ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಸಾಧಾರಣವಾಗಿ ಎಲ್ಲೆಡೆ 1,3, 5, 7, 9 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಿದರೆ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಮನೆತನದಲ್ಲಿ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪಿಸಿ, ಮಧ್ಯಾಹ್ನದೊಳಗೇ ವಿಸರ್ಜಿಸಲಾಗುತ್ತದೆ. ಈ ಅರ್ಧ ದಿನದ ಗಣೇಶೋತ್ಸವ ಹಿಂದಿರುವ ದೇಶಭಕ್ತಿಯ ರೋಚಕತೆ ಇದೋ ನಿಮಗಾಗಿ… Read More ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ!

ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೋಶೋತ್ಸವ ಆರಂಭಿಸುವ ಮುನ್ನವೇ, ಒಂದು ಕುಟುಂಬದ ಕೆಂಪು ಸಿಂಧೂರದ ಗಣೇಶೋತ್ಸವವು ಸಾರ್ವಜನಕೀಕರಣವಾಗಿ, ಈ ವರ್ಷಕ್ಕೆ ಸರಿಯಾಗಿ ಎರಡು ಶತಮಾನಗಳಾಗಿದ್ದು, ಪ್ರಸ್ತುತ ಅದೇ ಕುಟುಂಬದ ಏಳು ತರೆಮಾರಿನವರು, ಹುಬ್ಬಳ್ಳಿ ಬಳಿಯ ಛಬ್ಬಿಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಗಣೇಶೋತ್ಸವದ ಇತಿಹಾಸ ಮತ್ತು ಆಚರಣೆಗಳು ಇದೋ ನಿಮಗಾಗಿ… Read More ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ!

ಋಷಿಪಂಚಮಿ ವ್ರತ, ಸಪ್ತಋಷಿಗಳ ಸ್ಮರಣೆ, ಕೃತಜ್ಞತೆ ಮತ್ತು ಆತ್ಮಶುದ್ಧಿಯ ಪರಂಪರೆ

ಗಣೇಶ ಚತುರ್ಥಿಯ ಸಂಭ್ರಮ ಮುಗಿಯುವಷ್ಟರಲ್ಲಿ ಭಾದ್ರಪದ ಶುಕ್ಲಪಕ್ಷದ ಪಂಚಮಿ ಬರುತ್ತದೆ. ಇದೇ ಪವಿತ್ರ ದಿನವನ್ನು “ಋಷಿಪಂಚಮಿ” ಎಂದು ಕರೆಯಲಾಗುತ್ತದೆ.  ಭಾದ್ರಪದ ಶುಕ್ಲ ಪಂಚಮಿಯಂದು ಬರುವ ಈ ದಿನ ಗಣೇಶ ಚತುರ್ಥಿಯ ಮರುದಿನವೇ ಆಗಿದ್ದು, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಶಿಷ್ಠ ಎಂಬ ಸಪ್ತಋಷಿಗಳು ಹಾಗೂ ಅರುಂಧತಿಯರನ್ನು ಸ್ಮರಿಸಿ ಪೂಜಿಸುವುದು ಪ್ರಮುಖ ಆಚರಣೆ.  ಆದರೆ ಋಷಿಪಂಚಮಿ ಕೇವಲ ಒಂದು ವ್ರತವಲ್ಲ. “ನಾವು ಇಂದು ಅನುಭವಿಸುತ್ತಿರುವ ಜ್ಞಾನ, ಸಂಸ್ಕೃತಿ ಮತ್ತು ಜೀವನಮೌಲ್ಯಗಳ ಹಿಂದೆ ಯಾರ ತ್ಯಾಗವಿದೆ?”… Read More ಋಷಿಪಂಚಮಿ ವ್ರತ, ಸಪ್ತಋಷಿಗಳ ಸ್ಮರಣೆ, ಕೃತಜ್ಞತೆ ಮತ್ತು ಆತ್ಮಶುದ್ಧಿಯ ಪರಂಪರೆ

ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ಮದುವೆಯಾದ ಹೆಣ್ಣಿಗೆ ಗೌರಿ ಹಬ್ಬವೆಂದರೆ ತವರು ಮನೆಯನ್ನು ನೆನಪಿಸುವ ಸಂಬಂಧ. ಅಮ್ಮನ ಕೈಯಿಂದ ಪಡೆಡುವ ಅರಿಶಿನ–ಕುಂಕುಮ, ಬಳೆ ಬಾಗಿಣ, ಹೊಸ ಸೀರೆ, ಹಬ್ಬದ ಖರ್ಚಿಗೆ ಅಪ್ಪ ಕೊಡುವ ಹಣ ಇವೆಲ್ಲವೂ ಬೆಲೆ ಕಟ್ಟಲಾಗದ ಭಾವನೆಗಳು. ಗೌರಿ ಬಾಗಿಣ ಮತ್ತು ಅದರೊಂದಿಗೆ ನೀಡುವ ಪ್ರತಿಯೊಂದು ವಸ್ತುವಿನ ಮಹತ್ವ ಮತ್ತು ಇಂದಿಗೂ ಆ ಸಂಪ್ರದಾಯದ ಪ್ರಸ್ತುತತೆಯ ಸಮಗ್ರತೆ ಇದೋ ನಿಮಗಾಗಿ… Read More ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬ ಮುಗಿಯುತ್ತಿದ್ದಂತೆಯೇ, ಶುಕ್ಲಪಕ್ಷದ ಷಷ್ಠಿಯಂದು ಗಂಡು ಮಕ್ಕಳಿರುವ ತಾಯಂದಿರು ತಮ್ಮ ಮಕ್ಕಳ ಆಯುಷ್ಯ, ಆರೋಗ್ಯ, ಸುಖ-ಸಮೃದ್ಧಿ, ಕೀರ್ತಿ ಮತ್ತು ಕ್ಷೇಮಕ್ಕಾಗಿ ಆಚರಿಸುವ ಸಿರಿಯಾಳ ಷಷ್ಠಿಯ ವ್ರತದ ಆಚರಣೆ ಮತ್ತು ಅದರ ಪೌರಾಣಿಕ ಹಿನ್ನೆಲೆಯ ರೋಚಕಥೆ ಇದೋ ನಿಮಗಾಗಿ… Read More ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಶ್ರಾವಣ ಮಾಸ ಭಕ್ತಿ, ಪ್ರಕೃತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳ ಪವಿತ್ರ ಸಂಗಮ

ಆಶಾಡ ಮಾಸ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆಯೇ, ಆಸ್ತಿಕರಿಗೆ ಹಬ್ಬಗಳ ಸಡಗರ ಸಂಭ್ರಮದ ಮಾಸ. ಈ ತಿಂಗಳಿಗೆ ಆ ಹೆಸರು ಏಕೆ ಬಂದಿತು? ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಬೇಕೋ ಇಲ್ಲವೇ ಮಹಾವಿಷ್ಣುವಿನನ್ನು ಭಜಿಸಬೇಕೋ? ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಮತ್ತು ಅದರ ವೈಶಿಷ್ಟ್ಯವೇನು ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಶ್ರಾವಣ ಮಾಸ ಭಕ್ತಿ, ಪ್ರಕೃತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳ ಪವಿತ್ರ ಸಂಗಮ

ಸಂಕಷ್ಟಹರ ಚತುರ್ಥಿ

ಪ್ರತಿ ತಿಂಗಳ ಹುಣ್ಣಿಮೆಯ ನಂತರ ಬರುವ ಕೃಷ್ಣಪಕ್ಷದ ಚತುರ್ಥಿ ತಿಥಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುವ ಸಂಕಷ್ಟಹರ ಚತುರ್ಥಿ ವ್ರತದ ಹಿನ್ನಲೆ, ಆ ವ್ರತದ ಆಚರಣೆ ಮತ್ತು ಆ ವ್ರತದ ಫಲಾಫಲಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸಂಕಷ್ಟಹರ ಚತುರ್ಥಿ

ಸೀತಾ ನವಮಿ

ಇತ್ತೀಚೆಗಷ್ಟೇ ರಾಮನವಮಿ ಆಚರಿಸಿದ್ದ ನಿಮಗೆ ಇದೇನಿದು ಸೀತಾ ನವಮಿ ಎಂಬ ಜಿಜ್ಞಾಸೆ ಮೂಡಿದ್ದಲ್ಲಿ, ಸೀತೆಯ ಜನ್ಮ ವೃತ್ತಾಂತದ ಜೊತೆಗೆ, ಸೀತೆಗೂ ರಾವಣನಿಗೂ ಇರುವ ಸಂಬಂಧ ಮತ್ತು ಸೀತಾ ದೇವಿ ಜನಿಸಿದ ಸೀತಾಮರ್ಹಿ ಮತ್ತು ದೇಶಾದ್ಯಂತ ಸೀತಾ ನವಮಿಯನ್ನು ಯಾವರೀತಿಯಲ್ಲಿ ಆಚರಿಸಲಾಗುತ್ತದೆ ಎಂಬೆಲ್ಲಾ ಮಾಹಿತಿಗಳು ಇದೋ ನಿಮಗಾಗಿ… Read More ಸೀತಾ ನವಮಿ

ರಂಗ ಕುಣಿತ

ಗ್ರಾಮೀಣ ಜನರ ಧಾರ್ಮಿಕ ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ಇಡೀ ಊರಿನ ಜನರನ್ನು ಒಗ್ಗಟ್ಟಾಗಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಮುಂಚೆ ಜಡವಾಗಿದ್ದ ಅವರ ದೇಹವನ್ನು ಸಡಿಲ ಗೊಳಿಸಿ ಅತೀ ಸಾಮಾನ್ಯ ಜನರಿಗೂ ತಾಳ ಮತ್ತು ನೃತ್ಯದ ಗತ್ತುಗಳನ್ನು ಕಲಿಸುವ ಸುಂದರ ಜನಪದ ಕಲೆಯಾದ ರಂಗ ಕುಣಿತವನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ… Read More ರಂಗ ಕುಣಿತ