಿ ಹಾಕಲು ಪ್ರಯತ್ನಿಸುತ್ತಿದ್ದಾಗಲೇ, ದೇವರು ಆಲ್ಲಿ ಪ್ರತ್ಯಕ್ಷನಾಗಿ, ನೋಡಿದೆಯಾ ಮನುಜಾ, ನಿನ್ನ ಕಾಲನ್ನು ಕಚ್ಚಿದ ಒಂದು ಇರುವೆ ಕೊಲ್ಲಲು ಹೋಗಿ ನೀನು ಹೇಗೆ ನೂರಾರು ಮುಗ್ಧ ಇರುವೆಗಳನ್ನು ಕೊಲ್ಲುತ್ತಿದ್ದೇಯೇ? ನಾನು ಅನ್ಯಾಯ ಮಾಡಿದೆ ಎಂದು ಬೊಬ್ಬಿರಿಯುವ ಮೊದಲು ನಿಮ್ಮ ತಪ್ಪುಗಳನ್ನು ಮೊದಲು ಅರಿವು ಮಾಡಿಕೊಂಡಲ್ಲಿ ನಿಜವಾದ ಸತ್ಯವು ತಿಳಿಯುತ್ತದೆ ಎಂದರಂತೆ.

ಈ ಮೇಲಿನ ದೃಷ್ಟಾಂತವನ್ನು ಗಾಂಧಿ ಮತ್ತು ನೆಹರು ಅವರ ಅನುಯಾಯಿಗಳಿಗೆ ಸೂಕ್ತ ಎನಿಸುತ್ತದೆ. ನಿಮ್ಮ ವಯಕ್ತಿಕ ತತ್ವ ಸಿದ್ಧಾಂತಗಳು ಏನೇ ಇರಲಿ, ಗಾಂಧಿ ಮತ್ತು ನೆಹರು ಕುಟುಂಬದ ಬಗ್ಗೆ ನಿಮ್ಮ ಸ್ವಾಮಿ ನಿಷ್ಟೆ ಎಷ್ಟೇ ಇರಲಿ ಆದರೆ ದಯವಿಟ್ಟು ಸ್ವಾತ್ರಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡದಿರಿ. ಏಕೆಂದರೆ ಈ ದೇಶಕ್ಕೆ ಗಾಂಧಿ ಮತ್ತು ನೆಹರು ಅವರ ಪಾತ್ರ ಕೇವಲ ಕೆನೆಪದರವಾಗಿದೆ ಮತ್ತು ಅದಕ್ಕೆ ತಕ್ಕಷ್ಟು ಪ್ರತಿಫಲವನ್ನು ಅವರು ಮತ್ತು ಅವರ ಕುಟುಂಬ ಅನುಭವಿಸಿಯಾಗಿದೆ. ಹಾಗಾಗಿ ಇನ್ನು ಮುಂದಾದರೂ ದೇಶಕ್ಕಾಗಿ ನಿಸ್ವಾರ್ಥವಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಲಕ್ಷಾಂತರ ಎಲೆಮರೆಕಾಯಿಯಂತಹ ಪ್ರಾಥಃಸ್ಮರಣೀಯರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವವರ ಜೊತೆ ಕೈ ಜೋಡಿಸಿ. ಅಕಸ್ಮಾತ್ ನಿಮ್ಮ ತತ್ವ ಸಿದ್ಧಾಂತ ಅದಕ್ಕೆ ಒಪ್ಪದೇ ಹೋದಲ್ಲಿ ದಯವಿಟ್ಟು ವಾಚಾಮಗೋಚರವಾಗಿ ಬೈಯ್ದಾಡುತ್ತಾ ಅವರನ್ನೂ ಅವರ ಅಮ್ಮ, ಮಡದಿ, ಅಕ್ಕ ತಂಗಿಯರನ್ನು ಅವಮಾನಿಸದಿರಿ. ಇದು ಖಂಡಿತವಾಗಿಯೂ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ನಾವಂತೂ ಭಾಗವಹಿಸಿರಲಿಲ್ಲ.ಆದರೆ ದೇಶದಪರ ಹೋರಾಟ ನಡೆಸಿದರವರ ನಡುವೆ ತಾರತಮ್ಯ ಮಾಡುವುದು ತರವಲ್ಲ ಅಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಪರಾಕ್ರಮ ದಿನ

ಇವತ್ತು ಜನವರಿ 25, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನ. ಸಾಧಾರಣವಾಗಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವವರು ಬದುಕಿದ್ದಲ್ಲಿ ಅವರ ಆಯಸ್ಸು ಇನ್ನಷ್ಟು ವೃದ್ದಿಯಾಗಲಿ ಎಂದು ವರ್ಧಂತಿ ಆ‍ಚರಿಸುತ್ತೇವೆ. ಅಕಸ್ಮಾತ್ ಆವರು ಮೃತಪಟ್ಟಿದ್ದಲ್ಲಿ ಜಯಂತಿಯನ್ನು ಆಚರಿಸುತ್ತೇವೆ. ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಅದನ್ನು ವರ್ಧಂತಿ ಕರೆಯಬೇಕೋ ಇಲ್ಲವೇ ಜಯಂತಿ ಎಂದು ಹೇಳಬೇಕೋ ಎಂಬ ಜಿಜ್ಞಾಸೆ ಬಹಳ ವರ್ಷಗಳಿಂದಲೂ ನನಗೆ ಕಾಡುತ್ತಿತ್ತು. ಬಹುಶಃ ಇಂತಹ ಜಿಜ್ಞಾಸೆ ಹಲವಾರು ಜನರಿಗೆ ಕಾದಿರುವುದನ್ನು ಗಮನಿಸಿದ ಪ್ರಸಕ್ತ ಕೇಂದ್ರ ಸರ್ಕಾರ ಈ ವರ್ಷದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನವನ್ನು ಪರಾಕ್ರಮ ದಿನವೆಂದು ಆಚರಿಸಲು ನಿರ್ಧರಿಸಿರುವುದು ಅತ್ಯಂತ ಸಮಂಜಸ ಮತ್ತು ಅಪ್ಯಾಯಮಾನ ವೆನಿಸುತ್ತದೆ.

ರಾಷ್ಟ್ರಕ್ಕೆ ನೇತಾಜಿಯವರ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ಅದನ್ನು ಚಿರಕಾಲವೂ ನೆನಪಿಸಿಕೊಳ್ಳುವ ಸಲುವಾಗಿ, ಅದರಲ್ಲೂ ವಿಶೇಷವಾಗಿ ಇಂದಿನ ಯುವಕರಿಗೆ ಸ್ಫೂರ್ತಿ ನೀಡುವ ಸಲುವಾಗಿ ಈ ವರ್ಷದಿಂದ ಪ್ರತಿ ವರ್ಷವೂ ಜನವರಿ 23 ರಂದು ಪರಾಕ್ರಮ ದಿನ ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ವರ್ತಿಸಿದ ನೇತಾಜಿಯವರ ಮಾದರಿಯಲ್ಲೇ ದೇಶಭಕ್ತಿಯ ಉತ್ಸಾಹವನ್ನು ತುಂಬುವ ಉದ್ದೇಶ ಇದರ ಹಿಂದಿರುವುದು ಸ್ಪಷ್ಟವಾಗಿದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾವು ಎರಡು ರೀತಿಯ ನಾಯಕರುಗಳನ್ನು ಕಾಣಬಹುದು. ಒಬ್ಬರು ಬ್ರಿಟೀಷರ ವಿರುದ್ಧ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ ಸ್ವತಂತ್ರ್ಯ ಹೋರಾಟದ ಹೆಸರಿನಲ್ಲಿ ಸಾತ್ವಿಕವಾದ ಪ್ರತಿಭಟನೆ ಮಾಡುತ್ತಲೇ ಬ್ರಿಟೀಷ್ ಸರ್ಕಾರದ ಸೆರೆಮನೆಗಳಲ್ಲಿ ಬಂಧಿತರಾಗಿ ಐಶಾರಾಮ್ಯಜೀವನ ನಡೆಸುತ್ತಾ ಹೊರತೆ ತಾವು ದೇಶದ ಸ್ವಾತ್ರಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಗೈಯ್ಯುತ್ತಿದ್ದೇವೆ ಎಂದು ತೋರಿಸಿಕೊಳ್ಳುವವರು, ದೇಶದಲ್ಲಿ ಬ್ರಿಟೀಷರ ವಿರುದ್ಧವೇ ಹೋರಾಡುತ್ತಿದ್ದರೂ ಮೊದಲನೇ ಮತ್ತು ಎರಡನೇ ಮಹಾಯುದ್ದದ ಸಮಯದಲ್ಲಿ ಪತ್ಯಕ್ಷವಾಗಿಯೇ ಅದೇ ಬ್ರಿಟೀಷರ ಪರವಾಗಿಯೇ ಭಾರತೀಯರು ಹೋರಾಟಬೇಕೆಂದು ಕರೆಕೊಡುವವರು ಒಂದು ರೀತಿಯ ನಾಯಕರುಗಳಾದರೇ, ಮತ್ತೊಬ್ಬರು ದೇಶಕ್ಕಾಗಿ ನಿರ್ಭಿಡೆ ಮತ್ತು ನಿಸ್ವಾರ್ಥ ತ್ಯಾಗಿಗಳು. ಇವರ ಬಳಿ ಒಳಗೊಂದು ಹೊರಗೊಂದು ಮಾತೇ ಇಲ್ಲಾ. ಇವರದ್ದೇನಿದ್ದರೂ ಏಕ್ ಮಾರ್ ದೋ ತುಕುಡಾ ಮಾದರಿಯ ನಾಯಕರುಗಳು. ಶತಾಯಗತಾಯ ಬ್ರಿಟೀಷರನ್ನು ಭಾರತಿಂದ ಹೊರಗೆ ಹಾಕಲು ಉಗ್ರವಾದ ಹೋರಾಟವನ್ನು ಮಾಡಿಕೊಂಡು ಬಂದವರು. ಈ ಹೋರಾಟದಲ್ಲಿೆ ಎಂತಹ ತ್ಯಾಗ ಮತ್ತು ಬಲಿದಾನಕ್ಕೂ ಹೆದರದ ಕೆಚ್ಚದೆಯ ವೀರ ಪರಾಕ್ರಮಿಗಳು. ಈ ರೀತಿಯ ಎರಡನೇ ಸಾಲಿಗೆ ಸೇರುವ ನಾಯಕರುಗಳಲ್ಲಿ ನಿಸ್ಸಂದೇಹವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಗ್ರಗಣ್ಯರಾಗುತ್ತಾರೆ ಹಾಗಾಗಿ ಅವರ ಜನ್ಮದಿನವನ್ನು ಪರಾಕ್ರಮ ದಿನ ಎಂದು ಕರೆದಿರುವುದು ಅತ್ಯಂತ ಸೂಕ್ತ ಮತ್ತು ವಸ್ತುನಿಷ್ಟ ಎನಿಸುತ್ತದೆ.

ಇಂತಹ ಲಕ್ಷಾಂತರ ವೀರ ಶೂರ ಪರಾಕ್ರಮಿಗಳ ಉಗ್ರ ಹೋರಾಟಗಳನ್ನು ತಾಳಲಾರದ ಬ್ರಿಟೀಷರು ಕಡೆಗೂ ಭಾರತದಿಂದ ಹೊರಹೋಗಲು ನಿರ್ಧರಿಸಿದರು. ದುರದೃಷ್ಟವಶಾತ್ ಕೆಲ ಪಟ್ಟಭದ್ರ ಸ್ವಹಿತಾಸಕ್ತಿ ನಾಯಕರುಗಳು ಬಾರೀ ಶ್ರಮವಹಿಸಿ ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವೊಂದು ಬಂದು ಸೇರಿಕೊಂಡು ಅದೇ ಗೆದ್ದಲು ಹುಳವನ್ನು ತಿಂದು ನಾಶ ಪಡಿಸಿಕೊಂಡು ಹುತ್ತವನ್ನೇ ತನ್ನದೆಂದು ಆಕ್ರಮಣ ಮಡಿಸಿಕೊಳ್ಳುವಂತೆ ಈ ಎಲೆಮರೆಕಾಯಿಗಳ ಉಗ್ರ ಹೋರಾಟವನ್ನೇ ಅತಿಕ್ರಮಣ ಮಾಡಿ ಸ್ವಾತಂತ್ರ್ಯ ಬಂದಿದ್ದೇ ನಮ್ಮಂತಹವರ ಹೋರಾಟದ ಫಲ ಎಂದೇ ಬಿಂಬಿಸಿ, ಜನರನ್ನು ನಂಬಿಸಿ ಸ್ವಾತಂತ್ರ್ಯಾನಂತರ ಎಲ್ಲಾ ರೀತಿಯ ಅಂತಸ್ತು ಮತ್ತು ಅಧಿಕಾರವನ್ನು ಅನುಭವಿಸಿದ್ದು ಅಕ್ಷಮ್ಯ ಅಪರಾಧ ಎಂದರೂ ತಪ್ಪಾಗಲಾರದು.

ನೀವು ನನಗೆ ರಕ್ತ ಕೊಡಿ… ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ. ಎಂದು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕರೆ ನೀಡುವ ಮೂಲಕ ಅದೆಷ್ಟೋ ಯುವಕರಿಗೆ ಸ್ಫೂರ್ತಿ ತುಂಬಿದಲ್ಲದೇ, ತಮ್ಮ ಈ ರೀತಿಯ ಸಿಡಿಲಬ್ಬರದ ಮಾತುಗಳಿಂದ ದೇಶದ ಪ್ರತಿಯೊಬ್ಬ ನಾಗರೀಕರಲ್ಲೂ ದೇಶ ಪ್ರೇಮದ ಕಿಚ್ಚು ಜಾಗೃತಗೊಳಿಸಿದ ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ 1897 ಜನವರಿ 23ರಂದು ಒಡಿಶಾದ ಕಟಕ್‌ ನಗರದಲ್ಲಿ ಜಾನಕಿನಾಥ್‌ ಬೋಸ್‌ ಮತ್ತು ಪ್ರಭಾವತೀ ದೇವಿ ದಂಪತಿ ಪುತ್ರನಾಗಿ ಜನಿಸಿ. ಬಾಲ್ಯದಲ್ಲಿಯೇ ಸ್ವಾಮೀ ವಿವೇಕಾನಂದರ ಆದರ್ಶಗಳಿಗೆ ಮನಸೋತು ತಮ್ಮ ಪದವಿಯ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣಿಸಿ, ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿಯನ್ನು ಗಳಿಸಿದರೂ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ದಿಕ್ಕರಿಸಿ ಮಹಾತ್ಮಾ ಗಾಂಧಿಯವರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಾಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ, ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು.

ಆದರೆ ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿಯವರು ತಮ್ಮ ಅಜ್ಞಾಪಾಲಕರು ಮತ್ತು ನಸುಗುನ್ನಿಯಂತಹ ಸ್ವಭಾವದವರಾಗಿದ್ದ ನೆಹರು ಅವರನ್ನು ಆಯ್ಕೆ ಮಾಡಿಕೊಂಡಿದ್ದು ಈ ದೇಶದ ದೌರ್ಭ್ಯಾಗ್ಯವಾಗಿ ಇದೇ ನೆಹರೂವಿನ ಸ್ವಾರ್ಥ ಮತ್ತು ದ್ವೇಷಕ್ಕೆ ಬಲಿಯಾದ ಅಂಬೇಡ್ಕರ್, ಸಾವರ್ಕರ್, ಪಟೇಲ್ ಮುಂತಾದ ನಾಯಕರುಗಳ ಪಟ್ಟಿಯಲ್ಲಿ ಸುಭಾಷರು ಸೇರಿಹೋದದ್ದು ಈ ದೇಶದ ದೌರ್ಭಾಗ್ಯವೇ ಸರಿ. ಗಾಂಧಿಯವರನ್ನು ತಮ್ಮ ಪರಮೋಚ್ಚ ನಾಯಕ ಎಂದು ಒಪ್ಪಿಕೊಂಡಿದ್ದರೂ, ಗಾಂಧಿಯವರ ಅಹಿಂಸಾ ತತ್ವವನ್ನು ಬಹಳವಾಗಿ ವಿರೋಧಿಸುತ್ತಾ ತಮ್ಮ ಆಕ್ರಮಣಕಾರಿಯೂ ಮನೋಭಾವನೆಯಿಂದಾಗಿ ಸುಭಾಷರು ಸಹಜವಾಗಿ ಗಾಂಧಿಯವರ ಅಸಹನೆ, ಅಸಮಾಧಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದಿದ್ದಲ್ಲದೇ, ಇದರಿಂದ ಅಸಮಧಾನಗೊಂಡು ಕಡೆಗೆ ತಮ್ಮ ಐಎನ್ಎ ಸೇನೆಗಾಗಿ ಸೈನಿಕರನ್ನು ಒಟ್ಟು ಗೂಡಿಸುವ ಸಲುವಾಗಿ ದೇಶದಿಂದಲೇ ಹೊರಹೋಗಿದ್ದು ಒಂದು ರೀತಿಯ ದೌರ್ಭಾಗ್ಯ ಮತ್ತು ಸೌಭಾಗ್ಯವೇ ಎಂದು ಹೇಳಬೇಕಾಗುತ್ತದೆ.

ಗಾಂಧಿಯವರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಬ್ರಿಟೀಷರ ಪರವಾಗಿ ಹೋರಾಟಕ್ಕಿಳಿಸಿದ ಸಂದರ್ಭದಲ್ಲಿ, ಶತ್ರುವಿನ ಶತ್ರು ಮಿತ್ರ ಎಂಬ ನೀತಿಯಂತೆ ನೇತಾಜಿಯವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಇಟಲಿಯ ನಾಯಕ ಮುಸಲೋನಿಯನ್ನು ಭೇಟಿಯಾಗಿ ಬ್ರಿಟೀಷರ ವಿರುದ್ದ ಹೋರಾಡಲು ಅವರ ಸಹಾಯಹಸ್ತವನ್ನೂ ಚಾಚಿದ್ದಲ್ಲದೇ, ಜಪಾನಿನ ಸಹಕಾರದೊಂದಿಗೆ ಬ್ರಿಟೀಷರ ವಿರುದ್ಧ ಹೊಸ ಸೈನ್ಯ ಕಟ್ಟಿ ಹೋರಾಡಿ ಆರಂಭದಲ್ಲಿ ಯಶಸ್ಸನ್ನೂ ಗಳಿಸಿದ್ದು ನಿಜಕ್ಕೂ ಶ್ಲಾಘನೀಯವಾದ ಸಾಧನೆಯೇ ಸರಿ.

ಸುಭಾಷರು ಸಾವರ್ಕರ್ ಅವರನ್ನು ಭೇಟಿಯಾದ ಸಂದರ್ಭ ಹೇಗಿತ್ತೆಂದರೆ, ನರೇಂದ್ರರಿಗಾಗಿ ಪರಮಹಂಸರು ಕಾಯುತ್ತಿದ್ದ ಹಾಗಿತ್ತಂತೆ. ನೀನು ಖಂಡಿತವಾಗಿಯೂ ನನ್ನ ಬಳಿ ಬಂದೇ ಬರುತ್ತೀಯೇ ಎಂದು ಗೊತ್ತಿತ್ತು. ಇಷ್ಟೇಕೆ ತಡ ಮಾಡಿ ಬಂದೆ ಎಂದು ರಾಮಕೃಷ್ಣರು ಕೇಳಿದಂತೆಯೇ ಸಾವರ್ಕರ್ ಅವರೂ ಸಹಾ ಸುಭಾಷರನ್ನು ಕೇಳಿ, ನಿನ್ನ ಧ್ಯೇಯೊದ್ದೇಶಗಳೇನು ಎಂದು ಕೇಳಿದಾಗ, ಭಾರತದಲ್ಲಿರುವ ಎಲ್ಲಾ ಬ್ರಿಟೀಶರ ಮೂರ್ತಿಗಳನ್ನು ಕಿತ್ತೊಗೆಯಬೇಕೆಂದು ಸಂಕಲ್ಪ ಮಾಡಿದ್ದೇನೆ ಎಂದರಂತೆ ಸುಭಾಷರು. ಸುಭಾಷರ ಮಾತನ್ನು ಕೇಳಿದ ಸಾವರ್ಕರ್ ನಗುತ್ತಾ, ಅಯ್ಯೋ ಪೆದ್ದಾ, ಬ್ರಿಟೀಷರ ಮೂರ್ತಿಗಳನ್ನು ಕಿತ್ತೊಗೆದರೆ ಮತ್ತೊಂದು ಮೂರ್ತಿಗಳನ್ನು ಸ್ಥಾಪಿಸುತ್ತಾರೆ ಈ ಕೆಲಸ ಮಾಡಲು ನೂರಾರು ಜನರು ಸಿಗುತ್ತಾರೆ. ಆದರೆ ನಿನಗೆ ಬ್ರಿಟೀಷರನ್ನೇ ದೇಶದಿಂದ ಕಿತ್ತೊಗೆಯುವ ಶಕ್ತಿಯಿದೆ. ಅಂತಹ ಮಹೋನ್ನತ ಕಾರ್ಯದಲ್ಲಿ ತೊಡಗಿಸಿಕೋ. ಅದಕ್ಕಾಗಿ ಸಶಕ್ತ ಸೈನ್ಯವನ್ನು ಕಟ್ಟು ಎಂದು ಪ್ರೇರೇಪಿಸಿದ್ದೇ ಮುಂದೆ ಸುಭಾಷರಿಗೆ ಐ.ಎನ್.ಎ. ಕಟ್ಟಲು ಮೂಲ ಪ್ರೇರಣೆಯಾಗಿತ್ತು.

ಹೀಗೆ ಬೋಸರ ಜನಪ್ರಿಯತೆ ಹೆಚ್ಚುವುದನ್ನು ಗಮನಿಸಿದ ನೆಹರು, ಬೋಸರನ್ನು ಇದೇ ರೀತಿಯಲ್ಲಿಯೇ ಮುಂದುವರೆಯಲು ಬಿಟ್ಟಲ್ಲಿ ಇವರು ತಮ್ಮ ಪ್ರತಿಸ್ಪರ್ಧಿಯಾಗುತ್ತಾರೆ ಎಂಬ ದುರಾಲೋಚನೆಯ ದೂರಾಲೋಚನೆಯಿಂದಾಗಿ ಸುಭಾಷರ ಬಗ್ಗೆ ಗಾಂಧಿಯವರಿಗೆ ಭಿನ್ನಾಭಿಪ್ರಾಯ ಮೂಡಿಸುವುದರಲ್ಲಿ ಯಶಸ್ವಿಯೂ ಆದರು.

ಗಾಂಧಿಯವರು ಉತ್ತಮ ಸಾಧನೆಗಾಗಿ ಗುರಿ ಮತ್ತು ಮಾರ್ಗ ಎರಡೂ ಮುಖ್ಯ. ಉತ್ತಮ ಗುರಿ ತಲುಪಲು ಉತ್ತಮ ಮಾರ್ಗವೂ ಮುಖ್ಯ ಎಂಬ ಸಿದ್ಧಾಂತವನ್ನು ನಂಬಿದದ್ದರೆ, ಸುಭಾಷರು, ಉತ್ತಮ ಗುರಿಯ ಸಾಧನೆಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಯಾವುದೇ ಮಾರ್ಗ ಅನುಸರಿಸಿಯಾದರೂ ಸರಿ. ಒಟ್ಟಿನಲ್ಲಿ ಗುರಿ ತಲುಪುವುದು ಮುಖ್ಯ ಎಂದೇ ಭಾವಿಸಿದ್ದರು.

ಸಮಸ್ಯೆಗಳನ್ಮು ಸಂಪೂರ್ಣವಾಗಿ ಪರಿಹರಿಸದೇ ಅಕ್ಷಣಕ್ಕೆ ಒಂದು ಪರಿಹಾರವನ್ನು ಸೂಚಿಸಿ ದೀರ್ಘಾವದಿಯ ಪರಿಹಾರಕ್ಕಾಗಿ ಸಮಸ್ಯೆಯನ್ನು ಮುಂದೂಡುವುದು ಗಾಂಧಿಯವರ ಮಾರ್ಗವಾದರೇ, ಸುಭಾಷರು, ಸಮಸ್ಯೆಯನ್ನು ಕಂಡ ತಕ್ಷಣವೇ ಅದಕ್ಕೊಂದು ಶಾಶ್ವತವಾದ ಪರಿಹಾರವನ್ನು ನೀಡಿ ಸಮಸ್ಯೆಯನ್ನು ಪರಿಹರಿಸಿ ಮುಂದಿನ ಸಮಸ್ಯೆಯತ್ತ ಗಮನ ಹರಿಸುತ್ತಿದ್ದರು.

ಬಹುತೇಕರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಆರೆಸ್ಸೆಸ್‌ನ ಸಂಘದ ಧ್ಯೇಯ – ಅನುಶಾಸನ ಕಾರ್ಯ ಪದ್ಧತಿ ಕುರಿತಾಗಿ ಅನೇಕರು ಶ್ಲಾಘಸುತ್ತಿದ್ದದ್ದನ್ನು ಕೇಳಿ ಅದನ್ನು ಪ್ರತ್ಯಕ್ಷವಾಗಿ ನೋಡಲೆಂದೇ, 1938ರಲ್ಲಿ ಸಂಘ ಶಿಕ್ಷಾವರ್ಗ ಶಿಬಿರಕ್ಕೆ ಭೇಟಿ ಮಾಡಲು ನಿರ್ಧರಿಸಿದ್ದರೂ ಕಾರಣಾಂತರಗಳಿಂದ ಅಲ್ಲಿಗೆ ಭೇಟಿ ಸಾಧ್ಯವಾಗಲಿಲ್ಲ. ಮುಂದೆ ಕಾಂಗ್ರೆಸ್ ಅಧ್ಯಕ್ಷ ಪದವಿಗಾಗಿ ನಡೆದ ಪ್ರಪ್ರಥಮ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ 215 ಮತಗಳ ಗೆಲುವನ್ನು ಸಾಧಿಸಿ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದರೂ, ಸುಭಾಷ್ ಅವರ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ೧೯೪೦ ರಲ್ಲಿ ಫಾರ್‌ವರ್ಡ್ ಬ್ಲಾಕ್ ಸ್ಥಾಪಸಿದರು. ಅದೇ ವರ್ಷದ ಜೂನ್ ೧೮ರಂದು ಸಂಘದ ಪ್ರಥಮ ಸರಸಂಘ ಚಾಲಕರಾದ ಡಾ|| ಹೆಡಗೇವಾರ್ ಜತೆ ಭೇಟಿ ಮಾಡಲು ನಾಗಪುರದ ಮೋಹಿತೇವಾಡಕ್ಕೆ ಬಂದಾಗ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ.ಜೀ ಅವರ ಜೊತೆ ಅಂದು ಮಾತು ಕಥೆ ಸಾಧ್ಯವಾಗದೇ, ಡಾ.ಜೀ ಯವರ ಆರೋಗ್ಯ ಸುಧಾರಿಸಿದ ಮೇಲೆ ಭೇಟಿಯಗಲು ನಿಧರಿಸಿದರು. ದುರಾದೃಷ್ಟವಷಾತ್ ಹಾಗೆ ನಿರ್ಧರಿಸಿದ ಮೂರೇ ದಿನದಲ್ಲಿ ಡಾ|| ಹೆಡಗೇವಾರ್ ನಿಧನರಾದ ಕಾರಣ ಇಬ್ಬರು ದಿಗ್ಗಜರ ಮಹಾಮಿಲನ ತಪ್ಪಿಹೋಗಿದ್ದು ದೇಶಕ್ಕೆ ತುಂಬಲಾರದ ನಷ್ಟವೇ ಸರಿ. ಬಹುಶಃ ಆ ಇಬ್ಬರು ಮಹಾನ್ ನಾಯಕರು ಭೇಟಿಯಾಗಿದ್ದಲ್ಲೇ ಸ್ವಾತಂತ್ರ್ಯಾ ನಂತರ ಭಾರತದ ಪರಿಸ್ಥಿತಿ ಇಂದಿನಂತಿರದೇ ಬಹಳವಾಗಿಯೇ ಭಿನ್ನವಾಗಿರುತ್ತಿತ್ತು ಎಂದರೂ ಅತಿಶಯೋಕ್ತಿಯೇನಲ್ಲ.

ಎರಡು ಬಾರೀ ಕಾಂಗ್ರೇಸ್ ಅಧ್ಯಕ್ಶರಾಗಿದ್ದರೂ, ಗಾಂಧಿಯವರ ಅಹಿಂಸಾ ವಾದಕ್ಕೆ ಬ್ರಿಟೀಷರು ಬಗ್ಗುವುದಿಲ್ಲ. ಅವರಿಗೇನಿದ್ದರೂ ದಂಡ ದಶಗುಣಂ ಭವೇತ್ ಎನ್ನುವಂತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ದೂರಾಲೋಚನೆಯಿಂದ ಸಾವರ್ಕರ್ ಅವರ ಪ್ರೇರಣೆಯಂತೆ ಆಜಾದ್ ಹಿಂದ್ ಫೌಜ್ (ಇಂಡಿಯನ್ ನ್ಯಾಷನಲ್ ಆರ್ಮಿ – ಐಎನ್‌ಎ) ಎಂಬ ಸೇನೆಯನ್ನು ಕಟ್ಟಿದಲ್ಲದೇ ಬ್ರಿಟೀಷರ ವಿರುದ್ಧ ಹೋರಾಡಲು ಕೇವಲ ಭಾರತವಲ್ಲದೇ, ಜಪಾನ್, ಜರ್ಮನಿ, ನೇಪಾಳ ಬರ್ಮಾ, ಶ್ರೀಲಂಕ ಮುಂತಾದ ಹತ್ತಾರು ದೇಶಗಳಿಂದ ವೀರ ಯೋಧರ ಪಡೆಯನ್ನು ಸಿದ್ಧಗೊಳಿಸಿ ಅವರಿಗೆ ಶಸ್ತ್ರ ತರಭೇತಿಯನ್ನು ನೀಡಿದ್ದಲ್ಲದೇ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದ್ದರು. ಅಪ್ರತಿಮ ದೇಶಭಕ್ತರಾಗಿದ್ದ ಬೋಸ್ ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶದಲ್ಲಿ ಸುತ್ತಾಡಿದ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಗೇ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಪ್ರಖರ ಚಿಂತನೆಯ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ದ ನೇತಾಜಿ, ತಮ್ಮ ದೇಶ ಪ್ರೇಮದ ಕಿಚ್ಚಿನಿಂದಲೇ ಆಗಸದೆತ್ತಕ್ಕೆ ಬೆಳೆದಿದ್ದರು. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ತನ್ನ ಪ್ರಖರ ನಿಲುವುಗಳಿಂದಲೇ ಬಿಸಿ ಮುಟ್ಟಿಸಿದ್ದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೆಚ್ಚೆದೆಯ ಹೋರಾಟದ ಫಲವಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ 21-10-1943ರಂದೇ ಭಾರತದ ಪ್ರಥಮ ಸರ್ಕಾರ ಆಜಾದ್ ಹಿಂದ್ ಸರ್ಕಾರ್ ಸ್ಥಾಪಿತವಾಗಿದ್ದಲ್ಲದೇ, ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಗಳಾದದ್ದು ಈಗ ಇತಿಹಾಸ. ಜಪಾನ್ ಸೇರಿದಂತೆ ಚೀನಾ,ರಷ್ಯ, ಪ್ರಾನ್ಸ, ಸಿಂಗಪುರ,ಬರ್ಮಾ, ಜರ್ಮನಿ, ಕ್ರೋಷಿಯಾ, ಫಿಲಿಫೈನ್ಸ್, ನಾನ್ ಕಿಂಗ್,ಥೈಲ್ಯಾಂಡ್, ಕ್ರೋವೇಷಿಯಾ, ಸಯಾಂ, ಇಟಲಿ, ಮಾಂಚುಕುವೋನಂಥಾ ರಾಷ್ಟ್ರಗಳು ಆಜಾದ್ ಹಿಂದ್ ಸರ್ಕಾರವನ್ನು ಭಾರತ ಸರ್ಕಾರವೆಂದು ಸುಭಾಷರನ್ನು ಭಾರತದ ಪ್ರಧಾನ ಮಂತ್ರಿಯೆಂದು ಮಾನ್ಯತೆ ನೀಡಿದ್ದವು ಎಂದರೆ ಸುಭಾಷ್ ಅವರ ಕೀರ್ತಿ ಎಷ್ಟಿತ್ತು ಎಂಬುದು ಅರಿವಾಗುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಆಜಾದ್ ಹಿಂದ್ ಸರ್ಕಾರ್ ಲೇಖನವನ್ನು ಓದುವ ಮೂಲಕ ತಿಳಿದು ಕೊಳ್ಳ ಬಹುದಾಗಿದೆ.

ಬ್ರಿಟಿಷರ ವಿರುದ್ಧ ಪ್ರಭಲ ಸೇನೆಯನ್ನು ಕಟ್ಟುವ ನಿಟ್ಟಿನಲ್ಲಿಯೇ ಪ್ರವಾಸಲ್ಲಿದ್ದಾಗ 1945ರ ಆಗಸ್ಟ್‌ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿಯವರು ಮೃತಪಟ್ಟರು ಜಪಾನ್‌ ಸರ್ಕಾರ ವರದಿ ಮಾಡಿತು. ಬೋಸ್‌ ಅವರು ಪ್ರಯಾಣಿಸುತ್ತಿದ್ದ ವಿಮಾನ, ಹಾರಾಟ ಆರಂಭಿಸಿ 20 ಮೀಟರ್‌ ಎತ್ತರಕ್ಕೆ ಹೋದ ಬಳಿಕ ಎಡಬದಿಯ ರೆಕ್ಕೆಗೆ ಧಕ್ಕೆಯಾಗಿ ನಂತರ ಎಂಜಿನ್‌ಗೂ ಧಕ್ಕೆಯಾಗಿ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ವಿಮಾನ ಬೆಂಕಿಗೆ ಆಹುತಿಯಾಯಿತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬೋಸ್‌ ಅವರು ಸಾಹಸಪಟ್ಟು ವಿಮಾನದಿಂದ ಕೆಳಗೆ ಇಳಿಸಿ, ಮಧ್ಯಾಹ್ನ 3 ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸುಮಾರು 7 ಗಂಟೆಗೆ ಅವರು ಮೃತಪಟ್ಟರು. ಆಗಸ್ಟ್‌ 22ರಂದು ಬೋಸ್‌ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.

ಆದರೆ ಸುಭಾಷರ ಅಭಿಮಾನಿಗಳು ಅಂದಿಗೂ ಇಂದಿಗೂ ಈ ವರದಿಯನ್ನು ಒಪ್ಪದೇ ನೇತಾಜಿಯವರನ್ನು ಬ್ರಿಟೀಷರೇ ಮೋಸದಿಂದ ಕೊಲೆ ಮಾಡಿರಬಹುದು ಎಂದು ಕೆಲವರು ಹೇಳಿದರೆ, ಇನ್ನೂ ಹಲವರು ಬೋಸರು ಸ್ವಾತಂತ್ರ್ಯ ನಂತರವೂ ಮಾರು ವೇಷದಲ್ಲಿ ಘುಮ್ನಾ ಬಾಬಾ ಎಂಬ ಹೆಸರಿನಲ್ಲಿಯೇ ಇದ್ದರು ಎಂದರೆ ಇನ್ನೂ ಕೆಲವರು ಇಂದಿಗೂ ಸುಭಾಷರು ಬದುಕಿದ್ದಾರೇ ಎಂದೆ ನಂಬಿಕೆ ಹೊಂದಿದ್ದಾರೆ. ಮೊನ್ನೆ ಸಂಯುಕ್ತ ಕರ್ನಾಟಕದಲ್ಲಿ ಖ್ಯಾತ ಪತ್ರಕರ್ತರಾದ ಈಶ್ವರ ದೈತೋಟ ಅವರ ಈ ಲೇಖನ ಅದಕ್ಕೆ ಪುಷ್ಟಿ ಕೊಡುವಂತಿದೆ.

ಹಾಗಾಗಿಯೇ ಲೇಖನದ ಆರಂಭದಲ್ಲಿ ಸುಭಾಷರ ಜನ್ಮದಿನ ವರ್ಧಂತಿಯೋ ಇಲ್ಲವೇ ಜಯಂತಿಯೋ ಎಂಬ ಜಿಜ್ಞಾಸೆ ಕಾಡುತ್ತಿದೆ ಎಂದು ಬರೆದಿದ್ದೆ. ಒಟ್ಟಿನಲ್ಲಿ ಸುಭಾಷರು ಜೀವಂತವಾಗಿ ಇರಲೀ ಅಥಾವ ಇಲ್ಲದಿರಲೀ, ಅವರ ಕೆಚ್ಚದೆಯ ಹೋರಾಟ ಅಂದಿಗೂ ಮತ್ತು ಇಂದಿಗೂ ಅನೇಕ ರಾಷ್ಟ್ರ ಭಕ್ತರಿಗೆ ಮಾರ್ಗದರ್ಶನವಾಗಿದೆ. ಗಾಂಧಿಯವರ ಸ್ವಾತಿಕ ಹೋರಾಟ ಅಥವಾ ಸುಭಾಷರ ಉಗ್ರ ಹೋರಾಟದ ಮಾರ್ಗವು ಭಿನ್ನವಾದರೂ ಅವರಿಬ್ಬರ ರಾಷ್ಟ್ರಪ್ರೇಮ ಮಾತ್ರ ಅನನ್ಘ ಹಾಗೂ ಅನುಕರಣೀಯವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಸಾಧನೆ

ಬಹಳ ಹಿಂದೆ , ಜೀವನದಲ್ಲಿ ನಮ್ಮ‌ ಸಾಧನೆ ಹೇಗಿರಬೇಕೆಂದರೆ, ನಾಲ್ಕಾರು ಜನರ ಮಧ್ಯೆ ನಮ್ಮ ಉಪಸ್ಥಿತಿಗಿಂತ, ನಮ್ಮ ಅನುಪಸ್ಥಿತಿ ಎದ್ದು‌‌ ಕಾಣುವಂತಿರಬೇಕು ಎಂದು ಬರೆದಿದ್ದೆ. ಇಂದು ಅಕ್ಷರಶಃ ಅದರ ಪ್ರಾತ್ಯಕ್ಢತೆಯನ್ನು ನೋಡುವ ಸುವರ್ಣಾವಕಾಶ ದೊರೆಯುವಂತಾಯಿತು. 28 ಮೇ 1883 ರಲ್ಲಿ ಮಹಾರಾಷ್ಟ್ರದ ಭಾಗೂರ್ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸರಿಯಾಗಿ ತಿಳಿದವರಿಗಿಂತ ತಿಳಿಯದವರೇ ಹೆಚ್ಚಿನವರಿದ್ದಾರೆ.  ಬಹುಶಃ ಪ್ರಪಂಚದಲ್ಲಿ ಅಷ್ಟು ದೀರ್ಘಕಾಲದ ಕಠಿಣ ಶಿಕ್ಷೆ ಮತ್ತು ನಿಂದನೆಯನ್ನು ಬದುಕಿದ್ದಾಗಲೂ ಮತ್ತು ಸತ್ತ ನಂತರವೂ ಅನುಭವಿಸುತ್ತಿರುವ ಏಕೈಕ ನಾಯಕದಿದ್ದರೆ ಅದು ನಿಶ್ಚಿತವಾಗಿಯೂ ಸಾವರ್ಕರ್ ಅವರೇ ಎಂದರೆ ತಪ್ಪಾಗಲಾರದು. ನೆಲ್ಸನ್ ಮಂಡೇಲಾ, ಸೂಕೀ ಅಂಹಹವರೂ ಅತ್ಯಂತ ದೀರ್ಘಾವಧಿಯ ಕಾಲ ಸೆರೆಮನೆಯಲ್ಲಿ ಇದ್ದರಾದರೂ ಸಾವರ್ಕರ್ ಅವರಷ್ಟು ಕಠಿಣ ಶಿಕ್ಷೆಯನ್ನು ಅನುಭವಿಸಿರಲಿಲ್ಲ ಮತ್ತು ಅವರು ಸೆರೆಮನೆಯಿಂದ ಹೊರಬಂದಾಗ ಅವರಿಗೆ ಸಕಲ ರಾಜಮರ್ಯಾದೆಯಿಂದೆ ಕೆಂಪು ರತ್ನ ಕಂಬಳಿಯನ್ನು ಹಾಸಿ ಸ್ವಾಗತಿಸಿ ಅವರಿಗೆ ತಮ್ಮ ದೇಶದ ಅಧ್ಯಕ್ಷ ಪದವಿಯನ್ನು ಅನುಭವಿಸುವ ಸೌಭಾಗ್ಯವಾಗಿತ್ತು.

savarkarಬಾಲ್ಯದಲ್ಲಿಯೇ ತಂದೆ ತಾಯಿಯವರನ್ನು ಕಳೆದುಕೊಂಡು ದೊಡ್ಡಪ್ಪನವರ ಆಶ್ರಯದಲ್ಲಿ ಬೆಳೆದ ಸಾವರ್ಕರ್ ಓದಿನಲ್ಲಿ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿ ಅವರ ಸಹೋದರು ಮತ್ತು ಸ್ನೇಹಿತರನ್ನು ಸೇರಿಸಿಕೊಂಡು ಅಭಿನವ ಭಾರತವನ್ನು ಕಟ್ಟಿಕೊಂಡು ಎಲ್ಲರಲ್ಲೂ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸುತ್ತಾ, ಸ್ವದೇಶೀ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸುವುದರಲ್ಲಿ ಸಫಲರಾಗಿದ್ದರು. ಫರ್ಗ್ಯೂಸನ್ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿಯನ್ನು ಪಡೆದು ಚಾಪೇಕರ್ ಸಹೋದರನ್ನು ಗಲ್ಲಿಗೇರಿಸಿದ್ದು ಅವರಲ್ಲಿ ಮತ್ತಷ್ಟೂ ಸ್ವಾತಂತ್ರ್ಯದ ಕಿಚ್ಚನ್ನು ಹಬ್ಬಿಸಿತ್ತು. ಹಾಗಾಗಿ ಬ್ರಿಟಿಷರ ನೆಲದಲ್ಲಿದ್ದುಕೊಂಡೇ ಅವರ ವಿರುದ್ಧ ದಂಗೆಯನ್ನು ಎಬ್ಬಿಸಬೇಕೆಂದು ನಿರ್ಧರಿಸಿ, ಸಿಂಹದ ಗುಹೆಗೇ ನುಗ್ಗಿ ಸಿಂಹದ ಹಲ್ಲನ್ನು ಕೀಳಬೇಕು ಎಂದು ನಿರ್ಧರಿಸಿ ಶಿಷ್ಯವೇತನದೊಂದಿಗೆ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಆಫ್ ಲಾ ಪದವಿಯನ್ನು ಪಡೆಯಲು ಬರುತ್ತಾರೆ. ಬ್ರಿಟನ್ನಿಗೆ ಬಂದಿಳಿದ ಸಾವರ್ಕರ್ ಮೊತ್ತ ಮೊದಲು ಅಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯಪ್ರವೃತ್ತರಾಗುತ್ತಾರೆ. ಪ್ರತೀ ಕಾಲೇಜಿನ ಮುಂದೆ ಬಂದು ಸಣ್ಣದಾಗಿ ದೇಶಭಕ್ತಿಯ ಭಾಷಣ ಅವರಲ್ಲಿ ಭಾರತ ಬಗ್ಗೆ ಹೆಮ್ಮೆ ಬರುವಂತೆ ಮಾಡಿ ಎಲ್ಲರನ್ನೂ ಅಭಿನವ ಭಾರತ ಸಂಘಟನೆಯ ಸದಸ್ಯರನ್ನಾಗಿ ಮಾಡಿದ್ದಲ್ಲದೇ ಎಲ್ಲರನ್ನೂ ಪ್ರತೀ ಶನಿವಾರ ಮತ್ತು ಭಾನುವಾರ ಇಂಡಿಯಾ ಹೌಸ್ ಎಂಬ ಕಟ್ಟದಲ್ಲಿ ಸಭೆ ನಡೆಸುತ್ತಾ ಮೋಜು ಮಸ್ತಿಯಲ್ಲಿ ಮಗ್ನರಾಗಿದ್ದ ಅನೇಕ ಭಾರತೀಯರ ಮನಃ ಪರಿವರ್ತಿಸಿ ಎಲ್ಲರಲ್ಲೂ ಭಾರತದ ಬಗ್ಗೆ ಗೌರವ ಬರುವಂತೆ ಮಾಡಿದರು. ಹಾಗೆ ಮನಃ ಪರಿವರ್ತಿತನಾಗಿ ವಿಲಿಯಂ ಹಟ್ ಕರ್ಜನ್ ವಿಲ್ಲಿ ಹತ್ಯೆಗೈದು ಅಲ್ಲಿಯೇ ನೇಣುಗಂಬವನ್ನೇರಿದ ಮದನ್ ಲಾಲ್ ಢಿಂಗ್ರಾ ಕೂಡಾ ಒಬ್ಬರು. ಇದೇ ರೀತಿ ಸಣ್ಣ ಸಣ್ಣ ಪಿಸ್ತೂಲ್ಗಳನ್ನು ಖರೀದಿಸಿ ಅದನ್ನು ದಪ್ಪನೆಯ ಗಟ್ಟಿ ರೊಟ್ಟಿರುವ ಬೈಬಲ್ಲುಗಳನ್ನು ಪಿಸ್ತೂಲ್ ಆಕಾರದಲ್ಲಿ ಕೊರೆದು ಅದರೊಳಗೆ ಪಿಸ್ತೂಲ್ಗಳನ್ನು ಇಟ್ಟು ಸುಲಭವಾಗಿ ಬ್ರಿಟೀಷರ ಕಣ್ತಪ್ಪಿಸಿ ಭಾರತಕ್ಕೆ ಸಮುದ್ರದ ಮೂಲಕ ಕಳುಹಿಸುತ್ತಿದ್ದರು. ನಂತರ ಅಲ್ಲಿ ಬಾಂಬ್ ತಯಾರಿಸುವುದನ್ನು ಕಲಿತು ಅದನ್ನು ಕಲ್ಕತ್ತಾದ ವ್ಯಕ್ತಿಯೊಬ್ಬರ ಮೂಲಕ ಭಾರತಕ್ಕೆ ತಲುಪಿಸಿ ಭಾರತದಲ್ಲೂ ಬಾಂಬ್ ತಯಾರಿಸಿ ಮೊತ್ತ ಮೊದಲ ಬಾರಿಗೆ ಖುದೀರಾಮ್ ಭೋಸ್ ಬಾಂಬ್ ಕೂಡಾ ಸಿಡಿಸಿಯಾಗಿತ್ತು. ಇದಲ್ಲದೇ ಬ್ರಿಟೀಷರ ಅನ್ಯಾಯದ ವಿರುದ್ಧ ಪುಸ್ತಕವನ್ನು ಬರೆದು ಅದನ್ನು ಪ್ರಾನ್ಸಿನಲ್ಲಿ ಮುದ್ರಣ ಮಾಡಿಸಿ ಎಲ್ಲ ಕಡೆಗೂ ತಲುಪಿಸುವ ವ್ಯವಸ್ಥೆ ಮಾಡಿದಾಗ ವ್ಯಗ್ರರಾದ ಬ್ರಿಟಿಷರೂ ಪುಸ್ತಕ ಬಿಡುಗಡೆಯಾಗುವ ಮಂಚೆಯೇ ಅದನ್ನು ನಿಷೇಧಿಸಿದ್ದರು. ಆದರೆ ಪುಣೆಯಲ್ಲಿ ಬ್ರಿಟಿಷ್ ಅಧಿಕಾರಿ ಜಾಕ್ಸನ್ ಹತ್ಯೆಗೀಡಾದಾಗ ಆದಕ್ಕೆ ಬಳೆಸಿದ ಬ್ತಿಟನ್ನಿನ ಪಿಸ್ತೂಲ್ ಸಾವರ್ಕರ್ ಮೂಲಕ ಭಾರತಕ್ಕೆ ತಲುಪಿದ ವಿಷಯ ಬ್ತಿಟೀಷರರಿಗೆ ತಿಳಿದು ಅದೊಮ್ಮೆ ಪ್ಯಾರೀಸ್ಸಿನಿಂದ ಲಂಡನ್ನಿಗೆ ಹಿಂದಿರುಗುತ್ತಿದ್ದ ಸಾವರ್ಕರ್ ಅವರನ್ನು ಬಂಧಿಸಿ ತನಿಖೆ ನಡೆಸಿ ಭಾರತಕ್ಕೆ ಗಡಿಪಾರು ಮಾಡುವ ಶಿಕ್ಷೆಯನ್ನು ಕೊಡಲಾಯಿತು. ಹಾಗೇ ಭಾರತಕ್ಕೆ ಹಡುಗಿನಲ್ಲಿ ಬರುತ್ತಿದ್ದಾಗಲೇ ಶೌಚಾಲಯದ ಸಣ್ಣ ಕಿಟಕಿಯ ಗಾಜನ್ನು ಒಡೆದು ಸಮುದ್ರಕ್ಕೆ ಹಾರಿ ದಿಟ್ಟತನದಿಂದ ಥೈರ್ಯದಿಂದ ಈಜಿ ಫ್ರಾನ್ಸ್ ದಡ ಸೇರಿದರೂ ಅಲ್ಲಿನ ಪೋಲೀಸರ ಅಚಾತುರ್ಯ ಮತ್ತು ಲಂಚಗುಳಿತನದ ಕಾರಣದಿಂದಾಗಿ ಮತ್ತೆ ಬಂಧಿತರಾಗಿ ಭಾರತಕ್ಕೆ ಬಂದು ವಿಚಾರಣೆ ನಡೆದು ಸುಮಾರು 50 ವರ್ಷಗಳ ಕಾಲ ಕಾಲಾಪಾನಿ ಶಿಕ್ಷೆಗೆ ಒಳಗಾಗುತ್ತಾರೆ.

sav1ಸಾವರ್ಕರ್ ಅವರನ್ನು 1911 ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕರೆತಂದು ಅವರನ್ನು ಗಾಣದಿಂದ ಎಣ್ಣೆಯನ್ನು ತೆಗೆಯುವ ಕೆಲಸಕ್ಕೆ ಹೂಡಲಾಯಿತು. ಪ್ರತೀ ದಿನ ಅವರು ಕಡ್ಡಾಯವಾಗಿ ಮೂವತ್ತು ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕಾಗಿತ್ತು. ತಪ್ಪಿದರೆ ಶಿಕ್ಷೆ, ದಣಿವಾಗಿ ನಿಂತರೆ ಚಾವಟಿಯ ಹೊಡೆತ, ಕೈಗಳಲ್ಲಿ ರಕ್ತ, ಎದೆಯಲ್ಲಿ ಉರಿ, ತಲೆ ಸುತ್ತು… ಹೀಗೆ ನರಕಯಾತನೆ. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ! ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 5 ರವರೆಗೆ ಗೋಡೆ ಕಡೆ ಮುಖ ಮಾಡಿ ಬೇಡಿ ಹಾಕಲಾಗುತ್ತಿತ್ತು. ವರ್ಷಕ್ಕೆ ಒಂದು ಸಲ ಕಾಗದ ಬರೆಯುವ ಅವಕಾಶ. ಅರೆ ಅನ್ನ, ಗಬ್ಬು ನೀರು, ಮಣ್ಣು ಕಲ್ಲು ಬೆವರು ಬೆರೆಸಿದ ಊಟ, ಇದು ಅಲ್ಲಿನ ಆಹಾರ ವ್ಯವಸ್ಥೆ. ಬೆಳಗ್ಗೆ ಎದ್ದರೆ ಅದೇ ಜೈಲು ಖಾನೆ, ಮರದ ಹಲಗೆ, ಕೊರೆಯುವ ಚಳಿ, ಹರಕು ಕಂಬಳಿ! ಅದೇ ತೆಂಗಿನ ನಾರು ಬಿಡಿಸುವ ಕೆಲಸ, ಅದೇ ಎಣ್ಣೆಯ ಗಾಣ, ನೀರು ಇಟ್ಟಿಗೆ ಹೊರುವುದು ಸಾವಕರ್ರರ ಪ್ರತಿನಿತ್ಯದ ಕರ್ತವ್ಯವಾಗಿತ್ತು. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ ಸಾವರ್ಕರ್ ಅವರು ತಮ್ಮ ಕೈಗಳಿಗೆ ಹಾಕಿದ ಬೇಡಿಯಿಂದಲೇ ಗೋಡೆಗಳ ಮೇಲೆ ತಮ್ಮ ಕವನಗಳನ್ನು ರಚಿಸಿ ಅದನ್ನು ಕಂಠಸ್ಥ ಮಾಡಿ ಅವರು ಬಿಡುಗಡೆಯಾದ ನಂತರ ಅದನ್ನು ಪುಸ್ತಕ ರೂಪಕಕ್ಕೆ ತರಲಾಯಿತು.

ಹೀಗೆ ಸಾವರ್ಕರ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತನು ಮನ ಧನ ಹೀಗೆ ಸರ್ವಸ್ವವನ್ನೂ ಅರ್ಪಿಸಿದರೂ  ಐಶಾರಾಮ್ಯ ಜೀವನ ನಡೆಸುತ್ತಾ ಕಾಟಾಚಾರಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಕೆಲವು ಪಟ್ಟಭಧ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ ನಾನಾ ರೀತಿಯ ಕಪೋಲ ಕಲ್ಪಿತ ಆರೋಗಳು ಒಂದರ ಮೇಲೊಂದು ಬಂದವು, ಮೊದಲು ಸುಮ್ಮನೆ ಕಾಲಾಪಾನಿ ಜೈಲಿನ ಕಠಿಣ ಶಿಕ್ಷೆಯಿಂದಾಗಿ ಪದೇ ಪದೇ ಕೈಕೊಡುತ್ತಿದ ಆರೋಗ್ಯದಿಂದ ಅಲ್ಲೇ ಕೊಳೆತು ನಾರುವ ಬದಲು ಪುನಃ ಶಹರಕ್ಕೆ ಮರಳಿದಲ್ಲಿ ಒಂದಲ್ಲಾ ಒಂದು ರೀತಿಯಿಂದ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸಬಹುದು ಎಂಬ ಅಲೋಚನೆಯಿಂದ ಕಾಲಾಪಾನಿಯಿಂದ ಮುಕ್ತಿ ಬಯಸಿ ಬ್ರಿಟೀಷರಿಗೆ ಪತ್ರ ಬರೆದದ್ದನ್ನೇ ಮುಂದಿಟ್ಟು ಕೊಂಡು ಅವರ ವಿರೋಧಿಗಳು ವೀರ ಸಾವರ್ಕರ್ ಅವರನ್ನು ಹೇಡಿ ಎಂದು ಅನುಮಾನಿಸಿ ಅವಮಾನಿಸಿದರು. ಕಾಲಾಪಾನಿ, ಯರವಾಡ ಮತ್ತು ರತ್ನಗಿರಿ ಸೆರೆಮನೆ ಎಲ್ಲವೂ ಸೇರಿದಂತೆ ಸುಮಾರು 27 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಬಿಡುಗಡೆಯಾಗಿ ತಮ್ಮ ಪಾಡಿಗೆ ತಾವು ಹಿಂದೂ ಮಹಾಸಭಾ ದೊಂದಿಗೆ ಗುರುತಿಸಿಕೊಂಡು ಕಾರ್ಯಪರರಾಗಿದ್ದರೆ, ಸ್ವಾತಂತ್ರ್ಯಾ ನಂತರ ಮಹಾತ್ಮಾಗಾಂಧಿಯವರನ್ನು ಹತ್ಯೆಗೈದ ಗೋಡ್ಸೆ ಹಿಂದೂ ಮಹಾಸಭಾದ ಕಾರ್ಯಕರ್ತ ಎಂಬ ನೆಪವೊಡ್ದಿ ಸಾವರ್ಕರ್ ಅವರನ್ನೂ ಗಾಂಧೀಜೀಯವರ ಹತ್ಯೆಯ ಆರೋಪದಡಿಯಲ್ಲಿ ಬಂಧಿಸಿ ವಿಶೇಷವಾದ ವಿಚಾರಣೆ ನಡೆಸಿ ಗಾಂಧೀಜಿಯವರ ಹತ್ಯೆಯಲ್ಲಿ ಸಾವರ್ಕರ್ ಅವರದ್ದೇನೂ ಪಾತ್ರವಿರಲಿಲ್ಲ ಎಂದು ನ್ಯಾಯಾಲಯವೇ ತೀರ್ಪಿತ್ತಿದ್ದರೂ ಅವರ ವಿರೋಧಿಗಳು ಸುಳ್ಳನ್ನೇ ಒಂದು ನೂರು ಸಾರಿ ಹೇಳುತ್ತಾ ಹೋದಲ್ಲಿ ಅದುವೇ ನಿಜವಾಗುತ್ತದೆ ಎಂಬ ಗೋಬೆಲ್ಸ್ ತತ್ವದಂತೆ ಗಾಂಧಿಯವರ ಹತ್ಯೆಯ ಹಿಂದೆ ಸಾವರ್ಕರ್ ಅವರ ಕೈವಾಡವಿತ್ತು ಎಂದೇ ಗುಲ್ಲೆಬ್ಬಿಸಿ ಅದನ್ನೇ ಸತ್ಯವೆಂದು ಜನಮಾನಸದಲ್ಲಿ ನಂಬುವಂತೆ ಮಾಡಿದದ್ದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

1950 ರ ಪ್ರಪ್ರಥಮ ಗಣರಾಜ್ಯೋತ್ಸವ ಸಂದರ್ಭದಲ್ಲಿಯೂ ಅಂದಿನ ಕಾಂಗ್ರೇಸ್ ಸರ್ಕಾರ ಅವರಿಗೆ ಆಹ್ವಾನ ನೀಡದೇ ಅವಮಾನ ಮಾಡಿತು. ಪಾಕೀಸ್ಥಾನದ ಲಿಯಾಖತ್ ಭಾರತಕ್ಕೆ ಬರುವ ಸಂದರ್ಭದಲ್ಲಿ ದಂಗೆ ಏಳಬಹುದು ಎಂಬ ನೆಪವೊಡ್ಡಿ ಮತ್ತೆ ಅವರನ್ನು ಬಂಧಿಸಿ ನಮ್ಮ ಬೆಳಗಾವಿ ಜೈಲಿಗೆ ದೂಡಲಾಗಿತ್ತು. ಹೀಗೆ ಹೆಜ್ಜೆ ಹೆಜ್ಜೆಗೂ ಅಪಮಾನಗಳನ್ನು ಅನುಭವಿಸುತ್ತಾರೆ. ಕಡೆಗೆ 1966 ಫೆಬ್ರುವರಿ 26 ಸಾವರರ್ಕರ್ ನಿಧನರಾದಾಗ ಇಡೀ ದೇಶವೇ ಕಣ್ಣಿರಿಟ್ಟರೂ. ಅಂದಿನ ಕಾಂಗ್ರೇಸ್ ಸರ್ಕಾರ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೊಡಲು ನಿರಾಕರಿಸಿತು. ಆಗ ಸಾವರ್ಕರ್ ಅವರ ಕಟ್ಟಾ ಅಭಿಮಾನಿ, ನಟ ವಿ. ಶಾಂತಾರಾಮ್ ತಮ್ಮ ಸ್ವಂತ ಖರ್ಚಿನಿಂದ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು. ಲೋಕಸಭೆಯಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಸಾವರ್ಕರ್ ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ ಕಾರಣ ನೀಡಿದ ಸಭಾಧ್ಯಕ್ಷರು ತಿರಸ್ಕರಿಸುತ್ತಾರೆ. ಅವರು ಸತ್ತ 40 ವರ್ಷಗಳ ನಂತರ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಭಾರೀ ಸದ್ದು ಗದ್ದಲಗಳ ನಡುವೆಯೂ ವಾಜಪೇಯಿಯವರ ಸರ್ಕಾರ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಲಾಯಿತು. ಬದುಕಿರುವಾಗಲೇ ತಮಗೆ ತಾವೇ ಭಾರತರತ್ನ ಪ್ರಶಸ್ತಿಯನ್ನು ಕೊಟ್ಟುಕೊಂಡ ಇಲ್ಲವೇ ತಮ್ಮ ರಾಜಕೀಯ ತೆವಲುಗಳಿಗಾಗಿ ಅನೇಕ ಅಪಾತ್ರರಿಗೆ ಭಾರತರತ್ನ ಪ್ರಶಸ್ತಿ ಪ್ರಧಾನ ಮಾಡಿರುವಾಗ ಇಂತಹ ವೀರ ಸೇನಾನಿಗೆ ಇಂದಿಗೂ ಸಹಾ ಭಾರತರತ್ನ ಪ್ರಶಸ್ತಿಯನ್ನು ಕೊಡುವ ವಿಷಯದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿರುವುದು ನಿಜಕ್ಕೂ ಅತ್ಯಂತ ಛೇಧಕರ ವಿಷಯ.

ಸ್ವಾತಂತ್ರ್ಯಾ ನಂತರ ದೇಶದಲ್ಲಾದ ಪ್ರತೀ ಯೋಜನೆಗಳಿಗೂ , ಕಟ್ಟಡಗಳಿಗೂ, ವಿಮಾನ ನಿಲ್ದಾಣಗಳಿಗೂ ಕಡೆಗೆ ಶೌಚಾಲಯಗಳಿಗೂ ನೆಹರೂ ವಂಶಸ್ಥರ ಹೆಸರಗಳನ್ನೇ ಇಟ್ಟು ತಮ್ಮ ದಾಸ್ಯತನದಲ್ಲಿಯೇ ಮೈಮೆರೆತ ಭಾರತೀಯರಿಗೆ ಗಾಂಧೀ, ನೆಹರು ಮತ್ತು ನಕಲಿಗಾಂಧಿಯರ ಹೊರತಾಗಿಯೂ ಅನೇಕ ವೀರ ಸೇನಾನಿಗಳು ಇದ್ದಾರೆ ಎಂಬುದನ್ನೇ ಮರೆತಂತಾಗಿತ್ತು.

ಯಲಹಂಕ ಉಪನಗರದಲ್ಲಿ ನೂತನವಾಗಿ ಕಟ್ಟಲಾದ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರನ್ನು ಇಡಬೇಕೆಂದು ನಾಲ್ಕು ತಿಂಗಳುಗಳ ಮುಂಚೆಯೇ ಫೆಬ್ರವರಿ ತಿಂಗಳಿನಲ್ಲಿಯೇ ಮಹಾನಗರ ಪಾಲಿಕೆಯಲ್ಲಿ ಪ್ರಸ್ತಾಪಿಸಿ ಅನುಮೋದನೆಯನ್ನು ಪಡೆದು ಇಂದು ಸಾವರ್ಕರ್ ಅವರ ಜಯಂತಿ ಅದರ ಅಂಗವಾಗಿ ವಿದ್ಯುಕ್ತವಾಗಿ ಉಧ್ಘಾಟನೆ ಮಾಡಲು ರಾಜ್ಯಸರ್ಕಾರ ನಿರ್ಧರಿಸುತ್ತಿದ್ದಂತೆಯೇ ನಕಲೀ ಗಾಂಧಿ ಕುಟುಂಬದ ಅನುಯಾಯಿಗಳಿಗೆ ಸಹಿಸಲು ಅಸಾಧ್ಯವಾಗಿ ಪುಂಖಾನುಪುಂಖವಾಗಿ ಸ್ಥಳೀಯ ನಾಯಕರ ಅಸ್ಮಿತೆ ಕಾಡತೊಡಗಿ ಸುಖಾಸುಮ್ಮನೆ ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳ ಮುಖಾಂತರ ಕಿಡಿಕಾರತೊಡಗಿದರು. ಸರ್ಕಾರವು ಇಂತಹ ಗೊಡ್ಡು ಬೆದರಿಕೆಗೆ ಮಣಿದು ಆಹ್ವಾನ ಪತ್ರಿಕೆಯಲ್ಲಿ ಸಾವರ್ಕರ್ ಅವರ ಹೆಸರನ್ನು ತೆಗೆದು ಹಾಕಿ ನಂತರ ಸಾವರ್ಕರ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಕಡೆಗೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಉದ್ಘಾಟನೆಯನ್ನೇ ಮುಂದೂಡಿ ಆಗಬಹುದದ ಮುಜುಗರವನ್ನು ತಪ್ಪಿಸಿಕೊಂಡಿತು.

ಸರ್ಕಾರಗಳು ಬರುತ್ತದೆ ಹೋಗುತ್ತದೆ, ಈಗ ಕಟ್ಟಿದ ಸೇತುವೆಗಳು ಒಂದಲ್ಲಾ ಒಂದು ದಿನ ಬಿದ್ದೇ ಬಿದ್ದು ಹೋಗುತ್ತದೆ. ಆದರೆ ಈ ರೀತಿಯ ಅಪಮಾನಗಳು ಸಾವರ್ಕರ್ ಅವರಿಗೆ ಹೊಸದೇನಲ್ಲ. ಇದರಿಂದ ಅವರ ಕೀರ್ತಿ ಪತಾಕೆಗಳು ಒಂದು ಕಿಂಚಿತ್ತೂ ಅಲುಗುವುದಿಲ್ಲ ಏಕೆಂದರೆ ವಿನಾಯಕ ದಾಮೋದರ ಸಾವರ್ಕರ್ ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರದೇ ಅವರು ಇಡೀ ದೇಶದ ಶಕ್ತಿಯಾಗಿದ್ದಾರೆ. ಅವರು ಕೇವಲ ತಮ್ಮ ರಾಜ್ಯವಾದ ಮಹಾರಾಷ್ಟ್ರಕ್ಕೇ ಸೀಮಿತವಾಗದೇ, ಇಡೀ ಭಾರತದ ಆಸ್ತಿ ಯಾಗಿದ್ದಾರೆ. ಅವರು ಇಂತಹ ಸಾಧನೆ ಮಾಡಿದ್ದು ಕೇವಲ ಇಂತಹ ಯಾವುದೋ ಒಂದು ರಸ್ತೆಗಾಗಲೀ ಕಟ್ಟಡಗಳಿಗಾಗಲೀ, ಮೇಲ್ಸೇತುವೆಗಳ ಹೆಸರಾಗಬೇಕು ಎಂದಲ್ಲ. ಅವರ ಹೆಸರಿನಲ್ಲಿ ಯಾವುದೇ ಕಟ್ಟಡ, ರಸ್ತೆ , ಸೇತುವೆ ಅಥವಾ ಸರ್ಕಾರಿ ಯೋಜನೆಗಳು ಇಲ್ಲದಿದ್ದರೂ ಅವರು ತಮ್ಮ ಕಾರ್ಯಗಳಿಂದಾಗಿ ಜನಮಾನಸದಲ್ಲಿ ಅಂದು, ಇಂದು ಮತ್ತು ಎಂದೆಂದಿಗೂ ಆಚಂದ್ರಾರ್ಕವಾಗಿ ಅಜರಾಮರವಾಗಿಯೇ ಇರುತ್ತಾರೆ.

yb2ಸರ್ಕಾರ ಯಲಹಂಕದ ಆ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರಿಡುತ್ತದೆಯೋ ಇಲ್ಲವೇ ಬಿಡುತ್ತದೆಯೋ ಗೊತ್ತಿಲ್ಲ. ಆದರೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಂದಾಗಿ ಸದ್ದಿಲ್ಲದೇ ಉಧ್ಘಾಟನೆಯಾಗ ಬೇಕಿದ್ದ ಮೇಲ್ಸೇತುವೆಗೆ ಭಾರೀ ಪ್ರಮಾಣದಲ್ಲಿ ಪ್ರಚಾರ ನೀಡಿ ಮುಂದೆ ಆ ಮೇಲ್ಸೇತುವೆಗೆ ಯಾವುದೇ ಹೆಸರಿಟ್ಟರೂ ಜನಮಾನಸದಲ್ಲಿ ಅದು ವೀರ ಸಾವರ್ಕರ್ ಸೇತುವೆ ಎಂಬುದಾಗಿಯೇ ಶಾಶ್ವತವಾಗಿ ಅಚ್ಚೊತ್ತುವಂತೆ ಮಾಡಿದ್ದಾರೆ. ಸಾವರ್ಕರ್ ಅವರ ಜಯಂತಿಯಂದು ಅವರ ಅಭಿಮಾನಿಗಳು ಅದಾಗಲೇ ತಮ್ಮ ಹೃದಯಾಂತರಾಳದಿಂದ ವೀರಸಾವರ್ಕರ್ ಮೇಲ್ಸೇತುವೆ ಎಂದು ಬರೆದು ಸಾಂಕೇತಿಕವಾಗಿ ಸೇತುವೆಯನ್ನು ಉದ್ಥಾಟನೆ ಮಾಡಿಯೂ ಆಗಿದೆ. ತಮ್ಮ ವಿರೋಧದ ಮೂಲಕ ಈ ರೀತಿಯಾದ ಆಭೂತಪೂರ್ವ ಪ್ರಚಾರವನ್ನು ಒದಗಿಸಿದ ಆ ಎಲ್ಲಾ ಸಾವರ್ಕರ್ ವಿರೋಧಿಗಳಿಗೂ ಒಂದು ಅಭಿನಂದನೆ ಸಲ್ಲಿಸಿಯೇ ಬಿಡೋಣ.

ವಿರೋಧಿಗಳು ಯಾರ ಕೆಲಸವನ್ನೇ ಆಗಲೀ, ಪದೇ‌ ಪದೇ ಹಳಿಯತ್ತಿದ್ದಾರೆ ಎಂದರೆ
ಆವರು ಮಾಡುತ್ತಿರುವ ಕೆಲಸ ಕಾರ್ಯಗಳ ಮೂಲಕ ವಿರೋಧಿಗಳಿಗಿಂತ ‌ಮುಂದಿದ್ದಾರೆ ಎಂದರ್ಥ.
ಹಾಗಾಗಿ ಈ ಸರ್ಕಾರ ಯಾರಿಗೂ ಜಗ್ಗದೇ, ಕುಗ್ಗದೇ ಆತ್ಮಸ್ಥೈರ್ಯದೊಂದಿಗೆ ಕೈ ಹಿಡಿದ ಕಾರ್ಯವನ್ನು
ಶ್ರದ್ಧೆಯಿಂದ ‌ಮಾಡಿದರೆ ಖಂಡಿತವಾಗಿಯೂ ಅಂತಿಮ ಜಯ ಅವರದ್ದೇ ಆಗಿರುತ್ತದೆ.
ಪುರಂದರ ದಾಸರೇ ಹೇಳಿಲ್ಲವೇ, ನಿಂದಕರಿರಬೇಕು ಕೇರಿಯಲ್ಲಿ ಹಂ.. ಇದ್ದಹಾಗೆ ಎಂದು

ಏನಂತೀರೀ?

ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣೆ

ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಬಂದು ಅವರನ್ನು ಬಂಧಿಸಿದರು.

windows

ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳ ಅಡಿಯಲ್ಲಿ ಅವರನ್ನು ಬಂಧಿಸಿದರು. ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ ಇವರನ್ನು ಭಾರತ ಸರಕಾರಕ್ಕೆ ಒಪ್ಪಿಸಬೇಕಾಗಿ ತೀರ್ಪು ಹೊರಹಾಕಿತು. ಜುಲೈ ಮೊದಲ ದಿನ ಆ ವ್ಯಕ್ತಿಯನ್ನು ಹೊತ್ತ ಠಮೊರಿಯಾ ಹಡಗು ಭಾರತದ ಕಡೆ ಚಲಿಸಿತು. ಇವರ ಸಾಮಥ್ಯವನ್ನು ಅರಿತಿದ್ದ ಬ್ರಿಟಿಷರು, ಕೈ ಕಾಲುಗಳನ್ನು ಕಟ್ಟಿ ಆಚೀಚೆ ಅಲುಗಾಡಲೂ ಸಾಧ್ಯವಿಲ್ಲದಂತಹ ಸಣ್ಣ ಕೋಣೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಹಡಗಿನ ಯಂತ್ರದಲ್ಲಿ ಏನೋ ಅಡಚಣೆಯ ಕಾರಣ ಮಾರ್ಸೆಲ್ ನಲ್ಲಿ ನಿಲ್ಲಿಸಲಾಯಿತು. ಭಾರತವನ್ನು ಸೇರಿದ ಮೇಲೆ ತನ್ನ ಗತಿ ಏನಾಗಬಹುದೆಂದು ಮೊದಲೇ ಅರಿತಿದ್ದ ಆ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬರುವೆನೆಂದು ಕೇಳಿ ಕೈಕೊಳಗಳನ್ನು ಬಿಚ್ಚಿಸಿಕೊಂಡು ಹಡಗಿನ ಶೌಚಾಲಯವನ್ನು ಪ್ರವೇಶಿಸಿ, ಅಲ್ಲಿದ್ದ ಸಣ್ಣ ಕಿಟಕಿಯನ್ನು ಒಡೆದು ತಮ್ಮ ದೇಹವನ್ನು ಅದರಲ್ಲಿ ತೂರಿಸಿ ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ ಎಂದು ಹೇಳುತ್ತಾ ಸಮುದ್ರಕ್ಕೆ ಜಿಗಿದೇ ಬಿಟ್ಟರು. ಶೌಚಾಲಯದಿಂದ ಎಷ್ಟು ಹೊತ್ತಾದರೂ ಹೊರಕ್ಕೆ ಬಾರದಿದ್ದನ್ನು ಗಮನಿಸಿದ ಸೈನಿಕರು ಅನುಮಾನದಿಂದ ಬಾಗಿಲನ್ನು ಒಡೆದು ನೋಡಿದರೆ ಸಣ್ಣ ಕಿಟಕಿಯ ರಂಧ್ರದಲ್ಲಿ ಆರೋಪಿ ನುಸಳುತ್ತಿದ್ದಾನೆ. ಅವರನ್ನು ಹಿಡಿಯುವಷ್ಟರಲ್ಲಿಯೇ ಆತ ಸಮುದ್ರಕ್ಕೆ ಹಾರಿಯಾಗಿತ್ತು. ಮೈ ಕೈಯೆಲ್ಲಾ ತರಚಿದ ಗಾಯಗಳಾಗಿ ರಕ್ತ ಸೋರುತ್ತಲಿತ್ತು. ರಕ್ತ ಸಿಕ್ತ ದೇಹಕ್ಕೆ ಸಮುದ್ರ ಉಪ್ಪು ನೀರು ತಾಗಿದ ಕೂಡಲೇ ಯಮಯಾತನೆ, ಆದರೆ ಅವರನ್ನು ಹಿಡಿಯಲು ಹಿಂದೆ ಸೈನಿಕರು ಬರುತ್ತಿದ್ದ ಕಾರಣ, ದೇಹದ ಮೇಲಿನ ಗಾಯ ಮತ್ತು ನೋವನ್ನು ಲೆಕ್ಕಿಸದೆ ಒಂದೇ ಸಮನೇ ಈಜುತ್ತಾ ದಡ ಸೇರಿದರಾದರೂ, ವಿಧಿ ಅವರ ಪಾಲಿಗೆ ಕ್ರೂರವಾಗಿತ್ತು. ಸ್ಥಳೀಯ ಪೋಲೀಸರ ಅಲಕ್ಷದಿಂದಾಗಿ ಅವರನ್ನು ಪುನಃ ಹಡಗಿನಿಂದ ಹಿಡಿಯಲು ಬಂದಿದ್ದವರಿಗೇ ಒಪ್ಪಿಸಲಾಗಿ, ಅವರ ಕೈ ಕಾಲುಗಳಿಗೆ ಬೇಡಿ ಹಾಕಿ ಮತ್ತೆ ಹಡಗಿಗೆ ಎಳೆದೊಯ್ದರು. ಈ ರೀತಿ ದೇಶದ ಸ್ವಾತಂತ್ಯ್ರಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದವರೇ ವೀರ ಸಾವರ್ಕರ್.

ಜುಲೈ 22 ರಂದು ಮುಂಬೈಗೆ ಕರೆತಂದು ನಾಸಿಕದ ಜೈಲಿಗೆ ಸೇರಿಸಿದರು. ಕೆಲ ದಿನಗಳ ನಂತರ ಯರವಡಾ ಜೈಲಿಗೆ ವರ್ಗಾವಣೆ ಮಾಡಿ ಸೆಪ್ಟೆಂಬರ್ 15 ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಸಮುದ್ರದ ಮಧ್ಯದಲ್ಲಿಯೇ ತಪ್ಪಿಸಿ ಕೊಂಡ ಈ ವ್ಯಕ್ತಿ ನೆಲದ ಸುಮ್ಮನಿರುವವನೇ ಎಂದು ವಿಶೇಷ ಪೊಲೀಸ್ ಪಹರೆ ಒದಗಿಸಲಾಗಿತ್ತು. 24.12.1910 ಶನಿವಾರ ತೀರ್ಪು ಹೊರಬಿತ್ತು: 25 ವರ್ಷಗಳ ಕಾಲಾಪಾನಿ ( ಕರಿನೀರಿನ) ಶಿಕ್ಷೆ ಹಾಗೂ ಆಸ್ತಿ ಪಾಸ್ತಿಗಳ ಜಪ್ತಿ. ಮತ್ತೆ 30.01.1911 ರಂದು ಜಾಕ್ಸನ್ ಕೊಲೆಗೆ ನೆರವಾದ ಆರೋಪಕ್ಕಾಗಿ ಮತ್ತೊಂದು ಆ ಜನ್ಮ ಕಾರಾವಾಸದ ತೀರ್ಪು ಹೊರಬಂದಿತು. ಒಟ್ಟಿನಲ್ಲಿ 50 ವರ್ಷಗಳ ಕಾಲ ಕರಿನೀರಿನ ಶಿಕ್ಷೆಗೆ ವೀರ ಸಾವರ್ಕರ್ ಅವರನ್ನು ಗುರಿ ಪಡಿಸಲಾಯಿತು.

ಆರಂಭದಲ್ಲಿ ಡೋಂಗ್ರಿ ಜೈಲು ಸೇರಿದ ಸಾವರ್ಕರ್ ಚೂರು ಚೂರು ಮಾಡಿದ, ಎಳೆಯಾಗಿ ಬಿಡಿಸಿದ ಹೊಸೆಯುವ ಕಠಿಣ ಕೆಲಸವನ್ನು ಪ್ರತಿ ನಿತ್ಯ ಮಾಡಬೇಕಾಯಿತು. ಬೆಳಗ್ಗೆ ಎದ್ದರೆ ಅದೇ ಹಗ್ಗದ ಚೂರುಗಳನ್ನು ಹೊಸೆಯುವ ಕೆಲಸ. ಅಂಗೈ ತುಂಬಾ ಬೊಬ್ಬೆಗಳು. ಬೆರಳುಗಳ ಸುತ್ತ ರಕ್ತ. ಮತ್ತೆ ಒಂದು ತಿಂಗಳ ನಂತರ ಭಾಯಖಳಾ ಜೈಲಿಗೆ ವರ್ಗಾಯಿಸಲಾಯಿತು. ಅದಾದ ನಂತರ ಅಂತಿಮವಾಗಿ 1911 ಜೂನ್ 27 ರಂದು ಮಹಾರಾಜ ಹಡಗಿನ ಮೂಲಕ ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲು ಪಾಲಾದರು.

ಆಗಿನ ಕಾಲದಲ್ಲಿ ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಕಾಲಾಪಾನೀ ಶಿಕ್ಷೆ ವಿಧಿಸುತ್ತಿತ್ತು. ಅಷ್ಟೇ ಅಲ್ಲದೇ, ಅಪರಾಧಿಗಳನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತಿದ್ದರು. ಹುಳುಗಳಿಂದ ಕೂಡಿದ ಆಹಾರ, ಕುಡಿಯಲು ಕೊಳಕು ನೀರು ಅದರಲ್ಲೂ ದಿನಕ್ಕೆ ಎರಡು ಲೋಟ ಮಾತ್ರ ನೀಡಲಾಗುತ್ತಿತ್ತಲ್ಲದೇ, ಅವರು ಕೊಟ್ಟ ಆಹಾರಗಳನ್ನು ತಿನ್ನಲೇಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಕಠಿಣ ಶಿಕ್ಷೆ!!! ಅಲ್ಲಿ ಕ್ರಾಂತಿಕಾರಿಗಳನ್ನು ಎಣ್ಣೆಯ ಗಾಣಕ್ಕೆ ಹೂಡಲಾಗುತ್ತಿತ್ತು. ಅದು ಬಲಿಷ್ಠ ವ್ಯಕ್ತಿಯ ಜೀವವನ್ನೇ ಒಂದು ದಿನಕ್ಕೆ ಒಬ್ಬರು ಮೂವತ್ತು ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕಾಗಿತ್ತು. ತಪ್ಪಿದರೆ ಶಿಕ್ಷೆ, ದಣಿವಾಗಿ ನಿಂತರೆ ಚಾವಟಿಯ ಹೊಡೆತ, ಕೈಗಳಲ್ಲಿ ರಕ್ತ, ಎದೆಯಲ್ಲಿ ಉರಿ, ತಲೆ ಸುತ್ತು… ಹೀಗೆ ನರಕಯಾತನೆ. ಆಯಾಸಗೊಂಡು ನಿಲ್ಲಿಸಿದರೆ ಛಾಟಿ ಏಟು. ಕೈಕಾಲು ಮಡಚದ ಹಾಗೆ ಕಬ್ಬಿಣದ ಸರಳುಗಳನ್ನು ಹಾಕಿ ವಾರಗಟ್ಟಲೆ ನಿಲ್ಲಿಸುತ್ತಿದ್ದರು. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ! ಮಲ-ಮೂತ್ರ ವಿಸರ್ಜನೆಗೂ ಜೈಲರನ ಅನುಮತಿ ಕೇಳಬೇಕಾಗುತ್ತಿತ್ತು. ಅಲ್ಲಿಯ ವ್ಯವಸ್ಥೆಯನ್ನು ವಿರೋಧೀಸುವ ಖೈದಿಗಳಿಗಂತೂ ಊಹಿಸಲು ಸಾಧ್ಯವಾಗದ ಶಿಕ್ಷೆಗಳು. ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 5 ರವರೆಗೆ ಗೋಡೆ ಕಡೆ ಮುಖ ಮಾಡಿ ಬೇಡಿ ಹಾಕಲಾಗುತ್ತಿತ್ತು. ವರ್ಷಕ್ಕೆ ಒಂದು ಸಲ ಕಾಗದ ಬರೆಯುವ ಅವಕಾಶ. ಅರೆ ಅನ್ನ, ಗಬ್ಬು ನೀರು, ಮಣ್ಣು ಕಲ್ಲು ಬೆವರು ಬೆರೆಸಿದ ಊಟ, ಇದು ಅಲ್ಲಿನ ಆಹಾರ ವ್ಯವಸ್ಥೆ. ಬೆಳಗ್ಗೆ ಎದ್ದರೆ ಅದೇ ಜೈಲು ಖಾನೆ, ಮರದ ಹಲಗೆ, ಕೊರೆಯುವ ಚಳಿ, ಹರಕು ಕಂಬಳಿ! ಅದೇ ತೆಂಗಿನ ನಾರು ಬಿಡಿಸುವ ಕೆಲಸ, ಅದೇ ಎಣ್ಣೆಯ ಗಾಣ, ನೀರು ಇಟ್ಟಿಗೆ ಹೊರುವುದು ಸಾವಕರ್ರರ ಪ್ರತಿನಿತ್ಯದ ಕರ್ತವ್ಯ. ಅದೇ ಜೈಲಿನಲ್ಲಿ ಮತ್ತೊಂದು ದೇಶದ್ರೋಹದ ಆರೋಪದ ಮೇಲೆ ಅವರ ಸ್ವಂತ ತಮ್ಮನನ್ನು ಕೂಡಿಹಾಕಿದ್ದರೂ ಅವರಿಬ್ಬರೂ ಒಮ್ಮೆಯೂ ಭೇಟಿ ಮಾಡಿಯೇ ಇರಲಿಲ್ಲ. ಆದರೆ ಬ್ಯಾರಿ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳು ಮಾತ್ರ ಅಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಅಲ್ಲಿನ ಅಧಿಕಾರಿಗಳು ತಮ್ಮ ಮೋಜು ಮಸ್ತಿಗಾಗಿ ಟೆನ್ನಿಸ್ ಕೋರ್ಟ್, ಬೇಕರಿ, ಈಜುಕೊಳ ಮತ್ತು ಕ್ಲಬ್ ಹೌಸ್ ಗಳನ್ನು ಹೊಂದಿದ್ದರು.

ಸಾವರ್ಕರರು ತಮಗೆ ವಿಧಿಸಿದ್ದ 50 ವರುಷಗಳ ಶಿಕ್ಷೆಯ ಸಂಪೂರ್ಣ ಗೊಳಿಸಿದ್ದರೆ, 1960 ರ ಡಿಸೆಂಬರ್ 24 ರಂದು ಬಿಡುಗಡೆ ಆಗಬೇಕಿತ್ತು. ಖೈದಿಗಳಿಗೆ ಸೆರೆಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆಯಿಂದಾಗಿ ಕೆಡುತ್ತಿದ್ದ ಆರೋಗ್ಯ ಈ ಹಿನ್ನೆಲೆಯಲ್ಲಿ ಸಾವರ್ಕರ್ ಅವರು ಕ್ಷಮಾ ಅರ್ಜಿಯನ್ನು ಸಲ್ಲಿಸುತ್ತಾರಾದರೂ, ಇಲ್ಲಿ ಸುಮ್ಮನೇ ಖೈದಿಯಂತೆ ಇರುವ ಬದಲು, ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗುವ ದೂರದೃಷ್ಟಿಯ ಮನಸ್ಸಿನಿಂದಲೂ ಅವರು ಕ್ಷಮಾಪಣಾ ಪತ್ರವನ್ನು ಬರೆದಿರುತ್ತಾರೆ. ಇತ್ತ 1920ರಲ್ಲಿ ವಿಠ್ಠಲಭಾಯಿ ಪಟೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಅವರ ಬಿಡುಗಡೆಗಾಗಿ ಒತ್ತಾಯ ಮಾಡುತ್ತಿರುತ್ತಾರೆ. ಇದೆಲ್ಲದರ ಪರಿಣಾಮವಾಗಿ, ಸಾವರ್ಕರ್ ಅವರನ್ನು ಅಂಡಮಾನ್ ನ ಸೆರೆ ವಾಸದದಿಂದ 1921 ರಲ್ಲಿ ಆಲಿಪುರ ಜೈಲಿಗೆ ವರ್ಗಾಯಿಸಲಾಯಿತು, ಆದಾದ ನಂತರ ಕೆಲ ಕಾಲ ರತ್ನಗಿರಿಯಲ್ಲಿ ಗೃಹ ಬಂಧನದಲ್ಲಿ ಇರಿಸಿ, ತದನಂತರ 1923 ರಲ್ಲಿ ಯರವಡಾ ಜೈಲಿಗೆ ಸ್ಥಳಾಂತರಿ ಸಲಾಯಿತು. ಜನವರಿ 6, 1924 ಭಾನುವಾರ, ಇನ್ನು 5 ವರುಷಗಳ ಕಾಲ ರಾಜಕಾರಣದಲ್ಲಿ ಭಾಗವಹಿಸಬಾರದು, ರತ್ನಗಿರಿ ಯಲ್ಲಿಯೇ ಸ್ಥಾನ ಬದ್ಧತೆಯಲ್ಲಿ ಇರಬೇಕು ಎಂದು ಬ್ರಿಟಿಷ್ ಸರಕಾರದ ಆಜ್ಞೆಯಾಯಿತು. ಹೀಗೆ, ಸಾವಾರ್ಕರ್ ಅವರು ತಮ್ಮ ಯೌವ್ವನದ 27 ವರ್ಷಗಳನ್ನು ಬ್ರಿಟಿಷರ ಸೆರೆಯಾಳಾಗಿಯೇ ಕಳೆದರು.

ಆದಾದ ನಂತರ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದ ಸಮಯದಲ್ಲಿಯೇ, ಹಿಂದೂ ಮಹಾ ಸಭಾದ ಸದಸ್ಯರಾಗಿದ್ದ ನಾಥೂರಾಂ ಘೋಡ್ಸೆ ಗಾಂಧಿಯವರನ್ನು ಗುಂಡಿಕ್ಕಿ ಕೊಂದಾಗ ಹತ್ಯೆಯ ಹಿಂದಿನ ರೂವಾರಿ ಎಂಬ ಆರೋಪವನ್ನು ಸಾವರ್ಕರ್ ಅವರ ಮೇಲೆ ಹೊರಿಸಿ ಅವರನ್ನು 1948 ರ ಮೇ 24 ರಂದು ಮತ್ತೆ ಬಂಧಿಸಿ, ವಿಚಾರಣೆ ಆರಂಭಿಸುತ್ತಾರೆ. ಅಣ್ಣಾ ರಾವ್ ಬೋಪಟ್ಕರ್ ಸಾವರ್ಕರರ ಪರ ಪ್ರಖರವಾಗಿ ವಾದಿಸಿದ ಪರಿಣಾಮವಾಗಿ 1946 ಫೆಬ್ರವರಿ 10 ರಂದು ಸಾವರ್ಕರ್ ಅವರು ನಿರ್ದೋಷಿ ಎಂದು ಸಾಭೀತಾಗಿ ಸತ್ಯಕ್ಕೆ ಸದಾ ಜಯ ಎಂಬುದನ್ನು ಎತ್ತಿ ತೋರಿಸಿತ್ತು.

1883, ಮೇ 28 ರಂದು ಜನಿಸಿದ ಸಾವರ್ಕರ್ ಅವರ ಹೆಸರೇ ಭಾರತ ದೇಶದಲ್ಲಿ ನ್ಯಾಯಯುತವಾದ ಉಗ್ರ ಹೋರಟಕ್ಕೆ ಪರ್ಯಾಯ ಎಂದರೂ ಅತಿಶಯೋಕ್ತಿಯೇನಲ್ಲ. ಅವರ ನಡೆ ನುಡಿಗಳು ಕ್ರಾಂತಿಕಾರಿಗಳಿಗೆ ಸದಾ ಸ್ಪೂರ್ತಿ, ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ಮೈ ರೋಮಾಂಚನವಾಗುವುದಂತೂ ದಿಟ. ಜಗತ್ತಿನಲ್ಲಿ ಅವರು ಅನುಭವಿಸಿದಷ್ಟು ನೋವುಗಳನ್ನು, ದೀರ್ಘಕಾಲದ ಕಠಿಣ ಕರಿನೀರಿನ ಕಾರ್ಯಾಗೃಹದ ವಾಸ ಅನುಭವಿಸಿದವರು ಜಗತ್ತಿನಲ್ಲೇ ವಿರಳ. ಮೃತ್ಯುಂಜಯ ಎಂಬ ಅಭಿದಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇಲ್ಲ. ಇಪ್ಪತ್ತನೆಯ ಶತಮಾನದ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಅಂದು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಭದ್ರ ಅಡಿಪಾಯವನ್ನು ಹಾಕಿದವರು ವಿನಾಯಕ ದಾಮೋದರ ಸಾವರರ್ಕರ್.

ಇಂತಹ ಪರಮ ದೇಶ ಭಕ್ತನನ್ನು ಸ್ವಾತಂತ್ರ್ಯಾನಂತರ ಬಂದ ಸರ್ಕಾರ ಸರಿಯಾಗಿ ನಡೆಸಿಕೊಳ್ಳದೇ ಹೋದದ್ದು ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯೇ ಸರಿ. ದೇಶದ ಮೊದಲ ಗಣರಾಜ್ಯೋತ್ಸವಕ್ಕೆ ಸಾವರ್ಕರರಿಗೆ ಆಮಂತ್ರಣ ನೀಡಿರಲಿಲ್ಲ. 1950 ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಗೆ ಭಂಗವಾಗುತ್ತದೆಂಬ ನೆಪವೊಡ್ಡಿ ಅಂದಿನ ನೆಹರೂ ಸರಕಾರ ಅರವತ್ತೇಳು ವರ್ಷದ ವೃದ್ಧ ಸಾವರ್‌ಕರರನ್ನು ಮತ್ತೊಮ್ಮೆ ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿತು. ಇದನ್ನು ಪ್ರತಿಭಟಿಸಿ ದೇಶಾದ್ಯಂತ ಯುವಕರು ಮೃತ್ಯುಂಜಯ ದಿವಸ್ ಆಚರಿಸಿದಾಗ ಸಾವರ್ಕರರನ್ನು ಬಂಧಿಸಿಟ್ಟ ಜೈಲನ್ನು ನೆಲಸಮ ಮಾಡಬೇಕೆಂಬ ಪ್ರಸ್ತಾಪ ಬಂದಿತ್ತು. ಆದರೆ ಸಂಸದ ಕೆ.ಆರ್. ಗಣೇಶ್ ಅವರ ಪ್ರತಿಭಟನೆಯಿಂದ ಅದು ನಿಂತಿತು.

IMG_20180514_170231

ಜಾತಸ್ಯ ಮರಣಂ ಧೃವಂ ಅಂದರೆ ಹುಟ್ಟಿದವರೆಲ್ಲರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎಂಬ ನಿಯಮದಂತೆ 1966 ಫೆಬ್ರುವರಿ 26 ರಂದು ಸಾವರ್ಕರು ವಿಧಿವಶರಾದರು ಸಾವಿನ ಮನೆಯಲ್ಲಿ ಶತೃತ್ವ ತೋರಬಾರದು ಎಂಬ ನಿಯಮವಿದ್ದರೂ, ಅವರು ನಿಧನರಾದಾಗ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೂಡ ಸಿಗದೇ ಹೋದಾಗ, ಅವರ ಅಪ್ಪಟ ಅಭಿಮಾನಿ, ನಟ ವಿ. ಶಾಂತಾರಾಮ್ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು. ಮಹಾರಾಷ್ಟ್ರದ ಅಂದಿನ ಸರ್ಕಾರದ ಯಾವೊಬ್ಬ ಸಚಿವರೂ ಕೂಡ ಸಾವರ್ಕರ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿಲ್ಲ. ಲೋಕಸಭೆಯಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ, ಸಾವರ್ಕರ್ ಅವರು ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ ಕುಂಟು ನೆಪವೊಡ್ಡಿ ಅಂದಿನ ಸಭಾಧ್ಯಕ್ಷರು ತಿರಸ್ಕರಿಸಿದ್ದು ನಿಜಕ್ಕೂ ಒಬ್ಬ ದೇಶಭಕ್ತನಿಗೆ ತೋರಿದ ಅಗೌರವವೇ ಸರಿ. ಒಂದೇ ಕುಟುಂಬದ ಸದಸ್ಯರು ಅದೂ ಅವರು ಬದುಕಿದ್ದಾಗಲೇ ಆತ್ಮಪ್ರಶಂಸೆಯಂತೆ ಭಾರತ ರತ್ನ ಪ್ರಶಸ್ತಿಯನ್ನು ಅವರಿಗೆ ಅವರೇ ಪಡೆದುಕೊಂಡು ಸಂಭ್ರಮಿಸಿದರೇ ವಿನಃ ವೀರಸಾವರ್ಕರ್ ಮತ್ತು ಅಂಬೇಡ್ಕರ್ ಅಂತಹ ಧೀಮಂತ ರಾಷ್ಟ್ರಭಕ್ತರಿಗೆ ಕೊಡುವ ಮನಸ್ಸು ಮಾಡದಿರುವುದು ನಿಜಕ್ಕೂ ದುಃಖಕರ ವಿಷಯವೇ ಸರಿ. ಒಂದಂತೂ ಸತ್ಯ. ಯಾರು ಏನೇ ಹೇಳಿದರೂ ಅವರ ಬದುಕು ಮತ್ತು ಹೋರಾಟ ಎಂಥಹವರಿಗೂ ರೋಮಾಂಚನವನ್ನುಂಟು ಮಾಡಿ ಅವರನ್ನು ದೇಶ ಕಾರ್ಯಕ್ಕೆ ಪ್ರೇರೇಪಿಸುತ್ತದೆ. ಅಂತಹ ಪುಣ್ಯಾತ್ಮರ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲವನ್ನೇ ದೇಶದ ಸ್ವಾತಂತ್ರ್ಯರೂಪದಲ್ಲಿ ನಾವಿಂದು ಅನುಭವಿಸುತ್ತಿರುವುದು ಎಂಬುದನ್ನು ಸಕಲ ಭಾರತೀಯರ ಮನಸ್ಸಿನಲ್ಲಿ ಸದಾಕಾಲವೂ ಹಸುರಾಗಿಯೇ ಇದೆ‌ ಮತ್ತು ಇರಲೇ ಬೇಕು. ಅದನ್ನು ಯಾರೂ ಮರೆತಿಲ್ಲ ಮತ್ತು ಮರೆಯಲೂ ಬಾರದು. ಅವರು ಸದಾಕಾಲವೂ ನಮಗೆ ಪ್ರಾಥಸ್ಮರಣೀಯರೇ ಹೌದು.

ಏನಂತೀರೀ?

ನಿಮ್ಮವನೇ ಉಮಾಸುತ.

ಮದನ್ ಲಾಲ್ ಡಿಂಗ್ರಾ

ಆಗ 1900 ಆರಂಭದ ದಿನಗಳು. ಇಂಗ್ಲೇಂಡಿನ ನೈಟ್ ಕ್ಲಬ್ಬಿನಲ್ಲಿ ಚೆನ್ನಾಗಿ ಉಡುಪು ಧರಿಸಿಕೊಂಡು ಅಲ್ಲಿಯ ರಂಗು ರಂಗಿನ ಬೆಳೆಕಿನಲ್ಲಿ ರಾಂಗಾದ ಹುಡುಗಿಯರೊಂದಿಗೆ ಶೋಕಿ ಮಾಡುತ್ತಿದ್ದ ಭಾರತೀಯ ತರುಣನೊಬ್ಬ ಶ್ಯಾಮ್ಜಿ ವರ್ಮ ಮತ್ತು ವೀರಸಾವರ್ಕರ್ ಅವರ ಪ್ರಖರ ಮಾತುಗಳಿಂದ ಪ್ರೇರಿತನಾಗಿ ಇದ್ದಕ್ಕಿದ್ದಂತೆಯೇ ತನ್ನ ಶೋಕಿಗಳನ್ನೆಲ್ಲಾ ಬದಿಗೊತ್ತಿ ತನ್ನ ತಾಯ್ನಾಡು ಭಾರತವನ್ನು ದಾಸ್ಯದಲ್ಲಿ ಇಟ್ಟುಕೊಂಡಿದ್ದ ಬ್ರಿಟೀಷರಿಗೆ ಅವರ ನೆಲದಲ್ಲಿಯೇ ಬುದ್ದಿ ಕಲೆಸಬೇಕೆಂದು ಫಣ ತೊಟ್ಟು ಇಂಗ್ಲೆಂಡಿನಲ್ಲಿಯೇ ಮರಣ ದಂಡನೆಗೆ ಒಳಗಾಗಿ ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ದ ಮೊದಲ ವ್ಯಕ್ತಿ, 137 ವರ್ಷಗಳ ಹಿಂದೆ ಇದೇ ದಿನ ಸೆಪ್ಟಂಬರ್ 18, 1883ರಂದು ಜನಿಸಿದ ವೀರ ಮದನ್ ಲಾಲ್ ಡಿಂಗ್ರಾ ಅವರ ಕುರಿತು ಸ್ವಲ್ಪ ಮಾಹಿತಿ ತಿಳಿಯೋಣ.

ಅಮೃತಸರದ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದಿತ್ತಮಲ್ ಅವರ ಕುಟುಂಬ ಅಂದಿನ ಕಾಲಕ್ಕೇ ಅತ್ಯಂತ ಶ್ರೀಮಂತ ಮನೆತನ ಎಂದೇ ಹೆಸರುವಾಸಿಯಾಗಿತ್ತು. ಅಮೃತಸರದಲ್ಲಿ ಅವರದ್ದೇ ಆದ 21 ದೊಡ್ಡ ಮನೆಗಳು, 6 ಶ್ರೀಮಂತ ಬಂಗಲೆಗಳಲ್ಲದೇ, ಅವರ ಹಿರೀಕರ ಆಸ್ತಿಯಾಗಿ ಈಗಿನ ಪಾಕಿಸ್ತಾನದ ಸಹಿವಾಲ್ ಎಂಬ ಗ್ರಾಮದಲ್ಲಿಯೂ ಅಪಾರವಾದ ಜಮೀನುಗಳು ಮತ್ತು ಆಸ್ತಿ ಪಾಸ್ತಿಗಳಿದ್ದು ಅಂದಿನ ಕಾಲಕ್ಕೇ ರಾಜ ರಾಜರುಗಳ ಮತ್ತು ಬ್ರಿಟಿಷರ ಬಳಿಯೂ ಇಲ್ಲದಿದ್ದಂತಹ ಐಶಾರಾಮಿ ಕಾರುಗಳು ಮತ್ತು ಬಂಗಲೆಗಳು ಇವರ ಬಳಿ ಇತ್ತು. ಹಾಗಾಗಿಯೇ ಬ್ರಿಟಿಷ್ ಸರ್ಕಾರ ಅವರನ್ನು ರಾಜ್ ಸಾಹೇಬ ಎಂದೇ ಗೌರವಿಸುತ್ತಿತ್ತು. ಅಂತಹ ಶ್ರೀಮಂತ ಕುಂಟುಬದಲ್ಲಿ ಸೆಪ್ಟಂಬರ್ 18, 1883ರಂದು ಮದನ್ ಲಾಲಾ ಡಿಂಗ್ರಾ ಅವರು ಜನಿಸಿದ್ದರು. ಅವರ ಮನೆಯಲ್ಲಿ ಕೇವಲ ಲಕ್ಷ್ಮಿಯಲ್ಲದೇ ಸರಸ್ವತಿಯೂ ಒಲಿದಿದ್ದು ಅವರ ಒಡ ಹುಟ್ಟಿದ ಆರು ಅಣ್ಣಂದಿರಲ್ಲಿ ಮೂವರು ತಂದೆಯಂತೆಯೇ ವೈದ್ಯರಾದರೇ, ಉಳಿದ ಮೂವರು ಬ್ಯಾರಿಸ್ಟರ್ ಪದವಿ ಪಡೆದಿದ್ದರು. ತಮ್ಮ ಅಣ್ಣಂದಿರಂತೆಯೇ ಓದಿನಲ್ಲಿ ಚುರುಕಾಗಿದ್ದ ಮದನ್ ಲಾಲ್ ಅವರಿಗೂ ಓದಿನ ಜೊತೆಗೆ ಸ್ವಾತಂತ್ಯ್ರ ಚಳುವಳಿಯಲ್ಲಿಯೇ ಸ್ವಲ್ಪ ಹೆಚ್ಚಿನ ಆಸಕ್ತಿ ಇದ್ದ ಕಾರಣ ಲಜಪತ್ ರಾಯ್ ಮತ್ತು ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ ಅವರುಗಳು ಸಂಘಟಿಸಿದ್ದ ಪಗ್ಡಿ ಸಂಬಾಲ್ ಜತ್ತ ಎಂಬ ಚಳವಳಿಯಲ್ಲಿ ಪಾಲ್ಗೊಂಡಿದ್ದರು ಸ್ವದೇಶಿ ಚಳುವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜಿನ ದಿನಗಳಲ್ಲಿ ಬ್ರಿಟಿಷ್ ಸರ್ಕಾರ ವಿದೇಶಿ ಬಟ್ಟೆಯಲ್ಲಿ ತಯಾರಿಸಿದ ಕೋಟು ಧರಿಸಬೇಕೆಂದು ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟರು. ನಂತರ ಕೆಲಕಾಲ ಕುದುರೆಗಾಡಿ ವ್ಯವಸ್ಥೆಯ ಟಾಂಗಾ ಸರ್ವಿಸ್ ಎಂಬ ಸಂಸ್ಥೆಯಲ್ಲಿ ಗುಮಾಸ್ತನಾಗಿ ದುಡಿಯುತ್ತಾ, ಅಲ್ಲಿಯೂ ತಮ್ಮ ಸಹ ಕಾರ್ಮಿಕರ ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ಹೋಗಿ ಕೆಲಸ ಕಳೆದುಕೊಂಡು ಕೆಲಕಾಲ ಮುಂಬೈನಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಸಮಯದಲ್ಲಿ ಪರಿಚಯವಾದ ಹಿರಿಯ ಸಾಧಕರಾದ ಡಾಕ್ಟರ್ ಬಿಹಾರಿ ಲಾಲ್ ಅವರ ಸಲಹೆಯಂತೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಲು ಲಂಡನ್ನಿಗೆ ಹೊರಟರು.

ಹಾಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಬಂದ ಧಿಂಗ್ರ ಮದನ್ ಲಾಲ್ ಧಿಂಗ್ರಾ ಮತ್ತೆ ತನ್ನ ಮೂಲ ಶೋಕಿಲಾಲತನಕ್ಕೆ ಹಿಂದಿರುಗಿ ಇಂಗ್ಲೆಂಡ್ ನ ವಿಲಾಸೀ ಸಂಸ್ಕೃತಿಗೆ ತಕ್ಕಂತೆ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಕಣ್ಣಿಗೆ ಕಪ್ಪನೆಯ ಕನ್ನಡಕವನ್ನು ಹಾಕಿಕೊಂಡ ಶೋಕಿಲಾಲನಾಗಿ ಇಂಗ್ಲೆಂಡಿನ ಗಲ್ಲಿ ಗಲ್ಲಿಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತಾ ಪಬ್ ಮತ್ತು ಬಾರುಗಳಲ್ಲಿಯೇ ಮೋಜು ಮಾಡುತ್ತಿದ್ದರೂ, ಪರೀಕ್ಷೆಯ ಸಮಯಕ್ಕೆ ಸರಿಯಾಗಿ ಪಟ್ಟಾಗಿ ಕುಳಿತು ಓದಿ ಮೊದಲ ಸ್ಥಾನವನ್ನೇ ಗಳಿಸುತ್ತಿದ್ದ ಕಾರಣ ಮನೆಯಲ್ಲಿ ಯಾರಿಗೂ ಬೇಸರವಿರಲಿಲ್ಲ. ಇದೇ ಸಮಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರು ಇಂಗ್ಲೆಂಡಿನಲ್ಲಿ ಈ ರೀತಿಯ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ಹುಡುಗರು ಕಾಲೇಜಿನ ಮುಂಭಾಗದಲ್ಲಿ ನಿಂತು ಅವರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾಗ ಅದೊಮ್ಮೆ ಮದನ್ ಲಾಲ್ ಡಿಂಗ್ರಾ ಸಾವರ್ಕರ್ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಖುದ್ದಾಗಿ ಭೇಟಿಮಾಡಿದ. ಮೊದಲ ಭೇಟಿಯಲ್ಲಿಯೇ ಒಬ್ಬರಿಗೊಬ್ಬರು ಇಷ್ಟವಾಗುತ್ತಾರೆ. ಭಾರತವನ್ನು ಬ್ರಿಟಿಷರ ದಾಸ್ಯದಿಂದ ಕಿತ್ತೊಗೆಯಲು ನಿಮ್ಮಂತಹ ಯುವಕರ ಸಹಕಾರ ಅತ್ಯಗತ್ಯ ಹಾಗಾಗಿ ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ವಾರಾಂತ್ಯದಲ್ಲಿ ಭಾರತ ಭವನಕ್ಕೆ ಹೆಚ್ಚಿನ ಹುಡುಗರನ್ನು ಕರೆತರಲು ತಿಳಿಸುತ್ತಾರೆ. ಅದರಂತೆಯೇ ಇಂಗ್ಲೆಂಡಿನಲ್ಲಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಭವನಕ್ಕೆ ಕರೆತರುವುದರಲ್ಲಿ ಡಿಂಗ್ರಾ ಸಫಲರಾಗುತ್ತಾರೆ. ಸಾವರ್ಕರ್ ಅವರ ಧೀಮಂತ ವ್ಯಕ್ತಿತ್ವ, ದೇಶಾಭಿಮಾನದ ಮಾತುಗಳನ್ನು ವಾರ ವಾರಕ್ಕೆ ಕೇಳುತ್ತಲೇ ಮದನ್ ಲಾಲ್ ಧಿಂಗ್ರಾ ಗೆ ಸಾವರ್ಕರ್ ಮೇಲೆ ಅಭಿಮಾನ ಹೆಚ್ಚಾಗುತ್ತಾಲೇ ಹೋಗುತ್ತದೆ. ಅವನಲ್ಲಿ ದೇಶಭಕ್ತಿಯ ಹೊಸ ವಿದ್ಯುತ್ ಪ್ರವಹಿಸಿ ಶೋಕಿಲಾಲನಾಗಿದ್ದ ಮದನ್ ಮಹಾನ್ ದೇಶಪ್ರೇಮಿಯಾಗಿ ಬದಲಾಗಿ ಹೋಗುತ್ತಾನೆ.

ಇದೇ ಸಮಯದಲ್ಲಿ ಬಂಗಾಳದ ವಿಭಜನೆಗೆ ಹೊಂಚು ಹಾಕಿದ್ದ ಬ್ರಿಟಿಷ್ ಅಧಿಕಾರಿ ಕರ್ಜನ್ ವಾಲಿ ಆಗಷ್ಟೇ ಇಂಗ್ಲೆಂಡಿಗೆ ಹಿಂದಿರುಗಿ ಲಂಡನ್ನಿನ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆಯ ಮೂಲಕ ಇಂಗ್ಲೆಂಡಿಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಠೆಯಾಗಿ ಮಾಡುವಂತಹ ಸಂಸ್ಥೆಗೆ ಮುಖ್ಯಸ್ಥನಾಗುತ್ತಾನೆ. ಇದು ಸಾವರ್ಕರ್ ಮಾಡುತ್ತಿದ ಕೆಲಸಕ್ಕೆ ತದ್ವಿರುದ್ಧವಾಗಿದ್ದ ಕಾರಣ ಸಹಜವಾಗಿ ಅನೇಕ ಕ್ರಾಂತಿಕಾರಿಗಳ ಸಿಟ್ಟು ಕರ್ಜನ್ ವಾಲಿಯ ವಿರುಧ್ಧವಿರುತ್ತದೆ. ಹೇಗಾದರೂ ಮಾಡಿ ಅವನನ್ನು ಕೊಂದು ಹಾಕಲು ಸಂಚು ಮಾಡುತ್ತಿರುವಾಗ ಆ ಕೆಲಸವನ್ನು ತಾನು ಮಾಡುತ್ತೇನೆ ಎಂದು ಮದನ್ ಲಾಲ್ ಡಿಂಗ್ರಾ ಸ್ವಯಂ ಪ್ರೇರಿತನಾಗಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಪೂರ್ವಭಾವಿ ಸಿದ್ದತೆಯಂತೆ ಬ್ರಿಟಿಷರ ಪರವಾಗಿಯೇ ಇದ್ದ ತನ್ನ ತಂದೆಯ ಮೂಲಕ ಆತನ ಸ್ನೇಹಿತನಾಗಿದ್ದ ಕರ್ಜನ್ ವಾಲಿಯ ಪರಿಚಯಮಾಡಿಕೊಳ್ಳುತ್ತಾನೆ. ಹೇಗೂ ತನ್ನ ಸ್ನೇಹಿತನ ಮಗ ಅದೂ ಅಲ್ಲದೇ ಬ್ರಿಟಿಷರ ಪರವಾಗಿಯೇ ಇರುವವರ ಮಗ ಅವನೂ ಸಹಾ ಬ್ರಿಟಿಷರ ಪರ ಒಲವಿದ್ದೇ ಇರುತ್ತದೆ ಎಂದು ಭಾವಿಸಿ ಕರ್ಜನ್ ವಾಲಿ ಬಲು ಬೇಗನೆ ಮದನ್ ಲಾಲ್ ಡಿಂಗ್ರಾನ ಜೊತೆ ಸಲುಗೆ ಬೆಳೆಸುತ್ತಾನೆ.

1909 ನೇ ಜುಲೈ 1ನೇ ತಾರೀಖು ನ್ಯಾಷನಲ್‌ ಇಂಡಿಯನ್‌ ಅಸೋಸಿಯೇಷನ್ನಿನ ವಾರ್ಷಿಕೋತ್ಸವಕ್ಕೆ ಕರ್ಜನ್‌ ಬರುತ್ತಾನೆ ಎಂಬ ವಿಷಯ ತಿಳಿದು ಢಿಂಗ್ರಾನ ಸಂತೋಷವಾಗುತ್ತದೆ. ಅದೇ ದಿನವನ್ನು ಭಾರತಕ್ಕಾಗಿ ಅಪಮಾನದ ಮಾಡಿದವನ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ನಿಶ್ಚಯಿಸಿ ಜೂನ್‌ ರಂದು 20 ಅವನು ಗುಪ್ತವಾಗಿ ಸಾವರ್ಕರ್ ರನ್ನು ಭೇಟಿ ಮಾಡಿ.ತನ್ನ ಮನದಾಸೆಯ ಯೋಜನೆಯನ್ನು ತಿಳಿಸಿ ಅವರ ಆಶೀರ್ವಾದವನ್ನು ಪಡೆದು ಕೊಳ್ಳುತ್ತಾನೆ.

ಜುಲೈ 1ನೇ ತಾರೀಖು ರಂದು ತನ್ನ ಪಿಸ್ತೂಲನ್ನು ತೆಗೆದುಕೊಂಡು ಸುಮಾರು ಸುತ್ತು ಗುಂಡುಗಳನ್ನು ಹಾರಿಸಿ, ಗುಂಡು ಹಾರಿಸಿ ಸರಿಯಾದ ಗುರಿ ಇಡುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳುತ್ತಾನೆ. ಸಂಜೆ ಆರು ಗಂಟೆಗೆಲ್ಲಾ ತನ್ನ ಕೊಠಡಿಗೆ ಮರಳಿ ಚೆನ್ನಾಗಿ ಮುಖ ತೊಳೆದುಕೊಂಡು ಪಕ್ಕಾ ಪಂಜಾಬಿ ಮಾದರಿಯಂತೆ ತಲೆಗೆ ಆಕಾಶ ನೀಲಿಯ ಪೇಟ ಬಿಗಿಯಾಗಿ ಸುತ್ತಿಕೊಂಡು ತನ್ನ ಮೆಚ್ಚಿನ ಕಪ್ಪು ಕನ್ನಡಕವನ್ನು ಧರಿಸಿ ಟೈ ಹಾಕಿಕೊಂಡು, ಕೋಟನ್ನು ಏರಿಸಿಕೊಂಡು ಒಂದು ರಿವಾಲ್ವರ್, ಎರಡು ಪಿಸ್ತೂಲು ಮತ್ತು ಎರಡು ಚೂರಿಗಳನ್ನು ಕೋಟಿನ ಒಳಜೇಬುಗಳಲ್ಲಿ ಗುಪ್ತವಾಗಿಟ್ಟುಕೊಂಡು ಕರ್ಜನ್ ನನ್ನು ಮುಗಿಸಲು ಹೊರಡುತ್ತಾನೆ.

ಅಲ್ಲಿಂದ ಸೀದಾ ಸಭೆ ನಡೆಯುತ್ತಿದ್ದ ಪ್ರದೇಶಕ್ಕೆ ಹೋಗಿ ಎಲ್ಲರೊಡನೆ ಚೆನ್ನಾಗಿಯೇ ಮಾತನಾಡುತ್ತಾ ತನ್ನ ಗೆಳತಿ ಏಮಾ ಬೆಕ್‌ ಳನ್ನೂ ಭೇಟಿಯಾಗುತ್ತಾನೆ. ಗಂಟೆ ಹತ್ತೂವರೆಯಾದರೂ ಕರ್ಜನ್ ವಾಲಿಯ ಸಭೆಗೆ ಬಾರದಿದ್ದಾಗ ಮದನ್ ಕೊಂಚ ಗಲಿ ಬಿಲಿಯಾದರೂ ಅದನ್ನು ತೋರಿಸಿಕೊಳ್ಳದೇ ಎಲ್ಲರೊಡನೆ ಸಹಜವಾಗಿಯೇ ಮಾತನಾಡಿಸುತ್ತಲೇ ಆಗ್ಗಿಂದ್ದಾಗೆ ಬಹಳ ತವಕದಿಂದ ಬಾಗಿಲ ಕಡೆ ನೋಡುತ್ತಿದ್ದಾಗಲೇ ಕರ್ಜನ್‌ವಾಲಿ ತನ್ನ ಪತ್ನಿಯ ಜೊತೆಗೆ ಆಗಮಿಸುವುದನ್ನು ನೋಡಿ ಮದನ್ ಲಾಲ್ ಡಿಂಗ್ರಾನಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗುತ್ತದೆ, ಸುಮಾರು ಅರ್ಧಗಂಟೆಗಳ ಕಾಲ ಸಭೆ ನಡೆದು, ಹನ್ನೊಂದು ಗಂಟೆಗೆ ಸಭೆ ಮುಗಿದು ಕರ್ಜನ್‌ವೇದಿಕೆಯಿಂದ ಕೆಳಗೆ ಇಳಿಯುತ್ತಲೇ ಸಂಗೀತ ಶುರುವಾಗಿ ಊಟೋಪಚಾರಗಳು ಆರಂಭವಾಗುತ್ತದೆ, ಅವರ ಮಧ್ಯೆದಲ್ಲಿಯೇ ಕರ್ಜನ್ ವಾಲಿಯೂ ಸೇರಿಕೊಳ್ಳುತ್ತಾನೆ.

md1

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಡಿಂಗ್ರಾ, ಕರ್ಜನ್ ಇದ್ದ ಕಡೆಗೆ ಬಂದು ಹಲೋ ಎನ್ನುತ್ತಾನೆ. ಹೇಗೂ ಪರಿಚಯವಿದ್ದ ಕಾರಣ ಕರ್ಜನ್‌ ಕೂಡಾ ಆವನಿಗೆ ಹಸನ್ಮುಖನಾಗಿ ಪ್ರತ್ಯುತ್ತರ ನೀಡೀ ಒಬ್ಬರಿಗೊಬ್ಬರು ಹತ್ತಿರಕ್ಕೆ ಬರುತ್ತಾರೆ. ಆ ಸಂಗೀತದ ಗದ್ದಲದ ನಡುವೆ ಡಿಂಗ್ರಾ ಮೆಲ್ಲನೆ ಕಿವಿಯಲ್ಲಿ ಏನೋ ಗುಟ್ಟು ಹೇಳುವಂತೆ ಬಂದಾಗ ಕರ್ಜನ್‌ ಅದನ್ನು ಕೇಳಲು ತಲೆ ಬಗ್ಗಿಸುತ್ತಾನೆ. ಅಂತಹ ಕ್ಷಣಕ್ಕಾಗಿಯೇ ಕಾಯುತ್ತಿದ ಡಿಂಗ್ರಾ, ಸರಕ್ಕನೆ ಜೇಬಿನಿಂದ ರಿವಾಲ್ವರ್ ಹೊರತೆಗೆದು ಕರ್ಜನ್ನಿನ ಕುತ್ತಿಗೆಗೆ ಗುರಿ ಇಟ್ಟು ಡಂ ಡಂ ಎಂದು ಎರಡು ಗುಂಡು ಹೊಡೆದ ತಕ್ಷಣವೇ ಕರ್ಜನ್‌ ಅಯ್ಯೋ ಎಂದು ಕಿರುಚುತ್ತಾ ನೆಲದ ಮೇಲೆ ಕುಸಿದು ಬೀಳುತ್ತಾನೆ. ಕರ್ಜನನ್ನು ಸಾಯಿಸಲೇ ಬಂದಿದ್ದ ಮದನ್ ಮತ್ತೆರಡು ಸಲಾ ಗುಂಡು ಹಾರಿಸಿ ಅವನಿಗೆ ಶಾಶ್ವತ ಲೋಕಕ್ಕೆ ಕಳುಹಿಸುತ್ತಾನೆ. ನೆಲದ ಮೇಲೆ ಬಿದ್ದಿದ್ದ ಕರ್ಜನ್ನನ್ನು ರಕ್ಷಿಸಲು ಕಾವಾಸಜೀಲಾಲ್‌ಎಂಬ ಪಾರ್ಸಿ ಓಡಿ ಬಂದಾಗ ಅವನ ವಿರುಧ್ದವೂ ಡಿಂಗ್ರಾ ಗುಂಡು ಹಾರಿಸಿ ಅವನನ್ನೂ ಕೆಳಗೆ ಬೀಳಿಸುತ್ತಾನೆ ಮುಂದೆ ಆತ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಿ ನರಳೀ ಪ್ರಾಣ ಬಿಡುತ್ತಾನೆ.

ಆ ಕ್ಷಣದಲ್ಲಿ ಜಂಹಾಂಗೀರ್ ಸಭಾಂಗಣದಲ್ಲಿ ಅಲ್ಲೋಲ ಕಲ್ಲೋಲ. ಎಲ್ಲರೂ ಅವನನ್ನು ಹಿಡಿಯಿರಿ ಹಿಡಿಯಿರಿ ಎಂದು ಡಿಂಗ್ರಾನನ್ನು ಹಿಡಿಯಲು ಅವನತ್ತ ಧಾವಿಸುತ್ತಾರೆ. ಹಾಗೆ ಬಂದವರ ಮೇಲೆ ಡಿಂಗ್ರಾ ಪ್ರಹಾರ ಮಾಡುತ್ತಾನೆ. ಅವರಲ್ಲೊಬ್ಬನಿಗೆ ಡಿಂಗ್ರಾನ ಬಲವಾದ ಪೆಟ್ಟಿನಿಂದಾಗಿ ಕುತ್ತಿಗೆ ಊದಿಕೊಂಡಿತು ಮತ್ತು ಪಕ್ಕೆಲುಬುಗಳು ಮುರಿದುಹೋಗಿ ರಕ್ತ ಕಾರಿಕೊಂಡು ಕೆಳಗೆ ಬೀಳುತ್ತಾನೆ.

ಇವೆಲ್ಲವನ್ನೂ ನೋಡುತ್ತಾ ಡಿಂಗ್ರಾ ಮಾತ್ರ ಶಾಂತವಾಗಿ ಹಸನ್ಮುಖವಾಗಿ ಕೊಂಚವೂ ಕದಲದೇ ನಿಂತಲ್ಲಿಯೇ ನಿಂತಿರುತ್ತಾನೆ. ಅವನನ್ನು ಹಿಡಿಯಲು ಹತ್ತಿರ ಬಂದ ಪೋಲಿಸರಿಗೆ ನಿಲ್ಲಿ. ಒಂದು ಕ್ಷಣ ನನ್ನ ಕನ್ನಡಕ ಹಾಕಿಕೊಳ್ಳುತ್ತೇನೆ ಎಂದು ತನ್ನ ನೆಚ್ಚಿನ ಕಪ್ಪು ಕನ್ನಡಕವನ್ನು ಹಾಕಿಕೊಂಡು ಪೋಲೀಸರಿಗೆ ಶರಣಾಗುತ್ತಾನೆ. ಅಲ್ಲಿಯೇ ಇದ್ದ ವೈದ್ಯರೊಬ್ಬರು ಅವನನ್ನು ಪರೀಕ್ಷಿಸಿ ಅಷ್ಟೇಲ್ಲಾ ಅವಗಡಗಳು ಸಂಭವಿಸಿದ್ದರೂ, ಯಾವುದೇ ಉದ್ವೇಗವಿಲ್ಲದೇ ಅವನ ನಾಡಿಗಳು ಎಂದಿನಂತೆ ಶಾಂತವಾಗಿಯೇ ಇದ್ದದ್ದನ್ನು ಗಮನಿಸಿದ ವೈದ್ಯರಿಗೇ ನಡುಕ ಉಂಟಾಗುತ್ತದೆ. ಇಂಥ ಘೋರ ಕೊಲೆಯನ್ನು ಮಾಡಿದ್ದರೂ ಧಿಂಗ್ರ ಸ್ವಲ್ಪವೂ ಭಯಪಟ್ಟಿರಲಿಲ್ಲ. ತಾನು ಮಾಡುತ್ತಿರುವುದು ಸರಿಯಾದದ್ದು ಎಂದು ಅವನಿಗೆ ದೃಢನಂಬಿಕೆ ಇತ್ತು.

ಮಾರನೆಯ ದಿನ ಲಂಡನ್ನಿನ ಎಲ್ಲ ಪತ್ರಿಕೆಗಳಲ್ಲೂ ದಪ್ಪಕ್ಷರಗಳಲ್ಲಿ ಇದೇ ಸುದ್ದಿ ಪ್ರಕಟವಾಗಿ ಎಲ್ಲರನ್ನೂ ದಂಗು ಬಡಿಸಿದರೆ, ಈ ಘಟನೆ ತಿಳಿದ ಸಾವರ್ಕರ್ ಅವರೂ ಸಂತೃಪ್ತರಾದರೆ ಭಾರತದ ಕ್ರಾಂತಿಕಾರರು ಉತ್ಸಾಹದಿಂದ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾರೆ ಅವನ ಕಣ್ಣಿನಲ್ಲಿ ದೇವರಂತೆ ಕಾಣುತ್ತಾಎ. . ಡಿಂಗ್ರಾನ ಹೆಸರು ದಿನ ಕಳೆಯುವಷ್ಟರಲ್ಲಿ ಭಾರತಾದ್ಯಂತ ಮನೆ ಮಾತಾಗುತ್ತಾರೆ.

ಆದರೆ ಈ ಕೆಲಸದಿಂದ ಕುಪೀತರಾದ ಮದನ್ ಲಾಲ್ ಡಿಂಗ್ರಾ ಆವರ ತಂದೆ ಕೂಡಲೇ ಸಂದೇಶವೊಂದನ್ನು ಕಳುಹಿಸಿ, ಇಂಥ ಕೃತ್ಯ ಮಾಡಿದವನು ನನ್ನ ಮಗನೇ ಅಲ್ಲ. ಅವನೊಬ್ಬ ಶತ ಮೂರ್ಖ! ನನ್ನ ಹೆಸರಿಗೇ ಮಸಿ ಬಳಿದಿದ್ದಾನೆ ಎಂದರೆ ಅವನ ಸೋದರರು ತನಗೂ ಡಿಂಗ್ರಾನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಘೋರ ಅಪರಾಧ ಮಾಡಿದ್ದಾನೆ ಎಂದು ಹೇಳುತ್ತಾನೆ. ಖುದ್ದಾಗಿ ಡಿಂಗ್ರಾನ ಮನೆಯವರೇ ಕೈಬಿಟ್ಟಿದ್ದರೂ, ದೇಶಭಕ್ತ ಭಾರತ ಜನ ಭಾರತಮಾತೆಗೆ ಗೌರವ ತಂದ ಸುಪುತ್ರನೆಂದು ಹೊಗಳಿ ಹಾಡಿದರು.

ಬ್ರಿಕ್ಸ್‌ಟನ್‌ಜೈಲಿನಲ್ಲಿ ಬಂಧಿತನಾಗಿದ್ದ ಡಿಂಗ್ರಾನನ್ನು ನೋಡಲು ಬಂದಿದ್ದ ಸಾವರ್ಕರ್ ಅವರಿಗೆ ತಮ್ಮ ಶಿಷ್ಯನ ಧೈರ್ಯ, ಸಾಹಸಗಳ ಬಗ್ಗೆ ಹೆಮ್ಮೆ, ಗೌರವಗಳು ಹೆಚ್ಚಾದವು. ಸಾವರ್ಕರ್ ಅವರನ್ನು ನೋಡಿದ ಡಿಂಗ್ರಾ ನಾನು ಸತ್ತಮೇಲೆ ನನ್ನ ಶವಸಂಸ್ಕಾರ ಹಿಂದು ಪದ್ಧತಿಯಲ್ಲೇ ನಡೆಯಬೇಕು. ನನ್ನ ಕುಟುಂಬದವರು ಯಾರೂ ನನ್ನ ಶವವನ್ನು ಮುಟ್ಟುಕೂಡದು, ಯಾವ ಅಹಿಂದುವೂ ನನ್ನನ್ನು ಸೋಂಕಕೂಡದು, ನನ್ನ ಸಾಮಾನುಗಳನ್ನೆಲ್ಲ ಹರಾಜು ಹಾಕಿ ಅದರಿಂದ ಬಂದ ಹಣವನ್ನು ರಾಷ್ಟ್ರೀಯ ನಿಧಿಗೆ ಕೊಡಿ ಎಂದು ಹೇಳುತ್ತಾನೆ.

md2

ಮುಂದೆ ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಾಡಿ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾನೆ. ದೇಶಕ್ಕಾಗಿ ಈ ಹತ್ಯೆ ಮಾಡಿರುವುದಕ್ಕಾಗಿ ನನಗೆ ಹೆಮ್ಮೆ ಇದೆ ಹಾಗಾಗಿ ತನಗೆ ಮರಣದಂಡನೆಯೇ ಸೂಕ್ತ ಎಂದು ಧೀರ ಮದನ್ ಲಾಲ್ ಧಿಂಗ್ರಾ ಖುಷಿಯಿಂದ ಹೇಳುತ್ತಾನೆ. ನಾನು ಹಿಂದು, ನನ್ನ ದೇಶಕ್ಕೆ ಅಪಮಾನವಾದರೆ ಅದು ನಮ್ಮ ದೇವರಿಗೆ ಅಪಮಾನವಾದಂತೆ ಎಂದು ನನ್ನ ಭಾವನೆ. ನಾನು ಬುದ್ಧಿವಂತನಲ್ಲ, ನಾನು ಬಲಶಾಲಿಯಲ್ಲ. ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಇನ್ನೇನು ತಾನೆ ಕೊಡಬಲ್ಲೆ? ಆದುದರಿಂದ ನನ್ನ ರಕ್ತವನ್ನೇ ನನ್ನ ಮಾತೃಭೂಮಿಗೆ ಅರ್ಪಿಸಿದ್ದೇನೆ. ಭಾರತಮಾತೆಯ ಕೆಲಸವೆಂದರೆ ಶ್ರೀರಾಮನ ಕೆಲಸ. ಆಕೆಯ ಸೇವೆ ಶ್ರೀಕೃಷ್ಣನ ಸೇವೆ. ಆದ್ದರಿಂದ ನಾನು ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡುವಂತೆ ಆಗಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ.

ವಂದೇ ಮಾತರಂ ಎಂದು ಜೋರಾಗಿ ಹೇಳುತ್ತಾನೆ.

26ರ ಹರೆಯದ ಡಿಂಗ್ರಾರನ್ನು 1909 ಆಗಸ್ಟ್ 17 ರಂದು ಪೆಂಟೋನ್‌ವಿಲ್ಲ ಜೈಲಿನಲ್ಲಿ ಗಲ್ಲಿಗೆ ಏರಿಸುವ ಸಿದ್ಧತೆ ನಡೆಸುತ್ತಾರೆ. ಮದನಲಾಲ್‌ಧಿಂಗ್ರ ಕೂಡಾ ಸಂತೋಷದಿಂದಲೇ, ಪವಿತ್ರವಾದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು, ಶ್ರೀರಾಮ, ಶ್ರೀಕೃಷ್ಣ ಜಪ ಮಾಡುತ್ತಾ ದೇಶಕ್ಕಾಗಿ ಪ್ರಾಣ ಕೊಡುತ್ತಾನೆ. ಹೀಗೆ ವಿದೇಶಿ ನೆಲದಲ್ಲಿ ಭಾರತೀಯನೊಬ್ಬನ ಮೊದಲ ಬಲಿದಾನ ಎಂದು ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಕುರಿತು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.

ಭಾರತದ ಕೆಲ ದೇಶಭಕ್ತ ತರುಣರು 1909ರಲ್ಲಿ ಇಂಗ್ಲೇಂಡಿನಲ್ಲಿ ಸಂಸ್ಕಾರ ಮಾಡಿದ್ದ ಮದನ್ ಲಾಲ್ ಡಿಂಗ್ರಾಅವರ ಕಳೇಬರವನ್ನು 1976ರಲ್ಲಿ ಭಾರತಕ್ಕೆ ತಂದು ಮಹಾರಾಷ್ಟ್ರದ ಅಕೋಲದಲ್ಲಿ ಸ್ಮರಣಾರ್ಥವಾಗಿ ಇಡುವ ಮೂಲಕ ಮದನ್ ಲಾಲ್ ಡಿಂಗ್ರಾ ಅವರ ತ್ಯಾಗ ಮತ್ತು ಬಲಿದಾನಗಳನ್ನು ಇಂದಿಗೂ ಎಲ್ಲಾ ಭಾರತೀಯರ ಹೃದಯಗಳಲ್ಲಿ ಚಿರಂತನವಾಗಿರುವಂತೆ ಶ್ಲಾಘನೀಯವಾದ ಕೆಲಸ ಮಾಡಿದ್ದಾರೆ

md4

ಎಂಜಿನಿಯರ್ ಆಗಬೇಕೆಂಬ ಆಸೆಯಿಂದ ಇಂಗ್ಲೇಂಡಿಗೆ ಹೋದ ಆಗರ್ಭ ಶ್ರೀಮಂತ, ಶೋಕೀಲಾಲಾ ಮದನ್ ಲಾಲ್ ಡಿಂಗ್ರಾ ದೇಶಭಕ್ತಿಯನ್ನು ತಲೆಗೆ ಹಚ್ಚಿಕೊಳ್ಳದಿದ್ದರೆ ಬೇಕಾದಷ್ಟು ಹಣ, ಅಧಿಕಾರ, ಸುಖ ಎಲ್ಲ ಅವನಿಗೆ ಸಿಕ್ಕಿರುತ್ತಿತ್ತು ಮತ್ತು ಇನ್ನೂ ಹಲವಾರು ವರ್ಷಗಳು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಬದುಕ ಬಹುದಾಗಿತ್ತು. ತನ್ನ ದೇಶದವರು ಗುಲಾಮರಾಗಿ ಬದುಕಿದ್ದೂ ಸತ್ತಂತೆ, ಹಾಗಾಗಿ ಅವರ ಸ್ವಾತಂತ್ಯಕ್ಕೆ ಡಿಂಗ್ರಾ ತನ್ನನ್ನೇ ತಾನು ಅರ್ಪಿಸಿಕೊಂಡ. ಅವನಂತಹ ವೀರತ್ಯಾಗಶೀಲರಿಂದ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಂತಹ ಬಲಿದಾನಗಳು ನಮ್ಮ ಯುವಜನತೆಗೆ ಸದಾಕಾಲವೂ ಸ್ಪೂರ್ತಿಯಾಗಲಿ ಮತ್ತು ದೇಶ ಸೇವೆಗೆ ಪ್ರೇರೇಪಿಸುವಂತಾಗಲಿ.

ಏನಂತೀರೀ?

ಈ ಎಲ್ಲಾ ಮಾಹಿತಿಗಳನ್ನು ವಿಕಿಪಿಡೀಯಾ ಮತ್ತು ಇತರೇ ಅಂತರ್ಜಾಲಗಳ ಮೂಲಗಳಿಂದ ಸಂಗ್ರಹಿಸಲಾಗಿದೆ.

ಆಜಾದ್ ಹಿಂದ್ ಸರ್ಕಾರ್

ಇದ್ಯಾವುದಪ್ಪ ಹೊಸ ಕಥೆ, ಆಗಸ್ಟ್ 15 ಅಲ್ವಾ ನಮ್ಮ ಸ್ವಾತಂತ್ರೋತ್ಸವ?  ಅಂತ ಅನಿಸುತ್ತಿದ್ದರೆ ಅದು ಆಶ್ಚರ್ಯ ಅಲ್ಲ, ಅವಮಾನ ನಿಮಗೆ ಎಂದು ತಿಳಿಯಿರಿ. 21-10-1943ರಂದೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೆಚ್ಚೆದೆಯ ಹೋರಾಟದ ಫಲವಾಗಿಯೇ ಭಾರತದ ಪ್ರಥಮ ಸರ್ಕಾರ ಆಜಾದ್ ಹಿಂದ್ ಸರ್ಕಾರ್ ಸ್ಥಾಪಿತವಾದ ದಿನ. ಹೌದು ನಮ್ಮ ದೇಶದ ಇತಹಾಸ ತಿಳಿಯದೆ ಇದ್ದರೆ ಅದು ಅವಮಾನವೇ ಸರಿ. ಆಗಂತ ನಾನೆನು ಸಾಚಾ ಅಲ್ಲ ನಾನು ಸಾಕಷ್ಟು ವಿಚಾರ ಈಗಷ್ಟೇ ತಿಳಿದುಕೊಳ್ಳುತ್ತಿರುವೆ. ಅವಮಾನ ನನ್ನ ಮನಸ್ಸಿಗೂ ಇದೆ. ಇಂತಹ ನೈಜ ಇತಿಹಾಸಗಳು ತಿಳಿಯದೇ ಇರುವುದಕ್ಕೆ ಕಾರಣ ನಾ ಹೇಳುವ ಅವಶ್ಯಕತೆ ಇಲ್ಲ ? ನಿಮಗೂ ತಿಳಿದಿರುತ್ತೆ.

ಬೋಸ್ ರವರಿಗೆ ಜೀವನಕ್ಕೆ ತಿರವು ನೀಡಿದ ಸಂದರ್ಶನ ಅಂದರೆ 1940ರ ಜೂನ್ 22ರಂದು ಆಗಾಗಲೇ ಕ್ರಾಂತಿಕಾರಿಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆ ಸ್ಥಾಪಿಸಿದ್ದ ಕ್ರಾಂತಿರತ್ನ ನನ್ನ ಆರಾಧ್ಯ ವೀರ ಸಾವರ್ಕರ್ ರವರ ಬೇಟಿಮಾಡುವ ಸೌಭಾಗ್ಯ ದೊರೆಯಿತು. ಸಾವರ್ಕರ್ ಬೇಟಿಯ ಗಳಿಗೆಯಲ್ಲೆ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಗೆ ಕಾಯುತ್ತಿದ್ದಂತೆ ಬೋಸ್ ರನ್ನು ಕಂಡ ತಕ್ಷಣ ನೀ ಎಂದು ಬರುವೆ ಎಂದು ಕಾಯುತ್ತಿದ್ದೆ ಕೊನೆಗೂ ಬಂದೆಯಲ್ಲ ಈಗ ಮುಂದಿನ ನಡೆ ಏನು ಎಂದು ವಿಚಾರಿಸಿದರು . ಬೋಸ್ ರವರು ನಾ ಬ್ರಿಟಿಷ್ ರ ಮೂರ್ತಿಗಳನ್ನು ದ್ವಂಸಗೊಳಿಸಬೇಕೆಂದಿರುವೆ ಎಂದಾಗ ಸಾವರ್ಕರ್ ಬೇಸರಗೊಂಡು ನೀ ಜೀವಂತವಿರುವ ಬ್ರಿಟಿಷ್ ರನ್ನೆ ಹೊಡೆಯವ ತಾಖತ್ ಇರುವಾಗ ಸತ್ತ ಹೆಣದಂತ್ತಿರುವ ಮೂರ್ತಿಯಾಕೆ?. ನೀ ಮೂರ್ತಿ ಹೊಡೆದರೆ ನಮ್ಮ ಹಣದಿಂದಲೆ ಮತ್ತೆರಡು ಕಟ್ಟಿಸುತ್ತಾರೆ ನೀ ಹೊಡೆಯುವಂತಿದ್ದರೆ ಜೀವಂತ ಆಂಗ್ಲ ಸಿಪಾಯಿಗಳನ್ನು ಹೊಡೆದು ದೇಶದಿಂದ ತೊಲಗಿಸು ಎಂದು ಹೇಳುತ್ತಾರೆ. ಸುಭಾಷರು ನಾ ಒಬ್ಬನೇ ಹೇಗೆ ಸಾಧ್ಯ ಎಂದೇಳಿದಾಗ. ಸಾವರ್ಕರ್ ರವರು ಜಪಾನ್ ದೇಶದಲ್ಲಿ ಈಗಾಗಲೇ ಭಾರತಸೇನೆಯನ್ನು ಸಿದ್ದಪಡಿಸುತ್ತಿದ್ದರೆ ರಾಸ್ ಬಿಹಾರಿ ಬೋಸ್‌ ರವರು. ನೀವು ಹೇಗಾದರು ಮಾಡಿ ಜಪಾನ್ ತಲುಪಿ ಅದರ ನೇತೃತ್ವ ತೆಗೆದುಕೊಂಡು ಆಂಗ್ಲ ಸಿಪಾಯಿಗಳ ಮೇಲೆ ಆಕ್ರಮಣಕ್ಕೆ ಬನ್ನಿ ನಾ ದೇಶದ ಒಳಗಡೆಯಿಂದ ಕ್ರಾಂತಿಕಾರಿಗಳನ್ನು ನಿಮ್ಮ ಸೇನೆ ಸೇರಲು ಪ್ರೇರೆಪಿಸುವೆ ಎಂದೇಳುತ್ತಾರೆ. ಹೇಳಿದ್ದೆ ತಡ ಮಹಾತ್ಮ ನೇತಾಜಿ ಬೋಸ್ ರವರು ಮರುಮಾತಾಡದೆ ಕಾರ್ಯಪ್ರವೃತ್ತರಾದರು. ಅಷ್ಟರಲ್ಲೇ ಬೋಸ್ ಜುಲೈ 2ರಂದು ಬಂಧನ, ರಾಜದ್ರೋಹದ ಆರೋಪ ಹೊರಿಸಿ ಗೃಹಬಂಧನ. ಇದೇ ಅವಕಾಶ ಎಂದು ಗಡ್ಡ ಮೀಸೆ ಬೆಳೆಸಿ ಗೃಹಬಂಧನದಿಂದ ಆಶ್ಚರ್ಯಕರ ರೀತಿಯ ಪಲಾಯನ ಇಲ್ಲಿಂದ ಶುರು ಆಗುತ್ತೆ ಪ್ರಪಂಚ ಬೆರಗಾಗುವ ನೇತಾಜಿರವರ ಸಾಹಸ

ಭಾರತೀಯ ಯುವಜನಾಂಗದ ಆಸೆ ಆಕಾಂಕ್ಷೆಗಳ ಮೂರ್ತಿವೆತ್ತ ರೂಪ. ಭಾರತಕ್ಕೆ ಪೂರ್ಣ ಸ್ವಾತಂತ್ಯ್ರ ತಂದುಕೊಡಲು ದೇಶದೊಳಗಡೆಯಷ್ಟೆ ಸಾಲದು ಹೊರದೇಶಗಳಲ್ಲೂ ಸಂಚರಿಸಿ ಭಾರತ ಭಕ್ತರ ಶಕ್ತಿ ಸಂಚಯಿಸಿ ಹೋರಾಡಲು ಚಿಂತಿಸಿದರು. ಯುದ್ಧಕಾಲದಲ್ಲಿ ಜರ್ಮನಿಯ ಪರವಾಗಿ ರಷ್ಯಾ ಇರುವುದರಿಂದ ಇಂಗ್ಲೆಂಡಿನ ಕೋಪಕ್ಕೊಳಗಾಗಿದ್ದು, ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ರಣನೀತಿಗನುಸಾರ ಅವರನ್ನು ಬಳಸಿಕೊಳ್ಳಲು ರಷ್ಯಾಕ್ಕೆ ಹಾರಲು ನಿರ್ಧಾರ. ಜಿಯಾಉದ್ದೀನ್ ಹೆಸರಲ್ಲಿ ಗಡ್ಡಾಮೀಸೆ ಬೆಳೆಸಿ ವೇಷ ಮರೆಸಿ ಪೇಷಾವರ್ ಮಾರ್ಗವಾಗಿ ಮಾರ್ಗದಲ್ಲಿ ಬಂದ ಅಡ್ಡಿಗಳನ್ನು ಚತುರತೆಯಿಂದ ನಿಭಾಯಿಸಿ ಕಾಬೂಲ್ ತಲುಪುತ್ತಾರೆ.

ಸ್ಥಳೀಯ ರೇಡಿಯೊ ವ್ಯಾಪಾರಿ ಉತ್ತಮಚಂದರು ಆಶ್ರಯ ನೀಡುತ್ತಾರೆ. (ಈ ಸತ್ಕಾರ್ಯಕ್ಕೆ ಪ್ರತಿಫಲವಾಗಿ ಅವರು ಜೈಲಿಗೂ ಹೋಗುತ್ತಾರೆ!). ರೋಮ್ ಅಥವಾ ಮಾಸ್ಕೋ ಪಾಸ್ ಪೋರ್ಟ್ ಗೆ ಪ್ರಯತ್ನಿಸುತ್ತಾರೆ. ಅಂತಿಮವಾಗಿ ಬರ್ಲಿನ್ಗೆ ಹೊರಟಾಗ ಅವರ ಪಾಸ್ ಪೋರ್ಟ್ ನಲ್ಲಿದ್ದ ಮೊಝಾತಿಓ (ಇಟಾಲಿಯನ್ ಹೆಸರು) ಹೆಸರಲ್ಲೇ ಮುಂದಿನ ಕಾರ್ಯ ನಡೆಸುತ್ತಾರೆ.

1941ರ ಜನವರಿ 15ರಂದು ಪ್ರಾರಂಭವಾದ ಅವರ ಪಲಾಯನ ಮಾರ್ಚ್ 28ಕ್ಕೆ ಮುಕ್ತಾಯವಾಯಿತು.

ಮಾರ್ಚ್ 28ಕ್ಕೆ ಬರ್ಲಿನ್ಗೆ ತಲುಪಿ ಹಿಟ್ಲರನ ಭೇಟಿ ಮಾಡಿದರು. ಮೊದಲ ಯುದ್ಧದಲ್ಲಿ ವಿಫಲವಾದ ಉದ್ದೇಶದ ಪೂರ್ತಿಗಾಗಿ ಕೆಳಬಿದ್ದ ಹೋರಾಟದ ಧ್ವಜವನ್ನು ಕೈಗೆತ್ತಿಕೊಂಡರು. ಸುತ್ತಲ ರಾಜ್ಯಗಳ ಸ್ವಾತಂತ್ರ ಕಬಳಿಸಿದ್ದ ಹಿಟ್ಲರರನೇನೂ ಉದಾತ್ತ ಉದ್ದೇಶದಿಂದ ಸಹಕರಿಸುವುದಿಲ್ಲ ಎಂದು ಸುಭಾಷರಿಗೆ ತಿಳಿದಿತ್ತು. ಆದರೆ ಬ್ರಿಟಿಷರಿಗೆ ಕ್ರಾಂತಿಕಾರಿಗಳು ಕಿರುಕುಳ ಕೊಡಲೆಂದು ಕೈ ಜೋಡಿಸವನೆಂಬಾಸೆಯಿತ್ತು. ಅದೂ ಅಲ್ಲದೆ ಲಿಬಿಯಾದಲ್ಲಿ ಯಶಸ್ವಿ ಯುದ್ಧ ಮಾಡುತ್ತಿದ್ದ ಸೈನಿಕರಲ್ಲಿ ಹೆಚ್ಚಿನವರು ಭಾರತೀಯರೆಂದು ಹಿಟ್ಲರನಿಗೆ ತಿಳಿದಿತ್ತು. ಅವರು ದಂಗೆ ಏಳಬೇಕೆಂಬುದು ಹಿಟ್ಲರನ ಇಚ್ಛೆ. ಇಷ್ಟಿದ್ದರೂ ಸ್ವಾಭಿಮಾನಿ ಸುಭಾಷರು ಸ್ಪಷ್ಪ ಮಾತುಗಳಲ್ಲಿ ಆತನಿಗೆ ಹೇಳಿದ್ದೆಂದರೆ   ಜರ್ಮನ್ ರೇಡಿಯೋ ಬಿಟ್ಟುಕೊಡಬೇಕು, ತನ್ಮೂಲಕ ದೇಶಬಾಂಧವರ ಜಾಗೃತಿ ಮಾಡಬಹುದು. ವಶದಲ್ಲಿರುವ ಭಾರತೀಯ ಸೈನಿಕರನ್ನು ಒಪ್ಪಿಸಬೇಕು. ನಂತರ ಜರ್ಮನಿ ಮತ್ತು ಮಿತ್ರರಾಷ್ಟ್ರಗಳು ಕ್ರಾಂತಿ ಸೈನ್ಯಕ್ಕೆ ಸಹಕರಿಸುವುದಾಗಿ ಪ್ರಕಟಿಸಬೇಕು. ಮುಖ್ಯ ಕಛೇರಿಯಲ್ಲಿ ಭೇಟಿ. ನಕ್ಷೆ ತೋರಿಸಿ ದೂರದ ನೆಪವೊಡ್ಡಿ ಹಿಂದೆ ಸರಿದ ಹಿಟ್ಲರ್.

ಇಟಲಿ ವಿದೇಶ ಮಂತ್ರಿ ಕಿಯಾನೋ ಮೂಲಕ ಮುಸಲೋನಿ ಭೇಟಿ – ಮಾತುಕತೆ. ಆತ ರೋಮ್ ನಲ್ಲಿದ್ದು ಹಂಗಾಮಿ ಸರ್ಕಾರ ರಚಿಸಲು ಸಲಹೆ ನೀಡಿದ. ಆದರೆ ಸಿದ್ಧತೆ ಸಾಲದು, ಅದಲ್ಲದೇ ಏಷ್ಯಾ ಖಂಡದಲ್ಲಿ ಸ್ಥಾಪಿಸಿದಲ್ಲಿ ಮುಂದಿನ ಯೋಜನೆಗೆ ಸಹಕಾರಿ ಎಂಬುದು ಸುಭಾಷರ ನಿಲುವು. ಸಹಾಯಕ್ಕೆ ಸಿದ್ಧನೆಂದ ಮುಸಲೋನಿ.

ಈ ನಡುವೆ ಇಟಲಿ-ಜರ್ಮನಿಯ ಭಾರತೀಯ ಯುದ್ಧ ಕೈದಿಗಳ ಭೇಟಿ ಮುಂದುವರೆಯಿತು. ದೇಶಭಕ್ತಿ ಜಾಗೃತಿ, ಸ್ವತಂತ್ರ ಯೋಧರ ಶಿಬಿರ ಕಂಡು ಸುಭಾಷರಿಗೆ ಸಮಾಧಾನ. 3 ಬೆಟಾಲಿಯನ್ಗಳಾಗಿ ವಿಂಗಡನೆ. ಹೊಸ ಸೈನಿಕರು ಜರ್ಮನ್ ಸೈನ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಗುಪ್ತಚರರ ಕೆಲಸ ನಿರ್ವಹಿಸಿ ಬೆಟಾಲಿಯನ್ ಗಳು ವಾಯುವ್ಯ ಪ್ರಾಂತ ಪ್ರವೇಶಿಸಿದಾಗ ನಾಗರೀಕರು ಸಹಕರಿಸಲು ಸಿದ್ಧಗೊಳಿಸುವುದು. ವಾಯುವ್ಯ ಪ್ರಾಂತ ಕೈವಶವಾದಲ್ಲಿ ಭಾರತದಲ್ಲಿನ ಬ್ರಿಟಿಷ್ ರಕ್ಷಣಾ ವ್ಯೂಹ ಕುಸಿಯುವುದೆಂಬ ಯೋಚನೆ. ತಮ್ಮ ಕಚೇರಿಗೆ  ಆಜಾದ್ ಹಿಂದುಸ್ತಾನ ಕೇಂದ್ರ’ ಎಂದು ಹೆಸರಿಟ್ಟರು.

1941 ಡಿಸೆಂಬರ್ ಮಧ್ಯದಲ್ಲಿ ‘ಆಜಾದ್ ಹಿಂದ್ ಆಕಾಶವಾಣಿ ನಿಲಯ ಆರಂಭಿಸಿದರು. ರಾಷ್ಟ್ರಗೀತೆಯ ನಂತರ ‘ಜೈ ಹಿಂದ್’ ಘೋಷಣೆ ಮೊಳಗಿಸಲಾಗುತ್ತಿತ್ತು. ಸಮವಸ್ತ್ರ ಧರಿಸಿದ ಸುಭಾಷರನ್ನು ಸೈನಿಕರು ಪ್ರೀತಿಯಿಂದ ‘ನೇತಾಜಿ’ ಎನ್ನಲಾರಂಭಿಸಿದರು. ಬ್ರಿಟಿಷ್ ಸೈನ್ಯ ಶಕ್ತಿಯನ್ನು ಸದೆಬಡಿಯುತ್ತಾ ಜಪಾನ್ ಸೈನ್ಯ ಹಾಂಕಾಂಗ್, ಈಸ್ಟ್ ಇಂಡೀಸ್, ಬರ್ಮಾ ಮುಂತಾದ ದೇಶಗಳನ್ನು ಗೆದ್ದು ಭಾರತದ ಪೂರ್ವಗಡಿ ತಲುಪಿತು. ಬ್ರಿಟಿಷ್ ಸಿಂಗಾಪುರ ಬಿಟ್ಟು ಬರ್ಮಾದೆಡೆ ಓಟ ಕೀಳುವುದನ್ನು ಕಂಡು ಸ್ವತಃ ಸುಭಾಷರೇ 1942 ಫೆ.22ರಂದು ಸ್ವತಃ ಆಕಾಶವಾಣಿ ಭಾಷಣ ಮಾಡಿದರು. ‘ನಾವಿದುವರೆಗೆ ಕಾದಿದ್ದ ಕ್ಷಣ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯ ಮುರಿದು ಬೀಳುತ್ತಿದೆ. ಭಾರತ ಸ್ವಾತಂತ್ರ್ಯ ಸಮೀಪಿಸಿದೆ. ಬ್ರಿಟನ್ ಶತ್ರು ರಾಷ್ಟ್ರಗಳೆಲ್ಲಾ ಒಟ್ಟಾಗಿ ಸಾಮ್ರಾಜ್ಯದ ಅಂತಿಮ ವಿಸರ್ಜನೆ ಮಾಡೋಣ. ಇದಕ್ಕಾಗಿ ನಾವು ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿದ್ದೇವೆ’ ಎಂದು ಭಾರತೀಯ ಸೈನಿಕರನ್ನು ಹುರಿದುಂಬಿಸಿದರು.

ಸುಭಾಷರೊಡನೆ ಚರ್ಚಿಸಲು ಜಪಾನ್ ಪ್ರಧಾನಿ ಟೋಜೋರಿಂದ ಆಹ್ವಾನ. ರಾಸ್ಬಿಹಾರಿಯವರೊಡನೆ ಸಹಭಾಗಿಯಾಗಲು ನಿಶ್ಚಯ. ಅವರು ಪೂರ್ವ ಏಷ್ಯಾದ ಭಾರತೀಯ ಕ್ರಾಂತಿಕಾರಿಗಳ ಸಮ್ಮೇಳನವನ್ನು ಬ್ಯಾಂಕಾಕ್ ನಲ್ಲಿ ಆಯೋಜಿಸಿದ್ದರು. ಸುಭಾಷರು ತಮ್ಮ ಸಂದೇಶದಲ್ಲಿ “ಜಗತ್ತಿನ ಭಾರತೀಯರೆಲ್ಲ ಒಗ್ಗೂಡಿ ಪರರನ್ನವಲಂಬಿಸದೇ ಸ್ವಾತಂತ್ರ್ಯಯುದ್ಧ ಆರಂಭಿಸುವ ಕಾಲಬಂದಿದೆ’ ಎಂದು ತಿಳಿಸಿದ್ದರು.

ಬ್ರಿಟಿಷರ ಅಪಪ್ರಚಾರಕ್ಕೆ ಬಲಿಯಾಗಿ ಕಾಂಗ್ರೆಸ್ ನವರೂ ತಮ್ಮ ವಿಷಯದಲ್ಲಿ ತಪ್ಪು ತಿಳಿದಿದ್ದು ಸುಭಾಷರಿಗೆ ನೋವುಂಟುಮಾಡಿತ್ತು. ಬಾನುಲಿ ಭಾಷಣದಲ್ಲಿ  ಗುರಿ ಸಾಧನೆಗಾಗಿ ಜರ್ಮನ್-ಇಟಲಿ-ಜಪಾನ್ ಸಹಕಾರ ಕೇಳಿರುವೆ. ಅವರ ಹಸ್ತಕವಲ್ಲ. ಹಿಂದೂಸ್ಥಾನದ ಸ್ವಾತಂತ್ರ ಬಿಟ್ಟು ಬೇರಾವ ಶಬ್ದಗಳೂ ನನಗೆ ಪ್ರಿಯವಲ್ಲ. ಭಾರತ ಸ್ವತಂತ್ರಗೊಂಡ ತಕ್ಷಣವೇ ಮಾತೃಭೂಮಿಯ ಸೇವೆಗೆ ಓಡೋಡಿ ಬರುವೆ ಎಂದು ಸಾರಿದರು.

ತಮ್ಮ ಸ್ವತಂತ್ರ ಹಿಂದೂಸ್ಥಾನ ಕೇಂದ್ರಕ್ಕೆ ಕಾಂಗ್ರೆಸ್ ತಿರಂಗಿ ಧ್ವಜವನ್ನೇ ಆರಿಸಿಕೊಂಡಿದ್ದರು. ಚರಖದ ಬದಲು ಹಾರುವ ಹುಲಿಯ ಚಿತ್ರ ನಿರ್ಧರಿಸಿದ್ದರು. 1943 ಜನವರಿಯಲ್ಲಿ ಪ್ಯಾರಿಸ್ ಗೆ ಹೋಗಿದ್ದರು. ಜಪಾನ್ ಪ್ರಯಾಣ ನಿಶ್ಚಯವಾದುದು ತಿಳಿದು ಬರ್ಲಿನ್ ಗೆ ವಾಪಸ್ಸಾದರು. ಜನವರಿ 26ರಂದು ಭಾರತ ಸ್ವಾತಂತ್ರ ದಿನವನ್ನು 600 ಪ್ರಮುಖ ನಾಗರಿಕರೊಡನೆ ಆಚರಿಸಿದರು. 28ರಂದು ಭಾರತೀಯ ಸೈನಿಕರ ಮುಂದೆ ಕಡೇ ಭಾಷಣ- ಸ್ವತಂತ್ರ ಭಾರತದ ಚರಿತ್ರೆಯಲ್ಲಿ ನಿಮ್ಮ ಹೆಸರು ಸುವರ್ಣಾಕ್ಷರದಲ್ಲಿ ಬರೆಯಲ್ಪಡುವುದು. ಭಾರತ ಪ್ರವೇಶ ನಿಶ್ಚಿತ. ಜೈ ಹಿಂದ್

1943 ಫೆ.8 ಹ್ಯಾಂಬರ್ ಬಂದರಿನಿಂದ ಜಲಾಂತರ್ಗಾಮಿಗೆ ಹಾಸನ್ ರೊಡನೆ ಪ್ರವೇಶಿಸಿ ಜಪಾನ್ಗೆ ಜೂನ್ 13ರಂದು ಪರಿಶ್ರಮದ ಪ್ರಯಾಣದ ನಂತರ ರಾಜಧಾನಿಗೆ ಕಾಲಿಟ್ಟರು. ಈ ದೀರ್ಘ ಅವಧಿಯಲ್ಲಿ ‘ದಿ ಇಂಡಿಯನ್ ಸ್ಟ್ರಗಲ್’ನ ಹೊಸ ಆವೃತ್ತಿ ಸಿದ್ಧಪಡಿಸುತ್ತಿದ್ದರು. ಜಪಾನಿಗೆ ಸುಭಾಷರು ಬಂದುದು ಪೂರ್ವ ಏಷ್ಯಾದಲ್ಲಿ ಭಾರತೀಯರಿಗೆ ರೋಮಾಂಚನ ಉಂಟುಮಾಡಿತು. ಪ್ರಧಾನೀ ಟೋಜೋರೊಂದಿಗೆ ಮಾತುಕತೆಯಲ್ಲಿ ಆಜಾದ್ ಹಿಂದ್ ಸೈನ್ಯವು ಜಪಾನ್ ಸಹಕಾರದಿಂದ ಬ್ರಿಟಿಷರೊಡನೆ ಯುದ್ಧಮಾಡಿ ಆಡಳಿತ ಮಾಡುವುದು” ಎಂದು ಸ್ಪಷ್ಟಪಡಿಸಿದರು. ಜೂನ್ 16ರಂದು ಜಪಾನ್ ಸಂಸತ್ತಿನಲ್ಲಿ ಭಾರತೀಯರ ಪ್ರಯತ್ನಕ್ಕೆ ಬೆಂಬಲವಿದೆ ಎಂದು ಟೋಜೋ ಘೋಷಿಸಿದರು. ರಾಸ್ ಬಿಹಾರಿಯವರು ಈಗಾಗಲೇ ಸ್ಥಾಪಿಸಿದ ಅವರ ದಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಕುರಿತು ನೇತಾಜಿ ತಿಳಿದುಕೊಂಡರು.

ಜೂನ್ 19ರಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯದ ರೂಪುರೇಷೆ ವಿವರಿಸಿದರು. ಪೂರ್ವ ಏಷ್ಯಾದ ಭಾರತೀಯರನ್ನುದ್ದೇಶಿಸಿ ಆಕಾಶವಾಣಿಯ ಮೂಲಕ ಎರಡು ಭಾಷಣ ಮಾಡಿದರು. ಬ್ರಿಟಿಷರ ಮತ್ತು ಕಾಂಗ್ರೆಸ್ ನ ಕೆಲವು ಹಳೆಯ ವಿರೋಧಿಗಳ ಅಪಪ್ರಚಾರಕ್ಕೆ ದೇಶಬಾಂಧವರು ಮೋಸ ಹೋಗಬಾರದೆಂದು ಜೂನ್ 24ರ ತಮ್ಮ ಟೋಕಿಯೋ ಭಾಷಣದಲ್ಲಿ ನನ್ನ ಮೇಲೆ ನಂಬಿಕೆಯಿಡಿ. ಯಾರ ಕುಟಿಲ ಪ್ರಯೋಭನೆಗೂ ಒಳಗಾಗಲಾರೆ. ಬ್ರಿಟಿಷರಿಗೆ ಪೆಟ್ಟು ನೀಡಿದ ದೇಶಗಳ ಸಹಾಯದಿಂದಲೇ ಸ್ವಾತಂತ್ರಗಳಿಸುವನೆಂಬ ಭ್ರಮೆ ನನಗಿಲ್ಲ. ನಮ್ಮ ರಕ್ತಚೆಲ್ಲಿಯೇ ಗಳಿಸುವ-ರಕ್ಷಿಸುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ ಎಂದು ಘೋಷಿಸಿದರು.

ಜುಲೈ 2ರ ಸಿಂಗಾಪುರ ಭೇಟಿ ನೀಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ ಅಧ್ಯಕ್ಷರಾಗಿ ಆಯ್ಕೆಯಾದರು. ಹೀಗೆ ಭಾರತದ ಹೊರಗೆ ಆರಂಭಿತ ಸಶಸ್ತ್ರ ಕ್ರಾಂತಿಯ ಸೇನಾಧಿಪತಿಯಾದರು. ಸೈನಿಕರ ಮೆಚ್ಚಿನ ನೇತಾಜಿಯಾದರು. ಜುಲೈ 5ರಂದು ಆಜಾದ್ ಹಿಂದ್ ಸೈನ್ಯದ ಶಸ್ತ್ರಧಾರಿ ವೀರಯೋಧರನ್ನುದ್ದೇಶಿಸಿ ಚಲೋ ದಿಲ್ಲಿ ಕರೆಕೊಟ್ಟರು. ಅವರ ಸುಪ್ರಸಿದ್ದ ತುಮ್ಮುಝೇ ಖೂನ್ದೋ ಮೈ ತುಝೆ ಆಜಾದ್_ದೂಂಗಾ! (ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ! ಎಂದು ಘರ್ಜನೆ ಮೊಳಗಿದ್ದಿಲ್ಲೇ. ಜುಲೈ 6 ಆಜಾದ್ ಹಿಂದ್ ಸೇನೆಯ 60000 ಸಾವಿರ ಸೈನಿಕರ ಪೆರೇಡ್ ಗೆ ಜಪಾನ್ ಪ್ರಧಾನಿ ಟೋಜೋರರವರೂ ಬಂದಿದ್ದರು.

ಆಗಸ್ಟ್ ನಲ್ಲಿ ಬರ್ಮಾ ಸ್ವಾತಂತ್ರ್ಯೋತ್ಸವಕ್ಕಾಗಿ ರಂಗೂನ್ ಪ್ರಯಾಣ. ನಂತರ ಬ್ಯಾಂಕಾಕ್-ಸೈಹಾನ್ ಗೂ ಭೇಟಿ. ಸೈನ್ಯ ಬಲಪಡಿಸಲಿಕ್ಕಾಗಿ ಚರ್ಚೆ, ಪ್ರಯಾಣ, ಸಭೆ, ಸೈನಿಕರ ಪರೀಕ್ಷೆ, ಸಮಾಲೋಚನೆ, ಭಾಷಣ ಇತ್ಯಾದಿ ದಿನವಿಡೀ ಪರಿಶ್ರಮಿಸಿದರು. ಎಲ್ಲೆಡೆ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ನ ಶಾಖೆ ತೆರೆದರು.

ಜಪಾನ್ ಸೇನೆಯ ಈಶಾನ್ಯ ಭಾರತದ ಇಂಫಾಲ್ ಪ್ರವೇಶ ಸಂದರ್ಭದಲ್ಲಿ ತಮ್ಮ ಸೈನ್ಯಕ್ಕೆ ಅವಕಾಶವಿಲ್ಲವೆಂದು ವಿರೋಧಿಸಿದಾಗ ಇದು ವಿಶ್ವಾಸಘಾತ. ಜಪಾನ್ ಪರಾಕ್ರಮದಿಂದ ಸಿಕ್ಕ ಸ್ವಾತಂತ್ರ್ಯ ಗುಲಾಮಗಿರಿಗಿಂತ ಹೇಯ. ನಮ್ಮ ದೇಶದ ಪ್ರತಿಷ್ಠೆಯ ಪ್ರಶ್ನೆ. ನಮ್ಮ ರಕ್ತಧಾರೆಯಿಂದಲೇ ಸ್ವಾತಂತ್ರ ಹೂವು ಅರಳಬೇಕು” ಎಂದು ಗುಡುಗಿದ್ದರು. ಮಲಯಾದಲ್ಲಿ ಸೈನಿಕರ ಪ್ರಶಿಕ್ಷಣ ಕೇಂದ್ರ ತೆರೆದು 3 ರೆಜಿಮೆಂಟ್ ಸ್ಥಾಪಿಸಿದರು. ಮೊದಲ ರೆಜೆಮೆಂಟ್ ಗೆ ‘ಸುಭಾಷ್ ರೆಜಿಮೆಂಟ್’, ಹುಡುಗರಿಗಾಗಿ ‘ಬಾಲಸೇನಾ’ ಮತ್ತು ಮಹಿಳೆಯರಿಗಾಗಿ ‘ಝಾನ್ಸಿ ರಾಣಿ ರೆಜಿಮೆಂಟ್’ ಎನ್ನಲಾಯಿತು. ‘ಬಹಾದ್ದೂರ್ ಘಟಕ’ ದ ಮೂಲಕ ಶತ್ರುವಿನ ಚಲನವಲನ ತಿಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡರು.

ಬರ್ಮಾ-ಫಿಲಿಫೈನ್ಸ್ ನಂತೆಯೇ ತಮ್ಮ ಸೈನ್ಯಕ್ಕೂ ಸ್ವಾತಂತ್ರ್ಯ ಘೋಷಿಸಿ ಆಶ್ವಾಸನೆ ಪೂರೈಸಲು ಜಪಾನಿಗೆ ಕರೆಯಿತ್ತರು. ಆದರೆ ಕಾಯುತ್ತಾ ಕೂರಲಿಲ್ಲ. ಆಜಾದ್ ಹಿಂದ್ ಸರ್ಕಾರದ ಮಂತ್ರಿ ಮಂಡಲ ರಚಿಸಿದರು.

ಭಗವದ್ಗೀತೆಯನ್ನು ಸದಾ ಅಧ್ಯಯನ ಮಾಡುತ್ತಿದ್ದರು. ಸಾವರ್ಕರ್ ರ 1857ರ ಸ್ವಾತಂತ್ರ ಗ್ರಂಥದ ವಿಶೇಷ ಆವೃತ್ತಿ ಪ್ರಕಟಿಸಿ ಸೇನೆಯ ಉಪಯೋಗಕ್ಕೆ ಮೀಸಲಿಟ್ಟಿದ್ದರು.

1943 ಅಕ್ಟೋಬರ್ 21 ಸಿಂಗಾಪುರದ ಕೆಥೆ ಥಿಯೇಟರ್ ನಲ್ಲಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮಹಾದಂಡಾಧಿಪತಿ ವೇಷದಲ್ಲಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರು ಕುಶಾಲು ತೋಪುಗಳ ಸೆಲ್ಯೂಟ ನಡುವೆ ‘ಆಜಾ಼ದ್ ಹಿಂದ್ ಸರ್ಕಾರ’ ಸ್ಥಾಪನೆಯನ್ನು ಘೋಷಿಸಿದರು-ಪ್ರತಿಜ್ಞೆ ಸ್ವೀಕರಿಸಿದರು. ತಮ್ಮದೇ ನೋಟು ಮುದ್ರಿಸಲು ಟೋಕಿಯೋ ಟಂಕಸಾಲೆಗೆ ಒಪ್ಪಿಸಲಾಯ್ತು. ರಾಷ್ಟ್ರಭಾಷೆ ಹಿಂದುಸ್ಥಾನಿ ಭಾರತದ ಧ್ವಜವಾಗಿ ತ್ರಿವರ್ಣ ಧ್ವಜ, ಪರಸ್ಪರ ವಂದಿಸುವಾಗ ಜೈಹಿಂದ್ ಘೋಷಣೆ… ತೀರ್ಮಾನಿಸಲಾಯ್ತು. ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ BBCಯಲ್ಲಿ ಈ ವಿಷಯ ಪ್ರಮುಖ ಸುದ್ದಿಯಾಗಿ ಬಿತ್ತರಗೊಂಡಿತು. ಸುಭಾಷ್ ಚಂದ್ರ ಬೋಸರು ಆ ಸರ್ಕಾರದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸುಭಾಷರೊಂದಿಗೆ ಸಚಿವ ಸಂಪುಟದ ಸದಸ್ಯರೂ ಸಹಾ ಪ್ರಮಾಣ ವಚನ ಸ್ವೀಕರಿಸಿ ಸುಭಾಷರಿಗೆ ತಮ್ಮ ನಿಷ್ಠೆಯನ್ನು ಘೋಷಿಸುತ್ತಾರೆ.

ರಾಸ್ ಬಿಹಾರಿ ಬೋಸರು ಸರ್ಕಾರದ ಸರ್ವೋಚ್ಛ ಸಲಹೆಗಾರರಾಗಿಯೂ, ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಮಹಿಳಾ ಸಂಘಟನಾ ಮಂತ್ರಿಯಾಗಿಯೂ, ಲೆಫ್ಟಿನೆಂಟ್ ಕರ್ನಲ್ ಚಟರ್ಜಿರವರು ವಿತ್ತ ಸಚಿವರಾಗಿಯೂ, ಮಾಹಿತಿ ಹಾಗೂ ಪ್ರಚಾರ ಖಾತೆ ಸಚಿವರಾಗಿ ಎಸ್. ಎ. ಅಯ್ಯರ್ ರವರೂ, ಸರ್ಕಾರದ ಕಾರ್ಯದರ್ಶಿಯಾಗಿ ಸಹಾಯ್ ರವರೂ, ಕಾನೂನು ಸಲಹೆಗಾರರಾಗಿ ಎ. ಎನ್. ಸರ್ಕಾರ್ ರವರೂ, ಸೇನೆಯ ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರುಗಳೂ ಅಂದು ಸುಭಾಷರೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ‌. ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸುಭಾಷರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಪೂರ್ವ ಏಷ್ಯಾದಲ್ಲಿ ನೆಲೆಸಿದ್ದ ಇಪ್ಪತ್ತು ಲಕ್ಷ ಜನ ಭಾರತೀಯರು ಮತ್ತು 50,000 ಕ್ಕೂ ಹೆಚ್ಚು ಆಜಾದ್ ಹಿಂದ್ ಫೌಜ್ ನ ಸೈನಿಕರು ಸುಭಾಷರನ್ನು ತಮ್ಮ ನಾಯಕನೆಂದು ಸ್ವೀಕರಿಸುತ್ತಾರೆ. ಹೊಸ ಸರ್ಕಾರಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸುತ್ತಾರೆ. ಜನರು ದೇಶದ ಪೂರ್ಣ ಸ್ವಾತಂತ್ರ್ಯಕ್ಕಾಗಿ ತನು ಮನ ಧನಗಳನ್ನು ಅರ್ಪಿಸಲು ಸಿದ್ಧರಾದರೆ, ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯುದ್ಧದಲ್ಲಿ ಪ್ರಾಣ ಕೊಡಲು ಸಿದ್ಧವಿರುವುದಾಗಿ ಪ್ರಮಾಣ ಮಾಡುತ್ತಾರೆ.

ಅಜಾದ್ ಹಿಂದ್ ಸರ್ಕಾರ ರಚನೆಯಾದ ಕೇವಲ ಎರಡೇ ದಿನಗಳಲ್ಲಿ ಜಪಾನ್ ಆ ಸರ್ಕಾರಕ್ಕೆ ಮಾನ್ಯತೆ ನೀಡಿತು. ಕೂಡಲೇ ಜಪಾನ್ ಸೇರಿದಂತೆ ಚೀನಾ,ರಷ್ಯ, ಪ್ರಾನ್ಸ, ಸಿಂಗಪುರ,ಬರ್ಮಾ, ಜರ್ಮನಿ, ಕ್ರೋಷಿಯಾ, ಫಿಲಿಫೈನ್ಸ್, ನಾನ್ ಕಿಂಗ್,ಥೈಲ್ಯಾಂಡ್, ಕ್ರೋವೇಷಿಯಾ, ಸಯಾಂ, ಇಟಲಿ, ಮಾಂಚುಕುವೋನಂಥಾ ರಾಷ್ಟ್ರಗಳು ಆಜಾದ್ ಹಿಂದ್ ಸರ್ಕಾರವನ್ನು ಭಾರತ ಸರ್ಕಾರವೆಂದು ಸುಭಾಷರನ್ನು ಭಾರತದ ಪ್ರಧಾನ ಮಂತ್ರಿಯೆಂದು ಮಾನ್ಯತೆ ನೀಡಿದವು. ಈ ಎಲ್ಲಾ ದೇಶಗಳಲ್ಲೂ ದೂತವಾಸವನ್ನು ಸ್ಥಾಪಿಸಿ, ತನ್ನದೇ ಆದ ಅಂಚೇ ಚೀಟಿ,ಬ್ಯಾಂಕ್, ನ್ಯಾಯಾಂಗ ವ್ಯವಸ್ಥೆ, ಛಾಪಕಾಗದ, ನಾಣ್ಯ ಕರೆನ್ಸಿ ನೋಟುಗಳನ್ನು ಮುದ್ರಿಸಿ ಜೊತೆಗೆ ಜಪಾನ್ ದೇಶಕ್ಕೆ 100ಕೋಟಿ ಎನ್ (ಎನ್. ಜಪಾನ್ ದೇಶದ ಕರೆನ್ಸಿ ಹೆಸರು) ಸಾಲ ನೀಡಿತ್ತು ಆಜಾದ್ ಹಿಂದ್ ಸರ್ಕಾರ!.

ಅಂದು ನೇತಾಜಿ ರವರ ಪ್ರಮಾಣ ವಚನ ಹೀಗಿತ್ತು
ಸುಭಾಷ್ ಚಂದ್ರ ಬೋಸ್ ಎಂಬ ಹೆಸರಿನ ನಾನು ಈಶ್ವರನ ಮೇಲೆ ಆಣೆ ಮಾಡುತ್ತಾ ಶಪಥ ಮಾಡುತ್ತೇನೆ. ಹಿಂದುಸ್ಥಾನ ಮತ್ತು ನನ್ನ ಮೂವತ್ತೆಂಟು ಕೋಟಿ ದೇಶಬಾಂಧವರನ್ನು ದಾಸ್ಯದಿಂದ ಮುಕ್ತಗೊಳಿಸುವುದಕ್ಕಾಗಿ ನನ್ನ ಜೀವನದ ಕೊನೆಯ ಕ್ಷಣದವರೆಗೆ ಸ್ವಾತಂತ್ರ್ಯ ಯುದ್ಧದ ಪುಣ್ಯಜ್ವಾಲೆಯನ್ನು ಪ್ರಜ್ವಲಿಸುತ್ತೇನೆ. ಹಿಂದುಸ್ಥಾನದ ಸೇವಕನಾಗಿ ನನ್ನ ದೇಶಬಾಂಧವರಾದ ಬಂಧು ಭಗಿನಿಯರ ಸೇವೆ ಮಾಡುವುದು ನನ್ನ ಪರಮ ಕರ್ತವ್ಯವೆಂದು ಭಾವಿಸುತ್ತೇನೆ. ಸ್ವಾತಂತ್ರ್ಯ ದೊರೆತ ನಂತರ ದೇಶದ ರಕ್ಷಣೆಗಾಗಿ ನನ್ನ ರಕ್ತದ ಪ್ರತಿ ಹನಿಯನ್ನು ಅರ್ಪಿಸುತ್ತೇನೆ.

ನೇತಾಜಿ ಸುಭಾಷ್ ಚಂದ್ರ ಬೋಸರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವಾಗ ವಾತಾವರಣ ತೀವ್ರ ಭಾವೋತ್ಕರ್ಷದಿಂದ ಕೂಡಿತ್ತು. ದೇಶ ವಿದೇಶಗಳ ಅನೇಕ ಗಣ್ಯರೂ, ಪ್ರತಿನಿಧಿಗಳು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು‌. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಎದ್ದು ನಿಂತು ಒಟ್ಟಾಗಿ ರಾಷ್ಟ್ರಗೀತೆ ಹಾಡಿದರು. ಭಾರತದಲ್ಲಿ ವಾಸಿಸುತ್ತಿದ್ದ ಜನಸಾಮಾನ್ಯರ ಮೇಲೂ ಸಿಂಗಪುರದಲ್ಲಿ ನಡೆದ ಈ ಘಟನೆ ಅತ್ಯಂತ ಮಹತ್ವದ ಪರಿಣಾಮ‌ ಬೀರಿತು. ಸುಭಾಷರ ದನಿಯನ್ನು ರೇಡಿಯೋದಲ್ಲಿ ಕೇಳಿದ ಜನ ಭಾರತವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ನೇತಾಜಿ ಬಂದೇ ಬರುವರೆಂದು ನಂಬಿದರು. ನೇತಾಜಿಯವರ ಪ್ರತಿ ನಡೆ ಪ್ರತಿ ನುಡಿಯೂ ಅವರಿಗೆ ರೋಮಾಂಚನವನ್ನುಂಟು ಮಾಡುತ್ತಿತ್ತು.

ಸುಭಾಷರು ಹೆಸರಿಗೆ ಮಾತ್ರ ಒಂದು ಸರ್ಕಾರ ರಚಿಸಿ ಸುಮ್ಮನೆ ಕೈ ಕಟ್ಟಿ ಕೂರಲಿಲ್ಲ. ಒಂದು ದೇಶಕ್ಕೆ ಮತ್ತು ಜವಾಬ್ದಾರಿಯುತ ಸರ್ಕಾರಕ್ಕೆ ಇರಬೇಕಾದ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಭಾಷೆಯನ್ನು ನಿರ್ಧರಿಸಿದರು. ರಾಷ್ಟ್ರೀಯ ಸೈನ್ಯವನ್ನು ಕಟ್ಟಿ , ವಶಪಡಿಸಿಕೊಂಡ ರಾಜ್ಯಗಳಿಗೆ ರಾಜ್ಯಪಾಲರು, ಆಡಳಿತ ಪ್ರತಿನಿಧಿಗಳು, ಸೈನ್ಯಾಧಿಕಾರಿಗಳು, ಕಮಿಷನರುಗಳು, ಎಲ್ಲರನ್ನೂ ನೇಮಿಸಿದರು.

ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುಭಾಷರು ಕೇವಲ ಎರಡೇ ದಿನಗಳಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾ ದೇಶಗಳ ಮೇಲೆ ಯುದ್ಧ ಘೋಷಿಸಿದರು. ಜಪಾನಿ ಸೈನ್ಯದ ಸಹಕಾರದೊಂದಿಗೆ “ಚಲೋ ದಿಲ್ಲಿ” ಘೋಷಣೆ ಮಾಡಿ, ಬರ್ಮಾ ಮೂಲಕ ಭಾರತದ ಗಡಿಯೊಳಕ್ಕೆ ನುಗ್ಗುತ್ತಾರೆ. ಮಣಿಪುರ ಇಂಫಾಲ್ ಗಳನ್ನು ವಶಪಡಿಸಿಕೊಂಡ ಐ ಎನ್ ಎ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರ ಗೀತೆಯನ್ನು ಹಾಡಿ ಮಾತೃಭೂಮಿಯ ಭೂಭಾಗವನ್ನು ವಿಮೋಚನೆಗೊಳಿಸಿತು. ಸುಭಾಷರು ಯುದ್ಧಭೂಮಿಯ ಮುಂಚೂಣಿಯಲ್ಲಿ ನಿಂತು ಸೈನಿಕರನ್ನು ಹುರಿದುಂಬಿಸಿ ನಮ್ಮ ಪಾಲಿಗೆ ಅಸಾಧ್ಯವೆನಿಸಿದ್ದ ಜಯವನ್ನು ತಮ್ಮ ಪಾಲಿನದನ್ನಾಗಿಸಿಕೊಂಡರು.

ಅಂಡಮಾನ್-ನಿಕೋಬಾರ್ ದ್ವೀಪಗಳು ಸಮುದ್ರ ಯುದ್ಧಕ್ಕೆ ಮಹತ್ವಪೂರ್ಣವಾದುದಾಗಿತ್ತು. ಇದನ್ನು ತಮಗೆ ನೀಡಿದಾಗಲೇ ‘ಸಹಕಾರ’ದ ಮಾತಿಗೆ ನಿಜಾರ್ಥವೆಂದು ಟೋಜೋರಿಗೆ ಸ್ಪಷ್ಟಪಡಿಸಿದರು. ನವೆಂಬರ್ 5ರ ಟೋಕಿಯೋ ಸಮ್ಮೇಳನದಲ್ಲಿ ವೀಕ್ಷಕರಾಗಿ ಭಾಗವಹಿಸಿ ಮಾಡಿದ್ದ ಸುಭಾಷರ ಭಾಷಣದ ಭಾರತ ಸ್ವಾತಂತ್ರ್ಯಗೊಂಡರೆ ಪೂರ್ವ ಏಷ್ಯಾದಲ್ಲಿ ಆಂಗ್ಲೋ-ಅಮೇರಿಕನ್ ಸಾಮ್ರಾಜ್ಯಕ್ಕೆ ಚರಮಗೀತೆ ಹಾಡಿದಂತೆ ಎಂಬ ಸ್ಪಷ್ಟ ನುಡಿಗಳ ಪ್ರಭಾವದಿಂದಾಗಿ ಜಪಾನ್ ಅಧೀನದಲ್ಲಿದ್ದ ಎರಡು ದ್ವೀಪಗಳನ್ನು ಸುಭಾಷರಿಗೆ ಬಿಟ್ಟುಕೊಡಲಾಯಿತು. ತಕ್ಷಣವೇ ‘ಶಹೀದ್’ ಮತ್ತು ಸ್ವರಾಜ್ಯ’ ದ್ವೀಪವೆಂದು ನಾಮಕರಣ ಮಾಡಿದರು. ಡಿಸೆಂಬರ್ 29ರಂದು ಸುಭಾಷರು (ಅಂಡಮಾನ್) ಶಹೀದ್ ದ್ವೀಪಕ್ಕೆ ಭೇಟಿಯಿತ್ತು ಕ್ರಾಂತಿಕಾರರ ವಾಸ್ತವ್ಯದಿಂದ ಪುನೀತವಾದ ಸೆಲ್ಯೂಲರ್ ಜೈಲನ್ನು ಸಂದರ್ಶಿಸಿ ಪುಳಕಿತರಾದರು. ವೀರಸಾವರ್ಕರ್‘ಸೈನಿಕೀಕರಣ’ ಕಾರ್ಯಕ್ರಮದಿಂದಲೇ ತಮ್ಮ ಸೇನೆಗೆ ಸೈನಿಕರು ದೊರೆತದ್ದೆಂದು ತಿಳಿಸಿದರು. ಪೌರಾಡಳಿತವನ್ನು ಆಜಾ಼ದ್ ಹಿಂದ್ ಸರ್ಕಾರದ ಪರವಾಗಿ ನೋಡಿಕೊಳ್ಳಲು ಲೆ.ಕ.ಲೋಕನಾಥನ್ ರನ್ನು ಚೀಫ್ ಕಮೀಷನರ್ ಆಗಿ ನೇಮಿಸಿದರು.

1944 ಮಾರ್ಚ್ 19ರಂದು ಆಜಾದ್ ಹಿಂದ್ ಸೈನ್ಯ ಜಪಾನ್ ಸೇನೆಯೊಡನೆ ಭಾರತದ ಗಡಿ ಪ್ರವೇಶಿಸಿತು. ವರವಾದ ಪ್ರದೇಶಗಳ ಮೇಲೆ ಆಜಾದ್ ಹಿಂದ್ ಸರ್ಕಾರದ ಅಧಿಕಾರವಿರುತ್ತದೆಯೆಂದು’ 2 ದಿನಗಳ ನಂತರ ಜಪಾನ್ ಸಂಸತ್ತಿನಲ್ಲಿ ಟೋಜೋ ಘೋಷಿಸಿದರು. ಏಪ್ರಿಲ್ 7ರಂದು ‘ಇಂಫಾಲ’ ದ ಮೇಲೆ ಯುದ್ಧ ಪ್ರಾರಂಭವಾಯಿತು. ಮೊಯ್ ರಾಂಗ್ ಪ್ರದೇಶವನ್ನು ಮುಕ್ತಗೊಳಿಸಿ INA ಧ್ವಜ ನೆಡಲಾಯಿತು. ಹೀಗೆ ಭಾರತ ನೆಲದಲ್ಲಿ ಮೊದಲ ವಿಜಯ ಪ್ರಾಪ್ತಿಯಾಯಿತು. ಭಾರತ ಭೂಮಿಯ ಮೇಲೆ ಮೊದಲು INA ಸೈನಿಕರ ರಕ್ತ ಚೆಲ್ಲಬೇಕೆಂದೂ, ಸ್ವಾತಂತ್ರ್ಯ ಯುದ್ಧದ ಜನಕರೆಂಬ ಕೀರ್ತಿ ತಮ್ಮದಾಗಬೇಕೆಂಬ ಸುಭಾಷರ ಆಶಯ ಪೂರ್ತಿಯಾಯ್ತು. ಜಪಾನ್ ಜನರಲ್ ಮತಾಗುಚಿಯ ಆತುರದ ಯೋಚನೆಗಳು ಅಡ್ಡಿಯಾಯ್ತು. ದುರ್ಗಮ ಪರ್ವತ ಪ್ರದೇಶ, ಆಹಾರ ಸಾಮಗ್ರಿ-ಸೈನ್ಯ ಸಾಗಾಣಿಕೆಯ ಪರಿಶ್ರಮ, ಸಮೀಪವಿದ್ದ ಮಳೆಗಳ ಇವುಗಳ ಬಗ್ಗೆ ಗಂಭೀರ ಯೋಚನೆಯ ಕೊರತೆಯಿತ್ತು. ಇಂಫಾಲ್-ಕೊಹಿಯಾ ರಸ್ತೆ ಧ್ವಂಸ ಬೇಡ. ಬ್ರಿಟಿಷ್ ಸೈನ್ಯ ಅಲ್ಲೇ ಉಳಿದು ಸಹಾಯ ದೊರೆತಲ್ಲಿ ತಮಗೆ ಅಡ್ಡಿ ಬಂದ ಸುಭಾಷರ ಸಲಹೆಗೆ ಮತಾಗುಚಿ ಕಿವಿಗೊಡಲಿಲ್ಲ. ಬ್ರಿಟಿಷರ ಹತಾಶೆಯ ಮೋಸದ ನುಡಿಗಳಿಗೆ ಮತಾಗುಚಿ ಬಲಿಯಾಗಿದ್ದ.

ಪರಿಸ್ಥಿತಿ ಕಠಿಣವಾಗಿದ್ದರೂ ಸುಭಾಷರ ಸೈನ್ಯ ಮುನ್ನುಗುತ್ತಿತ್ತು. ಆದರೆ 1944 ಜುಲೈ 26ರಂದು ಜಪಾನ್ ಸೋತು ಯುದ್ಧ ನಿಲ್ಲಿಸಿರುವುದಾಗಿ ಘೋಷಿಸಿಬಿಟ್ಟಿತು. ಹವಾಮಾನ ಅನುಕೂಲವಾದಾಗ ಮತ್ತಷ್ಟು ಬಲವಾದ ಸೈನ್ಯ ನಿರ್ಮಿಸಿ ಹೋರಾಡೋಣ ಎಂದು ಆಲೋಚಿಸಿ, ಸೂಕ್ಷ್ಮ ಅವಲೋಕನದಿಂದಾಗಿ ರಷ್ಯಾದ ಸಹಕಾರ ಪಡೆಯಲು ಸುಭಾಷರು ಚಿಂತಿಸಿದರು.

ಕ್ಯಾಪ್ಟನ್ ಇಝುಮಿ (ಜಪಾನ್ ಸೈನ್ಯಾಧಿಕಾರಿ)-‘INA ಸೈನಿಕರ ಪರಾಕ್ರಮ ಚಿರಸ್ಮರಣೀಯವಾದದ್ದು’ ಎಂದು ಬರೆದಿಟ್ಟಿದ್ದಾನೆ.

ನೇತಾಜಿ ಸುಭಾಷರ ಕಡೆಯ ಸಂದೇಶಗಳಲ್ಲಿ INA ಗೆ ‘ನಮ್ಮ ಸೋಲು ತಾತ್ಕಾಲಿಕ. ದಿಲ್ಲಿಗೆ ಹೋಗಲು ಅನೇಕ ಮಾರ್ಗಗಳಿವೆ. ಜಗತ್ತಿನ ಯಾವ ಶಕ್ತಿಯು ಹಿಂದೂಸ್ಥಾನವನ್ನು ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂದು ನಂಬಿ’ ಎಂದು ಕರೆಕೊಟ್ಟು ಸೈನಿಕರನ್ನು ಹುರಿದುಂಬಿಸಿದರು.

ಭಾರತದ ನಿಜ ಸಾಮರ್ಥ್ಯವನ್ನು ಎಚ್ಚರಿಸಿ ಶತ್ರುವಿಗೆ ಅವರ ರೀತಿಯಲ್ಲೇ ಉತ್ತರಿಸಲು ದೇಶದೊಳಗೆ ‘ತಮ್ಮವರದೇ’ ವಿರೋಧವನ್ನು ಎದುರಿಸಿ ಶ್ರಮಿಸಿದ ಸುಭಾಷರ ಪ್ರಯತ್ನಗಳು ನೈಜ ದೇಶಭಕ್ತರಿಗೆ ಅತ್ಯದ್ಭುತವಾಗಿ ಕಂಡುಬರುವುದು ಸಹಜ. ಆದರೆ ಪರಿಸ್ಥಿತಿಗಳು ತಮ್ಮ ಶೌರ್ಯ-ಪರಾಕ್ರಮಕ್ಕೆ ಸಹಕಾರಿಯಾಗಿಲ್ಲವೆಂದರಿತು ವೀರ ಸಾವರ್ಕರ್ ರ ಸಲಹೆಯಂತೆ ಬ್ರಿಟಿಷರ ಕಣ್ತಪ್ಪಿಸಿ, ಅವರ ತಂತ್ರಕ್ಕೆ ಚಳ್ಳೆಹಣ್ಣು ತಿನ್ನಿಸಿ, ರೋಚಕವಾಗಿ ಪಲಾಯನ ಮಾಡಿದ ಸುಭಾಷರ ಶೌರ್ಯಗಾಥೆ. ಯುವಜನಾಂಗಕ್ಕೆ ರೋಮಾಂಚನ ಉಂಟುಮಾಡುವುದು ನಿಶ್ಚಿತ. ಬ್ರಿಟಿಷರನ್ನು ಬಗ್ಗು ಬಡಿಯಲು ವಿವಿಧ ದೇಶಗಳಲ್ಲಿ ಸಂಚರಿಸಿ-ಅಲ್ಲಿನ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟು ಯುದ್ಧ ಕೈದಿಗಳಾಗಿ ಜೈಲಿನಲ್ಲಿದ್ದ-ಅಲ್ಲಲ್ಲಿನ ಸೈನ್ಯದ ಸೇವೆಯಲ್ಲಿದ್ದ ಭಾರತೀಯ ಸೈನಿಕರನ್ನು ಸಂಘಟಿಸಿ, ಆಧುನಿಕ ಸೈನಿಕ ಶಿಕ್ಷಣ ಕೊಟ್ಟು ಆಜಾದ್ ಹಿಂದ್ ಫೌಜ್-Indian National Army ಸ್ಥಾಪಿಸಿದ ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರಯತ್ನದ 75ನೇ ವಾರ್ಷಿಕೋತ್ಸವ ಸ್ಮರಣೆ ಮಾಡಿಕೊಳ್ಳಬೇಕಾದ್ದು ಯುವ ಭಾರತದ ಕರ್ತವ್ಯವಾಗಲಿ. 21 ಅಕ್ಟೋಬರ್ ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪ ದಿನವಾಗಲಿ ಎಂದು ಕಾರ್ಯರೂಪಕ್ಕೆ ತರುವ ಪ್ರಯತ್ನ ಪಡುವ.

ಕನ್ನಡಿಗರಾಗಿ ಹೆಮ್ಮೆ ಪಡಲು ಸಾವಿರಾರು ಸಂಖ್ಯೆಯಲ್ಲಿ ಆಜಾದ್ ಹಿಂದ್ ಸರ್ಕಾರದಲ್ಲಿ ಮತ್ತು ಸೇನೆಯಲ್ಲಿ ಸೇರಿದ್ದರು ಅವರಲ್ಲಿ ಪ್ರಮುಖರಾದ , ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಮಹಿಳಾ ಸಂಘಟನಾ ಮಂತ್ರಿಯಾಗಿಯೂ ಮತ್ತು ಮಹಿಳೆಯರ ಝಾನ್ಸಿ ಸೇನೆಯ ನೇತೃತ್ವವಹಿಸಿದ್ದರು ಹಾಗೂ ಅತ್ತಾವರ ಎಲ್ಲಪ್ಪ ರವರು ನೇತಾಜಿ ಮಾರ್ಗದರ್ಶನದಲ್ಲಿ ಆಜಾದ್ ಹಿಂದ್ ಬ್ಯಾಂಕ್ ಪ್ರಾರಂಭಿಸಿದರು.

ಈಗ ನಾವು ಒಂದು ಪ್ರತಿಜ್ಞೆ ಮಾಡುವ ಇನ್ನೂ ಮುಂದೆ ನಾವೆಲ್ಲ ಒಬ್ಬರಿಗೊಬ್ಬರು ಭೇಟಿಯಾದಾಗ #ಜೈಹಿಂದ್ ಘೋಷಣೆ ಮಾಡುವ.

ಜೈ ಆಜಾದ್ ಹಿಂದ್ ಸರ್ಕಾರ
ಜೈ ನೇತಾಜಿ
ಜೈ ಹಿಂದ್
ವಂದೇಮಾತರಂ

ಇತಿಹಾಸ ಸರಿಯಾಗಿ ತಿಳಿಯದ ಹಲವರು ಕೇವಲ ಗಾಂಧೀ ನೆಹರು ಅವರ ಅಹಿಂಸಾ ಹೋರಾಟದಿಂದ ಮಾತ್ರವೇ ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿತು ಎಂದು ಹೇಳುವಾಗ, ಚಾಪೇಕರ್ ಸಹೋದರರು ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಮದನ್ ಲಾಲ್ ಡಿಂಗ್ರಾ, ವೀರ ಸಾವರ್ಕರ್ ಮುಂತಾದ ಲಕ್ಷಾಂತರ ತ್ಯಾಗ ಬಲಿದಾನಗಳ ಫಲವೇ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ದೊರಕಿದೆ ಎಂಬುದನ್ನು ಎಲ್ಲರಿಗೂ ತಿಳಿಹೇಳೋಣ

ವಂದೇಮಾತರಂ ಸೋಮಶಂಕರ್ ಅವರು ಬರೆದಿರುವ ಈ ಅದ್ಬುತ ಲೇಖನವನ್ನು ಎಲ್ಲರಿಗೂ ತಲುಪುಸುವ ನಿಟ್ಟಿನಿಂದ ನನ್ನ ಬ್ಲಾಗಿನಲ್ಲಿ ಇದನ್ನು ಪ್ರಕಟಿಸಿದ್ದೇನೆ. ಲೇಖನ ಓದಿ ನಿಜವಾದ ಇತಿಹಾಸ ಅರಿತ ನಂತರ ಅದನ್ನು ನಮ್ಮ ಬಂಧು ಮಿತ್ರರಿಗೂ ತಿಳಿಸುವ ಪ್ರಯತ್ನ ಮಾಡೋಣ

ಏನಂತೀರೀ?