ಒಗ್ಗಟ್ಟಿನಲ್ಲಿ ಬಲವಿದೆ

ಅದೊಂದು ಕಾಲೇಜು ಹಾಸ್ಟೆಲ್ ಕ್ಯಾಂಟೀನ್, ಅಲ್ಲಿ ಪ್ರತಿದಿನ ಉಪಾಹಾರಕ್ಕಾಗಿ ಉಪ್ಪಿಟ್ಟನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದರು.

ಹೆಚ್ಚಿನ ವಿದ್ಯಾರ್ಥಿಗಳಿಗೆ ಉಪ್ಪಿಟ್ಟನ್ನು ತಿನ್ನಲು ಮನಸ್ಸಿರಲಿಲ್ಲ. ಅದಕ್ಕಾಗಿ ಉಪ್ಪಿಟ್ಟಿನ ಬದಲಾಗಿ ಬೇರೆಂದು ಉಪಹಾರವನ್ನು ತಯಾರಿಸಲು ತಮ್ಮ ವಾರ್ಡನ್ ಅವರಿಗೆ ದೂರು ಕೊಟ್ಟರು.

ಸುಮಾರು100 ವಿದ್ಯಾರ್ಥಿಗಳಲ್ಲಿ 20 ಮಂದಿಗೆ ಉಪ್ಪಿಟ್ಟು ರುಚಿಸದೇ ಇದ್ದರೂ ದೂರು ಕೊಟ್ಟವರ ಪರವಾಗಿ ಬೆಂಬಲ ನೀಡಲು ಹೆದರಿಕೊಂಡು ತಟಸ್ಥರಾಗಿ ಇದ್ದರು.

ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ ವಾರ್ಡನ್ ಉಪಾಹಾರಕ್ಕಾಗಿ ವಿವಿಧ ಉಪ್ಪಿಟ್ಟಿನ ಸಹಿತ ತಿಂಡಿಗಳ ಪಟ್ಟಿಯನ್ನು ನೀಡಿ ವಿದ್ಯಾರ್ಥಿಗಳಿಗೇ ಮಾಡಿಕೊಳ್ಳಲು ತಿಳಿಸಿ ಯಾವ ಪದಾರ್ಥ ಹೆಚ್ಚಿನ ಮತಗಳಿಸುತ್ತದೆಯೋ ಅಂತಹ ಪದಾರ್ಥಗಳನ್ನು ತಯಾರಿಸುವುದಾಗಿ ವಾಗ್ದಾನ ಮಾಡಿದರು.

ಅದರಂತೆ ಮತದಾನ ದಿನ ಎಲ್ಲಾ ವಿದ್ಯಾರ್ಥಿಗಳು ನೀಡಿದ ಪಟ್ಟಿಯಲ್ಲಿ ತಮ್ಮ ತಮ್ಮ ಆಯ್ಕೆಯನ್ನು ತಿಳಿಸಿದರೆ, ಆ 20 ತಟಸ್ಥ ವಿದ್ಯಾರ್ಥಿಗಳು ಉಪ್ಪಿಟ್ಟನ್ನೇ ಆಯ್ಕೆ ಮಾಡಿದರೆ ಹೊರತು ಇತರೇ ಆಯ್ಕೆಗಳನ್ನು ನೋಡಲು ಸಹ ಚಿಂತಿಸಲಿಲ್ಲ.

ಆಂತಿಮವಾಗಿ ಫಲಿತಾಂಶದ ಈ ರೀತಿಯಾಗಿತ್ತು.
18 ಜನರು ದೋಸೆ,
16 ಜನರು ರೊಟ್ಟಿ,
14 ಜನರು ಪೂರಿ,
12 ಜನರು ಬ್ರೆಡ್ ಮತ್ತು ಬೆಣ್ಣೆ,
10 ಜನರು ಪೋಂಗಲ್ ಆಯ್ಕೆ ಮಾಡಿಕೊಂಡರೆ,
10 ಜನರು ನೂಡಲ್ಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ಈ ರೀತಿಯಾಗಿ ಉಳಿದ 80 ಜನರು ಸಂಘಟಿತರಾಗದೆ, ಹೊಂದಾಣಿಕೆಯ ಕೊರತೆಯಿಂದಾಗಿ ಅಂತಿಮವಾಗಿ ಆ 20 ತಟಸ್ಥ ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದ ಉಪ್ಪಿಟ್ಟೇ ಬಹುಮತದಿಂದ ಆಯ್ಕೆಯಾಗಿ ಕ್ಯಾಂಟೀನ್ನಲ್ಲಿ ಉಪ್ಪಿಟ್ಟು ಉಪಹಾರವಾಗಿ ಮುಂದುವರೆಯಿತು.

ಮುಂಬರುವ ಲೋಕಸಭಾ ಚುನಾವಣೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಕಳೆದ 60 ಕ್ಕೂ ಹೆಚ್ಚಿನ ವರ್ಷಗಳು ನಾವುಗಳು ಸಂಘಟಿತರಾಗದ ಕಾರಣ ಒಂದೇ ಕುಟುಂಬದ ಕೆಲವೇ ಕೆಲವು ಜನರ ಕೈಯಲ್ಲಿ ಅಧಿಕಾರ ಉಳಿದು ದೇಶದ ಪರಿಸ್ಥಿತಿ ಹೀಗಾಗಿದೆ. ಇವ ನಮ್ಮ ಧರ್ಮದವ, ಇವ ನಮ್ಮ ಜಾತಿಯವ, ಇವ ನಮ್ಮ ಉಪಜಾತಿಯವ, ಇವ ನಮ್ಮ ಭಾಷೆಯವ ಎಂದು ಯೋಚಿಸದೆ ದೇಶಕ್ಕಾಗಿ ಕಾಯಾ ವಾಚಾ ಮನಸಾ ವರ್ಷದ 365 ದಿನಗಳು ಮತ್ತು ಪ್ರತಿದಿನ 18 ಘಂಟೆಗೂ ಅಧಿಕ ಸಮಯ ದೇಶಕ್ಕಾಗಿ ದುಡಿಯುತ್ತಿರುವ ನಾಯಕನನ್ನೇ ಮತ್ತೊಮ್ಮೆ ಅಧಿಕಾರಕ್ಕೆ ಸಂಘಟಿತರಾಗಿ ಆಯ್ಕೆಮಾಡೋಣ. ದೇಶವನ್ನು ಅಭಿವೃಧ್ದಿಯತ್ತ ಕೊಂಡೊಯ್ಯೋಣ. ಒಗ್ಗಟ್ಟಿನಲ್ಲಿ ಬಲವಿದೆ.

ಮೋದಿ ಮತ್ತೊಮ್ಮೆ.

ಏನಂತೀರೀ?

ವ್ಯಾಟ್ಯಾಪ್ ಕೃಪೆ

Leave a comment