ಕನ್ನಡದ ಪ್ರಥಮ ಮಹಿಳಾ ನಿರ್ದೇಶಕಿ, ಶ್ರೀಮತಿ ಪ್ರೇಮಾ ಕಾರಾಂತ್

ಪತಿ ಶ್ರೀ ಬಿ.ವಿ. ಕಾರಾಂತರ ಹಿಂದಿನ ಬಹು ದೊಡ್ಡ ಶಕ್ತಿಯಾಗಿ, ಸ್ವತಃ ನಟಿ, ರಂಗಕರ್ಮಿ, ವಸ್ತ್ರವಿನ್ಯಾಸಕಿಯಷ್ಟೇ ಅಲ್ಲದೇ, ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಂತಹ ಶ್ರೀಮತಿ ಪ್ರೇಮಾ ಕಾರಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
Read More ಕನ್ನಡದ ಪ್ರಥಮ ಮಹಿಳಾ ನಿರ್ದೇಶಕಿ, ಶ್ರೀಮತಿ ಪ್ರೇಮಾ ಕಾರಾಂತ್

ಬಿ. ವಿ. ಕಾರಾಂತ್

ನಟನೆ, ನಿರ್ದೇಶನ, ಸಂಭಾಷಣೆ, ಸಂಗೀತ ನಿರ್ದೇಶನ ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ ಕಾರಾಂತರು ಕೈಯ್ಯಾಡಿಸದ ಕ್ಷೇತ್ರವಿಲ್ಲಾ ಎನ್ನುವಂತೆ ನಾಟಕ ಮತ್ತು ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಹಿರಿಯ ರಂಗಕರ್ಮಿ ಶ್ರೀ ಬಿ.ವಿ.ಕಾರಾಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬಿ. ವಿ. ಕಾರಾಂತ್

ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ

ಸಮಾಜದ ಎಲ್ಲಾ ವರ್ಗದವರಿಗೂ ಕೈಗೆಟುಕುವಂತಹ  ಶಿಕ್ಷಣವನ್ನು ಕೊಡುವಂತಹ ಮಲ್ಲೇಶ್ವರಂ ಶಿಶುವಿಹಾರ ಎಂಬ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಕಳೆದ 7 ದಶಕಗಳಿಂದಲೂ  ಆಟ ಪಾಠಗಳ ಜೊತೆ ಮೌಲ್ಯಾಧಾರಿತ ಸಂಸ್ಕಾರ ಮತ್ತು ಸಂಪ್ರಾದಾಯಗಳನ್ನು ಕಲಿಸಿಕೊಟ್ಟ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ.ತಿರುಮಲಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ

ತಾಯ್ ನಾಗೇಶ್

ತಮಿಳು ಚಿತ್ರರಿಂದ ಆರಂಭಿಸಿ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಹಾಸ್ಯ ನಟ, ಖಳನಟ, ಪೋಷಕ ನಟಗಾಗಿಯೂ ಆಬಾಲವೃದ್ಧರಾದಿಯಾಗಿ ಎಲ್ಲರೂ ಮೆಚ್ಚುವಂತೆ ಸಟಿಸಿ ಸೈ ಎನಿಸಿಕೊಂಡಂತಹ ತಾಯ್ ನಾಗೇಶ್ ಎಂಬ ಅಪ್ಪಟ ಕನ್ನಡಿಗನ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಅವರಿಗೆ ತಾಯ್ ನಾಗೇಶ್ ಎಂಬ ಹೆಸರು ಬರಲು ಕಾರಣವಾದ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ತಾಯ್ ನಾಗೇಶ್

ಮಾಸ್ಟರ್ ಆನಂದ್

ತಮ್ಮ 4ನೇ ವರ್ಷಕ್ಕೆ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮನೋಜ್ಞ ಅಭಿನಯಕ್ಕಾಕ್ಕಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ ನಂತರ ನಟನಾಗಿ, ನಿರ್ದೇಶಕನಾಗಿ, ರೇಡಿಯೋ ಜ್ಯಾಕಿಯಾಗಿ ನಿರೂಪಕನಾಗಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿರುವ ಮಾಸ್ಟರ್ ಆನಂದ್ ಅವರ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಮಾಸ್ಟರ್ ಆನಂದ್

ಮಾಸ್ಟರ್ ಮಂಜುನಾಥ್

3 ನೇ ವರ್ಷಕ್ಕೆ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ, ಕನ್ನಡ, ತೆಲುಗು, ಕಾಶ್ಮೀರಿ, ಹಿಂದಿಯೂ ಸೇರಿದಂತೆ ಸುಮಾರು 68 ಚಿತ್ರಗಳಲ್ಲದೇ ಶಂಕರ್ ನಾಗ್ ಅವರ ವಿಶ್ವ ವಿಖ್ಯಾತ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಸ್ವಾಮಿ ಪಾತ್ರದಲ್ಲಿ ನಟಿಸಿ 6 ಅಂತರಾಷ್ಟ್ರೀಯ ಮತ್ತು ಒಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಕರ್ನಾಟಕದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಮಾಸ್ಟರ್ ಮಂಜುನಾಥ್ ಅವರ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
Read More ಮಾಸ್ಟರ್ ಮಂಜುನಾಥ್

ಮಕ್ಕಳ ಕೂಟದ ಆರ್. ಕಲ್ಯಾಣಮ್ಮನವರು

10ನೇ ವಯಸ್ಸಿಗೆ ಬಾಲ ವಿವಾಹವಾಗಿ 12ನೇ ವಯಸ್ಸಿಗೆಲ್ಲಾ ವಿಧವೆಯಾದರೂ, ತಮ್ಮ ಓದನ್ನು ಮುಂದುವರೆಸಿ, ಸಾಹಿತಿಯಾಗಿ, ಪತ್ರಕರ್ತೆಯಾಗಿ, ಸಮಾಜ ಸೇವಕಿಯಾಗಿ, ಬೆಂಚ್ ಮೆಜಿಸ್ಟ್ರೇಟ್‍, ಉತ್ತಮ ಸಂಘಟಕಿಯಾಗಿ ಹೀಗೆ ಹತ್ತು ಹಲವಾರು ರೂಪದಲ್ಲಿ ಮಕ್ಕಳು ಮತ್ತು ಸ್ತ್ರೀಯರ ಹಕ್ಕುಗಳಿಗಾಗಿ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟಿದ್ದ ಆರ್ ಕಲ್ಯಾಣಮ್ಮ ನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಮಕ್ಕಳ ಕೂಟದ ಆರ್. ಕಲ್ಯಾಣಮ್ಮನವರು

ಬಿ.ವಿ.ಕೆ. ಐಯ್ಯಂಗಾರ್

ತಮ್ಮ ಸತ್ಯ, ನಿಷ್ಠೆ ಮತ್ತು ನ್ಯಾಯ ಪರತೆಯಲ್ಲದೇ ಸಮಾಜ ಮುಖೀ ಕಾರ್ಯಗಳಿಂದ ಅಪಾರವಾದ ಜನಮನ್ನಣೆ ಗಳಿಸಿದ್ದ ಶ್ರೀ ಬಿ.ವಿ.ಕೃಷ್ಣ ಅಯ್ಯಂಗಾರ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಇಡೀ ಕುಟುಂಬದವರು ಈ ದೇಶಕ್ಕಾಗಿ ಮಾಡಿದ ಸೇವೆಗಳನ್ನು ನಮ್ಮ ಕನ್ನಡದ ಕಲಿತಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬಿ.ವಿ.ಕೆ. ಐಯ್ಯಂಗಾರ್

ಕಾಫಿ ಪುಡಿ ಸಾಕಮ್ಮ

ತಮ್ಮ 16ನೇ ವಯಸ್ಸಿನಲ್ಲೇ ಮದುವೆಯಾಗಿ 18ನೇ ವಯಸ್ಸಿನಲ್ಲಿ ವಿಧವೆಯಾದರೂ, ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕಾಫೀ ಕ್ಯೂರಿಂಗ್ ಮತ್ತು ಕಾಫೀ ವಕ್ಸ್ ಆರಂಭಿಸಿ ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ, ಅಂದಿನ ಕಾಲಕ್ಕೆ ಬ್ರಿಟನ್ನಿಗೆ ಕಾಫಿ ರಫ್ತು ಮಾಡುತ್ತಿದ್ದ ಕಾಫಿ ಪುಡಿ ಸಾಕಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಾಫಿ ಪುಡಿ ಸಾಕಮ್ಮ