
ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದ್ದದ್ದಲ್ಲದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಶಿಕ್ಷಣ ಪದ್ದತಿ, ಗುಡಿ ಕೈಗಾರಿಕೆ, ಕೃಷಿ ಮತ್ತು ಹೈನುಗಾರಿಕೆಯನ್ನು ಹಾಳು ಗೆಡವುದರ ಜೊತೆ ಜೊತೆಗೆ ನಮ್ಮ ಜನರಿಗೆ ಅತ್ಯಂತ ಸೋಮಾರೀ ಆಟವಾದ ಕ್ರಿಕೆಟ್ಟನ್ನು ಕಲಿಸಿಕೊಟ್ಟು ಹೋದದ್ದು ನಮ್ಮ ದೇಶದ ಪರಮ ದೌರ್ಭಾಗ್ಯವೇ ಸರಿ. ಆರಂಭದಲ್ಲಿ ಕ್ರಿಕೆಟ್ಟನ್ನು ಬಹಳ ಸಂಭಾವಿತರ ಆಟ ಎಂದೇ ಬಣ್ಣಿಸಲಾಗುತ್ತಿದ್ದರೂ ಇಂದು ಬೆಟ್ಟಿಂಗ್ ದಂಧೆ ಮತ್ತು ಆಟಗಾರರ ಕಳ್ಳಾಟಗಳಿಂದ ಕಳಂಕ ಗೊಂಡಿದೆ. ಭಾರತ 1983ರ ಪೃಡೆಂಷಿಯಲ್ ವರ್ಲ್ಡ್ ಕಪ್ ಗೆಲ್ಲುವ ವರೆಗೂ ನಮ್ಮಲ್ಲಿ ಸಾಮಾನ್ಯ ಆಟವಾಗಿದ್ದ ಕ್ರಿಕೆಟ್ ನಂತರದ ದಿನಗಳಲ್ಲಿ ಟಿವಿಯ ಭರಾಟೆಯಿಂದಾಗಿ ಹಳ್ಳಿ ಹಳ್ಳಿಗಳಿಗೂ ಹಬ್ಬಿ ನಮ್ಮ ಗ್ರಾಮೀಣ ದೇಸೀ ಆಟಗಳೆಲ್ಲವೂ ಮಾಯವಾಗಿ ಗೂಟ , ದಾಂಡು ಮತ್ತು ಚೆಂಡುಗಳೇ ಸರ್ವಾಂತರ್ಯಾಮಿಯಾಗಿ, ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೆ ಧರ್ಮವೆಂದೇ ಭಾವಿಸಲಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಆಬಾಲ ವೃಧ್ಧರಾದಿ, ಹೆಂಗಸರು ಮತ್ತು ಗಂಡಸರು ಎಂಬ ಬೇಧವಿಲ್ಲದೆ ಎಲ್ಲರೂ ಟಿವಿಯ ಮುಂದೆ ಗಂಟೆ ಗಂಟೆಗಟ್ಟಲೇ ಕ್ರಿಕೆಟ್ ಆಟವನ್ನು ನೋಡುತ್ತಾ ಕಾಲ ಕಳೆಯುವಂತಾಗಿದೆ. ನಮ್ಮ ಜನರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳ ನೆನಪಿಲ್ಲದಿದ್ದರೂ ಕ್ರಿಕೆಟ್ ಆಟಗಾರರು ಎಲ್ಲರ ಮನೆ ಮನದಲ್ಲೂ ನಾಯಕರಾಗಿದ್ದಾರೆ ಮತ್ತು ಚಿರಪರಿಚಿತರಾಗಿದ್ದಾರೆ. ಕೆಲವು ಕ್ರಿಕೆಟ್ ಅಂಧಾಭಿಮಾನಿಗಂತೂ ಕೆಲವು ಕ್ರಿಕೆಟ್ ಆಟಗಾರರನ್ನೇ ದೇವರು ಎಂದು ಸಂಭೋಧಿಸುವ ಮಟ್ಟಿಗೆ ಹೋಗಿರುವುದಂತೂ ನಿಜಕ್ಕೂ ವಿಷಾಧನೀಯವೇ ಸರಿ.
1947ರಲ್ಲಿ ಧರ್ಮಾಧಾರಿತವಾಗಿ ಭಾರತ ದೇಶ ವಿಭಜನೆಯಾಗಿ ಭಾರತ ಮತ್ತು ಪಾಪಿಸ್ಥಾನ ಎಂದು ಇಬ್ಬಾಗವಾದರೆ, ಶ್ರೀಲಂಕವೂ ಸೇರಿ 1971ರಲ್ಲಿ ಬಾಂಗ್ಲಾದೇಶದ ಉದಯವಾದ ನಂತರ ಮತ್ತು ಇತ್ತೀಚೆಗೆ ಆಘ್ಘಾನಿಸ್ಥಾನ ಮತ್ತು ನೇಪಾಳವೂ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಹಾಲಿಡುವ ಮೂಲಕ ಏಷ್ಯಾ ಖಂಡವೇ ಜಗತ್ತಿನ ಅತ್ಯಂತ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ತಾಣವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿಯ ಬಹು ಪಾಲು ಹೆಚ್ಚಿನ ಆದಾಯ ಇಲ್ಲಿಂದಲೇ ಬರುಂತಾಗಿದೆ. ಅದರಲ್ಲೂ ಭಾರತದಿಂದಲೇ ಐಸಿಸಿಗೆ ಶೇ 80 ರಷ್ಟು ಆದಾಯ ಸಂದಾಯವಾಗುತ್ತಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಬದ್ಧ ದ್ವೇಷಿಗಳಾದ ಭಾರತ ಮತ್ತು ಪಾಪೀಸ್ಥಾನದ ಪಂದ್ಯಾವಳಿಯನ್ನು ಆಯೋಜಿಸಿದರೆ ಅದು ಐಸಿಸಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕೊಟ್ಯಾಂತರ ಮೊತ್ತದ ಆದಾಯ ತರುವುದರಿಂದ ಯಾವುದೇ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಪೀಸ್ಥಾನದ ಎದುರು ಬದಿರು ಆಡುವಂತೆಯೇ ಆಯೋಜನೆ ಮಾಡಿ ಅದಕ್ಕೆ ಹೈವೋಲ್ಟೇಜ್ ಪಂದ್ಯ ಎಂಬ ಹಣೆ ಬರಹ ಕಟ್ಟಿ, ಪಂದ್ಯದ ಟಿವಿ ಪ್ರಸಾರದ ಹಕ್ಕನ್ನು ವಿಶ್ವಾದ್ಯಂತ ಮಾರಾಟಮಾಡಿ ಕೊಟ್ಯಾಂತರ ಹಣವನ್ನು ಬಾಚಿಕೊಂಡು ಅದರಲ್ಲಿ ಮೂಗಿಗೆ ತುಪ್ಪ ಸವರಿದಂತೆ ಉಭಯ ದೇಶಗಳಿಗೆ ಅಲ್ಪ ಸ್ವಲ್ಪ ಆದಾಯ ಹಂಚುವುದು ನಡೆದು ಬಂದಿರುವ ವಾಡಿಕೆಯಾಗಿದೆ.
ಹೇಳೀ ಕೇಳೀ ದೇಶದ ಹೆಸರೇ ಪಾಪೀಸ್ಥಾನ. ಧರ್ಮದ ಅಫೀಮಿನ ಅಮಲಿನಲ್ಲಿರುವ ಜನ. ಅಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ತಾಯಿಯ ಗರ್ಭದಿಂದಲೇ ಹೇಳಿಕೊಡುವುದೇನೆಂದರೆ ಜೇಹಾದಿ ಅಂದರೆ ಧರ್ಮ ಯುದ್ದ ಮತ್ತು ಭಾರತ ವಿರುದ್ಧದ ದ್ವೇಷದ ಕಿಚ್ಚು. ಆವರ ಧರ್ಮದ ಅಮಲು ಎಷ್ಟು ಇದೆ ಎಂದರೆ ಅವದ್ದೇ ಧರ್ಮದ ಒಳಪಂಗಡಗಳಾದ ಷಿಯಾ ಮತ್ತು ಸುನ್ನಿಗಳು ಪರಸ್ಪರ ಸದಾ ಹೊಡೆದಾಡಿಕೊಳ್ಳುತ್ತಾ ಒಬ್ಬರ ಮೇಲೆ ಒಬ್ಬರು ಬಾಂಬ್ ಧಾಳಿ ನಡೆಸುತ್ತಾ ಪಾಪೀಸ್ಥಾನವನ್ನು ಭಯೋತ್ಪಾದಕ ರಾಷ್ಟ್ರವನ್ನಾಗಿಸಿದ್ದಾರೆ. ಆರಂಭದಲ್ಲಿ ಅಲ್ಲಿಯ ರಾಜಕೀಯ ನಾಯಕರೇ ಬೆಳೆಸಿದ ಐಸಿಸ್ ಮತ್ತು ಲಶ್ಕರೇ ತೊಯ್ಬಾ, ಜೈಶ್ ಏ ಮೊಹಮ್ಮೊದ್ ಮುಂತಾದ ಉಗ್ರ ಸಂಘಟನೆಗಳು ಇಂದು ಘನ ಘೋರ ವಿಷ ಸರ್ಪವಾಗಿ ಬೆಳೆದು ಇಡೀ ಪಾಪೀಸ್ಥಾನವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಜಗತ್ತಿನ ಎದುರಿನಲ್ಲಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ತೋರಿಸಲ್ಪಟ್ಟರೂ ಆಳ್ವಿಕೆ ಎಲ್ಲಾ ಸೈನ್ಯದ್ದೇ ಆಗಿದೆ. 1947ರ ಕಾಶ್ಮೀರದ ಗಡಿ ಕ್ಯಾತೆ 1965 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ನೇತೃತ್ವದಲ್ಲಿನ ಯುದ್ಧ , 1971ರ ಇಂದಿರಾ ಗಾಂಧಿಯವರ ಸಾರಥ್ಯದಲ್ಲಿ ಬಾಂಗ್ಲಾ ವಿಮೋಚನೆ ಮತ್ತು 1999ರಲ್ಲಿ ಆಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವದಲ್ಲಿ ಕಾರ್ಗಿಲ್ ಹೋರಾಟದಲ್ಲಿ ಪೆಟ್ಟಿನ ಮೇಲೆ ಪೆಟ್ಟು ತಿಂದು ಸೋತು ಸುಣ್ಣವಾಗಿ ಹೋಗಿದ್ದರೂ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ಕೊಡುತ್ತಾ, ಕಾಶ್ಮೀರೀ ಯುವಕರನ್ನು ಧರ್ಮದ ಹೆಸರಿನಲ್ಲಿ ಭಾರತದ ವಿರುದ್ಧ ಎತ್ತಿ ಕಟ್ಟಿ ಪದೇ ಪದೇ ಕೆಣಕುತ್ತಲೇ ಇದೆ ಪಾಪೀಸ್ಥಾನ.
ಇಷ್ಟೆಲ್ಲಾ ದ್ವೇಷ, ಅಸೂಯೆಗಳ ವೈರುಧ್ಯಗಳ ನಡುವೆಯೂ ಶಾಂತಿಯ ಹೆಸರಿನಲ್ಲಿ ಕ್ರಿಕೆಟ್ ಸೋಗಿನಲ್ಲಿ ಪರಸ್ಪರ ಎರಡೂ ದೇಶಗಳು ಆಟವಾಡುತ್ತಾ ಬಂದರೂ, ಪಾಪಿಗಳ ದುಕ್ಷೃತ್ಯದಿಂದಾಗಿ ಕಳೆದ ಒಂದು ದಶಕಗಳಿಂದ ಹೆಚ್ಚು ಕಡಿಮೆ ಪರಸ್ಪರ ಕ್ರಿಕೆಟ್ ನಿಂತೇ ಹೋಗಿದೆ. ಅಲ್ಲೋ ಇಲ್ಲೋ ಒಂದೆರಡು ಪಂದ್ಯಗಳು ತಟಸ್ಥ ದೇಶಗಳಲ್ಲಿ ಅಡುವಂತಾಗಿದೆ. ಪಾಪೀಸ್ಥಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರವಾಸದ ಸಮಯದಲ್ಲೇ ಬಾಂಬ್ ಸಿಡಿದು ಶ್ರೀಲಂಕಾದ ಒಬ್ಬ ಆಟಗಾರನಿಗೆ ಗಾಯವಾದ ನಂತರವಂತೂ ವಿಶ್ವದ ಯಾವುದೇ ಕ್ರಿಕೆಟ್ ತಂಡ ಅಲ್ಲಿ ಆಡಲು ಇಚ್ಚಿಸದೇ , ಐಪಿಎಲ್ ತಂಡಗಳಿಂದಲೂ ಪಾಕೀಸ್ಥಾನದ ಆಟಗಾರರನ್ನು ಭಹಿಷ್ಕರಿಸಲಾಗಿ ಹೆಚ್ಚು ಕಡಿಮೆ ಪಾಪೀಸ್ಥಾನದ ಕ್ರಿಕೆಟ್ ಆಟಗಾರರು ನಿರುದ್ಯೋಗಿಗಳಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ಬರುವ ಜೂನ್-ಜಲೈ ತಿಂಗಳಿನಲ್ಲಿ ಇಂಗ್ಲೇಂಡಿನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಜೂನ್ 16ರಂದು ಭಾರತ ಮತ್ತು ಪಾಪೀಸ್ಥಾನ ಪರಸ್ಪರ ಆಡುವಂತೆ ಆಯೋಜಿಸಲಾಗಿದೆ. ಇತರೇ ಎಲ್ಲಾ ಪಂದ್ಯಗಳಿಗಿಂತಲೂ ಈ ಪಂದ್ಯಕ್ಕೆ ಭಾರೀ ಪ್ರಚಾರ ನೀಡಿ ಈಗಾಗಲೇ ಪ್ರಪಂಚಾದ್ಯಂತ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯ ನಿರೀಕ್ಷೆಯಲ್ಲಿದ್ದಾರೆ. ಪ್ರತೀ ವಿಶ್ವಕಪ್ ಪಂದ್ಯಾವಳಿಯಲ್ಲಿಯೂ ಭಾರತದ ವಿರುದ್ಧ ಸೋಲನ್ನೇ ಕಂಡಿರುವ ಪಾಪಿಗಳು ಈ ಬಾರೀ ಭಾರತ ತಂಡವನ್ನು ಸೋಲಿಸಿಯೇ ತೀರುತ್ತೇವೆಂದು ತೊಡೆ ತಟ್ಟಿ ಪಂಥಾಹ್ವಾನ ನೀಡಿರುವಾಗಲೇ, ಪಾಪೀಸ್ಥಾನ ಎಡವಟ್ಟೊಂದನ್ನು ಮಾಡಿಕೊಂಡಿದೆ.
ಫೆ.14 ರಂದು ಕಾಶ್ಮೀರದ ಪುಲ್ವಾಮದಲ್ಲಿ ಪಾಪೀಸ್ಥಾನದ ಬೆಂಬಲಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಮತಾಂಧ ಆತ್ಮಾಹುತಿ ಉಗ್ರಗಾಮಿಯೊಬ್ಬನ ಧಾಳಿಯಿಂದಾಗಿ 42 ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದ ಮೇಲಂತೂ ಇಡೀ ದೇಶವೇ ಒಗ್ಗಾಟ್ಟಾಗಿ ಒಕ್ಕೊರಲಿನಿಂದ ಪಾಪಿಗಳ ಮೇಲೆ ಪ್ರತೀಕಾರವನ್ನು ಬಯಸುತ್ತಿದೆ. ಅದರಂತೆ ಘಟನೆ ನಡೆದ 48 ಗಂಟೆಯೊಳಗೆ ಪ್ರಮುಖ ರೂವಾರಿಗಳನ್ನು ನರಕಕ್ಕೆ ಅಟ್ಟಿದ ನಮ್ಮ ಸೈನ್ಯ ಕಂಡ ಕಂಡಲ್ಲಿ ಉಗ್ರಗಾಮಿಗಳನ್ನು ಹುಡುಕಿ ಹುಡುಕಿ ನಿರ್ನಾಮ ಮಾಡುತ್ತಿದೆ. ಪುಲ್ವಾಮದಲ್ಲಿ ಮಡಿದ ವೀರ ಸೈನಿಕರ 12ನೇ ದಿನದ ಶ್ರಾಧ್ಧ ಕರ್ಮಾದಿಗಳು ನಡೆಯುತ್ತಿರುವ ಸಂಧರ್ಭದಲ್ಲಿಯೇ ನಮ್ಮ ವಾಯುಪಡೆ ಫೆ. 26 ರಂದು ಬೆಳ್ಳಂಬೆಳಿಗ್ಗೆ 3:30ಕ್ಕೆ ವಾಯುಧಾಳಿ ನಡೆಸಿ, 1000ಕ್ಕೂ ಅಧಿಕ ಬಾಂಬ್ಗಳನ್ನು ಸಿಡಿಸಿ 300 ಕ್ಕೂ ಹೆಚ್ಚಿನ ಉಗ್ರಗಾಮಿಗಳನ್ನು ಹೊಡೆದುರುಳಿಸುವ ಮೂಲಕ ವೀರ ಯೋಧರ ಆತ್ಮಗಳಿಗೆ ಶಾಂತಿ ಕೊಡಲು ಪ್ರಯತ್ನಿಸಿರುವುದನ್ನು ಕೇವಲ ಭಾರತ ಪ್ರಜೆಗಳಷ್ಟೇ ಅಲ್ಲದೆ ಇಡಿ ವಿಶ್ವವೇ ನಮ್ಮ ದೇಶದ ಪರವಾಗಿ ನಿಂತಿದೆ. ಘಟನೆ ನಡೆದ ಹತ್ತು – ಹನ್ನೆರಡು ದಿನಗಳಿಂದಲೂ ಭಾರತ ಸುಮ್ಮನೇ ಕೂಡದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಪಿಗಳ ಈ ದುಷ್ಕೃತ್ಯವನ್ನು ಖಂಡಿಸುತ್ತಾ, ಆ ದೇಶಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ತುಂಡರಿಸಿ ಅದನ್ನು ದೈನೇಸಿ ಸ್ಥಿತಿಗೆ ತಂದಿಟ್ಟಿದೆ. ಅಂತೆಯೇ ಪಾಪೀಸ್ಥಾನ ಭಯೋತ್ಪಾದಕ ರಾಷ್ಟ್ರ ಎಂದು ಇಡೀ ಜಗತ್ತಿಗೇ ಎತ್ತಿ ತೋರಿಸಿದೆ. ಈಗಾಗಲೇ ಒಸಾಮ ಬಿನ್ ಲಾಡೆನ್, ಟೈಗರ್ ಮೆಮೂನ್, ಯಾಕೂಬ್ ಮೆಮನ್, ಅಜರ್ ಮಸೂದ್, ದಾವೂದ್ ಇಬ್ರಾಹಿಂ ಮುಂತಾದ ವಿದ್ರೋಹಿಗಳಿಗೆ ಆಶ್ರಯದ ತಾಣವಾಗಿದೆ ಎಂಬುದನ್ನು ಪುರಾವೆ ಸಮೇತ ತೋರಿಸಿಕೊಟ್ಟು ಜಗತ್ತಿನಲ್ಲಿ ಆ ದೇಶವನ್ನು ಭಾಗಷಃ ಒಬ್ಬಂಟಿಯನ್ನಾಗಿ ಮಾಡಲು ಯಶಸ್ವಿಯಾಗಿದೆ. ಹೊಟ್ಟೆಗೇ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಆ ದೇಶದಲ್ಲಿ ಸರಿಯಾಗಿ ತಿನ್ನಲು ಆಹಾರವಿಲ್ಲದಿದ್ದರೂ ಧರ್ಮದ ಅಮಮಿನಿಂದ ಜನರನ್ನು ಭಾರತದ ವಿರುದ್ಧ ಎತ್ತಿ ಕಟ್ಟಿ
ಗೆರಿಲ್ಲಾ ರೀತಿಯ ಹೋರಾಟ ಮಾಡಿಸುತ್ತಾ, ಮಗುವಿನ ತೊಡೆಯನ್ನೂ ಅವರೇ ಚಿವುಟಿ ನಂತರ ಅವರೇ ತೊಟ್ಟಿಲು ತೂಗುವ ಕಾರ್ಯವನ್ನು ಮಾಡುತ್ತಿರುವುದನ್ನು ಇಡಿ ಜಗತ್ತೇ ಗಮನಿಸುತ್ತಿದೆ.
ಇಷ್ಟೆಲ್ಲಾ ಆದ ಮೇಲೆಯೂ ಭಾರತ, ಪಾಪೀಸ್ಥಾನದ ವಿರುದ್ಧ ವಿಶ್ವಕಪ್ನಲ್ಲಿ ಜೂನ್ 16ರಂದು ಆಡಬೇಕೆ? ಎಂಬ ದೊಡ್ಡ ಪ್ರಶ್ನೆ ಇಡೀ ಭಾರತವನ್ನು ಕಾಡುತ್ತಿದೆ. ಆದರೆ ದೇಶದ ಶೇ 80-90 ರಷ್ಟು ಜನರು ಈ ಪಂದ್ಯವನ್ನು ಭಾರತ ಆಡಲೇ ಕೂಡದು ಎಂದೇ ಬಯಸಲು ಕಾರಣವಿಷ್ಟೇ. ಈ ಪಂದ್ಯಾವಳಿ ಆಡುವುದರಿಂದ ಭಾರತ ಗಳಿಸುವುದಕ್ಕಿಂತ ಕಳೆದು ಕೊಳ್ಳುವುದೇ ಹೆಚ್ಚು. ಈ ಹೈವೋಲ್ಟೇಜ್ ಪಂದ್ಯಾವಳಿಯಿಂದಾಗಿ ಈಗಾಗಲೇ ಬಡವಾಗಿರುವ ಪಾಪೀಸ್ಥಾನದ ಕ್ರಿಕೆಟ್ ಮಂಡಳಿಗೆ ಪರೋಕ್ಷವಾಗಿ ಅಪಾರ ಪ್ರಮಾಣದ ಹಣವನ್ನು ನಾವೇ ಕೊಟ್ಟಂತಾಗುತ್ತದೆ. ಪಾಪಿಗಳನ್ನು ಎಲ್ಲೆಂದರಲ್ಲಿ ಹೇಗೆಂದರಲ್ಲಿ ಬಡಿದು ಬಡಿದು ಸತಾಯಿಸಿ ಸೋಲಿಸುವ ಸುವರ್ಣಾವಕಾಶವನ್ನು ನಾವೇ ಕೈಯಾರೆ ಹಾಳು ಮಾಡಿಕೊಳ್ಳುಂತಾಗುತ್ತದೆ. ಈ ಪಂದ್ಯವಾಡುವುದರಿಂದ ಹಾವಿಗೆ ಹಾಲೆರೆದ ಹಾಗೆ ಇಲ್ಲವೇ ಚೇಳಿಗೆ ಪಾರುಪತ್ಯ ಕೊಟ್ಟಹಾಗೆ ಆಗಿ ನಮ್ಮಿಂದಲೇ ಸಂಪಾದಿಸಿದ ಹಣದಿಂದ ಭಯಂಕರ ಭಸ್ಮಾಸುರರಂತೆ ನಮ್ಮ ಮೇಲೆಯೇ ಧಾಳಿ ನಡೆಸುವ ಎಲ್ಲಾ ಸಾಧ್ಯತೆಗಳೂ ಇವೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಪೀಸ್ಥಾನ ಎಂದೂ ಭಾರತದ ವಿರುದ್ಧ ಗೆದ್ದಿಲ್ಲವಾದ್ದರಿಂದ ಈ ಬಾರಿಯೂ ಅವರನ್ನು ಕ್ರಿಕೆಟ್ ಮೈದಾನದಲ್ಲಿಯೇ ಸೋಲಿಸಿಯೇ ಎರಡು ಅಂಕಗಳನ್ನು ಗಳಿಸೋಣ ಎಂಬುದು ಕೆಲ ಕ್ರಿಕೆಟ್ ಪಂಡಿತರ ಅಂಬೋಣ. ಇತರೇ ಎಲ್ಲಾ ದೇಶಗಳ ಎದುರು ಸಾಧಾರಣ ಇಲ್ಲವೇ ಕಳಪೆ ಪ್ರದರ್ಶನ ತೋರಿದರೂ ಭಾರತ ವಿರುದ್ಧ ಆಡುವಾಗ ಪ್ರತಿಯೊಬ್ಬ ಪಾಪೀಸ್ಥಾನದ ಆಟಗಾರನ ಕೆಚ್ಚು ಹೆಚ್ಚಾಗಿಯೇ ಇರುತ್ತದೆ. ಈ ಪಂದ್ಯದಲ್ಲಿ ತನ್ನ ಶಕ್ತಿಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿಯೇ ಆಕ್ರಮಣಕಾರಿಯಾಗಿ ಅಟವಾಡುವುದನ್ನು ನಾವು ಈಗಾಗಲೇ ಕಂಡಿದ್ದೇವೆ. ನಮ್ಮ ತಂಡವೂ ಇದಕ್ಕೆ ಹೊರತಾಗಿಲ್ಲ. ಅಕಸ್ಮಾತ್ ದುರದೃಷ್ಟವಶಾತ್ ನಮ್ಮ ತಂಡದ ವಿರುದ್ಧ ಪಾಪೀಸ್ಥಾನವೇನಾದರೂ ಗೆದ್ದು ಬಿಟ್ಟಲ್ಲಿ ನಮ್ಮ ದೇಶದ ಮತ್ತು ನಮ್ಮ ಸೈನಿಕರ ನೈತಿಕತೆಯ ಮಟ್ಟ ನಿಸ್ಸಂದೇಹವಾಗಿಯೂ ಕಡಿಮೆ ಆಗುವುದರಲ್ಲಿ ಅನುಮಾನವೇ ಇಲ್ಲ. ಇಂತಹ ಗೆಲುವು ಆ ದೇಶದ ಮತಾಂಧರಿಗೂ, ಉಗ್ರಗಾಮಿಗಳಿಗೂ ಮತ್ತು ಅಲ್ಲಿಯ ಸೈನಿಕರ ನೈತಿಕತೆ ಹೆಚ್ಚುಮಾಡಿ ನಮ್ಮ ಮೇಲೆ ಇನ್ನೂ ಹೆಚ್ಚಿನ ಧಾಳಿ ಮಾಡುವುದರಲ್ಲಿ ಯಾವ ಸಂದೇಹವೂ ಇಲ್ಲ. ರಣರಂಗದಲ್ಲಿ ಕೆಚ್ಚದೆಯಿಂದ ನಮ್ಮ ಸೈನಿಕರು ಪಾಪೀಸ್ಥಾನವನ್ನು ಶತೃ ದೇಶ ಎಂದು ಭಾವಿಸಿ ಪರಸ್ಪರ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದರೆ ನಮ್ಮ ಕ್ರಿಕೆಟ್ ಆಟಗಾರರು ಅದೇ ದೇಶವ ವಿರುದ್ಧ ಕೇವಲ ಎರಡು ಅಂಕಗಳಿಗಾಗಿ ಆಟ ಆಡುವುದು ಎಷ್ಟು ಸರಿ? ಜನ ಸಾಮಾನ್ಯರನ್ನು ಬಿಡಿ, ಖಂಡಿತವಾಗಿಯೂ ಭಗವಂತನೂ ಇದನ್ನು ಒಪ್ಪಲಾರ. ಸರಿ ನಾವು ಅವರ ವಿರುದ್ಧ ಪಂದ್ಯವನ್ನು ಭಹಿಸ್ಕರಿಸಿದರೆ ಐಸಿಸಿ ನಮ್ಮ ದೇಶದ ಕ್ರಿಕೆಟ್ ತಂಡವನ್ನು ಅಮಾನತ್ತುಗೊಳಿಸಬಹುದು ಎಂದು ಕ್ರಿಕೆಟ್ ಪಂಡಿತರು ಹೇಳುತ್ತಾರೆ. *ನಮ್ಮ ದೇಶದ ಭಧ್ರತೆಯನ್ನು ಫಣಕ್ಕಿಟ್ಟು ಅವರ ವಿರುದ್ಧ ಕ್ರಿಕೆಟ್ ಆಡುವ ಜರೂರೇನಿದೆ?* *ದೇಶವಿದ್ದಲ್ಲಿ ಮಾತ್ರವೇ ಕ್ರಿಕೆಟ್. ದೇಶವೇ ಇಲ್ಲದಿದ್ದಲ್ಲಿ ಕ್ರಿಕೆಟ್ ಎಲ್ಲಿಂದ ಆಡುತ್ತಾರೆ?* ಎಂದು ಸಣ್ಣ ವಯಸ್ಸಿನ ಮಕ್ಕಳೂ ಪ್ರಶ್ನಿಸುತ್ತಿರುವಾಗ ಇನ್ನು ಅತೀ ಬುದ್ದಿವಂತರಂತೆ ವರ್ತಿಸುವ ಕ್ರಿಕೆಟ್ ಪಂಡಿತರಿಗೆ ಇದು ಏಕೆ ಅರ್ಥವಾಗುವುದಿಲ್ಲ?
ಭಾರತ ದೇಶವನ್ನು ಭಹಿಷ್ಕರಿಸಿ ಜಗತ್ತಿನ ಯಾವುದೇ ದೇಶವೂ ಹೆಚ್ಚಿನ ದಿನ ಇರಲಾಗದು ಎಂಬುದನ್ನು ಈಗಾಗಲೇ ಪೊಖ್ರಾನ್ ಅಣು ಪರೀಕ್ಷೆಯ ಸಮಯದಲ್ಲಿ ಧೃಢ ಪಟ್ಟಿದೆ. ಅಂದು ಭಾರತದ ಮೇಲೆ ಹೇರಿದ್ದ ಆರ್ಥಿಕ ಧಿಗ್ಬಂಧನ ಕೆಲವೇ ಕೆಲವು ದಿನಗಳಲ್ಲಿ ಹೇರಿದವರಿಂದಲೇ ತೆಗಯಲ್ಪಟ್ಟಿದ್ದು ಈಗ ಇತಿಹಾಸವಲ್ಲವೇ? ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ತನ್ನ ಚಿನ್ನದ ಮೊಟ್ಟೆ ಇಡುವ ಕೋಳಿಯಂತಹ ಭಾರತ ದೇಶವನ್ನು ಅಮಾನತ್ತಿನಲ್ಲಿ ಇಡಲು ಸಾಧ್ಯವೇ? ಒಂದು ಪಕ್ಷ ಅಮಾನತ್ತು ಮಾಡಿ ತನ್ನ ಆದಾಯಕ್ಕೇ ತಾನೇ ಕೊಡಲಿ ಹಾಕಿಕೊಳ್ಳಬಲ್ಲದೇ? ಇಂದಿನ ವಾಯುಧಾಳಿ ನಡೆದ ಮೇಲಂತೂ ಇಡೀ ಭಾರತೀಯರ ಬಾಯಿಯಲ್ಲಿ ಉಲಿಯುತ್ತಿರುವುದು ಒಂದೇ ವಾಕ್ಯ *How is the JOSH* ಅದಕ್ಕೆ ಪ್ರತ್ಯುತ್ತರ *High Sir* ಇಂತಹ *ಜೋಶ್ ಹೀಗೆಯೇ ಮುಂದುವರಿಯಲು ಶಾಂತಿಯ ಮಾತು ಕಥೆಯಿಂದಾಗಲೀ, ಕ್ರಿಕೆಟ್ ಅಥವಾ ಇನ್ಯಾವುದೇ ಕ್ರೀಡೆಯಿಂದಾಗಲೀ ಅಸಾಧ್ಯ ಎಂಬುದು ಈಗಾಗಲೇ ಸಾಭೀತಾಗಿದೆ* ವಾಜಪೇಯಿಯವರ ಸಂಝೋತಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದನ್ನು ನೋಡಿದ್ದೇವೆ. ಲಾಹೋರ್ ಬಸ್ಸಿನ ಚಕ್ರವೆಂದೋ ತುಕ್ಕು ಹಿಡಿದಾಗಿದೆ. ತಾಳ್ಮೆಗೂ ಒಂದು ಮಿತಿ ಇರುತ್ತದಲ್ಲವೇ? ಮಿತಿ ಮೀರಿದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಹಾಗೆ, ಗುಂಡಿಗೆ ಗಂಡೆದೆಯ ಗುಂಡಿನ ಪ್ರತಿ ಧಾಳಿಯೇ ಅತ್ಯುತ್ತಮ ಮಾರ್ಗ. ಆವರು ನಮ್ಮ ಒಬ್ಬ ಸೈನಿಕನ್ನು ಕೊಂದರೆ ನಾವು ಅವರ ಹತ್ತು ಸೈನಿಕರ ಹೆಣ ಉರುಳಿಸಿದಾಗಲೇ ಅವರಿಗೆ ಬುದ್ದಿ ಬರುವುದು. ಎಂದಿಗೆ ಪಾಪೀಸ್ಥಾನ ತನ್ನೆಲ್ಲಾ ಕುಚೇಷ್ಟೆಗಳನ್ನು ಸಂಪೂರ್ಣವಾಗಿ ಬಿಟ್ಟು ನಿಜವಾಗಿಯೂ ಶಾಂತಿಯಿಂದ ತಾನೂ ಬಾಳಿ ನೆರೆಹೊರೆ ರಾಷ್ಟ್ರಗಳನ್ನೂ ಶಾಂತಿಯಿಂದ ಬಾಳಲು ಬಿಡುತ್ತದೆಯೋ ಅಂದೇ ಕ್ರಿಕೆಟ್ಟು ಆಲ್ಲಿಯವರೆಗೂ ಇಂತಹ ಕಿರಿಕ್ಕೇ ಕಿರಿಕ್ಕು
ಏನಂತೀರೀ?