ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಬಹಳ ಹಿಂದೆ ಕರಾವಳಿ ಪ್ರದೇಶದವರು ಎಂದರೆ ಬಹಳ ಶಾಂತಿ ಪ್ರಿಯರು. ಸಂಪ್ರದಾಯ, ಸಂಸ್ಕಾರವಂತರಷ್ಟೇ ಅಲ್ಲದೇ ಸಹೃದಯಿಗಳಾಗಿ ಕುಡಿಯಲು ನೀರು ಕೇಳಿದರೂ, ನೀರಿನ ಜೊತೆ ಸಿಹಿಯಾದ ಬೆಲ್ಲದುಂಡೆಗಳನ್ನು ನೀಡುವಂತಹ ವಿಶಾಲಹೃದಯಿಗಳು. ಇವೆಲ್ಲದರ ಜೊತೆಗೆ ಓದಿನಲ್ಲಿ ಸದಾ ಕಾಲವೂ ಮುಂದಿರುವುದಲ್ಲದೇ, ಬಹಳ ಶ್ರಮದಿಂದ ಎಂತಹ ಕೆಲಸವನ್ನು ಮಾಡಬಲ್ಲವರು ಎಂದೇ ಎಂದೇ ಪ್ರಖ್ಯಾತರಾದವರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಕರಾವಳಿ ಮತ್ತು ಕೇರಳದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಬಹಳ ಬೇಸರವನ್ನು ತರಿಸುತ್ತಿದೆ. ಯಾವುದೋ ಮತಾಂಧರ ಮಾತುಗಳಿಗೆ ಬಲಿಯಾಗಿ ವಿದ್ಯೆಗಿಂತಲೂ ಧರ್ಮವೇ ಮುಖ್ಯ… Read More ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಗಂಡಸರೇ ಹುಷಾರ್ !!

ಸಾಧಾರಣವಾಗಿ ಪತ್ರಿಕೆಗಳ ಮೂರನೇಯ ಪುಟದಲ್ಲಿ ಪ್ರಕಟವಾಗುವ ಕ್ರೈಮ್ ಸುದ್ದಿ ನೋಡುವಾಗ ಅಮಾಯಕ ಹುಡುಗಿಗೆ ಮೋಸ ಮಾಡಿದ ಹುಡುಗ ಎಂಬ ಸುದ್ದಿ ಇತ್ತೀಚಿನ‌ ದಿನಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಸುದ್ದಿ ಅದರ ತದ್ವಿರುದ್ಧವಾಗಿ ಹುಡುಗರೇ ಯುವತಿಯರಿಂದ ಮೋಸ ಹೋದ ಅಪರೂಪ ಪ್ರಕರಣಗಳು ಹೆಚ್ಚಾಗಿ ಸಭ್ಯ ಗಂಡಸರೆಲ್ಲಾ ತಲೆ ತಗ್ಗಿಸುವಂತಾಗಿದೆ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೈಟ್‌ ಫೀಲ್ಡ್‌ ನ ದೊಡ್ಡನೆಕ್ಕುಂದಿ ಬಳಿಯ ಯುವಕನೊಬ್ಬ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಹದಿಹರೆಯದ ವಯಸ್ಸು ಮತ್ತು ಅಂತರ್ಜಾಲದಲ್ಲಿ… Read More ಗಂಡಸರೇ ಹುಷಾರ್ !!

ಕೂರೋನಾ ಮತ್ತು ಕಾಂಗ್ರೇಸ್

ಕೂರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಜಗತ್ತಿನ ಅತ್ಯಂತ ಮುಂದುವರಿದ ಅದೆಷ್ಟೋ ದೇಶಗಳಲ್ಲಿ ಜನರು ದೀಪದ ಹುಳುವಿನಂತೆ ರಸ್ತೆಗಳಲ್ಲಿ ದಿಕ್ಕು ದಿಸೆಯಿಲ್ಲದೇ ಸಾವನ್ನಪ್ಪುತ್ತಿದ್ದಾರೆ.  ಆದರೆ ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡದಾದ ರಾಷ್ಟ್ರವಾದ ನಮ್ಮ ದೇಶದಲ್ಲಿ  ಪರಿಸ್ಥಿತಿ  ವಿಭಿನ್ನವಾಗಿದೆ.  ಇದಕ್ಕೆ ತದ್ವಿರುದ್ಧವಾಗಿದೆ.  ಪರಿಸ್ಥಿತಿ ಕೈ ಜಾರುವ ಮುನ್ನವೇ ಪ್ರಧಾನಿಗಳು ದೇಶಾದ್ಯಂತ  ಲಾಕ್ ಡೌನ್ ಹೇರಿದ ಪರಿಣಾಮ, ಕೆಲವು ಅವಿವೇಕಿಗಳ ಹೊರತು ಪಡಿಸಿ,  ಬಹುತೇಕರು ಮನೆಯಲ್ಲಿಯೇ ಭಧ್ರವಾಗಿದ್ದ ಕಾರಣ,   ಕೊರೋನಾದ  ದುಷ್ಪರಿಣಾಮ ಅಷ್ಟೇನೂ ಭಯಂಕರವಾಗಿರದೇ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. … Read More ಕೂರೋನಾ ಮತ್ತು ಕಾಂಗ್ರೇಸ್