ನಾವೆಲ್ಲಾ ಓದಿದಂತೆ ಇಲ್ಲವೇ ಕೇಳಿ ತಿಳಿದಂತೆ ರಾಮ ಒಳ್ಳೆಯವನು ಮತ್ತು ರಾವಣ ಕೆಟ್ಟವನು ಅದ ಕಾರಣ ರಾವಣ ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು ಎಂದು ನಮ್ಮ ಮನಃಪಠದಲ್ಲಿ ಅಚ್ಚೊತ್ತಿದೆ.
ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿದ್ದು ಅದು ಸಂದರ್ಭಕ್ಕನುಗುಣವಾಗಿ ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ ಮಾಡಿದಾಗ ಪ್ರೋತ್ಸಾಹಿಸಿ, ಕೆಟ್ಟ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ.
ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ ಕಾಣುತ್ತಿದ್ದ ರಾಮ, ಯುದ್ದಾನಂತರ, ಸೀತೆಮಾತೆಯು ಪರಿ ಪರಿಯಾಗಿ ಕೇಳಿಕೊಂಡರೂ ಆಕೆಯ ಪಾತಿವ್ರತ್ಯವನ್ನು ಅಗ್ನಿಪ್ರವೇಶದ ಮೂಲಕ ಪರೀಕ್ಷಿಸಿದ್ದದ್ದು ಸುಳ್ಳಂತೂ ಅಲ್ಲ. ಅದೇ ರೀತಿ ತುಂಬು ಬಸುರಿಯನ್ನು ಕಾಡಿಗೆ ಕಳುಹಿಸುವಾಗಲೂ ಆಕೆಗೆ ಏನನ್ನೂ ಹೇಳದೆ ಅಕೆಯ ಪ್ರತಿಕ್ರಿಯೆಯನ್ನೂ ಕೇಳದೆ ಲಕ್ಷ್ಮಣ ಮೂಲಕ ಕಾಡಿಗೆ ಕಳುಹಿದ್ದದ್ದು ಸುಳ್ಳಲ್ಲ.
ನಾನು ರಾಮನ ಮತ್ತೊಂದು ಮುಖವನ್ನು ಪರಿಚಯಿಸಿದ ಮಾತ್ರಕ್ಕೆ, ನನ್ನನ್ನು ಹಿಂದೂ ವಿರೋಧಿ, ಕಮ್ಯುನಿಸ್ಟ್ ಅಥವಾ ಅನ್ಯಮತದ ಪರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿ ಎಂದು ಜರಿಯುವುದು ಸರಿಯಲ್ಲ.
ಉಳಿದ ಎಲ್ಲಾ ಸಂದರ್ಭಗಳಲ್ಲಿ ರಾವಣ ಎಂತೆಂತಹಾ ತಪ್ಪಗಳನ್ನು ಮಾಡಿದ್ದರೂ ರಾಮನ ಗೆಲುವಿಗೆ ಪೌರೋಹಿತ್ಯವಹಿಸಿ ವಿಜಯದ ಕಂಕಣ ಕಟ್ಟಿದ್ದಂತೂ ಸುಳ್ಳಲ್ಲ.
ಸೀತಾಮಾತೆಯನ್ನು ಮೋಹಿಸಿ ಅಪಹರಿಸಿದರೂ, ಏನೇ ಶಾಪವಿದ್ದರೂ ಆತ ಒಂದು ದಿನವೂ ಅಶೋಕವನದಲ್ಲಿ ಸೀತಾಮಾತೆಯ ಬಲಾತ್ಕಾರಕ್ಕೆ ಪ್ರಯತ್ನಿಸಲಿಲ್ಲಾ ಎನ್ನುವುದೂ ಸುಳ್ಳಲ್ಲ.
ಇಲ್ಲಿ ರಾಮನ ಅವೇಳನ ರಾವಣನ ಗುಣಗಾನ ಮಾಡುತ್ತಿದ್ದೇನೆ ಎಂದು ನೋಡದೆ ಆ ಸಾಂಧರ್ಭಿಕ ಸತ್ಯವನ್ನು ಪರಾಮರ್ಶಿಸಿ ನೋಡೋಣ.
ಅಂದು ರಾವಣನಂತಹ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿಯೇ ಸೀತಾಮಾತೆಯನ್ನು ಬಲಾತ್ಕಾರಿಸದಿದ್ದಾಗ, ಇಂದು ರಾಮನ ಅನುರೂಪ, ರಾಮನೇ ನಮ್ಮ ಆದರ್ಶ ಎಂದುಃ ಹೇಳುವ ನಾವುಗಳು ಏನೂ ಅರಿಯದ ಕಂದಮ್ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗಳನ್ನು ಧರ್ಮದ ಹೆಸರಿನಲ್ಲಿ ಸಂರಕ್ಷಿಸುತ್ತಿರುವಾಗ ರಾಮನಂತೆ ಮರ್ಯಾದೆಗೆ ಅಂಜಿ ಕೂರದೆ ರಾವಣನಂತೆ ಹೋರಾಡಿ ಅಂತಹವರಿಗೆ ಗಲ್ಲು ಶಿಕ್ಷೆ ಕೊಡಿಸೋಣ ಎಂದಷ್ಟೇ ನನ್ನ ಬರಹದ ಅಭಿಪ್ರಾಯ.
ಸತ್ಯ ಸದಾ ಕಹಿ. ಆ ಕಹಿಯನ್ನು ಮೀರಿ ಸವಿಯುವ ಪ್ರಯತ್ನ ಮಾಡಿದರೆ ಖಂಡಿತ ಸಿಹಿ.
ಅತ್ಯಾಚಾರಿಗಳಿಗೆ ಧರ್ಮವಿಲ್ಲಾ. ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ
ಏನಂತೀರಿ?