ತಾರಸಿ ತೋಟ ಕಾರ್ಯಾಗಾರ

ಸ್ವದೇಶಿ ಜಾಗರಣ ಮಂಚ್ ಮತ್ತು ವಿಶ್ವಗುರು ಚಾರಿಟಬಲ್ ಟ್ರಸ್ಟ್  ಆಶ್ರಯದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ದಿನಾಂಕ 24.07.2022 ರಂದು ಶ್ರೀಮತಿ ಪ್ರತಿಮಾ ಅಡಿಗರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ತಾರಸಿ ತೋಟ ಕಾರ್ಯಾಗಾರವನ್ನು ನಡೆಸಲಾಯಿತು. ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತನೇ ಈ ದೇಶದ ಬೆನ್ನಲುಬಾಗಿದ್ದಾನೆ. ಹಾಗಾಗಿ ಸ್ಥಳೀಯ ಚಿಂತನೆ, ಸ್ಥಳೀಯ ಮಾರುಕಟ್ಟೆ ಮತ್ತು ದೇಶದ ಸ್ಥಳೀಯ ಆರ್ಥಿಕ ಅಭಿವೃದ್ಧಿಯು ಎಂಬ ಸ್ವದೇಶಿ ಪರಿಕಲ್ಪನೆಯು ನಮ್ಮ ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಬ್ರಿಟಿಷ್ ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದ ನಂತರವೂ ನಮ್ಮ… Read More ತಾರಸಿ ತೋಟ ಕಾರ್ಯಾಗಾರ

ಅಪ್ಪಾ

ರಮೇಶ ಹಳ್ಳಿಯೊಂದರಲ್ಲಿರಲ್ಲಿ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವಂತೆ ನಾವಿಬ್ಬರು ನಮಗಿಬ್ಬರು ಎಂಬು ಮುದ್ದಾದ ಸಂಸಾರವಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಅಲ್ಪ ಸ್ವಲ್ಪ ಹೊಲ ಗದ್ದೆಯಲ್ಲೇ ಮಳೆಯಾಧಾರಿತವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಗಳು ಹತ್ತನೇ ತರಗತಿಯಲ್ಲಿ ಇಂಗ್ಲೀಶ್, ಗಣಿತದಲ್ಲಿ ಫೇಲ್ ಆಗಿ ಮುಂದೆ ಓದಲಾರೆ ಎಂದಾಗ ಮಗಳನ್ನು ಬಲವಂತ ಮಾಡದೇ, ಮನೆಯಲ್ಲೇ ಹಾಡು ಹಸೆ, ಆಡುಗೆ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಕಲಿಸಿ ವಯಸ್ಸು 18 ಆಗುತ್ತಿದ್ದಂತೆಯೇ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಮಾಡುತ್ತಿದ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಹೆಂಡತಿಯ ಕೋರಿಕೆಯ… Read More ಅಪ್ಪಾ

ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ

ಸಾಧಾರಣವಾಗಿ ಹಿಂದಿನಕಾಲದಲ್ಲಿ ಮಕ್ಕಳಿರಲವ್ವಾ ಮನೆ ತುಂಬಾ ಎನ್ನುವ ಗಾದೆ ಮಾತನ್ನು ಸಹಜವಾಗಿ ಕೇಳಿರುತ್ತಿದ್ದೆವು. ಅಂದೆಲ್ಲಾ ಮನೆ ತುಂಬಾ ಹೇಗೆ ಮಕ್ಕಳು ಇರುತ್ತಿದ್ದರೋ ಅದೇ ರೀತಿ ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ ಎನ್ನುವುದನ್ನೂ ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದರು. ಮನೆ ಮುಂದೆ ಅಥವಾ ಕೈ ತೋಟದಲ್ಲಿ ತೆಂಗಿನ ಮರ, ಹೂವು, ಹಣ್ಣುಗಳ ಗಿಡಗಳಿದ್ದರೆ ಮನೆಗೆ ಅದೇನೋ ಶೋಭೆ. ಆ ಮರ ಗಿಡಗಳ ನಿತ್ಯಹರಿದ್ವರ್ಣ ಬಣ್ಣ ಮನೆಗೆ ವಿಶೇಷ ಕಳೆಯನ್ನು ನೀಡುವುದಲ್ಲದೇ, ತರಕಾರಿ ಹೂವು ಹಣ್ಣು ಕಾಯಿಗಳನ್ನು ಕೊಡುವುದರ… Read More ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ

ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್… Read More ತಾಜಾ ಆಹಾರ

ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?

ಸನಾತನ ಧರ್ಮದಲ್ಲಿ ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳಿಗೆ ಹೋಗುವ ಮುಖಾಂತರ ಹಿಂದೂಗಳ ಭಾವೈಕ್ಯತೆ ಸೌಹಾರ್ದತೆಯೊಂದಿಗೆ, ನಾವೆಲ್ಲರೂ ಒಂದು ಎಂದು ಸಾರುವ ಸತ್ ಸಂಪ್ರದಾಯವನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರತಿಯೊಬ್ಬ ಹಿಂದೂವೂ ಸಹಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿಯೇ ತೀರುತ್ತಾರೆ. ಅಂತಹ ತೀರ್ಥಕ್ಷೇತ್ರಗಳಲ್ಲಿ ವಾರಣಾಸಿ ಅಥವಾ ಕಾಶಿ ಪ್ರಮುಖವಾಗಿದೆ. ಕಾಶೀಯಲ್ಲಿ ಹರಿಯುವ ಗಂಗಾ ನದಿಯ 64 ಘಾಟ್ ಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ಕಾಶೀ ವಿಶ್ವನಾಥ ಮತ್ತು ಶ್ರೀ… Read More ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?