ಇತಿಹಾಸದಲ್ಲೇ ಅಪರೂಪದ ಕುಟುಂಬದ ವ್ಯಾಜ್ಯ!

ವಯಸ್ಸಾದ ತಂದೆ ತಾಯಿರನ್ನು ನೋಡಿಕೊಳ್ಳಲಾಗದ ಮಕ್ಕಳು ಅವರನ್ನು ವೃಧ್ಧಾಶ್ರಮಕ್ಕೆ ಸೇರಿಸುವಂತಹ ಕಾಲದಲ್ಲಿ, ಆಸ್ತಿಗಾಗಿ ಹೆತ್ತ ಅಪ್ಪಾ ಅಮ್ಮನನ್ನೇ ಕೊಲೆ ಮಾಡುವಂತಹ ಕಾಲದಲ್ಲಿ ಅಪ್ಪಾ ಅಮ್ಮನನ್ನು ನೋಡಿಕೊಳ್ಳುವ ಸಲುವಾಗಿ ನ್ಯಾಯಾಲಯದ ಮೆಟ್ಟೆಲು ಏರಿದ್ದ, ಇಂದಿನ ಯುವಜನತೆ ಓದಲೇ ಬೇಕಾದಂತಹ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಇತಿಹಾಸದಲ್ಲೇ ಅಪರೂಪದ ಕುಟುಂಬದ ವ್ಯಾಜ್ಯ!

ಸುಖಿ ಯಾರು…?!

ನಾವು ದೂರದಿಂದ ನೋಡುವ ಜೀವನವೇ ಸುಖವೇ? ಅಥವಾ ಮನಸ್ಸಿನ ನೆಮ್ಮದಿಯೇ ನಿಜವಾದ ಸುಖವೇ? ಸುಖದ ಕುರಿತಾಗಿ ನಮ್ಮಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿದ್ದು. ಜೀವನದಲ್ಲಿ ಯಾರು ಹೆಚ್ಚು ಸುಖೀ ಎಂಬುದಕ್ಕೆ ಈ ಸುಂದರವಾದ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದೇನೆ. ಒಬ್ಬ ಭಿಕ್ಷುಕ ಒಂದು ದಿನ ಭಿಕ್ಷೆಗಾಗಿ ರೈತನ ಮನೆಗೆ ಬಂದ. ಆ ಸಮಯದಲ್ಲಿ ರೈತನ ಹೆಂಡತಿ ಅಡುಗೆ ಮುಗಿಸಿ ಊಟ ಬಡಿಸಲು ಸಿದ್ಧಳಾಗಿದ್ದಳು. ರೈತ ಮನೆಗೆ ಬಂದ ಕೂಡಲೇ ಅವನಿಗೆ ಕೈಕಾಲು ತೊಳೆದುಕೊಳ್ಳಲು ನೀರು ಕೊಟ್ಟು, ಊಟಕ್ಕೆ ತಟ್ಟೆ ಇಟ್ಟಳು. ರೈತ… Read More ಸುಖಿ ಯಾರು…?!

ರೂಪವಲ್ಲ… ಗುಣವೇ ಮನುಷ್ಯನ ನಿಜವಾದ ಆಭರಣ!

ನಾವು ಅನೇಕ ಬಾರಿ ವ್ಯಕ್ತಿಯ ರೂಪವನ್ನು ನೋಡಿ ಅವನ ಮೌಲ್ಯವನ್ನು ಅಳೆಯುತ್ತೇವೆ. ಆದರೆ ನಿಜವಾದ ಮೌಲ್ಯ ಅಡಗಿರುವುದೇ ಅವನ ವ್ಯಕ್ತಿತ್ವದಲ್ಲಿ, ಗುಣದಲ್ಲಿ ಮತ್ತು ಜ್ಞಾನದಲ್ಲಿ. ಈ ಸತ್ಯವನ್ನು ಮಣ್ಣಿನ ಮತ್ತು ಚಿನ್ನದ ಹೂಜಿಯ ಮೂಲಕ ರಾಜನಿಗೆ ಮನವರಿಕೆ ಮಾಡಿಕೊಟ್ಟ ಅಪೂರ್ವ ಪ್ರಸಂಗವು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿದೆ. ಈ ಸುಂದರ ನೀತಿಕಥೆ ಇದೋ ನಿಮಗಾಗಿ… Read More ರೂಪವಲ್ಲ… ಗುಣವೇ ಮನುಷ್ಯನ ನಿಜವಾದ ಆಭರಣ!

ಬಡವರಿಗೆ ಉಚಿತವಾಗಿ ‘ನಮೋ ಕುಟೀರ’ ಕಟ್ಟಿಸಿ ಕೊಡುತ್ತಿರುವ ಕ್ಯಾನ್ಸರ್ ಪೀಡಿತ ಸಂತೋಷ್ ಕುಮಾರ್ ರೈ

ಕ್ಯಾನ್ಸರ್ ನನ್ನ ದೇಹವನ್ನು ಬಾಧಿಸಿರಬಹುದು. ಆದರೆ ಸಮಾಜಸೇವೆ ಮಾಡುವ ನನ್ನ ಸಂಕಲ್ಪವನ್ನು ಯಾವ ಕಾಯಿಲೆಯೂ ಸೋಲಿಸಲು ಸಾಧ್ಯವಿಲ್ಲ. ಈ ಮಾತುಗಳು ಕೇವಲ ಒಂದು ವಾಕ್ಯವಲ್ಲ; ಜೀವನದೊಂದಿಗೆ ಹೋರಾಡುತ್ತಲೇ ಇತರರ ಬದುಕಿಗೆ ಬೆಳಕಾಗುತ್ತಿರುವ ಸಮಾಜಸೇವಕ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಬದುಕಿನ ಘೋಷವಾಕ್ಯ. ಒಬ್ಬ ವ್ಯಕ್ತಿ ತನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಇನ್ನೊಬ್ಬರಿಗಾಗಿ ಬದುಕುವುದು ಅಪರೂಪ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ಬೋಳಿಯಾರ್‌ನ ಸಂತೋಷ್ ಕುಮಾರ್ ರೈ ಅವರು ಇಂದು ಅದನ್ನೇ ಬದುಕಿನಲ್ಲಿ ಸಾಬೀತುಪಡಿಸುತ್ತಿದ್ದಾರೆ.… Read More ಬಡವರಿಗೆ ಉಚಿತವಾಗಿ ‘ನಮೋ ಕುಟೀರ’ ಕಟ್ಟಿಸಿ ಕೊಡುತ್ತಿರುವ ಕ್ಯಾನ್ಸರ್ ಪೀಡಿತ ಸಂತೋಷ್ ಕುಮಾರ್ ರೈ

ಧೈರ್ಯಂ ಸರ್ವತ್ರ ಸಾಧನಂ

ನಿನಗಾಗಿ ಪ್ರಾಣವನ್ನೂ ಕೊಡಲು ಸಿದ್ಧ ಎಂದು ಹೇಳುವವರೇ, ಕಷ್ಟ ಬಂದಾಗ, ಕುಂಟು ನೆಪ ಹೇಳಿ ಹಿಂದೆ ಸರಿಯುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜೀವವನ್ನೇ ಪಣಕ್ಕಿಟ್ಟ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದು ಹೋದ ಎರಡು ಪ್ರೇರಣಾದಾಯಿ ಪ್ರಸಂಗಗಳು ಇದೋ ನಿಮಗಾಗಿ… Read More ಧೈರ್ಯಂ ಸರ್ವತ್ರ ಸಾಧನಂ

ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಶತ್ರುಗಳ ರುಂಡವನ್ನು ಯಾವುದೇ ಕರುಣೆಯಿಲ್ಲದೇ ಚಂಡಾಡುತ್ತಿದ್ದ ಶಿವಾಜಿ ಮಹಾರಾಜರು, ಒಬ್ಬ ತಾಯಿಯ ಪ್ರೀತಿಯ ಮುಂದೆ ಕರಗಿ ಹೋಗುವಂತಹ ಮಾನವೀಯ ಗುಣಗಳನ್ನು ಹೊಂದಿದ್ದರು ಎಂಬುದರ ಪ್ರತೀಕವಾದ ಹಿರ್ಕಾನಿ ಬುರ್ಚ್ ರೋಚಕಥೆ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ಹಿಂದೂ ಸಾಮ್ರಾಜ್ಯ ದಿನೋತ್ಸವದಂದು ಇದೋ ನಿಮಗಾಗಿ… Read More ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಶಬರಿ

ರಾಮನ ಬರುವಿಕೆಗಾಗಿಯೇ ವರ್ಷಾನುಗಟ್ಟಲೆ ಕಾಯ್ದು, ರಾಮನ ದರ್ಶನ ಮಾಡಿ ಆತನಿಗೆ ಆತಿಥ್ಯ ನೀಡಿ ಮುಕ್ತಿಯನ್ನು ಪಡೆದ, ಭಕ್ತಿ ಎಂಬ ಪದಕ್ಕೆ ಅನ್ವರ್ಥವಾಗಿರುವ ಶಬರಿಯ ಸಂಪೂರ್ಣ ವೃತ್ತಾಂತ ಇದೋ ನಿಮಗಾಗಿ… Read More ಶಬರಿ

ಬೇಂದ್ರೇ ಅಜ್ಜನ ಹೃದಯವಂತಿಕೆ

ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ಬೇಂದ್ರೇ ಅಜ್ಜನ ಹೃದಯವಂತಿಕೆ

ಅಪರಿಚಿತರ ಮಾನವೀಯತೆ

ಅಪರಿಚಿತ ವ್ಯಕ್ತಿಯೊಬ್ಬರ ಒಂದು ಸಣ್ಣ ಸಹಾಯ ಹೇಗೆ ಮತ್ತೊಬ್ಬರ ಜೀವನವನ್ನು ಬದಲಿಸ ಬಲ್ಲದು ಎನ್ನುವುದಕ್ಕೆ ಈ ದೇಶದ ಪ್ರಖ್ಯಾತ ವ್ಯಕ್ತಿಯೊಬ್ಬರ ಜೀವನದ ನೈಜ ಘಟನೆಯ ಈ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅಪರಿಚಿತರ ಮಾನವೀಯತೆ