ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ನಾವಿಂದು ಸ್ವತಂತ್ರವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂದರೆ, ಅದರ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕಣ್ಣೀರಿನ ಕಥೆಗಳಿವೆ. 80ನೇ ಸ್ವಾತಂತ್ರೋತ್ಸವದ ಸಂಧರ್ಭದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜಮಖಂಡಿ ಭೀಮರಾವ್ ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನದ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

ಒಬ್ಬ ವ್ಯಕ್ತಿ ತನ್ನ ಬರೀ ಎದೆಯ ಮೇಲೆ ಐದು ಟನ್‌ಗೂ ಹೆಚ್ಚು ತೂಕದ ಆನೆಯನ್ನು ನಿಲ್ಲಿಸಬಲ್ಲನೆ? ಎರಡು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಿಸುವ ಕಾರುಗಳನ್ನು ಕೇವಲ ತನ್ನ ದೇಹದ ಬಲದಿಂದ ತಡೆಯಬಲ್ಲನೆ? ಉಕ್ಕಿನ ಸರಪಳಿಗಳನ್ನು ಕೈಗಳಿಂದ ಮುರಿಯಬಲ್ಲನೆ? ಇವು ಕೇವಲ ಸಿನಿಮಾದ ದೃಶ್ಯಗಳಲ್ಲ, ಪೌರಾಣಿಕ ಕಥೆಗಳೂ ಅಲ್ಲ. ಇಂತಹ ಅಚ್ಚರಿಯ ಸಾಹಸಗಳನ್ನು ನಿಜ ಜೀವನದಲ್ಲೇ ಮಾಡಿ ಜಗತ್ತನ್ನು ಬೆರಗುಗೊಳಿಸಿದ ಭಾರತೀಯ ಮಹಾಬಲಶಾಲಿಯ ಹೆಸರು ಕೋಡಿ ರಾಮಮೂರ್ತಿ ನಾಯ್ಡು. ಅವರಿಗೆ ಬ್ರಿಟನ್‌ನ ರಾಜ ಜಾರ್ಜ್ ಪಂಚಮ (King George… Read More ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

1857ರ ಮಾರ್ಚ್ 29ರಂದು ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್ ಸೇನಾ ಶಿಬಿರದಲ್ಲಾದ ಕ್ಷಿಪ್ರಕಾಂತ್ರಿಯನ್ನು ಸಾಮಾನ್ಯ ಸೈನಿಕನ ಬಂಡಾಯ ಎಂದು ಬ್ರಿಟೀಷರು ಭಾವಿಸಿದರೆ, ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪ್ರಖ್ಯಾತವಾಯಿತು, ಇಂತಹ ಕ್ರಾಂತಿಯ ಕಿಚ್ಚನ್ನು ಹಬ್ಬಿಸಿದ ಮಂಗಲ್ ಪಾಂಡೆಯವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್

ಭಾರತೀಯರಲ್ಲಿ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಪ್ರಥಮ ಬಾರಿಗೆ ಮೂಡಿಸಿದ್ದಲ್ಲದೇ, ದೇಶದ ಸ್ವಾತಂತ್ರ್ಯಕ್ಕಾಗಿ ಸಕುಟುಂಬ ಸಮೇತರಾಗಿ ಜೀವಮಾನವನ್ನೇ ಸವೆಸಿದಂತಹ ಮಹಾನ್ ಚೇತನವಾದ ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್ ಎಲ್ಲರ ಪ್ರೀತಿಯ ಬಾಬಾರಾವ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ,ಆವರ ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್

ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

1883 ಮೇ 28, ಅಪ್ರತಿಮ ಸ್ವಾತ್ರಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾದರೆ, ಮೇ 27, ಬ್ರಿಟೀಷರ ವಿರುದ್ಧ ದಂಗೆ ಎದ್ದು, 1837 ಎಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರೀಟೀಷರ ಧ್ವಜವನ್ನು ಇಳಿಸಿ, ಕನ್ನಡಿಗರ ಹಾಲೇರಿ ಧ್ವಜವನ್ನು ಹಾರಿಸಿ, ೧೩ ದಿನಗಳ ಕಾಲ ಅಂದಿನ ದಕ್ಷಿಣ ಕನ್ನಡವನ್ನು ಬ್ರಿಟೀಷರಿಂದ ಸ್ವಾತ್ರಂತ್ರ್ಯ ಗೊಳಿಸಿದ್ದಂತಹ ವೀರ ಸೇನಾನಿ ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ. ಅಂತಹ ಪ್ರಾಥಃಸ್ಮರಣೀಯ, ಎಲೆಮರೆಕಾಯಿಯಂತೆ ಬೆಳಕಿಗೇ ಬಾರದೇ ಹೋದ ವೀರ ಸಾಹಸಿಯ ಯಶೋಗಾಥೆ ಇದೋ ನಿಮಗಾಗಿ… Read More ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಒಬ್ಬ ವ್ಯಕ್ತಿ, ಕೆಲವು ಕುಟುಂಬಗಳ ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಈ ದೇಶಕ್ಕೆ ಸ್ವಾತ್ರಂತ್ರ್ಯ ದೊರೆತಿದೆ. ಹಾಗಾಗಿ ತಾವು ಈ ದೇಶದ ಕಾನೂನಿಗಿಂತಲೂ ಅತೀತರು ಎಂದು ಬೊಬ್ಬಿರುತ್ತಿರುವ ಈ ಸಂದರ್ಭದಲ್ಲಿ, ಬ್ರಿಟೀಷಶ್ ಸರ್ಕಾರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ವಿರುದ್ಧ ಸೆಟೆದೆದ್ದು, ತಮ್ಮ ಕೆಲಸಕ್ಕೆ ರಾಜೀನಾಮೇ ನೀಡಿ, ಲಂಡನ್ನಿನಲ್ಲಿ ಬ್ರಿಟೀಷರ ವಿರುದ್ಧ ನ್ಯಾಯಯುತವಾಗಿ ಹೋರಾಡಿ, ವಿರೋಚಿತ ಸೋಲನ್ನು ಅನುಭವಿಸಿದರೂ, ಬ್ರಿಟೀಷರು ಮಾಡಿದ ಆ ಅಮಾನವೀಯ ಕೃತ್ಯವನ್ನು ಇಡೀ ಪ್ರಪಂಚಕ್ಕೆ ತಿಳಿಸಿದಂತಹ ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ.… Read More ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಶಿವರಾಮ ಹರಿ ರಾಜಗುರು

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳನ್ನು ನೆನಪಿಸಿಕೊಂಡಾಗಲೆಲ್ಲಾ ಥಟ್ ಅಂತ ನೆನಪಾಗೋದೇ ಚಂದ್ರಶೇಖರ್ ಆಚಾದ್ ಮತ್ತು ಭಗತ್ ಸಿಂಗ್. ದೇಶಕ್ಕಾಗಿ ತಮ್ಮೆಲ್ಲಾ ತಾರುಣ್ಯದ ಚಿಂತನೆಯನ್ನೆಲ್ಲಾ ಮರೆತು ಭಗತ್ ಸಿಂಗ್ ಅವರೊಂದಿಗೆ ಪ್ರಾಣಾರ್ಪಣ ಮಾಡಿವರೆಏ, ಸುಖದೇವ್ ಮತ್ತು ಶಿವರಾಮ ಹರಿ ರಾಜಗುರು. ದೇಶಕ್ಕಾಗಿ ನೇಣುಗಂಬ ಏರುವಾಗಲೂ ಪರಸ್ಪರ ನಾಮುಂದು, ತಾಮುಂದು ಎಂದು ಒಬ್ಬರಿಗೊಬ್ಬರು ಪೈಪೋಟಿಯಿಂದ ನಗುನಗುತ್ತಲೇ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪುರುಷರು. ಶಿವರಾಮ ಹರಿ ರಾಜಗುರು ಅವರು 24 ಆಗಸ್ಟ್ 1908 ರಂದು ಮರಾಠಿ ದೇಶಸ್ಥ ಬ್ರಾಹ್ಮಣ… Read More ಶಿವರಾಮ ಹರಿ ರಾಜಗುರು

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾತ್ರಂತ್ರ್ಯ ಸಂಗ್ರಾಮದ ಸಮಯದಲ್ಲಿ ಎಲೆಮರೆಕಾಯಿಯಂತೆ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ತ್ಯಾಗ ಮತ್ತು ಬಲಿದಾನ ಗೈದ ಲಕ್ಷಾಂತರ ನಿಸ್ವಾರ್ಥ ಹೋರಾಟಗಾರನ್ನು ಪರಿಚಯಿಸುವ ನಮ್ಮ ಅವಿಖ್ಯಾತ ಸ್ವರಾಜ್ಯ ಕಲಿಗಳು ಮಾಲಿಕೆಯಲ್ಲಿ ಇಂದಿನ ಕಲಿಗಳು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ… Read More ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗೆ, ವಂದೇ ಮಾತರಂ ಗೌರವ ಗಾಯನ ಆಭಿಯಾನ

ನಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಮತ್ತು ಕವಿಗಳಾಗಿದ್ದ ಬಂಕಿಮ ಚಂದ್ರ ಚಟರ್ಜಿಯವರು ಸ್ವಾತಂತ್ರ್ಯದ ಹೋರಾಟದ ಸಂಧರ್ಭದಲ್ಲಿ ಭಾರತೀಯರಲ್ಲಿ ತಾಯ್ನಾಡಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಚಿಸಿದ ಗೀತೆಯೇ ವಂದೇ ಮಾತರಂ. ತಾಯಿ ನಿನಗೆ ವಂದಿಸುವೆ ಎಂಬರ್ಥ ಬರುವ ಈ ಗೀತೆಯ ಶೀರ್ಷಿಕೆಯಾದ ವಂದೇ ಮಾತಂ ಘೋಷಣೆ ದೇಶಾದ್ಯಂತ ಕೋಟ್ಯಾಂತರ ಸ್ವಾತ್ರಂತ್ರ್ಯ ಹೋರಾಟಗಾರ ರಣ ಘೋಷಣೆಯಾಗಿ ಅವರನ್ನೆಲ್ಲಾ ಸ್ವಾತ್ರಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರೇಪಣಾ ಮಂತ್ರವಾಗಿ ಲಕ್ಷಾಂತರ ಜನರ ವಂದೇ ಮಾತರಂ.. ವಂದೇ ಮಾತರಂ. ಉಧ್ಘೋಷ… Read More ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗೆ, ವಂದೇ ಮಾತರಂ ಗೌರವ ಗಾಯನ ಆಭಿಯಾನ