# 10, ಜನಪಥ್ ಬಂಗಲೆ

ಈ ಬಂಗಲೆಯ ವಿಳಾಸ ಓದಿದ ಕೂಡಲೇ ಬಹುತೇಕ ಭಾರತೀಯರಿಗೆ ಗೊತ್ತಿರುವ ಸಂಗತಿಯೇನೆಂದರೆ, ಆ ಬಂಗಲೆಯಲ್ಲಿ ಸದ್ಯಕ್ಕೆ ವಾಸಿಸುತ್ತಿರುವವರು, ಅರ್ಹತೆ ಇಲ್ಲದಿದ್ದರೂ, ನಮ್ಮ ಸರ್ಕಾರದಲ್ಲಿ ಯಾವುದೇ ಉನ್ನತ ಹುದ್ದೆ ಹೊಂದಿರದಿದ್ದರೂ, ನಮ್ಮ ದೇಶದ ಅನೇಕ ಆಗುಹೋಗುಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣೀಭೂತರಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಹೌದು ನಿಮ್ಮ ಉಹೆ ಸರಿ. ನಾನೀಗ ಹೇಳ ಹೊರಟಿರುವುದು ನಮ್ಮ ಸರ್ಕಾರದ ಭಾಗವಾಗಿರದ ಕೇವಲ ಸಾಂಸದೆಯಾಗಿರುವ ಸೋನಿಯಾ ಗಾಂಧಿ ಅವರು ಹೇಗೆ ಈ ಬಂಗಲೆಯಲ್ಲಿ ಇನ್ನೂ ವಾಸಿಸುತ್ತಿದ್ದಾರೆ? ಇನ್ನೂ ಆ ಬಂಗಲೆಯನ್ನೇಕೆ ಖಾಲಿ ಮಾಡುತ್ತಿಲ್ಲ?

ನಮ್ಮ ದೇಶದ ದೌರ್ಭಾಗ್ಯ ಎಂದರೆ ದೇಶದ ಯಾವುದೇ ಕಾನೂನು ಕಟ್ಟಲೆಗಳು ಈ ನಕಲೀ ಗಾಂಧಿಗಳಿಗೆ ಅನ್ವಯಿಸುವುದಿಲ್ಲ. ಇಡೀ ದೇಶವೇ ಅವರ ಜಹಾಗೀರು. ನಮ್ಮ ದೇಶಕ್ಕೆ ಸ್ವಾತಂತ್ಯ್ರ ಬಂದಿರುವುದು ಮತ್ತು ಇಷ್ಟು ವರ್ಷ ದೇಶ ಈ ರೀತಿಯಾಗಿ ಇರುವುದು ಕೇವಲ ಅವರ ಕುಟುಂಬದ ತ್ಯಾಗ ಮತ್ತು ಬಲಿದಾನಗಳಿಂದ ಎಂದು ಭಾರತೀಯರನ್ನು ನಂಬಿಸಲಾಗಿರುವುದರಿಂದ, ಇಷ್ಟು ವರ್ಷ ದೇಶದ ಸಂಪತ್ತನ್ನು ಆ ಕುಟುಂಬ ಲೂಟಿ ಹೋಡೆಯುತ್ತಿದೆಯಲ್ಲದೆ ಸರ್ಕಾರೀ ಬಂಗಲೆಗಳನ್ನು ಬಿಡಲು ನಿರಾಕರಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ನಮ್ಮ ದೇಶದಲ್ಲಿ ಸಾಮಾನ್ಯ ಜನರು ಸಣ್ಣದಾಗಿ ಲಂಚ ತೆಗೆದುಕೊಂಡು ಸಿಕ್ಕಿ ಬಿದ್ದಲ್ಲಿ ಅಥವಾ ಕಳ್ಳತನ ಮಾಡಿ ಸಿಕ್ಕಿ ಹಾಗಿಕೊಂಡಲ್ಲಿ ಹತ್ತಾರು ವರ್ಷಗಳವರೆಗೆ ಬೇಲ್ ಪಡೆಯಲೂ ಆಗದೇ ಸರೆಮನೆಯಲ್ಲಿಯೇ ಕಾಯಬೇಕಾಗುತ್ತದೆ. ಅದರೆ, ಹಾಡ ಹಗಲಲ್ಲಿಯೇ ರಾಜಾರೋಷವಾಗಿ ಸಾವಿರಾರು ಕೋಟಿಗಳನ್ನು ಲೂಟಿ ಮಾಡಿದವರಿಗೆ ಕೇವಲ ಎಂಟೇ ನಿಮಿಷಗಳಲ್ಲಿ ಜಾಮೀನು ಪಡೆದು ಧಿಮ್ಮಲೆ ರಂಗಾ ಎಂದು ಓಡಾಡುವುದಲ್ಲದೇ ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ(ಕಳ್ಳನೇ ಪೊಲೀಸರನ್ನು ಬೆದರಿಸಿದಂತೆ) ಎನ್ನುವಂತೆ ತಾಯಿ ಮೌತ್ ಕಾ ಸೌದಾಗರ್ (ಸಾವಿನ ವ್ಯಾಪಾರಿ) ಎಂದರೆ, ಮಗ ಚೌಕೀದಾರ್ ಚೋರ್ ಹೈ ಎಂದು ಪ್ರಾಮಾಣಿಕರಾದ ಪ್ರಧಾನಿ ಮೋದಿಯವರನ್ನು ಮರ್ಯಾದೆ ಇಲ್ಲದೇ ಹಂಗಿಸಲು ಹೋಗಿ ಜನರ ಮುಂದೆ ಮರ್ಯಾದೆ ಕಳೆದುಕೊಳ್ಳುತ್ತಾರೆ.

lk
# 7, ಲೋಕ ಕಲ್ಯಾಣ್ ಮಾರ್ಗದ ಪ್ರಧಾನಿಗಳ ನಿವಾಸ

ನಿಜ ಹೇಳ ಬೇಕೆಂದರೆ #10, ಜನಪಥ್ ಬಂಗಲೆ ಸರ್ಕಾರಿ ಬಂಗಲೆಗಳಲ್ಲಿ ಅತಿದೊಡ್ಡ ಮನೆಗಳಲ್ಲಿ ಒಂದಾಗಿದೆ ಮತ್ತು ಪ್ರಧಾನ ಮಂತ್ರಿಗಳು ವಾಸಿಸುತ್ತಿರುವ ಬಂಗಲೆಗಿಂತಲೂ ದೊಡ್ಡದಾಗಿದೆ. ನಕಲಿಗಾಂಧಿ ಕುಟುಂಬವು ಇದನ್ನು ಕಳೆದ ಮೂರು ದಶಕಗಳಿಂದಲೂ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದರೂ ತಪ್ಪಾಗಲಾರದು. ಈ ನಕಲಿ ಗಾಂಧಿಗಳು ತಮ್ಮನ್ನು ಈ ದೇಶದ ರಾಜರು ಎಂಬ ಭ್ರಮೆಯಲ್ಲಿರುವುದರಿಂದ ಅವರಿಗೆ ಅರ್ಹರಲ್ಲದಿದ್ದರೂ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಒಂದು ಪಕ್ಷ ಸರ್ಕಾರವು ಆಕೆಯನ್ನು ಈ ಬಂಗಲೆಯನ್ನು ಖಾಲಿ ಮಾಡಲು ಕೇಳಿದರೆ, ಅವರ ಪಕ್ಷದ ಹಿಂಬಾಲಕರು ಖಂಡಿತವಾಗಿಯೂ ಒಬ್ಬ ಮಾಜೀ ಪ್ರಧಾನಿಗಳ ಹೆಂಡತಿ,ಮಾಜೀ ಪ್ರಧಾನಿಗಳ ಸೊಸೆಯ ಮೇಲೇ ನಡೆಸುತ್ತಿರುವ ದೌರ್ಜನ್ಯ ಎಂದು ಬೀದಿಗಿಳಿದು ದೊಂಬಿ ಎಬ್ಬಿಸುತ್ತಾರಲ್ಲದೇ ಸಮಾಜದಲ್ಲಿ ಆಕೆಯ ಬಗ್ಗೆ ಅನಾವಸ್ಯಕ ಸಹಾನುಭೂತಿಯುವ ಆಶಾಡಭೂತನ ತೋರುತ್ತಾ ಸಮಸ್ಯೆಯನ್ನು ಸೃಷ್ಟಿಸುತ್ತಾರೆ ಎಂಬ ಆತಂಕದಲ್ಲಿ ಸುಮ್ಮನಿದೆ ಎಂದೆನಿಸುತ್ತದೆ.

ವಾಸ್ತವವಾಗಿ ಈ ಬಂಗಲೆಯನ್ನು ನೆಹರು ಅವರ ನಂತರ ಪ್ರಧಾನ ಮಂತ್ರಿಗಳಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕೊಡಲಾಗಿತ್ತು. ಅವರ ನಂತರ ಹಲವಾರು ಮಂತ್ರಿ ಮಾಗಧರ ನಿವಾಸವಾಗಿ ಎಂಭತ್ತರ ದಶಕದಲ್ಲಿ ಸಫ್ದರ್ಜಂಗ್ ನಿವಾಸದಲ್ಲಿ ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ನಂತರ ಅರ್ಹತೆ ಇಲ್ಲದಿದ್ದರೂ ಅಚಾನಕ್ಕಾಗಿ ಪ್ರಧಾನಿಯಾದ ಶ್ರೀ ರಾಜೀವ್ ಗಾಂಧಿಯವರಿಗೆ 10, ನೇ ಜನಪಥ ಬಂಗಲೆಯನ್ನು ನೀಡಲಾಯಿತು. ಆದರೆ ರಾಜೀವ್ ಗಾಂಧಿಯವರು ಈ ಬಂಗಲೆಯಲ್ಲಿರಲು ಇಚ್ಚಿಸದೇ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಉಳಿಯಲು ನಿರ್ಧರಿಸಿದ ಕಾರಣ ಈ ಈ 10, ಜನಪಥ್ ಬಂಗಲೆಯನ್ನು ಪಕ್ಷದ ಕೆಲಸಗಳಿಗಾಗಿ ಮತ್ತು ಸಭೆಗಳಿಗಾಗಿ ಬಳಸಿಕೊಳ್ಳಲಾರಂಭಿಸಿದ್ದರಿಂದ ಈ ಜನಪಥ್ ಬಂಗಲೆ ರಾಜೀವ್ ಗಾಂಧಿ ಅವರ ಹೆಸರಲ್ಲೇ ಉಳಿಯಿತು. ರಾಜೀವ್ ಅಧಿಕಾರ ಕಳೆದುಕೊಂಡು ವಿ ಪಿ ಸಿಂಗ್ ಸರಕಾರ ಬಂದರೂ ಸಹಾ , 10, ನೇ ಜನಪಥ್ ಬಂಗಲೆಯನ್ನು ರಾಜೀವ್ ಗಾಂಧಿಯ ಹೆಸರಿನಲ್ಲೇ ಉಳಿಸಿ, 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಬಂಗಲೆಯನ್ನು ಪ್ರಧಾನ ಮಂತ್ರಿಯ ಅಧಿಕೃತ ನಿವಾಸವನ್ನಾಗಿ ಮಾಡಲಾಯಿತು.

ಅಧಿಕಾರವನ್ನು ಕಳೆದುಕೊಂಡ ಬಹುತೇಕರು ಕೆಲವೇ ಸಮಯದಲ್ಲಿ ಸರ್ಕಾರೀ ಬಂಗಲಿಯನ್ನು ಖಾಲಿ ಮಾಡುತ್ತಾರಾದರೂ, ಪ್ರಧಾನಮಂತ್ರಿಗಳಿಗೆಂದೇ ಮೀಸಲಾಗಿದ್ದ ಜನಪಥ್ ಬಂಗಲೆ ಅನಧಿಕೃತವಾಗಿ ನಕಲೀ ಗಾಂಧಿಗಳ ಪಾಲಾಯಿತು. ಯಾವ ಲೆಕ್ಕದಲ್ಲಿಯೂ ನೋಡಿದರೂ ಸೋನಿಯಾ ಗಾಂಧಿ ಆ ಬಂಗಲೆಯನ್ನು ಬಳಸಲು ಅರ್ಹತೆಯೇ ಇಲ್ಲವಾದರೂ ಸಹ, ಅದೆಷ್ಟೋ ದಶಕಗಳಿಂದ ಆಕೆಯನ್ನು ಯಾರೂ ಸಹ ಪ್ರಶ್ನಿಸದಿರುವುದು ದುರಂತವೋ?, ಆಡಳಿತ ಪಕ್ಷದವರು ತೋರಿದ ಉದಾರತೆಯೋ? ಅಥವಾ ಹೊಂದಾಣಿಕೆ ರಾಜಕೀಯವೋ? ಒಟ್ಟಿನಲ್ಲಿ ಸೋನಿಯಾ ಗಾಂಧಿ ಮಾತ್ರ ಆ ಬಂಗಲೆಯನ್ನು ಬಿಟ್ಟು ಹೊರಡಲಿಲ್ಲ! ರಾಜೀವ್ ಗಾಂಧಿ ಹೆಸರಿನಲ್ಲಿಯೇ ಉಳಿದಿದ್ದ ಆ ಬಂಗಲ್ಲಿದ್ದ ಆಕೆ ಯಾವುದೇ ಆಂತರಿಕ ಚುನಾವಣೆಯೂ ಇಲ್ಲದೇ, ರಾಜೀವ್ ಗಾಂಧಿಯವರ ಪತ್ನಿ ಎಂಬ ಸಹಾನುಭೂತಿಯಡಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನೇರಿದನಂತರ ಪತಿಯ ಹೆಸರು ಹೇಳುತ್ತಲೇ ಜನಪಥ್ ಬಂಗಲೆಯಲ್ಲಿಯೇ ಉಳಿದು ಬಿಟ್ಟರು. ನಂತರ ಆವರದ್ದೇ ಕಾಂಗ್ರೇಸ್ ಸರ್ಕಾರ ಬಂದ ಮೇಲಂತೂ ಆಕೆಯನ್ನು ಕೇಳುವ ಧೈರ್ಯ ಯಾರಿಗೂ ಬರಲೇ ಇಲ್ಲ. ಆ ಮನೆಯ ಅಂಗಳದಲ್ಲಿ ರಾಜೀವ್ ಗಾಂಧಿಯ ಪಾರ್ಥೀವ ಶವವನ್ನು ಇಡಲಾಗಿತ್ತು ಎಂಬ ಒಂದೇ ಒಂದು ಭಾವನಾತ್ಮಕ ಕಾರಣವೂ ಇದರ ಹಿಂದೆ ಕೆಲಸ ಮಾಡಿರಬಹುದೇನೋ?

sonia

ಹೋಗಲೀ ಪಾಪಾ ಸೋನಿಯಾ ಗಾಂಧಿ ಪತಿಯನ್ನು ಕಳೆದುಕೊಂಡ ಒಬ್ಬಂಟಿ ಹೆಣ್ಣು ಮಗಳು. ವಿಧವೆ. ಎಂಬೆಲ್ಲ ಉದಾರತೆಯಿಂದ ಆ ಬಂಗಲೆಯಲ್ಲಿಯೇ ಉಳಿಯಲು ಅವಕಾಶ ಕೊಟ್ಟಿರ ಬಹುದು ಎಂದು ಕೊಂಡರೆ, 2004 ರಲ್ಲಿ ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಆಯ್ಕೆಯಾದಾಗ ಆತನಿಗೂ ಸಹ ಒಬ್ಬ ಸಂಸದನಿಗಿಂತ ಹೆಚ್ಚಿನದೇ ಕಿಮ್ಮತ್ತಿನ ದೊಡ್ಡ ಬಂಗಲೆಯೊಂದನ್ನು ನೀಡಲಾಯಿತು. ಸರಿ ಅವರಿಬ್ಬರೂ ಜನರಿಂದ ಆಯ್ಕೆಯಾದ ಸಾಂಸದರು ಎಂದು ಪರಿಗಣಿಸೋಣ. ಆದರೆ, ಕೇವಲ ಸೋನಿಯಾಳ ಮಗಳು ಮತ್ತು ಅಳಿಯನೆಂಬ ಕಾರಣಕ್ಕಾಗಿ ಸುರಕ್ಷತೆ ಮತ್ತು ಭಧ್ರತೆಯ ನೆಪವೊಡ್ದಿ ಪ್ರಿಯಾಂಕ ಮತ್ತು ಆಕೆಯ ಪತಿ ರಾಬರ್ಟ್ ವಾದ್ರಾನಿಗೆ ದೆಹಲಿಯ ಹೃದಯ ಭಾಗದಲ್ಲಿರುವ ಸರಕಾರದ ಉನ್ನತ ಹುದ್ದೆಗಳಲ್ಲಿರುವವರಿಗೆ ಮಾತ್ರವೇ ಇರುವಂತಹ ಬಂಗಲೆಯನ್ನು ನೀಡಲಾಯಿತು. ಆ ಕುಟುಂಬದ ದಾಸ್ಯತನಕ್ಕೇ ಒಗ್ಗಿಹೋಗಿರುವ ಅಂದಿನ ಕಾಂಗ್ರೇಸ್ ಸರ್ಕಾರದ ಯಾರಿಗೂ ಇದು ಯಾವ ಪುರುಷಾರ್ಥಕ್ಕೆ ಕೊಟ್ಟಿರಿ ಸ್ವಾಮಿ? ಎಂದು ಕೇಳುವ ಪೌರುಷವನ್ನು ತೋರದಿರುವುದು ಗುಲಾಮೀತನದ ಪರಮಾವಧಿ ಎಂದರೂ ತಪ್ಪಾಗಲಾರದು.

jp1

ಈ ಬಂಗಲೆಗಳ ಬಾಡಿಗೆಯನ್ನು ಅಲ್ಲಿ ಉಳಿಯುವ ರಾಜಕಾರಣಿಗಳು ಕಟ್ಟುವುದಿಲ್ಲ. ಈ ಬಂಗಲೆಗಳು ಸಾಮಾನ್ಯ ಬಂಗಲೆಗಳಾಗಿರದೇ ಐಷಾರಾಮಿ ಬಂಗಲೆಗಳು. 6 – 7 ಶಯನಗೃಹಗಳು! ಸಭಾಂಗಣಗಳು, ಜಿಮ್ ಮತ್ತು ಮನೋರಂಜನೆಯ ಸೌಕರ್ಯಗಳು, ಬೃಹತ್ತಾದ ಲಾನು, ಮತ್ತು ಅದೆಷ್ಟೋ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ! ಬಂಗಲೆಗಳಲ್ಲಿ ಕೆಲಸ ಮಾಡುವ ಮಾಲಿಯಿಂದ ಹಿಡಿದು, ಬಾಣಸಿಗನವರೆಗೂ ಸಹ ಸರಕಾರವೇ ಸಂಬಳವನ್ನು ಭರಿಸುತ್ತವೆ! ಈ ಪ್ರತೀ ಬಂಗಲೆಯ ಬಾಡಿಗೆ 5 ಲಕ್ಷಕ್ಕಿಂತ ಹೆಚ್ಚು ಮತ್ತು, ವರ್ಷದ ನಿರ್ವಹಣಾ ವೆಚ್ಚವೊಂದು 30 – 30 ಲಕ್ಷಕ್ಕೂ ಜಾಸ್ತಿ. ಈಗ ಊಹಿಸಿಕೊಳ್ಳಿ ಕೇವಲ ನಾಲ್ಕು ಜನರಿರುವ ಒಂದು ಕುಟುಂಬಕ್ಕಾಗಿ ಮೂರು ಉಚಿತ ಐಷಾರಾಮಿ ಬಂಗಲೆಗಳು ಮತ್ತು ಅದರ ನಿರ್ವಣೆಗಾಗಿ ಪ್ರಜೆಗಳು ಬೆವರು ಸುರಿಸಿ ಕಟ್ಟಿದ ಕೋಟ್ಯಾಂತರ ತೆರಿಗೆ ಹಣ ಖರ್ಚಾಗುತ್ತಿದೆ.

vad

ಈ ಕಾಂಗ್ರೆಸ್ ಸರ್ಕಾರದ ಬೇಕಾ ಬಿಟ್ಟಿ ವ್ಯವಹಾರ ಇಲ್ಲಿಗೇ ಮುಗಿಯಿತೆಂದು ಕೊಳ್ಳಬೇಡಿ. ಸ್ವಲ್ಪ ಹೃದಯ ಗಟ್ಟಿ ಮಾಡಿಕೊಂಡು ಮುಂದಿನದ್ದನ್ನು ಓದಿ. ಹತ್ತು ವರ್ಷಗಳ UPA 1 & 2 ಆಡಳಿತಾವಧಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಭೂಹಗರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿರುವ, ಯಾವ ದಿಕ್ಕಿನಲ್ಲಿ ನೋಡಿದರೂ ರಾಜಕೀಯಕ್ಕೆ ಸಂಬಂಧಿಸಿರದ, ಕೇವಲ ಸೋನಿಯಾ ಗಾಂಧಿ ಅಳಿಯನಾದ ರಾಬರ್ಟ್ ವಾದ್ರಾನ ತಾಯಿಯಾದ ಮೌರೀನ್ ವಾದ್ರಾಳಿಗೂ ಸಹ ಸರ್ಕಾರಿ ಬಂಗಲೆಯನ್ನು ಉಚಿತವಾಗಿ ನೀಡಿದ್ದಲ್ಲದೇ, ಆಕೆಗೆಗೂ ಸಹಾ ಗುಪ್ತವಾಗಿ ಭದ್ರತೆಯನ್ನೂ ಒದಗಿಸಿತ್ತು! ಆಕೆ ನಕಲೀ ಗಾಂಧಿಗಳ ಹತ್ತಿರದ ಸಂಬಂಧಿತ ವ್ಯಕ್ತಿ ಎಂಬ ಉದ್ದೇಶ ಮಾತ್ರಕ್ಕೇ ಆಕೆಗೆ ಸಕಲ ಸರಕಾರೀ ಸೌಲಭ್ಯವನ್ನು ನೀಡಲಾಗಿತ್ತು!

ಕಾಂಗ್ರೇಸ್ ಪಕ್ಷದ ಬಂಗಲೇ ರಾಜಕಾರಣ ಇಲ್ಲಿಗೇ ಮುಗಿಯುವುದಿಲ್ಲ. ಸರ್ವೋಚ್ಛ ನ್ಯಾಯಾಲಯ ಕಾಂಗ್ರೆಸ್ ಕಚೇರಿಗೆ ಹೊಸ ಭೂಮಿಯನ್ನು ಘೋಷಿಸಿ, ಸದ್ಯಕ್ಕೆ ಅಕ್ಬರ್ ರಸ್ತೆಯಲ್ಲಿರುವ ತನ್ನ ಹೆಚ್ಚುವರಿ ಕಚೇರಿಯನ್ನು ಆರು ವರ್ಷದ ಹಿಂದೆಯೇ ಬಿಟ್ಟು ಕೊಡಬೇಕು ಎಂದು ಆದೇಶಿಸಿದ್ದರೂ, ಇವತ್ತಿನವರೆಗೂ ಅಕ್ಬರ್ ರಸ್ತೆಯಲ್ಲಿರುವ ಆ ಬಂಗಲೆಯೂ ಸಹ ಇನ್ನೂ ಕಾಂಗ್ರೆಸ್ಸಿನ ಅಧೀನದಲ್ಲಿದೆ. ಆರು ವರ್ಷಗಳಾದರೂ ಸಹ ಕಚೇರಿಯನ್ನು ಬಿಟ್ಟು ಕೊಡದೇ ಆ ಬಂಗಲೆಯನ್ನೂ ತನ್ನ ಸುಪರ್ದಿಗೆ ಶಾಶ್ವತವಾಗಿ ತೆಗೆದುಕೊಳ್ಳುವ ಹುನ್ನಾರ ತೆರೆಮರೆಯಲ್ಲಿ ನಡೆಸಿದೆ.

ಇದಷ್ಟೇ ಅಲ್ಲದೇ, ಕಾಂಗ್ರೇಸ್ಸಿನ ಪರವಾಗಿದ್ದ ಅನೇಕ ಬುದ್ಧಿ ಜೀವಿಗಳಿಗೆ ಮತ್ತು ಪತ್ರಕರ್ತರಿಗೂ ಸಹಾ ಅಂದಿನ ಸರ್ಕಾರ ಅನೇಕ ಬಂಗಲೆಗಳನ್ನು ಉಚಿತವಾಗಿ ನೀಡಿತ್ತು. ಯಾವಾಗ ಮೋದಿ ಸರಕಾರ ಮೊದಲಬಾರಿಗೆ ಅಸ್ತಿತ್ವಕ್ಕೆ ಬಂದಿತೋ, ಆಗ ಮಂತ್ರಿಗಳಾಗಿದ್ದ ವೆಂಕಯ್ಯನಾಯ್ಡುರವರು ಇಂತಹ ಅದೆಷ್ಟೋ ಜನರನ್ನು ಬಂಗಲೆಯಿಂದ ಹೊರ ಹಾಕಿದಾಗ ದೆಹಲಿಯಲ್ಲಿ ಕೆಲ ಕಾಲ ದೊಂಬಿ ಎಬ್ಬಿಸಿ ನಂತರ ತಣ್ಣಗಾಯಿತು.

jp1

ಕಟ್ಟ ಕಡೆಗೆ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ, ಸರ್ಕಾರದ ಯಾವುದೇ ಉನ್ನತ ಹುದ್ದೆಯಲ್ಲಿರದ ಸೋನಿಯಾ ಗಾಂಧಿ ಅದು ಹೇಗೆ ಇಂದಿಗೂ 10 ನೇ ಜನಪಥ್ ನಿವಾಸದಲ್ಲಿ ವಾಸಿಸುತ್ತಿದ್ದಾರೇ? ಉಳಿದ 542 ಸಂಸತ್ ಸದಸ್ಯರಿಗೆ ನೀಡಲಾಗಿರುವ ಬಂಗಲೆಯೊಂದನ್ನೇ ಆಕೆಗೆ ಮತ್ತು ಆಕೆಯ ಮಗನಿಗೆ ನೀಡಬಹುದಲ್ಲವೇ? ಸುಮ್ಮನೆ ಸದ್ದಿಲ್ಲದೇ ತೆರಿಯನ್ನಂತೂ ನಾವು ಕಟ್ಟುತ್ತಿದ್ದೇವೆ ಆದೆರೇ ಈ ಸರ್ಕಾರಿ ಬಂಗಲೇ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಏನಂತೀರೀ?

ನಕಲಿ ಗಾಂಧಿಗಳ ಪ್ರಮುಖ ಹಗರಣಗಳು

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅನೇಕ ಕ್ರಾಂತಿಕಾರಿಗಳ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ಗೆದ್ದಲು ಶ್ರಮವಹಿಸಿ ಕಟ್ಟಿದ ಹುತ್ತದಲ್ಲಿ ಹಾವು ಸೇರಿಕೊಳ್ಳುವಂತೆ ಅಂದಿನ ಬಹುತೇಕ ಕಾಂಗ್ರೇಸ್ ನಾಯಕರ ವಿರೋಧದ ನಡುವೆಯೂ ಮಹಾತ್ಮಾಗಾಂಧಿಯವರ ಮೇಲೆ ಒತ್ತಡ ಹೇರಿದ ನೆಹರು ಸ್ವತ್ರಂತ್ರ್ಯ ಭಾರತದ ಪ್ರಪ್ರಥಮ ಪ್ರಧಾನಿಯಾದದ್ದು ಈಗ ಇತಿಹಾಸ. ಸ್ವತಂತ್ರ್ಯ ಬಂದಾಗಲಿಂದಲೂ ತೊಂಬತ್ತರ ದಶಕದವರೆಗೂ ನೆಹರೂ ಕುಟುಂಬವೇ ನಕಲಿ ಗಾಂಧಿ ಹೆಸರಿನಲ್ಲಿ ಅಧಿಕಾರವನ್ನು ಅನುಭವಿಸಿ ನಂತರ ಮೂರು ಅವಧಿಗಳಲ್ಲಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಹಿಂಬದಿಯ ಆಡಳಿತ ನಡೆಸಿ ದೇಶವನ್ನು ಕೊಳ್ಳೆ ಹೊಡೆದದ್ದು ಎಲ್ಲರಿಗೂ ತಿಳಿದ ವಿಷಯ. ಹಗರಣ ಮತ್ತು ಕಾಂಗ್ರೇಸ್ ಎರಡೂ ಒಂದು ರೀತಿಯ ಸಮಾನಾಂತರ ಅರ್ಥಬರುವ ಪದಗಳು ಎಂದರೂ ತಪ್ಪಾಗಲಾರದು. ಈ ದೇಶದಲ್ಲಿ ನಡೆದ ಹಗರಣಗಳಲ್ಲಿ ನೆಹರು ಮತ್ತವರ ನಕಲೀ  ಗಾಂಧೀ ಕುಟುಂಬದ ಕೈವಾಡವನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ಮುಂಡ್ರಾ ಹಗರಣ – 1951

cong8ಕಲ್ಕತ್ತಾದ ಕೈಗಾರಿಕೋದ್ಯಮಿ ಹರಿದಾಸ್ ಮುಂಡ್ರಾ ಪ್ರಕರಣ ಸ್ವತಂತ್ರ ಭಾರತದಲ್ಲಿ ಬೆಳಕಿಗೆ ಬಂದ ಮೊತ್ತ ಮೊದಲ ದೊಡ್ಡ ಹಗರಣವೆಂದು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಈ ಹಗರಣದಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರೂ ಅವರ ಕೈವಾಡವಿತ್ತು ಎಂದೂ ನಂಬಲಾಗಿದೆ. ಎಲ್‌ಐಸಿ ಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ಒಂದು ಕೋಟಿಗೂ ಅಧಿಕ ಹಣವನ್ನು ಸರ್ಕಾರ ಮುಂದ್ರಾ ಒಡೆತನದ ಖಾಸಗೀ ಕಂಪೆನಿಯ ಷೇರುಗಳನ್ನು ಅವುಗಳ ಮೌಲ್ಯಕ್ಕಿಂತ ಹೆಚ್ಚಿಗೆ ಹಣ ಪಾವತಿಸಿ ಕೊಂಡು ಕೊಳ್ಳುವ ಮೂಲಕ ಎಲ್‌ಐಸಿಗೆ ಅಂದಿನ ಕಾಲದಲ್ಲಿಯೇ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿತ್ತು. ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಅಳಿಯ ಮತ್ತು ಮಾಜೀ ಪ್ರಧಾನಿ ಇಂದಿರಾ ಗಾಂಧಿಯವರ ಪತಿಯಾಗಿದ್ದ ಫಿರೋಜ್ ಗಾಂಧಿಯವರೇ ಈ ಪ್ರಕರಣವನ್ನು ಬಹಿರಂಗಪಡಿಸಿದರು. ನೆಹರೂ ಬಲಗೈ ಭಂಟರಾಗಿದ್ದ ಅಂದಿನ ಹಣಕಾಸು ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರ ಹೆಸರು ಈ ಪ್ರಕರಣದ ಕಳಂಕಿತರಲ್ಲಿ ಪ್ರಮುಖವಾಗಿ ಕೇಳಿಬಂದ ಕಾರಣ ನೆಹರು ಅವರು ಈ ಪ್ರಕರಣವನ್ನು ಬಹಳ ಗೌಪ್ಯವಾಗಿ ವ್ಯವಹರಿಸಲು ಬಯಸಿದ್ದರಾದರೂ ಅದು ಫಲಕಾರಿಯಾಗದೇ ಅಂತಿಮವಾಗಿ ಟಿ.ಟಿ.ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡುವುದರ ಮೂಲಕ ಆ ಪ್ರಕರಣ ಹಳ್ಳ ಹಿಡಿಯಿತು.

ನಾಗರ್ವಾಲಾ ಹಗರಣ – 1971

cong7ಮಾಜಿ ಸೇನಾ ನಾಯಕ ರುಸ್ತೋಮ್ ಸೊಹ್ರಾಬ್ ನಗರ್ವಾಲಾ, ಹೊಸದಿಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್‍ನಲ್ಲಿರುವ ಬೃಹತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮೇ 24, 1971 ರಂದು ಶ್ರೀಮತಿ ಇಂದಿರಾ ಗಾಂಧಿಯವರ ಕಚೇರಿಯಿಂದ ಕರೆಮಾಡಿ ಬಾಂಗ್ಲಾದೇಶದ ಮಿಷನ್‍ಗಾಗಿ, ನಮಗೆ ಅಗತ್ಯವಾಗಿ 60 ಲಕ್ಷ ರೂಪಾಯಿ ಬೇಕಾಗಿದೆ. ಹಾಗಾಗಿ ನೀವು ಈ ಕೂಡಲೇ ರಹಸ್ಯವಾಗಿ ಅಷ್ಟು ಹಣವನ್ನು ಪ್ರಧಾನ ಮಂತ್ರಿಗಳ ಮನೆಗೆ ತಲುಪಿಸಬೇಕು ಎಂದು ಮುಖ್ಯ ಕ್ಯಾಷಿಯರ್ ಪ್ರಕಾಶ್ ಮಲ್ಹೋತ್ರಾರವರಿಗೆ ತಿಳಿಸುತ್ತಾರೆ. ಪ್ರಧಾನ ಮಂತ್ರಿಗಳ ಆದೇಶದಂತೆ 60 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡ ಹೋದ ಕ್ಯಾಷಿಯರ್ ಪ್ರಕಾಶ್ ಮಲ್ಹೋತ್ರಾ ಅಂದಿನಿಂದ ಇಂದಿನವರೆಗೂ ನಾಪತ್ತೆಯಾಗುತ್ತಾರೆ.

ಈ ಪ್ರಕರಣದಲ್ಲಿ 60 ಲಕ್ಷ ದೋಚಿದ್ದಾರೆ ಎಂದು ಆರೋಪಿಸಿ ನಾಗವಾಲ್‍ನನ್ನು ಬಂಧಿಸಿ ತಿಹಾರ್ ಜೈಲಿಗೆ ಹಾಕಿ, ನಂತರ ಆತನಿಗೆ ಆರೋಗ್ಯದ ಸಮಸ್ಯೆಯ ನೆಪವೊಡ್ಡಿ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಿ ಮಾರ್ಚ್ 2 ರಂದು ಆತ ಮರಣ ಹೊಂದುತ್ತಾನೆ.ಆದೇ ರೀತಿ ನವೆಂಬರ್ 20, 1971 ರಂದು ಆ ತನಿಖೆಯ ನೇತೃತ್ವ ವಹಿಸಿದ್ದ ಯುವ ಪೆÇಲೀಸ್ ಅಧಿಕಾರಿ ಕಶ್ಯಪ್, ಮಧುಚಂದ್ರಕ್ಕೆ ಹೋಗುತ್ತಿರುವಾಗ ಕಾರು ಅಪಘಾತದಲ್ಲಿ ನಿಗೂಢವಾಗಿ ಮರಣ ಹೊಂದುತ್ತಾರೆ. ಆದಲ್ಲದೇ ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಗಳೂ ಒಂದಲ್ಲಾ ಒಂದಿ ರೀತಿಯಾಗಿ ನಿಗೂಢವಾಗಿ ಸಾವನ್ನಪ್ಪುವ ಮೂಲಕ ಈ ಹಗರಣ ಅಂತ್ಯಕಾಣದೇ ಹೋಗುತ್ತದೆ.

ಮಾರುತಿ ಹಗರಣ – 1973

cong4ಇಂದಿರಾಗಾಂಧಿಯವರ ಎರಡನೆಯ ಮಗ ಸಂಜಯ್ ಗಾಂಧಿ ಯಾವುದೇ ಕೆಲಸವಿಲ್ಲದೆ ಅಂಡುಪಿರ್ಕಿಯಾಗಿ ಅಲೆಯುತ್ತಿದ್ದಾಗ ಆತನಿಗೆ ಒಂದು ನೆಲೆ ಕೊಡಲು ಪ್ರಾರಂಭಿಸಿದ ಮಾರುತಿ ಕಾರು ಕಂಪನಿ ಅರಂಭವಾಗುವ ಮೊದಲೇ, ಹಗರಣವಾಗಿ ಅದರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಂಪೂರ್ಣ ಕುಟುಂಬ ಭಾಗಿಯಾಗಿದೆ ಎಂದು ಕುಖ್ಯಾತವಾಯಿತು. ಕೇವಲ 25,000 ರೂಪಾಯಿಗಳಿಗೆ 1973 ರಲ್ಲಿ ಸಂಜಯ್ ಗಾಂಧಿಯವರು ನಾಲ್ಕು ಜನ ಪ್ರಯಾಣಿಕರ ಕಾರು ನಿರ್ಮಿಸಲು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಪರವಾನಗಿ ಕೊಟ್ಟಿದ್ದನ್ನು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ವಿರೋಧಿಸಿದ್ದಾಗ ಭಾವನಾತ್ಮಕ ಅಂಶಗಳ ಭಾಷಣ ಮಾಡಿ ಇಂದಿರಾ ಎಲ್ಲರ ಬಾಯಿ ಮುಚ್ಚಿಸಿದ್ದರು. ವಾಹನಗಳ ಕುರಿತಂತೆ ಯಾವುದೇ ತಾಂತ್ರಿಕ ಅರ್ಹತೆಗಳು ಇಲ್ಲದಿದ್ದರೂ, ಇನ್ನೂ ಭಾರತೀಯ ನಾಗರೀಕತೆಯನ್ನು ಹೊಂದಿರದ ಇಂದಿರಾಗಾಂಧಿಯವರ ಹಿರಿಯ ವಿದೇಶೀ ಸೊಸೆ ಸೋನಿಯಾ ಗಾಂಧಿಯನ್ನು ಮಾರುತಿ ಟೆಕ್ನಿಕಲ್ ಸರ್ವೀಸಸ್ ಪ್ರೈ ಲಿಮಿಟೆಡ್ ಕಂಪನಿಯ ಎಂಡಿಯನ್ನಾಗಿ ಮಾಡಲಾಗಿತ್ತು. ತೆರಿಗೆಗಳು, ನಿಧಿಗಳು ಮತ್ತು ಭೂಮಿಗೆ ಸಂಬಂಧಿಸಿದಂತೆ ಆ ಕಂಪನಿಯು ಇಂದಿರಾ ಸರ್ಕಾರದಿಂದ ಅನೇಕ ವಿನಾಯಿತಿಗಳನ್ನು ಪಡೆಯಿತಾದರೂ ಒಂದೇ ಒಂದು ಕಾರನ್ನು ತಯಾರಿಸಲು ಸಾಧ್ಯವಾಗದೇ ಆ ಕಂಪನಿಯನ್ನು 1977 ರಲ್ಲಿ ನಿಲ್ಲಿಸಲಾಯಿತು. ಅಷ್ಟರಲ್ಲಾಗಲೇ ಆ ಕಂಪನಿಯ ಸ್ವತ್ತಲ್ಲವೂ ಅವರ ಖಾಸತಿ ಒಡೆತನಕ್ಕೆ ಬಂದು ಅದನ್ನು ಮುಂದೆ ಜಪಾನ್ ಸಹಯೋಗದಲ್ಲಿ ಆರಂಭವಾದ ಮಾರುತಿ ಉದ್ಯೋಗ್ ಕಂಪನಿಗೆ ಕೋಟ್ಯಾಂತರ ರೂಪಾಯಿಗಳಿಗೆ ಮಾರಿಕೊಂಡರು.

ಬೋಫೋರ್ಸ್ ಹಗರಣ – 1990-2014

cong3ಈ ಹಗರಣವು ರಾಜೀವ್ ಗಾಂಧಿ ಅವರ ಕುಟುಂಬವನ್ನು ಬಿಟ್ಟು ಬಿಡದೇ 1990ರ ದಶಕದಲ್ಲಿ ಕಾಡಿದ್ದಲ್ಲದೇ, ರಸ್ತೆ ರಸ್ತೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಗಲೀ ಗಲೀಮೇ ಶೋರ್ ಹೈ ರಾಜೀವ್ ಗಾಂಧಿ ಚೋರ್ ಹೈ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ Mr.Clean ವ್ಯಕ್ತಿತ್ವವನ್ನು ತೀವ್ರವಾಗಿ ಆಘಾತಗೊಳಿಸಿತು. ರಾಜೀವ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರಿಗೆ ಸ್ವೀಡಿಷ್ ಫಿರಂಗಿ ತಯಾರಕ ಬೋಫೋರ್ಸ್ 64 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಿರುವ ಪರಿಣಾಮವಾಗಿಯೇ ಭಾರತೀಯ ಸೇನೆಯಲ್ಲಿ ಬೋಫೋರ್ಸ್ ಕಂಪನಿಯ 155 ಎಂಎಂ ಹೊವಿಟ್ಜರ್ ಬಂದೂಕುಗಳನ್ನು ಖರೀಧಿಸಲಾಗಿತ್ತು. ಈ ಪ್ರಕರಣದಲ್ಲಿ ಇಟಲಿಯ ಉದ್ಯಮಿ ಮತ್ತು ಗಾಂಧಿ ಕುಟುಂಬಕ್ಕೆ ಹತ್ತಿರವಾದ ಒಟ್ಟಾವಿಯೊ ಕ್ವಾಟ್ರೊಚಿ ಮೂಲಕ ಅಪಾರವಾದ ಲಂಚ ಸಂದಾಯವಾಗಿತ್ತು ಎಂಬುದು ಮನೆಮಾತಾಗಿತ್ತು.

ನ್ಯಾಷನಲ್ ಹೆರಾಲ್ಡ್ ಕೇಸ್ -2011

cong9ಅಸೋಸಿಯೇಟೆಡ್ ಜರ್ನಲ್ಸ್(ಎಜಿಎಲ್) ಸಂಸ್ಥೆಯನ್ನು ಜವಹಾರ್ ಲಾಲ್ ನೆಹರು ಅವರು 1937ರ ನವೆಂಬರ್ 20 ರಂದು 5 ಸಾವಿರ ಸ್ವಾತಂತ್ರ್ಯ ಹೋರಾಟಗಾರರ ಸಹಕಾರದಿಂದ ಈ ಸಾರ್ವಜನಿಕ ಕಂಪೆನಿ ಸ್ಥಾಪಿಸಿ ಉರ್ದು ಆವೃತ್ತಿಯ ಕ್ವಾಮಿ ಆವಾಜ್ ಹಾಗೂ ಇಂಗ್ಲಿಷ್ ಆವೃತ್ತಿಯ ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗಳನ್ನು ಆರಂಭಿಸಿದ್ದಲ್ಲದೇ, ನವದೆಹಲಿ, ಲಕ್ನೋ, ಭೋಪಾಲ್, ಮುಂಬೈ, ಇಂದೋರ್ ನಗರದಲ್ಲಿ ಪತ್ರಿಕಾ ಕಛೇರಿಗೆ ಸರ್ಕಾರದ ವತಿಯಿಂದ ಜಮೀನು ಮಂಜೂರು ಮಾಡಿಸಿಕೊಂಡಿದ್ದಲ್ಲದೇ ಈ ಸಂಸ್ಥೆಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿತ್ತು.

90ರ ದಶಕದಲ್ಲಿ ಈ ಎಜೆಎಲ್ ಸಂಸ್ಥೆಗೆ ಕಾಂಗ್ರೆಸ್ ಪಕ್ಷದ ನಿಧಿಯಿಂದ 90 ಕೋಟಿ ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ನಂತರ 2011ರಲ್ಲಿ ಆ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂಬ ಎಜೆಎಲ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಮೋತಿ ಲಾಲ್ ವೋರಾ ಅವರ ಹೇಳಿಕೆಯನ್ಚಯ ಆ ಸಾಲವನ್ನು ಮನ್ನಾಮಾಡಿ ಎಜೆಎಲ್ ಸಂಸ್ಥೆಯ ಸಮಸ್ಥ ಆಸ್ತಿಯನ್ನು ರಾಹುಲ್ ಗಾಂಧಿ, ಸೋನಿಯಾಗಾಂಧಿ ಮೋತಿಲಾಲ್ ವೋರಾ ಸುಮನ್ ದುಬೆ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಸಹಭಾಗಿತ್ವದಲ್ಲಿದ್ದ ಯಂಗ್ ಇಂಡಿಯನ್ ಸಂಸ್ಥೆಗೆ ವರ್ಗಾಯಿಸಲಾಯಿತು. ಸ್ವತಂತ್ರ್ಯ ಸೇನಾನಿಗಳ ದೇಣಿಗೆಯಿಂದ ಆರಂಭವಾದ ಎಜೆಎಲ್ ಸಂಸ್ಥೆಯ ಸದ್ಯದ ಸ್ವತ್ತುಗಳ ಮೌಲ್ಯ 5 ಸಾವಿರ ಕೋಟಿಗೂ ಅಧಿಕ ಮೌಲ್ಯದ ಹಣ ಅತ್ಯಂತ ಸುಲಭವಾಗಿ ನಕಲೀ ಗಾಂಧಿಗಳು ಕೈ ವಶ ಮಾಡಿಕೊಂಡಿದ್ದರ ವಿರುದ್ಧವಾಗಿ ಸುಬ್ರಹ್ಮಣ್ಯ ಸ್ವಾಮಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸದ್ಯಕ್ಕೆ ಸೋನಿಯಾ ಮತ್ತು ರಾಹುಲ್ ಇಂದಿಗೂ ಬೇಲ್ ಮೇಲೆ ಹೊರಗಡೆ ತಿರುಗಾಡುತ್ತಿದ್ದಾರೆ.

ವಾದ್ರಾ-ಡಿಎಲ್ಎಫ್ ಹಗರಣ – 2012

cong10ಸೋನಿಯಾಗಾಂಧಿಯವರ ಪುತ್ರಿ ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ಅವರ ರಿಯಲ್ ಎಸ್ಟೇಟ್ ವ್ಯವಹಾರದ ಹಗರಣಗಳು ನೂರಾರು. ಅದರಲ್ಲಿ ಪ್ರಮುಖವಾದದ್ದು ಎಂದರೆ ಹರ್ಯಾಣದ ಕಾಂಗ್ರೇಸ್ ಸರ್ಕಾರದ ಭೂಪಿಂದರ್ ಹೂಡಾ ಸರಕಾರದಿಂದ ವಾದ್ರಾ ಅವರ ಸ್ಕೈ ಲೈಟ್‌ ಹಾಸ್ಪಿಟಾಲಿಟಿ ಸಂಸ್ಥೆ, ಗುರ್ಗಾಂವ್‌ನ ಮನೆಸರದಲ್ಲಿ 3.5 ಎಕರೆ ಭೂಮಿಯನ್ನು ಕೇವಲ ಕೇವಲ 15 ಕೋಟಿಗೆ ಖರೀದಿಸಿ ನಂತರ ಹೂಡಾ ಸರ್ಕಾರದ ಭೂ ಬಳಕೆ ಬದಲಾವಣೆ (ಸಿಎಲ್‌ಯು) ಹಾಗೂ ಇತರ ಅನುಮತಿ ಪಡೆದ ನಂತರ 2008ರಲ್ಲಿ ಡಿಎಲ್‌ಎಫ್‌ ಕಂಪನಿಗೆ ಭೂಮಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿತ್ತು.  ಗುರ್ಗಾಂವ್‌ನ ಶಿಕೋಪುರ್‌ನಲ್ಲಿ ವಿವಾದಿತ ಭೂಮಿಗೆ ವಾದ್ರಾ ಅನುಮತಿ ಪಡೆದ ಸಂದರ್ಭದಲ್ಲಿ ಅವರ ಸ್ಕೈಲೈಟ್‌ ಹಾಸ್ಪಿಟಾಲಿಟಿ ಸಂಸ್ಥೆ ರಾಜ್ಯದಲ್ಲಿ ನಿಗದಿ ಪಡಿಸಿರುವ ಮಿತಿಗಿಂತ ಹೆಚ್ಚು ಭೂಮಿಯನ್ನು ಹೊಂದಿತ್ತು ಎಂದು ಹರಿಯಾಣಾ ಸರಕಾರದ ಹಿರಿಯ ಅಧಿಕಾರಿಗಳು ನಡೆಸಿದ್ದ ಮತ್ತೊಂದು ತನಿಖೆಯಿಂದಲೂ ತಿಳಿದುಬಂದಿದೆ.

ಇದಲ್ಲದೇ ರಾಬರ್ಟ್ ವಾದ್ರಾ ಅವರು ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್‌ನಿಂದ 65 ಕೋಟಿ ಬಡ್ಡಿರಹಿತ ಸಾಲವನ್ನು ತೆಗೆದುಕೊಂಡಿದ್ದಾರೆ ಈ ರೀತಿ ಡಿಎಲ್ಎಫ್ ಕಂಪನಿ ಬಡ್ಡಿ ರಹಿತ ಹಣವನ್ನು ಕೊಟ್ಟಿರುವ ಹಿಂದೆಯೂ ರಾಜಕೀಯ ಲಾಭಗಳನ್ನು ಪಡೆಯುವ ಉದ್ದೇಶ ಇದೆ ಎನ್ನುವ ಆರೋಪದಡಿಯಲ್ಲಿ ದಾವೆ ಹೂಡಲಾಯಿತಾದರೂ ಹೂಡಾ ಸರ್ಕಾರ ಈ ಎಲ್ಲಾ ಭೂಹಗರಣಗಳಲ್ಲಿಯೂ ಕ್ಲೀನ್ ಚಿಟ್ ನೀಡಿತಾದರೂ ಸದ್ಯದ ಸರ್ಕಾರ ಈ ತನಿಖೆಯನ್ನು ಪುನರ್ ಆರಂಭಿಸಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಚಾಪರ್ ಹಗರಣ – 2013

cong22013 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಿಐಪಿಗಳ ಪ್ರಯಾಣಕ್ಕಾಗಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಪ್ರಪಂ‍ಚದ ದೊಡ್ಡ ದೊಡ್ಡ ಸಂಸ್ಥೆಗಳ ಜೊತೆ ವ್ಯವಹಾರ ನಡೆಸುತಿದ್ದಾಗ ಅಂದಿನ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಇಟಾಲಿಯನ್ ಚಾಪರ್ ಕಂಪನಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದಲೇ 36 ಬಿಲಿಯನ್ ರೂಪಾಯಿ ಮೌಲ್ಯದ ಒಪ್ಪಂದದಡಿಯಲ್ಲಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವಂತೆ ಒಪ್ಪಂದ ಮಾಡಿಕೊಳ್ಳಲಾಯಿತು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಗೆ ಸಹಕರಿಸಲೆಂದೇ 6000 ಅಡಿಗಳಷ್ಟು ಎತ್ತರದಲ್ಲಿ ಹಾರಬೇಕಾಗಿದ್ದ ಹೆಲಿಕ್ಯಾಪ್ಟರ್ ಬದಲಾಗಿ ಕೇವಲ 4500 ಅಡಿಗಳ ಎತ್ತರ ಹಾರುವ ಸಾಮಥ್ಯವಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಖರೀದಿಸಿದ್ದರ ಹಿಂದೆ ಸಾಕಷ್ಟು ಲಂಚದ ಹಣದ ಅವ್ಯವಹಾರ ನಡೆದಿದೆ ಮತ್ತು ಈ ವಿಐಪಿ ಚಾಪರ್ ಖರೀದಿಯ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಇಟಲಿಯ ನ್ಯಾಯಾಲಯದಲ್ಲಿ 2008 ರ ಮಾರ್ಚ್ 15 ರಂದು ಬರೆದ ಟಿಪ್ಪಣಿ ಸೂಚಿಸಿದೆ.

cong_family2ಹೀಗೆ ಹೇಳುತ್ತಾ ಹೋದರೇ ಇಂತಹ ನೂರಾರು ಹಗರಣಗಳನ್ನು ನೆಹರು ಕುಟುಂಬ ಮತ್ತು ಕಾಂಗ್ರೇಸ್ಸಿಗರು ನಡೆಸಿದ ಪರಿಣಾಮವಾಗಿಯೇ ಭಾರತದೇಶ ಈ ರೀತಿಯಲ್ಲಿದೆ ಎಂದರೆ ತಪ್ಪಾಗಲಾರದು. ಇಷ್ಟೆಲ್ಲಾ ಹಗರಣಗಳ ತಮ್ಮ ಮೂಗಿನಡಿಯಲ್ಲಿಯೇ ನಡೆದಿದ್ದರೂ ತಾನು ಕಳ್ಳ ಪರರ ನಂಬ ಎನ್ನುವಂತೆ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿತೋರಿಸುತ್ತಿರುವ ಕಾಂಗ್ರೇಸ್ಸಿಗರಿಗೆ ನಿಜವಾಗಿಯೂ ನೈತಿಕ ಹಕ್ಕಿದೆಯೇ ?  ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ

ಏನಂತೀರೀ?

ಅರ್ನಾಬ್ ಗೋಸ್ವಾಮಿ V/S ಸೋನಿಯಾ ಗಾಂಧಿ

ಕಳೆದ ತಿಂಗಳು ಏಪ್ರಿಲ್ 16 2020 ರಂದು, ಸೂರತ್‌ನಲ್ಲಿ ತಮ್ಮ ಗುರು ಶ್ರೀ ಮಹಂತ್ ರಾಮ್‌ಗಿರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಜುನಾ ಅಖಾರ ಸಾಧುಗಳಾದ ಚಿಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ (70 ವರ್ಷ) ಮತ್ತು ಸುಶೀಲ್ ಗಿರಿ ಮಹಾರಾಜ್ (35 ವರ್ಷ) ಈ ಇಬ್ಬರು ಸ್ವಾಮಿಗಳು ಕಾರಿನಲ್ಲಿ ನಿಲೇಶ್ ತೆಲ್ಗಡೆ (30 ವರ್ಷದ) ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದಾಗ, ಉದ್ರಿಕ್ತ ಗುಂಪೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಮೂವರನ್ನೂ ಪೋಲೀಸರ ಸಮ್ಮುಖದಲ್ಲೇ ಬರ್ಬರವಾಗಿ ಹತ್ಯೆಮಾಡಿತು. ದೇಶಾದ್ಯಂತದ ಕರೋನ ವೈರಸ್ ಲಾಕ್ ಡೌನ್ ಸಮಯದಲ್ಲಿ ಈ ಪ್ರದೇಶದಲ್ಲಿ ಮಕ್ಕಳ ಕಳ್ಳರು ಓಡಾಡುತ್ತಿದ್ದಾರೆ ಎಂಬ ಎಂಬ ವಾಟ್ಸಾಪ್ ವದಂತಿ ಈ ಘಟನೆ ಕಾರಣವಾಗಿದೆ ಎಂದು ತಿಪ್ಪೇ ಸಾರಿಸಲು ಪ್ರಯತ್ನಿಸಲಾಯಿತಾದರೂ ಇದರ ಹಿಂದೆ ಒಂದು ದೊಡ್ಡ ಸಂಘಟನೆಯ ಕೈವಾಡವಿದೆ ಎಂದು ಅನೇಕರು  ಅರೋಪ ಮಾಡಿದ ಕಾರಣ ಈ ಘಟನೆಯ ಸಂಬಂಧ ಈಗಾಗಲೇ ಪೊಲೀಸರು 100 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿರುವುದಲ್ಲದೇ ತನಿಖೆಯನ್ನೂ ನಡೆಸುತ್ತಿದ್ದಾರೆ.

arnab3ದೇಶದ ಯಾವುದೇ ಮೂಲೆಯಲ್ಲಿ ಇದಕ್ಕಿಂತಲೂ ಸಣ್ಣ ಘಟನೆಗಳು ನಡೆದಲ್ಲಿ ಕೂಡಲೇ ಅಲ್ಲಿಗೆ ತೆರಳುವ ಗಂಜೀಗಿರಾಕಿಗಳು, ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ವಿರೋಧ ಪಕ್ಷವಾದ ಕಾಂಗ್ರೇಸ್ ಪಕ್ಷ ಈ ಘಟನೆಯ ಕುರಿತಾಗಿ ಒಂದು ಚೂರೂ ಸೊಲ್ಲೆತ್ತದ್ದನ್ನು ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ಅವರು ತಮ್ಮ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಕಠುವಾಗಿ ಟೀಕಿಸಿದ್ದಲ್ಲದೇ, ದೇಶದ ಯಾವುದೇ ಮೂಲೆಯಲ್ಲಿ ಇಂತಹ ಘಟನೆ ನೆಡೆದಲ್ಲಿ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂಬು ಬ್ಬೊಬ್ಬಿರಿವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮದೇ ಸಮ್ಮಿಶ್ರಸರ್ಕಾರ ನಡೆಸುತ್ತಿರುವ ಮಹಾರಾಷ್ಟ್ರದಲ್ಲಿ ಇಂತಹ ಬರ್ಬರ ಘಟನೆಯಾದಾಗ ಸುಮ್ಮನಿರುವುದು ಏಕೆ? ಇಟಲೀ ಮೂಲದ ರೋಮನ್ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾದ ಸೋನೀಯಾ ಆಂಟೋನಿಯೋ ಮೈನೋ ಅವರಿಗೆ ಹಿಂದೂ ಸ್ವಾಮಿಗಳ ಹತ್ಯೆಯಾದಲ್ಲಿ ಮನಸ್ಸು ಕರಗುವುದಿಲ್ಲವೇ ಎಂದು ಸೋನಿಯಾ ಗಾಂಧಿಯವರ ಮೂಲ ಹೆಸರನ್ನು ತಮ್ಮ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.

ಸೋನಿಯಾ ವಿದೇಶದಲ್ಲಿ ಹುಟ್ಟಿ ಭಾರತೀಯರನ್ನು ಮದುವೆಯಾಗಿ, ಸೊಸೆಯ ಮೂಲಕ ಭಾರತಕ್ಕೆ ಬಂದು 14 ವರ್ಷಗಳಾದ ನಂತರ ಭಾರತದ ಪೌರತ್ವ ಪಡೆದ ವಿದೇಶೀ ಮಹಿಳೆ ಎಂಬುದು ಭಾರತದ ಪ್ರತಿಯೊಬ್ಬ ಪ್ರಜೆಗೂ ತಿಳಿದಿರುವ ಸತ್ಯ. ಆದರೆ ಇದೇ ಸತ್ಯವನ್ನು ಸಾರ್ವಜನಿಕವಾಗಿ ತಿಳಿಸಿದರೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಅದೇಕೋ ಮುನಿಸು. ಕೇವಲ ಸೋನಿಯಾ ಅವರ ಮೂಲ ಹೆಸರನ್ನು ಹೇಳಿದ್ದನ್ನೇ ಮುಂದಿಟ್ಟುಕೊಂಡು ಮಾರನೇಯ ದಿನವೇ ದೇಶಾದ್ಯಂತ ಸುಮಾರು 200ಕ್ಕೂ ಅಧಿಕ ದೂರುಗಳು ದಾಖಲಾದವು. ಮತ್ತು ಇನ್ನೂ ಅತಿರೇಕದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಾಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಅರ್ಣಾಬ್ ಮತ್ತು ಅವರ ಪತ್ನಿಯ ಮೇಲೆ ಕೆಲ ಗೂಂಡಾಗಳು ಧಾಳಿ ನಡೆಸಿದದ್ದು ಅಕ್ಷಮ್ಯ ಆಪರಾಧವೇ ಸರಿ,

ಅವರ ಮೇಲೆ ಹಲ್ಲೆ ಮಾಡಿದ ಗೂಂಡಾಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ಸ್ಥಳೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದು ತಮ್ಮ ಮುಖಂಡರ ಆಣತಿಯ ಮೇರೆಗೆ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡರು. ಇದು ಕೇವಲ ಒಂದಿಬ್ಬರು ಗೂಂಡಾಗಳ ಮನಸ್ಥಿತಿಯಲ್ಲದೇ ಇಡೀ ಕಾಂಗ್ರೇಸ್ ಕಾರ್ಯಕರ್ತರ ಮನಸ್ಥಿತಿಯಾಗಿದೆ. ಈ ಹಲ್ಲೆಯ ಒಂದು ದಿನ ಮೊದಲು ಛತ್ತೀಸ್ ಘಡ್ ಮುಖ್ಯಮಂತ್ರಿಯೂ ಸಹಾ ಇದೇ ರೀತಿಯ ಧಮ್ಕಿಯನ್ನು ಹಾಕಿ ಈ ಜನ ಸಮೂಹ ಮಾಡಿದ ಹತ್ಯೆಯ ವಿಷಯವನ್ನು ಕೈಬಿಡದಿದ್ದರೆ ಬಾರೀ ಫಲವನ್ನು ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಇದೆಲ್ಲಾ ನೋಡಿದಲ್ಲಿ ತಮ್ಮ ಅಧಿನಾಯಕಿಯ ಓಲೈಕೆಗಾಗಿ ಕಾಂಗ್ರೇಸ್ಸಿಗರು ಎಂತಹ ಘನ ಘೋರ ಅಪರಾಧಕ್ಕೂ ಕೈಹಾಕುತ್ತಾರೆ ಎಂಬುದು ತಿಳಿದು ಬರುತ್ತದೆ.

arnab2ನಿಜವಾಗಿಯೂ ನೋಡಿದಲ್ಲಿ, ಅರ್ನಾಬ್ ಕೇಳಿದ್ದ ಪ್ರಶ್ನೆಯೇನೂ ಅಂತಹ ಗಂಭೀರವಾಗಿರಲಿಲ್ಲ. ಅವರ ಮೇಲೆ ಈ ರೀತಿಯ ಹಲ್ಲೆ ಮಾಡುವಂತಹ ಅಪರಾಧವೇನೂ ಆಗಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಜನಸಮೂಹ ಹಲ್ಲೆ ನಡೆದಾಗಲೆಲ್ಲಾ ಅಮ್ಮಾ ಮತ್ತು ಮಗ ಇತರ ಪಕ್ಷಗಳನ್ನೇ ದೂಷಿಸುತ್ತಾ ಅದನ್ನು ತೀವ್ರವಾಗಿ ಖಂಡಿಸುತ್ತಾ ಒಂದು ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಸುತ್ತಿದ್ದವರು ಈಗ ಏಕಾಏಕಿ ತಮ್ಮ ಪಕ್ಷದ ಸಮ್ಮಿಶ್ರ ಸರ್ಕಾರ ಇರುವ ರಾಜ್ಯದಲ್ಲೇ ಇಂತಹ ಘನ ಘೋರ ಹತ್ಯೆ ನಡೆದಾಗ, ಸೋನಿಯಾ ಸಹಿತವಾಗಿ ಯಾವುದೇ ಕಾಂಗ್ರೆಸ್ ಮುಖಂಡರೂ ಒಂದು ಸಾಂತ್ವನ ಹೇಳದಿದ್ದದ್ದು ಎಲ್ಲರನ್ನು ಕೆರಳಿಸಿದ್ದಂತೂ ಸುಳ್ಳಲ್ಲ. ಸಾಧುಗಳ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿ ಪೊಲೀಸರು ಇದ್ದರೂ ಅವರಿಂದ ಧಾಳಿಕೋರರನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು ನೆಡೆದಿರಲಿಲ್ಲ ಎಂಬುದು ವೈರಲ್ ಆದ ವೀಡೀಯೋಗಳಲ್ಲಿ ಸ್ಪಷ್ಟವಾಗಿ ನೊಡಿದ್ದ ಜನ ಇದು ಅಮಾಯಕರರ ಕೃತ್ಯವಲ್ಲ ಇದೊಂದು ಪೂರ್ವಯೋಜಿತ ದಾಳಿ ಎಂಬುದು ಅರಿವಾಗುತ್ತದೆ. ಅದಕ್ಕಾಗಿಯೇ ಅರ್ನಾಬ್ ವಿಷಯವನ್ನು ಕೈಬಿಡಬೇಕೆಂದು ಕಾಂಗ್ರೇಸ್ ಮುಖಂಡರು ಒತ್ತಾಯಿಸುತ್ತಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ ಅಲ್ಲವೇ?

  • ಕಾಂಗ್ರೇಸ್ ಮುಖಂಡರು ಸಲ್ಲಿಸಿದ ದೂರಿನನ್ವಯ ಅರ್ನಾಬ್ ಗೋಸ್ವಾಮಿಯವರನ್ನು ಠಾಣೆಗೆ ಕರೆಸಿ ಸುಮಾರು 9 ಗಂಟೆಗಳ ವಿಚಾರಣೆಯನ್ನು ಮಾಡಿರುವ ಹಿನ್ನಲೆಯೇನು? ಆ ವಿಚಾರಣಾ ಸಂದರ್ಭದಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎನ್ನುವುದು ನಮ್ಮ ಗಮನಕ್ಕೆ ಬಂದಿಲ್ಲದಿದ್ದರೂ, ಸೋನೀಯಾ ಅವರ ಮೂಲ ಹೆಸರನ್ನು ಹೇಳಿದ್ದಕ್ಕೆ 9 ಗಂಟೆಗಳಷ್ಟು ವಿಚಾರಣೆಯ ಅಗತ್ಯವಿತ್ತೇ? ಅಥವಾ ಸಮ್ಮಿಶ್ರ ಸರ್ಕಾರವೂ ಸಹಾ ಪೋಲೀಸರ ಮೇಲೆ ತಮ್ಮ ಪ್ರಭಾವ ಬಳೆಸಿ ತಮ್ಮ ಅಧಿನಾಯಕಿಯನ್ನು ಸುಪ್ರೀತಗೊಳಿಸಲು ಪ್ರಯತ್ನಿಸಿದರೇ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.
  • ನಿಜವಾಗಿಯೂ ತೀವ್ರತರದಲ್ಲಿ ತನಿಖೆ ನಡೆಸಬೇಕಾಗಿದ್ದದ್ದು ಪಾಲ್ಘರ್ ಗಲಭೆಯ ಹತ್ಯಾಕೋರರು ಮತ್ತು ಅವರ ಹಿಂದಿರುರುವ ಶಕ್ತಿಗಳು ಮತ್ತು ಅರ್ಣಾಬ್ ಮೇಲಿನ ಧಾಳಿ ಕೋರರ ಹಿಂದಿರುವ ನಿಜವಾದ ವ್ಯಕ್ತಿಗಳ ಬಗ್ಗೆ ಅಲ್ಲವೇ?
  • ಆದರೆ ಪೋಲೀಸರು ಇವೆರಡನ್ನೂ ಬಿಟ್ಟು ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಳೆದಂತೆ ವಿಷಯಾಂತರ ಮಾಡಲು ಅರ್ಣಾಬ್ ಅವರನ್ನು ಪ್ರಶ್ನಿಸಿರಬಹುದಲ್ಲದೇ?
  • ದೇಶದಲ್ಲಿ ಪ್ರತೀ ದಿನ ನೂರಾರು ಸುಳ್ಳು ಆಪಾದನೆಗಳನ್ನೇ ಬ್ರೇಕಿಂಗ್ ನ್ಯೂಸ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡುವ ಅದೆಷ್ಟೋ ಪತ್ರಕರ್ತರು ಧಿಮ್ಮಾಲೆ ರಂಗಾ ಎಂದು ಓಡಾಡುತ್ತಿರುವಾಗ ಸೋನಿಯಾ ಮೂಲ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ 9 ಗಂಟೆಗಳ ತನಿಖೆಯ ಅಗತ್ಯವಿತ್ತೇ?
  • ತನಿಖೆ ನಡೆದು ಸುಮಾರು ಎರಡು ವಾರಗಳಾದರೂ ಈ ಬಗ್ಗೆ ಯಾವುದೇ ದೋಷಾರೋಪಣೆ ಪಟ್ಟಿಯಾಗಲೀ ಅಥವಾ ವಿಷಯಗಳಾಗಲೀ ಹೊರಬಾರದಿರುವುದು ಸಹಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆಯಲ್ಲವೇ?
  • ಕಾನೂನು ಎಂದ ಮೇಲೇ ಅದು ಇಡೀ ದೇಶಕ್ಕೇ ಅನ್ಚಯವಾಗುವುದೇ ಹೊರತು ಕಾಂಗ್ರೇಸ್ ಆಡಳಿತ ರಾಜ್ಯಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂಬ ಯಾವುದೇ ನಿಯಮಗಳು ಇಲ್ಲ ಅಲ್ಲವೇ?
  • ಭಾರತೀಯ ಪ್ರಜೆ ಎಂದ ಮೇಲೆ ಕಾನೂನು ಎಲ್ಲರಿಗೂ ಒಂದೇ, ಸೋನಿಯಾ ಗಾಂಧಿಯವರೂ ಅದಕ್ಕೆ ಅತೀತರಲ್ಲ ಅಲ್ಲವೇ ?

ಪ್ರಸ್ತುತ ಕೋವಿಡ್ ಲಾಕ್ ಡೌನ್ ಪರಿಸ್ಥಿತಿಯಲ್ಲಿ, ಮತ್ತು ಮುಂಬೈನ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ, ಪಕ್ಷದ ಅಧ್ಯಕ್ಷರೊಬ್ಬರ ಬಗ್ಗೆ ಕೇವಲ ವಿಚಾರಣೆಗಾಗಿ 9 ರಿಂದ 10 ಗಂಟೆಗಳ ಕಾಲ ಪೊಲೀಸ್ ವ್ಯಕ್ತಿಗಳ ಸಮಯವನ್ನು ವ್ಯರ್ಥ ಮಾಡುವುದು ಸರ್ಕಾರ ಮತ್ತು ಪೊಲೀಸರ ಕಡೆಯಿಂದ ಸಂಪೂರ್ಣವಾಗಿ ಕರ್ತವ್ಯ ಲೋಪ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸಾವಿರಾರು ಜನರ ಜೀವಗಳನ್ನು ಉಳಿಸುವ ಮತ್ತು ಪಾಲ್ಘಾರ್ ಹತ್ಯೆಕೋರ ವಿಚಾರಣೆ ನಡೆಸುವ ಬದಲು ಸಮ್ಮಿಶ್ರ ಪಾಲುದಾರರ ಅಧ್ಯಕ್ಷರ ಓಲೈಕೆಯೇ ರಾಜ್ಯ ಸರ್ಕಾರದ ಆದ್ಯತೆಯಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವೇ ಹೌದು.

ಏನಂತೀರೀ?

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕಾಂಗ್ರೇಸ್ ಮತ್ತು ನೆಹರು ಕುಟುಂಬದ ಭವಿಷ್ಯ ಏನು?

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕ್ರಾಂಗ್ರೇಸ್ ಮತ್ತು ನೆಹರು ಕುಟುಂಬದ ಭವಿಷ್ಯ ಭಯಾನಕವಾಗಿದೆ ಮತ್ತು ಮುಂದಿನ ದಿನಗಳಲ್ಲಿ, ಅವರ ಪರಿಸ್ಥಿತಿ ಇನ್ನೂ ಹದಗೆಡಲಿದೆ ಎಂಬುದು ನನ್ನ ಸೀಮಿತ ರಾಜಕೀಯ ಅನುಭವದಲ್ಲಿ ಹೇಳಲು ಇಚ್ಚಿಸುತ್ತಿದ್ದೇನೆ. ಹೀಗೆ ಹೇಳುವುದಕ್ಕೆ ಹಲವಾರು ಪ್ರಭಲ ಕಾರಣಗಳಿವೆ ಆ ಪಕ್ಷ ಮತ್ತು ಕುಟುಂಬದ ಸಮಸ್ಯೆ ಏನೆಂದರೆ, ಅವರ ರಾಜಕೀಯ ಅಧಃಪತನದ ಸ್ಥಿತಿ ಅವರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆಯಾದರೂ, ಅದರಿಂದ ಹೇಗೆ ಹೊರಬರುವುದು ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕಿಂದ ಅವರಲ್ಲಿರುವ ಅಹಂ ನಿಂದಾಗಿ ಪರಿಸ್ಥಿತಿಯಿಂದ ಹೊರಬರಲು ಅವರಿಗೆ ಕಷ್ಟವಾಗುತ್ತಿದೆ. ಇಡೀ ಪಕ್ಷ, ಅವರ ಕುಟುಂಬ ಮತ್ತು ಅವರ ಕೆಲ ಭಟ್ಟಂಗಿಗಳ ಕೈಯಲ್ಲಿ ನಲುಗಿಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಉದಾಹರಣೆಗೆ ಇತ್ತೀಚಿನ ಮಧ್ಯಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸೋಣ. ರಾಜಕೀಯ ಎಂದರೆ ಕೇವಲ ಗೆಲ್ಲುವುದಕ್ಕಷ್ಟೇ ಸೀಮಿತವಲ್ಲ. ಗೆದ್ದ ನಂತರ ಅಧಿಕಾರವನ್ನು ಸೂಕ್ತ ನಾಯಕತ್ವದಡಿಯಲ್ಲಿ ಸರಿಯಾಗಿ ಉಳಿಸಿಕೊಂಡು ಹೋಗುವುದು ಮತ್ತು ಅದನ್ನು ವಿಸ್ತರಿಸಿಕೊಂಡು ಹೋಗುವುದು ಅದರ ಭಾಗವಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ನಿರ್ಣಯಗಳನ್ನು ಕಾಂಗ್ರೇಸ್ ತೆಗೆದುಕೊಂಡ ಪರಿಣಾಮ ತನ್ನ ಒಳ ಜಗಳಗಳಿಂದಲೇ ಅಚಾನಕ್ಕಾಗಿ ಬಂದಿದ್ದ ಅಧಿಕಾರವನ್ನು ಅಷ್ಟೇ ಆಶ್ವರ್ಯಚಕಿತವಾಗಿ ಕಳೆದು ಕೊಳ್ಳಬೇಕಾಯಿತು. ಸತತವಾಗಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಶಿವರಾಜ್ ಚವ್ಹಾಣ್ ಉತ್ತಮವಾದ ಆಡಳಿತವನ್ನೇ ನಡೆಸಿದ್ದರಾದರೂ, ಜ್ಯೋತಿರಾಧ್ಯ ಸಿಂಧ್ಯಾ ಅವರಂತಹ ಯುವ ನಾಯಕತ್ವ ಹೊಸತನ್ನೇನಾದರೂ ಸಾಧಿಸಬಹುದು ಎಂದು ನಂಬಿದ ಮಧ್ಯಪ್ರದೇಶಿಗರು ಕಾಂಗ್ರೇಸ್ಸಿಗೆ ಕೂದಲೆಳೆಯ ಅಂತರದ ಮುನ್ನಡೆಯನ್ನು ತಂದು ಕೊಟ್ಟರು.

ಆ ಮುನ್ನಡೆ ನಿಜಕ್ಕೂ ನೆಹರು ಕುಟಂಬ ಸದಸ್ಯರ ಪರಿಶ್ರಮವಾಗಿರದೇ, ಸ್ಥಳಿಯ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಯುವ ನಾಯಕತ್ವದ ಪರಿಶ್ರಮವಾಗಿತ್ತು. ಆದರೆ ಇದನ್ನು ನೆಹರು ಕುಟುಂಬಸ್ಥರು ಮತ್ತು ಅವರ ಭಟ್ಟಂಗಿಗಳು ಸರಿಯಾಗಿ ಅರ್ಧೈಸಿಕೊಳ್ಳದೇ, ಯುವನಾಯಕತ್ವಕ್ಕೆ ಮನ್ನಣೆ ನೀಡದೇ, ದಿಗ್ವಿಜಯ್ ಸಿಂಗ್ ಎಂಬ ತಿಕ್ಕಲು ತನದ ಅರಳು ಮರಳು ಭಟ್ಟಂಗಿಯ ಮಾತಿಗೆ ಮರುಳಾಗಿ ರಾಜಕೀಯದಲ್ಲಿ ಅದಾಗಲೇ ಸವಕಲು ನಾಣ್ಯವಾಗಿದ್ದ ಕಮಲ್ ನಾಥ್ ಅವರಿಗೆ ಮುಖ್ಯ ಮಂತ್ರಿ ಪಟ್ಟವನ್ನು ಕಟ್ಟುವ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಂಡಿತು ಎಂದರೆ ಆಶ್ವರ್ಯ ಪಡಬೇಕಿಲ್ಲ. ಈ ರೀತಿಯ ಅಚ್ಚರಿಯ ಬೆಳವಣಿಗೆ ಸ್ಥಳೀಯ ಕಾರ್ಯಕರ್ತರು ಮತ್ತು ಯುವ ನಾಯಕರನ್ನು ಬೆಚ್ಚಿಬೀಳಿಸಿತಲ್ಲದೇ, ಅದರೆ ಪರಿಣಾಮವನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ನಡೆದ ಲೋಕಸಭಾ ಚುನಾಚಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಒಟ್ಟು 29 ಲೋಕಸಭಾ ಸದಸ್ಯರಲ್ಲಿ 28ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ, ಕೇವಲ 1ರಲ್ಲಿ ಅದೂ ಕಮಲ್ ನಾಥ್ ಅವರ ಮಗ ನಕುಲ್ ಕಮಲ್ ನಾಥ್ ಗೆಲ್ಲಲು ಸಾಧ್ಯವಾಯಿತು. ಗೆದ್ದೇ ಗೆಲ್ಲುವನೆಂಬ ಅತಿಯಾದ ಆತ್ಮವಿಶ್ವಾಸದಿಂದ ಸ್ವಕ್ಷೇತ್ರ ಗುನಾದಲ್ಲಿ ಪ್ರಚಾರವನ್ನೇ ಮಾಡದೇ ಉತ್ತರ ಪ್ರದೇಶದಲ್ಲಿ ಕೆಲಸಮಾಡಿದ ಜ್ಯೋತಿರಾಧ್ಯ ಸಿಂಧ್ಯಾರನ್ನೂ ಜನಾ ಮಕಾಡೆ ಮಲಗಿಸಿಬಿಟ್ಟರು.

cong2ವಿಧಾನ ಸಭೆಯಲ್ಲಿಯೂ ಅಂತಹದ್ದೇನೂ ಹೆಚ್ಚಿನ ಮುನ್ನಡೆ ಇರಲಿಲ್ಲ. ಲೋಕಸಭೆಯಲ್ಲೂ ಬೆಚ್ಚಿ ಬೀಳಿಸುವ ಫಲಿತಾಂಶ ಇಂತಹ ವಿಷಮ ಪರಿಸ್ಥಿತಿಯಲ್ಲಿ ನೆಹರು ಕುಟುಂಬಕ್ಕೇನಾದರೂ ರಾಜಕೀಯ ಮುತ್ಸದ್ದಿ ತನವಿದ್ದಿದ್ದಲ್ಲಿ ಸೋತವರನ್ನೆಲ್ಲರನ್ನೂ ಒಗ್ಗೂಡಿಸಿ ಸೋತದ್ದೇಕೆ ಎಂದು ಆತ್ಮಾವಲೋಕನ ಮಾಡಿ, ಮುಂದೆ ಹೇಗೆ ಗೆಲ್ಲುವುದು ಎಂಬುವುದರ ಬಗ್ಗೇ ಆಗಿನಿಂದಲೇ ಕಾರ್ಯಪ್ರವೃತ್ತರಾಗ ಬೇಕಿತ್ತು. ಆದರೆ ಸ್ವಕ್ಷೇತ್ರದಲ್ಲಿಯೇ ಸೋತು ಸುಣ್ಣವಾಗಿ ಹೋಗಿದ್ದ ರಾಹುಲ್ ಗಾಂಧಿ, ರೂಪದಲ್ಲಿ ಅಜ್ಜಿಯ ತರಹ ಇದ್ದ ಮಾತ್ರಕ್ಕೇ ಅಜ್ಜಿಯ ತರಹ ಅಧಿಕಾರಕ್ಕೇರ ಬಹುದು ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವ ಪ್ರಿಯಾಂಕ, ದಿನೇ ದಿನೇ ಹದಗೆಡುತ್ತಿರುವ ವಯಕ್ತಿಕ ಮತ್ತು ಪಕ್ಷದ ಆರೋಗ್ಯ ಮತ್ತು ಕ್ಷೀಣಿಸುತ್ತಿರುವ ಮಕ್ಕಳ ರಾಜಕೀಯ ಭವಿಷ್ಯದಿಂದ ಕಂಗೆಟ್ಟಿರುವ ಸೋನಿಯಾ ಗಾಂಧಿ ಯವರು ಸರಿಯಾದ ನಿರ್ಧಾರ ತೆಗೆದುಕೊಳ್ಳದ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ ಹಿರಿಯ ನಾಯಕರು ಮತ್ತು ಯುವನಾಯಕರ ಜಗಳದಿಂದಾಗಾಗಿ ಸುಮಾರು ಇಪ್ಪತ್ತಕ್ಕೂ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸುಲಭವಾಗಿ ಅಧಿಕಾರ ಸಿಗುವಂತೆ ಮಾಡಿದರು.

ಗತಿಸಿ ಹೋದ ಮೇಲೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಅಧಿಕಾರ ಕಳೆದು ಕೊಂಡ ಮೇಲೇ ಬಿಜೆಪಿ ಪಕ್ಷವನ್ನು ದೂರುವುದರ ಬದಲು ಇಡೀ ಈ ಕಥೆಯ ವಿಪರ್ಯಾಸವೆಂದರೆ, ಇಲ್ಲಿ ಆಪರೇಷನ್ ಕಮಲದ ಪ್ರಭಾವಕ್ಕಿಂತ ದಿಗ್ವಿಜಯ್ ಸಿಂಗ್ ಅವರ ದುರಹಂಕಾರವೇ ಪಕ್ಷಕ್ಕೆ ಮುಳುವಾಯಿತು. ಲೋಕಸಭಾ ಚುನಾವಣೆಯಲ್ಲಿ ಸೋತ ಸಿಂಧ್ಯಾರವರರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಲ್ಲಿ ಪಕ್ಷಕ್ಕಾದ ಮುಜುಗರವೂ ತಪ್ಪುತ್ತಿತ್ತು ಮತ್ತು ಮಧ್ಯಪ್ರದೇಶದಲ್ಲಿ ಪಡೆದುಕೊಂಡಿದ್ದ ಅಧಿಕಾರವು ಉಳಿದಿರುತ್ತಿತ್ತು.

ರಾಜಾಸ್ಥಾನದ ಪರಿಸ್ಥಿತಿಯೂ. ಇದಕ್ಕಿಂತ ಭಿನ್ನವಾಗಿಲ್ಲ. ರಾಜಾಸ್ಥಾನದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಲು ಪಕ್ಷ ಅಥವಾ ಸ್ಥಳೀಯ ನಾಯಕರ ಕೆಲಸ ಅಥವಾ ವರ್ಚಸ್ಸಿಗಿಂತ ಹಿಂದಿನ ಬಿಜೆಪಿ ವಸುಂಧರಾ ರಾಜೆಯವರ ವಿರುದ್ದ ಆಡಳಿತಾತ್ಮಕ ವಿರೋಧವೇ ಕಾರಣವಾಯಿತು. ಅಲ್ಲಿಯ ಜನ ರಾಜ್ಯದಲ್ಲಿ ಬದಲಾವಣೆ ಬಯಸಿದರೂ ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿಗೆ 25 ಕ್ಕೆ 25 ಲೋಕಸಭಾ ಸದಸ್ಯರನ್ನು ಗೆಲ್ಲಿರುವ ಮೂಲಕ ಕಾಂಗ್ರೇಸ್ಸಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದ್ದಾರೆ. ಅಲ್ಲಿಯೂ ಸಹಾ ಮುಖ್ಯಮಂತ್ರಿ ಆಶೋಕ್ ಗೆಹ್ಲಾಟ್ ಮತ್ತು ಯುವ ನಾಯಕ ‍ಸಚಿನ್ ಪೈಲೆಟ್ ನಡುವಿನ ಸಾಮರಸ್ಯ ಅಷ್ಟೇನು ಚೆನ್ನಾಗಿಲ್ಲ. ಸಿಂಧ್ಯಾ ಮತ್ತು ಪೈಲೆಟ್ ನಡುವಿನ ಗೆಳೆತನವೇನಾದರೂ ಮುಂದುವರೆದಲ್ಲಿ ಕಾಂಗ್ರೇಸ್ ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಇನ್ನು ಇಡೀ ದಕ್ಷಿಣ ಭಾರತದಲ್ಲಿ ಕ್ರಾಂಗ್ರೇಸ್ಸಿಗೆ ಅಲ್ಪ ಸ್ವಲ್ಪ ಭರವಸೆ ಇರುವುದು ಕರ್ನಾಟಕದಲ್ಲಿ ಮಾತ್ರವೇ. ಕಳೆದ ಬಾರಿಯೂ ಸಹಾ ಬಿಜೆಪಿಯವರ ಒಳಜಗಳ, ಯಡೆಯೂರಪ್ಪ ಮತ್ತು ಶ್ರೀರಾಮಲು ಪಕ್ಷದಿಂದ ದೂರಾದ ಪರಿಣಾಮವಾಗಿಯೇ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಭೂತಪೂರ್ವವಾದ ಬೆಂಬಲದೊಂದಿಗೆ ಆಡಳಿತಕ್ಕೆ ಬಂದಿತಾದರೂ, ಅತೀಯಾದ ಅಲ್ಪ ಸಂಖ್ಯಾತರ ತುಷ್ಟೀಕರಣ,
ಸಿದ್ದರಾಮಯ್ಯನವರ ಹುಂಬತನ ದಿಂದಾಗಿ ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿದ್ದರೂ ಎರಡನೇಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳ ಬೇಕಾಯಿತಾದಾರೂ, ಹೇಗಾದರೂ ಮಾಡೀ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ನೆಪದಿಂದಾಗಿ ಜನರ ಭಾವನೆಗಳ ಹೊರತಾಗಿಯೂ ದೇವೇಗೌಡರ ಸಾಹವಾಸದಿಂದ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಎರಡೂ ಪಕ್ಷಗಳ ನಡುವಿನ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿತ್ತು. ಎತ್ತು ಏರಿಗೆ ಏಳೆದರೆ ಕೋಣ ನೀರಿಗೆ ಎಳೆಯಿತು ಎನ್ನುವಂತೆ ಅಧಿಕಾರದಲ್ಲಿದ್ದ ದೋಸ್ತೀ ಸರ್ಕಾರದ ಎರಡೂ ಪಕ್ಷಗಳು ಪರಸ್ಪರ ಸಮಯಸಿಕ್ಕಾಗಲೆಲ್ಲಾ ಒಂದನ್ನೊಂದು ಹಳಿಯಲೆಂದೇ ಕತ್ತೀ ಮಸೆಯ ತೊಡಗಿದ ಕಾರಣ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಂದೂ ಕಾಣದಂತಹ ಅಭೂತಪೂರ್ವ ಫಲಿತಾಂಶ ಬಂದು ಬಿಜೆಪಿ 25, ಬೆಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ತಿ 1, ಕಾಂಗ್ರೇಸ್ ಮತ್ತು ಜನತಾದಳ ತಲಾ ಒಂದೊಂದು ಸ್ಥಾನ ಗಳಿಸುವಷ್ಟರಲ್ಲಿ ಏದುರಿರು ಬಿಡುವಂತಾಯಿತು. ಸ್ವತಃ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವೇ ನಾನಾ ರೀತಿಯ ತಂತ್ರಗಳನ್ನು ರೂಪಿಸಿ ಕೋಟ್ಯಾಂತರ ಹಣವನ್ನು ಖರ್ಚುಮಾಡಿದರೂ. ಮುಖ್ಯಮಂತ್ರಿಗಳ ಪುತ್ರರನ್ನು ಮಂಡ್ಯಾದಲ್ಲಿ ಮತ್ತು ಮಾಜೀ ಪ್ರಧಾನಿಗಳನ್ನು ತುಮಕೂರಿನಲ್ಲಿ ಮಕಾಡೆ ಮಲಗಿಸಿದ್ದು ರಾಜ್ಯದ ಜನರ ರಾಜಕೀಯ ಬುದ್ದಿವಂತಿಕೆಯನ್ನು ಜಗತ್ತಿಗೆ ಪರಿಚಯಿಸಿತು.

ದೋಸ್ತೀ ಸರ್ಕಾರದ ಸಾಧನೆ ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚಿದರೂ ಎರಡೂ ಪಕ್ಷಗಳು ಬುದ್ಧಿ ಕಲಿಯಲೇ ಇಲ್ಲ. ಇಲ್ಲೂ ಸಹಾ ನೆಹರು ವಂಶ ಸೋಲಿನ ಅತ್ಮಾವಲೋಕನ ಮಾಡದೇ ಪರಸ್ಪರ ಕೆಸರನ್ನೆರಚುವ ಕಾರ್ಯದಲ್ಲಿ ತೊಡಗಿತು. ಸೋಲಿನ ಹೊಣೆಯನ್ನು ಹೊತ್ತು ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ವಿಧಾನ ಸಭೆಯ ನಾಯಕ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರಾದರೂ ಅವರ ಜಾಗಕ್ಕೆ ಮತ್ತೊಬ್ಬ ನಾಯಕರನ್ನು ಅಯ್ಕೆಮಾಡಲು ತಿಣುಕಾಡತೊಡಗಿತು. ಸಿದ್ದರಾಮಯ್ಯನವರೂ ಸಹಾ ಮಗು ಕುಂ.. ಜಿಗುಟಿ ತೊಟ್ಟಿಲು ತೂಗಿ ತಮ್ಮ ಪ್ರಾಭಲ್ಯವನ್ನು ತೋರಿಸಲು ಹೋಗಿ ತಮ್ಮ ಶಿಷ್ಯಂದಿರಿಂದ ರಾಜೀನಾಮೆ ಕೊಡಿಸಿ, ಬಿಜೆಪಿಗೆ ಸುಲಭವಾಗಿ ಅಧಿಕಾರ ಕೊಡಿಸಿ ಬೆಣೆ ತೆಗೆಯಲು ಹೋಗಿ ಬಾಲ ಸಿಕ್ಕಿಸಿ ಮಂಗನಂತೆ ಆದದ್ದು ಈಗ ಜಗಜ್ಜಾಹೀರಾತಾಗಿದೆ. ಪದೇ ಪದೇ ಯಡೇಯೂರಪ್ಪನವರನ್ನು ಜೈಲಿಗೆ ಹೋದವರು ಜೈಲಿಗೆ ಹೋದವರು ಎಂದು ಹಳಿಯುತ್ತಿದ್ದ ಕಾಂಗ್ರೇಸ್ಸಿಗರಿಗೆ, ತಿಹಾರ್ ಜೈಲಿಯಲ್ಲಿ ರೊಟ್ತಿ ಮುರಿದ ಡಿಕೆಶಿಯವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕಾದ ಅನಿವಾರ್ಯಪರಿಸ್ಥಿತಿ ಬಂದಿತೆಂದರೆ, ಒಬ್ಬ ಸಮರ್ಥ, ನಿಶ್ಕಳಂಕ ರಾಜ್ಯಾಧ್ಯಕ್ಷರನ್ನೂ ಆಯ್ಕೆ ಮಾಡಿಕೊಳ್ಳಲು ಆಗದಂತಹ ದೈನೇಸೀ ಸ್ಥಿತಿಗೆ ರಾಜ್ಯದ ಕಾಂಗ್ರೇಸ್ ಬಂದು ತಲುಪಿರುವುದು ಗೊತ್ತಾಗುತ್ತಿದೆ.

ಇನ್ನೂ ಕೇರಳದಲ್ಲಿ ಕಾಂಗ್ರೇಸ್ ಅಲ್ಪ ಸ್ವಲ್ಪ ಮಾನವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ, ಸುಪ್ರೀಂ ಕೋರ್ಟಿನಲ್ಲಿ ಶಬರಿಮಲೈ ಕುರಿತಂತೆ ಸ್ಥಳಿಯ ಜನರ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾದಂತಹ ತೀರ್ಪು ಬಂದಾಗ, ಸ್ಥಳೀಯರ ಭಾವನೆಗಳಿಗೆ ವಿರುದ್ಧವಾಗಿ ಸ್ಪಂದಿಸಿದ್ದ ಕಾರಣದಿಂದಾಗಿಯೇ ಜನರು ಕೋಪಗೊಂಡು ಅಲ್ಲಿ ಬಿಜೆಪಿ ಪಕ್ಷವೂ ಇನ್ನೂ ಪ್ರಭಲ ಪಕ್ಷವಾಗಿರದ ಕಾರಣ, ಗತಿ ಇಲ್ಲದೇ ಕಮ್ಯೂನಿಷ್ಟ್ ಸರ್ಕಾರದ ವಿರುದ್ಧವಾಗಿ, ಕಾಂಗ್ರೇಸ್ ಪರವಾಗಿ ಮತ ಚಲಾಯಿಸಿದರೇ ಹೊರತು, ಅಮೇಠಿಯಲ್ಲಿ ಸೋಲುವನೆಂದು ತಿಳಿದು, ಸ್ವಾರ್ಥಕ್ಕಾಗಿ ವೈನಾಡಿನಲ್ಲಿ ರಾಹುಲ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರಿಂದ ಕೇರಳಿಗರು ಕಾಂಗ್ರೇಸ್ ಪರ ಮತ ಚಲಾಯಿಸಿದ್ದಾರೆ ಎಂದು ತಿಳಿಯುವುದು ಮೂರ್ಖತನದ ಪರಮಾವಧಿ.

ಕಾಂಗೇಸ್ಸಿಗರ ಮಾಡುತ್ತಿರುವ ಪ್ರತೀ ತಪ್ಪುಗಳೂ ಬಿಜೆಪಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗೆ ಆಗುತ್ತಿದೆ. ಹಾಗೆಂದ ಮಾತ್ರಕ್ಕೇ ಬಿಜೆಪಿಯವರೂ ಸುಖಾಸುಮ್ಮನೇ ಫಲವನ್ನೇನೂ ಅನುಭವಿಸುತ್ತಿಲ್ಲ. ಆದಕ್ಕೆ ಪೂರಕವಾಗಿ ಏನೇನು ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಉದಾ. ಅಮೇಥಿಯಲ್ಲಿ ರಾಹುಲ್ ಗಾಂಧಿ, ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಮುನಿಯಪ್ಪನವರನ್ನು ಸೋಲಿಸಲು ಚುನಾವಣೆಗಿಂತಲು ಮೊದಲೇ ತಕ್ಕದಾದ ಪೂರ್ವ ಸಿದ್ದತೆ ಮಾಡಿಕೊಂಡಿತ್ತಲ್ಲದೇ ಅದನ್ನು
ತನ್ನ ಕಾರ್ಯಕರ್ತರ ಮೂಲಕ ಸರಿಯಾಗಿ ಕಾರ್ಯರೂಪಕ್ಕೆ ತರುವುದರಲ್ಲಿ ಸಫಲವೂ ಆಗಿದೆ.

WhatsApp Image 2020-04-16 at 2.18.44 PMಇನ್ನು ನೆಹರು ವಂಶಸ್ತರ ರಾಜಕೀಯ ಪ್ರಬುದ್ಧತೆ ಇನ್ನೂ ಬೆಳೆದಿಲ್ಲ ಎನ್ನುವುದಕ್ಕೆ ಇತ್ತೀಚಿನ ಕೊರೋನಾ ವಿರುದ್ಧದ ಅವರ ನಿಲುವುಗಳೇ ಸಾಕ್ಷಿ. ಇಡೀ ಪ್ರಪಂಚಾದ್ಯಂತ ಮಹಾಮಾರಿಯಿಂದ ತತ್ತರಿಸುತ್ತಿರುವಾಗ, ಜಬಾಬ್ಧಾರಿಯುತ ವಿರೋಧ ಪಕ್ಷವಾಗಿ, ದೇಶದ ಪ್ರಜೆಗಳ ಒಳಿತಕ್ಕಾಗಿ ಆಡಳಿತ ಪಕ್ಷದ ಜೊತೆ ಕೈ ಜೋಡಿಸಿಯೋ ಇಲ್ಲವೇ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಪರಿಸ್ಥಿತಿ ನಿಭಾಯಿಸುವುದರಲ್ಲಿ ಸಹಕರಿಸುವುದನ್ನು ಬಿಟ್ಟು ತಮ್ಮರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಧಾನಿಗಳ ವಿರುದ್ದ ಅಮ್ಮಾ, ಮಗ, ಮಗಳು ದಿನಕ್ಕೊಂದು ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಾ ಅಳುದುಳಿದಿದ್ದ ತಮ್ಮ ಮಾನವನ್ನೇ ಹರಾಜು ಹಾಕಿಕೊಳ್ಳುತ್ತಿದ್ದಾರೆ.

ದೇಶಾದ್ಯಂತ ಲಾಕ್ ಡೊನ್ ಇರುವ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿದ್ದರೂ ಅಣ್ಣಾ ಮತ್ತು ತಂಗಿ ಒಟ್ಟಿಗೇ ಒಂದೇ ಕಾರಿನಲ್ಲಿಯೇ ಪ್ರಯಾಣಿಸಿ ಅವರನ್ನು ತಡೆದ ಪೋಲೀಸ್ ಅಧಿಕಾರಿಗಳ ಮೇಲೆ ತಮ್ಮ ದುರಹಂಕಾರದ ಮತ್ತು ದರ್ಪನ್ನು ತೋರಿಸಿರುವ ವೀಡಿಯೋ ಈಗ ವೈರಲ್ ಆಗಿದ್ದರೂ ಅದಕ್ಕೆ ಒಂದು ಕ್ಷಮೆಯನ್ನೂ ಯಾಚಿಸದೇ ಈ ಪರಿಸ್ಥಿತಿಯಲ್ಲೂ ಹೊರಗೆ ಹೋಗುವಂತಹ ಅದೆಂತಹಾ ಘನಂದಾರಿ ಕೆಲಸ ಇತ್ತು ಎಂದು ಜನರಿಗೆ ತಿಳಿಸದೇ ಜನರಿಂದ ತಿರಸ್ಕೃತರಾಗುತ್ತಿದ್ದಾರೆ.

cong3ಇನ್ನು ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾ, ಅಳಿಯಾ ಮನೆ ತೊಳಿಯಾ ಎಂಬಂತೆ ಮಗ್ಗುಲ ಮುಳ್ಳಾಗಿ, ಅವನು ಮಾಡಿರುವ ಕಾನೂನೂ ಬಾಹೀರ ಚಟುವಟಿಕೆಗಳು ಬೂದಿ ಮುಚ್ಚಿದ ಕೆಂಡದಂತಿದ್ದು ಒಂದಲ್ಲಾ ಒಂದು ದಿನ ಪ್ರವರ್ಧಮಾನಕ್ಕೆ ಬಂದು ಅತನೂ ಅಲ್ಲದೇ ಅವನ ಇಡೀ ಕುಟುಂಬವನ್ನೇ ಸುಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.

 

ಹೀಗೆ ಕಾಂಗೇಸ್ ಪಕ್ಷ ಮತ್ತು ಸದ್ಯದ ನೆಹರು ವಂಶಸ್ಥರ ಸ್ವಯಂಕೃತಾಪರಾಧಗಳ ಬಗ್ಗೆ ಹೇಳುತ್ತಾ ಹೋದರೆ ಇಡೀ ದಿನವೇ ಸಾಲುವುದಿಲ್ಲ. ದೇಶದ ಅಭಿವೃದ್ಧಿಗಾಗಿ ಆಡಳಿತ ಪಕ್ಷ ಎಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸ ಬೇಕು ಎಂಬ ನಿರೀಕ್ಷೆ ಜನರಲ್ಲಿ ಇರುತ್ತದೋ ಹಾಗೆಯೇ ವಿರೋಧ ಪಕ್ಷವೂ ಅಷ್ಟೇ ಏಕೆ ? ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸ ಬೇಕು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸನ್ಮಾನ್ಯ ಕುಮಾರ ಸ್ವಾಮಿಯವರು ಮತ್ತು ಡಾ. ಸುಬ್ರಹ್ಮಣ್ಯ ಸ್ವಾಮಿ. ಅವರು ಎರಡು ಬಾರಿ ಅಲ್ಪಾವಧಿಯ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಣೆ ಮಾಡಿದ್ದಕ್ಕಿಂತಲೂ ಯಡೆಯೂರಪ್ಪನವರ ಕಾಲದಲ್ಲಿ ವಿರೋಧ ಪಕ್ಷದ ನಾಯಕರಾಗಿ ಮಿಂಚಿದ್ದೇ ಹೆಚ್ಚು. ಇನ್ನು ಸುಬ್ರಹ್ಮಣ್ಯ ಸ್ವಾಮಿಗಳ ಬಗ್ಗೆ ಹೇಳುವುದೇ ಬೇಡ. ಅವರು ಅಧಿಕಾರದಲ್ಲಿ ಇರಲೀ ಬಿಡಲೀ ಅವರಿದ್ದಾರೆ ಎಂದರೆ ತಪ್ಪುಮಾಡಲು ಯಾರೂ ಮುಂದಾಗುವುದಿಲ್ಲ.

cong4ಒಟ್ಟಿನಲ್ಲಿ ಸದ್ಯದ ಪರಸ್ಥಿತಿಯಲ್ಲಿ ಸದ್ಯದ ನೆಹರೂ ಮನೆತನದ ರಾಜಕೀಯ ಪ್ರಬುದ್ಧತೆ ಮತ್ತು ಮುತ್ಸದ್ದಿತನದ ಕೊರತೆಯಿಂದಾಗಿ ಕ್ರಾಂಗ್ರೇಸ್ ಪಕ್ಷ ಮುಳುತ್ತಿರುವ ಹಡುಗಾಗಿಗಿದ್ದು. ಜೀವ ರಕ್ಷಣೆಗಾಗಿ, ಹಡುಗಿನಲ್ಲಿರುವ ಪ್ರಯಾಣಿಕರು, ಹಡುಗಿನಿಂದ ಹೊರ ಹಾರುವಂತೆ ಅಳುದುಳಿದ ಕಾಂಗ್ರೇಸ್ಸಿಗರು ಆ ಪಕ್ಷ ಈ ಪಕ್ಷ ಎಂದು ಜಿಗಿಯುತ್ತಿರುವುದು ಸದ್ಯದ ಪರಿಸ್ಥಿತಿಯಾಗಿದೆ. ಜಾತಸ್ಯ ಮರಣಂ ಧೃವಂ. ಎಂದರೆ ಹುಟ್ಟಿದವರು ಸಾಯಲೇ ಬೇಕು ಎಂಬುದು ಜಗದ ನಿಯಮ. ಅದು ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆಯಲ್ಲವೇ?

ಏನಂತೀರೀ?